ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 8(c), 20(b)(ii)(B) ಎನ್.ಡಿ.ಪಿ.ಎಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅನ್ವರ್ ತಂದೆ ಗೌಸ್ ಸೈಯ್ಯದ್, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಅಜ್ಜಿಕಟ್ಟಾ, ಶೆಡಗೇರಿ, ತಾ: ಅಂಕೋಲಾ, ಹಾಲಿ ಸಾ|| ಬೊಬ್ರುವಾಡ, ತಾ: ಅಂಕೋಲಾ, 2]. ಮಂಜುನಾಥ ತಂದೆ ಶಿವಾಜಿ ವಾಸ್ಟರ್, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ನಿರ್ಮಲಾ ಗಾಂವಕರ ಹಾಸ್ಟೆಲ್ ಮುಂದೆ, ಕೋಟೆವಾಡ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 04-07-2021 ರಂದು 07-35 ಗಂಟೆಗೆ ಅಂಕೋಲಾ ತಾಲೂಕಿನ ಕೃಷ್ಣಾಪುರ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಪಕ್ಕದಲ್ಲಿ ಯಾವುದೇ ಪಾಸ್ ಮತ್ತು ಪರ್ಮಿಟ್ ಇಲ್ಲದೇ ತಮ್ಮ ಅಕ್ರಮ ಲಾಭಕ್ಕಾಗಿ ಅ||ಕಿ|| 10,500/- ರೂಪಾಯಿ ಮೌಲ್ಯದ 270 ಗ್ರಾಂ. ತೂಕದ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ವಶದಲ್ಲಿಟ್ಟುಕೊಂಡು ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-2504 ನೇದರಲ್ಲಿ ಸಾಗಾಟ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಶೆಟ್ಟಿ, ಪೊಲೀಸ್ ನಿರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 04-07-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 143, 147, 323, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದಿವಾಕರ ನಾಯ್ಕ, 2]. ಶರತ್ ನಾಯ್ಕ, 3]. ಬೈರ ನಾಯ್ಕ ಹಾಗೂ ಇನ್ನೂ ಐದು ಜನರು, ಸಾ|| (ಎಲ್ಲರೂ) ಮಿರ್ಜಾನ, ತಾ: ಕುಮಟಾ. ಪಿರ್ಯಾದಿಯವರು ದಿನಾಂಕ: 04-07-2021 ರಂದು 18-00 ಗಂಟೆಗೆ ತನ್ನ ಅಣ್ಣ ಮನೋಜನ ಜೊತೆಗೆ ತನ್ನ ಮನೆ ಗೌರಸಗಿ ಇಂದ ಚೆಕ್ ಡ್ಯಾಮ್ ಗೆ ನಡೆದುಕೊಂಡು ಹೋಗುತ್ತಿರುವಾಗ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ಮೋಟಾರ್ ಸೈಕಲ್ ಮೇಲೆ ಜೋರಾಗಿ ಬಂದವರಿಗೆ ಪಿರ್ಯಾದಿಯವರು ‘ಜನರಿದ್ದಾರೆ, ನಿಧಾನವಾಗಿ ಹೋಗಿ’ ಎಂದು ಹೇಳಿದಕ್ಕೆ  ಆರೋಪಿತರೆಲ್ಲರೂ ಸಿಟ್ಟಾಗಿ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು, ಕೈಯಿಂದ ಕೆನ್ನೆಯ ಮೇಲೆ, ಬೆನ್ನಿನ ಮೇಲೆ, ಸೊಂಟದ ಮೇಲೆ ಹೊಡೆದು ಒಳನೋವು ಪಡಿಸಿದ್ದಲ್ಲದೇ ’ಮಿರ್ಜಾನಿಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮನ್ನು ಮುಗಿಸುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಬಾಲಕೃಷ್ಣ ತಂದೆ ಸುಧಾಕರ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಲ್ಯಾಬ್ ಟೆಕ್ನೀಷಿಯನ್, ಸಾ|| ಗೌರಸಗಿ, ಖಂಡಗಾರ, ತಾ: ಕುಮಟಾ ರವರು ದಿನಾಂಕ: 04-07-2021 ರಂದು 20-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 181/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮ್ಮದ್ ಅಕ್ಬರ್ ತಂದೆ ಮಹಮ್ಮದ್ ಶರೀಫ್ ಮದ್ದೇಬಿಹಾಳ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಬ್ಯಾಳಿ ಪ್ಲಾಟ್, ಮಂಟೂರ ರೋಡ್, ಹುಬ್ಬಳ್ಳಿ (ಕಾರ್ ನಂ: ಕೆ.ಎ-35/ಎನ್-9817 ನೇದರ ಚಾಲಕ). ಈತನು ದಿನಾಂಕ: 04-07-2021 ರಂದು 19-30 ಗಂಟೆಗೆ ಕುಮಟಾ ಕಡೆಯಿಂದ ಭಟ್ಕಳ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-35/ಎನ್-9817 ನೇದನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಹೊನ್ನಾವರ ಪಟ್ಟಣದ ಕಾಮತ್ ಹೊಟೇಲ್ ಹತ್ತಿರ ತನ್ನ ಎದುರಿನಿಂದ ಹೋಗುತ್ತಿದ್ದ ವಾಹನಕ್ಕೆ ಓವರಟೇಕ್ ಮಾಡಲು ತಾನು ಚಲಾಯಿಸುತ್ತಿದ್ದ ಕಾರನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-2826 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಮತ್ತು ಮೋಟಾರ್ ಸೈಕಲ್ ಹಿಂಬಂದಿ ಸವಾರರು ರಸ್ತೆಯ ಮೇಲೆ ಬೀಳುವಂತೆ ಮಾಡಿ, ಮೋಟಾರ್ ಸೈಕಲ್ ಸವಾರ ಶ್ರೀ ಶೇಖರ ತಂದೆ ಗೋವಿಂದ ನಾಯ್ಕ, ಪ್ರಾಯ-63 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೆ.ಎಚ್.ಪಿ ಕಾಲೋನಿ, ಪ್ರಭಾತ ನಗರ, ತಾ: ಹೊನ್ನಾವರ ಇವರ ತಲೆಗೆ ಬಲಗಾಲಿಗೆ, ಬಲಭುಜಕ್ಕೆ, ಎಡಗೈ ಹೆಬ್ಬೆರಳಿಗೆ ಗಾಯನೋವು ಆಗಿದ್ದು, ಹಿಂಬದಿಯ ಸವಾರಳಾದ ಶ್ರೀಮತಿ ಪ್ರಭಾ ಕೋಂ. ಶೇಖರ ನಾಯ್ಕ, ಪ್ರಾಯ-61 ವರ್ಷ, ವೃತ್ತಿ-ನಿವೃತ್ತ ಶಿಕ್ಷಕಿ, ಸಾ|| ಕೆ.ಎಚ್.ಪಿ ಕಾಲೋನಿ, ಪ್ರಭಾತ ನಗರ, ತಾ: ಹೊನ್ನಾವರ ಇವರ ತಲೆಗೆ, ಎದೆಗೆ, ಎಡಗಾಲಿನ ಪಾದದ ಹತ್ತಿರ ಗಾಯನೋವು ಆಗಲೂ ಕಾರಣನಾಗಿದ್ದಲ್ಲದೇ, ಅಪಘಾತದಿಂದ ಎರಡು ವಾಹನ ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಕಾಶ ತಂದೆ ಕೇಶವ ಶಿಂಹನಕುಳಿ, ಪ್ರಾಯ-60 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ದುರ್ಗಾಕೇರಿ, ದೇವಸ್ಥಾನದ ಹತ್ತಿರ, ತಾ: ಹೊನ್ನಾವರ ರವರು ದಿನಾಂಕ: 04-07-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 4, 5, 6, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 11(1)(D) PREVENTION OF CRUELTY TO ANIMALS ACT-1960 ಹಾಗೂ ಕಲಂ: 192(A) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೊಹಿದ್ದೀನ್ ಪಾತೀಮಿ ತಂದೆ ಅಬ್ದುಲ್ ಸಲಾಮ್ ಶಾಬಂದ್ರಿ, ಸಾ|| ದಾರೂಲ್ ಸಲಾಮ್, ಬಂದರ ರೋಡ್, 6 ನೇ ಕ್ರಾಸ್, ತಾ: ಭಟ್ಕಳ, 2]. ಹನೀಫ್, ಸಾ|| ಭಟ್ಕಳ, 3]. ಈಚರ್ ವಾಹನ ನಂ: ಎ.ಪಿ-04/ಟಿ.ಡಬ್ಲ್ಯೂ-0400 ನೇದರ ಚಾಲಕ ಹಾಗೂ ಇತರರು. ಈ ನಮೂದಿತ ಆರೋಪಿತರು ಸೇರಿಕೊಂಡು ವಧೆ ಮಾಡುವ ಉದ್ದೇಶದಿಂದ ಸುಮಾರು 6,10,000/- ರೂಪಾಯಿ ಮೌಲ್ಯದ 09 ಎತ್ತುಗಳನ್ನು ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಈಚರ್ ವಾಹನ ನಂ: ಎ.ಪಿ-04/ಟಿ.ಡಬ್ಲ್ಯೂ-0400 ನೇದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ತುಂಬಿಕೊಂಡು ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಭಟ್ಕಳ ಶಹರದ ಬಂದರ ರೋಡ್ 6 ನೇ ಕ್ರಾಸ್ ಹತ್ತಿರ ಮುಗ್ದುಮ್ ಕಾಲೋನಿಯಲ್ಲಿ ದಿನಾಂಕ: 04-07-2021 ರಂದು ಬೆಳಗಿನ ಜಾವ 08-30 ಗಂಟೆಯ ಸುಮಾರಿಗೆ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ 9 ಎತ್ತುಗಳನ್ನು ಹಾಗೂ ಈಚರ್ ವಾಹನ ನಂ: ಎ.ಪಿ-04/ಟಿ.ಡಬ್ಲ್ಯೂ-0400 ನೇದನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 04-07-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-07-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಬಿ ಹಸನ್ ಅನ್ಸಾರಿ ತಂದೆ ಶೇಖ್ ಮಹಮ್ಮದ್ ಅನ್ಸಾರಿ, ಪ್ರಾಯ-73 ವರ್ಷ, ಸಾ|| ಸುಮರಾ ಟೋಲಾ ಚಂಡೇಲ್, ಡುಮರಾ, ಸಿವಾನ್, ಬಿಹಾರ, ಹಾಲಿ ಸಾ|| ಅರ್ಜುನ್ ಟಾಕೀಸ್ ಹಿಂದುಗಡೆ, ಕಾಜುಬಾಗ, ಕಾರವಾರ. ಇವರು ದಿನಾಂಕ: 04-07-2021 ರಂದು ಮಧ್ಯಾಹ್ನ ಮನೆಯಲ್ಲಿದ್ದಾಗ ತನಗೆ ಎದೆನೋವು ಆಗುತ್ತಿದೆ ಅಂತಾ ಹೇಳಿ ಕುಸಿದು ಬಿದ್ದವರಿಗೆ ಪಿರ್ಯಾದಿಯವರು ಮಧ್ಯಾಹ್ನ 13-45 ಗಂಟೆಗೆ ಚಿಕಿತ್ಸೆಯ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಾರವಾರಕ್ಕೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಸದರಿ ಮೃತನು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವ ಪೂರ್ವದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಕ್ಸೂದ್ ಆಲಂ ತಂದೆ ನಬಿ ಹಸನ್ ಅನ್ಸಾರಿ, ಪ್ರಾಯ-49 ವರ್ಷ, ವೃತ್ತಿ-ವ್ಯಾಪಾರ, ಸಾ|| ಅರ್ಜುನ್ ಟಾಕೀಸ್ ಹಿಂದುಗಡೆ, ಕಾಜುಬಾಗ, ಕಾರವಾರ ರವರು ದಿನಾಂಕ: 04-07-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರಸಾದ ತಂದೆ ಗೋವಿಂದ ಕುರ್ಲೆ, ಪ್ರಾಯ-38 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಾವಳ, ಮಾಜಾಳಿ, ಕಾರವಾರ. ದಿನಾಂಕ: 04-07-2021 ರಂದು ಪಿರ್ಯಾದಿಯವರು ಹಾಗೂ ತನ್ನ ಪರಿಚಯದವರೊಂದಿಗೆ ಮಾಜಾಳಿಯ ಬಾವಳ ಹತ್ತಿರ ಸಮುದ್ರದಲ್ಲಿ ಮೀನು ಹಿಡಿಯಲು ತನ್ನ ಸ್ನೇಹಿತರೊಂದಿಗೆ ಹೋದಾಗ ಸಮುದ್ರದ ದಡದಲ್ಲಿ ನಮೂದಿತ ಮೃತನು ಬಲೆಯನ್ನು ಬೀಸಿ ಮೀನು ಹಿಡಿಯುತಿದ್ದವನು, ಸಮುದ್ರದಲ್ಲಿ ಬಂದ ದೊಡ್ಡ ಅಲೆಗೆ ಕೊಚ್ಚಿಕೊಂಡು ಹೋಗಿ ಸುಮಾರು 05-30 ಗಂಟೆಯಿಂದ 05-45 ಗಂಟೆಯವರೆಗೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇದರ ಹೊರತು ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ಗೋಪಿನಾಥ ಮೆಹತಾ, ಪ್ರಾಯ-43 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಾವಳ, ಮಾಜಾಳಿ, ಕಾರವಾರ ರವರು ದಿನಾಂಕ: 04-07-2021 ರಂದು 07-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 08-07-2021 01:33 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080