ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-06-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 269, 271 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಮೆಹ್ತಾ @ ಮೆಹತಾರ್, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನಾಬಾಗ್, ಕೋಡಿಬಾಗ್, ಕಾರವಾರ. ದಿನಾಂಕ: 04-06-2021 ರಂದು ಬೆಳಿಗ್ಗೆ 08-30 ಗಂಟೆಗೆ ದೇವಬಾಗ್ ಕ್ರಾಸ್ ಹತ್ತಿರ ಹೆದ್ದಾರಿಯ ಮೇಲೆ ಕರ್ನಾಟಕ ರಾಜ್ಯ ಸರ್ಕಾರವು ಮಾರಕ ರೋಗ ಕೋವಿಡ್-19 ವೈರಾಣು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಲಾಕಡೌನ್ ನಿಯಮ ಜಾರಿಗೊಳಿಸಿದ್ದರೂ ಸಹ ನಮೂದಿತ ಆರೋಪಿತನು ತನ್ನ ಮನೆಯಿಂದ ಹೊರಗೆ ಬಂದು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸುಮಾರು 7,200/- ರೂಪಾಯಿ ಬೆಲಬಾಳುವ ಗೋವಾ ರಾಜ್ಯ ತಯಾರಿಕೆಯ ಒಟ್ಟೂ 36 ಸರಾಯಿ ತುಂಬಿದ ಬಾಟಲಿಗಳನ್ನು ಪಾಲಿಥಿನ್ ಚೀಲದಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದಾಗ ಸದರಿ ಅಬಕಾರಿ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಿತ್ಯಾನಂದ ಪಂಡಿತ್, ಪೋಲಿಸ್ ವೃತ್ತ ನೀರಿಕ್ಷಕರು, ಕದ್ರಾ ವೃತ್ತ, ಕದ್ರಾ ರವರು ದಿನಾಂಕ: 04-06-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಾಂತಾರಾಮ ತಂದೆ ಯಶ್ವಂತ ನಾಯ್ಕ, ಸಾ|| ಅಗಸೂರ, ತಾ: ಅಂಕೋಲಾ (ಲಾರಿ ನಂ: ಕೆ.ಎ-20/ಎ-6945 ನೇದರ ಚಾಲಕ). ಈತನು ದಿನಾಂಕ: 04-06-2021 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಹೊನ್ನಳ್ಳಿಯ ಫಾರೆಸ್ಟ್ ವಸತಿಗೃಹದಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ನೇದರಲ್ಲಿ ಬರಲು ಅಂತಾ ಹಿಮ್ಮುಖವಾಗಿ ಯಾವುದೇ ಸಿಗ್ನಲ್ ಅಥವಾ ರಸ್ತೆಯ ಎರಡು ಬದಿಯಿಂದ ಬರ-ಹೋಗುವ ವಾಹನಗಳನ್ನು ಗಮನಿಸದೇ ಒಮ್ಮೇಲೆ ಹಿಂದಕ್ಕೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ರಸ್ತೆಯ ತನ್ನ ಬದಿಯಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಯು-4625 ನೇದಕ್ಕೆ ಲಾರಿಯ ಹಿಂದಿನ ಭಾಗ ಡಿಕ್ಕಿ ಆಗುವಂತೆ ಮಾಡಿ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಬೊಮ್ಮಯ್ಯ ತಂದೆ ರಾಮಾ ಗೌಡ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಗಡೆಬೇಣ, ಶಿರಗುಂಜಿ, ತಾ: ಅಂಕೋಲಾ ಈತನಿಗೆ ತಲೆಗೆ ಭಾರೀ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿ ಸವಾರ ಮಂಜುನಾಥ ತಂದೆ ತುಳಸು ಗೌಡ, ಸಾ|| ಸರಳೇಬೈಲ್, ತಾ: ಅಂಕೋಲಾ ಈತನಿಗೂ ಸಹ ತಲೆಗೆ ಭಾರೀ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಯಶ್ವಂತ ತಂದೆ ತಿಮ್ಮಾ ಗೌಡ, ಪ್ರಾಯ-30 ವರ್ಷ, ವೃತ್ತಿ-38 ವರ್ಷ, ವೃತ್ತಿ-ರೈತಾಬಿ ಕೆಲಸ ಹಾಗೂ ಕಿರಾಣಿ ವ್ಯಾಪಾರ, ಸಾ|| ಹೊನ್ನಳ್ಳಿ, ತಾ: ಅಂಕೋಲಾ ರವರು ದಿನಾಂಕ: 04-06-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಗಣಪತಿ ನಾಯಕ, ಸಾ|| ಅಗಸೂರು, ತಾ: ಅಂಕೋಲಾ (ಆಟೋ ರಿಕ್ಷಾ ನಂ: ಕೆ.ಎ-30/ಎ-3686 ನೇದರ ಚಾಲಕ). ಈತನು ತನ್ನ ಬಾಬ್ತು ಆಟೋ ರಿಕ್ಷಾ ನಂ: ಕೆ.ಎ-30/ಎ-3686 ನೇದನ್ನು ದಿನಾಂಕ: 31-05-2021 ರಂದು 15-45 ಗಂಟೆಗೆ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು ತನ್ನ ರಿಕ್ಷಾದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಎಡಬದಿಯಲ್ಲಿದ್ದ ಕಂಪೌಂಡಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 1). ಶ್ರೀ ಗಣಪತಿ ರಾಮಾ ನಾಯಕ, ಪ್ರಾಯ-72 ವರ್ಷ, 2). ಶ್ರೀಮತಿ ಸಾವಿತ್ರಿ ಗಣಪತಿ ನಾಯಕ, ಪ್ರಾಯ-68 ವರ್ಷ, 3). ಶ್ರೀಮತಿ ಮಂಗಲಾ ಉದಯ ನಾಯಕ. ಪ್ರಾಯ-45 ವರ್ಷ, ಸಾ|| ಮೇಲಿನಗುಳಿ, ವಾಸರೆ ಕುದ್ರಗಿ, ತಾ: ಅಂಕೋಲಾ ಇವರಿಗೆ ಸಾದಾ ಸ್ವರೂಪದ ಮತ್ತು 4). ಶ್ರೀಮತಿ ಸರಸ್ಪತಿ ಗೋವಿಂದ್ರಾಯ ನಾಯಕ, ಪ್ರಾಯ-60 ವರ್ಷ, ಸಾ|| ಮೇಲಿನಗುಳಿ, ವಾಸರೆ ಕುದ್ರಗಿ, ತಾ: ಅಂಕೋಲಾ ಇವರಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅರವಿಂದ ತಂದೆ ಗಣಪತಿ ನಾಯಕ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಮೇಲಿನಗುಳಿ, ವಾಸರೆ ಕುದ್ರಗಿ, ತಾ: ಅಂಕೋಲಾ ರವರು ದಿನಾಂಕ: 04-06-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 158/2021, ಕಲಂ: 269, 271 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಬಡವಾ ಗೌಡ, ಪ್ರಾಯ-45 ವರ್ಷ, ವೃತ್ತಿ-ಬೀಡಾ ಅಂಗಡಿ ವ್ಯಾಪಾರ, ಸಾ|| ಬಾಳೆಹಿತ್ತಲ, ಮಾವಿನಕುರ್ವಾ, ತಾ: ಹೊನ್ನಾವರ. ಈತನು ಹೊನ್ನಾವರ ತಾಲೂಕಿನ ಮಾವಿನಕುರ್ವಾ ಗ್ರಾಮದ ಸೊಸೈಟಿ ಹತ್ತಿರದ ಸಾರ್ವಜನಿಕ ರಸ್ತೆಯ ಬದಿಗೆ ಕೊರೋನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕಡೌನ್ ಆದೇಶ ಮಾಡಿದ್ದರೂ ಸಹ ತನ್ನ ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ, ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಒಟ್ಟು 1,932/- ರೂಪಾಯಿ ಮೌಲ್ಯದ ಒಟ್ಟು 4.95 ಲೀಟರ್ ಸರಾಯಿಯನ್ನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಿನಾಂಕ: 04-06-2021 ರಂದು 14-00 ಗಂಟೆಗೆ ಪಿರ್ಯಾದುದಾರರು ಪೊಲೀಸ್ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ವಶಕ್ಕೆ ಸಿಗದೇ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 04-06-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮ್ಮದ್ ಜಾಕೀರ್ ತಂದೆ ಮಹಮ್ಮದ್ ಹುಸೇನ್ ಸಾವಡಾ, ಪ್ರಾಯ-55 ವರ್ಷ, ಸಾ|| ನವಾಯತಕೇರಿ, ಮಂಕಿ, ತಾ: ಹೊನ್ನಾವರ. ಈತನು ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರಕಾರಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಹೊರಡಿಸಿದ ಸಂಪೂರ್ಣ ಲಾಕಡೌನ್ ಆದೇಶಗಳಿದ್ದರೂ ಸಹ ಸಾರ್ವಜನಿಕರಿಗೆ ಮಾರಣಾಂತಿಕ ಸಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ತನ್ನ ಲಾಭಕ್ಕಾಗಿ ತನ್ನ ಕಿರಾಣಿ ಅಂಗಡಿಯನ್ನು ತೆರೆದು ಅಂಗಡಿಯಲ್ಲಿರುವ ಸಾಮಾನುಗಳನ್ನು ಜನರಿಗೆ ಮಾರಾಟ ಮಾಡುತ್ತಿರುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 04-06-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಂಗಪ್ಪಾ ತಂದೆ ಯಲ್ಲಪ್ಪಾ ಬಡಕನ್ನವರ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾಂಬೂ ಗೇಟ್ ಹತ್ತಿರ, ದಾಂಡೇಲಿ, 2]. ಶ್ರೀಧರ ತಂದೆ ದಯಾನಂದ ಮಾಲಿಬಿರಾದರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾಂಬೂ ಗೇಟ್ ಹತ್ತಿರ, ದಾಂಡೇಲಿ. ಈ ನಮೂದಿತ ಆರೋಪಿತರು ದಿನಾಂಕ: 04-06-2021 ರಂದು 21-00 ಗಂಟೆಗೆ ಜೋಯಿಡಾ ತಾಲೂಕಿನ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಬಿರಂಪಾಲಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕರಿಗೆ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಿ, ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ್, ಪಿ.ಎಸ್.ಐ (ಕಾ&ಸು), ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 04-06-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 323, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿಲೇಶ ಮಹಾಜನ್, ಪ್ರಾಯ-45 ವರ್ಷ, ವೃತ್ತಿ-ಪತ್ರಿಕಾ ವರದಿಗಾರರು, ಸಾ|| ಕ್ರೋಸ್ಟೋ ಬಿಲ್ಡಿಂಗ್, ಬೆಳಗಾವಿ ರೋಡ್, ಹಳಿಯಾಳ ಶಹರ. ಪಿರ್ಯಾದಿಯವರು ಪತ್ರಿಕಾ ವರದಿಗಾರರಿದ್ದು, ದಿನಾಂಕ: 03-06-2021 ರಂದು ಮಧ್ಯಾಹ್ನ 12-30 ಗಂಟೆಗೆ ಹಳಿಯಾಳ ಶಹರದ ಸರಕಾರಿ ಆಸ್ಪತ್ರೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಹೋದಾಗ ನಮೂದಿತ ಆರೋಪಿತನು ಪಿರ್ಯಾದಿಯ ಮೈ ಮೇಲೆ ಏರಿ ಹೋಗಿ ಅವರನ್ನು ಉದ್ದೇಶಿಸಿ ‘ಕಾಯಬೆ ಕುನಾಚಾ ಬೊಲಾಲಾ, ಕೊಣಾಚ ರಿಕಾರ್ಡಿಂಗ್ ಬೋಸಡಿಚಾ, ಮಾದರಚೋದ್, ತುಜಾ ಲೈ ಝಾಲ್ಯಾ ಹಳಿಯಾಳ ಮದೆ ತುಲಾ ಮಿ ಜೀವಾನಿ ಸೊಡತೊ ನೈ, ಹಾತ ಪೈ ಮೊಡತು. ಅನಿ ಹಮಚೆ ಪನಗುಂಡಾ ಲೋಕ ಹೈತ ತುಲಾ ಜೀವಾನಿ ಮಾರತೋ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಪಿರ್ಯಾದಿಯ ಶರ್ಟ್ ಕಾಲರ್ ಹಿಡಿದು ಕೈಯಿಂದ ಎದೆ, ದುಬ್ಬಕ್ಕೆ ಹೊಡೆದು, ಕಾಲಿನಿಂದ ಒದ್ದು ದೂಡಿ ನೆಲಕ್ಕೆ ಕೆಡವಿ ದುಃಖಾಪತ್ ಪಡಿಸಿ, ಅಲ್ಲಿಂದ ಹೋಗುವಾಗ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯೋಗರಾಜ ತಂದೆ ಶಿವಾಜಿ ಕರಾಂಡೆ, ಪ್ರಾಯ-31 ವರ್ಷ, ವೃತ್ತಿ-ಪತ್ರಕರ್ತ, ಸಾ|| ಮೇದಾರ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 04-06-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-06-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

ಇತ್ತೀಚಿನ ನವೀಕರಣ​ : 05-06-2021 01:41 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080