ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 04-03-2021
at 00:00 hrs to 24:00 hrs
ಕಾರವಾರ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 14/2021, ಕಲಂ: 143, 147, 323, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರವಿ ತಂದೆ ಊಗಾ ನಾಯ್ಕ, 2]. ವಿನೀತ ಉಲ್ಲಾಸ ಬಾಂದೇಕರ, 3]. ಅಕ್ಷಯ ಮುರಾರಿ ಮಹೇಕರ ಹಾಗೂ ಇತರೆ ಮೂರು ಜನರು. ದಿನಾಂಕ: 04-03-2021 ರಂದು 15-00 ಗಂಟೆಯ ಸಮಯಕ್ಕೆ ಪಿರ್ಯಾದಿ ಹಾಗೂ ಇತರೇ 45-50 ಜನ ಸದಸ್ಯರು ಸೇರಿಕೊಂಡು ಕಾರವಾರದ ಅರ್ಗಾದಲ್ಲಿರುವ ಕಾರವಾರ ನೌಕಾನೆಲೆ ನಿರಾಶ್ರಿತರ ಗುತ್ತಿಗೆ ಕಾರ್ಮಿಕರ ಸಹಕಾರ ಸಂಘದ ಕಛೇರಿಯಲ್ಲಿ ಮೀಟಿಂಗ್ ನಡೆಸುತ್ತಾ ಇದ್ದಾಗ ನಮೂದಿತ ಆರೋಪಿತರು ಸೇರಿಕೊಂಡು ಸದ್ರಿ ಕಛೇರಿಯ ಎದುರುಗಡೆ ಗಲಾಟೆ ಮಾಡುವುದನ್ನು ನೋಡಿ ಪಿರ್ಯಾದಿಯವರು ಇತರರೊಂದಿಗೆ ಗಲಾಟೆ ಮಾಡುತ್ತಿರುವುದರ ಬಗ್ಗೆ ಕೇಳಲು ಹೋದಾಗ ಫೋಟೋ ಹೊಡೆಯುತ್ತಿದ್ದ ಆರೋಪಿ 1 ನೇಯವನಿಗೆ ಕೇಳಿದಾಗ ಅವನು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೇ’ ಅಂತಾ ಕೆಟ್ಟದಾಗಿ ಬೈಯ್ದು ಕೈಯಿಂದ ಮುಖಕ್ಕೆ ಹೊಡೆದಿದ್ದಲ್ಲದೇ, ಆರೋಪಿ 2 ನೇಯವನು ತನ್ನ ಕೈಯಲ್ಲಿದ್ದ ರಾಡಿನ ತುಂಡಿನಿಂದ ತಲೆಯ ಎಡಬದಿಗೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಆರೋಪಿ 1 ನೇಯವನು ನಂತರದಲ್ಲಿ ಪಿರ್ಯಾದಿಯನ್ನು ‘ಮುಂದೆ ನಿನ್ನನ್ನು ಬಿಡುವುದಿಲ್ಲ, ಜೀವ ತೆಗೆಯುತ್ತೇನೆ’ ಅಂತಾ ಜೀವದ ಬೆದರಿಕೆಯನ್ನು ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಾಧವ ತಂದೆ ಕಮಲಾಕರ ಅಸ್ನೋಟಿಕರ, ಪ್ರಾಯ-62 ವರ್ಷ, ವೃತ್ತಿ-ವ್ಯವಹಾರ, ಸಾ|| ಪದ್ಮನಾಭ ನಗರ, 3 ನೇ ಕ್ರಾಸ್, ಬಾಡ, ನಂದನಗದ್ದಾ, ಕಾರವಾರ ರವರು ದಿನಾಂಕ: 04-03-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 15/2021, ಕಲಂ: 143, 147, 341, 323 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಶಾಂತ ಕೋಡಾರಕರ, 2]. ಮಾಧವ ಅಸ್ನೋಟಿಕರ, 3]. ನವೀನ್ ಅರ್ಗೆಕರ, 4]. ಚೇತನ ನಾಯ್ಕ, 5]. ಕಾರ್ತಿಕ ತಾಂಡೇಲ್, 6]. ಮಧು ದುರ್ಗೆಕರ, 7]. ಪ್ರವೀಣ್ ತಾಂಡೇಲ್, ಸಾ|| (ಎಲ್ಲರೂ) ಕಾರವಾರ. ದಿನಾಂಕ: 04-03-2021 ರಂದು 15-15 ಗಂಟೆಯ ಸಮಯಕ್ಕೆ ಕಾರವಾರ ತಾಲೂಕಿನ ಅರ್ಗಾದಲ್ಲಿರುವ ಅಭಿಷೇಕ ಇವರ ಅಂಗಡಿಯಲ್ಲಿ ಕೋಲ್ಡ್ ಡ್ರಿಂಕ್ಸ್ ತರಲೆಂದು ಹೋದ ಪಿರ್ಯಾದಿಯು ತನ್ನ ಮೊಬೈಲ್ ಪೋನ್ ನಲ್ಲಿ ವಾಟ್ಸಪ್ ಅನ್ನು ನೋಡುತ್ತಿದ್ದಾಗ ಅಲ್ಲಿಯೇ ಪಕ್ಕದ ನೌಕಾನೆಲೆ ನಿರಾಶ್ರಿತರ ಗುತ್ತಿಗೆ ಕಾರ್ಮಿಕರ ಸೊಸೈಟಿ ಆಫೀಸಿನಲ್ಲಿ ಕುಳಿತ ಆರೋಪಿ 1 ನೇಯವನು ಎದ್ದು ಪಿರ್ಯಾದಿಯ ಹತ್ತಿರ ಬಂದು ‘ನಿನ್ನ ಮೊಬೈಲ್ ಪೋನ್ ಕೊಡು. ನೀನು ಇಲ್ಲಿ ನಮ್ಮ ಫೋಟೋ ಹೊಡೆಯುತ್ತಿದ್ದಿಯಾ?’ ಅಂತಾ ಹೇಳಿ ಕೈಯಿಂದ ದೂಡಿದ್ದಲ್ಲದೇ, ಆರೋಪಿ 2 ನೇಯವನು ಕೂಡಾ ಪಿರ್ಯಾದಿಗೆ ‘ಮೊಬೈಲ್ ಪೋನ್ ಅನ್ನು ಕೊಡು’ ಅಂತಾ ಹೇಳಿ ಕಾಲಿನಿಂದ ಮರ್ಮಾಂಗಕ್ಕೆ ಒದ್ದಾಗ ಪಿರ್ಯಾದಿಯ ಮೊಬೈಲ್ ಪೋನ್ ಕೈಯಿಂದ ಜಾರಿ ಬಿದ್ದಿದ್ದು, ಅದನ್ನು ತೆಗೆದುಕೊಳ್ಳಲು ಬಗ್ಗಿದಾಗ ಸದ್ರಿ ಆಫೀಸಿನಲ್ಲಿದ್ದ ಆರೋಪಿ 3 ರಿಂದ 7 ನೇಯವರು ಸೇರಿಕೊಂಡು ಪಿರ್ಯಾದಿಯವರನ್ನು ಅಡ್ಡಗಟ್ಟಿಕೊಂಡು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಗಾಯನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿನೀತ ತಂದೆ ಉಲ್ಲಾಸ ಬಾಂದೇಕರ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಿಂದೂವಾಡಾ, ಮಲ್ಲಾಪುರ, ಕಾರವಾರ, ಹಾಲಿ ಸಾ|| ಐಸ್ ಫ್ಯಾಕ್ಟರಿ ಚೆಂಡಿಯಾ, ಕಾರವಾರ ರವರು ದಿನಾಂಕ: 04-03-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 08/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಧೀರ ತಂದೆ ಯಶವಂತ ನಾಯ್ಕ, ಸಾ|| ನಂದನಗದ್ದಾ, ಕಾರವಾರ, ಹಾಲಿ ಸಾ|| ಮಲ್ಲಾಪುರ, ಕಾರವಾರ (ಕಾರ್ ನಂ: ಕೆ.ಎ-30/ಎಮ್-4446 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 04-03-2021 ರಂದು ಬೆಳಿಗ್ಗೆ 07-35 ಗಂಟೆಗೆ ತನ್ನ ಕಾರ್ ನಂ: ಕೆ.ಎ-30/ಎಮ್-4446 ನೇದನ್ನು ಮಲ್ಲಾಪುರ ಕಡೆಯಿಂದ ಹಿಂದೂವಾಡಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಲ್ಲಾಪುರದ ಚರ್ಚವಾಡಾ ಸಮೀಪ ರಾಜ್ಯ ಹೆದ್ದಾರಿ ಸಂಖ್ಯೆ-06 ರ ರಸ್ತೆಯ ಮೇಲೆ ತನ್ನ ಎದುರಿನಿಂದ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಓವರಟೇಕ್ ಮಾಡಿ ತನ್ನ ಬಲಬದಿಯಿಂದ ಬಂದು ಎದುರಿನಿಂದ ಬರುತ್ತಿದ್ದ ಪಿರ್ಯಾದಿಯ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-5474 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ನಿತಿನ ಜಯವಂತ ನಾಯ್ಕ ಈತನ ಎಡಗಾಲ ಮೂಳೆಗೆ ಭಾರೀ ಒಳನೋವು ಪಡಿಸಿ ಹಾಗೂ ಮಂಡಿಯ ಹತ್ತಿರ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿಜಯ ತಂದೆ ವಿಠ್ಠಲ ಪೆಡ್ನೇಕರ, ಪ್ರಾಯ-48 ವರ್ಷ, ವೃತ್ತಿ-ಎನ್.ಪಿ.ಸಿ.ಐ.ಎಲ್ ಕೈಗಾದಲ್ಲಿ ಗುತ್ತಿಗೆದಾರರಲ್ಲಿ ಕೆಲಸ, ಸಾ|| ಖಾಂಡಾಳಿ, ಕೆರವಡಿ, ಮಲ್ಲಾಪುರ, ಕಾರವಾರ ರವರು ದಿನಾಂಕ: 04-03-2021 ರಂದು 08-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 41/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಂದ್ರ ತಂದೆ ವೆಂಕಟ್ರಮಣ ನಾಯ್ಕ, ಸಾ|| ಹೀಪನಳ್ಳಿ, ತಾ: ಶಿರಸಿ (ಕಾರ್ ನಂ: ಕೆ.ಎ-32/ಎನ್-4798 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 04-03-2021 ರಂದು 10-30 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-32/ಎನ್-4798 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಮೇಲೆ ಶಿರಸಿ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಹರಿಟಾ ಕೋಡಂಬಳೆ ಕ್ರಾಸ್ ಹತ್ತಿರ ಇರುವ ಕುಂಡೋಧರಿ ಎಂಬ ಅಂಗಡಿಯ ಎದುರಿಗೆ ಕಾರನ್ನು ನಿಷ್ಕಾಳಜಿಯಿಂದ ರಸ್ತೆಯ ಬಲಕ್ಕೆ ಚಲಾಯಿಸಿ, ಅದೇ ವೇಳೆಗೆ ಎದುರಿನಿಂದ ಅಂದರೆ ಕುಮಟಾ ಕಡೆಯಿಂದ ಶಿರಸಿ ಕಡೆಗೆ ಜಯಂತ ತಂದೆ ಶಂಭು ಮರಾಠಿ ಇವರು ಚಲಾಯಿಸಿಕೊಂಡು ಹೊರಟ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7842 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಜಯಂತ ಮರಾಠಿ ಈತನಿಗೆ ಎಡಗಾಲಿಗೆ ಹಾಗೂ ಮೂಗಿಗೆ ಗಾಯವಾಗಲು ಮತ್ತು ಜಯಂತ ಈತನ ಮೋಟಾರ್ ಸೈಕಲ್ ಹಿಂಬದಿ ಕುಳಿತು ಸವಾರಿ ಮಾಡುತ್ತಿದ್ದ ಆತನ ತಾಯಿ ಶ್ರೀಮತಿ ಲಿಂಗಿ ಶಂಭು ಮರಾಠೆ, ಪ್ರಾಯ-55 ವರ್ಷ, ಇವರಿಗೆ ತಲೆಯ ಹಿಂಬದಿಗೆ ಭಾರೀ ಗಾಯವಾಗಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಡಲು ಕಾರಣವಾಗಿದ್ದಲ್ಲದೇ, ಎರಡೂ ವಾಹನ ಜಖಂ ಆಗಲು ಆರೋಪಿ ಕಾರ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ಈಶ್ವರ ಮರಾಠಿ, ಪ್ರಾಯ-27 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಾಗೂರು, ಕೊಚ್ಚೇರಿ, ತಾ: ಕುಮಟಾ ರವರು ದಿನಾಂಕ: 04-03-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 31/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಮಾ ತಂದೆ ನಾರಾಯಣ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಕುಕ್ಕನೀರ, ಹೆಬಳೆ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 04-03-2021 ರಂದು 11-00 ಗಂಟೆಯ ಸುಮಾರಿಗೆ ಭಟ್ಕಳದ ಹಳೆ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,320/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 04-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 08/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನಂತ ತಂದೆ ಗಂಗಾಧರ ಭಟ್ಟ, ಪ್ರಾಯ-38 ವರ್ಷ, ಸಾ|| ತಿಲಕನಗರ, ತಾ: ಶಿರಸಿ (ಕಾರ್ ನಂ: ಕೆ.ಎ-31/ಎನ್-5041 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 02-03-2021 ರಂದು 18-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಐದು ರಸ್ತೆಯಲ್ಲಿ ತನ್ನ ಕಾರ್ ನಂ: ಕೆ.ಎ-31/ಎನ್-5041 ನೇದನ್ನು ಕುಮಟಾ ಕಡೆಯಿಂದ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಐದು ರಸ್ತೆಯಲ್ಲಿ ತನ್ನ ವಾಹನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ದುಂಡಶಿ ಪೆಟ್ರೋಲ್ ಬಂಕಿನಿಂದ ಝೂ ಸರ್ಕಲ್ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-7312 ನೇದರ ಸವಾರನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಿಗೆ ಮೈ ಕೈಗಳಿಗೆ ಹಾಗೂ ಎಡಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನೂರಅಲಿ ತಂದೆ ಮಹ್ಮದ್ ಗೌಸ್ ಮಕಾಂದರ್, ಪ್ರಾಯ-22 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ರಾಜೀವ ನಗರ, ತಾ: ಶಿರಸಿ ರವರು ದಿನಾಂಕ: 04-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 04-03-2021
at 00:00 hrs to 24:00 hrs
ಕಾರವಾರ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಹೇಶ ತಂದೆ ಭಿಕಾರೋ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಕೊಂಕಣ ರೈಲ್ವೇ ದಿನಗೂಲಿ ನೌಕರ, ಸಾ|| ಸುಲ್ತಾನಪುರ ರೋಡ್, ಕಡವಾಡ, ಕಾರವಾರ, ಹಾಲಿ ಸಾ|| ನಾರಗೇರಿ, ಶಿರವಾಡ, ಕಾರವಾರ. ಈತನು ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ: 04-03-2021 ರಂದು ಬೆಳಿಗ್ಗೆ 08-00 ಗಂಟೆಯ ಸಮಯಕ್ಕೆ ತಾನು ಬಾಡಿಗೆಯಲ್ಲಿರುವ ಶಿರವಾಡ, ನಾಡಗೇರಿಯಲ್ಲಿರುವ ಮನೆಯಲ್ಲಿದ್ದಾಗ ಆಕಸ್ಮಾತ್ ವಾಂತಿ ಶುರುವಾಗಿ ಕುಸಿದು ಬಿದ್ದವನಿಗೆ ಮೃತನ ಹೆಂಡತಿ ಉಪಚರಿಸಿ ನಂತರ ಸುದ್ದಿದಾರರು 108 ಆ್ಯಂಬುಲೆನ್ಸ್ ಮೇಲಾಗಿ ಬೆಳಿಗ್ಗೆ 10-30 ಗಂಟೆಯ ಸಮಯಕ್ಕೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು ಪರೀಕ್ಷಿಸಿ ಅವನು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ನಿಲೇಶ ತಂದೆ ಭಿಕಾರೋ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಗ್ರಾಸಿಮ್ ಕಂಪನಿಯಲ್ಲಿ ಕೆಲಸ, ಸಾ|| ಸುಲ್ತಾನಪುರ ರೋಡ್, ಕಡವಾಡ, ಕಾರವಾರ ರವರು ದಿನಾಂಕ: 04-03-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ದೇವಿದಾಸ ತಂದೆ ರಾಮದಾಸ ಶಾನಭಾಗ, ಪ್ರಾಯ-63 ವರ್ಷ, ವೃತ್ತಿ-ನಿವೃತ್ತ ಖಾಸಗಿ ನೌಕರ, ಸಾ|| ಕಾತ್ಯಾಯಿನಿ ದೇವಸ್ಥಾನದ ಹತ್ತಿರ, ಶಿವಾಜಿವಾಡ, ಬಾಡ, ಕಾರವಾರ. ಈತನು ಕಳೆದ ಅನೇಕ ವರ್ಷಗಳಿಂದ ಸಕ್ಕರೆ ಖಾಯಿಲೆ ಹಾಗೂ ಲಿವರ್ ಸಮಸ್ಯೆಯಿಂದ ಸಹ ಬಳಲುತ್ತಿದ್ದವನು, ತನ್ನ ಕಾಲಿಗೆ ಉಂಟಾದ ಗ್ಯಾಂಗ್ರೀನ್ ಸಮಸ್ಯೆಯಿಂದಾಗಿ ನೊಂದು ವೈದ್ಯರಲ್ಲಿ ಚಿಕಿತ್ಸೆಗೆ ಹೋಗಲು ಭಯ ಪಡುತ್ತಿದ್ದವನು, ದಿನಾಂಕ: 03-03-2021 ರಂದು ರಾತ್ರಿ 20-00 ಗಂಟೆಗೆ ತನ್ನ ಮನೆಯಿಂದ ಹೊರಗೆ ಹೋಗಿದ್ದವನು ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದು, ದಿನಾಂಕ: 04-03-2021 ರಂದು ಆತನ ಶವವು ಕಾರವಾರದ ಸುಂಕೇರಿ ಸಮೀಪದ ಕಾಳಿ ನದಿಯ ದ್ವೀಪದ ಬಳಿ ಸಿಕ್ಕಿದ್ದು, ಮೃತನು ತನಗಿರುವ ಖಾಯಿಲೆಯಿಂದ ಮನನೊಂದು ಕಾಳಿ ನದಿಯ ನೀರಿನಲ್ಲಿ ಹಾರಿ ಮೃತಪಟ್ಟಿರಬಹುದಾಗಿ ಪಿರ್ಯಾದಿ ಶ್ರೀ ಧೀರಜ ತಂದೆ ದೇವಿದಾಸ ಶಾನಭಾಗ, ಪ್ರಾಯ-29 ವರ್ಷ, ವೃತ್ತಿ-ಇಂಜಿನೀಯರ್, ಸಾ|| ಕಾತ್ಯಾಯಿನಿ ದೇವಸ್ಥಾನದ ಹತ್ತಿರ, ಶೀವಾಜಿವಾಡ, ಬಾಡ, ಕಾರವಾರ ರವರು ದಿನಾಂಕ: 04-03-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಗೋಕರ್ಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಅಜಮಾಸ 30 ರಿಂದ 35 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ಎಲ್ಲಿಯೋ ಸಮುದ್ರದ ತೀರದಲ್ಲಿ ಈಜಾಡಲು ಅಥವಾ ಸ್ನಾನಕ್ಕೆಂದು ಹೋದವನು, ಸಮುದ್ರದ ಅಲೆಗೆ ಸಿಲುಕಿ ಮುಳುಗಿ ಮೃತಪಟ್ಟು, ಶವವು ದಿನಾಂಕ: 04-03-2021 ರಂದು ಬೆಳಿಗ್ಗೆ 06-15 ಗಂಟೆಯ ಸುಮಾರಿಗೆ ಗೋಕರ್ಣದ ಓಂ ಬೀಚ್ ನ ನಮಸ್ತೆ ಕೆಫೆ ಎದುರಿನ ಸಮುದ್ರದ ತೀರದಲ್ಲಿ ಸಿಕ್ಕಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ನಾಗೇಶ ಮಾಂಜ್ರೇಕರ್, ಪ್ರಾಯ-40 ವರ್ಷ, ವೃತ್ತಿ-ನಮಸ್ತೆ ಕೆಫೆದಲ್ಲಿ ಮ್ಯಾನೇಜರ್ ಕೆಲಸ, ಸಾ|| ಬಂಡಿಕೇರಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 04-03-2021 ರಂದು 07-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಾಬ್ಲೇಶ್ವರ ತಂದೆ ತಿಮ್ಮಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಶಿರಗಳ್ಳೆ, ಪೋ: ಸೋವಿನಕೊಪ್ಪ, ತಾರಖಂಡ ಗ್ರಾಮ, ತಾ: ಸಿದ್ದಾಪುರ. ಪಿರ್ಯಾದಿಯ ಗಂಡನಾದ ಇವರು ದಿನಾಂಕ: 04-03-2021 ರಂದು ಬೆಳಿಗ್ಗೆ ತಮ್ಮ ಊರಿನ ರಾಘವೇಂದ್ರ ತಿಮ್ಮಪ್ಪಾ ನಾಯ್ಕ ಇವರ ಮನೆಗೆ ಮೈ ಆಳು ಕೆಲಸಕ್ಕೆಂದು ಹೋಗಿದ್ದವರು, ರಾಘವೇಂದ್ರ ತಿಮ್ಮಪ್ಪಾ ನಾಯ್ಕ ರವರ ಮಾಲ್ಕಿ ಬೆಟ್ಟದಲ್ಲಿ ಸೊಪ್ಪು ಕಡಿಯಲೆಂದು ಅಕೇಶಿಯಾ ಮರ ಹತ್ತುತ್ತಿದ್ದಾಗ ಮಧ್ಯಾಹ್ನ 11-30 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ನೆಲಕ್ಕೆ ಅಪ್ಪಳಿಸಿ ಬಿದ್ದು, ಮಾರಣಾಂತಿಕ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಗೌರಿ ಕೋಂ. ಮಾಬ್ಲೇಶ್ವರ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರಗಳ್ಳೆ, ಪೋ: ಸೋವಿನಕೊಪ್ಪ, ತಾರಖಂಡ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 04-03-2021 ರಂದು 13-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======