ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸತ್ಯಪ್ಪ ತಂದೆ ಹನುಮಪ್ಪ ಮುರಲಾಪುರ, ಪ್ರಾಯ-47 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಹಾತಲಗೇರಿ, ಗದಗ, ಹಾಲಿ ಸಾ|| ಹರಿದೇವನಗರ, ಹಬ್ಬುವಾಡಾ, ಕಾರವಾರ, 2]. ಬಸವರಾಜ ತಂದೆ ದೇವಪ್ಪ ಬಾಗಲಿ, ಪ್ರಾಯ-42 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕದಮಪುರ, ಮುಂಡರಗಿ, ಗದಗ, ಹಾಲಿ ಸಾ|| ಹರಿದೇವ ನಗರ, ಹಬ್ಬುವಾಡಾ, ಕಾರವಾರ, 3]. ಸೋಮಪ್ಪ ತಂದೆ ರಂಗಪ್ಪ ಮೇಟಿ, ಪ್ರಾಯ-33 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ನೇರಳಕೊಪ್ಪ, ಕುಷ್ಟಗಿ ಕೊಪ್ಪಳ, ಹಾಲಿ ಸಾ|| ನ್ಯೂ ಕೆ.ಎಚ್.ಬಿ ಕಾಲೋನಿ, ಹಬ್ಬುವಾಡಾ, ಕಾರವಾರ, 4]. ಹುಲಿಗಪ್ಪ ತಂದೆ ಚೆನ್ನಬಸಪ್ಪಗೌಡ ಮೂಲಿಮನೆ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಂಬಳರಸ್ತೆ  ಚಿಕ್ಕವಡ್ಡಟ್ಟಿ, ಮುಂಡರಗಿ, ಗದಗ, ಹಾಲಿ ಸಾ|| ಹರಿದೇವ ನಗರ, ಹಬ್ಬುವಾಡಾ, ಕಾರವಾರ, 5]. ದೇವಪ್ಪ ತಂದೆ ಫಕೀರಪ್ಪ ದುರ್ಗಣ್ಣನವರ್, ಪ್ರಾಯ-46 ವರ್ಷ, ವೃತ್ತಿ-ಕುರಿಗಾಯಿ, ಸಾ|| ಅಡವಿ, ಸೋಮಾಪುರ, ಗದಗ, ಹಾಲಿ ಸಾ|| ಹರಿದೇವ ನಗರ, ಹಬ್ಬುವಾಡಾ, ಕಾರವಾರ, 6]. ಬೀರಪ್ಪ ತಂದೆ ಫಕಿರಪ್ಪಾ ದುರ್ಗಣ್ಣನವರ್, ಪ್ರಾಯ-32 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಅಡವಿ, ಸೋಮಾಪುರ, ಗದಗ, ಹಾಲಿ ಸಾ|| ಹರಿದೇವ ನಗರ, ಹಬ್ಬುವಡಾ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 04-11-2021 ರಂದು ಮಧ್ಯಾಹ್ನ 15-15 ಘಂಟೆಗೆ ಹಬ್ಬುವಾಡಾ, ಹರಿದೇವ ನಗರದಲ್ಲಿರುವ ನಾಗದೇವತಾ ದೇವಸ್ಥಾನದ ಹತ್ತಿರ ಗುಡ್ಡದ ಧರೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ದಾಳಿ ನಡೆಸಿ, ಜುಗಾರಾಟಕ್ಕೆ ಬಳಸಿದ ಒಟ್ಟೂ ನಗದು ಹಣ 5,200/- ರೂಪಾಯಿ ಹಾಗೂ 52 ಇಸ್ಪೀಟ್ ಕಾರ್ಡ್ಸ್ ಮತ್ತು ಕುಳಿತುಕೊಳ್ಳಲು ಬಳಸಿದ ಪ್ಲಾಸ್ಟಿಕ್ ಶೀಟ್ ಇವುಗಳೊಂದಿಗೆ ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ (ಕಾ&ಸು), ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 04-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 163/2021, ಕಲಂ: 3, 25(1B)(a) ಭಾರತ ಆಯುಧ ಆಧಿನಿಯಮ-1959 ನೇದ್ದರ ವಿವರ...... ನಮೂದಿತ ಆರೋಪಿತ ಗೋಪಾಲ ತಂದೆ ಕುರಂಗ್ಯಾ ಮರಾಠಿ, ಪ್ರಾಯ-46 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ವಾಡಗಾರ, ಅಂಗಡಿಬೈಲ್, ಅಚವೆ, ತಾ: ಅಂಕೋಲಾ. ಈತನು ದಿನಾಂಕ: 04-11-2021 ರಂದು 16-40 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಅಚವೆ ಗ್ರಾಮದ ಕೊಡೆಮನೆ ಕ್ರಾಸ್ ಬಸ್ ತಂಗುದಾಣದ ಹತ್ತಿರ ಯಾವುದೇ ಲೈಸನ್ಸ್ ಇಲ್ಲದೇ ಸುಮಾರು 5,000/- ರೂಪಾಯಿ ಮೌಲ್ಯದ ಅಕ್ರಮ ನಾಡ ಬಂದೂಕನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಹೋಗುತ್ತಿದ್ದಾಗ ದಾಳಿಯ ಕಾಲಕ್ಕೆ ಬಂದೂಕಿನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರೇಮನಗೌಡ ಪಾಟೀಲ್, ಪಿ.ಎಸ್.ಐ (ತನಿಖೆ), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 04-11-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 193/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗೋಪಿನಾಥ ತಂದೆ ಲಿಂಗಪ್ಪಾ ಗೌಡಾ, ಪ್ರಾಯ-35 ವರ್ಷ, ಸಾ|| ಲುಕ್ಕೇರಿ, ತಾ: ಕುಮಟಾ, 2]. ಅಮ್ಮು ತಂದೆ ಶಂಕರ ಗೌಡಾ, ಪ್ರಾಯ-40 ವರ್ಷ, ಸಾ|| ಲುಕ್ಕೇರಿ, ತಾ: ಕುಮಟಾ, 3]. ಕೇಶವ ಗಣಪತಿ ಅಂಬಿಗ, ಪ್ರಾಯ-30 ವರ್ಷ, ಸಾ|| ಲುಕ್ಕೇರಿ, ತಾ: ಕುಮಟಾ, 4]. ಕಿರಣ ಶ್ರೀಧರ ಪೈ, ಪ್ರಾಯ-26 ವರ್ಷ, ಸಾ|| ಲುಕ್ಕೇರಿ, ತಾ: ಕುಮಟಾ, 5]. ರಾಘವೇಂದ್ರ ಜಟ್ಟು ಗೌಡಾ, ಪ್ರಾಯ-36 ವರ್ಷ, ಸಾ|| ಲುಕ್ಕೇರಿ, ತಾ: ಕುಮಟಾ, 6]. ಕೃಷ್ಣಾ ತಂದೆ ಶಿವಪ್ಪಾ ಪಟಗಾರ, ಪ್ರಾಯ-46 ವರ್ಷ, ಸಾ|| ಹಣ್ಣೇಮಠ, ತಾ: ಕುಮಟಾ, 7]. ಭಾಸ್ಕರ ತಂದೆ ಮಾರು ಗೌಡಾ, ಪ್ರಾಯ-38 ವರ್ಷ, ಸಾ|| ಲುಕ್ಕೇರಿ, ತಾ: ಕುಮಟಾ, 8]. ಬಾಲಚಂದ್ರ ನಾರಾಯಣ ಮಡಿವಾಳ, ಪ್ರಾಯ-57 ವರ್ಷ, ಸಾ|| ಮಾಸೂರು, ಲುಕ್ಕೇರಿ, ದೇವರಬೊಳೆ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 04-11-2021 ರಂದು 13-00 ಗಂಟೆಗೆ ಕುಮಟಾ ತಾಲೂಕಿನ ಲುಕ್ಕೇರಿ ಬ್ರಿಡ್ಜ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ಕಾಲ ನಗದು ಹಣ 3,810/- ರೂಪಾಯಿ ಮತ್ತು ಜೂಗಾರಾಟದ ಸಲಕರಣೆಗಳೊಂದಿಗೆ ಆರೋಪಿತರೆಲ್ಲರೂ ವಶಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಸ||ತ|| ರವಿ ಗುಡ್ಡಿ, ಪಿ.ಎಸ್.ಐ (ತನಿಖೆ-1), ಕುಮಟಾ ಪೋಲಿಸ್ ಠಾಣೆ ರವರು ದಿನಾಂಕ: 04-11-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 194/2021, ಕಲಂ: 341, 323, 504, 506, 427 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೋಮನಾಥ @ ರಾಜೇಶ ತಂದೆ ದಾಮೋದರ ಲಕ್ಕುಮನೆ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಯ್ಗೆ, ಅಘನಾಶಿನಿ, ತಾ: ಕುಮಟಾ. ದಿನಾಂಕ: 04-11-2021 ರಂದು 15-15 ಗಂಟೆಗೆ ಪಿರ್ಯಾದಿ ಮತ್ತು ಆತನ ಸ್ನೇಹಿತರಾದ ಕುಮಾರ ಸುಬ್ರಾಯ ಹರಿಂಕಂತ್ರ, ಉದಯ ಈಶ್ವರ ಹರಿಕಂತ್ರ ಹಾಗೂ ಸಂದೀಪ ವೆಂಕಟೇಶ ಲಕ್ಕುಮನೆ ಇವರೆಲ್ಲರೂ ಸೇರಿ ಅಘನಾಶಿನಿ ಗ್ರಾಮದ ಮೀನು ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತಮ್ಮ ಊರಲ್ಲಿ ಚಿಪ್ಪಿ ತಗೆಯುವುದರಿಂದ ಮೀನುಗಾರಿಕೆ ಹಾಳು ಆಗುತ್ತದೆ ಎಂಬ ವಿಷಯವಾಗಿ ಮಾತನಾಡುತ್ತಾ ನಿಂತುಕೊಂಡಿದ್ದಾಗ ಅದೇ ವೇಳೆ ನಮೂದಿತ ಆರೋಪಿತನು ಸ್ಥಳಕ್ಕೆ ಬಂದವನು ಪಿರ್ಯಾದಿಯವರನ್ನು ಉದ್ದೇಶಿಸಿ ‘ಬೋಸಡಿ ಮಗನೆ, ಸೂಳೆ ಮಗನೆ’ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ‘ಊರಲ್ಲಿ ಯಾರೇ ಬಂದರು ನಾವು ಚಿಪ್ಪಿ ತಗೆಯುವುದನ್ನು ನಿಲ್ಲಿಸಲ್ಲ. ಏನು ಬೇಕಾದರೂ ಮಾಡಲಿ’ ಎಂದು ಹೇಳಿದಾಗ ಪಿರ್ಯಾದಿಯವರು ‘ಆ ವಿಷಯವಾಗಿ ತನ್ನ ಹತ್ತಿರ ಯಾಕೆ ಹೇಳುತ್ತಿಯಾ?’ ಎಂದು ಕೇಳಿದ್ದಕ್ಕೆ ಸಿಟ್ಟಾದ ಆರೋಪಿತನು ಪಿರ್ಯಾದಿಯವರಿಗೆ ರಸ್ತೆಯ ಮೇಲೆ ಅಡ್ಡಗಟ್ಟಿ ತಡೆದು, ಕೈಯಿಂದ ಪಿರ್ಯಾದಿಯವರ ಎಡಗೆನ್ನೆಗೆ ಹೊಡೆದು ದೂಡಿ ಹಾಕಿ, ಪಿರ್ಯಾದಿಯವರು ಧರಿಸಿದ್ದ ಟೀ-ಶರ್ಟ್ ಹಿಡಿದು ಎಳೆದು ಹರಿದು ಹಾಕಿ ಪಿರ್ಯಾದಿಯವರಿಗೆ 300/- ರೂಪಾಯಿ ಲುಕ್ಸಾನ್ ಪಡಿಸಿದ್ದಲ್ಲದೇ, ಸ್ಥಳದಿಂದ ಹೋಗುವಾಗ ‘ಕೊಲೆ ಮಾಡಿ ಅಘನಾಶಿನಿ ನದಿಯಲ್ಲಿ ಬಿಸಾಡುತ್ತೇನೆ’ ಎನ್ನುವುದಾಗಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಶಂಕರ ಹರಿಕಂತ್ರ. ಪ್ರಾಯ-23 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಯ್ಗೆ, ಅಘನಾಶಿನಿ, ತಾ: ಕುಮಟಾ ರವರು ದಿನಾಂಕ: 04-11-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 195/2021, ಕಲಂ: 341, 323, 504, 506, 427 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 04-11-2021 ರಂದು 15-30 ಗಂಟೆಗೆ ಪಿರ್ಯಾದಿಯವರು ತನ್ನ ಸ್ನೇಹಿತರಾದ ಸುನೀಲ ಜಟ್ಟಿ ಮುಕ್ರಿ, ಸಾ|| ತೊಪ್ಪಲಕೇರಿ, ಕರ್ಕಿ, ತಾ: ಹೊನ್ನಾವರ ಹಾಗೂ ವಿನಾಯಕ ತಂದೆ ಜಟ್ಟಿ ಮುಕ್ರಿ, ಸಾ|| ವಂದೂರು, ಕರ್ಕಿ, ತಾ: ಹೊನ್ನಾವರ ಇವರೊಂದಿಗೆ ಬಡಗಣಿಯ ಆಲ್ಫಾ ವೈನ್ಸ್ ಎದುರಿಗೆ ಇರುವ ಗೂಡಂಗಡಿಯ ಹತ್ತಿರ ಸಿಗರೇಟ್ ಕೊಳ್ಳಲು ಹೋಗಿ ಸಿಗರೇಟ್ ತೆಗೆದುಕೊಳ್ಳುತ್ತಿರುವಾಗ ಸ್ನೇಹಿತ ಸುನೀಲ ಈತನ ಕೈ ತಾಗಿ ಸಿಗರೇಟ್ ಕೆಳಕ್ಕೆ ಬಿದ್ದಾಗ ಪಿರ್ಯಾದಿಯವರು ಸಲುಗೆಯಿಂದ ತನ್ನ ಸ್ನೇಹಿತನಿಗೆ ಬೈದಿದ್ದು, ಆ ವೇಳೆ ಅಲ್ಲಿಯೇ ಗೂಡಂಗಡಿಯ ಎದುರಿಗೆ ನಿಂತುಕೊಂಡಿದ್ದು ನಮೂದಿತ ಆರೋಪಿತರು ಪಿರ್ಯಾದಿಯು ತಮಗೆ ಬೈಯ್ದಿದ್ದು ಅಂತಾ ತಪ್ಪಾಗಿ ತಿಳಿದು ಪಿರ್ಯಾದಿಯವರನ್ನು ಕುರಿತು ‘ಬೋಳಿ ಮಗನೇ ನಮಗೆ ಯಾಕೆ ಬೈಯುತ್ತಿಯಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಯವರನ್ನು ಅಡ್ಡಗಟ್ಟಿ ತಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು, ಕೈಯಿಂದ ಬೆನ್ನಿಗೆ ಹಾಗೂ ಭುಜಕ್ಕೆ ಹೊಡೆದು ಹಲ್ಲೆ ಮಾಡಿ, ಎಳೆದಾಡಿ ಪಿರ್ಯಾದಿಯ ಕೊರಳಲ್ಲಿ ಇದ್ದ ಬಂಗಾರದ ಚೈನ್ ನೆಲಕ್ಕೆ ಬಿದ್ದು ಕಾಣೆಯಾಗಿ ಲುಕ್ಸಾನ್ ಆಗಲು ಕಾರಣವಾಗಿದ್ದಲ್ಲದೇ, ತಪ್ಪಿಸಲು ಬಂದ ಪಿರ್ಯಾದಿಯವರ ಸ್ನೇಹಿತ ಸುನೀಲ್ ಈತನಿಗೂ ಸಹ ಕೈಯಿಂದ ಕೆನ್ನೆಯ ಮೇಲೆ ಹೊಡೆದು ಹಲ್ಲೆ ಮಾಡಿ, ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಸಂದೀಪ ತಂದೆ ಮಾಸ್ತಿ ಮುಕ್ರಿ, ಪ್ರಾಯ-27 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ತೊಪ್ಪಲಕೇರಿ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 04-11-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 196/2021, ಕಲಂ: 341, 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಗಣೇಶ ತಂದೆ ಶಂಕರ ಹರಿಕಂತ್ರ, ಪ್ರಾಯ-23 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಯ್ಗೆ, ಅಘನಾಶಿನಿ, ತಾ: ಕುಮಟಾ. ದಿನಾಂಕ: 04-11-2021 ರಂದು 15-20 ಗಂಟೆಗೆ ಪಿರ್ಯಾದಿಯವರು ತಮ್ಮ ಮನೆಯಿಂದ ಬಂದರ್ ಕಡೆಗೆ ರಸ್ತೆಯ ಮೇಲಾಗಿ ನಡೆದುಕೊಂಡು ಹೋಗುತ್ತಿರುವಾಗ ಅಘನಾಶಿನಿ ಗ್ರಾಮದ ಮೀನು ಮಾರ್ಕೆಟ್ ಹತ್ತಿರ ರಸ್ತೆಯ ಮೇಲೆ ನಿಂತುಕೊಂಡಿದ್ದ ನಮೂದಿತ ಆರೋಪಿತನು ಈ ಹಿಂದಿನಿಂದಲೂ ಪಿರ್ಯಾದಿಯೊಂದಿಗೆ ದ್ವೇಷದಿಂದ ಇದ್ದವನು, ಪಿರ್ಯಾದಿಯವರನ್ನು ಉದ್ದೇಶಿಸಿ ‘ಬೋಸಡಿ ಮಗನೆ, ಸೂಳೆ ಮಗನೆ, ಊರಲ್ಲಿ ನಿಂದು ಜಾಸ್ತಿ ಆಯ್ತು’ ಅಂತ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ ಪಿರ್ಯಾದಿಯವರು ‘ಯಾಕೆ ನನ್ನ ಮೇಲೆ ಹೀಗೆ ದ್ವೇಷ ಮಾಡುತ್ತಿಯಾ?’ ಅಂತಾ ಕೇಳಿದ್ದಕ್ಕೆ ಸಿಟ್ಟಾದ ಆರೋಪಿತನು ಪಿರ್ಯಾದಿಯವರಿಗೆ ರಸ್ತೆಯ ಮೇಲೆ ಅಡ್ಡಗಟ್ಟಿ ತಡೆದು, ಕಲ್ಲಿನಿಂದ ಪಿರ್ಯಾದಿಯವರ ತಲೆ ಮತ್ತು ಹಣೆಯ ಮೇಲೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಕೈಯಿಂದ ಪಿರ್ಯಾದಿಯವರ ಎರಡು ಕಿವಿ ಹಿಡಿದು ಜಗ್ಗಿ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸೋಮನಾಥ @ ರಾಜೇಶ ತಂದೆ ದಾಮೋದರ ಲಕ್ಕುಮನೆ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಯ್ಗೆ, ಅಘನಾಶಿನಿ, ತಾ: ಕುಮಟಾ ರವರು ದಿನಾಂಕ: 04-11-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 192/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಶೇಖರ ತಂದೆ ಮಂಜುನಾಥ ಗೋಸಾವಿ, ಪ್ರಾಯ-34 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ಜಯಂತಿ ನಗರ, ಕಿರುವತ್ತಿ, ತಾ: ಯಲ್ಲಾಪುರ, 2]. ಸಿದ್ದಪ್ಪ ತಂದೆ ಮುದಿಯಪ್ಪ ಹುಡೇದ, ಪ್ರಾಯ-59 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಪಾಣಿಗುಂಡಿ, ಪೋ: ಕಿರುವತ್ತಿ, ತಾ: ಯಲ್ಲಾಪುರ, 3]. ಮಂಜುನಾಥ ತಂದೆ ಸಹದೇವ ದಿಂಡವಾರ್, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಂದಿರಾ ನಗರ, ಕಿರುವತ್ತಿ, ತಾ: ಯಲ್ಲಾಪುರ, 4]. ಉಸ್ಮಾನ್ ತಂದೆ ಮಹಮ್ಮದ್‍ಸಾಬ್ ಪಟೇಲ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಂದಿರಾ ನಗರ, ಕಿರುವತ್ತಿ, ತಾ: ಯಲ್ಲಾಪುರ, 5]. ಪ್ರಕಾಶ ತಂದೆ ವಾಸು ಲಮಾಣಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಂಗನ ತಾವರಗೇರಿ, ಪೋ: ಮದನೂರ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರು ದಿನಾಂಕ: 04-11-2021 ರಂದು 22-15 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಕಿರುವತ್ತಿ ಗ್ರಾಮದಲ್ಲಿ ಬಿ.ಸಿ.ಎಮ್ ಹಾಸ್ಟೆಲ್ ಹಿಂದೆ ಸಾರ್ವಜನಿಕ ಸ್ಧಳದಲ್ಲಿ ತಮ್ಮ ತಮ್ಮ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಜೂಗಾರಾಟ ಆಡುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರೆಲ್ಲರು ನಗದು ಹಣ 5,350/- ರೂಪಾಯಿ ಹಾಗೂ ಜೂಗಾರಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಗೌಡರ, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 04-11-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 160 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುಬಿನ್ನ, ಸಾ|| ರಾಮನಬೈಲ್, ತಾ: ಶಿರಸಿ, 2]. ಸುನೀಲ್, ಸಾ|| ರಾಮನಬೈಲ್, ತಾ: ಶಿರಸಿ. ಈ ನಮೂದಿತ ಆರೋಪಿತರು ಶಿರಸಿ ಶಹರದ ರಾಮನಬೈಲ್ ಮೂಲ ನಿವಾಸಿಯವರಿದ್ದು, ದಿನಾಂಕ: 04-11-2021 ರಂದು 19-00 ಗಂಟೆಯ ಸುಮಾರಿಗೆ ಯಾವುದೇ ಕಾರಣವಿಲ್ಲದೇ ಕ್ಷುಲ್ಲಕ ವಿಷಯಕ್ಕಾಗಿ ಶಿರಸಿ ಶಹರದ ರಾಮನಬೈಲಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ‘ಬೋಳಿ ಮಗನೆ, ಸೂಳೆ ಮಗನೇ’ ಅಂತಾ ದೊಡ್ಡದಾಗಿ ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಂಡು, ಕೈಯಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಪಡಿಸಿ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ಶಹರ ಪೊಲೀಸ್ ಠಾಣೆ ರವರು ದಿನಾಂಕ: 04-11-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಟಿ. ಟಿ. ಅಭೀಶ್ ತಂದೆ ಟಿ. ಟಿ. ಅನಿಲ್, ಪ್ರಾಯ-28 ವರ್ಷ, ಸಾ|| ರಾಮನಬೈಲ್, ತಾ: ಶಿರಸಿ (ಓಮಿನಿ ವಾಹನ ನಂ: ಕೆ.ಎ-31/ಎನ್-5539 ನೇದರ ಚಾಲಕ). ಈತನು ದಿನಾಂಕ: 04-11-2021 ರಂದು 19-30 ಗಂಟೆಗೆ ತನ್ನ ಓಮಿನಿ ವಾಹನ ನಂ: ಕೆ.ಎ-31/ಎನ್-5539 ನೇದನ್ನು ಶಿರಸಿ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದವನು, ಶಿರಸಿ-ಬನವಾಸಿ ರಸ್ತೆಯ ಟಿಪ್ಪು ನಗರ ಕ್ರಾಸ್ ಹತ್ತಿರ ತನ್ನ ಓಮಿನಿ ವಾಹನವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ರಸ್ತೆ ದಾಟುತ್ತಿರುವ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವುಗಳಲ್ಲಿ ಒಂದು ಹೋರಿಗೆ ಮತ್ತು ಒಂದು ಸಣ್ಣ ಹೆಣ್ಣು ಕರುವಿಗೆ ಗಾಯನೋವು ಪಡಿಸಿದ್ದದೇ, ಓಮಿನಿ ವಾಹನವನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಟಿ. ಟಿ. ನಿಖಿಲ್ ತಂದೆ ಟಿ. ಟಿ. ಪರಶು, ಪ್ರಾಯ-25 ವರ್ಷ, ವೃತ್ತಿ-ವ್ಯವಹಾರ, ಸಾ|| ಮುಳಗುಂದ ಕಾಲೋನಿ, ಬನವಾಸಿ ರೋಡ್, ತಾ: ಶಿರಸಿ ರವರು ದಿನಾಂಕ: 04-11-2021 ರಂದು 20-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 144/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಶಾಂತಪ್ಪ ಭೋವಿವಡ್ಡರ, ಪ್ರಾಯ-28 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಭದ್ರಾಪುರ, ತಾ: ಮುಂಡಗೋಡ. ಈತನು ದಿನಾಂಕ: 04-11-2021 ರಂದು ಮಧ್ಯಾಹ್ನ 13-00 ಗಂಟೆಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ತನ್ನ ತಾಬಾದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುಕೂಲ ಮಾಡಿಕೊಟ್ಟಿರುವಾಗ ಪಿರ್ಯಾದಿಯವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 530/- ರೂಪಾಯಿ ಬೆಲೆಬಾಳುವ BAGPIPER ಅಂತಾ ಬರೆದ 180ML ನ ಸರಾಯಿ ಇದ್ದ ಪೌಚ್ ಗಳು-05, BAGPIPER ಅಂತಾ ಬರೆದ 180ML ನ ಖಾಲಿ ಪೌಚ್ಗಳು-02, HAYWARDS ಅಂತಾ ಬರೆದ 90ML ನ ಸರಾಯಿ ಇದ್ದ ಪೌಚ್ ಗಳು-05 ಹಾಗೂ HAYWARDS ಅಂತಾ ಬರೆದ 90ML ನ ಖಾಲಿ ಪೌಚ್ ಗಳು-02, ನೀರಿನ ಬಾಟಲಿಗಳು-02, ಗ್ಲಾಸ್ ಗಳು-04. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಸಿಮಾನಿ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 04-11-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

     

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 145/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರಪ್ಪ ತಂದೆ ಪರಸಪ್ಪ ಮಟ್ಟೇರ, ಪ್ರಾಯ-66 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಹಳ್ಳದ ಮನೆ, ಕೊಡಂಬಿ, ತಾ: ಮುಂಡಗೋಡ. ಈತನು ದಿನಾಂಕ: 04-11-2021 ರಂದು ಸಾಯಂಕಾಲ 16-30 ಗಂಟೆಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ತನ್ನ ಗೂಡಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುಕೂಲ ಮಾಡಿಕೊಟ್ಟಿರುವಾಗ ಪಿರ್ಯಾದಿಯವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 105/- ರೂಪಾಯಿ ಬೆಲೆ ಬಾಳುವ HAYWARDS CHEERS WHISKY ಅಂತಾ ಬರೆದ 90ML ನ ಸರಾಯಿ ಇದ್ದ ಪೌಚ್ ಗಳು-03 ಹಾಗೂ HAYWARDS CHEERS WHISKY ಅಂತಾ ಬರೆದ 90ML ನ ಖಾಲಿ ಪೌಚ್ ಗಳು-02, ಹಾಗೂ ನೀರಿನ ಬಾಟಲಿ-01, ಪ್ಲಾಸ್ಟಿಕ್ ಗ್ಲಾಸುಗಳು-02. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಸಿಮಾನಿ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 04-11-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅನಿಲಕುಮಾರ ಬಸವರಾಜ ಬೋವಿ, 2]. ಮಾರುತಿ ಶೇಖಪ್ಪ ದಡ್ಡೇರ, 3]. ಮಂಜುನಾಥ ಬಸವಣ್ಣೆಪ್ಪ ಬೋವಿ, 4]. ಆನಂದ ಪ್ರಕಾಶ ಬೋವಿ, ಸಾ|| (ಎಲ್ಲರೂ) ಕುಪಗಡ್ಡೆ, ತಾ: ಶಿರಸಿ. ಈ ನಮೂದಿತ ಆರೋಪಿತರೆಲ್ಲರೂ ಕೂಡಿ ಪಿರ್ಯಾದಿಯು ಅವರ ಮೇಲೆ ಈ ಹಿಂದೆ ದೂರು ಕೊಟ್ಟ ಬಗ್ಗೆ ದ್ವೇಷದಿಂದ ಇದ್ದವರು, ದಿನಾಂಕ: 01-11-20211 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಗಂಡನವರು ಹಾನಗಲ್ ಗೆ ಹೋಗುವುದನ್ನು ನೋಡಿಕೊಂಡು ಅವರ ಮನೆಗೆ ಬಂದು ‘ನಿಮ್ಮ ಎತ್ತುಗಳು ಚೆನ್ನಾಗಿವೆ. ನಮಗೆ ಹಬ್ಬ ಮಾಡಲು ಕೊಡಿ’ ಅಂತ ಕೇಳಿದಾಗ ಪಿರ್ಯಾದಿಯು ‘ನಮ್ಮ ಯಜಮಾನರು ಮನೆಯಲ್ಲಿ ಇಲ್ಲ. ಅವರು ಬಂದ ಮೇಲೆ ಬನ್ನಿರಿ’ ಅಂತ ಹೇಳಿದ್ದಕ್ಕೆ ಆರೋಪಿತರೆಲ್ಲರೂ ಕೂಡಿ ಪಿರ್ಯಾದಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದು, ‘ನಿಮ್ಮದು ಊರಿನಲ್ಲಿ ಬಹಳ ಆಗಿದೆ. ನಿಮಗೆ ಜೀವ ಸಹಿತ ಬಿಡುವುದಿಲ್ಲ’ ಅಂತ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಜಯಮ್ಮ ಕೋಂ. ಪುಟ್ಟಪ್ಪ ಮಾದರ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಕುಪಗಡ್ಡೆ, ತಾ: ಶಿರಸಿ ರವರು ದಿನಾಂಕ: 04-11-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ಕರಿಂ ತಂದೆ ಮಹ್ಮದ್ ಕುಟ್ಟಿ, ಪ್ರಾಯ-36 ವರ್ಷ, ವೃತ್ತಿ-ಚಹಾ ಅಂಗಡಿ ವ್ಯಾಪಾರ, ಸಾ|| ಮಾರ್ಕೆಟ್ ಏರಿಯಾ, ರಾಮನಗರ, ತಾ: ಜೋಯಿಡಾ, 2]. ವಿಜಯ ತಂದೆ ದತ್ತಾರಾಮ ದೇಸಾಯಿ, ಪ್ರಾಯ-29 ವರ್ಷ, ವೃತ್ತಿ-ಪೇಪರ್ ಮಿಲ್ ಉದ್ಯೋಗಿ, ಸಾ|| ತಿನೈಘಾಟ್, ತಾ: ಜೋಯಿಡಾ, 3]. ರೋಹನ ತಂದೆ ಗೋವಿಂದ ಗೋಸೆಕರ, ಪ್ರಾಯ-26 ವರ್ಷ, ವೃತ್ತಿ-ಗೋವಾದ ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ತಿನೈಘಾಟ್, ತಾ: ಜೋಯಿಡಾ, 4]. ನಾನು ತಂದೆ ಬಾಳು ಗೌಳಿ, ಪ್ರಾಯ-45 ವರ್ಷ, ವೃತ್ತಿ-ಹೋಟೆಲ್ ವ್ಯಾಪಾರ, ಸಾ|| ಜಳಕಟ್ಟಿ, ಅನಮೋಡ, ತಾ: ಜೋಯಿಡಾ, 5]. ಅಪ್ಪು ತಂದೆ ಲಕ್ಷ್ಮಣ ಪವಾರ, ಪ್ರಾಯ-46 ವರ್ಷ, ವೃತ್ತಿ-ಹೋಟೆಲ್ ವ್ಯಾಪಾರ, ಸಾ|| ತಿನೈಘಾಟ್, ತಾ: ಜೋಯಿಡಾ, 6]. ಸಚಿನ ತಂದೆ ನಾರಾಯಣ ಮೋಹಿತೆ, ಪ್ರಾಯ-38 ವರ್ಷ, ವೃತ್ತಿ-ಇಲೆಕ್ಟ್ರೀಶಿಯನ್, ಸಾ|| ಇಂಡಸ್ಟ್ರೀಯಲ್ ಏರಿಯಾ, ರಾಮನಗರ, ತಾ: ಜೋಯಿಡಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 03-11-20211 ರಂದು 23-40 ಗಂಟೆಗೆ ತನ್ನ ಲಾಭಕ್ಕಾಗಿ ಬೆಳಗಾವಿ-ಪಣಜಿ ರಸ್ತೆಯ ಪಾಯಸವಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬದ ಕೆಳಗೆ ಅದರ ಲೈಟಿನ ಬೆಳಕಿನಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಯಾವುದೇ ಅಧೀಕೃತ ಪರವಾನಗಿ ಇಲ್ಲದೇ ಇಸ್ಪೀಟ್ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡಿಸುತ್ತಾ 1). ಇಸ್ಪೀಟ್ ಎಲೆಗಳು-52, 2). ಇಸ್ಪಿಟ್ ಎಲೆಗಳಿರುವ ಪ್ಯಾಕೆಟ್ ಗಳು-05, 3). ಮಂಡಕ್ಕೆ ಹಾಸಿದ ಪ್ಲಾಸ್ಟಿಕ್ ಚೀಲ-01 ಹಾಗೂ 4). ಮಂಡದ ಮೇಲೆ ಇದ್ದ ನಗದು ಹಣ ಹಾಗೂ ಆರೋಪಿತರ ಅಂಗ ಜಡ್ತಿಯಿಂದ ಜಪ್ತಾದ ಒಟ್ಟೂ ನಗದು ಹಣ ಸೇರಿ 34,720/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೋಲಿಸ್ ಠಾಣೆ ರವರು ದಿನಾಂಕ: 04-11-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-11-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 35/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗೋಪಾಲ ತಂದೆ ಪರಮೇಶ್ವರ ಪಟಗಾರ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಯ್ಕನಕೆರೆ, ಬಾಳಗಿಮನೆ, ತಾ: ಯಲ್ಲಾಪುರ. ಪಿರ್ಯಾದಿಯವರ ತಂದೆಯವರಾದ ಇವರು ಪಾರ್ಶ್ವವಾಯು ಹಾಗೂ ಕರಳುಬೇನೆ ಕಾಯಿಲೆಯಿಂದ ಬಳಲುತ್ತಿದ್ದವರು, ಔಷಧೋಪಚಾರ ಮಾಡಿಸಿದರೂ ಗುಣಮುಖವಾಗಿಲ್ಲ ಅಂತಾ ಬೇಸರಪಟ್ಟು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 30-10-2021 ರಂದು ಮಧ್ಯಾಹ್ನ 14-15 ಗಂಟೆಯ ಸುಮಾರಿಗೆ ತಮ್ಮ ಮನೆಯಲ್ಲಿ ಯಾವುದೋ ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಪಟ್ಟವರಿಗೆ ಅದೇ ದಿನ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಮಾಡಿಸಿ, ಹೆಚ್ಚಿನ ಚಿಕಿತ್ಸೆಯ ಕುರಿತು ಕಿಮ್ಸ್ ಹುಬ್ಬಳ್ಳಿ ಆಸ್ಪತ್ರೆಗೆ ಒಯ್ದು ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಿಸದೇ ದಿನಾಂಕ: 04-11-2021 ರಂದು ಮಧ್ಯಾಹ್ನ 13-45 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂಜೀವ ತಂದೆ ಗೋಪಾಲ ಪಟಗಾರ, ಪ್ರಾಯ-39 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ನಾಯ್ಕನಕೆರೆ, ಬಾಳಗಿಮನೆ, ತಾ: ಯಲ್ಲಾಪುರ ರವರು ದಿನಾಂಕ: 04-11-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಗಂಗೂಬಾಯಿ ಕೋಂ. ಜೀವಪ್ಪ ಲೋಂಡಿ, ಪ್ರಾಯ-61 ವರ್ಷ, ಸಾ|| ಬಿ.ಕೆ ಹಳ್ಳಿ, ತಾ: ಹಳಿಯಾಳ. ಪಿರ್ಯಾದಿಯವರ ತಾಯಿಯಾದ ಇವರು ಕಳೆದ 10 ವರ್ಷಗಳ ಹಿಂದೆ ತಲೆನೋವಿನಿಂದ ಬಳಲುತ್ತಿದ್ದವರು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜೀಗುಪ್ಸೆ ಹೊಂದಿದವರು, ದಿನಾಂಕ: 04-11-2021 ರಂದು 12-45 ಗಂಟೆಗೆ ಹಳಿಯಳ ತಾಲೂಕಿನ ಬಿ.ಕೆ ಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಬಳಕೆಗೆ ತಂದಿಟ್ಟ ಸೀಮೆ ಎಣ್ಣೆಯನ್ನು ಮೈ ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಕುಲ ತಂದೆ ಜೀವಪ್ಪ ಲೋಂಡಿ, ಪ್ರಾಯ-36 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಬಿ.ಕೆ ಹಳ್ಳಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 04-11-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 37/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸತೀಶ ತಂದೆ ಮಂಜಪ್ಪ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಾರುತಿನಗರ, ಕೊಲಶಿರ್ಸಿ, ತಾ: ಸಿದ್ದಾಪುರ. ಪಿರ್ಯಾದಿಯವರ ಅಣ್ಣನಾದ ಈತನು ಸಿದ್ದಾಪುರ ತಾಲೂಕಿನ ಕೋಲಶಿರ್ಸಿಯ ಮಾರುತಿನಗರದಲ್ಲಿರುವ ತಮ್ಮ ಮೂಲ ಮನೆಯಲ್ಲಿ ವಾಸ ಇದ್ದು, ಅವನು ಸಿದ್ದಾಪುರ ತಾಲೂಕಿನ ಬಿದ್ರಕಾನ ಹತ್ತಿರದ ನೆರ್ಲಮನೆಯಲ್ಲಿ ಕೃಷಿ ಜಮೀನು ಹೊಂದಿರುತ್ತಾನೆ. ಪಿರ್ಯಾದಿಯ ಅಣ್ಣನು ದಿನಾಲೂ ನೆರ್ಲಮನೆಯಲ್ಲಿರುವ ಜಮೀನಿಗೆ ಹೋಗಿ ಕೆಲಸ ಮಾಡಿ ಬರುತ್ತಿದ್ದನು. ದಿನಾಂಕ: 03-11-2021 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಅಣ್ಣ ಸತೀಶನು ನೆರ್ಲಮನೆಯ ತೋಟದ ಕಾಲುವೆಯಲ್ಲಿ ಬಿದ್ದು ಅಸ್ವಸ್ಥನಾದವನಿಗೆ ಕರೆ ತಂದು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದರೂ ಸಹ ಚಿಕಿತ್ಸೆ ಫಲಕಾರಿ ಆಗದೇ ದಿನಾಂಕ: 04-11-2021 ರಂದು 01-06 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪಿರ್ಯಾದಿಯ ಅಣ್ಣನು ತೋಟದ ಕಾಲುವೆಯಲ್ಲಿ ಬಿದ್ದದ್ದರಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವ ಬಗ್ಗೆ ಕಂಡು ಬರುತ್ತಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶಿವಕುಮಾರ ತಂದೆ ಮಂಜಪ್ಪ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಕುಣಜಿ, ತಾ: ಸಿದ್ದಾಪುರ ರವರು ದಿನಾಂಕ: 04-11-2021 ರಂದು 07-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 05-11-2021 07:05 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080