ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-10-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 257/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೋಹನ ತಂದೆ ಭೀಮಾ ರೆಡ್ಡಿ, ಪ್ರಾಯ-29 ವರ್ಷ, ವೃತ್ತಿ-ಇಂಜಿನೀಯರ್, ಸಾ|| 615/8, ಮೌನೇಶ್ವರ ಬಡಾವಣೆ, ಬನಶಂಕರಿ ದೇವಸ್ಥಾನ ರಸ್ತೆ, ನಿಟ್ಟವಳ್ಳಿ, ದಾವಣಗೆರೆ (ಕಾರ್ ನಂ: ಕೆ.ಎ-17/ಝಡ್-4246 ನೇದರ ಚಾಲಕ). ಈತನು ದಿನಾಂಕ: 03-10-2021 ರಂದು 23-00 ಗಂಟೆಗೆ ತನ್ನ ಕಾರ್ ನಂ: ಕೆ.ಎ-17/ಝಡ್-4246 ನೇದನ್ನು ಹೊನ್ನಾವರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಗೇರುಸೊಪ್ಪದ ಸೂಳೆಮುರ್ಕಿ ತಿರುವಿನ ಹತ್ತಿರ ತನ್ನ ಕಾರ್ ಮೇಲಿನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ತಗ್ಗಿನಲ್ಲಿ ಕಾರನ್ನು ಪಲ್ಟಿಗೊಳಿಸಿ, ಕಾರಿನಲ್ಲಿದ್ದ ಮಂಜುನಾಥ ಎಮ್. ರವರಿಗೆ ಎಡಗಾಲಿಗೆ ಮತ್ತು ಎಡಗೈಗೆ, ಪೃಥ್ವಿ ರವರಿಗೆ ಮುಖಕ್ಕೆ ಗಾಯನೋವು ಪಡಿಸಿದ್ದು ಹಾಗೆಯೇ ಕುಮಾರಿ: ರಚಿತಾ ರೆಡ್ಡಿ ರವರಿಗೆ ಮುಖಕ್ಕೆ ಹಾಗೂ ಪೂಜಾ ರವರಿಗೆ ಸಹ ಬಲಗೈಗೆ ಹಾಗೂ ಮೂಗಿನ ಬಳಿ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಶಿವಾನಂದ ಹೊನ್ನಾವರ, ಪ್ರಾಯ-48 ವರ್ಷ, ವೃತ್ತಿ-ಫೋಟೋಗ್ರಾಪರ್, ಸಾ|| ಪಾಳ್ಯ ರೋಡ್, ತಾ: ಹೊನ್ನಾವರ ರವರು ದಿನಾಂಕ: 04-10-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 119/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರಶೇಖರ ತಂದೆ ನಾರಾಯಣ ಆಚಾರಿ, ಪ್ರಾಯ-29 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಗುಳ್ಮೆ, ತಾ: ಭಟ್ಕಳ. ಈತನು ದಿನಾಂಕ: 04-10-2021 ರಂದು ಬೆಳಿಗ್ಗೆ 10-30 ಗಂಟೆಯ ಸಮಯಕ್ಕೆ ಭಟ್ಕಳದ ಮುಂಡಳ್ಳಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 80/- ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ, ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 590/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 04-10-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 120/2021, ಕಲಂ: 379, 511 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ಹಸನ್ ತಂದೆ ನಜೀರ್ ಪಟೇಲ್, ಸಾ|| ವೆಂಕ್ಟಾಪುರ, ತಾ: ಭಟ್ಕಳ. ಈತನು ದಿನಾಂಕ 04-10-2021 ರಂದು 16-30 ಗಂಟೆಗೆ ಶಿರಾಲಿ-2 ಕೆಂಬ್ರೆ ಗುಡ್ಡದ ಹತ್ತಿರ ಗುಡ್ಡದ ಮೇಲೆ ಮೇಯಲು ಬಿಟ್ಟ ಪಿರ್ಯಾದಿಯು ಆಕಳನ್ನು ಕಳ್ಳತನ ಮಾಡಿ ಕಾರ್ ನಂ: ಕೆ.ಎ-19/ಎ.ಬಿ-5667 ನೇದರಲ್ಲಿ ಹಾಕಲು ಪ್ರಯತ್ನಿಸುತ್ತಿದ್ದಾಗ ಪಿರ್ಯಾದಿ ಹಾಗೂ ಪಿರ್ಯಾದಿಯ ಪರಿಚಯದವರು ಅದನ್ನು ನೋಡಿ ಆರೋಪಿತನಿಗೆ ಹಿಡಿದುಕೊಂಡು ವಿಚಾರಿಸುತ್ತಿದ್ದಾಗ ಆರೋಪಿತನು ಹಿಡಿದುಕೊಂಡವರಿಗೆ ದೂಡಿ ಹಾಕಿ ಸ್ಥಳದಿಂದ ಓಡಿ ಹೋಗುತ್ತಿದ್ದಾಗ ಆಯ ತಪ್ಪಿ ಬಿದ್ದು ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಈರಯ್ಯ ಗೊಂಡ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಶಿರಾಲಿ-2, ಕೆಂಬ್ರೆ, ತಾ: ಭಟ್ಕಳ ರವರು ದಿನಾಂಕ: 04-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 164/2021, ಕಲಂ: 392 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಇಬ್ಬರೂ ಅಪರಿಚಿತ ವ್ಯಕ್ತಿಗಳಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 03-10-2021 ರಂದು 20-15 ಗಂಟೆಯ ಸುಮಾರಿಗೆ ಪಿರ್ಯಾದಿಯು ಶಾರದಾಂಬಾ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ ಮೇಲೆ ಬಂದ ಆರೋಪಿತ ಇಬ್ಬರೂ ವ್ಯಕ್ತಿಗಳು ಪಿರ್ಯಾದಿಗೆ ಅಡ್ಡಗಟ್ಟಿ ಅವರಲ್ಲಿ ತಲೆಗೆ ಕ್ಯಾಪ್ ಮತ್ತು ಮುಖಕ್ಕೆ ಮಾಸ್ಕ್ ಹಾಕಿದ ಒಬ್ಬ ವ್ಯಕ್ತಿಯು ಮೋಟಾರ್ ಸೈಕಲಿನಿಂದ ಇಳಿದು ಬಂದು ಪಿರ್ಯಾದಿಗೆ ಚಾಕು ತೋರಿಸಿ, ಹಿಂದಿಯಲ್ಲಿ ‘ಪೈಸಾ ದೇಬೇ, ನಹಿ ತೋ ಚಾಕು ಡಾಲ್ತಾ’ ಅಂತಾ ಹೇಳಿದ್ದು, ಆಗ ಪಿರ್ಯಾದಿಯು ‘ನೀವು ಯಾರು’ ಅಂತಾ ಕೇಳುವಷ್ಟರಲ್ಲಿ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ ಆರೋಪಿತ ಇನ್ನೊಬ್ಬ ವ್ಯಕ್ತಿಯು ‘ಅವನ ಕಿಸೆಯಿಂದ ಹಣವನ್ನು ಕಿತ್ತುಕೊ’ ಅಂತಾ ಹೇಳಿದ್ದು, ಆ ವ್ಯಕ್ತಿಯು ಪಿರ್ಯಾದಿಯ ಶರ್ಟ್ ಕಿಸೆಗೆ ಕೈ ಹಾಕಿ ಕಿಸೆಯಲ್ಲಿದ್ದ ಸುಮಾರು 3,500/- ರೂಪಾಯಿ ಹಣವನ್ನು ಬಲವಂತವಾಗಿ ಕಿತ್ತುಕೊಂಡು ಪಿರ್ಯಾದಿಯ ಎದೆಯ ಭಾಗಕ್ಕೆ ಕೈಯಿಂದ ಗುದ್ದಿ, ದೂಡಿ ಕೆಳಗೆ ಕೆಡವಿ ದುಃಖಾಪತ್ ಪಡಿಸಿ, ಆ ಇಬ್ಬರೂ ಆರೋಪಿತ ವ್ಯಕ್ತಿಗಳು ತಂದಿದ್ದ ನಂಬರ್ ನಮೂದಿರದ ನೀಲಿ ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಮೇಲೆ ವೇಗವಾಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹುಬ್ಬಳ್ಳಿ ಕಡೆಗೆ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಮನ್ ತಂದೆ ಮೊಹಮ್ಮದ್ ಶಫಿ ಕಣವಿ, ಪ್ರಾಯ-18 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ಕಾಳಮ್ಮ ನಗರ, ತಾ: ಯಲ್ಲಾಪುರ ರವರು ದಿನಾಂಕ: 04-10-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 100/2021, ಕಲಂ: 143, 147, 148, 323, 324, 354, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ಮತೀನ್ ಮಹಮ್ಮದ್ ಸಾಬ್, ಪ್ರಾಯ-41 ವರ್ಷ, ಸಾ|| ಕಸ್ತೂರಬಾ ನಗರ, ತಾ: ಶಿರಸಿ, 2]. ಅಬ್ದುಲ್ ಸೈಯ್ಯದ್ ಮಹಮ್ಮದ್ ಸಾಬ್, ಪ್ರಾಯ-39 ವರ್ಷ, ಸಾ|| ಸೊಣಗಿನಮನೆ, ಜಡ್ಡಿಗದ್ದೆ, ತಾ: ಶಿರಸಿ, 3]. ಇಬ್ರಾಹಿಂ ಇಲಿಯಾಸ್ ಹೆಬ್ಬಳ್ಳಿ, ಪ್ರಾಯ-25 ವರ್ಷ, ಸಾ|| ಹುಲೇಕಲ್, ತಾ: ಶಿರಸಿ, 4]. ಅಬ್ದುಲ್ ಮಜೀದ್ ಇಲಿಯಾಸ್ ಹೆಬ್ಬಳ್ಳಿ, ಪ್ರಾಯ-22 ವರ್ಷ, ಸಾ|| ಹುಲೇಕಲ್, ತಾ: ಶಿರಸಿ, 5]. ಶ್ರೀಮತಿ ಅನೀಸಾ ಕೋಂ. ಅಬ್ದುಲ್ ಮತೀನ್, ಪ್ರಾಯ-35 ವರ್ಷ, ಸಾ|| ಕಸ್ತೂರಬಾ ನಗರ, ತಾ: ಶಿರಸಿ, 6]. ಶ್ರೀಮತಿ ಸಾಜೀದಾಬಾನು ಕೋಂ. ಮಹಮ್ಮದ್ ಇಲಿಯಾಸ್, ಪ್ರಾಯ-49 ವರ್ಷ, ಸಾ|| ಹುಲೇಕಲ್, ತಾ: ಶಿರಸಿ, 6]. ಶ್ರೀಮತಿ ಶಮ್ಸುನ್ನಿಸಾ ಕೋಂ. ಮಹಮ್ಮದಸಾಬ್, ಪ್ರಾಯ-65 ವರ್ಷ, ಸಾ|| ಸೊಣಗಿನಮನೆ, ಜಡ್ಡಿಗದ್ದೆ, ತಾ: ಶಿರಸಿ, 7]. ಬಿಬಿಖತೇಜಾ ಕೋಂ. ಅಬ್ದುಲ್ ಸೈಯ್ಯದ್, ಪ್ರಾಯ-32 ವರ್ಷ, ಸಾ|| ಜಡ್ಡಿಗದ್ದೆ, ತಾ: ಶಿರಸಿ. ಈ ನಮೂದಿತ ಆರೋಪಿತರೆಲ್ಲ ಏಕೋದ್ದೇಶದಿಂದ ಅಕ್ರಮ ಕೂಟ ಮಾಡಿಕೊಂಡು ದಿನಾಂಕ: 03-10-2021 ರಂದು ಎರಡನೇ ಮದುವೆಯಾಗಿ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಪಿರ್ಯಾದಿ ಈ ಹಿಂದೆ ಇದ್ದ ಮನೆಯಲ್ಲಿಯೇ ರಾತ್ರಿ ಧಾರ್ಮಿಕ ಸಂಪ್ರದಾಯಗಳನ್ನು ಪೂರೈಸಿಕೊಂಡಿದ್ದಾಗ 22-00 ಗಂಟೆಯ ಸುಮಾರಿಗೆ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/7742 ನೇದರಲ್ಲಿ ಅಲ್ಲಿಗೆ ಹೋಗಿ, ನಮೂದಿತ ಆರೋಪಿತರ ಪೈಕಿ ಆರೋಪಿ 1 ಮತ್ತು 2 ನೇಯವರು ಪಿರ್ಯಾದಿಗೆ ಉದ್ದೇಶಿಸಿ ‘ರಾಂಡಕಾ ಬೇಟಾ, ನಿನಗೆ ಈ ಮನೆ ಕಟ್ಟಿಸಿಕೊಟ್ಟಿಲ್ಲ. ನನ್ನ ಅಕ್ಕನಿಗಾಗಿ ಮನೆ ಕಟ್ಟಿಸಿದ್ದು. ಅವಳಿಗೆ ಬಿಟ್ಟರೆ ಈ ಮನೆಯಲ್ಲಿ ನೀನು ಯಾರಿಗೂ ಮದುವೆಯಾಗಿ ಬಂದರೂ ಅವರೊಂದಿಗೆ ಉಳಿಯಲು ಬಿಡುವುದಿಲ್ಲ’ ಎಂದು ಅವಾಚ್ಯವಾಗಿ ಬೈಯ್ದು ಎಲ್ಲರೂ ಸೇರಿಕೊಂಡು ಪಿರ್ಯಾದಿ ಮತ್ತು ಅವರ ಮಕ್ಕಳಾದ ಸಿಕಂದರ್, ಸಮೀನಾಬಾನು, ಏಳು ತಿಂಗಳ ಗರ್ಭಿಣಿಯಾಗಿದ್ದ ನಗೀನಾಬಾನು ಹಾಗೂ ಅವಳ ಗಂಡ ಮಹಮ್ಮದ್ ಸಾದಿಕ್ ಇವರೆಲ್ಲರಿಗೂ ಕೈಯಿಂದ, ಕಿಡಕಿ ಪರದೆಗೆ ಹಾಕುವ ಪೈಪಿನಿಂದ ಹೊಡೆಬಡೆ ಮಾಡಿ, ಇಬ್ಬರೂ ಹೆಣ್ಣು ಮಕ್ಕಳಿಗೂ ಮಾನಕ್ಕೆ ಕುಂದುಂಟು ಪಡಿಸಿದ್ದಲ್ಲದೇ, ಎಲ್ಲರಿಗೂ ಉದ್ದೇಶಿಸಿ ‘ಈಗ ಮದುವೆಯಾದ ಹೆಂಡತಿಯೊಂದಿಗೆ ಈ ಮನೆಯಲ್ಲಿ ಬಾಳುವೆ ಮಾಡಿಸಬೇಕಾದರೇ ಈ ಮನೆಯಲ್ಲಿ ಇರಕೂಡದು. ಒಂದು ವೇಳೆ ಇಲ್ಲಿಯೇ ಇದ್ದು ಬಾಳುವೆ ಮಾಡುವುದಾದರೆ ಒಂದಲ್ಲ ಒಂದು ದಿನ ನಿಮಗೆಲ್ಲರಿಗೂ ಕೊಂದೆ ಹಾಕುತ್ತೇವೆ’ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ಇಸಾಕ್ ತಂದೆ ಆದಂ ಖಾನ್ ಪ್ರಾಯ-45 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಹುಲೇಕಲ್, ಪೋ: ಹುಲೇಕಲ್, ತಾ: ಶಿರಸಿ ರವರು ದಿನಾಂಕ: 04-10-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 122/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ಉಲ್ಲಾಸ ಬೆಂಡೆ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆನಂದ ನಗರ, ತಾ: ಮುಂಡಗೋಡ. ಈತನು ದಿನಾಂಕ: 04-10-2021 ರಂದು 17-15 ಗಂಟೆಗೆ ಮುಂಡಗೋಡ ಪಟ್ಟಣದ ಆನಂದ ನಗರದ ಈಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗಾರಾಟ ನಡೆಸಿ, ನಗದು ಹಣ 1,800/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ನೇದವುಗಳೊಂದಿಗೆ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಸಿಕ್ಕಿದ್ದಲ್ಲದೇ ಓ,ಸಿ ಜೂಗಾರಾಟದಿಂದ ಸಂಗ್ರಹವಾದ ಹಣವನ್ನು ತಾನೇ ಇಟ್ಟುಕೊಳ್ಳುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಸಿಮಾನಿ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 04-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-10-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಶಾರದಾ ರಮಾಕಾಂತ ದೇವದಾಸ, ಪ್ರಾಯ-67 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಭಗತವಾಡಾ, ಅಸ್ನೋಟಿ, ಕಾರವಾರ. ಪಿರ್ಯಾದಿಯ ತಾಯಿಯಾದ ಇವರು ವಯೋವೃದ್ದ ಖಾಯಿಲೆ ಹಾಗೂ ಮಾನಸಿಕವಾಗಿ ಬಳಲುತ್ತಿದ್ದವಳು, ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ದಿನಾಂಕ: 03-10-2021 ರಂದು 22-30 ಗಂಟೆಯಿಂದ ದಿನಾಂಕ: 04-10-2021 ರಂದು 10-00 ಗಂಟೆಯ ನಡುವಿನ ಅವಧಿಯಲ್ಲಿ ದಾಮೋದರ ಭಟ್ಟ ರವರಿಗೆ ಸೇರಿದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಘ್ನೇಶ ತಂದೆ ರಮಾಕಾಂತ ದೇವದಾಸ, ಪ್ರಾಯ-25 ವರ್ಷ, ವೃತ್ತಿ-ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕಾರವಾರ ದಲ್ಲಿ ಅಟೆಂಡರ್ ಕೆಲಸ, ಸಾ|| ಭಗತವಾಡ, ಅಸ್ನೋಟಿ, ಕಾರವಾರ ರವರು ದಿನಾಂಕ: 04-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪೀಟರ್ ತಂದೆ ಗೊಸ್ಲೋ ಫರ್ನಾಂಡೀಸ್, ಪ್ರಾಯ-62 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹಾರುಮಾಸ್ಕೇರಿ, ಗೋಕರ್ಣ, ತಾ: ಕುಮಟಾ. ಈತನು ದಿನಾಂಕ: 02-10-2021 ರಂದು ಬೆಳಿಗ್ಗೆ 07-00 ಗಂಟೆಯಿಂದ ದಿನಾಂಕ: 04-10-20210 ರಂದು ಸಾಯಂಕಾಲ 06-00 ಗಂಟೆಯ ನಡುವಿನ ಅವಧಿಯಲ್ಲಿ ಹಾರುಮಾಸ್ಕೇರಿಯಲ್ಲಿ ತಾನು ವಾಸವಾಗಿರುವ ಮನೆಯ ಪಕ್ಕದ ಸಂಜ್ಯಾಂವ್ ಫರ್ನಾಂಡೀಸ್ ಇವರ ಬಾಗಾಯತದಲ್ಲಿರುವ ನೆಲಬಾವಿಯಲ್ಲಿ ಆಯ ತಪ್ಪಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿರುತ್ತಾನೆ. ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಾರ್ತಿನ್ ಬಸ್ತ್ಯಾಂವ್ ಫರ್ನಾಂಡೀಸ್, ಪ್ರಾಯ-76 ವರ್ಷ, ವೃತ್ತಿ-ಮನೆ ಕೆಲಸ, ಸಾ: ಹನೇಹಳ್ಳಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 04-10-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಲಕ್ಷ್ಮಣ ತಂದೆ ಬಸಪ್ಪ ಅಗಡಿ, ಪ್ರಾಯ-45 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮರಾಠಿಕೊಪ್ಪ, ತಾ: ಶಿರಸಿ. ಪಿರ್ಯಾದಿಯ ತಂದೆಯಾದ ಇವರು ವಿಪರೀತ ಸರಾಯಿ ಕುಡಿಯುವ ಚಟದವರಿದ್ದು, ದಿನಾಂಕ: 23-09-2021 ರಂದು ರಾತ್ರಿ 22-30 ಗಂಟೆಯ ಸುಮಾರಿಗೆ ವಿಪರೀತ ಸರಾಯಿ ಕುಡಿದು ಬಂದು ತನ್ನ ವಾಸದ ಮನೆಯ ಅಂಗಳದಲ್ಲಿ ಸರಾಯಿ ಕುಡಿದ ನಶೆಯಲ್ಲಿ ಕಾಲು ಜಾರಿ ಬಿದ್ದು, ತಲೆಗೆ ಪೆಟ್ಟು ಮಾಡಿಕೊಂಡವನಿಗೆ ದಿನಾಂಕ: 24-09-2021 ರಂದು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತಲೆಗೆ ಆದ ಗಾಯನೋವಿಗೆ ಶಸ್ತ್ರಚಿಕಿತ್ಸೆ ನಡೆಸಿ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 04-10-2021 ರಂದು 11-10 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಮೃತ ತಮ್ಮ ತಂದೆಯವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂದೀಪ ತಂದೆ ಲಕ್ಷ್ಮಣ ಅಗಡಿ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮರಾಠಿಕೊಪ್ಪ, ತಾ: ಶಿರಸಿ ರವರು ದಿನಾಂಕ: 04-10-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 05-10-2021 06:26 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080