ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-09-2021

at 00:00 hrs to 24:00 hrs

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಆಶೀಮಾ ಬಾನು ತಂದೆ ಉಸ್ಮಾನ್ ಸನದಿ, ಪ್ರಾಯ-21 ವರ್ಷ, ಸಾ|| ತಗ್ಗರಗೋಡ, ಬದ್ರಿಯಾ ಕಾಲೋನಿ, ಮಟ್ಟಾ ಗಾರ್ಡನ್, ತಾ: ಭಟ್ಕಳ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 02-09-2021 ರಂದು ರಾತ್ರಿ 01-00 ಗಂಟೆಯ ಸುಮಾರಿಗೆ ತನ್ನ ಮನೆಯಾದ ಭಟ್ಕಳ ಶಹರದ ತಗ್ಗರಗೋಡ, ಬದ್ರಿಯಾ ಕಾಲೋನಿಯ ಮಟ್ಟಾ ಗಾರ್ಡನ್ ದಲ್ಲಿರುವ ತಮ್ಮ ಮನೆಯಿಂದ ಹೇಳದೇ ಕೇಳದೇ ಎಲ್ಲಿಗೋ ಹೋಗಿದ್ದು, ಈವರೆಗೂ ಮನೆಗೆ ವಾಪಸ್ ಬಾರದೇ, ಸಂಬಂಧಿಕರ ಮನೆಗೂ ಕೂಡ ಹೋಗದೆ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜಾಹೀದಾ ಗಂಡ ಉಸ್ಮಾನ್ ಸನದಿ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಗ್ಗರಗೋಡ, ಬದ್ರಿಯಾ ಕಾಲೋನಿ, ಮಟ್ಟಾ ಗಾರ್ಡನ್, ತಾ: ಭಟ್ಕಳ ರವರು ದಿನಾಂಕ: 04-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ಗಣೇಶ ವೇಳಿಪ, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಪಕರ್ಣಿ, ಕುಂಬಾರವಾಡ, ತಾ: ಜೋಯಿಡಾ. ಈತನು ದಿನಾಂಕ: 04-09-2021 ರಂದು 12-55 ಗಂಟೆಯ ಸುಮಾರಿಗೆ ತನ್ನ ಲಾಭಕ್ಕೋಸ್ಕರ ಜೋಯಿಡಾ ತಾಲೂಕಿನ ಕುಂಬಾರವಾಡ ಗ್ರಾಮದ ಶಿವಾಜಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಿಕೊಂಡು ಓ.ಸಿ ಚೀಟಿ ಬರೆಯುತ್ತಿದ್ದಾಗ ನಗದು ಹಣ 1,140/- ರೂಪಾಯಿ, ಬಾಲ್ ಪೆನ್-01 ಹಾಗೂ ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿ-01. ಇವುಗಳ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಂಜುಳಾ ಎಸ್. ರಾವೋಜಿ, ಪಿ.ಎಸ್.ಐ (ಕಾ&ಸು, ಸಂಚಾರ), ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 04-09-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 406, 420, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಫಯಾಜ್ ತಂದೆ ಮದರಸಾಬ್ ಚೌಟಿ, ಸಾ|| ಆರ್.ಟಿ.ಓ ಆಫೀಸ್ ಹಿಂದುಗಡೆ, ಕಸ್ತೂರಬಾ ನಗರ, ತಾ: ಶಿರಸಿ. ಈತನು ಶಿರಸಿಯ ಆರ್.ಟಿ.ಓ ಕಛೇರಿ ಹಿಂಬಾಗದಲ್ಲಿ ವಾಸ್ತವ್ಯವಿರುವ ತನ್ನ ಮನೆಗೆ ಪೇಂಟಿಂಗ್ ಮಾಡಿಸುವ ಕುರಿತು ದಿನಾಂಕ: 05-04-2019 ರಂದು ಪಿರ್ಯಾದಿಗೆ ತನ್ನ ಮನೆಗೆ ಕರೆಯಿಸಿ ಮಾತುಕತೆ ಮಾಡಿ 2,20,000/- ರೂಪಾಯಿಗೆ ಒಟ್ಟು ಮನೆಗೆ ನಿಪ್ಪೋಲ್ ಕಂಪನಿಯ ಪೇಂಟಿಂಗ್ ಮಾಡಿಕೊಡುವಂತೆ ಮಾತುಕತೆ ಮಾಡಿಕೊಂಡು 90,000/- ರೂಪಾಯಿಯನ್ನು ಅಡ್ವಾನ್ಸ್ ನೀಡಿ, ಉಳಿದ ಹಣವನ್ನು ನಂತರ ಕೊಡುವುದಾಗಿ ಹೇಳಿದ್ದು, ಅದರಂತೆ ಪಿರ್ಯಾದಿಯು ಶಿರಸಿಯ ಗದ್ದೆಮಾಮ ಅಂಗಡಿಯಲ್ಲಿ ನಿಪ್ಪೋನ್ ಕಂಪನಿಯ 1,50,000/- ರೂಪಾಯಿಯ ಪೇಂಟ್ ಅನ್ನು ಖರೀದಿಸಿ, ಆರೋಪಿತನ ಮನೆಗೆ ಪೇಂಟಿಂಗ್ ಮಾಡಿಸಿ ಕೊಟ್ಟಿದ್ದು ಇರುತ್ತದೆ. ನಂತರ ಆರೋಪಿತನಿಗೆ ಮಾತುಕತೆಯಂತೆ ಉಳಿದ 1,30,000/- ಹಣವನ್ನು ಕೊಡಲು ಹೇಳಿದಾಗ ಆರೋಪಿತನು ಹಣವನ್ನು ಕೊಡದೇ ಸತಾಯಿಸುತ್ತಾ ಬಂದಿದ್ದು, ದಿನಾಂಕ: 23-02-2021 ರಂದು ಆರೋಪಿತನ ಮಗನಾದ ರೋಶನ್ ಫಯಾಜ್ ಚೌಟಿ ಈತನು ಪಿರ್ಯಾದಿಯ ಮೊಬೈಲಿಗೆ ಶಿರಸಿಯ ಸಂಭ್ರಮ ನಡೆದ ಗ್ರೌಂಡ್ ಗೆ ಬರುವಂತೆ ವಾಟ್ಸಪ್ ಸಂದೇಶ ಕಳುಹಿಸಿದಂತೆ ಪಿರ್ಯಾದಿಯವರು ದಿನಾಂಕ: 24-02-2021 ರಂದು ಸಂಜೆ 18-00 ಗಂಟೆಯ ಸುಮಾರಿಗೆ ಅಲ್ಲಿಗೆ ಹೋಗಿ ತನಗೆ ನೀಡಬೇಕಾದ ಹಣವನ್ನು ಕೊಡುವಂತೆ ಆರೋಪಿತನಲ್ಲಿ ಕೇಳಿದಾಗ ಆರೋಪಿತನು ಪಿರ್ಯಾದಿಗೆ ‘ತನ್ನ ಬಳಿ ಹಣ ಕೆಳುತ್ತಿಯಾ, ಸೂಳೆ ಮಗನೆ?’ ಅಂತಾ ಅವಾಚ್ಯವಾಗಿ ಬೈಯ್ದು, ಪಿರ್ಯಾದಿಯ ಕುತ್ತಿಗೆ ಹಿಡಿದು ದೂಡಿ, ‘ಈ ವಿಷಯವನ್ನು ಹಾಗೂ ತಾನು ನೀಡಬೇಕಾದ ಹಣದ ಬಗ್ಗೆ ಬೇರೆ ಯಾರಿಗಾದರು ಹೇಳಿದರೆ ನಿನಗೆ ಮತ್ತು ನಿನ್ನ ಮನೆಯ ಜನರನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ಕುಮಾರ ತಂದೆ ದುರ್ಗಾ ಗೊಲಗೇರಿ, ಪ್ರಾಯ-32 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಪವನ ಪ್ರಿಂಟ್ ಹತ್ತಿರ, ಬನವಾಸಿ ರಸ್ತೆ, ತಾ: ಶಿರಸಿ ರವರು ದಿನಾಂಕ: 04-09-2021 ರಂದು 14-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-09-2021 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ: 04-09-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಸ್ಟೂಡಿಯೋದಲ್ಲಿಯ ಮೇಲಿನ ಹಂಚನ್ನು ತೆಗೆದು ಸ್ಟೂಡಿಯೋದ ಒಳಗೆ ಇಳಿದು ಅ||ಕಿ|| 95,000/- ರೂಪಾಯಿ ಬೆಲೆಯ ಎರಡು ಕ್ಯಾಮೆರಾಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ಸಿದ್ದಪ್ಪ ಕಲಾಲ, ಪ್ರಾಯ-32 ವರ್ಷ, ವೃತ್ತಿ-ಪೋಟೋ ಸ್ಟೂಡಿಯೋ, ಸಾ|| ಬನ್ನಿಕಟ್ಟಾ, ತಾ: ಮುಂಡಗೋಡ ರವರು ದಿನಾಂಕ: 04-09-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 04-09-2021 ರಂದು ಬೆಳಗಿನ ಜಾವ 04-40 ಗಂಟೆಗೆ ಪಿರ್ಯಾದಿಯವರ ಮುಂಡಗೋಡ-ಯಲ್ಲಾಪುರ ರಸ್ತೆಯಲ್ಲಿರುವ ಶ್ರೀ ಮೊಬೈಲ್ ಶಾಪಿನ ಮೇಲಿನ ತಗಡನ್ನು ಕಿತ್ತು ತೆಗೆದು ತಗಡಿನ ಕೆಳಗೆ ಇರುವ ಸೀಲಿಂಗ್ ಅನ್ನು ಮುರಿದು ಅಂಗಡಿಯ ಒಳಗೆ ಇಳಿದು ಅ||ಕಿ|| 1,31,500/- ರೂಪಾಯಿ ಬೆಲೆಯ ಮೊಬೈಲಗಳನ್ನು ಹಾಗೂ ಮೊಬೈಲ್ ಎಕ್ಸೆಸರಿಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ಬಸವಣ್ಣೆಪ್ಪ ಉಪ್ಪಾರ, ಪ್ರಾಯ-30 ವರ್ಷ, ವೃತ್ತಿ-ಮೊಬೈಲ್ ಅಂಗಡಿ, ಸಾ|| ಕಿಲ್ಲೆ ಓಣಿ, ತಾ: ಮುಂಡಗೋಡ ರವರು ದಿನಾಂಕ: 04-09-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 142/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕುಮಾರ ತಂದೆ ನಾಗಪ್ಪ ವಡ್ಡರ, ಪ್ರಾಯ-26 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುಳೆದಕೊಪ್ಪ, ತಾ: ಹಳಿಯಾಳ, 2]. ಪ್ರಕಾಶ ತಂದೆ ತಿಪ್ಪಣ್ಣ ಕಿರೇಸೂರ, ಪ್ರಾಯ-31 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಶಿವಪುರ, ತಾ: ಹಳಿಯಾಳ, 3]. ರಾಜು ತಂದೆ ವಿರೂಪಾಕ್ಷಪ್ಪ ದೂಪದ, ಪ್ರಾಯ-28 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶಿವಪುರ, ತಾ: ಹಳಿಯಾಳ, 4]. ಬಸಯ್ಯ ತಂದೆ ತಿಪ್ಪಯ್ಯ ಕುಂಬರಿಕೊಪ್ಪ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿವಪುರ, ತಾ: ಹಳಿಯಾಳ, 5]. ಪಕೀರ ತಂದೆ ಅಡಿವೆಪ್ಪ ಮೇತ್ರಿ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುಳೆದಕೊಪ್ಪ, ತಾ: ಹಳಿಯಾಳ, 6]. ಮಹಮ್ಮದ್ ಶರೀಪ್ ತಂದೆ ದಾದೆಸಾಬ್ ಮುಲ್ಲಾ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶಿವಪುರ, ತಾ: ಹಳಿಯಾಳ, 7]. ಮಲ್ಲೇಶಿ ತಂದೆ ಹನ್ಮಂತಪ್ಪ ವಡ್ಡರ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿವಪುರ, ತಾ: ಹಳಿಯಾಳ, 8]. ಮಂಜುನಾಥ ತಂದೆ ನಾಗಪ್ಪ ವಡ್ಡರ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಳೆದಕೊಪ್ಪ, ತಾ: ಹಳಿಯಾಳ. ಈ ನಮೂದಿತ ಆರೋಪಿತರುಗಳು ದಿನಾಂಕ: 04-09-2021 ರಂದು ಸಾರ್ವಜನಿಕ ಸ್ಥಳವಾದ ಹಳಿಯಾಳ ತಾಲೂಕಿನ ಶಿವಪುರ ಗುಳೆದಕೊಪ್ಪ ಗ್ರಾಮಕ್ಕೆ ಹೋಗುವ ರಸ್ತೆಯ ಹಳ್ಳದ ಹತ್ತಿರ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತುಕೊಂಡು ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣ ಪಂಥ ಕಟ್ಟಿ ಅಂದರ್-ಬಾಹರ್ ಜೂಜಾಟ ಆಟ ಆಡುತ್ತಿದ್ದಾಗ, 17-35 ಗಂಟೆಗೆ ದಾಳಿಯ ಕಾಲಕ್ಕೆ ಆರೋಪಿತರು ನಗದು ಹಣ 2,670/- ರೂಪಾಯಿ ಮತ್ತು ಜೂಗಾರಾಟದ ಸಲಕರಣೆಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸತ್ಯಪ್ಪ ಹುಕ್ಕೇರಿ, ಪಿ.ಎಸ್.ಐ (ತನಿಖೆ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 04-09-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗುತ್ತೆಪ್ಪ ತಂದೆ ಪರಶುರಾಮ ಚನ್ನಯ್ಯ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೇಲಿನ ಅಂಡಗಿ, ತಾ: ಶಿರಸಿ. ಈತನು ದಿನಾಂಕ: 04-09-2021 ರಂದು 16-50 ಗಂಟೆಗೆ ಮೇಲಿನ ಅಂಡಗಿಯ ರಂಗ ಮಂದಿರದ ಎದುರಿನ ತನ್ನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದ ತಾತ್ಕಾಲಿಕ ಶೆಡ್ಡಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿ ಕೊಡುತ್ತಿರುವಾಗ ಅಬಕಾರಿ ಸ್ವತ್ತುಗಳಾದ 1). Original Choice DELUXE WHISKY 90 ML ನ ಟೆಟ್ರಾ ಪ್ಯಾಕೆಟ್ ಗಳು-08, ಅ||ಕಿ|| 281.04/- ರೂಪಾಯಿ, 2). HAYWARDS CHEERS  WHISKY 90 ML ಅಂತಾ ಲೇಬಲ್ ಇರುವ ಮದ್ಯದ ಟೆಟ್ರಾ ಪ್ಯಾಕ್-03, ಅ||ಕಿ|| 105.39/- ರೂಪಾಯಿ, 3). HAYWARDS CHEERS  WHISKY 90 ML ಅಂತಾ ಲೇಬಲ್ ಇರುವ ಮದ್ಯದ ಖಾಲಿ ಟೆಟ್ರಾ ಪ್ಯಾಕ್-03, ಅ||ಕಿ|| 00.00/- ರೂಪಾಯಿ, 4). ನಗದು ಹಣ 210/- ರೂಪಾಯಿ, 5). ಪ್ಲಾಸ್ಟಿಕ್ ಲೋಟಗಳು-02, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 04-09-2021 ರಂದು 18-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 51/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಹುಡುಗ ಕುಮಾರ: ಭರತ ತಂದೆ ಪ್ರಶಾಂತ ನಾಯಕ, ಪ್ರಾಯ-10 ವರ್ಷ, ಸಾ|| ಕೆಂಕಣಿ, ಶಿವಪುರ, ತಾ: ಅಂಕೋಲಾ. ದಿನಾಂಕ: 04-09-2021 ರಂದು ಅಂಕೋಲಾದ ತುಂಬಿಬೈಲ್, ಕೆಂಕಣಿ, ಶಿವಪುರದಲ್ಲಿ ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ಹಳ್ಳ ತುಂಬಿ ಬಂದಿದ್ದು, ಈ ಸಮಯದಲ್ಲಿ ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಮೃತ ಕುಮಾರ: ಭರತ ಈತನು ತನ್ನ ಚಿಕ್ಕಪ್ಪ: ಮಂಜುನಾಥ ತಂದೆ ಬೊಮ್ಮಯ್ಯ ನಾಯಕ ಇವರ ಮನೆಗೆ ಹೋಗಲು ಅಂತಾ ಹಳ್ಳ ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳದಲ್ಲಿ ಬಿದ್ದು ಹೊಳೆಯಲ್ಲಿ ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ತುಂಬಿಬೈಲಿನಲ್ಲಿ 15-45 ಗಂಟೆಗೆ ಶವವಾಗಿ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಬೊಮ್ಮಯ್ಯ ನಾಯಕ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೆಂಕಣಿ, ಶಿವಪುರ, ತಾ: ಅಂಕೋಲಾ ರವರು ದಿನಾಂಕ: 04-09-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 05-09-2021 01:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080