ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-04-2021

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಬೀಬಿಆಯಿಷಾ ಶರೀಪ್ ಶೇಖ್, ಪ್ರಾಯ-21 ವರ್ಷ, ಸಾ|| ಚರ್ಚವಾಡಾ, ಕದ್ರಾ, ಕಾರವಾರ. ಪಿರ್ಯಾದಿಯವರ ಹೆಂಡತಿಯಾದ ಇವಳನ್ನು ಪಿರ್ಯಾದಿಯನ್ನು ಕಳೆದ 08 ತಿಂಗಳ ಹಿಂದೆ ಮದುವೆಯಾಗಿದ್ದು, ಮದುವೆಯ ನಂತರದಲ್ಲಿ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದವಳು, ದಿನಾಂಕ: 04-04-2021 ರಂದು ಬೆಳಿಗ್ಗೆ 07-00 ಗಂಟೆಗೆ ಮನೆಯಲ್ಲಿ ಎಲ್ಲರೂ ತರಕಾರಿ ವ್ಯಾಪಾರಕ್ಕೆ ಅಂತಾ ಹೋದಾಗ, ದಿನಾಂಕ: 04-04-2021 ರಂದು ಬೆಳಿಗ್ಗೆ 07-00 ಗಂಟೆಯಿಂದ ಮಧ್ಯಾಹ್ನ 01-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ತನ್ನ ತಾಯಿಯ ಮನೆಗೂ ಹೋಗದೇ, ಎಲ್ಲಿಯೋ ಹೋಗಿ ಈವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಸದರಿ ಕಾಣೆಯಾದವಳನ್ನು ಪತ್ತೆ ಮಾಡಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶರೀಪ್ ರಶೀದ್ ಶೇಖ್, ಪ್ರಾಯ-30 ವರ್ಷ, ವೃತ್ತಿ-ಸೆಕ್ಯೂರಿಟಿ ಕೆಲಸ, ಸಾ|| ಚರ್ಚವಾಡಾ, ಕದ್ರಾ, ಕಾರವಾರ ರವರು ದಿನಾಂಕ: 05-04-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ನಯನಾ ತಂದೆ ಅಣ್ಣಪ್ಪ ನಾಯ್ಕ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಹಾಡಗೇರಿ, ನಗರ ಬಸ್ತಿಕೇರಿ, ತಾ: ಹೊನ್ನಾವರ, ಹಾಲಿ ಸಾ|| ಪ್ರಭಾತನಗರ, ತಾ: ಹೊನ್ನಾವರ. ಸುದ್ದಿದಾರ ಮಗಳಾದ ಇವಳು ಹೊನ್ನಾವರದ ಪದವಿ ಕಾಲೇಜಿನಲ್ಲಿ ಬಿ.ಕಾಂ ಪ್ರಥಮ ವರ್ಷ ಓದುತ್ತಿದ್ದವಳು, ಕಾಲೇಜಿಗೆ ಹೋಗುವ ಸಲುವಾಗಿ ಹೊನ್ನಾವರದ ಪ್ರಭಾತನಗರದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ತನ್ನ ತಾಯಿಯ ಜೊತೆಗೆ ವಾಸವಾಗಿದ್ದವಳು. ದಿನಾಂಕ: 03-04-2021 ರಂದು ರಾತ್ರಿ 09-30 ಗಂಟೆಗೆ ಊಟ ಮಾಡಿ ಮಲಗಿದ್ದವಳು, ರಾತ್ರಿ 12-00 ಗಂಟೆಗೆ ನೋಡಿದರೆ ಮಲಗಿದವಳು ಮನೆಯಲ್ಲಿ ಇರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಅವಳನ್ನು ನಾವು ನಮ್ಮ ಸಂಬಂಧಿಕರ ಮನೆಯಲ್ಲಿ, ಪರಿಚಯಸ್ಥರ ಮನೆಯಲ್ಲಿ ಹುಡುಕಿದರೂ ಸಿಕ್ಕಿರುವುದಿಲ್ಲ. ಕಾರಣ ಅವಳನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ಹನುಮಂತ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾಡಗೇರಿ, ನಗರ ಬಸ್ತಿಕೇರಿ, ತಾ: ಹೊನ್ನಾವರ ರವರು ದಿನಾಂಕ: 05-04-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪಾಂಡುರಂಗ ಜನಾರ್ಧನ ಖಾರ್ವಿ, ಪ್ರಾಯ-32 ವರ್ಷ, ಸಾ|| ಹಳೇಮಠ, ಮಂಕಿ, ತಾ: ಹೊನ್ನಾವರ, 2]. ಕೇಶವ ಧರ್ಮಾ ನಾಯ್ಕ, ಪ್ರಾಯ-41 ವರ್ಷ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ, 3]. ನಾಗೇಶ ಶಂಕರ ನಾಯ್ಕ, ಪ್ರಾಯ-40 ವರ್ಷ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ, 4]. ಸುಬ್ರಮಣ್ಯ ಮಾದೇವ ನಾಯ್ಕ, ಪ್ರಾಯ-30 ವರ್ಷ, ಸಾ|| ಚಿತ್ತಾರ, ಮಂಕಿ, ತಾ: ಹೊನ್ನಾವರ, 5]. ಕಿರಣ ಸುಬ್ರಾಯ ನಾಯ್ಕ, ಪ್ರಾಯ 30 ವರ್ಷ, ಸಾ|| ಬಣಸಾಲೆ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 04-04-2021 ರಂದು 18-00 ಗಂಟೆಗೆ ಮಂಕಿಯ ಮುಗುಳಿ ಗುಡ್ಡದ ಗೇರು ಹಿತ್ತಲಿನ ಖುಲ್ಲಾ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಇಸ್ಪೀಟ್ ಎಲೆಗಳ ಮೇಲೆ ಪಣವಾಗಿಟ್ಟು, ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಜೂಗಾರಾಟಕ್ಕೆ ಬಳಸಿದ ಒಟ್ಟು ಹಣ 3,100/- ರೂಪಾಯಿ ಹಾಗೂ ಜೂಗಾರಾಟದ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ಮಂಡದ ಮೇಲೆ ಹಾಸಿದ ದಿನಪತ್ರಿಕೆ-1 ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಪ್ಪಾಜಿ ಬಿ. ಗೊಂದಳಿ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 05-04-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮದಾಸ ತಂದೆ ಸುಬ್ರಾಯ ನಾಯ್ಕ, ಪ್ರಾಯ-25 ವರ್ಷ, ಸಾ|| ಜಡ್ಡಿ, ಮೂಲೆಕೇರಿ, ತಾ: ಹೊನ್ನಾವರ. ಈತನು ದಿನಾಂಕ: 05-04-2021 ರಂದು 19-15 ಗಂಟೆಗೆ ಜಡ್ಡಿಯ ಮೂಲೆಕೇರಿಯಲ್ಲಿ ಪಿರ್ಯಾದಿಗೆ ಉದ್ದೇಶಿಸಿ ‘ಬೋಳಿ ಮಗನೆ, ಅಮ್ಮ ನನಗೆ ಊಟ ಮಾಡಿ ಹಾಕಬಾರದಾಗಿ ನೀನೇ ಹೇಳಿ ಕಳಿಸಿದ್ದೀಯಾ’ ಅಂತಾ ಹೇಳಿ ಪಿರ್ಯಾದಿಗೆ ಕಾಲಿನಿಂದ ಎಡಗೈ ಭುಜದ ಮೇಲೆ ಒದ್ದು, ಕೈಯಿಂದ ಮೈಮೇಲೆ ಹೊಡೆದಾಗ, ಮನೆಗೆ ಬಂದ ಇನ್ನೊಬ್ಬ ಮಗನಾದ ಪ್ರಶಾಂತನಿಗೂ ಸಹ ‘ಬೋಸಡಿ ಮಗನೆ’ ಅಂತಾ ಹೇಳಿ ಅವನ ಕೆನ್ನೆಯ ಮೇಲೆ ಹೊಡೆದಿದ್ದು, ಆಗ ಮನೆಯಲ್ಲಿದ್ದ ಪಿರ್ಯಾದಿಯ ತಂದೆ: ಮರ್ತಪ್ಪ ಮತ್ತು ತಾಯಿ: ಮಂಕಾಳಿ ಇವರು ಜಗಳ ಬಿಡಿಸಲು ಮುಂದೆ ಬಂದಾಗ ಪಿರ್ಯಾದಿಯ ತಾಯಿಗೆ ಅಂಗಳದಲ್ಲಿದ್ದ ಮನೆ ಹಂಚಿನಿಂದ ತಲೆಗೆ ಹೊಡೆದು ಗಾಯಗೊಳಿಸಿ, ತಂದೆಗೂ ಸಹ ಹಂಚಿನಿಂದ ಬಲಗೈ ಮೇಲೆ ಹೊಡೆದು ಗಾಯಗೊಳಿಸಿದ್ದಲ್ಲದೇ, ಪಿರ್ಯಾದಿ ಹಾಗೂ ಮನೆಯ ಜನರನ್ನು ಉದ್ದೇಶಿಸಿ ‘ನೀವೆಲ್ಲಾ ಮನೆಯಲ್ಲಿ ಇದ್ದರೆ ನಿಮಗೆ ಕೊಂದು ಹಾಕುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಾಯ ತಂದೆ ಮರ್ತಪ್ಪ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಡ್ಡಿ, ಮೂಲೆಕೇರಿ, ತಾ: ಹೊನ್ನಾವರ ರವರು ದಿನಾಂಕ: 05-04-2021 ರಂದು 23-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 01-04-2021 ರಂದು ರಾತ್ರಿ 22-30 ಗಂಟೆಯಿಂದ ದಿನಾಂಕ: 02-04-2021 ರಂದು ಬೆಳಗಿನ ಜಾವ 06-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರ ಮನೆಯ ಮುಂದೆ ನಿಲ್ಲಿಸಿಟ್ಟ ಅಂದಾಜು 20,000/- ರೂಪಾಯಿ ಕಿಮ್ಮತ್ತಿನ ಹೋಂಡಾ ಡಿಯೋ ಸ್ಕೂಟಿ ನಂ: ಕೆ.ಎ-47/ಎಸ್-8717 ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಶ್ಫಾಕ್ ಹಸನ್ ಜುಕಾಕು ತಂದೆ ಮೊಹಮ್ಮದ್ ಮೀರಾ ಜುಕಾಕು, ಪ್ರಾಯ-62 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮನೆ ನಂ: 129/1, ಜುಕಾಕು ಹೌಸ್, ಮುಖ್ಯ ರಸ್ತೆ, ತಾ: ಭಟ್ಕಳ ರವರು ದಿನಾಂಕ: 05-04-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಮ ತಂದೆ ಸೋಮಯ್ಯ ದೇವಾಡಿಗ, ಪ್ರಾಯ-56 ವರ್ಷ, ವೃತ್ತಿ-ವ್ಯಾಪಾರ, ಸಾ|| ಕುಪ್ಪುಮನೆ, ಶಿರಾಲಿ, ತಟ್ಟಿಹಕ್ಕಲ್, ತಾ: ಭಟ್ಕಳ. ಈತನು ದಿನಾಂಕ: 05-04-2021 ರಂದು 11-45 ಗಂಟೆಯ ಸಮಯಕ್ಕೆ ಭಟ್ಕಳ ಶಿರಾಲಿಯ ತಟ್ಟಿಹಕ್ಕಲ್ ಮೈದಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 870/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 05-04-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಸವರಾಜ ತಂದೆ ಲಕ್ಷ್ಮಣ ಅಂಬಿಗೇರ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಕುಂದರಗಿ, ತಾ: ಬಿಳಗಿ, ಜಿ: ಬಾಗಲಕೋಟೆ, ಹಾಲಿ ಸಾ|| ಎಸ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ತಾ: ಯಲ್ಲಾಪುರ (ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಇ-1306 ನೇದರ ಚಾಲಕ). ಈತನು ದಿನಾಂಕ: 05-04-2021 ರಂದು 07-50 ಗಂಟೆಗೆ ಯಲ್ಲಾಪುರ ತಾಲೂಕಿನ ಆರತಿಬೈಲ್‍ದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಗೆ ಸೇರಿದ ಬಸ್ನಂ: ಕೆ.ಎ-31/ಇ-1306 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಬಸ್ಸಿನ ನಿಯಂತ್ರಣ ತಪ್ಪಿ ರಸ್ತೆಯ ತನ್ನ ಬಲಬದಿಗೆ ಹೋಗಿ, ರಸ್ತೆ ಬದಿಯಲ್ಲಿರುವ ಗುಡ್ಡದ ಧರೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿ ಇವರ ಹಣೆಗೆ, ಎದಗೆ ಹಾಗೂ ಕೈಗೆ ಗಾಯನೋವು ಪಡಿಸಿದ್ದಲ್ಲದೇ, ಬಸ್ಸಿನಲ್ಲಿದ್ದ ಪ್ರಯಾಣಿಸುತ್ತಿದ್ದ ಇನ್ನು 30-32 ಜನ ಪ್ರಯಾಣಿಕರಿಗೆ ಹಾಗೂ ಬಸ್ ನಿರ್ವಾಹಕರಿಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೀತಾರಾಮ ತಂದೆ ಉಮ್ಮಣ್ಣ ಗೌಡ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಬಾರಕುಂಬ್ರಿ, ಕಳಚೆ, ತಾ: ಯಲ್ಲಾಪುರ ರವರು ದಿನಾಂಕ: 05-04-2021 ರಂದು 07-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-04-2021

at 00:00 hrs to 24:00 hrs

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಾದೇವ ತಂದೆ ಹೆರಿಯಾ ಮೊಗೇರ, ಪ್ರಾಯ-ಸುಮಾರು 55 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮುಂಡಳ್ಳಿ, ಮೊಗೇರಕೇರಿ, ತಾ: ಭಟ್ಕಳ. ಇವರು ದಿನಾಂಕ: 05-04-2021 ರಂದು 03-00 ಗಂಟೆಯ ಸಮಯಕ್ಕೆ ಮುಂಡಳ್ಳಿಯ ಮೊಗೇರಕೇರಿಯಿಂದ ಪಾತಿ ದೋಣಿಯಲ್ಲಿ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದವರು, ಸಮಯ 03-20 ರಿಂದ 03-30 ಗಂಟೆಯ ನಡುವಿನ ಅವಧಿಯಲ್ಲಿ ಪಾತಿ ದೋಣಿಯು ಸಮುದ್ರಲ್ಲಿ ಮುಗುಚಿ ಮಾದೇವ ತಂದೆ ಹೇರಿಯಾ ಮೊಗೇರ ಇವರು ಸಮುದ್ರದಲ್ಲಿ ಬಿದ್ದು ಮೃತಪಟ್ಟಿದ್ದು, ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹರೀಶ ತಂದೆ ಮಾದೇವ ಮೊಗೇರ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮುಂಡಳ್ಳಿ, ಮೊಗೇರಕೇರಿ, ತಾ: ಭಟ್ಕಳ ರವರು ದಿನಾಂಕ: 05-04-2021 ರಂದು 06-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 07-04-2021 10:38 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080