ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-04-2022

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2022, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 04-05-2022 ರಂದು 12-30 ಗಂಟೆಯಿಂದ ದಿನಾಂಕ: 05-04-2022 ರಂದು ಬೆಳಿಗ್ಗೆ 07-15 ಗಂಟೆಯ ನಡುವಿನ ಅವಧಿಯಲ್ಲಿ ಚೆಂಡಿಯಾ, ದೇವತಿವಾಡಾದಲ್ಲಿರುವ ಶ್ರೀ ನವಚಂಡಿಕಾ ದೇವಿ ದೇವಸ್ಥಾನದ ಹಿಂದಿನ ಬಾಗಿಲ ಕೊಂಡಿಯನ್ನು ಮುರಿದು ದೇವಸ್ಥಾನದ ಒಳಗೆ ಪ್ರವೇಶ ಮಾಡಿ, ದೇವಸ್ಥಾನದ ಗರ್ಭಗುಡಿಯ ಬಳಿ ಇದ್ದ ಕಾಣಿಕೆ ಹುಂಡಿಯನ್ನು ಒಡೆದು, ಗರ್ಭಗುಡಿಯ ಮುಖ್ಯದ್ವಾರದ ಬೀಗವನ್ನು ಹರಿತವಾದ ಆಯುಧದಿಂದ ತೆಗೆದು ಗರ್ಭಗುಡಿಯ ಒಳಗೆ ಪ್ರವೇಶಿಸಿ, ಸುಮಾರು 1,47,000/- ರೂಪಾಯಿ ಕಿಮ್ಮತ್ತಿನ ಒಟ್ಟೂ 42 ಗ್ರಾಂ ಬಂಗಾರದ ಒಡವೆಗಳು, ಸುಮಾರು 2,00,000/- ರೂಪಾಯಿ ಕಿಮ್ಮತ್ತಿನ ಒಟ್ಟೂ 2.5 ಕೆ.ಜಿ ಬೆಳ್ಳಿಯ ಕವಚ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ 30,000/- ರೂಪಾಯಿ ನಗದು ಹಣವನ್ನು ಕಳುವು  ಮಾಡಿಕೊಂಡು ಒಯ್ದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಸುರೇಶ ಗಾಂವಕರ, ಪ್ರಾಯ-44 ವರ್ಷ, ವೃತ್ತಿ-ದೇವಸ್ಥಾನದ ಅರ್ಚಕರು, ಸಾ|| ಶ್ರೀ ನವಚಂಡಿ ದೇವಿ ದೇವಸ್ಥಾನದ ಹಿಂಬದಿಗೆ, ದೇವತಿವಾಡಾ, ಚೆಂಡಿಯಾ, ಕಾರವಾರ ರವರು ದಿನಾಂಕ: 05-04-2022 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2022, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 04-04-2022 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ: 05-04-2022 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ತೊರ್ಕೆ ಗ್ರಾಮದಲ್ಲಿರುವ ಶ್ರೀ ಕೆಂಗಳ ಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳ ಪ್ರವೇಶಿಸಿ, ದೇವರ ಮೂರ್ತಿಯ ಮೈ ಮೇಲಿದ್ದ ಸುಮಾರು 01 ಗ್ರಾಂ ತೂಕದ ಬಂಗಾರದ ಲೊಕೆಟ್ ಇದ್ದ ಕರಿಮಣಿ ಸರ-01, ಅ||ಕಿ|| 4,000/- ರೂಪಾಯಿ ಹಾಗೂ 07 ಗ್ರಾಂ ತೂಕದ ಬೆಳ್ಳಿಯ ಚೈನ್-01, ಅ||ಕಿ|| 1,000/- ರೂಪಾಯಿ ಮತ್ತು ಶ್ರೀ ಬೀರ ದೇವರ ಗುಡಿಯ ಹೊರಗಡೆ ಇದ್ದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ  ಸುಮಾರು 2,500/- ಮೌಲ್ಯದ ನೋಟುಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಉದಯ ತಂದೆ ನಾಗಪ್ಪ ಕವರಿ, ಪ್ರಾಯ-51 ವರ್ಷ, ವೃತ್ತಿ-ವ್ಯಾಪಾರ, ಸಾ|| ತೊರ್ಕೆ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 05-04-2022 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2022, ಕಲಂ: 447, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾರುತಿ ತಂದೆ ತಮ್ಮಣ್ಣ ಪೈ, ಸಾ|| ಮಾದನಗೇರಿ, ಗೋಕರ್ಣ, ತಾ: ಕುಮಟಾ, 2]. ಬಾಲಕೃಷ್ಣ ತಂದೆ ಮಾರುತಿ ಪೈ, ಸಾ|| ಮಾದನಗೇರಿ, ತಾ: ಕುಮಟಾ. ದಿನಾಂಕ: 29-03-2022 ರಂದು ಸಂಜೆ 18-30 ಗಂಟೆಯ ಸುಮಾರಿಗೆ ಪಿರ್ಯಾದಿಯು ಕಳೆದ 20 ವರ್ಷಗಳಿಂದ ಪೊಲೀಸ್ ಸ್ಟೇಷನ್ ಕ್ರಾಸಿನ ಹತ್ತಿರ ನಡೆಸುತ್ತಿದ್ದ ಓಂಕಾರ ಇಲೆಕ್ಟ್ರಿಕಲ್ಸ್ & ಟೂರ್ಸ್ & ಟ್ರಾವೆಲ್ಸ್ ಉದ್ಯಮ ನಡೆಸುವ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ, ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನನ್ನು ಹೊರ ಹಾಕಿ, ಅಂಗಡಿಯ ಪ್ರವೇಶ ದ್ವಾರಕ್ಕೆ ಬೀಗವನ್ನು ಹಾಕಿದ್ದಲ್ಲದೇ, ‘ಇನ್ನು ಮುಂದೆ ಅಂಗಡಿಯ ಬಾಗಿಲನ್ನು ತೆಗೆಯಲು ಬಂದರೆ ಹೊಡೆಯುತ್ತೇನೆ, ಬಡಿಯುತ್ತೇನೆ ಹಾಗೂ ಕೊಲೆ ಮಾಡುತ್ತೇನೆ’ ಅಂತಾ ಬೆದರಿಕೆ ಹಾಕಿದ್ದಲ್ಲದೇ, ಅಂಗಡಿಯ ವ್ಯವಹಾರವನ್ನು ನಡೆಸಲು ತೊಂದರೆ ನೀಡಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಗೋಪಾಲಕೃಷ್ಣ ಹೆಗಡೆ, ಪ್ರಾಯ-46 ವರ್ಷ, ವೃತ್ತಿ-ವ್ಯವಹಾರ, ಸಾ|| ಬರಗದ್ದೆ, ತಾ: ಕುಮಟಾ ರವರು ದಿನಾಂಕ: 05-04-2022 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ಕೆ. ತಂದೆ ಕೃಷ್ಣಪ್ಪಾ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಅಂಗಟ್ಟಾ, ಪೋ: ಕುಡತಿ, ತಾ: ಚಿಕ್ಕಬಳ್ಳ್ಳಾಪುರ (ಟಾಟಾ 407 ಲಾರಿ ನಂ: ಕೆ.ಎ-40/ಬಿ-4599 ನೇದರ ಚಾಲಕ). ಈತನು ದಿನಾಂಕ: 05-04-2022 ರಂದು 05-30 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ತನ್ನ ಟಾಟಾ 407 ಲಾರಿ ನಂ: ಕೆ.ಎ-40/ಬಿ-4599 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ, ಕುಮಟಾ ತಾಲೂಕಿನ ಹಂದಿಗೋಣ ಕನ್ನಡ ಶಾಲೆಯ ಹತ್ತಿರ ತನ್ನ ಮುಂದಿನಿಂದ ಹೋಗುತ್ತಿದ್ದ ಇನ್ನೊಂದು ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ಸದರಿ ಲಾರಿಯನ್ನು ರಸ್ತೆಯ ಬಲಕ್ಕೆ ಚಲಾಯಿಸಿ, ನಿಷ್ಕಾಳಜಿಯಿಂದ ರಸ್ತೆಯ ಮಧ್ಯದಲ್ಲಿ ಇರುವ ರೋಡ್ ಡಿವೈಡರಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಲಾರಿಯನ್ನು ರೋಡ್ ಮೇಲೆ ಪಲ್ಟಿ ಕೆಡವಿ ಲಾರಿ ಜಖಂ ಆಗಲು ಕಾರಣವಾಗಿದ್ದಲ್ಲದೇ, ಸದರಿ ಚಾಲಕನು ತನ್ನ ಹಣೆಗೆ ಹಾಗೂ ಬಲಗೈಗೆ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ಜಟ್ಟಿ ಮುಕ್ರಿ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಹಂದಿಗೋಣ ಕನ್ನಡ ಶಾಲೆಯ ಹತ್ತಿರ, ತಾ: ಕುಮಟಾ ರವರು ದಿನಾಂಕ: 05-04-2022 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ಲಕ್ಷ್ಮಣ ಮೊಗೇರ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊರ್ಸಗದ್ದೆ, ತಾ: ಯಲ್ಲಾಪುರ. ಈತನು ದಿನಾಂಕ: 05-04-2022 ರಂದು 18-00 ಗಂಟೆಗೆ ಗೊರ್ಸಗದ್ದೆ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ, ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸಿದ್ದಾಗ ಓ.ಸಿ ಚೀಟಿ, ಓ.ಸಿ ಮಟಕಾ ಸಲಕರಣೆಗಳು ಹಾಗೂ ನಗದು ಹಣ 1,900/- ರೂಪಾಯಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಎಸ್. ಗೌಡರ್, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 05-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಣಿಕಂಠ ತಂದೆ ವಾಸು ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಪಗಿ, ಸೋಮನಳ್ಳಿ ರಸ್ತೆ, ತಾ: ಶಿರಸಿ. ಈತನು ದಿನಾಂಕ: 05-04-2022 ರಂದು 00-30 ಗಂಟೆಯ ಸುಮಾರಿಗೆ ಸುಜುಕಿ ಎಕ್ಸೆಸ್ ಸ್ಕೂಟಿ ನಂ: ಕೆ.ಎ-31/ಇ.ಸಿ-0574 ನೇದರ ಮೇಲೆ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಸರಾಯಿ ಇದ್ದ ಪ್ಯಾಕೆಟ್ ಗಳ ಬಾಕ್ಸ್ ಗಳನ್ನು ತುಂಬಿಕೊಂಡು ಸಾಗಾಟ ಮಾಡಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಶಿರಸಿ ಕಡೆಯಿಂದ ಚಿಪಗಿ ಕಡೆಗೆ ಅಕ್ರಮವಾಗಿ ಯಾವುದೇ ರೀತಿಯ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ವಾಹನದಲ್ಲಿ ಸರಾಯಿ ಪ್ಯಾಕೆಟ್ ಗಳನ್ನು ಸಾಗಾಟ ಮಾಡಿಕೊಂಡು ಹೊರಟಿದ್ದಾಗ 1). HAYWARDS CHEERS WHISKY ಹೆಸರಿನ 180 ML ಅಳತೆಯ ಸರಾಯಿ ಇದ್ದ ಪ್ಯಾಕೆಟ್ ಗಳ ಬಾಕ್ಸ್-06 ಇದ್ದು, ತಲಾ ಒಂದು ಬಾಕ್ಸ್ ನಲ್ಲಿ 48 ರೂಪಾಯಿಯಂತೆ ಒಟ್ಟೂ 288 ಪ್ಯಾಕೆಟ್ ಗಳು ಇರುತ್ತವೆ. ತಲಾ ಒಂದು ಪ್ಯಾಕೆಟ್ ಗೆ ಅ||ಕಿ|| 70.26/- ರೂಪಾಯಿಯಂತೆ ಒಟ್ಟೂ ಅವುಗಳ ಕಿಮ್ಮತ್ತು 20,234/- ರೂಪಾಯಿ, 2). HAYWARDS CHEERS WHISKY ಹೆಸರಿನ 90 ML ಅಳತೆಯ ಸರಾಯಿ ಇದ್ದ ಪ್ಯಾಕೆಟ್ ಗಳು-24 ಇದ್ದು, ತಲಾ ಒಂದು ಪ್ಯಾಕೆಟ್ ಗೆ ಅ||ಕಿ|| 35.13/- ರೂಪಾಯಿಗಳಂತೆ ಒಟ್ಟೂ ಅವುಗಳ ಕಿಮ್ಮತ್ತು 843/- ರೂಪಾಯಿ, 3). ಸರಾಯಿ ಇದ್ದ ಪ್ಯಾಕೆಟ್ ಬಾಕ್ಸ್ ಗಳನ್ನು ಇಟ್ಟುಕೊಂಡು ಹೊರಡಲು ಉಪಯೋಗಿಸಿದ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಚೀಲ-1, ಅ||ಕಿ|| 00.00/- ರೂಪಾಯಿ ಆಗಬಹುದು. 4). ಸರಾಯಿ ಇದ್ದ ಪ್ಯಾಕೆಟ್ ಬಾಕ್ಸ್ ಗಳನ್ನು ಇಟ್ಟುಕೊಂಡು ಹೊರಡಲು ಉಪಯೋಗಿಸಿದ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಚೀಲಕ್ಕೆ ಕಟ್ಟಿದ ಪ್ಲಾಸ್ಟಿಕ್ ದಾರ-1, ಅ||ಕಿ|| 00.00/- ರೂಪಾಯಿ ಆಗಬಹುದು, 5). ಸರಾಯಿ ಇದ್ದ ಪ್ಯಾಕೆಟ್ ಬಾಕ್ಸ್ ಗಳನ್ನು ಇಟ್ಟುಕೊಂಡು ಹೊರಡಲು ಉಪಯೋಗಿಸಿದ ಸುಜುಕಿ ಎಕ್ಸೆಸ್ ಸ್ಕೂಟಿ ನಂ: ಕೆ.ಎ-31/ಇ.ಸಿ-0574, ಅ||ಕಿ|| 20,000/- ರೂಪಾಯಿ ಆಗಬಹುದು. ಇವುಗಳೊಂದಿಗೆ ದಾಳಿಯ ಕಾಲಕ್ಕೆ ಶಿರಸಿ-ಹುಬ್ಬಳ್ಳಿ ರಸ್ತೆಯ ಚಿಪಗಿ ದಮನಬೈಲ್ ಕ್ರಾಸ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಈರಯ್ಯ ಡಿ. ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 05-04-2022 ರಂದು 02-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಜೇಂದ್ರ ತಂದೆ ಗಣಪತಿ ನಾಯ್ಕ, ಸಾ|| ಕಿರವತ್ತಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-2720 ನೇದರ ಸವಾರ). ಈತನು ದಿನಾಂಕ: 04-04-2022 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-2720 ನೇದರ ಹಿಂಬದಿಗೆ ಪಿರ್ಯಾದಿಯವರನ್ನು ಕೂರಿಸಿಕೊಂಡು ಶಿರಸಿ ಕಡೆಯಿಂದ ದಾಸನಕೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ಪಲ್ಟಿ ಕೆಡವಿ, ಹಿಂಬದಿಯಲ್ಲಿ ಕುಳಿತ ಪಿರ್ಯಾದಿಗೆ ಬಲಗೈ, ಹೊಟ್ಟೆಯ ಭಾಗ, ಮುಖಕ್ಕೆ ರಕ್ತದ ಗಾಯ ಪಡಿಸಿದ್ದಲ್ಲದೇ, ತನಗೂ ಸಹ ಸಣ್ಣಪುಟ್ಟ ಗಾಯನೋವುಂಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಮಂಜುನಾಥ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಿರವತ್ತಿ, ತಾ: ಶಿರಸಿ ರವರು ದಿನಾಂಕ: 05-04-2022 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-04-2022

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 04-04-2022 ರಂದು ಸಾಯಂಕಾಲ 03-30 ಘಂಟೆಗೆ ಅಂಕೋಲಾ ಬಸ್ ನಿಲ್ದಾಣದಲ್ಲಿ ಕಾರವಾರ ಹೋಗಲು ಚಿಕ್ಕಮಗಳೂರು-ಕಾರವಾರ ಬಸ್ ಹತ್ತಿ ಕುಳಿತುಕೊಂಡಿರುವಾಗ, ಕುಳಿತಲ್ಲಿಯೇ ಹೃದಯಾಘಾತದಿಂದಲೋ ಅಥವಾ ಅವನಿಗಿದ್ದ ಇನ್ನಾವುದೋ ಖಾಯಿಲೆಯಿಂದಲೋ ಬಸ್ಸಿನಲ್ಲಿ ಅಸ್ವಸ್ಥನಾದವನಿಗೆ ಚಿಕಿತ್ಸೆಯ ಕುರಿತು 108 ವಾಹನ ತರಿಸಿ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ ಕಳುಹಿಸಿದ್ದು, ಆಸ್ಪತ್ರೆಗೆ ತಲುಪುವ ಮುನ್ನ ಸದ್ರಿ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ತಿಳಿದು ಬರುತ್ತಿದ್ದು, ಇದರ ಹೊರತು ಮೃತನ ಮರಣದಲ್ಲಿ ನಮಗೆ ಬೇರೇ ಯಾವುದೇ ಸಂಶಯ ಕಂಡುಬರುವುದಿಲ್ಲ. ಮೃತದೇಹವು ಜಿಲ್ಲಾ ಆಸ್ಪತ್ರೆ ಕಾರವಾರದ ಶವಾಗಾರದಲ್ಲಿ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ನಾರಾಯಣ ಮಹಾಲೆ, ಪ್ರಾಯ-55 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ ಬಸ್ ಕಂಡಕ್ಟರ್, ಸಾ|| ಅಮದಳ್ಳಿ, ಜಡಿಗದ್ದಾ, ಕಾರವಾರ, ಹಾಲಿ ಸಾ|| ಕೆ.ಎಸ್.ಆರ್.ಟಿ ಬಸ್ ಡಿಪೋ, ಕಾರವಾರ ರವರು ದಿನಾಂಕ: 05-04-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಉದಯ ತಂದೆ ದೊಡ್ಡಯ್ಯ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರವಾಸೆ, ಮಂಕಿ, ಹರವಾಸೆ, ತಾ: ಹೊನ್ನಾವರ. ಈತನು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬಂದ ಹಣದಿಂದ ಅತಿಯಾಗಿ ಸರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡು ಬಂದವನು, ದಿನಾಂಕ: 05-04-2022 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಮನೆಯಲ್ಲಿ ತನ್ನ ತಾಯಿಯ ಹತ್ತಿರ ತಾನು ಅಂಗಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು, ಮಧ್ಯಾಹ್ನ 16-15 ಗಂಟೆಯ ನಡುವಿನ ಅವಧಿಯಲ್ಲಿ ದೇವರಗದ್ದೆಯಲ್ಲಿರುವ ಸೀತಾರಾಮ ನಾಯ್ಕ ಇವರ ಅಂಗಡಿಯ ಪಕ್ಕದಲ್ಲಿನ ಕಲ್ಲಿನ ರಾಶಿಯ ಹತ್ತಿರ ತನಗೆ ಇದ್ದ ಯಾವುದೋ ಕಾಯಿಲೆಯಿದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪಂಡಯ್ಯ ತಂದೆ ರಾಮ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ||  ಸಿಂಗಾಣಿಹಿತ್ತಲ, ಪೋ: ಮಂಕಿ, ತಾ: ಹೊನ್ನಾವರ ರವರು ದಿನಾಂಕ: 05-04-2022 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಜೋಯಿಡಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಉಮೋ ತಂದೆ ತೊಳೀಯೋ ಗಾವಡಾ, ಪ್ರಾಯ-66 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಗರಿ, ತಾ: ಜೋಯಿಡಾ. ಪಿರ್ಯಾದುದಾರಳ ಮಾವನಾದ ಇವರು ದಿನಾಂಕ: 04-04-2022 ರಂದು 13-00 ಗಂಟೆಗೆ ತಮ್ಮ ಮನೆಯ ಹತ್ತಿರ ಇರುವ ಕಟ್ಟಿಗೆಯ ಕೊಟ್ಟಿಗೆಯಿಂದ ಕಟ್ಟಿಗೆ ತೆಗೆದುಕೊಂಡು ತಮ್ಮ ಮನೆ ಕಡೆಗೆ ವಾಪಸ್ ಬರುತ್ತಿರುವಾಗ ಆಕಸ್ಮಿಕವಾಗಿ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಬಿದ್ದು ತನ್ನ ಹೊಟ್ಟೆಗೆ ಪೆಟ್ಟು ಪಡಿಸಿಕೊಂಡಿದ್ದು, ನಂತರ ಜೋಯಿಡಾ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯಲ್ಲಿ ಇರುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 04-04-2022 ರಂದು ಸಂಜೆ 07-40 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಹಾಲಕ್ಷ್ಮಿ ಕೋಂ. ಸಚಿನ ಗಾವಡಾ, ಪ್ರಾಯ-26 ವರ್ಷ, ವೃತ್ತಿ-ನಗರಿ ಕನ್ನಡ ಶಾಲೆಯಲ್ಲಿ ಬಿಸಿಯೂಟ ಕೆಲಸ, ಸಾ|| ನಗರಿ, ತಾ: ಜೋಯಿಡಾ ರವರು ದಿನಾಂಕ: 05-04-2022 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ  

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಪಾರ್ವತಿ ತಂದೆ ಗುತ್ಯಪ್ಪ ತಳವಾರ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಪಿ.ಡಬ್ಲ್ಯೂ.ಡಿ ವಸತಿ ಗೃಹ, ಯಲ್ಲಾಪುರ ರಸ್ತೆ, ತಾ: ಶಿರಸಿ. ಪಿರ್ಯಾದಿಯ ಮಗಳಾದ ಇವಳು ಮಾನಸಿಕವಾಗಿ ಅಸ್ವಸ್ಥಳಿರುತ್ತಾಳೆ. ಅವಳಿಗೆ ಶ್ರೀಧರ ನರ್ಸಿಂಗ್ ಹೋಮ್ ಶಿವಮೊಗ್ಗದಲ್ಲಿ ಚಿಕಿತ್ಸೆ ಕೊಡಿಸಿದ್ದು, ಮೃತಳು ತನಗೆ ಜೀವ ಬೇಡವಾಗಿದೆ ಅಂತಾ ಹೇಳಿಕೊಳ್ಳುತ್ತಾ ಇದ್ದವಳಿರುತ್ತಾಳೆ. ಹೀಗಿರುತ್ತಾ ದಿನಾಂಕ: 05-04-2022 ರಂದು ಪಿರ್ಯಾದಿ ಮತ್ತು ಪಿರ್ಯಾದಿಯ ಇನ್ನೊಂದು ಮಗಳು ಎಂದಿನಂತೆ ಕೆಲಸಕ್ಕೆ ಹೋಗಿದ್ದ ವೇಳೆಯಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಮೃತಳು ಬೆಳಿಗ್ಗೆ 09-00 ಗಂಟೆಯಿಂದ ಸಂಜೆ 17-00 ಗಂಟೆಯ ನಡುವಿನ ಅವದಿಯಲ್ಲಿ ತನ್ನ ವಾಸದ ಮನೆಯ ಹಿಂದಿನ ಪಾತ್ರೆ ತೊಳೆಯುವ ಕೋಣೆಯಲ್ಲಿ ಬಟ್ಟೆ ಒಣಗಿಸಲು ಬಳಸುತ್ತಿದ್ದ ನೈಲಾನ್ ಹಗ್ಗದಿಂದ ಮನೆಯ ಮೇಲ್ಛಾವಣಿಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಇದರ ಹೊರತಾಗಿ ಮೃತಳ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗಿರಿಜಾ ಕೋಂ. ಗುತ್ಯಪ್ಪ ತಳವಾರ, ಪ್ರಾಯ-52 ವರ್ಷ, ವೃತ್ತಿ-ಮಾರಿಕಾಂಬಾ ಹೈಸ್ಕೂಲ್ ಜವಾನ ಕೆಲಸ, ಸಾ|| ಪಿ.ಡಬ್ಲ್ಯೂ.ಡಿ ವಸತಿ ಗೃಹ, ಯಲ್ಲಾಪುರ ರಸ್ತೆ, ತಾ: ಶಿರಸಿ ರವರು ದಿನಾಂಕ: 05-04-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 19-04-2022 07:18 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080