ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮನ್ಸೂರ್ ಮಹಮ್ಮದ್, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ನಾಮಕಲ್, ತಮಿಳನಾಡು ರಾಜ್ಯ (ಲಾರಿ ನಂ: ಕೆ.ಎ-01/ಎ.ಎಚ್-0558 ನೇದರ ಚಾಲಕ). ಈತನು ದಿನಾಂಕ: 04-08-2021 ರಂದು ಮಧ್ಯಾಹ್ನ ಸುಮಾರು 14-30 ಗಂಟೆಗೆ ತನ್ನ ಲಾರಿ ನಂ: ಕೆ.ಎ-01/ಎ.ಎಚ್-0558 ನೇದನ್ನು ಸುಂಕಸಾಳದ ಗ್ರಾಮದ ಹೈಸ್ಕೂಲ್ ಹತ್ತಿರದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ, ರಾಮನಗುಳಿ ಕಡೆಯಿಂದ ಸುಂಕಸಾಳದ ಕಡೆಗೆ ಬರುತ್ತಿದ್ದ ಗಾಯಾಳು ಶ್ರೀ ಚಂದ್ರಹಾಸ ತಂದೆ ಜೋಗಿ ನಾಯಕ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮೂಲೆಮನೆ, ತಾ: ಅಂಕೋಲಾ ರವರ ಮೋಟಾರ್ ಸೈಕಲ್ ನಂ: ಕೆ.ಎ-31/ಎಲ್-1442 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಚಂದ್ರಹಾಸ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಜೋಗಿ ನಾಯಕ, ಪ್ರಾಯ-38 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮೂಲೆಮನೆ, ತಾ: ಅಂಕೋಲಾ ರವರು ದಿನಾಂಕ: 05-08-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 140/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪೈರೋಜ್ ಅಹಮ್ಮದ್ ಬೆಟಗೇರಿ, ಪ್ರಾಯ-30 ವರ್ಷ, ಸಾ|| ಉಳ್ಳಾಗಡ್ಡಿ ಓಣಿ, ಧಾರವಾಡ (ಬೆಂಜ್ ಲಾರಿ ನಂ: ಕೆ.ಎ-25/ಎ.ಬಿ-2990 ನೇದರ ಚಾಲಕ). ಪಿರ್ಯಾದಿಯು ಈಚರ್ ಕಂಪನಿಯ ಕಂಟೇನರ್ ಲಾರಿ ನಂ: ಕೆ.ಎ-41/ಡಿ-1349 ನೇದನ್ನು ಹೊಂದಿದ್ದು, ತಾನೇ ಲಾರಿಯನ್ನು ಚಲಾಯಿಸುತ್ತಿದ್ದು, ಈ ಲಾರಿಗೆ ನಿಂಗರಾಜು ನಾರಾಯಣ ಗೌಡ, ಸಾ|| ಹೆಗ್ಗನಳ್ಳಿ ಕ್ರಾಸ್, ಲಕ್ಷ್ಮಣ ನಗರ, ಬೆಂಗಳೂರು ಇವರು ಕ್ಲೀನರ್ ಅಂತಾ ಕೆಲಸ ಮಾಡುತ್ತಾರೆ. ದಿನಾಂಕ: 04-08-2021 ರಂದು ಗೋವಾ ರಾಜ್ಯದ ಪೋಂಡಾದಲ್ಲಿ ತನ್ನ ಈಚರ್ ಕಂಪನಿಯ ಕಂಟೇನರ್ ಲಾರಿ ನಂ: ಕೆ.ಎ-41/ಡಿ-1349 ನೇದರಲ್ಲಿ ಕ್ರಾಂಪ್ಟನ್ ಗ್ರೀವ್ಸ್ ಕಂಪನಿಯ ಫ್ಯಾನ್ ಗಳನ್ನು ಲೋಡ್ ಮಾಡಿಕೊಂಡು ಬೆಂಗಳೂರಿಗೆ ಹೋಗಲು ರಾತ್ರಿ 07-45 ಗಂಟೆಗೆ ಪೋಂಡಾದಿಂದ ಹೊರಟಿದ್ದು, ಕಾರವಾರ, ಕುಮಟಾ, ಹೊನ್ನಾವರ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದೆವು. ವಾಹನವನ್ನು ಪಿರ್ಯಾದಿಯೇ ಚಲಾಯಿಸುತ್ತಿದ್ದು, ದಿನಾಂಕ: 04-08-2021 ರಂದು ರಾತ್ರಿ ತಾವು ಕುಮಟಾ ತಾಲೂಕಿನ ದುಂಡಕುಳಿ ಊರಿನ ಕನ್ನಡ ಶಾಲೆಯ ಹತ್ತಿರ ತಲುಪಿದಾಗ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಸಿಂಗಲ್ ರಸ್ತೆ ಹಾಗೂ ತಿರುವುನಿಂದ ಕೂಡಿದ್ದರೂ ಸಹ ತಮ್ಮ ಮುಂದಿನಿಂದ ಅಂದರೆ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಬೆಂಜ್ ಲಾರಿ ನಂ: ಕೆ.ಎ-25/ಎ.ಬಿ-2990 ನೇದರ ಚಾಲಕನಾದ ನಮೂದಿತ ಆರೋಪಿತನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ಸ್ಥಳದಲ್ಲಿ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹ ಲಾರಿಯ ವೇಗವನ್ನು ನಿಯಂತ್ರಿಸದೇ ನೇರವಾಗಿ ಚಲಾಯಿಸಿಕೊಂಡು ಬರುವುದನ್ನು ನೋಡಿ, ಪಿರ್ಯಾದಿಯು ತನ್ನ ಲಾರಿಯನ್ನು ಎಡಕ್ಕೆ ಚಲಾಯಿಸಿ ನಿಲ್ಲಿಸಿದ್ದು, ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ನಿಯಂತ್ರಣಕ್ಕೆ ತರದೇ ನೇರವಾಗಿ ಚಲಾಯಿಸಿ, ಪಿರ್ಯಾದಿಯ ಲಾರಿಯ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಿಂದ ಎರಡೂ ಲಾರಿಗಳು ಡ್ಯಾಮೇಜ್ ಆಗಿ ಜಖಂ ಆಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವಿಕುಮಾರ ಬಿ. ತಂದೆ ಬೈರಲಿಂಗಪ್ಪಾ, ಪ್ರಾಯ-41 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ನಂ: 336, 5 ನೇ ಮೇನ್, 2 ನೇ ಕ್ರಾಸ್, ಹೆಗ್ಗನಳ್ಳಿ ಕ್ರಾಸ್, ಲಕ್ಷ್ಮಣ ನಗರ, ಬೆಂಗಳೂರು ರವರು ದಿನಾಂಕ: 05-08-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿರೇಂದರ್ ಕುಮಾರ ತಂದೆ ಚೋಟೂ ಚೌಧರಿ, ಸಾ|| ಪೋಸ್ಟ್ ಸಿಹಾರಿ ಸರ್ಧಾ, ತಾ: ಮಹಾನಪುರ, ಜಿ: ಬಸ್ತಿ, ಉತ್ತರ ಪ್ರದೇಶ (ಕಂಟೇನರ್ ವಾಹನ ನಂ: ಎಮ್.ಎಚ್-46/ಬಿ.ಎಮ್-1113 ನೇದರ ಚಾಲಕ). ಈತನು ದಿನಾಂಕ: 05-08-2021 ರಂದು 14-30 ಗಂಟೆಯ ವೇಳೆಗೆ ತಾನು ಚಲಾಯಿಸುತ್ತಿದ್ದ ಕಂಟೇನರ್ ವಾಹನ ನಂ: ಎಮ್.ಎಚ್-46/ಬಿ.ಎಮ್-1113 ನೇದನ್ನು ಹೊನ್ನಾವರ ಕಡೆಯಿಂದ ಅಂಕೋಲಾ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಕುಮಟಾ ಪಟ್ಟಣದ ದಾಮೋದರ ಮೆಡಿಕಲ್ಸ್ ಎದುರಿಗೆ ಕಂಟೇನರ್ ವಾಹನವನ್ನು ನಿಷ್ಕಾಳಜಿಯಿಂದ ರಸ್ತೆಯ ಬಲಕ್ಕೆ ಚಲಾಯಿಸಿ, ಅದೇ ವೇಳೆಗೆ ಎದುರಿನಿಂದ ಅಂದರೆ ಮಾಸ್ತಿಕಟ್ಟೆ ಸರ್ಕಲ್ ಕಡೆಯಿಂದ ಗಿಬ್ ಸರ್ಕಲ್ ಕಡೆಗೆ ಪಿರ್ಯಾದಿಯವರು ಸವಾರಿ ಮಾಡಿಕೊಂಡು ಹೊರಟ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-4692 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಹಣೆಗೆ, ಎಡಗಾಲಿನ ಪಾದಕ್ಕೆ ಹಾಗೂ ಎಡಗಾಲಿನ ಮೊಣಗಂಟಿಗೆ ಸಾದಾ ಗಾಯನೋವು ಆಗಲು ಆರೋಪಿ ಕಂಟೇನರ್ ವಾಹನ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಬೀರಾ ಗೌಡಾ, ಪ್ರಾಯ-59 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ನೆಹರೂನಗರ, ತಾ: ಕುಮಟಾ ರವರು ದಿನಾಂಕ: 05-08-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 209/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಮಂಜುನಾಥ ತಂದೆ ನಾಗಪ್ಪ ಆಚಾರಿ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪಲೆ, ಹೆಬ್ಬಾನಕೇರಿ, ತಾ: ಹೊನ್ನಾವರ. ಪಿರ್ಯಾದಿಯವರ ಗಂಡನಾದ ಇವರು ದಿನಾಂಕ: 02-8-2021 ರಂದು ಮಧ್ಯಾಹ್ನ 16-00 ಗಂಟೆಗೆ ತಾನು ಧರ್ಮಸ್ಥಳಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವರು, ಈವರೆಗೆ ವಾಪಸ್ ಮನೆಗೆ ಬಾರದೇ, ತನ್ನ ಇರುವಿಕೆಯ ಬಗ್ಗೆ ಸಹ ತಿಳಿಸದೆ ಕಾಣೆಗಿದ್ದು, ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಾದೇವಿ ಕೋಂ. ಮಂಜುನಾಥ ಆಚಾರಿ, ಪ್ರಾಯ-45 ವರ್ಷ, ವೃತ್ತಿ-ಗೃಹಿಣಿ, ಸಾ|| ಉಪಲೆ, ಹೆಬ್ಬಾನಕೇರಿ, ತಾ: ಹೊನ್ನಾವರ ರವರು ದಿನಾಂಕ: 05-08-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ರಫಾಥನಾಜ್ ಸಾದುಲ್ಲಾ ಖಾನ್, ಪ್ರಾಯ-22 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಸ್ತಿಮಕ್ಕಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ. ಫಿರ್ಯಾದಿಯ ಮಗಳಾದ ಇವಳು ಬಸ್ತಿಮಕ್ಕಿಯಲ್ಲಿರುವ ಪಿರ್ಯಾದಿಯ ತಾಯಿ ಜಮಿಲ್ಲಾ ಹುಸೇನ್ ಶೇಖ್ ಇವಳೊಂದಿಗೆ ವಾಸವಾಗಿರುತ್ತಾಳೆ. ರಫಾಥನಾಜ್ ಇವಳು ದಿನಾಂಕ: 04-08-2021 ರಂದು ಮಧ್ಯಾಹ್ನ 02-00 ಗಂಟೆ ಸುಮಾರಿಗೆ ಪಿರ್ಯಾದಿಯ ತಾಯಿ ಹತ್ತಿರ ಪಿರ್ಯಾದಿಯ ಮನೆಗೆ ಹೋಗಿ ತಂದೆ ಸಾದುಲ್ಲಾ ಖಾನ್ ಇವರೊಂದಿಗೆ ಮುರ್ಡೇಶ್ವರದ ಕೆನರಾ ಬ್ಯಾಂಕಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು, ಪಿರ್ಯಾದಿಯ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ರಫಾಥನಾಜ್ ಇವಳಿಗೆ ಮುರ್ಡೇಶ್ವರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು ಹಾಗೂ ಸಂಬಂಧಿಕರ ಮನೆಗೂ ಕೂಡ ಫೋನ್ ಮಾಡಿ ಮಗಳ ಬಗ್ಗೆ ವಿಚಾರಿಸಿದ್ದು, ಪತ್ತೆಯಾಗದೇ ಇರುವುದರಿಂದ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಹಸೀನಾ ಕೋಂ. ಸಾದುಲ್ಲಾ ಖಾನ್, ಪ್ರಾಯ-44 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಸ್ತಿಮಕ್ಕಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 05-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುಜಯ್ಯ ತಂದೆ ಶಂಕರ ಪಂಗಡಗಾರ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಮಂಜ್ಜಳ್ಳಿ, ಹುತ್ಗಾರ, ತಾ: ಶಿರಸಿ. ಈತನು ದಿನಾಂಕ: 05-08-2021 ರಂದು 17-50 ಗಂಟೆಯ ಸುಮಾರಿಗೆ ಶಿರಸಿ ಶಹರದ ಹುಲೇಕಲ್ ರಸ್ತೆಯ ಹೊಸ ಬಸ್ ನಿಲ್ದಾಣದ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 1,120/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01, ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 05-08-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 104/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ವಿನೋದ ತಂದೆ ಈರಪ್ಪ ಹೊನ್ನಳ್ಳಿ, ಪ್ರಾಯ-22 ವರ್ಷ, ವೃತ್ತಿ-ಹೊಟೇಲಿನಲ್ಲಿ ಕೆಲಸ, ಸಾ|| ಹುನಗುಂದ, ತಾ: ಮುಂಡಗೋಡ. ಪಿರ್ಯಾದಿಯ ಮಗನಾದ ಈತನು ದಿನಾಂಕ: 01-08-2021 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಹುಬ್ಬಳ್ಳಿಯಲ್ಲಿ ಹೊಟೇಲ್ ಕೆಲಸಕ್ಕೆ ಹೊಗುತ್ತೇನೆ ಅಂತಾ ಹುನಗುಂದದಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೇಲಾಗಿ ಕಲಘಟಗಿ ಕಡೆಗೆ ಹೋದವನು, ಹುಬ್ಬಳ್ಳಿಯಲ್ಲಿ ಹೊಟೇಲ್ ಕೆಲಸಕ್ಕೆ ಹೋಗದೇ, ವಾಪಸ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾದವನ ಬಗ್ಗೆ ಆತನ ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿ ಆತನು ಈ ಹಿಂದೆ ಕೆಲಸ ಮಾಡಿದ ಹುಬ್ಬಳ್ಳಿಯಲ್ಲಿ ಹುಡಕಾಡಿದರೂ ಸಿಕ್ಕಿದ್ದು ಇರುವುದಿಲ್ಲ. ಸದ್ರಿ ಕಾಣೆಯಾದವ ತನ್ನ ಮಗನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಈರಪ್ಪ ತಂದೆ ರುದ್ರಪ್ಪ ಹೊನ್ನಳ್ಳಿ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹುನಗುಂದ, ತಾ: ಮುಂಡಗೋಡ ರವರು ದಿನಾಂಕ: 05-08-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-08-2021

at 00:00 hrs to 24:00 hrs

 

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದಾಮೋದರ ತಂದೆ ನಾರಾಯಣ ಗೌಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆರವಟ್ಟಾ, ತಾ: ಕುಮಟಾ. ಈತನು ದಿನಾಂಕ: 05-08-2021 ರಂದು ಮಧ್ಯಾಹ್ನ 13-45 ಗಂಟೆಯ ಸುಮಾರಿಗೆ ಗೋಕರ್ಣದ ಕೋಟಿತೀರ್ಥದ ನೀರಿನಲ್ಲಿ ಈಜಾಡುತ್ತಿದ್ದವನು, ಈಜಾಡಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟು ಮಧ್ಯಾಹ್ನ 15-45 ಗಂಟೆಗೆ ಶವವಾಗಿ ಸಿಕ್ಕಿರುತ್ತಾನೆಯೇ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ನಾಗಪ್ಪ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಹೆರವಟ್ಟಾ, ತಾ: ಕುಮಟಾ ರವರು ದಿನಾಂಕ: 05-08-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 06-08-2021 04:15 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080