ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 05-12-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 180/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ತಿಮ್ಮಪ್ಪ ತಂದೆ ಮಾನಪ್ಪ ಹಲಕುರ್ಕಿ, ಸಾ|| ತಿಮ್ಮಾಪುರ, ತಾ: ಬಾದಾಮಿ, ಜಿ: ಬಾಗಲಕೋಟೆ (ಬೊಲೆರೋ ಪಿಕ್‍ಅಪ್ ವಾಹನ ನಂ: ಕೆ.ಎ-37/ಬಿ-3558 ನೇದರ ಚಾಲಕ). ಈತನು ದಿನಾಂಕ: 04-12-2021 ರಂದು ಸಂಜೆ 16-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹೊಸಕಂಬಿ ಕ್ರಾಸ್‍ನಿಂದ ಹಿಲ್ಲೂರು ಕಡೆಗೆ ಹಾಯ್ದಿರುವ ಡಾಂಬರ್ ರಸ್ತೆಯಲ್ಲಿ ಹೊಸಕಂಬಿ ಬ್ರಿಡ್ಜ್ ಹತ್ತಿರ ತನ್ನ ಬೊಲೆರೋ ಪಿಕ್‍ಅಪ್ ವಾಹನ ನಂ: ಕೆ.ಎ-37/ಬಿ-3558 ನೇದನ್ನು ಹಿಲ್ಲೂರು ಕಡೆಯಿಂದ ಹೊಸಕಂಬಿ ಕ್ರಾಸ್ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಕ್ಕೆ ಬಂದವನು, ಎದುರಿನಿಂದ ಅಂದರೆ ಹೊಸಕಂಬಿ ಕ್ರಾಸಿನಿಂದ ಹಿಲ್ಲೂರು ಕಡೆಗೆ ತನ್ನ ಬದಿಯಿಂದ ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಎಸ್-5899 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಆಶಿಕ್ ತಂದೆ ಅಶೋಕ ನಾಯ್ಕ ಇವನ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಆಶಿಕ್ ನಾಯ್ಕ, ಇವನಿಗೆ ಬಲಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುರುಪ್ರೀತ ತಂದೆ ರತ್ನಾಕರ ಕೆ. ಎಸ್, ಪ್ರಾಯ-24 ವರ್ಷ, ವೃತ್ತಿ-ಇಂಜಿನಿಯರ್, ಸಾ|| ಮೇರಿ ಹಿಲ್, ಮನೆ ನಂ: 2-103/20, ಕೊಂಚಾಡಿ ಪೋಸ್ಟ್, ಮಂಗಳೂರು ರವರು ದಿನಾಂಕ: 05-12-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 150/2021, ಕಲಂ: 4, 5, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 11(1)&(D) PREVENTION OF CRUELTY TO ANIMALS ACT-1960 ಹಾಗೂ ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಇಬ್ಬರು ಅಪರಿಚಿತ ಕಳ್ಳರಾಗಿದ್ದು, ಆರೋಪಿತರ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 04-11-2021 ರಂದು 23-00 ಗಂಟೆಯ ಸುಮಾರಿಗೆ ಭಟ್ಕಳ ತಾಲೂಕಿನ ಮುಂಡಳ್ಳಿ ಬ್ರಿಡ್ಜ್ ಹತ್ತಿರ ಮೇಯಲು ಬಿಟ್ಟ ಪಿರ್ಯಾದಿಯವರ ಬಾಬ್ತು ಅ||ಕಿ|| 5,000/- ರೂಪಾಯಿ ಬೆಲೆಯ ಒಂದು ದನವನ್ನು ನಮೂದಿತ ಆರೋಪಿತರು ಕಳ್ಳತನ ಮಾಡಿ, ದನವನ್ನು ಮೆಹೆಂದಿ ಬಣ್ಣದ ಓಮಿನಿ ವಾಹನದಲ್ಲಿ ತುಂಬಿಕೊಂಡು, ಅದನ್ನು ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕ ರೀತಿಯಲ್ಲಿ ಕಳ್ಳತನ ಮಾಡಿ ಒಯ್ಯುತ್ತಿರುವಾಗ ಪಿರ್ಯಾದಿ ಹಾಗೂ ಪಿರ್ಯಾದಿಯ ಪರಿಚಯದವರು ಅದನ್ನು ನೋಡಿ ಓಮಿನಿ ವಾಹನವನ್ನು ನಿಲ್ಲಿಸುವಂತೆ ಹಿಂಬಾಲಿಸಿದರೂ ಸಹ ಆರೋಪಿತರು ಓಮಿನಿ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹೇಂದ್ರ ತಂದೆ ಶನಿಯಾರ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರ, ಸಾ|| ನೀರಗದ್ದೆ, ಮುಂಡಳ್ಳಿ, ತಾ: ಭಟ್ಕಳ ರವರು ದಿನಾಂಕ: 05-12-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಜೋಯಿಡಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 42/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಮಹಾಲಿಂಗ ಬಂಡಿವಡ್ಡರ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಮಹಾಲಿಂಗಪುರ, ತಾ: ಮುಧೋಳ, ಜಿ: ಬಾಗಲಕೋಟೆ (ಟ್ರ್ಯಾಕ್ಸ್ ವಾಹನ ನಂ: ಕೆ.ಎ-28/ಬಿ-3892 ನೇದರ ಚಾಲಕ). ಈತನು ದಿನಾಂಕ: 05-12-2021 ರಂದು 14-45 ಗಂಟೆಯ ಸುಮಾರಿಗೆ ತನ್ನ ಟ್ರ್ಯಾಕ್ಸ್ ವಾಹನ ನಂ: ಕೆ.ಎ-28/ಬಿ-3892 ನೇದನ್ನು ಜೋಯಿಡಾ ಕಡೆಯಿಂದ ಗಣೇಶಗುಡಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕೊಡ್ಲಿ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಎದುರಿನಿಂದ ಚಲಾಯಿಸಿಕೊಂಡು ಬರುತ್ತಿದ್ದ ಸುನೀಲ್ ತಂದೆ ಶಿವಾನಂದ ಕಲಭಾವಿ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಮಮ್ಮಿಗಟ್ಟಿ, ತಾ&ಜಿ: ಧಾರವಾಡ, ಈತನ ಮೋಟಾರ್ ಸೈಕಲ್ ನಂ: ಕೆ.ಎ-25/ಎಚ್.ಸಿ-4374 ನೇದಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ, ಸುನೀಲ್ ತಂದೆ ಶಿವಾನಂದ ಕಲಭಾವಿ, ಈತನ ಬಲಗಾಲಿಗೆ ಹಾಗೂ ಬಲಗೈಗೆ ರಕ್ತಗಾಯ ಉಂಟು ಪಡಿಸಿ, ಸುನೀಲ್ ಈತನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ಗಾಯಾಳು ಅಮೋಘ ತಂದೆ ನರಸಾ ರೆಡ್ಡಿ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಮಾತೃಛಾಯಾ ನಿಲಯ, ಬಾಗಲೂರು ರಸ್ತೆ, ಬಾಗಲೂರು, ಯಲಹಂಕ, ಬೆಂಗಳೂರು, ಈತನಿಗೆ ಬಲಗಾಲಿಗೆ ಹಾಗೂ ಬಲಗೈಗೆ ರಕ್ತಗಾಯ ಉಂಟು ಪಡಿಸಿದ್ದಲ್ಲದೇ, ಎರಡು ವಾಹನಗಳನ್ನು ಜಖಂ ಪಡಿಸಿ, ಆರೋಪಿ ಚಾಲಕನು ತನಗೂ ಸಹ ಗಾಯನೋವುಂಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಯಶ್ವಂತರಾಜ್ ತಂದೆ ಮಾಹೇಶ್ವರ ತೊಗಲೇರಿ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಸೊನ್ನಾ, ತಾ: ಹಗರಿಬೊಮ್ಮನಹಳ್ಳಿ, ಜಿ: ವಿಜಯನಗರ ರವರು ದಿನಾಂಕ: 05-12-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 215/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಮುಬೀನಾ ಕೋಂ. ಅಬ್ದುಲ್ ಖಾದರ ಕಾರಡಗಿ, ಪ್ರಾಯ–36 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಇಸ್ಲಾಂ ಗಲ್ಲಿ, ತಾ: ಯಲ್ಲಾಪುರ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 02-12-2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿಯವರಿಗೆ ‘ತಾನು ಯಲ್ಲಾಪುರ ಮಾರ್ಕೆಟಿಗೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಮನೆಯಿಂದ ಹೋದವಳು, ಈವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಖಾದರ ತಂದೆ ಅಬ್ದುಲ್ ರೆಹಮಾನ್ ಕಾರಡಗಿ, ಪ್ರಾಯ–53 ವರ್ಷ, ವೃತ್ತಿ-ವ್ಯವಹಾರ, ಸಾ|| ಇಸ್ಲಾಂ ಗಲ್ಲಿ, ತಾ: ಯಲ್ಲಾಪುರ ರವರು ದಿನಾಂಕ: 05-12-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 117/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗೋಪಾಲ ಲುಮಾ ಮರಾಠಿ, ಪ್ರಾಯ-55 ವರ್ಷ, ವೃತ್ತಿ-ಕೊನೆ ಗೌಡ, ಸಾ|| ಸಂಪಕಾರ, ಬೆಣಗಾಂವ ಗ್ರಾಮ, ಪೋ: ದೇವನಳ್ಳಿ, ತಾ: ಶಿರಸಿ, 2]. ಮಂಜುನಾಥ ಶಿವಾ ಮರಾಠಿ, ಪ್ರಾಯ-29 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಲ್ಲಳ್ಳಿ ಗ್ರಾಮ, ಪೋ: ಮಂಜುಗುಣಿ, ತಾ: ಶಿರಸಿ, 3]. ಯಶವಂತ ರಾಮಾ ಮರಾಠಿ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಗೆಣಸುಗೋಡ, ದೇವನಳ್ಳಿ, ತಾ: ಶಿರಸಿ, 4]. ಗಣಪತಿ ರಾಮಾ ಮರಾಠಿ, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ದೇವನಳ್ಳಿ, ತಾ: ಶಿರಸಿ, 5]. ಚಂದ್ರಶೇಖರ ನಾಗಪ್ಪ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಸೆಮನೆ, ದ್ಯಾವನಮನೆ, ಪೋ: ಮುಂಡಗನಮನೆ, ತಾ: ಶಿರಸಿ, 6]. ಮಂಜುನಾಥ ತಿಮ್ಮಾ ಮರಾಠಿ, ಅಂದಾಜು ಪ್ರಾಯ-38 ವರ್ಷ, ಸಾ|| ದೇವನಳ್ಳಿ, ತಾ: ಶಿರಸಿ, 7]. ಹರಿಹರ ದೀಪು ಮರಾಠಿ, ಅಂದಾಜು ಪ್ರಾಯ-34 ವರ್ಷ, ಸಾ|| ದೇವನಳ್ಳಿ, ತಾ: ಶಿರಸಿ, 8]. ನಾಗರಾಜ ತಿಮ್ಮಾ ಬಡಗಿ, ಅಂದಾಜು ಪ್ರಾಯ-33 ವರ್ಷ, ಸಾ|| ದೇವನಳ್ಳಿ, ತಾ: ಶಿರಸಿ, 9]. ಮಂಜುನಾಥ ಮರಾಠಿ, ಅಂದಾಜು ಪ್ರಾಯ-30 ವರ್ಷ, ಸಾ|| ಸವಲೆ, ತಾ: ಶಿರಸಿ, 10]. ಕಮಲಾಕರ ಜಾನು ಮರಾಠಿ, ಅಂದಾಜು ಪ್ರಾಯ-30 ವರ್ಷ, ಸಾ|| ವಾಜಗದ್ದೆ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 05-12-2021 ರಂದು 13-00 ಗಂಟೆಗೆ ಶಿರಸಿ ತಾಲೂಕಿನ ದೇವನಳ್ಳಿ ಊರಿನ ನೀರಿನ ಟ್ಯಾಂಕ್ ಹತ್ತಿರದ ಅರಣ್ಯ ಪ್ರದೇಶದಲ್ಲಿ ಅದೃಷ್ಟದ ಆಟವಾದ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜೂಗಾರಾಟದ ಮೇಲೆ ತಮ್ಮ ಲಾಭಕ್ಕಾಗಿ ಹಣವನ್ನು ಪಂಥ ಕಟ್ಟಿ ಆಡುತ್ತಿದ್ದಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಜೂಗಾರಾಟದ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, ನಗದು ಹಣ 6,170/- ರೂಪಾಯಿ, ನೀಲಿ ಬಣ್ಣದ ಪ್ಲಾಸ್ಟಿಕ್-1, ಅ||ಕಿ|| 00.00/- ರೂಪಾಯಿ. ಇವುಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಈರಯ್ಯ ಡಿ. ಎನ್, ಪಿ.ಎಸ್.ಐ (ಕಾ&ಸು, ಸಂಚಾರ), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 05-12-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 161/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುನಾಫ್ ತಂದೆ ನನ್ನೇಸಾಬ್ ಶಿಗ್ಗಾಂವ, ಪ್ರಾಯ-63 ವರ್ಷ, ವೃತ್ತಿ-ಚಾಲಕ, ಸಾ|| ಲಕ್ಕೊಳ್ಳಿ, ತಾ: ಮುಂಡಗೋಡ (ಆಟೋ ರಿಕ್ಷಾ ನಂ: ಕೆ.ಎ-31/8699 ನೇದರ ಸವಾರ). ಈತನು ದಿನಾಂಕ: 30-11-2021 ರಂದು ಸಂಜೆ 19-00 ಗಂಟೆಗೆ ತಾನು ಸವಾರಿ ಮಾಡುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-31/8699 ನೇದನ್ನು ಮುಂಡಗೋಡ ಕಡೆಯಿಂದ ಲಕ್ಕೊಳ್ಳಿ ಗ್ರಾಮದ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಸವಾರಿ ಮಾಡಿಕೊಂಡು ಹೋಗುತ್ತಾ, ಲಕ್ಕೊಳ್ಳಿ ಗ್ರಾಮ ಹಾಗೂ ಲಕ್ಕೊಳ್ಳಿ ಕಾಸ್ ನಡುವಿನ ಡಾಂಬರ್ ರಸ್ತೆಯ ಮೇಲೆ ಕಲಕೇರಿಯಿಂದ ಮುಂಡಗೋಡಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ವಾಯ್-5857 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೊಟಾರ್ ಸೈಕಲ್ ಸವಾರನಿಗೆ ಬಲಗಾಲಿಗೆ ಹಾಗೂ ತಲೆಗೆ ಭಾರೀ ಗಾಯನೋವು ಆಗಿರುತ್ತದೆ ಹಾಗೂ ಸ್ವಯಂಕೃತ ಅಪಘಾತದಿಂದ ಆರೋಪಿ ಆಟೋರಿಕ್ಷಾ ಚಾಲಕನು ತನ್ನ ಬಲಗೈಗೆ ಸಾದಾ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ನಜೀರ್ ಅಹ್ಮದ್ ತಂದೆ ರಜಾಕಸಾಬ್ ಹಂಡಿ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಇಂದಿರಾ ನಗರ, ತಾ: ಮುಂಡಗೋಡ ರವರು ದಿನಾಂಕ: 05-12-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 05-12-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 60/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಲಕ್ಷ್ಮೀ ಗಂಡ ಸಂತೋಷ ಗೌಡ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಡಗೇರಿ, ತಾ: ಅಂಕೋಲಾ, ಹಾಲಿ ಸಾ|| ತಾಳೆಬೈಲ್, ಬೆಳಂಬಾರ, ತಾ: ಅಂಕೋಲಾ. ಪಿರ್ಯಾದಿಯ ತಾಯಿಯಾದ ಇವಳು ಸರಾಯಿ ಕುಡಿಯುವ ಚಟದವಳಾಗಿದ್ದು, ಆಗಾಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದವಳು, ದಿನಾಂಕ: 04-12-2021 ರಂದು ಮಧ್ಯಾಹ್ನ ತನ್ನ ತವರು ಮನೆಯಾದ ಬೆಳಂಬಾರದ ತಾಳೆಬೈಲಿನಲ್ಲಿರುವಾಗ ಒಮ್ಮೆಲೇ ವಾಂತಿ ಮಾಡಿಕೊಂಡು ತುಂಬಾ ಅಸ್ವಸ್ಥಳಾದವಳಿಗೆ ಸಾಯಂಕಾಲ ಅಂಕೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದವಳಿಗೆ, ಅಲ್ಲಿನ ವೈದ್ಯರು ಪರೀಕ್ಷಿಸಿ, ಯಾವುದೋ ವಿಷ ಪದಾರ್ಥ ಸೇವಿಸಿರಬಹುದು ಅಂತಾ ಸಂಶಯ ವ್ಯಕ್ತ ಪಡಿಸಿದ್ದು, ನಂತರ ಅಂಕೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ರಾತ್ರಿ 21-05 ಗಂಟೆಗೆ ಮೃತಪಟ್ಟಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುರೇಂದ್ರ ತಂದೆ ಸಂತೋಷ ಗೌಡ, ಪ್ರಾಯ-24 ವರ್ಷ, ವೃತ್ತಿ-ಉಡುಪಿಯಲ್ಲಿ ಕೆಲಸ, ಸಾ|| ಬಡಗೇರಿ, ತಾ: ಅಂಕೋಲಾ, ಹಾಲಿ ಸಾ|| ತಾಳೆಬೈಲ್, ಬೆಳಂಬಾರ, ತಾ: ಅಂಕೋಲಾ ರವರು ದಿನಾಂಕ: 05-12-2021 ರಂದು 06-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======