ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-02-2021

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 05/2021, ಕಲಂ: 65, 66 ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಅಣುಶಕ್ತಿ ಕೇಂದ್ರಿಯ ವಿದ್ಯಾಲಯ, ಕೈಗಾ ರವರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ G-Suite ಆನಲೈನ್ ಅಪ್ಲಿಕೇಶನ್ ಮುಖಾಂತರ ಆನಲೈನ್ ತರಗತಿಗಳನ್ನು ನಡೆಸುತ್ತಿದ್ದು, ದಿನಾಂಕ: 31-10-2020 ರಿಂದ 01-11-2020 ರ ಮಧ್ಯಾವಧಿಯಲ್ಲಿ ನಮೂದಿತ ಯಾರೋ ಆರೋಪಿತರು ಅವರ ಅಧಿಕೃತ ಡೊಮೆನ್ ಆದ http://www.aecskaiga.in ನೇದರಲ್ಲಿ ಎಕ್ಸಿಸ್ ಆಗಿ ಅವರ ಸ್ಕೂಲಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಡಿಲಿಟ್ ಮಾಡಿ, ಆನಲೈನ್ ತರಗತಿ ನಡೆಸುತ್ತಿದ್ದ ಶಾಲೆಯ ಆಡಳಿತ ಮಂಡಳಿಗೆ ತೊಂದರೆಯನ್ನುಂಟು ಮಾಡಿರುವ ಬಗ್ಗೆ ಪಿರ್ಯಾದಿ ಶ್ರೀ ಕೆ. ರಾಮಚಂದ್ರನ್, ಪ್ರಾಂಶುಪಾಲರು, ಅಣುಶಕ್ತಿ ಕೇಂದ್ರಿಯ ವಿದ್ಯಾಲಯ, ಕೈಗಾ, ಕಾರವಾರ ರವರು ದಿನಾಂಕ: 05-02-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಗಣಪತಿ ಅಂಬಿಗ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರೈಲ್ವೆ ಬ್ರಿಡ್ಜ್ ಹತ್ತಿರ, ಶಿರೂರು, ತಾ: ಅಂಕೋಲಾ. ನಮೂದಿತ ಆರೋಪಿತನು ದಿನಾಂಕ: 05-02-2021 ರಂದು 13-15 ಗಂಟೆಯ ಸುಮಾರಿಗೆ ಅಂಕೋಲಾ ಶಹರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಕ್ರಾಸಿನ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ತನ್ನ ಲಾಭಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟದ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ನಗದು 1,610/- ರೂಪಾಯಿ ಹಾಗೂ ಇತರೆ ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-01, 2). ಖಾಲಿ ಚೀಟಿಗಳು-03, 3). ಬಾಲ್ ಪೆನ್-01 ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕೃಷ್ಣಾನಂದ ನಾಯ್ಕ, ಪೊಲೀಸ್ ನಿರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 05-02-2021 ರಂದು 15-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಲಕ್ಷ್ಮಣ ಆಗೇರ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರೂರು, ತಾ: ಅಂಕೋಲಾ. ನಮೂದಿತ ಆರೋಪಿತನು ದಿನಾಂಕ: 05-02-2021 ರಂದು 13-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬೆಳಸೆ ಬಸ್ ನಿಲ್ದಾಣದ ಎದುರು ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಲಾಭಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟದ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ನಗದು 1,160/- ರೂಪಾಯಿ ಹಾಗೂ ಇತರೆ ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-01, 2). ಖಾಲಿ ಚೀಟಿಗಳು-06, 3). ಬಾಲ್ ಪೆನ್-01 ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂಪತ್ ಇ. ಸಿ, ಪಿ.ಎಸ್.ಐ, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 05-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 8(C), 20(B)(II)(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ರಾರ್ ತಂದೆ ಇಬ್ರಾಹಿಂ ಶೇಖ್, ಪ್ರಾಯ-26 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಸುಹೇಲ್ ಮಂಜಿಲ್, 1 ನೇ ಕ್ರಾಸ್, ಮೈದಿನ್ ಸ್ಟ್ರೀಟ್, ಮದೀನಾ ಕಾಲೋನಿ, ತಾ: ಭಟ್ಕಳ, 2]. ಮೊಹಮ್ಮದ್ ಸಲಾಂ ತಂದೆ ಇಸ್ಮಾಯಿಲ್ ಮೂಸಾ, ಪ್ರಾಯ-22 ವರ್ಷ, ಸಾ|| ಟೊಂಕಾ-2, ಕಿಜಾರ್ ಮಸೀದಿ ಹತ್ತಿರ, ಕಾಸರಕೋಡ, ತಾ: ಹೊನ್ನಾವರ, 3]. ಸಮೀರ್ ತಂದೆ ಮಹಮ್ಮದ್ ಅಲಿ ಪಂಡಿತ, ಪ್ರಾಯ-23 ವರ್ಷ, ಸಾ|| ಟೊಂಕಾ ಕ್ರಾಸ್, ತಾ: ಹೊನ್ನಾವರ. ನಮೂದಿತ ಆರೋಪಿತರು ದಿನಾಂಕ: 05-02-2021 ರಂದು ರಾತ್ರಿ 21-05 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಕಾಸರಕೋಡ, ಟೊಂಕಾದ ಕಿಜಾರ್ ಮಸೀದಿ ಹತ್ತಿರ ಶರಾವತಿ ನದಿ ತೀರದ ಬಳಿ ಯಾವುದೇ ಪಾಸ್ ಯಾ ಪರ್ಮಿಟ್ ಹೊಂದದೇ ಅನಧೀಕೃತವಾಗಿ 500 ಗ್ರಾಂ ತೂಕದ ಸುಮಾರು 10,000/- ರೂಪಾಯಿ ಮೌಲ್ಯದ 30 ಗಾಂಜಾ ಮಾದಕ ವಸ್ತು ಇರುವ ಪ್ಯಾಕೆಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದು, ದಾಳಿಯ ವೇಳೆ ಆರೋಪಿ 1 ನೇಯವನು ಕಪ್ಪು ಬಣ್ಣದ REDMI ಕಂಪನಿಯ ಅಂಡ್ರಾಯ್ಡ್ ಮೊಬೈಲ್-1, ಅ||ಕಿ|| 100/- ರೂಪಾಯಿ, ನಗದು ಹಣ 1,400/- ರೂಪಾಯಿ, ಗಾಂಜಾ ಇರುವ ಪ್ಯಾಕೆಟ್ ಗಳು-30, ಒಟ್ಟೂ 500 ಗ್ರಾಂ ಇರುತ್ತದೆ. ಅ||ಕಿ|| 10,000/- ರೂಪಾಯಿ, ಸಣ್ಣ ಬಿಳಿ ಬಣ್ಣದ SF-400A ಅಂತಾ ಬರೆದ ವೇಯಿಂಗ್ ಮಷೀನ್-1, ಅ||ಕಿ|| 100/- ರೂಪಾಯಿ, ಕೆಂಪು ಬಣ್ಣದ ಬಟ್ಟೆ ಕೈಚೀಲ-1, ಅ||ಕಿ|| 00.00/- ರೂಪಾಯಿ ಮತ್ತು ಗಾಂಜಾ ಮಾರಾಟ ಮಾಡಲು ಹೋಗಲು ಬಳಸಿದ ನೋಂದಣಿ ಸಂಖ್ಯೆ ಇರದ TVS N-TORQ ಸ್ಕೂಟರ್–1 (ಇಂಜಿನ್ ನಂ: BG7NK2X12823 ಚಾಸಿಸ್ ನಂ: MD626A671K2N32129), ಅ||ಕಿ|| 25,000/- ರೂಪಾಯಿ. ಇವುಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ಮತ್ತು 3 ನೇಯವರು ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಕುಮಾರ ಜಿ. ಎಲ್, ಪಿ.ಎಸ್.ಐ (ಕಾ&ಸು-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 05-02-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 143, 147, 353, 332, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿನಾಯಕ ತಂದೆ ಪಾಂಡುರಂಗ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಕೆ.ಬಿ ರೋಡ್, ಚೌಥಣಿ, ತಾ: ಭಟ್ಕಳ, 2]. ಶಿವಾನಂದ ತಂದೆ ಸತೀಶ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ||  ಕೆ.ಬಿ ರೋಡ್, ಚೌಥಣಿ, ತಾ: ಭಟ್ಕಳ, 3]. ಸತೀಶ ತಂದೆ ಸಣ್ಣಯ್ಯಾ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ ಕೆಲಸ, ಸಾ|| ನಾಯ್ಕರ ಮನೆ, ಕೆ.ಬಿ ರೋಡ್, ಚೌಥಣಿ, ತಾ: ಭಟ್ಕಳ, 4]. ರಾಘವೇಂದ್ರ ತಂದೆ ಮಾರುತಿ ನಾಯ್ಕ, ಪ್ರಾಯ-32 ವರ್ಷ, ಸಾ||  ಹಸರೊಳ್ಳಿ, ಹಾಡುವಳ್ಳಿ, ತಾ: ಭಟ್ಕಳ, 5]. ಕೃಷ್ಣಾ ತಂದೆ ಪಾಂಡುರಂಗ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಇಲೆಕ್ಟ್ರೀಷಿಯನ್ ಕೆಲಸ, ಸಾ|| ಕೆ.ಬಿ ರೋಡ್, ಚೌಥಣಿ, ತಾ: ಭಟ್ಕಳ. ದಿನಾಂಕ: 05-02-2021 ರಂದು ರಾತ್ರಿ 03-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಕುದುರೆ ಬೀರಪ್ಪ ದೇವಸ್ಥಾನದ ಹತ್ತಿರ ರಾತ್ರಿ ಗಸ್ತು ಕರ್ತವ್ಯದ ಮೇಲಿದ್ದ ಪಿರ್ಯಾದಿಯವರು ನಮೂದಿತ ಆರೋಪಿತರಿಗೆ ‘ರಾತ್ರಿ ಕಾಲಕ್ಕೆ ಇಲ್ಲಿ ಯಾಕೆ ನಿಂತುಕೊಂಡಿದ್ದಿರಿ? ಮನೆಗೆ ಹೋಗಿ’ ಅಂತಾ ಹೇಳಿದಾಗ ಆರೋಪಿತರು ‘ತಾವು ಹೋಗುವುದಿಲ್ಲ, ಇಲ್ಲಿಯೇ ಇರುತ್ತೇವೆ. ಅದನ್ನು ಕೇಳುವವನು ನೀನು ಯಾರು?’ ಅಂತಾ ಹೇಳಿದರು. ಆಗ ಪಿರ್ಯಾದಿಯವರು ‘ತಾವು ಪೊಲೀಸರು ಇದ್ದು, ರಾತ್ರಿ ಡ್ಯೂಟಿಗೆ ಬಂದಿರುತ್ತೇವೆ’ ಅಂತಾ ಹೇಳಿದಾಗ ಆರೋಪಿತರು ‘ನೀವು ಏನು ಬೇಕಾದರೂ ಮಾಡಿಕೊಳ್ಳಿ, ನೀವು ಪೊಲೀಸರದು ಅತೀ ಆಯಿತು’ ಅಂತಾ ಹೇಳುತ್ತಾ ಗುಂಪು ಕೂಡಿ ಗೈರ್ ಕಾಯ್ದೆಶೀರ್ ಮಂಡಳಿಯಾಗಿ ‘ತಾವು ಇಲ್ಲಿಯೇ ಇರುತ್ತೇವೆ, ಇಲ್ಲಿಂದ ಹೋಗುವುದಿಲ್ಲ. ನಿಮ್ಮಿಂದ ತಮಗೆ ಏನು ಮಾಡಲು ಸಾಧ್ಯವಿಲ್ಲ. ತಮಗೆ ಹೊಡೆಯುತ್ತೀರಾ? ಹೊಡೆ ಬನ್ನಿ ನೋಡುವ, ಈ ಪೊಲೀಸ್ ಸೂಳೆ ಮಕ್ಕಳಿಗೆ ಇವತ್ತು ಬಿಡುವುದು ಬೇಡಾ, ತಾವು ಏನು ಅಂತಾ ಇವರಿಗೆ ತೋರಿಸುವಾ’ ಅಂತಾ ಹೇಳುತ್ತಾ ಮೂವರು ಆರೋಪಿತರು ಪಿರ್ಯಾದಿಗೆ ಹಿಂಬದಿಯಿಂದ ಹಿಡಿದುಕೊಂಡಿದ್ದು. ಇಬ್ಬರು ಆರೋಪಿತರು ಕೈ ಮುಷ್ಠಿಯಿಂದ ಪಿರ್ಯಾದಿಯವರ ಮೈ ಮತ್ತು ಮುಖದ ಮೇಲೆ ಹಾಗೂ ಕಟ್ಟಿಗೆಯ ದೊಣ್ಣೆಯಿಂದ ತೊಡೆಯ ಮೇಲೆ ಹೊಡೆದು ಹಲ್ಲೆ ಮಾಡಿ, ‘ಇವತ್ತು ಇಷ್ಟಕ್ಕೆ ಬಿಟ್ಟಿದ್ದೇವೆ. ಮತ್ತೊಂದು ದಿವಸ ಯಾರಾದರೂ ತಮ್ಮನ್ನು ಕೇಳಿದರೆ ಇದೇ ರೀತಿ ಮತ್ತೆ ಹೊಡೆಯುತ್ತೇವೆ’ ಅಂತಾ ಧಮಕಿ ಹಾಕಿ ಪಿರ್ಯಾದಿಯವರ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಪಿರ್ಯಾದಿ ಶ್ರೀ ಸಂದೀಪ ತಂದೆ ವೆಂಕಟ್ರಮಣ ಪಟಗಾರ (ಸಿಪಿಸಿ-715), ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 05-02-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಸಮದ್ ತಂದೆ ಮೊಹಮ್ಮದ್ ಸಹೀಲ್ ಅಸ್ಕೇರಿ, ಪ್ರಾಯ-35 ವರ್ಷ, ಸಾ|| ಉಸ್ಮಾನ ನಗರ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ವಿ-2994 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 26-01-2021 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ನಿಶಾಂತ ಆಸ್ಪತ್ರೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-2994 ನೇದನ್ನು ಭಟ್ಕಳದ ಮುಟ್ಟಳ್ಳಿ ಕಡೆಯಿಂದ ಭಟ್ಕಳ ಶಹರದ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ನಿರ್ಲಕ್ಷ್ಯತನದಿಂದ ಒಮ್ಮೆಲೆ ಮುಖ್ಯ ರಸ್ತೆಗೆ ಚಲಾಯಿಸಿ ಭಟ್ಕಳದ ಶಿರಾಲಿ ಕಡೆಯಿಂದ ಸೋಡಿಗದ್ದೆ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಯು-4530 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ವಿಠ್ಠಲ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಸಿವಿಲ್ ಗುತ್ತಿಗೆದಾರ, ಸಾ|| ತೋಟದ ಮನೆ, ಮುಲ್ಲಿಗದ್ದೆ, ಮಾಲಹೊಂಡ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 05-02-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜಟ್ಟಿ ತಂದೆ ಹನುಮ ಮುಕ್ರಿ. ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ||  ಹುತ್ಗಾರ, ಪೋ: ಹುತ್ಗಾರ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 05-02-2021 ರಂದು 11-20 ಗಂಟೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹುತ್ಗಾರ ಬಸ್ ನಿಲ್ದಾಣದ ಎದರುಗಡೆಯ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಕೂಗಿ ಕರೆದು ಓ.ಸಿ ಜುಗಾರಾಟದ ಅಂಕೆಗಳ ಮೇಲೆ ಹಣ ಪಂಥ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಬಂದ ಜನರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದು ಕೊಡುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 920/- ರೂಪಾಯಿ, 2). ಬಾಲ್ ಪೆನ್-1, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 4). ಚೀಟಿ ಬರೆದು ಕೊಡಲು ಕಟ್ ಮಾಡಿ ಇಟ್ಟುಕೊಂಡಿದ್ದ 5 ಸಣ್ಣ-ಸಣ್ಣ ಚೀಟಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಂಜಾನಾಯ್ಕ್ ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 05-02-2021 ರಂದು 13-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 26-01-2021 ರಂದು 21-00 ಗಂಟೆಯಿಂದ ದಿನಾಂಕ: 27-01-2021 ರಂದು ಬೆಳಿಗ್ಗೆ 10-05 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಆಸ್ಪತ್ರೆಯ ಹಿಂದಿನ ಗ್ರಿಲ್ ಗೇಟ್ ತೆಗೆದು ಆಸ್ಪತ್ರೆಯ ಒಳಗೆ ಪ್ರವೇಶಿಸಿ, ಫಾರ್ಮಸಿ ಮತ್ತು ಲ್ಯಾಬ್ ಕೋಣೆಯಲ್ಲಿರುವ 80,000/- ರೂಪಾಯಿ ಬೆಲೆಬಾಳುವ ಎರಡು ಕಂಪ್ಯೂಟರ್ ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಎಂಮ್ ಓ. ಕ್ಷೇವಿಯರ್, ಪ್ರಾಯ-78 ವರ್ಷ, ವೃತ್ತಿ-ವೈದ್ಯರು, ಸಾ|| ಮಳಗಿ, ತಾ: ಮುಂಡಗೋಡ ರವರು ದಿನಾಂಕ: 05-02-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 279, 337, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಳಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ಬಾಬ್ತು ತನ್ನ ವಾಹನವನ್ನು ದಿನಾಂಕ: 04-02-2021 ರಂದು ರಾತ್ರಿ 10-10 ಗಂಟೆಗೆ ಕಾವಲವಾಡ ಬದಿಯಿಂದ ಹಳಿಯಾಳ ಬದಿಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಬೆಳವಟಿಗಿ ಬದಿಯಿಂದ ಕಾವಲವಾಡ ಬದಿಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಎಮ್.ಎಚ್-04/ಡಿ.ವಿ-2433 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಚಾಲಕನಿಗೆ ಸ್ಥಳದಲ್ಲಿಯೇ ಮರಣವನ್ನುಂಟು ಮಾಡಿ, ಹಿಂಬದಿಯ ಸವಾರನಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ ವಾಹನವನ್ನು ಜಖಂಗೊಳಿಸಿದ್ದಲ್ಲದೇ, ಅಪಘಾತ ಪಡಿಸಿದ ಆರೋಪಿ ಚಾಲಕನು ಸ್ಥಳದಲ್ಲಿ ನಿಲ್ಲದೇ ತನ್ನ ವಾಹವನ್ನು ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ದತ್ತಾ ತಂದೆ ಕಠಾಳು ಗೂಕಸೆ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪಿಂಫಳಗಾಂವ, ಕಾಜಳ್ಳಿ, ತಾ: ಜಿಂಟೂರ, ಜಿ: ಪರಭನಿ, ಮಹಾರಾಷ್ಟ್ರ ರಾಜ್ಯ ರವರು ದಿನಾಂಕ: 05-02-2021 ರಂದು 02-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ಶೇಖರಗೌಡ ಸುಂಕದ, ಪ್ರಾಯ-59 ವರ್ಷ, ವ್ಲತ್ತಿ-ಬಿ.ಎಸ್.ಎನ್.ಎಲ್ ನೌಕರ, ಸಾ|| ಬಿ.ಎಸ್.ಎನ್.ಎಲ್ ಕ್ವಾರ್ಟರ್ಸ್, ದಾಂಡೇಲಿ (ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-65/ಜೆ-4224 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 23-01-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-65/ಜೆ-4224 ನೇದನ್ನು ಸವಾರಿ ಮಾಡಿಕೊಂಡು ದಾಂಡೇಲಿ-ಗಣೇಶಗುಡಿ ರಾಜ್ಯ ರಸ್ತೆಯಲ್ಲಿ ದಾಂಡೇಲಿಯಿಂದ ಗಣೇಶಗುಡಿಗೆ ಹೋಗುತ್ತಿರುವಾಗ ಅವೇಡಾ ಗ್ರಾಮದ ಹತ್ತಿರ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕಿಡ್ ಆಗಿ ಬಿದ್ದು, ಸ್ವಯಂಕೃತವಾಗಿ ಅಪಘಾತ ಪಡಿಸಿಕೊಂಡು ತನ್ನ ಬಲಗಾಲು ಮರಿದು ಕೈಗೆ ಪೆಟ್ಟಾಗಿರುವ ಬಗ್ಗೆ ಪಿರ್ಯಾದಿ ಕುಮಾರ: ಸಂಜಯ ತಂದೆ ಮಾರುತಿ ಸುಂಕದ, ಪ್ರಾಯ-23 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಬಿ.ಎಸ್.ಎನ್.ಎಲ್ ಕ್ವಾರ್ಟರ್ಸ್, ದಾಂಡೇಲಿ ರವರು ದಿನಾಂಕ: 05-02-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-02-2021

at 00:00 hrs to 24:00 hrs

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಭವಾನಿ ಕೋಂ. ರಾಘವೇಂದ್ರ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಗೃಹಿಣಿ, ಸಾ|| ಫಾರೆಸ್ಟ್ ಕ್ವಾರ್ಟರ್ಸ್, ಹಳೇ ದಾಂಡೇಲಿ, ದಾಂಡೇಲಿ. ಸುದ್ದಿದಾರರ ಮಗಳಾದ ಇವಳು ಮದುವೆಯಾಗಿ 7 ತಿಂಗಳಾಗಿದ್ದು, ಕಳೆದ 2 ತಿಂಗಳ ಹಿಂದೆ ಮೃತಳಿಗೆ ಗರ್ಭಪಾತವಾಗಿದ್ದು, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನ ನೊಂದು ದಿನಾಂಕ: 05-02-2021 ರಂದು ಬೆಳಿಗ್ಗೆ 11-00 ಗಂಟೆಯಿಂದ 11-30 ಗಂಟೆಯ ನಡುವಿನ ಅವಧಿಯಲ್ಲಿ ಮೃತಳು ವಾಸವಾಗಿದ್ದ ಮನೆಯ ಬೆಡ್ ರೂಮಿನ ಫ್ಯಾನಿಗೆ ಸೀರೆಯನ್ನು ಕಟ್ಟಿ ಅದನ್ನು ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿದ್ದು, ಇದರ ಹೊರತು ಮೃತಳ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮುಕ್ತಾ ಕೋಂ. ನಾರಾಯಣ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಗೃಹಿಣಿ, ಸಾ|| ಮಾವಿನಕುರ್ವೆ, ತಾ: ಹೊನ್ನಾವರ ರವರು ದಿನಾಂಕ: 05-02-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೃಷ್ಣ ತಂದೆ ಸೋಮಯ್ಯ ದೇವಾಡಿಗ, ಪ್ರಾಯ-40 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಗವಿನಸರ, ಪೋ: ದೇವಿಸರ, ಗಿರಗಡ್ಡೆ ಗ್ರಾಮ, ತಾ: ಸಿದ್ದಾಪುರ. ಪಿರ್ಯಾದಿಯ ಗಂಡನಾದ ಈತನು ಮೊದಲಿಂದಲೂ ಮೂಡಿ ಸ್ವಭಾವದವನಾಗಿದ್ದು, ಮನೆಯ ಜನ ಇಲ್ಲವೆ ಊರಿನ ಜನರೊಂದಿಗೆ ಬೆರೆಯುವುದಾಗಲಿ, ಮಾತನಾಡುವುದಾಗಲಿ ಮಾಡದೆ ಯಾವಾಗಲೂ ಒಬ್ಬಂಟಿಯಾಗಿ ಇರುತ್ತಿದ್ದವನು, ಮನೆಗೆ ಹೊತ್ತು ಗೊತ್ತು ಇಲ್ಲದೆ ಬಂದು ಹೋಗಿ ಮಾಡುತ್ತಿದ್ದವನು, ಕಂಡ ಕಂಡವರಲ್ಲಿ ಸಾಲ ಮಾಡಿದ್ದರಿಂದ ಸಾಲಗಾರರು ಮನೆಗೆ ಬಂದು ಸಾಲದ ಹಣವನ್ನು ಕೇಳತೊಡಗಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಲ್ಲದೇ, ದಿನಾಂಕ: 05-02-2021 ರಂದು ಮುದ್ದತ್ ಇದ್ದ ಎನ್.ಐ ಎಕ್ಟ್ ನ ಸಮನ್ಸ್ ಅನ್ನು ದಿನಾಂಕ: 04-02-2021 ರಂದು ಬೆಳಿಗ್ಗೆ ನೀಡಿ ಹೋದ ನಂತರ ಯಾರೊಂದಿಗೂ ಮಾತನಾಡದೆ ಮಲಗಿದ್ದವನು, ಮಧ್ಯಾಹ್ನ 11-45 ಗಂಟೆಯ ಸುಮಾರಿಗೆ ಎದ್ದು ಮನೆಯ ಅಂಗಳದಲ್ಲಿ ಎಲೆ ಅಡಿಕೆ ಹಾಕಿಕೊಳ್ಳುತ್ತಾ ಕುಳಿತ್ತಿದ್ದವನು ಅಲ್ಲಿಂದ ಕಾಣೆಯಾಗಿದ್ದವನು ರಾತ್ರಿ ಆದರೂ ಮನೆಗೆ ಬಾರದಿದ್ದರಿಂದ ದಿನಾಂಕ: 05-02-2021 ರಂದು ಅವನಿಗೆ ಹುಡುಕಾಡುತ್ತಿದ್ದಾಗ ಅವನ ಮನೆ ಹತ್ತಿರದ ಜಂಗಲ್‍ ನಲ್ಲಿ ಮರವೊಂದಕ್ಕೆ ನೈಲಾನ್ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದು, ತನ್ನ ಗಂಡನು ಅವರಿವರ ಹತ್ತಿರ ಕೈಗಡ ಸಾಲ ಮಾಡಿಕೊಂಡಿದ್ದವನು, ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಸವಿತಾ ಕೋಂ. ಕೃಷ್ಣ ದೇವಾಡಿಗ, ಪ್ರಾಯ-28 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಗವಿನಸರ, ಪೋ: ದೇವಿಸರ, ಗಿರಗಡ್ಡೆ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 05-02-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 06-02-2021 04:47 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080