ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-01-2022

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 01/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಫಿರೋಜ್ ತಂದೆ ಅಹಮ್ಮದ್ ಆದಂ ಯೂಸುಫ್, ಪ್ರಾಯ-51 ವರ್ಷ, ವೃತ್ತಿ-ಚಾಲಕ, ಸಾ|| ಉಚ್ಚಿಲ, ತಾ: ಉಡುಪಿ, ಜಿ: ಉಡುಪಿ (ಲಾರಿ ನಂ: ಡಬ್ಲ್ಯೂ.ಬಿ-23/ಇ-3132 ನೇದರ ಚಾಲಕ). ದಿನಾಂಕ: 05-01-2022 ರಂದು ಬೆಳಗ್ಗೆ 11-00 ಗಂಟೆಯಿಂದ 11-10 ಗಂಟೆಯ ಅವಧಿಯಲ್ಲಿ ಪಿರ್ಯಾದಿಯ ಭಾವನವರಾದ ಪಂಡರಿನಾಥ ತಂದೆ ಗೋಕುಲ ಗುರವ ಇವರ ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-4451 ನೇದರ ಹಿಂದಿನ ಸೀಟಿನಲ್ಲಿ ಕುಳಿತು ಕಾರವಾರ-ಕೈಗಾ ರಾಜ್ಯ ಹೆದ್ದಾರಿಯ ಮುಖಾಂತರ ಕೆ.ಎಚ್.ಬಿ ಕಾಲೋನಿ ಕಡೆಯಿಂದ ಕಾರವಾರ ಕಡೆಗೆ ಮೋಟಾರ್ ಸೈಕಲ್ ಮೇಲೆ ಬರುತ್ತಿರುವಾಗ ಬಾಂಡಿಶಿಟ್ಟಾ ಕಡೆಯಿಂದ ಕಾರವಾರ ಕಡೆಗೆ ಲಾರಿ ನಂ: ಡಬ್ಲ್ಯೂ.ಬಿ-23/ಇ-3132 ನೇದರ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಲಾರಿಯ ಮುಂದಿನಿಂದ ರಸ್ತೆಯ ತೀರಾ ಎಡಕ್ಕೆ ಹೋಗುತ್ತಿದ್ದ ಪಿರ್ಯಾದಿಯ ಭಾವನವರ ಮೋಟಾರ್ ಸೈಕಲನ್ನು ಓವರ್ ಟೇಕ್ ಮಾಡುವ ಸಮಯದಲ್ಲಿ ತನ್ನ ಲಾರಿಯ ಎಡಬದಿಯ ಭಾಗದಿಂದ ಮೋಟಾರ್ ಸೈಕಲಿನ ಬಲಬದಿಯ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಬಲಗಣ್ಣಿನ ಕೆಳಗೆ ತರಚಿದ ಗಾಯ ಹಾಗೂ ಒಳನೋವು, ಬಲಗೈ ಮುಷ್ಠಿಯ ಹತ್ತಿರ ಒಳಪೆಟ್ಟು, ತಲೆಯ ಹಿಂದಿನ ಭಾಗದಲ್ಲಿ ಗಾಯ ಹಾಗೂ ಒಳನೋವು, ಎಡಗಾಲಿನ ಪಾದದ ಹತ್ತಿರ ತರಚಿದ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಪಿರ್ಯಾದಿಯ ಭಾವನವರಿಗೆ ಬಲಗೈ ಮುಷ್ಠಿಯ ಹತ್ತಿರ ತೆರಚಿದ ಗಾಯ ಹಾಗೂ ಒಳನೋವು, ಬಲಗೈ ಮೊಣಕೈ ಹತ್ತಿರ ತೆರಚಿದ ಗಾಯ ಹಾಗೂ ಒಳನೋವು, ಬಲಭುಜದ ಹತ್ತಿರ ಒಳನೋವು, ಎಡಗೈ ಹೆಬ್ಬೆರಳಿನ ಹತ್ತಿರ ತೆರಚಿದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಶಾಂತಾಬಾಯಿ ಕೋಂ. ಗಣಪತಿ ಇಡೂರಕರ, ಪ್ರಾಯ-54 ವರ್ಷ, ವೃತ್ತಿ-ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರಿ, ಸಾ|| ಕೆ.ಎಚ್.ಬಿ ಕಾಲೋನಿ, ಕಾರವಾರ ರವರು ದಿನಾಂಕ: 05-01-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಮಾಮ್ ಜೈನುದೀನ್ ಗನಿ, ಸಾ|| ಚಂದಾವರ, ತಾ: ಹೊನ್ನಾವರ. ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಸರ್ವೇ ನಂ: 47/5 ನೇದು ಪಿರ್ಯಾದಿ ಹಾಗೂ ಪಿರ್ಯಾದಿಯ ಕುಟುಂಬದ ನಾಸೀರ್ ಶೇಕ್, ತವಾಬ್ ಕೊಡಿಯಾಲ್ ಮತ್ತು ಇತರರ ಸಮೇತ ಜಮೀನಾಗಿದ್ದು, ಸದರಿ ಭೂಮಿಯಲ್ಲಿರುವ ಪಿರ್ಯಾದಿಗೆ ಸಂಬಂಧಿಸಿದ ಹಲಸಿನ ಮರವನ್ನು ನಮೂದಿತ ಆರೋಪಿತನು ಪಿರ್ಯಾದಿಯು ಮನೆಯಲ್ಲಿ ಇಲ್ಲದಿರುವಾಗ ದಿನಾಂಕ: 29-12-2021 ರಂದು ಪಿರ್ಯಾದಿಯ ಜಾಗದಲ್ಲಿ ಬಂದು ಹಲಸಿನ ಮರವನ್ನು ಕೆಲವು ಗೂಂಡಾಗಳನ್ನು ಕರೆದುಕೊಂಡು ಬಂದು ಬಲವಂತವಾಗಿ ಪಿರ್ಯಾದಿಯ ಮರವನ್ನು ಅರೆಬರೆ ಕಡೆದಿದ್ದು, ಆಗ ಮನೆಯಲ್ಲಿದ್ದ ಪಿರ್ಯಾದಿಯ ಮಗಳು ಕೇಳಿಸಿಕೊಳ್ಳುವಂತೆ ಆರೋಪಿತನು ‘ಇದು ನನ್ನ ಸಾಮ್ರಾಜ್ಯ. ನಾನು ಏನು ಬಯಸುತ್ತೇನೋ, ಅದನ್ನು ಮಾಡಿಯೆ ತೀರುತ್ತೇನೆ. ನನ್ನ ಕೃತ್ಯದ ದಾರಿಗೆ ಅಡ್ಡ ಬಂದರೆ ಕೊಲೆ ಮಾಡಲು ಹೇಸುವದಿಲ್ಲಾ. ಬೋಳಿ ಮಗ ಅನ್ಸಾರ್ ಪತ್ರಕರ್ತನಂತೆ, ನನ್ನ ಹತ್ತಿರನು ಪತ್ರಕರ್ತತರಿದ್ದಾರೆ. ಅವನಿಗೆ ಒಂದು ಗತಿ ಕಾಣಿಸದೇ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಅನ್ಸಾರ್ ಅಬ್ದುಲ್ ರಜಾಕ್ ಶೇಖ್, ಪ್ರಾಯ-59 ವರ್ಷ, ಸಾ|| ಚಂದಾವರ, ತಾ: ಹೊನ್ನಾವರ ರವರು ದಿನಾಂಕ: 05-01-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಾಬ್ಲೇಶ್ವರ ತಂದೆ ಅಣ್ಣಪ್ಪ ನಾಯ್ಕ, ಪ್ರಾಯ-41 ವರ್ಷ, ಸಾ|| ಹೊಸಪಟ್ಟಣ, ದುರ್ಗಾದೇವಸ್ಥಾನದ ಹತ್ತಿರ, ತಾ: ಹೊನ್ನಾವರ. ಈತನು ದಿನಾಂಕ: 05-01-2022 ರಂದು 21-30 ಗಂಟೆಗೆ ಹೊಸಪಟ್ಟಣ ಕ್ರಾಸ್ ಹತ್ತಿರವಿರುವ ಬಂದ್ ಇದ್ದ ಗೂಡಂಗಡಿಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ, ಸರಾಯಿ ಕುಡಿಯಲು ಲೈಸೆನ್ಸ್ ಇಲ್ಲದೇ ಅನಧೀಕೃತವಾಗಿ 90 ML ಅಳತೆಯ HAYWARDS CHEERS WHISKEY ಅಂತಾ ಬರೆದಿರುವ ಸರಾಯಿ ಪ್ಯಾಕೆಟ್ ಗಳಲ್ಲಿದ್ದ ಸರಾಯಿಯನ್ನು ಕುಡಿಯುತ್ತಾ ಕುಳಿತಿರುವಾಗ ದಾಳಿಯ ವೇಳೆ ಅಬಕಾರಿ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 05-01-2022 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರಕಾಂತ ತಂದೆ ಮಂಜುನಾಥ ಮೊಗೇರ, ಪ್ರಾಯ-41 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾದಿಮನೆ, ಸಣ್ಣಬಾವಿ, ಬೇಂಗ್ರೆ-01, ಪೋ: ಅಳ್ವೆಕೋಡಿ, ತಾ: ಭಟ್ಕಳ. ಈತನು ದಿನಾಂಕ: 05-01-2022 ರಂದು 16-30 ಗಂಟೆಯ ಸಮಯಕ್ಕೆ ಮಾವಿನಕಟ್ಟಾ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಜನರಿಂದ ಹಣ ಪಡೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ಪಿರ್ಯಾದಿಯು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿ ಆರೋಪಿತನಿಗೆ ಹಿಡಿದಾಗ ಆತನ ಹತ್ತಿರ 1). ಅಂಕೆ-ಸಂಖ್ಯೆ ಬರೆದ ಚೀಟಿ-1, 2). ಬಾಲ್ ಪೆನ್-1, 3) ನಗದು ಹಣ 630/- ರೂಪಾಯಿದೊಂದಿಗೆ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 05-01-2022 ರಂದು 18-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ಹಸನ್ ತಂದೆ ನಜೀರ್ ಶೇಖ್, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಹಸನ್ ಮಂಜೀಲ್, ಫಿಶ್ ಇಂಡಿಯಾ ಐಸ್ ಫ್ಯಾಕ್ಟರಿ ಹತ್ತಿರ, ವೆಂಕಟಾಪುರ, ತಾ: ಭಟ್ಕಳ. ಈತನು ದ 05-01-2022 ರಂದು 16-00 ಗಂಟೆಗೆ ಭಟ್ಕಳ ವೆಂಕಟಾಪುರ ಗ್ರಾಮ ಕುಕನೀರು ಬಯಲು ಸ್ಥಳದಲ್ಲಿ ಮೇಯಲು ಬಿಟ್ಟ ಸುಮಾರು 5,000/- ರೂಪಾಯಿ ಬೆಲೆಯ ಯಾರದೋ ಮನೆಯ ಸಾಕು ಪ್ರಾಣಿಯಾದ ಕಪ್ಪು ಬಣ್ಣದ ದನವನ್ನು ಕಳ್ಳತನ ಮಾಡಿ, ಅದನ್ನು ಬೇರೆ ಎಲ್ಲಿಯೋ ಸಾಗಾಟ ಮಾಡಲು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿ ಹಾಗೂ ಇತರರು ನೋಡಿ ಸದರಿ ಆರೋಪಿತನನ್ನು ಹಾಗೂ ಕಳ್ಳತನ ಮಾಡಿದ ದನವನ್ನು ಹಿಡಿದ ಬಗ್ಗೆ ಪಿರ್ಯಾದಿ ಶ್ರೀ ಅಫ್ತಾಬ್ ಹುಸೇನ್ ತಂದೆ ಅಬ್ದುಲ್ ಗಪೂರ್ ದಾಮೂದಿ, ಪ್ರಾಯ-45 ವರ್ಷ, ವೃತ್ತಿ-ಹೈನುಗಾರಿಕೆ, ಸಾ|| ದಾಮೂದಿ ಗೋಟ್ ಫಾರ್ಮ್, ಕುಕನೀರ ರೋಡ್, ವೆಂಕಟಾಪುರ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 05-01-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೋಟೆಪ್ಪ ತಂದೆ ಮಲ್ಲೇಶಪ್ಪಾ ಸುಣಗಾರ, ಸಾ|| ಹಿರೇಹಳ್ಳಿ, ತಾ: ಮುಂಡಗೋಡ, 2]. ಶ್ರೀಮತಿ ಶಿಲ್ಪಾ ಕೋಂ. ಕೋಟೆಪ್ಪ ಸುಣಗಾರ, ಸಾ|| ಹಿರೇಹಳ್ಳಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 25-12-2021 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಮುಂಡಗೋಡ ತಾಲೂಕಿನ ಹಿರೇಹಳ್ಳಿ ಗ್ರಾಮದ ಸರ್ವೇ ನಂ: 115 ರಲ್ಲಿರುವ ತನ್ನ ಹೊಲದಲ್ಲಿ ಕೆಲಸ ಮಾಡಿಕೊಂಡಿರುವಾಗ, ಟ್ರ್ಯಾಕ್ಟರ್ ಹೊಡೆದುಕೊಂಡು ಹೋಗುವ ವಿಚಾರವಾಗಿ ಪಿರ್ಯಾದಿಯ ಅಳಿಯ ಹಾಗೂ ಮಗಳಾದ ಆರೋಪಿ ಮತ್ತು 2 ನೇಯವರಿಬ್ಬರೂ ಸೇರಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದು, ಅಡ್ಡಗಟ್ಟಿ ದೂಡಿ ಹಾಕಿ ನೆಲಕ್ಕೆ ಕೆಡವಿ, ಪಿರ್ಯಾದಿಯ ಸೊಂಟಕ್ಕೆ ಹಾಗೂ ಬಲಗೈಗೆ ಕಟ್ಟಿಗೆಯ ಬಡಿಗೆಯಿಂದ ಹೊಡೆದು ಗಾಯನೋವು ಪಡಿಸಿ, ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಫಕೀರಪ್ಪ ತಂದೆ ಯಲ್ಲಪ್ಪ ಜಾಡರ, ಪ್ರಾಯ-61 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಿರೇಹಳ್ಳಿ, ತಾ: ಮುಂಡಗೋಡ ರವರು ದಿನಾಂಕ: 05-01-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-01-2022 ರಂದು ರಾತ್ರಿ 23-45 ಗಂಟೆಯಿಂದ ದಿನಾಂಕ: 04-01-2022 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿಟ್ಟ ಪಿರ್ಯಾದಿಯ ಬಾಬ್ತು ಅ||ಕಿ|| 15,000/- ರೂಪಾಯಿ ಬೆಲೆಬಾಳುವ ಕಪ್ಪು ಬಣ್ಣದ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-31/ವಿ-5967 (ಚಾಸಿಸ್ ನಂ: MBLHA10AMEHD32633 ಹಾಗೂ ಇಂಜಿನ್ ನಂ: HA10EJEHD24789) ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುರುನಾಥ ತಂದೆ ಈರಪ್ಪ ಯರೇಬೈಲ್, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುನಗುಂದ, ತಾ: ಮುಂಡಗೋಡ ರವರು ದಿನಾಂಕ: 05-01-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ (ತಿದ್ದುಪಡಿ ಕಾಯ್ದೆ)-2021 ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ಬಂಗಾರಪ್ಪ ಕಬ್ಬೆರ, ಪ್ರಾಯ-49 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಜನತಾ ಕಾಲೋನಿ, ಬನವಾಸಿ, ತಾ: ಶಿರಸಿ. ಈತನು 05-01-2021 ರಂದು 14-25 ಗಂಟೆಗೆ ತನ್ನ ಅಕ್ರಮ ಲಾಭಕ್ಕೋಸ್ಕರ ಬನವಾಸಿಯ ಜನತಾ ಕಾಲೋನಿಯ ಸದಾನಂದ ಗೌಡರ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿ ಮಾಡಿದಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಓ.ಸಿ ಚೀಟಿ-01, 2). ನಗದು ಹಣ 1,660/- ರೂಪಾಯಿ, 3). ಬಾಲ್ ಪೆನ್-01. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 05-01-2022 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-01-2022

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಚಂದ್ರನ್ ತಂದೆ ಶೇಷದೇವ ತ್ರಿಪಾಠಿ, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಿಂಜರಕೇಲಾ, ಸುಂದರಗರ, ಓರಿಸ್ಸಾ. ಪಿರ್ಯಾದಿಯ ಹೆಂಡತಿಯ ತಮ್ಮನಾದ ಈತನು ಕಾರವಾರ ಬೈತಕೂಲದಲ್ಲಿ ‘ಮಧುಶ್ರೀ’ ಎಂಬ ಮೀನುಗಾರಿಕಾ ಬೋಟಿನಲ್ಲಿ ಓರಿಸ್ಸಾ ಮೂಲದ ಇತರ ಕೆಲಸಗಾರರೊಂದಿಗೆ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 03-01-2022 ರಂದು ಬೆಳಿಗ್ಗೆ 05-00 ಘಂಟೆಗೆ ಮೀನುಗಾರಿಕೆಗೆ ಹೋಗುತ್ತಿರುವಾಗ ಬೋಟ್ ದಂಡೆಯ ಮೇಲೆ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ ಸಮುದ್ರದ ನೀರಿಗೆ ಬಿದ್ದು, ಬೋಟ್ ಹಿಂಬದಿಗೆ ಕಟ್ಟಿದ್ದ ಡಿಂಗಿಗೆ ಕಣ್ಣಿನ ಬಲಬಾಗ ಬಡಿದುಕೊಂಡು ನೀರಿನಲ್ಲಿ ಮುಳುಗಿ ಕಾಣೆಯಾದವನು, ದಿನಾಂಕ: 03-01-2022 ರಂದು ಸಾಯಂಕಾಲ 18-00 ಘಂಟೆಗೆ ಮೃತ ಸ್ಥಿತಿಯಲ್ಲಿ ಸಮುದ್ರದಲ್ಲಿ ಸಿಕ್ಕಿದ್ದು, ತನ್ನ ಸಂಬಂಧಿ ಚಂದನ ತ್ರಿಪಾಠಿ ಈತನು ಮೀನುಗಾರಿಕೆ ಮಾಡುವಾಗ ಆಕಸ್ಮಾತ್ ಬಿದ್ದು ಮೃತಪಟ್ಟಿದ್ದು, ಇದರ ಹೊರತು ಅವನ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹಿಮಾಂಶು ಶೇಖರ್ ತಂದೆ ಭಿಕಾರಿ ಚರಣದಾಸ್, ಪ್ರಾಯ-43 ವರ್ಷ, ವೃತ್ತಿ-ಐ.ಟಿ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್, ಸಾ|| ಮನೆ ನಂ: ಸಿ701, ಕಿನಿಕಿಬಂದ್, ಜನತಾ ಕ್ಲಬ್ ಹತ್ತಿರ, ಬ್ಲಾಕ್ ಬಾಲಿಶಂಕರ್, ಪಿ.ಎಸ್.ಕಿಂಜರಕೇಲಾ, ಸುಂದರಗರ, ಓರಿಸ್ಸಾ, ಹಾಲಿ ಸಾ|| ಆನೇಕಲ್, ಬೆಂಗಳೂರು ರವರು ದಿನಾಂಕ: 05-01-2022 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸೋಮಣ್ಣ ತಂದೆ ಪಾಂಡುರಂಗ ಕಠಾವಕರ, ಪ್ರಾಯ-21 ವರ್ಷ, ಸಾ|| ನಂದಿಕಟ್ಟಾ, ತಾ: ಮುಂಡಗೋಡ. ಈತನು ದಿನಾಂಕ: 04-01-2022 ರಂದು ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಮನೆಯ ಮೊದಲನೇ ಕೋಣೆಯಲ್ಲಿ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದವನಿಗೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾಯಂಕಾಲ 06-10 ಗಂಟೆಗೆ ಮೃತಪಟ್ಟಿರುತ್ತಾನೆ. ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಮೃತದೇಹವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪಾಂಡುರಂಗ ತಂದೆ ಸೋಮಣ್ಣ ಕಠಾವಕರ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಂದಿಕಟ್ಟಾ, ತಾ: ಮುಂಡಗೋಡ ರವರು ದಿನಾಂಕ: 05-01-2022 ರಂದು 08-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಭೀಮಸಿಂಗ್ ತಂದೆ ಪರಶುರಾಮಸಿಂಗ್ ಅಂಕಲಗಿ, ಪ್ರಾಯ-54 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅಗಡಿ, ತಾ: ಮುಂಡಗೋಡ. ಪಿರ್ಯಾದಿಯ ತಂದೆಯಾದ ಇವರು ತಾವು ಬೆಳೆ ಬೆಳೆಯಲು ತಮ್ಮ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮುಂಡಗೋಡ ಶಾಖೆಯಲ್ಲಿ 5 ಲಕ್ಷ ರೂಪಾಯಿ ಹಾಗೂ ವೀರೇಶ್ವರ ಸೇವಾ ಸಹಕಾರಿ ಸಂಘ, ಹುನಗುಂದ ಇವರಲ್ಲಿ 92 ಸಾವಿರ ರೂಪಾಯಿ ಬೆಳೆ ಸಾಲವನ್ನು ಮಾಡಿದ್ದು, ಬೆಳೆದ ಬೆಳೆಯು ಸರಿಯಾಗಿ ಬೆಳೆಯದೇ ಇದ್ದುದರಿಂದ ಸಾಲವು ಬಹಳವಾಗಿದ್ದರಿಂದ ಸಾಲವನ್ನು ತೀರಿಸಲು ಆಗುವುದಿಲ್ಲ ಅಂತಾ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 04-01-2022 ರಂದು ಮಧ್ಯಾಹ್ನ 12-00 ಗಂಟೆಯಿಂದ 19-00 ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಹೊಲದಲ್ಲಿಯ ದನದ ಕೊಟ್ಟಿಗೆಯಲ್ಲಿನ ಎಳೆಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅವರ ಮೃತದೇಹವು ದನದ ಕೊಟ್ಟಿಗೆಯಲ್ಲಿ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸತೀಶಸಿಂಗ್ ತಂದೆ ಭೀಮಸಿಂಗ್ ಅಂಕಲಗಿ, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅಗಡಿ, ತಾ: ಮುಂಡಗೋಡ ರವರು ದಿನಾಂಕ: 05-01-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 06-01-2022 07:16 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080