ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 182/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಉದಯ ತಂದೆ ದಾಮೋದರ ತಾಂಡೇಲ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ ಸಾ|| ಟೊಂಕಾ-1, ಕಾಸರಕೋಡ, ತಾ: ಹೊನ್ನಾವರ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 05-07-2021 ರಂದು ಮೀನುಗಾರಿಕೆಗೆ ಎಂದು ಅರಬ್ಬೀ ಸಮುದ್ರಕ್ಕೆ ಮೋಟಾರಿಕೃತ ನಾಡದೋಣಿಯಲ್ಲಿ ವಿಜಯ ತಂದೆ ಕ್ರಾಸ್ತ ದಾಸ ಫರ್ನಾಂಡಿಸ್, ಶಂಕರ ತಂದೆ ಮಾದೇವ ತಾಂಡೇಲ ಹಾಗೂ ಕಾಮೇಶ್ವರ ತಂದೆ ದೇವಯ್ಯ ತಾಂಡೇಲ, ಇವರೊಂದಿಗೆ ಹೋಗಿದ್ದು, ಬೆಳಿಗ್ಗೆ 05-30 ಗಂಟೆಯ ಸುಮಾರಿಗೆ ನನ್ನ ತಮ್ಮ ಹೋಗುತ್ತಿದ್ದ ಮೋಟಾರಿಕೃತ ನಾಡದೋಣಿಯು ಸಮುದ್ರದ ಅಲೆಗಳಿಗೆ ಸಿಲುಕಿ ಮುಗುಚಿ ಬಿದ್ದು ನೀರಿನಲ್ಲಿ ಮುಳುಗಿದ್ದು, ವಿಜಯ, ಶಂಕರ, ಕಾಮೇಶ್ವರ ಇವರು ಈಜಿ ದಡ ಸೇರಿದ್ದು, ನನ್ನ ತಮ್ಮ ಉದಯ ದಾಮೋದರ ತಾಂಡೇಲ, ಈತನು ಕಾಣೆಯಾದ ಬಗ್ಗೆ ವಿಷಯ ತಿಳಿದು, ಹುಡುಕಾಡಿದರೂ ಪತ್ತೆಯಾಗಿದ್ದು ಇರುವುದಿಲ್ಲ. ಕಾಣೆಯಾದ ತನ್ನ ತಮ್ಮನನ್ನು ಪತ್ತೆ ಮಾಡಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ದಾಮೋದರ ತಾಂಡೇಲ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಟೊಂಕಾ-1, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 05-07-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 183/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಮೇಲ್ವಿನ್ ತಂದೆ ಜೂವಾಂವ್ ತಿಸ್ಸೇರಾ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ದೇವಸ್ಥಾನಕೇರಿ, ಗುಂಡಬಾಳ, ತಾ: ಹೊನ್ನಾವರ. ಪಿರ್ಯಾದಿಯ ತಮ್ಮನಾದ ಈತನು ಕಳೆದ ನಾಲ್ಕು ತಿಂಗಳ ಹಿಂದೆ ದಿನಾಂಕ: 28-03-2021 ರಂದು ಮನೆಯಲ್ಲಿದ್ದ ತಾಯಿಯವರಿಗೆ ಹೊನ್ನಾವರಕ್ಕೆ ಬಾಡಿಗೆಗೆ ಹೋಗುವುದಾಗಿ ಹೇಳಿ ಹೋದವನು, ಈವರೆಗೂ ಮನೆಗೆ ಬಾರದೇ ಇದ್ದಾಗ ಊರಿನಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಸಹ ಸಿಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ತಮ್ಮನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ವೆರೊನಿಕಾ ಕೋಂ. ಎಡ್ವಿನ್ ಲೋಪಿಸ್, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 05-07-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: 269, 271 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1] ನಾರಾಯಣ ನಾಗು ಖಾರ್ವಿ, ಪ್ರಾಯ-60 ವರ್ಷ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ, 2] ಕಿರಣ ಸಾಂತಾ ಫರ್ನಾಂಡಿಸ್, ಪ್ರಾಯ-29 ವರ್ಷ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ, 3] ರಮೇಶ ಕೃಷ್ಣ ಖಾರ್ವಿ, ಪ್ರಾಯ-32 ವರ್ಷ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ, 4] ಶ್ರೀಧರ ಚೂಂಡಾ ಖಾರ್ವಿ, ಪ್ರಾಯ-29 ವರ್ಷ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ, 5] ವಿಘ್ಣೇಶ್ವರ ವಾಮನ ಮೇಸ್ತ, ಪ್ರಾಯ-30 ವರ್ಷ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ, 6] ಗಣಪತಿ ಧರ್ಮ ಖಾರ್ವಿ, ಪ್ರಾಯ-28 ವರ್ಷ, 7] ಗಣೇಶ ಮಾಬ್ಲೇಶ್ವರ ಮೇಸ್ತ, ಪ್ರಾಯ-29 ವರ್ಷ, ಸಾ|| ಕಾಸರಕೋಡ, ತಾ: ಹೊನ್ನಾವರ, 8] ಚಂದ್ರಕಾಂತ ಲಕ್ಷ್ಮಣ ಖಾರ್ವಿ, ಪ್ರಾಯ-32 ವರ್ಷ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ದಿನಾಂಕ: 05-07-2021 ರಂದು 16-40 ಗಂಟೆಗೆ ಅಪ್ಸರಕೊಂಡ ಬೀಚ್ ಗಾರ್ಡನ್ ನಲ್ಲಿ ಸೇರಿಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗದ 2 ನೇ ಅಲೆಯನ್ನು ತಡೆಗಟ್ಟುವ ಉದ್ದೇಶದಿಂದ ಮಾನ್ಯ ಕರ್ನಾಟಕ ಸರಕಾರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಕಾರವಾರ ರವರ ಆದೇಶದ ಅನುಸಾರ ಮಾನ್ಯ ತಹಶೀಲ್ದಾರ್ ಹಾಗೂ ಮಾನ್ಯ ತಾಲೂಕಾ ದಂಡಾಧಿಕಾರಿಗಳು, ಹೊನ್ನಾವರ ರವರು ಹೊರಡಿಸಿದ ಆದೇಶ ಸೂಚನೆಗಳನ್ನು ಉಲ್ಲಂಘಿಸಿ ಸುರಕ್ಷತೆಯನ್ನು ನಿರ್ಲಕ್ಷಿಸಿ ಮಾಸ್ಕ್ ಗಳನ್ನು ಧರಿಸದೇ ಒಬ್ಬರಿಂದ ಇನ್ನೊಬ್ಬರಿಗೆ ಅಂತರವನ್ನು ಕಾಯ್ದುಕೊಳ್ಳದೇ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಇಸ್ಪೀಟ್ ಎಲೆಗಳ ಮೇಲೆ ಪಂಥವಾಗಿ ಕಟ್ಟಿ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ಸಮಯದಲ್ಲಿ ಜೂಗರಾಟಕ್ಕೆ ಬಳಸಿದ ಸಲಕರಣೆಗಳು ಹಾಗೂ ನಗದು ಹಣ 2,880/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ ಕೊಣ್ಣೂರ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 05-07-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ವಿಶ್ವನಾಥ ತಂದೆ ತಿಮ್ಮಪ್ಪ ಶೆಟ್ಟಿ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಎನ್.ಎಚ್-66 ರಸ್ತೆ, ತೆಂಗಿನಗುಂಡಿ ಕ್ರಾಸ್, ತಾ: ಭಟ್ಕಳ. ಪಿರ್ಯಾದಿ ಮಗನಾದ ಈತನು ದಿನಾಂಕ: 26-03-2021 ರಂದು ರಾತ್ರಿ 20-00 ಗಂಟೆಯ ಸುಮಾರಿಗೆ ತನ್ನ ಮನೆಯಾದ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ತೆಂಗಿನಗುಂಡಿ ಕ್ರಾಸ್ ನಿಂದ ಚಾಲಕ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು, ಈವರೆಗೂ ಮನೆಗೆ ವಾಪಸ್ ಬಾರದೇ, ಸಂಬಂಧಿಕರ ಮನೆಗೂ ಕೂಡ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ. ಸದ್ರಿ ಕಾಣೆಯಾದವನನ್ನು ಹುಡುಕಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಲಲಿತಾ ಗಂಡ ತಿಮ್ಮಪ್ಪ ಶೆಟ್ಟಿ, ಪ್ರಾಯ-60 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಎನ್.ಎಚ್-66 ರಸ್ತೆ, ತೆಂಗಿನಗುಂಡಿ ಕ್ರಾಸ್, ತಾ: ಭಟ್ಕಳ ರವರು ದಿನಾಂಕ: 05-07-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 107/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೈಯದ್ ಇಸ್ಮಾಯಿಲ್ ತಂದೆ ಸೈಯದ್ ಹಸನ್, ಪ್ರಾಯ-21 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಸಂತೆಗುಳಿ, ತಾ: ಕುಮಟಾ (ಟಾಟಾ ಕಂಪನಿಯ ಲಾರಿ ನಂ: ಕೆ.ಎ-30/ಎ-5355 ನೇದರ ಚಾಲಕ). ಈತನು ದಿನಾಂಕ: 04-07-2021 ರಂದು ರಾತ್ರಿ 23-30 ಗಂಟೆಯ ಸುಮಾರಿಗೆ ತನ್ನ ಬಾಬ್ತು ಟಾಟಾ ಕಂಪನಿಯ ಲಾರಿ ನಂ: ಕೆ.ಎ-30/ಎ-5355 ನೇದನ್ನು ಯಲ್ಲಾಪುರ ಪಟ್ಟಣದಲ್ಲಿ ಮಲಬಾರ್ ಹೊಟೇಲ್ ಎದುರಿಗೆ ಕಾರವಾರ-ಬಳ್ಳಾರಿ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ಅಂಕೋಲಾ ಕಡೆಯಿಂದ ಯಲ್ಲಾಪುರ-ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಿಂದ ಮಲಬಾರ್ ಹೊಟೇಲ್ ಕಡೆಗೆ ನಡೆದುಕೊಂಡು ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-63 ರ ರಸ್ತೆ ದಾಟುತ್ತಿದ್ದ ಜಾನ್ ತಂದೆ ಫ್ರಾನ್ಸಿಸ್ ಸಿದ್ಧಿ ಈತನಿಗೆ ಡಿಕ್ಕಿ ಮಾಡಿ, ಅವನ ಮೇಲೆ ತನ್ನ ಲಾರಿಯ ಎಡಬದಿಯ ಹಿಂದಿನ ಟಾಯರ್ ಹತ್ತಿಸಿ, ಅಪಘಾತ ಪಡಿಸಿದ್ದರಿಂದ ಸದರಿ ಜಾನ್ ತಂದೆ ಫ್ರಾನ್ಸಿಸ್ ಸಿದ್ದಿ ಇವನ ತಲೆ ಹಾಗೂ ಹೊಟ್ಟೆ ಒಡೆದು, ಮೆದುಳು ಹಾಗೂ ಕರಳು ಹೊರಗೆ ಬಂದು ಭಾರೀ ಸ್ವರೂಪದ ಗಾಯ ಪೆಟ್ಟು ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಪ್ರೋಜ್ ತಂದೆ ಶಿಮೊವ್ ಸಿದ್ದಿ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗರಡೊಳ್ಳಿ, ತಾ: ಹಳಿಯಾಳ ರವರು ದಿನಾಂಕ: 05-07-2021 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಶಿವಪ್ಪಾ ಶಿಂಧೆ, ಪ್ರಾಯ-52 ವರ್ಷ, ವೃತ್ತಿ-ಟ್ಯಾಂಕರ್ ಲಾರಿ ಚಾಲಕ, ಸಾ|| ಶಿವಾಜಿ ನಗರ, ಮರಡಿ, ಚಡಚಣ ಪಟ್ಟಣ, ವಿಜಾಪುರ (ಟ್ಯಾಂಕರ್ ಲಾರಿ ನಂ: ಕೆ.ಎ-28/ಸಿ-1409 ನೇದರ ಚಾಲಕ). ಈತನು ದಿನಾಂಕ: 04-07-2021 ರಂದು ಬೆಳಿಗ್ಗೆ 11-30 ಗಂಟೆಗೆ ತನ್ನ ಟ್ಯಾಂಕರ್ ಲಾರಿ ನಂ: ಕೆ.ಎ-28/ಸಿ-1409 ನೇದರಲ್ಲಿ ಎಥೆನ್ ಆಯಿಲ್ ತುಂಬಿಕೊಂಡು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಅರಬೈಲ್ ಗ್ರಾಮದಿಂದ ಹಿಂದೆ ಯಲ್ಲಾಪುರ ಕಡೆಗೆ 4 ಕಿ.ಮೀ ಅಂತರದಲ್ಲಿ ಇರುವ ಶಿರಲೆ ಫಾಲ್ಸ್ ಸಮೀಪದ ತಿರುವಿನಲ್ಲಿ ಲಾರಿಯ ವೇಗವನ್ನು ನಿಯಂತ್ರಿಸದೇ ರಸ್ತೆಯ ಪಕ್ಕ ತನ್ನ ಟ್ಯಾಂಕರ್ ಲಾರಿಯನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿಯನ್ನು ಜಖಂಗೊಳಿಸಿ, ಟ್ಯಾಂಕರ್ ಲಾರಿಯಲ್ಲಿ ತುಂಬಿದ ಆಯಿಲ್ ಅನ್ನು ಗಟಾರದಲ್ಲಿ ಹರಿದು ಹೋಗುವಂತೆ ಮಾಡಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಸಾದಾ ಸವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ಯು. ನಾರ್ವೇಕರ, ಎ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 05-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಾಬಲೇಶ್ವರ ತಂದೆ ನಾಗೇಶ ಹೆಗಡೆ, ಪ್ರಾಯ-40 ವರ್ಷ, ಸಾ|| ಪಣತಗೇರಿ, ತಾ: ಯಲ್ಲಾಪುರ (ಕಾರ್ ನಂ: ಕೆ.ಎ-31/ಎನ್-7523 ನೇದರ ಚಾಲಕ). ದಿನಾಂಕ: 05-07-2021 ರಂದು 12-15 ಗಂಟೆಯ ಸುಮಾರಿಗೆ ಪಿರ್ಯಾದಿಯು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-1126 ನೇದರಲ್ಲಿ ಹಿಂಬದಿ ಸವಾರ ಗಾಯಾಳು ತಬಿಶ್ ಅಬ್ದುಲ್ ಮುನಾಫ್ ಸಾಬ್, ಪ್ರಾಯ-21 ವರ್ಷ, ಸಾ|| ಗೌಡಳ್ಳಿ, ತಾ: ಶಿರಸಿ ಈತನನ್ನು ಕೂಡ್ರಿಸಿಕೊಂಡು ಚೈತನ್ಯ ಕಾಲೇಜ್ ರಸ್ತೆಯಲ್ಲಿ ಯಲ್ಲಾಪುರ ನಾಕಾ ಕಡೆಯಿಂದ ಗೌಡಳ್ಳಿ ಕಡೆಗೆ ಹೋಗುತ್ತಾ ಚೈತನ್ಯ ಕಾಲೇಜ್ ಹತ್ತಿರ ತಲುಪಿದಾಗ ಅವರ ಮುಂದೆ ಕಾರ್ ನಂ: ಕೆ.ಎ-31/ಎನ್-7523 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ನಮೂದಿತ ಆರೋಪಿತನು ಯಾವುದೇ ಸೂಚನೆ ನೀಡದೇ ಚೈತನ್ಯ ಕಾಲೇಜ್ ಕಡೆಗೆ ತನ್ನ ಕಾರನ್ನು ಒಮ್ಮೆಲೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಬಲಕ್ಕೆ ತಿರುಗಿಸಿ, ಪಿರ್ಯಾದಿಯು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬೀಳಿಸಿ, ಪಿರ್ಯಾದಿಯ ಎಡಗಾಲಿಗೆ ತೀವೃ ಗಾಯನೋವು ಮತ್ತು ಬಲಗಾಲಿಗೆ ಹಾಗೂ ಬಲಗೈಗೆ ತೆರಚಿದ ಗಾಯನೋವು ಪಡಿಸಿದ್ದು ಮತ್ತು ಮೋಟಾರ್ ಸೈಕಲ್ ಹಿಂಬದಿ ಸವಾರನಾದ ಗಾಯಾಳು ತಬಿಶ್ ಅಬ್ದುಲ್ ಮುನಾಫ್ ಸಾಬ್ ಈತನಿಗೆ ಎಡಗೈಗೆ, ಎದೆಗೆ ಹಾಗೂ ತಲೆಗೆ ತೀವೃ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಇಸ್ಮಾಯಿಲ್ ತಂದೆ ಅಬ್ದುಲ್ ಗಫಾರ್ ಶೇಖ್, ಪ್ರಾಯ-20 ವರ್ಷ, ವೃತ್ತಿ-ಚಿಕನ್ ವ್ಯಾಪಾರ, ಸಾ|| ಗೌಡಳ್ಳಿ, ತಾ: ಶಿರಸಿ ರವರು ದಿನಾಂಕ: 05-07-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಕಾಂತ ತಂದೆ ರಾಮಕೃಷ್ಣ ಗೌಡ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರೆಮಠ, ಪೋ: ಗುಂಜಗೋಡ, ತಾ: ಸಿದ್ದಾಪುರ, 2]. ಜಯಂತ ತಂದೆ ರಾಮಕೃಷ್ಣ ಗೌಡ, ಪ್ರಾಯ-26 ವರ್ಷ, ವೃತ್ತಿ-ಅಂಗಡಿಯಲ್ಲಿ ಕೆಲಸ, ಸಾ|| ಕೆರೆಮಠ, ಪೋ: ಗುಂಜಗೋಡ, ತಾ: ಸಿದ್ದಾಪುರ, 3]. ರಾಮಕೃಷ್ಣ ತಂದೆ ತಿಮ್ಮಾ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರೆಮಠ, ಪೋ: ಗುಂಜಗೋಡ, ತಾ: ಸಿದ್ದಾಪುರ, 4]. ಮಹೇಶ ತಂದೆ ಮಂಜುನಾಥ ಗೌಡ, ಪ್ರಾಯ-32 ವರ್ಷ, ವೃತ್ತಿ-ಕೊನೆ ಗೌಡ, ಸಾ|| ಹರಗಿ, ಪೋ: ಇಟಗಿ, ತಾ: ಸಿದ್ದಾಪುರ, 5]. ಮಂಜುನಾಥ ತಂದೆ ತಿಮ್ಮಾ ಗೌಡ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಿಲವಳ್ಳಿ, ಪೋ: ಸೋವಿನಕೊಪ್ಪ, ತಾ: ಸಿದ್ದಾಪುರ, 6]. ಅಣ್ಣಪ್ಪ ತಂದೆ ಈರಾ ಗೌಡ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಐಸೂರ, ಪೋ: ಲಂಬಾಪುರ, ತಾ: ಸಿದ್ದಾಪುರ, 7]. ಮಾಬ್ಲೇಶ್ವರ ತಂದೆ ನಾರಾಯಣ ಗೌಡ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಲಂಬಾಪುರ, ಪೋ: ವಾಜಗೋಡ, ತಾ: ಸಿದ್ದಾಪುರ, 8]. ಮಂಜುನಾಥ ತಂದೆ ಗೋವಿಂದ ಗೌಡ, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ, ಸಾ|| ಲಂಬಾಪುರ, ಪೋ: ವಾಜಗೋಡ, ತಾ: ಸಿದ್ದಾಪುರ, 9]. ಮಂಜುನಾಥ ತಂದೆ ಹುಲಿಯಾ ಗೌಡ, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಲ್ಮನೆ, ಪೋ: ವಾಜಗೋಡ, ತಾ: ಸಿದ್ದಾಪುರ, 10]. ಅಣ್ಣಪ್ಪ ತಂದೆ ಲಿಂಗಾ ಗೌಡ, ಪ್ರಾಯ-34 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೆರೆಕುಳಿ, ಪೋ: ದೊಡ್ಮನೆ, ತಾ: ಸಿದ್ದಾಪುರ, 11]. ಗಣಪತಿ ತಂದೆ ರಾಮ ಗೌಡ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಗಿ, ಪೋ: ಇಟಗಿ, ತಾ: ಸಿದ್ದಾಪುರ, 12]. ಬೀರಾ ತಂದೆ ನಾರಾಯಣ ಗೌಡ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೆರೆಮನೆ, ಪೋ: ವಾಜಗೋಡ, ತಾ: ಸಿದ್ದಾಪುರ, 13]. ಶೇಖರ ತಂದೆ ಅಣ್ಣು ಗೌಡ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಲ್ಮನೆ, ಪೋ: ವಾಜಗೋಡ, ತಾ: ಸಿದ್ದಾಪುರ, 14]. ಪ್ರಶಾಂತ ತಂದೆ ರಾಮಕೃಷ್ಣ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಹರಗಿ, ಪೋ: ಇಟಗಿ, ತಾ: ಸಿದ್ದಾಪುರ, 15]. ವಿನಾಯಕ ತಂದೆ ಸುರೇಶ ಗೌಡ, ಪ್ರಾಯ-27 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕಲಗೋಡಿಗೆ, ಪೋ: ಲಂಬಾಪುರ, ತಾ: ಸಿದ್ದಾಪುರ, 16]. ಗೋವಿಂದ ತಂದೆ ಗಣಪ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರೆಮನೆ, ಪೋ: ವಾಜಗೋಡ, ತಾ: ಸಿದ್ದಾಪುರ, 17]. ಅಣ್ಣಪ್ಪ ತಂದೆ ಪುಟ್ಟ ಗೌಡ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲಗೋಡಿಗೆ, ಪೋ: ಲಂಬಾಪುರ, ತಾ: ಸಿದ್ದಾಪುರ, 18]. ಚಂದ್ರ ತಂದೆ ಗಣಪ ಗೌಡ, ಪ್ರಾಯ-42 ವರ್ಷ, ವೃತ್ತಿ-ಕೊನೆ ಗೌಡ, ಸಾ|| ಕೆರೆಮನೆ, ಪೋ: ವಾಜಗೋಡ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 05-07-2021 ರಂದು ರಾತ್ರಿ ಸಿದ್ದಾಪುರ ತಾಲೂಕಿನ ಕೆರೆಮಠದ ಆರೋಪಿ 3 ನೇಯವನ ಮನೆಯ ಪಕ್ಕದ ಬ್ಯಾಣದಲ್ಲಿ ಸೇರಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಮಯ 01-30 ಗಂಟೆಯ ಸುಮಾರಿಗೆ ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರೆಲ್ಲರೂ 1). ನಗದು ಹಣ 7,850/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಟವೆಲ್ ಹಾಗೂ 4). ಅರ್ಧ ಉರಿದ ನಾಲ್ಕು ಮೇಣದ ಬತ್ತಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 05-07-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-07-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬಸವರಾಜ ತಂದೆ ಬರಮಣ್ಣ ಕುರಿಯವರ, ಪ್ರಾಯ-36 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಚವಡಳ್ಳಿ, ತಾ: ಮುಂಡಗೋಡ. ಸುದ್ದಿದಾರನ ಮಗನಾದ ಈತನು ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ತನ್ನ ತವರು ಮನೆಗೆ ಹೋದ ತನ್ನ ಹೆಂಡತಿ ಶಶಿಕಲಾ ಇವಳು ಇದುವರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲ ಅಂತಾ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದವನು, ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 01-07-2021 ರಂದು ರಾತ್ರಿ 12-30 ಗಂಟೆಯ ಸುಮಾರಿಗೆ ಯಾವುದೋ ಕ್ರಿಮಿನಾಶಕ ಔಷಧಿ ಕುಡಿದು ಅಸ್ವಸ್ಥನಾದವನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ದಿನಾಂಕ: 05-07-2021 ರಂದು ಬೆಳಿಗ್ಗೆ 09-54 ಗಂಟೆಗೆ ಮೃತಪಟ್ಟಿರುತ್ತಾನೆ. ನನ್ನ ಮಗನ ಮೃತದೇಹವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಭರಮಣ್ಣಾ ತಂದೆ ದೇಮಣ್ಣ ಕುರಿಯವರ, ಪ್ರಾಯ-80 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಚವಡಳ್ಳಿ ಗ್ರಾಮ, ತಾ: ಮುಂಡಗೋಡ ರವರು ದಿನಾಂಕ: 05-07-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 08-07-2021 05:24 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080