ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-06-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಜ್ಯೋತಿ ತಂದೆ ಬೇತು ಕುಣಬಿ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹರೂರ್, ಮಲ್ಲಾಪುರ, ಕಾರವಾರ. ಪಿರ್ಯಾದುದಾರರ ಮಗಳಾದ ಇವಳು ದಿನಾಂಕ: 03-06-2021 ರಂದು ಬೆಳಿಗ್ಗೆ ತನ್ನ ಅಜ್ಜಿಯೊಂದಿಗೆ ದನ ಮೇಯಿಸಲು ಹೋದವಳು, ಸಮಯ 10-00 ಗಂಟೆಯ ಸುಮಾರಿಗೆ ‘ತಾನು ಮನೆಗೆ ಹೋಗಿ ಅಡಿಗೆ ಮಾಡುತ್ತೇನೆ’ ಎಂದು ಹೇಳಿ ಹೋಗಿದ್ದಳು. ಸದರಿಯವಳ ಅಜ್ಜಿಯು ಸಮಯ 12-00 ಗಂಟೆಯ ಅವಧಿಗೆ ಮನೆಗೆ ಬಂದು ನೋಡಿದಾಗ ಜ್ಯೋತಿ ಈಕೆಯು ಮನೆಯಲ್ಲಿ ಇರದೇ ಮತ್ತು ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಬೇತು ತಂದೆ ವಳ್ಳು ಕುಣಬಿ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹರೂರ್, ಮಲ್ಲಾಪುರ, ಕಾರವಾರ ರವರು ದಿನಾಂಕ: 05-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 159/2021, ಕಲಂ: 427 ಐಪಿಸಿ ಹಾಗೂ ಕಲಂ: 3 PREVENTION OF DAMAGE TO PUBLIC PROPERTY ACT-1984 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯು ತಾನು ಸುಮಾರು ಎರಡು ವರ್ಷಗಳಿಂದ ಅಭಿವೃದ್ದಿ ಅಧಿಕಾರಿಯಾಗಿ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಗ್ರಾಮ ಪಂಚಾಯತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೊನ್ನಾವರ ತಾಲೂಕಿನ ಮಾವಿನಕುರ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಾಡ ಗ್ರಾಮದಲ್ಲಿ ಗುಡ್ಡದ ಮೇಲೆ ಗ್ರಾಮ ನೀರು ನೈರ್ಮಲ್ಯ (ಜಲ ನಿರ್ಮಲ) ಯೋಜನೆಯಡಿಯಲ್ಲಿ ಸುಮಾರು 3 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಅನ್ನು ನಿರ್ಮಿಸಿದ್ದು ಇರುತ್ತದೆ. ಸುಮಾರು ಒಂದು ವಾರದಿಂದ ಅಂದರೆ ದಿನಾಂಕ: 30-05-2021 ರಿಂದ ಈಚೆಗೆ ನೀರು ನೈರ್ಮಲ್ಯ (ಜಲ ನಿರ್ಮಲ) ಯೋಜನೆ ಅಡಿಯಲ್ಲಿ ಅಳವಡಿಸಿದ ಪಿ.ವಿ.ಸಿ ಪೈಪ್ ಮತ್ತು ಕಬ್ಬಿಣದ ಪೈಪ್ ಅನ್ನು ಯಾವುದೋ ಆಯುಧದಿಂದ ದುರುದ್ದೇಶಪೂರಿತವಾಗಿ ಯಾರೋ ಆರೋಪಿತರು (ಕಿಡಿಗೇಡಿಗಳು) ಹಾನಿಗೊಳಿಸಿದ್ದು ಇರುತ್ತದೆ. ಮತ್ತು ಸದ್ರಿ ಟ್ಯಾಂಕಿನ ಪಕ್ಕದಲ್ಲಿ ಸುಮಾರು 50 ಲಕ್ಷ ಮೌಲ್ಯದ ಪ್ರೆಷರ್ ಫಿಲ್ಟರ್ ಕೂಡಾ ಇದ್ದು ಅದನ್ನು ಸಹ ಮುಂದಿನ ದಿನಗಳಲ್ಲಿ ಹಾಳುಗೆಡವುವ ಸಾಧ್ಯತೆ ಇರುತ್ತದೆ. ಇದಲ್ಲದೇ ದಿನಾಂಕ: 03-06-2021 ರಂದು ರಾತ್ರಿ ಯಾರೋ ಆರೋಪಿತರು (ಕಿಡಿಗೇಡಿಗಳು) ವಾಟರ್ ಟ್ಯಾಂಕ್ ಮೇಲ್ಭಾಗದಲ್ಲಿ ಕಲ್ಲು ಮಣ್ಣು ಎಸೆದಿರುತ್ತಾರೆ. ದಿನಾಂಕ: 04-06-2021 ರಂದು ಬೆಳಿಗ್ಗೆ ಸುಮಾರು 10-30 ಸಮಯಕ್ಕೆ ವಾಟರ್ ಟ್ಯಾಂಕ್ ಮೇಲ್ಭಾಗಕ್ಕೆ ಹೋದಾಗ ಕಲ್ಲು ಮಣ್ಣು ಎಸೆದಿರುವುದು ನನಗೆ ಕಂಡು ಬಂದಿರುತ್ತದೆ. ಸದರಿಯವರ ಈ ದುಷ್ಕೃತ್ಯದಿಂದ ಸರ್ಕಾರಕ್ಕೆ ಸುಮಾರು 5,000/- ರೂಪಾಯಿಯಷ್ಟು ನಷ್ಟವಾಗಿರುತ್ತದೆ. ಮುಂದೆ ಇದೇ ರೀತಿ ನಡೆದಲ್ಲಿ ಸಾರ್ವಜನಿಕರಿಗೆ ಒದಗಿಸುವ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಂಭವವಿರುತ್ತದೆ ಹಾಗಾಗಿ ಈ ಕೃತ್ಯದಲ್ಲಿ ಭಾಗಿಯಾಗಿ ಸರ್ಕಾರದ ಆಸ್ತಿಗೆ ಸುಮಾರು 5,000/- ರೂಪಾಯಿಯ ನಷ್ಟವನ್ನು ಉಂಟು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮಾನ್ಯರವರಲ್ಲಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಉದಯಕುಮಾರ ಪಿ. ತಂದೆ ಪಾಪಣ್ಣ, ಪ್ರಾಯ-37 ವರ್ಷ, ವೃತ್ತಿ-ಪಿ.ಡಿ.ಓ, ಗ್ರಾಮ ಪಂಚಾಯತಿ, ಮಾವಿನಕುರ್ವಾ, ಸಾ|| ಸಾಲೆಹಿತ್ತಲು, ತಾ: ಹೊನ್ನಾವರ ರವರು ದಿನಾಂಕ: 05-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 283, 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕಿರಣ ತಂದೆ ಶ್ರೀಶೈಲಪ್ಪ ಗರಡ್ಡಿ, ಪ್ರಾಯ-21 ವರ್ಷ, ವೃತ್ತಿ-ಚಾಲಕ, ಸಾ|| ಬೆಟಗೇರಿ, ಗದಗ (ಲಾರಿ ನಂ: ಕೆ.ಎ-25/ಡಿ-7831 ನೇದರ ಚಾಲಕ), 2]. ಹನುಮಂತಗೌಡ ತಂದೆ ರಂಗನಗೌಡ ಗೌಡರ, ಪ್ರಾಯ-58 ವರ್ಷ, ವೃತ್ತಿ-ಚಾಲಕ ಮತ್ತು ಮಾಲಕ, ಸಾ|| ಕೋಳಿವಾಡ, ಹುಬ್ಬಳ್ಳಿ (ಲಾರಿ ನಂ: ಕೆ.ಎ-22/ಸಿ-3406 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 05-06-2021 ರಂದು 00-15 ಗಂಟೆಗೆ ಯಲ್ಲಾಪುರ ತಾಲೂಕಿನ ಡೊಮಗೇರ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಆರೋಪಿ 1 ನೇಯವನು ತನ್ನ ಬಾಬ್ತು ಲಾರಿ ನಂ: ಕೆ.ಎ-25/ಡಿ-7831 ನೇದನ್ನು ಯಾವುದೇ ಸಿಗ್ನಲ್ ಲೈಟ್ ಹಾಕದೇ ಇತರೆ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುವಂತೆ ರಸ್ತೆಯ ಮೇಲೆ ಹುಬ್ಬಳ್ಳಿ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು, ಅದೇ ಸಮಯಕ್ಕೆ ಸದರ ನಿಲ್ಲಿಸಿದ ಲಾರಿಯನ್ನು ಓವರಟೇಕ್ ಮಾಡಿ ಇನ್ನೊಂದು ವಾಹನ ಬಂದಿದ್ದರಿಂದ, ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಆರೋಪಿ 2 ನೇಯವನು  ಚಲಾಯಿಸಿಕೊಂಡು ಹೋಗುತ್ತಿದ್ದ ತನ್ನ ಲಾರಿ ನಂ: ಕೆ.ಎ-22/ಸಿ-3406 ನೇದನ್ನು ರಸ್ತೆ ಬದಿಯಲ್ಲಿ ತೆಗೆದುಕೊಂಡಾಗ ಲಾರಿಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ತನ್ನ ಬಲಬದಿಗೆ ಹೋಗಿ ರಸ್ತೆ ಬದಿಯಲ್ಲಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮುಂದೆ ಹೋಗಿ ಬಲ ಮಗ್ಗಲು ಪಲ್ಟಿಯಾಗಿ ಮರಕ್ಕೆ ಲಾರಿಯ ಮುಂಬದಿ ತಾಗಿ ಜಖಂಗೊಂಡಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಶೋಕ ತಂದೆ ಬಸಪ್ಪ ಗಾಣಿಗೇರ, ಪ್ರಾಯ-27 ವರ್ಷ, ವೃತ್ತಿ-ಕ್ಲೀನರ್ ಕೆಲಸ, ಸಾ|| ಕೋಳಿವಾಡ, ಹುಬ್ಬಳ್ಳಿ ರವರು ದಿನಾಂಕ: 05-06-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: 323, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ @ ಪ್ರಣಯ ತಂದೆ ಪ್ರಕಾಶ ಬಾಂದೋಡಕರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, 2]. ಶ್ರೀಮತಿ ಜ್ಯೋತಿ ಕೋಂ. ನಾರಾಯಣ @ ಪ್ರಣಯ ಬಾಂದೋಡಕರ, ಪ್ರಾಯ-25 ವರ್ಷ, ವೃತ್ತಿ-ಗೃಹಿಣಿ, ಸಾ|| (ಇಬ್ಬರೂ) ಗುಡ್ನಾಪುರ ಗಲ್ಲಿ, ಹಳಿಯಾಳ ಶಹರ. ಈ ನಮೂದಿತ ಆರೋಪಿತರಿಬ್ಬರೂ ಕ್ರಮವಾಗಿ ಪಿರ್ಯಾದಿಯವರ ಮಗ ಹಾಗೂ ಸೊಸೆ ಇದ್ದು, ಕಳೆದ ಸುಮಾರು 2 ರಿಂದ 3 ತಿಂಗಳಿನಿಂದ ಆರೋಪಿ 1 ನೇಯವನು ದಿನಾಲು ಸರಾಯಿ ಕುಡಿದು ಬಂದು ಆರೋಪಿ 2 ನೇಯವರೊಂದಿಗೆ ಸೇರಿಕೊಂಡು ಪಿರ್ಯಾದಿಯವರಿಗೆ ‘ನೀನು ನಮ್ಮ ಮನೆ ಬಿಟ್ಟು ಹೋಗು’ ಅಂತಾ ಪದೇ ಪದೇ ಹೇಳುತ್ತಾ ಆಗಾಗ ಜಗಳ ಮಾಡುತ್ತಾ ಬಂದಿದ್ದು, ಇದರಿಂದ ಪಿರ್ಯಾದಿಯವರಿಗೆ ಮಾನಸಿಕ ಕಿರಿಕಿರಿ ಉಂಟಾಗಿದ್ದು, ಆದರೂ ಸಹ ಪಿರ್ಯಾದಿಯವರು ಸಹಿಸಿಕೊಂಡು ಬಂದಿರುತ್ತಾರೆ. ಹೀಗಿರುತ್ತಾ ದಿನಾಂಕ: 04-06-2021 ರಂದು 13-30 ಗಂಟೆಗೆ ಹಳಿಯಾಳ ಶಹರದ ದೇಶಪಾಂಡೆ ನಗರದ  ಗುಡ್ನಾಪುರ ಗಲ್ಲಿಯಲ್ಲಿ ಪಿರ್ಯಾದಿಯವರು ತಮ್ಮ ಮನೆಯ ಮುಂದೆ ಹೊರಗಡೆ ಓಡಾಡುತ್ತಿದ್ದಾಗ, ಅಲ್ಲಿಗೆ ಬಂದ ಆರೋಪಿ 1 ನೇಯವನು ಪಿರ್ಯಾದಿಯವರನ್ನು ತಡೆದು ನಿಲ್ಲಿಸಿ, ಒಮ್ಮೆಲೇ ಮೈಮೇಲೆ ಏರಿ ಬಂದು ‘ಕುತ್ರಿಚೋ ನಾಲಾಯಕ ರಂಡಿ’ ಅಂತಾ ಅವಾಚ್ಯವಾಗಿ ಬೈಯ್ದು ಕಾಲಿನಿಂದ ಹೊಟ್ಟೆಗೆ ಹಾಗೂ ಬೆನ್ನಿಗೆ ಒದ್ದು ಕೈಯಿಂದ ಕಪಾಳಕ್ಕೆ ಹೊಡೆದು, ಪಿರ್ಯಾದಿಯವರ ತಲೆ ಕೂದಲು ಹಿಡಿದು ಮನೆಯಿಂದ ಹೊರಗೆ ಹಾಕಿದ್ದಲ್ಲದೇ, ಆರೋಪಿ 1 ಮತ್ತು 2 ನೇಯವರು ಸೇರಿ ಪಿರ್ಯಾದಿಯವರಿಗೆ ಉದ್ದೇಶಿಸಿ, ‘ನೀನು ನಮ್ಮ ಮನೆಯಲ್ಲಿ ಇರುವುದು ಬೇಡ. ಮನೆ ಬಿಟ್ಟು ಹೋಗು. ನಮ್ಮ ಮನೆಗೆ ಬಂದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ಕೊಂದೇ ಬಿಡುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮೀರಾ ಕೋಂ. ಪ್ರಕಾಶ ಬಾಂದೋಡಕರ, ಪಾಯ-50 ವರ್ಷ, ವೃತ್ತಿ-ಗೃಹಿಣಿ, ಸಾ|| ಗುಡ್ನಾಪುರ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 05-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪವನ ತಂದೆ ರಾಮ ಶಿಮನಗೌಡ, ಪ್ರಾಯ-30 ವರ್ಷ, ವೃತ್ತಿ-ಕೃಷಿ ಕೆಲಸ, 2]. ರಾಮ ತಂದೆ ರೇವಪ್ಪ ಶಿಮನಗೌಡ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| (ಇಬ್ಬರೂ) ಕಾಳಗಿನಕೊಪ್ಪ ಗ್ರಾಮ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ಮತ್ತು ಪಿರ್ಯಾದಿಯವರು ಸಹೋದರ ಸಂಬಂಧಿಗಳಾಗಿದ್ದು, ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಸರ್ವೇ ನಂ: 79/41 ನೇದರಲ್ಲಿ ಇವರ ಜಮೀನು ಇದ್ದು, ದಿನಾಂಕ: 05-06-2021 ರಂದು 18-00 ಗಂಟೆಗೆ ಪಿರ್ಯಾದಿಯವರು ತಮ್ಮ ಜಮೀನಿನಲ್ಲಿ ಗೊಂಜಾಳಕ್ಕೆ ಗೊಬ್ಬರ ಹಾಕುವ ಕೆಲಸ ಮಾಡುತ್ತಿದ್ದಾಗ, ಆರೋಪಿ 1 ಮತ್ತು 2 ನೇಯವರು ಎತ್ತುಗಳನ್ನು ಪಿರ್ಯಾದಿಯವರ ಜಮೀನಿನಲ್ಲಿ ಹೊಡೆದುಕೊಂಡು ಬಂದಿದ್ದರಿಂದ ಪಿರ್ಯಾದಿಯವರು ಆರೋಪಿತರಿಗೆ ‘ಗೊಂಜಾಳ ಹಾಳಾಗುತ್ತದೆ. ಯಾಕೆ ಎತ್ತುಗಳನ್ನು ಹೊಡೆದುಕೊಂಡು ಬಂದಿರಿ?’ ಅಂತ ಕೇಳಿದ್ದಕ್ಕೆ ಆರೋಪಿ 1 ನೇಯವನು ಪಿರ್ಯಾದಿಯವರಿಗೆ ಉದ್ದೇಶಿಸಿ ‘ಹಡಸು ಸೂಳೆ ಮಗನೆ, ನಮಗೆ ಬುದ್ಧಿ ಹೇಳೋಕೆ ಬರತೀ. ನಿನ್ನ ತಾಯಿನ ಹಡಾ’ ಅಂತ ಅವಾಚ್ಯವಾಗಿ ಬೈಯ್ದು ಒಮ್ಮೆಲೇ ಮೈ ಮೇಲೆ ಏರಿ ಬಂದವನೆ, ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯ ದೊಣ್ಣೆಯನ್ನು ತೆಗೆದುಕೊಂಡು ಪಿರ್ಯಾದಿಯವರ ತಲೆಗೆ ಮತ್ತು ಮೈ ಕೈಗೆ ಅಲ್ಲಲ್ಲಿ ಹೊಡೆದು ರಕ್ತಗಾಯ ಪಡಿಸಿದನು. ನಂತರ ಆರೋಪಿ 2 ನೇಯವನು ಪಿರ್ಯಾದಿಯವರಿಗೆ ಕೈಯಿಂದ ದೂಡಿ ಹಾಕಿ ನೆಲಕ್ಕೆ ಬೀಳಿಸಿ, ಎಡಗೈ ಮೇಲೆ ಕೈಯಿಂದ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ಇಬ್ಬರೂ ಸೇರಿ ಪಿರ್ಯಾದಿಯವರಿಗೆ ‘ಈ ಬಾರಿ ಉಳಿದುಕೊಂಡಿದ್ದಿ. ಇನ್ನೊಮ್ಮೆ ಸಿಕ್ಕಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಅಂತ ಜೀವ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪರಶುರಾಮ ತಂದೆ ನಾರಾಯಣ ಶಿಮನಗೌಡ, ಪ್ರಾಯ-35 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾಳಗಿನಕೊಪ್ಪ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 05-06-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ತೌಸೀಪ್ ತಂದೆ ಗೋರೆಸಾಬ್ ತಲ್ಲೂರ, ಪ್ರಾಯ-22 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕಾವಲವಾಡ, ತಾ: ಹಳಿಯಾಳ, 2]. ಮೌಲಾಸಾಬ್ ತಂದೆ ಪಕ್ರುಸಾಬ್ ಗಿಡದನ್ನವರ, ಪ್ರಾಯ-38 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಹೊಸ ವಟ್ನಾಳ, ತಾ: ಹಳಿಯಾಳ, 3]. ಸಯ್ಯದ್ತಂದೆ ಬಾಪುಸಾಬ್ ಗಿಡದನ್ನವರ, ಪ್ರಾಯ-27 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊಸ ವಟ್ನಾಳ, ತಾ: ಹಳಿಯಾಳ, 4]. ಮಹ್ಮದಗೌಸ್ ತಂದೆ ಇಸ್ಮಾಯಿಲಸಾಬ್ ಪಾರೂಮಿಯಾ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳವಟಿಗಿ, ತಾ: ಹಳಿಯಾಳ, 5]. ಜುಮ್ಮಾಸಾಬ್ ತಂದೆ ಸಯ್ಯದಸಾಬ್ ನಾಯ್ಕರ್, ಪ್ರಾಯ-38 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಸುಳಿಕಟ್ಟಿ, ತಾ: ಕಲಘಟಗಿ, ಜಿ: ಧಾರವಾಡ, 6]. ಆಫ್ ತಂದೆ ಶರೀಪಸಾಬ್ ಸೀಗಳ್ಳಿ, ಪ್ರಾಯ-22 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಕಾವಲವಾಡ, ತಾ: ಹಳಿಯಾಳ, 7]. ಆಯಾಜ್ ಅಹಮ್ಮದ್ ತಂದೆ ಇಮ್ತಿಯಾಜ್ ಶಿರೋಳ, ಪ್ರಾಯ-23 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಬೆಳವಟಿಗಿ, ತಾ: ಹಳಿಯಾಳ, 8]. ಮಕ್ತುಂ ತಂದೆ ಶರೀಪಸಾಬ್ ಕಿತ್ತೂರ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳವಟಿಗಿ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ದಿನಾಂಕ: 05-06-2021 ರಂದು 16-40 ಗಂಟೆಯ ಸುಮಾರಿಗೆ ಹಳಿಯಾಳ ತಾಲೂಕಿನ ಬೆಳವಟಿಗಿ ಗ್ರಾಮದ ಬದಿಯಿಂದ ಗುಳೆದಕೊಪ್ಪ ಗ್ರಾಮಕ್ಕೆ ಹೋಗುವ ಡಾಂಬರ್ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್-19 ರೋಗದ ಸಲುವಾಗಿ ಸರ್ಕಾರ ಲಾಕಡೌನ್ ಆದೇಶವನ್ನು ಜಾರಿ ಮಾಡಿದ್ದು ಗೊತ್ತಿದ್ದರೂ ಸಹ ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ತಮ್ಮ ತಮ್ಮ ಲಾಭಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣ ಪಂಥ ಕಟ್ಟಿ ಅಂದರ್-ಬಾಹರ್ ಎಂಬ ಜೂಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಇಸ್ಪೀಟ್ ಜೂಗಾರಾಟ ಸಾಮಗ್ರಿಗಳಾದ 1). ವಿವಿಧ ಮುಖ ಬೆಲೆಯ ನಗದು 4,970/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, ಅ||ಕಿ|| 00.00/- ರೂಪಾಯಿ, 3). ಪ್ಲಾಸ್ಟಿಕ್ ಹಾಳೆ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಆರೋಪಿ 1 ರಿಂದ 5 ನೇಯವರು ಪಿರ್ಯಾದಿಯವರಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 6, 7 ಮತ್ತು 8 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ, ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 05-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-06-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಉಮೇಶ ತಂದೆ ಶೀವಪ್ಪ ಭೋವಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿದ್ದಾಪುರ ಓಣಿ, ಮಳಗಿ, ತಾ: ಮುಂಡಗೋಡ. ಸುದ್ದಿದಾರರ ಮಾವನ ಅಣ್ಣನ ಮಗನಾದ ಈತನು ದಿನಾಂಕ: 05-06-2021 ರಂದು ಮಧ್ಯಾಹ್ನ 02-00 ಗಂಟೆಯಿಂದ 02-45 ಗಂಟೆಯ ನಡುವಿನ ಅವಧಿಯಲ್ಲಿ ಸುದ್ದಿದಾರರ ಹೊಲದ ಹತ್ತಿರ ಇದ್ದ ಕೆರೆಯಲ್ಲಿ ಮೀನು ಹಿಡಿಯುಲು ಅಂತಾ ಕೆರೆಯ ನೀರಿನಲ್ಲಿ ಇಳಿದವನು, ಆಕಸ್ಮಾತ್ ಆಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಇದರ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಆತನ ಮೃತದೇಹವು ನಾಗಿನಕೇರಿಯ ಕೆರೆಯ ದಂಡೆಯಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜಯಮ್ಮ ಕೋಂ. ಹನುಮಂತ ಭೋವಿ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಗಿನಕೇರಿ, ಮಳಗಿ, ತಾ: ಮುಂಡಗೋಡ ರವರು ದಿನಾಂಕ: 05-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 07-06-2021 12:42 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080