ಅಭಿಪ್ರಾಯ / ಸಲಹೆಗಳು

 

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 02-03-2021 ರಂದು 19-00 ಗಂಟೆಯಿಂದ ದಿನಾಂಕ: 03-03-2021 ರಂದು 07-00 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ಶಹರದ ಕಾಕರಮಠದಲ್ಲಿರುವ ಶ್ರೀ ಲಂಬೋದರ ರಾಯ್ಕರ ರವರ ಮನೆಯ ವಾಹನ ನಿಲ್ಲಿಸುವ ಸ್ಥಳದಿಂದ 15 ವರ್ಷ ಹಳೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಇ-3157 ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ಕಳ್ಳರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನಿನಂತೆ ಕ್ರಮವನ್ನು ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ನಾರಾಯಣ ಶೇಟ್, ಪ್ರಾಯ-32 ವರ್ಷ, ವೃತ್ತಿ-ಎಸ್.ಬಿ.ಐ ನಲ್ಲಿ ಖಾಸಗಿ ನೌಕರ, ಸಾ|| ಸುಂಕಸಾಳ, ತಾ: ಅಂಕೋಲಾ, ಹಾಲಿ ಸಾ|| ಕಾಕರಮಠ, ತಾ: ಅಂಕೋಲಾ ರವರು ದಿನಾಂಕ: 05-03-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಯರಾಮನ್ ತಂದೆ ಮುನಿರತ್ನಂ ಐಯ್ಯರ್, ಸಾ|| ಪಯನೂರ, ತಮಿಳುನಾಡು (ಹ್ಯುಂಡೈ ಕಾರ್ ನಂ: ಟಿ.ಎನ್-09/ಸಿ.ಪಿ-9060 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 05-03-2021 ರಂದು 14-00 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕರ್ಣದಿಂದ ಓಂ ಬೀಚಿಗೆ ಹೋಗುವ ರಸ್ತೆಯಲ್ಲಿ ಬಂಗ್ಲೆ ಗುಡ್ಡದ ಸಮೀಪ ತನ್ನ ಹ್ಯುಂಡೈ ಕಾರ್ ನಂ: ಟಿ.ಎನ್-09/ಸಿ.ಪಿ-9060 ನೇದನ್ನು ಓಂ ಬೀಚ್ ಕಡೆಯಿಂದ ಗೋಕರ್ಣ ಕಡೆಗೆ ಬರಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಗೋಕರ್ಣದಿಂದ ಓಂ ಬೀಚ್ ಕಡೆಗೆ ಹೋಗುತ್ತಿದ್ದ ಕಿಯಾ ಸೊನೆಟ್ ಕಾರ್ ನಂ: ಕೆ.ಎ-63/ಎಮ್-7737 ನೇದಕ್ಕೆ ಎದುರುಗಡೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 1). ಶ್ರೀಮತಿ ರಾಜಲಕ್ಷ್ಮಿ ಕೋಂ. ಅರ್. ವೆಂಕಟಸುಬ್ರಮಣ್ಯ, ಪ್ರಾಯ-65 ವರ್ಷ, ಸಾ|| ತಿರುಚಿ, ತಮಿಳುನಾಡು, 2). ಶ್ರೀ ಆರ್. ವೆಂಕಟಸುಬ್ರಮಣ್ಯ, ಪ್ರಾಯ-67 ವರ್ಷ, ಸಾ|| ತಿರುಚಿ, ತಮಿಳುನಾಡು, 3). ಶ್ರೀಮತಿ ರಾಧಾ ಕೋಂ. ಮಹೇಶ್ವರನ್, ಪ್ರಾಯ-62 ವರ್ಷ, 4). ಶ್ರೀಮತಿ ರಾಧಿಕಾ ಕೋಂ. ಜಯರಾಮನ್, ಪ್ರಾಯ-58 ವರ್ಷ, ರವರಿಗೆ ಮೈಕೈಗೆ ಹಾಗೂ ತಲೆಗೆ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಭಿಷೇಕ ತಂದೆ ನಿಜಗುಣಿ ಕರನಂದಿ, ಪ್ರಾಯ-30 ವರ್ಷ, ವೃತ್ತಿ-ಬಿಸಿನೆಸ್, ಸಾ|| ಹೌಸ್ ನಂ: 39, ಬಸವೇಶ್ವರ ಪಾರ್ಕ್, 2 ನೇ ಸ್ವೇಜ್, ಸುಳ್ಳಾ ರೋಡ್, ಕೇಶ್ವಾಪುರ, ಹುಬ್ಬಳ್ಳಿ ರವರು ದಿನಾಂಕ: 05-03-2021 ರಂದು 15-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 447, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾದೇವ ತಂದೆ ನಾರಾಯಣ ಹರಿಕಂತ್ರ, 2]. ಮಂಜುನಾಥ ತಂದೆ ನಾರಾಯಣ ಹರಿಕಂತ್ರ, 3]. ಚಂದ್ರಕಾಂತ ತಂದೆ ನಾರಾಯಣ ಹರಿಕಂತ್ರ, 4]. ಮೋಹನ ನಾರಾಯಣ ಹರಿಕಂತ್ರ, ಸಾ|| (ಎಲ್ಲರೂ) ತಾರಿಬಾಗಿಲು, ಪಾವಿನಕುರ್ವಾ, ಹಳದಿಪುರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಕುಡಿದು ಬಂದು ಅವಾಚ್ಯವಾಗಿ ಬೈಯ್ದು ಪಿರ್ಯಾದಿ ಮನೆಯ ಬೇಲಿ ಕಿತ್ತ ಬಗ್ಗೆ ಪಿರ್ಯಾದಿಯ ಗಂಡ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅರ್ಜಿ ದೂರು ನೀಡಿದ್ದರಿಂದ ಸಿಟ್ಟಿನಲ್ಲಿದ್ದ ಆರೋಪಿತರು ದಿನಾಂಕ: 05-3-2021 ರಂದು ಬೆಳಿಗ್ಗೆ 07-30 ಗಂಟೆಯ ಸಮಯಕ್ಕೆ ಪಿರ್ಯಾದಿಯ ಗಂಡ ಮತ್ತು ಮಕ್ಕಳು ಇಲ್ಲದ ಸಮಯದಲ್ಲಿ ಪಿರ್ಯಾದಿಯ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಯನ್ನು ಉದ್ದೇಶಿಸಿ ‘ಏನೇ ಬೋಳಿ ರಂಡೆ, ಎಲ್ಲಿ ಹೋದ ನಿನ್ನ ಗಂಡ ಬೋಳಿ ಮಗ? ಎಲ್ಲಿ ಹೋದ್ರು ನಿನ್ನ ಬೇವರ್ಸಿ ಬೋಳಿ ಮಕ್ಕಳು?’ ಎಂದು ಅವಾಚ್ಯವಾಗಿ ಬೈಯ್ದು ಬೇಲಿ ಗುಟ್ಟ ಕೈಯ್ಯಲ್ಲಿ ಹಿಡಿದು ‘ನಿನ್ನ ತಲೆಗೆ ಈ ಗುಟ್ಟದಿಂದ ಹೊಡೆದು ಬಿಡುತ್ತೇನೆ’ ಎಂದು ಹೇಳಿ ‘ನಿಮ್ಮ ಮನೆಯ ಬೇಲಿಯನ್ನು ಕಿತ್ತಿದ್ದೇವೆ ಎಂದು ನೀವು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟು ನಮ್ಮ ಸಪ್ಪಾ ಕಿತ್ತುಕೊಂಡ್ರಾ?’ ಎಂದು ಅವಾಚ್ಯವಾಗಿ ಮಾತನಾಡಿದ್ದಲ್ಲದೇ ‘ನಿನ್ನ ಗಂಡು ಮಕ್ಕಳು ಬರ್ಲಿ. ಎಲ್ಲರನ್ನು ಸೇರಿಸಿ ನಿಮ್ಮ ಜೀವಕ್ಕೆ ಒಂದು ಗತಿ ಕಾಣಿಸುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಕಮಲಾ ಕೋಂ. ಗಂಗಾಧರ ಹರಿಕಂತ್ರ, ಪ್ರಾಯ-42 ವರ್ಷ, ವೃತ್ತಿ-ಮನೆವಾರ್ತೆ, ಸಾ|| ತಾರಿಬಾಗಿಲು, ಪಾವಿನಕುರ್ವಾ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 05-03-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 341, 392, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ಮಂಜುನಾಥ ಹರಿಕಾಂತ, ಸಾ|| ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ. ನಮೂದಿತ ಆರೋಪಿತನು ಮಾಡುತ್ತಿರುವ ಅನಧೀಕೃತ ಅವ್ಯವಹಾರ ಕುರಿತು ಪಿರ್ಯಾದುದಾರರು ಇಲಾಖಾ ಕಛೇರಿಯಿಂದ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದಿದ್ದು, ಈ ಮಾಹಿತಿ ಪ್ರಕಾರ ಆರೋಪಿಯ ಅವ್ಯವಹಾರ 10 ಕೋಟಿ ಮೀರಿರುತ್ತದೆ. ಹೀಗಾಗಿ ಪಿರ್ಯಾದುದಾರರು ಮಾಹಿತಿ ಹಕ್ಕನಡಿ ದಾಖಲೆ ಪಡೆದ ಸುದ್ದಿ ಕೇಳಿ ಆರೋಪಿತನು ದಿನಾಂಕ: 06-01-2021 ರಂದು ಸಂಜೆ 07-30 ಗಂಟೆಯ ಸುಮಾರಿಗೆ ಪಿರ್ಯಾದುದಾರರು ಮುರ್ಡೇಶ್ವರದ ಉತ್ತರ ದಿಕ್ಕಿನ ಕಡಲ ತೀರದಲ್ಲಿ ನಡೆದುಕೊಂಡು ಹೋಗುವಾಗ ಆರೋಪಿ ಬಂದು ಪಿರ್ಯಾದಿದಾರರನ್ನು ಅಡ್ಡಗಟ್ಟಿ ನಿಲ್ಲಿಸಿ ‘ಸೂಳೆ ಮಗನೆ, ನಮ್ಮ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ತೆಗೆಯುತ್ತೀಯಾ? ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನನಗೆ ಎಲ್ಲಾ ಇಲಾಖೆಯ ಇನಪ್ಲುಯೆನ್ಸ್ ಇದೆ, ನನ್ನ ದಂಧೆಗೆ ಅಡ್ಡ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ರಿವಾಲ್ವಾರದಿಂದ ಪಿರ್ಯಾದುದಾರರ ಹಣೆಗೆ ಹಿಡಿದು ಕೊಲೆ ಮಾಡುವ ಬೆದರಿಕೆ ಹಾಕಿರುತ್ತಾನೆ. ಅಷ್ಟರಲ್ಲಿ ಪಿರ್ಯಾದುದಾರರ ಪರಿಚಯಸ್ಥರು ಘಟನೆ ನಡೆದ ಸ್ಥಳಕ್ಕೆ ಬರುತ್ತಿರುವುದನ್ನು ನೋಡಿ ಪಿರ್ಯಾದುದಾರರ ಮೇಲೆ ಕೈಯಿಂದ ಹಲ್ಲೆ ಮಾಡಿ, ಅಂಗಿಯನ್ನು ಹಿಡಿದು ಪಿರ್ಯಾದುದಾರರ ಅಂಗಿ ಕಿಸೆಯಲ್ಲಿದ್ದ ನಗದು ಹಣ 4,300/- ರೂಪಾಯಿಯನ್ನು ದೋಚಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಯಂತ ತಂದೆ ಗೋವಿಂದ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 05-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಶಿವರ್ಣ ತಂದೆ ರಾಮಾ ಗೌಡ, ಪ್ರಾಯ-19 ವರ್ಷ, ಸಾ|| ಖೂರ್ಸೆ, ಪೋ: ಖೂರ್ಸೆ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-2123 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 05-03-2021 ರಂದು 20-00 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-2123 ನೇದನ್ನು ಶಿರಸಿ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಮಂಜುಗುಣಿ ಕ್ರಾಸ್ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಹಿಂದಿಕ್ಕಿ ಓವರಟೇಕ್ ಮಾಡಿಕೊಂಡು ಹೋದವನು, ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಕುಮಟಾ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಓಮಿನಿ ನಂ: ಕೆ.ಎ-27/ಎನ್-3563 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನಗಳನ್ನು ಜಖಂಗೊಳಿಸಿ, ತಾನು ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಪಿರ್ಯಾದಿ ಹಾಗೂ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಸೀತಾ ಕಳಂಜಿ, ಶ್ರೀಮತಿ ಆಶಾ ಹೆಬ್ಬಾರ, ಶ್ರೀಮತಿ ಸರ್ವಸತಿ ಕಳಂಜಿ ಹಾಗೂ ಶ್ರೀ ಶ್ರೀನಿವಾಸ ಕಳಂಜಿ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸುನೀಲ ತಂದೆ ವೆಂಕಟರಮಣ ಹೆಬ್ಬಾರ, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ, ಸಾ|| ರೈಲ್ವೇ ಸ್ಟೇಷನ್ ರಸ್ತೆ, ನ್ಯೂ ಪ್ರಭಾತ್ ಹೊಟೇಲ್ ಎದುರುಗಡೆ, ಹಾವೇರಿ ರವರು ದಿನಾಂಕ: 05-03-2021 ರಂದು 23-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಯೂಬಖಾನ್ ತಂದೆ ಅಬ್ದುಲ್ ಖಾನ್, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಸ್ತೂರಬಾ ನಗರ, ಲಮಾಣಿ ಓಣಿ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 05-03-2021 ರಂದು 09-30 ಗಂಟೆಯ ಸಮಯಕ್ಕೆ ಶಿರಸಿ ನಗರದ ಹೊಸಪೇಟೆ ರಸ್ತೆಯ ರಾಯಲ್ ಎನ್‍ಫಿಲ್ಡ್ ಶೋ-ರೂಮ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಅಕ್ರಮವಾಗಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,430/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ಮತ್ತು ಖಾಲಿ ಪೇಪರಿನ ತುಂಡುಗಳು-06, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀಮತಿ ಜಯಶ್ರೀ ಶಾನಭಾಗ, ಪಿ.ಎಸ್.ಐ (ಕ್ರೈಂ), ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 05-03-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 307 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ತೆಂಜಿನ್ ತ್ಸೇಯಾಂಗ್, ಸಾ|| ಮನೆ ನಂ: 37, ಕ್ಯಾಂಪ್ ನಂ: 06, ಟಿಬೇಟಿಯನ್ ಕಾಲೋನಿ, ತಾ: ಮುಂಡಗೋಡ. ನಮೂದಿತ ಆರೋಪಿತನು ಸಂಶಯಿತನಾಗಿದ್ದು, ದಿನಾಂಕ: 05-03-2021 ರಂದು ಸಂಜೆ 06-30 ಗಂಟೆಗೆ ಮುಂಡಗೋಡದ ಟಿಬೇಟಿಯನ್ ಕಾಲೋನಿ ಕ್ಯಾಂಪ್ ನಂ: 04 ರಲ್ಲಿನ ಪುಟಬಾಲ್ ಮೈದಾನದಲ್ಲಿ ಯಾವುದೋ ಹಿಂದಿನ ದ್ವೇಷದಿಂದ ಜಾಮಯಾಂಗ್ ಡಾಕ್ಪಾ ತಂದೆ ತೆಂಜಿನ್ ಯೇಶಿ, ಪ್ರಾಯ-29 ವರ್ಷ, ವೃತ್ತಿ ವ್ಯಾಪಾರ, ಸಾ|| ಕ್ಯಾಂಪ್ ನಂ: 04, ಮನೆ ನಂ: 43 ವರ್ಷ, ಸಾ|| ಟಿಬೇಟಿಯನ್ ಕ್ಯಾಂಪ್, ತಾ: ಮುಂಡಗೋಡ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ತಿವಿದು ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸೋನಮ್ ದೋರ್ಜಿ ತಂದೆ ದೋರ್ಜಿ, ಪ್ರಾಯ-56 ವರ್ಷ, ವೃತ್ತಿ-ನಿವೃತ್ತ ಸೈನಿಕ, ಸಾ|| ಮನೆ ನಂ: 70, ಕ್ಯಾಂಪ್ ನಂ: 04, ಟಿಬೇಟಿಯನ್ ಕಾಲೋನಿ, ತಾ: ಮುಂಡಗೋಡ ರವರು ದಿನಾಂಕ: 05-03-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 279, 337 ಐಪಿಸಿ ಮತ್ತು ಕಲಂ: 128(1) ಸಹಿತ 177 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಪ್ರಾನ್ಸಿಸ್ ಸಿದ್ದಿ, ಪ್ರಾಯ-30 ವರ್ಷ, ಸಾ|| ಜತಗಾ, ಹೊಸೂರು, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಎಮ್.ಎಚ್-13/ಬಿ.ಕೆ-1563 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 05-03-2021 ರಂದು 18-30 ಗಂಟೆಗೆ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಶ್ರೀ ಹಾದಿ ಬಸವೇಶ್ವರ ದೇವಸ್ಥಾನದ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಎಮ್.ಎಚ್-13/ಬಿ.ಕೆ-1563 ನೇದರಲ್ಲಿ 1+1 ಬದಲಿಗೆ 1+2 ಜನರನ್ನು ಹತ್ತಿಸಿಕೊಂಡು ಕಾಳಗಿನಕೊಪ್ಪ ಕಡೆಯಿಂದ ಅಜಮನಾಳ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ತನ್ನ ಚಾಲನೆಯ ಮೇಲೆ ನಿಯಂತ್ರಣ ಕಳೆದುಕೊಂಡು ಅಜಮನಾಳ ಕಡೆಯಿಂದ ಕಾಳಗಿನಕೊಪ್ಪ ಕಡೆಗೆ ಸೈಕಲ್ ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯವರ ಅಣ್ಣ ಪೀಶಪ್ಪ ತಂದೆ ಲೋಕಪ್ಪ ದೊಡ್ಡಮನಿ, ಪ್ರಾಯ-70 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪೀಶಪ್ಪ ಇವರಿಗೆ ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದೇಮಣ್ಣ ತಂದೆ ಲೋಕಪ್ಪಾ ದೊಡ್ಡಗೌಡ, ಪ್ರಾಯ-47 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 05-03-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 302 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ನೂರಪ್ಪ ಕಟ್ಟಿಮನಿ, ಸಾ|| ಮಣಿ ಕ್ಯಾಂಪ್, ಗಣೇಶಗುಡಿ, ತಾ: ಜೋಯಿಡಾ. ನಮೂದಿತ ಆರೋಪಿತನು ತನ್ನ ಹೆಂಡತಿ ಶ್ರೀಮತಿ ಪಲ್ಲವಿ ಪ್ರಕಾಶ ಕಟ್ಟಿಮನಿ, ಪ್ರಾಯ-29 ವರ್ಷ, ಇವಳು ಗಣೇಶಗುಡಿಯಲ್ಲಿ ಬೇರೆಯವರ ಮನೆಗಳಲ್ಲಿ ಬಟ್ಟೆ ಹಾಗೂ ಪಾತ್ರೆ ತೊಳೆಯುವ ಕೆಲಸಕ್ಕೆ ಹೋಗುತ್ತಿದ್ದವಳು, ಕೆಲಸದಿಂದ ತಡವಾಗಿ ಬಂದರೆ ‘ಎಲ್ಲಿಂದ ಬರುತ್ತಾ ಇದ್ದಿ?’ ಅಂತಾ ಸಂಶಯದಿಂದ ತುಚ್ಛವಾಗಿ ಮಾತನಾಡುವುದು, ಸರಾಯಿ ಕುಡಿದು ಬಂದು ಮೃತಳಿಗೆ ‘ನೀನು ಅಲ್ಲಿ ಹಡಸ್ಕೋತಿ, ಇಲ್ಲಿ ಹಡಸ್ಕೋತಿ ಸೂಳೆ’ ಅಂತಾ ಬೈಯ್ಯುವುದು, ಮನೆಯಲ್ಲಿ ಯಾರೂ ಇಲ್ಲದಾಗ ಹೊಡೆಯುವುದು ಬಡೆಯುವುದು ಮಾಡುತ್ತಾ ಇದ್ದವನು, ದಿನಾಂಕ: 05-03-2021 ರಂದು ಮಧ್ಯರಾತ್ರಿ 03-00 ಗಂಟೆಯ ಸುಮಾರಿಗೆ ಕೆಲಸದಿಂದ ತಡವಾಗಿ ಬರುತ್ತಿರುವುದನ್ನು ಬೇರೆಯವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಅಂತಾ ಕಲ್ಪಿಸಿಕೊಂಡು ಕೊಡಲಿಯಿಂದ ತಲೆಯ ಭಾಗದಲ್ಲಿ ಹೊಡೆದು ಕೊಲೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಪರಶುರಾಮ ತಂದೆ ಕೆಂಚಪ್ಪ ಮಾದರ ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೂದಿಹಾಳ ಎಸ್.ಎಚ್, ತಾ: ಬಿಳಗಿ, ಜಿ: ಬಾಗಲಕೋಟೆ ರವರು ದಿನಾಂಕ: 05-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-03-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಚೆನ್ನಯ್ಯ ತಂದೆ ಸೋಮಾ ಗೌಡ, ಪ್ರಾಯ-48 ವರ್ಷ, ವೃತ್ತಿ-ಚಾಲಕ, ಸಾ|| ಒಕ್ಕಲಕೇರಿ, ಹಾರವಾಡ, ತಾ: ಅಂಕೋಲಾ. ಪಿರ್ಯಾದಿಯ ತಮ್ಮನಾದ ಈತನು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದವನು, ದಿನಾಂಕ: 02-03-2021 ರಂದು ಸೊರಬಾಕ್ಕೆ ಕೆಲಸದ ಕುರಿತಾಗಿ ಹೋದವನು ದಿನಾಂಕ: 04-03-2021 ರಂದು ಮರಳಿ ಮನೆಗೆ ಬರುತ್ತಿರುವಾಗ ಮಧ್ಯಾಹ್ನ 12-00 ಗಂಟೆಯಿಂದ ಸಂಜೆ 19-30 ಗಂಟೆಯ ನಡುವಿನ ಅವಧಿಯಲ್ಲಿ ತೀವ್ರ ಅನಾರೋಗ್ಯಕ್ಕೊಳಗಾಗಿ ಮೂಡ್ಕಣಿಯ ಹಂಗಾರಗುಂಡಿ ಬಸ್ ಸ್ಟಾಪಿನಲ್ಲಿ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಉಮಾಕಂತ ತಂದೆ ಸೋಮಾ ಗೌಡ, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಒಕ್ಕಲಕೇರಿ, ಹಾರವಾಡ, ತಾ: ಅಂಕೋಲಾ ರವರು ದಿನಾಂಕ: 05-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಜೊಯಿಡಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ರೇಷ್ಮಾ ಕೋಂ. ಏಕಾನಂದ ಮಿರಾಶಿ, ಪ್ರಾಯ-25 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಾಡಕೋಡಿ ಮಜಿರೆ, ಚಾಪೋಲಿ(ಕ) ಗ್ರಾಮ, ತಾ: ಜೊಯಿಡಾ. ಪಿರ್ಯಾದುದಾರರ ತಂಗಿಯಾದ ಇವಳಿಗೆ ಕಳೆದ ಒಂದುವರೆ ವರ್ಷದ ಹಿಂದೆ ಜೊಯಿಡಾ ತಾಲೂಕಿನ ಚಾಪೋಲಿ(ಕ) ಗ್ರಾಮದ ಬಾಡಕೋಡಿ ಮಜಿರೆಯ ನಿವಾಸಿ ಏಕಾನಂದ ಮಿರಾಶಿ ಈತನಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಆದರೆ ರೇಷ್ಮಾ ಇವಳು ದಿನಾಂಕ: 05-03-2021 ರಂದು ಬೆಳಿಗ್ಗೆ 07-00 ಗಂಟೆಯಿಂದ 10-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಗಂಡನ ಮನೆಯ ಜಂತಿಗೆ ತನ್ನ ಸೀರೆಯಿಂದ ಕೊರಳಿಗೆ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಇವಳ ಮರಣದ ನಿಜವಾದ ಕಾರಣ ತಿಳಿಯಬೇಕಾಗಿದ್ದು, ಇವಳ ಮರಣದಲ್ಲಿ ಸಂಶಯ ಕಂಡು ಬರುತ್ತದೆ, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿಷ್ಣು ತಂದೆ ಬಾಬಿ ಪಾಡಕರ, ಪ್ರಾಯ-31 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದುಪೆವಾಡಿ ಕುಣಂಗ, ಪಾಂಜೇಲಿ, ತಾ: ಜೊಯಿಡಾ    ರವರು ದಿನಾಂಕ: 05-03-2021 ರಂದು 16-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 06-03-2021 12:37 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080