ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: 269, 336 ಐಪಿಸಿ ಹಾಗೂ ಕಲಂ: 184 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಸ್ಟೀಫನ್ ಥೋಮಸ್ ನೋರನ್ಹಾ, ಪ್ರಾಯ-37 ವರ್ಷ, ವೃತ್ತಿ-ಬೋರವೆಲ್ ಏಜೆನ್ಸಿ, ಸಾ|| ಗಾಂಧಿನಗರ, ತಾ: ಹೊನ್ನಾವರ. ಈತನು ಕೋವಿಡ್-19 ವೈರಸ್ ಪ್ರಸರಣವನ್ನು ತಡೆಟಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ಮಾಡಿರುವ ಕೋವಿಡ್ ಕರ್ಫ್ಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಕೋವಿಡ್-19 ಕೊರೋನಾ ಸೋಂಕು ಸಾರ್ವಜನಿಕರಿಗೆ ಹರಡುವ ಬಗ್ಗೆ ತಿಳಿದಿದ್ದರೂ ಸಹ ದಿನಾಂಕ: 05-05-2021 ರಂದು 17-00 ಗಂಟೆಗೆ ಮದ್ಯಪಾನ ಮಾಡಿ ಮೋಟಾರ್ ಸೈಕಲನ್ನು ಚಲಾಯಿಸಿ, ಯಾವುದೇ ಸರಿಯಾದ ಕಾರಣವನ್ನು ನೀಡದೇ ಹಾಗೂ ನಿರ್ಲಕ್ಷ್ಯತೆಯಿಂದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಪರಾಧ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 05-05-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಭಾಯಿ ತಂದೆ ಬಾಬುಭಾಯಿ ಕರ್ಮಟಾ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಶಾಪುರ್, ತಾ: ಮಾಂಗ್ರೋಲ್, ಜಿ: ಜುನಾಗಡ್, ಗುಜರಾತ (ಲಾರಿ ನಂ: ಜಿ.ಜೆ-11/ವಿ.ವಿ-7707 ನೇದರ ಚಾಲಕ). ಈತನು ದಿನಾಂಕ: 05-05-2021 ರಂದು 21-45 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಲಾರಿ ನಂ: ಜಿ.ಜೆ-11/ವಿ.ವಿ-7707 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಕುಮಟಾ ತಾಲೂಕಾ ದುಂಡಕುಳಿ ಹತ್ತಿರ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹ ಲಾರಿಯ ವೇಗವನ್ನು ನಿಯಂತ್ರಿಸದೇ ನಿಷ್ಕಾಳಜಿಯಿಂದ ಚಲಾಯಿಸಿ, ರಸ್ತೆಯ ಮದ್ಯದ ರೋಡ್ ಡಿವೈಡರಿಗೆ ಬಡಿದು ಲಾರಿಯನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿಯಲ್ಲಿ ಇದ್ದ ನನಗೆ ಎಡಗೈ ಮೊಣಗಂಟಿಗೆ ಗಾಯವಾಗಲು ಹಾಗೂ ಇನ್ನೊಬ್ಬ ಚಾಲಕ ಗೋವಿಂದಭಾಯಿ ಇವರಿಗೆ ತಲೆಯ ಹಿಂಬದಿಗೆ ಗಾಯವಾಗಲು ಕಾರಣವಾಗಿದ್ದಲ್ಲದೇ, ತನಗೆ ಬಲಗಾಲಿನ ಪಾದದ ಭಾಗ ತುಂಡಾಗಲು ಹಾಗೂ ಎಡಗಾಲಿನ ಮೊಣಗಂಟಿನ ಭಾಗದಲ್ಲಿ ಮೂಳೆ ಮುರಿದು ಭಾರೀ ಗಾಯವಾಗಲು ಮತ್ತು ಎಡಗೈಗೆ ಸಾದಾ ಗಾಯವಾಗಲು ಆರೋಪಿ ಲಾರಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಹೀರಾಭಾಯಿ ತಂದೆ ಸುಧಾಭಾಯಿ ಚಾವುಡಾ, ಪ್ರಾಯ-37 ವರ್ಷ, ವೃತ್ತಿ-ಚಾಲಕ, ಸಾ|| ಶಾಪುರ್, ತಾ: ಮಾಂಗ್ರೋಲ್, ಜಿ: ಜುನಾಗಡ್, ಗುಜರಾತ ರವರು ದಿನಾಂಕ: 05-05-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 269, 270 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹ್ಮದ್ ಯಾಸೀನ್ ತಂದೆ ಅಲ್ಜಿ ಅಲಿ, ಪ್ರಾಯ-52 ವರ್ಷ, ವೃತ್ತಿ-ರೆಡ್ ಚಿಲ್ಲಿ ದಾಬಾ ಮಾಲಿಕ, 2]. ವಾಸೀನ್ ತಂದೆ ಮಹಮ್ಮದ್ ಯಾಸೀನ್ ಅಲ್ಜಿ, ಪ್ರಾಯ-23 ವರ್ಷ, ವೃತ್ತಿ- ಹೊಟೇಲ್ ಕೆಲಸ, 3]. ಸಲ್ಮಾನ್ ಮಹ್ಮದ್ ಜುಬೇರ್ ಅಲ್ಜಿ ಅಲಿ, ಪ್ರಾಯ-30 ವರ್ಷ, ವೃತ್ತಿ-ಹೊಟೇಲ್ ಕೆಲಸ, 4]. ಮಹ್ಮದ್ ಪಾರಿಸ್ ತಂದೆ ಅಬ್ದುಲ್ ಸಮದ್ ಕಾವಾ, ಪ್ರಾಯ-23 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| (ಎಲ್ಲರೂ) ಹಳೇಮಠ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರಕಾರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಹೊರಡಿಸಿದ ಲಾಕಡೌನ್ ಆದೇಶಗಳಿದ್ದರೂ ಸಹ ಸಾರ್ವಜನಿಕರಿಗೆ ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ದಿನಾಂಕ: 05-05-2021 ರಂದು 20-30 ಗಂಟೆಗೆ ತಮ್ಮ ಲಾಭಕ್ಕಾಗಿ ದಾಬಾವನ್ನು ತೆರೆದು ಜನರಿಗೆ ಊಟ ಮಾರಾಟ ಮಾಡುತ್ತಾ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 05-05-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಕಹೀಮ್ ತಂದೆ ಅಬ್ದುಲಖಾನ್, ಪ್ರಾಯ-60 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಕಿಂತಾಲಕೇರಿ, ತಾ: ಹೊನ್ನಾವರ. ಈತನು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಲಾಕಡೌನ್ ಆದೇಶ ಹೊರಡಿಸಿದ್ದರೂ ಸಹ ದಿನಾಂಕ: 05-05-2021 ರಂದು ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ತನ್ನ ಅಂಗಡಿಯನ್ನು ತೆರೆದಿಟ್ಟುಕೊಂಡು ವ್ಯಾಪಾರ ಮಾಡುತ್ತಾ ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ಲಾಕಡೌನ್ ಆದೇಶ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ಅನಗತ್ಯವಾಗಿ ತನ್ನ ಅಂಗಡಿ ತೆರೆದು ನಿರ್ಲಕ್ಷ್ಯದ ಕೃತ್ಯ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 05-05-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಜಟ್ಟಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಅವರಗುಪ್ಪಾ, ತಾ: ಸಿದ್ದಾಪುರ ಹಾಲಿ ಸಾ|| ಹೊಂಡಗದ್ದೆ, ತಾ: ಸಿದ್ದಾಪುರ. ಈತನು ಪಿರ್ಯಾದಿ ಇವಳ ಗಂಡನಿದ್ದು, ಗಂಡ ಹೆಂಡತಿ ಸಂಸಾರ ಸರಿ ಬಾರದೇ ಇದ್ದುದ್ದರಿಂದ ಪಿರ್ಯಾದುದಾರಳು ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದು ಕೋರ್ಟಿನಲ್ಲಿ ವಿಚಾರಣೆಯಲ್ಲಿರುತ್ತದೆ. ಈ ಬಗ್ಗೆ ಆರೋಪಿತನಿಗೆ ನೋಟಿಸ್ ಜಾರಿಯಾಗಿದ್ದು, ಇದರಿಂದ ಪಿರ್ಯಾದುದಾರಳ ಮೇಲೆ ಸಿಟ್ಟಿನಿಂದ ಇದ್ದವನು ಹಾಗೂ ಸಣ್ಣಪುಟ್ಟ ಕಾರಣಗಳಿಗಾಗಿ ಪಿರ್ಯಾದಿಯೊಂದಿಗೆ ಜಗಳ ಮಾಡುತ್ತಿದ್ದವನು. ದಿನಾಂಕ: 05-05-2021 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದುದಾರಳು ‘ಮನೆಯಲ್ಲಿದ್ದ ಕತ್ತಿ ಎಲ್ಲಿದೆ? ನಿನ್ನ ತಾಯಿ ಮನೆಗೆ ಏನಾದರೂ ಒಯ್ದಿದ್ದೀಯಾ?’ ಅಂತಾ ಆರೋಪಿತನಿಗೆ ಕೇಳಿದ್ದಕ್ಕೆ ಆರೋಪಿತನು ಪಿರ್ಯಾದುದಾರಳ ಮೇಲೆ ಸಿಟ್ಟುಗೊಂಡು ‘ಬೋಸ್ಡಿ ನೀ ಏನು ಕೇಳುತ್ತಿ?’ ಅಂತಾ ಅವಾಚ್ಯವಾಗಿ ಬೈಯ್ದು, ಪಿರ್ಯಾದಿಯೊಂದಿಗೆ ಜಗಳ ಮಾಡಿದಾಗ ಪಿರ್ಯಾದುದಾರಳು ‘ಈ ರೀತಿ ಜಗಳ ಮಾಡುವುದಾದರೆ ಮನೆಯಲ್ಲಿ ಇರುವುದು ಬೇಡ’ ಅಂತಾ ಹೇಳಿ ಅವನ ಬಟ್ಟೆಯನ್ನು ಹೊರಗೆ ಹಾಕಿದ್ದರಿಂದ ಸಿಟ್ಟುಗೊಂಡು ಏಕಾಏಕಿ ಮನೆಯಲ್ಲಿದ್ದ ಕತ್ತಿಯಿಂದ ಪಿರ್ಯಾದುದಾರಳ ತಲೆಗೆ ಹೊಡೆದುದ್ದಲ್ಲದೇ, ಕತ್ತಿಯ ಹಿಂಬದಿಯಿಂದ ಮುಖಕ್ಕೆ ಎರಡು ಕಡೆಗೆ ಹಾಗೂ ಬಲಗೈ ಮುಂಗೈಗೆ ಮತ್ತು ತೋಳಿಗೆ ಹೊಡೆದು ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುಚಿತ್ರಾ ಮಹೇಶ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಹೊಂಡಗದ್ದೆ, ಕಾನಗೋಡ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 05-05-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ತಿನೈಘಾಟ್ ಹಾಗೂ ಕ್ಯಾಸಲರಾಕ್ ಡಬ್ಲಿಂಗ್ ಕಾಮಗಾರಿಗಾಗಿ ವಿವಿಧ ಮಾದರಿಯ ಕೇಬಲ್‍ಗಳನ್ನು ತೆಗೆದುಕೊಂಡು ಬಂದು ಕ್ಯಾಸಲರಾಕ್ ದ ರೈಲ್ವೆ ಸ್ಟೇಶನ್ ಹತ್ತಿರ ಖುಲ್ಲಾ ಜಾಗದಲ್ಲಿ ಸದರ ಕೇಬಲ್ ಡ್ರಮ್ (ಬಂಡಲ್) ಗಳನ್ನು ಸಂಗ್ರಹ ಮಾಡಿ ಇಟ್ಟಿದ್ದು, ಈಗ ತಮ್ಮ ಕೆಲಸಗಳು ಆರಂಭ ಮಾಡಿದ್ದರಿಂದ ಸದರ ಕೆಲಸಗಳಿಗೆ 30 ಕೋರ್ ಕೇಬಲ್ ಗಳ ಅವಶ್ಯಕತೆ ಇರುವುದರಿಂದ 30 ಕೋರ್ ಕೇಬಲ್ ನ 02 ಡ್ರಮಗಳನ್ನು ದಿನಾಂಕ: 24-04-2021 ರಂದು ಕ್ಯಾಸಲರಾಕ್‍ ದ ವಿವೇಕಾನಂದ ಕಾಲೋನಿಯ ಹತ್ತಿರ ಕೆಲಸದ ಸ್ಥಳಕ್ಕೆ ಸಮೀಪವಾಗುವಂತೆ ಇರಿಸಿದ್ದು, ಅಲ್ಲಿಂದ 30 ಕೋರ್ ನ ಎರಡು ಡ್ರಮ್ (ಬಂಡಲ್) ಗಳಿಂದ 4,30,950/- ರೂಪಾಯಿ ಮೌಲ್ಯದ ಒಂದರಿಂದ 410 ಮೀಟರ್ ನಷ್ಟು ಹಾಗೂ ಇನ್ನೊಂದರಿಂದ 435 ಮೀಟರ್ ಕೇಬಲ್‍ ಅನ್ನು ಯಾರೋ ಆರೋಪಿತರು ಕತ್ತರಿಸಿಕೊಂಡು ದಿನಾಂಕ: 25-04-2021 ರಂದು ಸಾಯಂಕಾಲ 06-30 ಗಂಟೆಯಿಂದ ದಿನಾಂಕ: 27-04-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಮಹಾದೇವ ತಡಲಗಿ, ಪ್ರಾಯ-32 ವರ್ಷ, ವೃತ್ತಿ-ಸೂಪರವೈಸರ್, ಸಾ|| ನಿಂಬಾಳ, ತಾ: ಇಂಡಿ, ಜಿ: ವಿಜಯಪುರ ರವರು ದಿನಾಂಕ: 05-05-2021 ರಂದು 15-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಎಸ್. ಕೆ. ಅನ್ವರಬಾಷಾ ತಂದೆ ಎಸ್. ಕೆ. ನಬಿ, ಸಾ|| ಜಗ್ಗೇಪೇಟಾ, ತಾ: ದುರ್ಗಾಪುರಂ, ಜಿ: ಕೃಷ್ಣಾ, ಆಂಧ್ರಪ್ರದೇಶ ರಾಜ್ಯ (ಲಾರಿ ನಂ: ಎ.ಪಿ-39/ಟಿ.ಎಚ್-5899 ನೇದರ ಚಾಲಕ). ಪಿರ್ಯಾದಿಯವರು ತನ್ನ ಬಾಬ್ತು ಟಾಟಾ ವಿಂಗರ್ ವಾಹನ ನಂ: ಜಿ.ಎ-07/ಕೆ-0070 ನೇದರಲ್ಲಿ ತನ್ನ ತಂದೆಯ ತಂಗಿಯ ಮಗ: ಅನೀಲ ಮಾಜಿ ಇವರ ಮದುವೆಗೆಂದು ಜೋಯಿಡಾ ತಾಲೂಕಿನ ಇಳವೆದಾಬಾಕ್ಕೆ ಬಂದವರು, ಮರಳಿ ಗೋವಾಕ್ಕೆ ಹೋಗುತ್ತಿರುತ್ತಿರುವಾಗ ದಿನಾಂಕ: 04-05-2021 ರಂದು 17-00 ಗಂಟೆಗೆ ಅನಮೋಡ-ಪಣಜಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-4ಎ ರಲ್ಲಿ ಅನಮೋಡದ ಆರ್.ಟಿ.ಓ ಚೆಕಪೋಸ್ಟಿನಿಂದ 03 ಕಿ.ಮೀ ಅಂತರದಲ್ಲಿ ತಿರುವಿನಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಗೋವಾ ಬದಿಯಿಂದ ಲಾರಿ ನಂ: ಎ.ಪಿ-39/ಟಿ.ಎಚ್-5899 ನೇದರ ಆರೋಪಿ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತಿರುವಿನಲ್ಲಿ ತನ್ನ ಬಲಭಾಗಕ್ಕೆ ಬಂದು ಪಿರ್ಯಾದಿಯವರ ಟಾಟಾ ವಿಂಗರ್ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಪರಿಣಾಮ ಟಾಟಾ ವಿಂಗರ್ ಕಾರ್ ಮುಂಭಾಗದಲ್ಲಿ ಪೂರ್ಣ ಜಖಂ ಆಗಿದ್ದು, ಕಾರಿನ ಮುಂಭಾಗದಲ್ಲಿ ಕುಳಿತ್ತಿದ್ದ ಲಕ್ಷ್ಮಣ ವಾಮನ ನಾರ್ವೇಕರ ರವರ ತಲೆಯ ಎಡಭಾಗದಲ್ಲಿ ರಕ್ತದ ಗಾಯವಾಗಿದ್ದು ಬಿಟ್ಟರೆ, ಕಾರಿನಲ್ಲಿದ್ದ ಯಾರಿಗೂ ಪೆಟ್ಟಾಗಿರುವುದಿಲ್ಲ. ಈ ಕುರಿತು ಲಾರಿ ಆರೋಪಿ ಚಾಲಕನ ವಿರುದ್ಧ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ರಾಮಾ ಗಸಾ|| ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಮನೆ ನಂ: 16, ಗಾದೆವಾಡಾ ಕೇರಿ, ಸತ್ತರಿ, ಉತ್ತರ ಗೋವಾ, ಗೋವಾ ರವರು ದಿನಾಂಕ: 05-05-2021 ರಂದು 19-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-05-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಾಯಪ್ಪಾ ತಂದೆ ಗಂಗಪ್ಪಾ ಪರಸಣ್ಣನವರ, ಪ್ರಾಯ-54 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಾಲಗಾಂವ, ತಾ: ಮುಂಡಗೋಡ. ಸುದ್ದಿದಾರರ ತಂದೆಯಾದ ಇವರು ದಿನಾಂಕ: 05-05-2021 ರಂದು ಮಧ್ಯಾಹ್ನ 04-30 ಗಂಟೆಯ ಸುಮಾರಿಗೆ ನಮ್ಮ ಮನೆಯ ಎದುರಿನ ಮಾರೆಮ್ಮಾ ದೇವಿ ದೇವಸ್ಥಾನದ ಎದುರು ನೀರನ್ನು ಎತ್ತುವ ಮೋಟಾರ್ ಪಂಪ್ ಅನ್ನು ವಿದ್ಯುತ್ ತಂತಿಗೆ ಜೋಡಿಸುತ್ತಿರುವಾಗ ಆಕಸ್ಮಿಕವಾಗಿ ಅವರ ಬಲಗೈನ ಉಂಗುರದ ಬೆರಳು ಹಾಗೂ ಕಿರು ಬೆರಳಿನ ನಡುವೆ ವಿದ್ಯುತ್ ತಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಇದರ ಹೊರತು ಅವರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ನನ್ನ ತಂದೆಯ ಮೃತದೇಹವು ಸ್ಥಳಲ್ಲಿಯೇ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹುಸೇನಪ್ಪಾ ತಂದೆ ಮಾಯಪ್ಪಾ ಪರಸಣ್ಣನವರ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ||  ಸಾಲಗಾಂವ, ತಾ: ಮುಂಡಗೋಡ ರವರು ದಿನಾಂಕ: 05-05-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 06-05-2021 04:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080