Feedback / Suggestions

Daily District Crime Report

Date:- 05-11-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಲಿಸಾಬ್ ತಂದೆ ಮದರಸಾಬ್ ಮುಜಾವರ, ಪ್ರಾಯ-37 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಹಳಿಯಾಳ, ಹಾಲಿ ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ, 2]. ಹಸನಸಾಬ್ ತಂದೆ ಮುಕ್ತುಮಸಾಬ್ ವಾರಿಕಲ್, ಪ್ರಾಯ-37 ವರ್ಷ, ವೃತ್ತಿ-ಗಾರ್ಡನ್ ಕೆಲಸ, ಸಾ|| ರೋಣ, ಹಾಲಿ ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ, 3]. ಬಸಯ್ಯಾ ತಂದೆ ಕಲ್ಲಯ್ಯಾ ಹಿರೇಮಠ, ಪ್ರಾಯ-43 ವರ್ಷ, ವೃತ್ತಿ-ಗಾರ್ಡನ್ ಕೆಲಸ, ಸಾ|| ಹುಬ್ಬಳ್ಳಿ, ಹಾಲಿ ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ, 4]. ಪೊನ್ನ ತಂದೆ ಕುಪ್ಪಸ್ವಾಮಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸೂರಬಾ, ಹಾಲಿ ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ, 5]. ನಾಗರಾಜ ತಂದೆ ಕೃಷ್ಣ ಬೆಂಗಳೂರಕರ, ಪ್ರಾಯ-61 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಹಳೆ ದಾಂಡೇಲಿ, ಹಾಲಿ ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ, 6]. ಸೋಮಲಿಂಗ ತಂದೆ ಹರೀಶ್ಚಂದ್ರ ಸಡೇಕರ, ಪ್ರಾಯ-34 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಹಳಿಯಾಳ, ಹಾಲಿ ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 04-11-2021 ರಂದು 23-00 ಗಂಟೆಗೆ ಲಕ್ಷ್ಮೀನಗರದ ಸಿಮೆಂಟ್ ರಸ್ತೆಯ ಪಕ್ಕದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಕೆಳಗೆ ಬೆಳಕಿನಲ್ಲಿ ಒಂದು ಪ್ಲಾಸ್ಟಿಕ್ ನಮೂನೆಯ ಪಾಲಿಥಿನ್ ಚೀಲ ಹೊಲಿದ ತಾಡಪತ್ರಿ ಹಾಸಿ ಅದರ ಮೇಲೆ ಕುಳಿತು ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಆಧಾರದ ಮೇಲೆ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ನಗದು ಹಣ ಒಟ್ಟೂ 4,010/- ರೂಪಾಯಿ ಮತ್ತು ಇಸ್ಪೀಟ್ ಜೂಗಾರಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 01 ಪ್ಲಾಸ್ಟಿಕ್ ನಮೂನೆಯ ಪಾಲಿಥೀನ್ ಚೀಲ ಹೊಲಿದ ತಾಡಪತ್ರಿ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಗುಡಿ, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರ್ವೆಲ್ ತಂದೆ ಮಾರ್ವಿನ್ ರೂಜಾರಿಯೋ, ಪ್ರಾಯ-23 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-9742 ನೇದರ ಸವಾರ). ದಿನಾಂಕ: 05-11-2021 19-5 ಗಂಟೆಗೆ ಪಿರ್ಯಾದಿಯು ತಾನು ಹಾಗೂ ತನ್ನ ಪರಿಚಯದ ಗಣರಾಯ ತಂದೆ ಸದಾಶಿವ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಗಣಪತಿ ದೇವಸ್ಥಾನದ ಹತ್ತಿರ, ಸದಾಶಿವಗಡ, ಕಾರವಾರ ಈತನೊಂದಿಗೆ ಸದಾಶಿವಗಡದ ಟೋಲ್ ನಾಕಾದ ಹತ್ತಿರ ಇರುವ ಶಕ್ತಿ ಮೋಟಾರ್ಸ್ ನ ಮುಂದೆ ಇರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-17(66) ರ ಮೇಲೆ ರಸ್ತೆ ಕ್ರಾಸ್ ಮಾಡುತ್ತಿರುವಾಗ ಪಿರ್ಯಾದಿಯು ರಸ್ತೆಯನ್ನು ಕ್ರಾಸ್ ಮಾಡಿ ಡಿವೈಡರ್ ಮೇಲೆ ನಿಂತಿದ್ದಾಗ ಗಣರಾಯ ಈತನು ಇನ್ನು ರಸ್ತೆಯ ಎಡಬದಿಯಲ್ಲಿಯೇ ಇದ್ದಾಗ ಗೋವಾ ಕಡೆಯಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-9742 ನೇದರ ಆರೋಪಿ ಸವಾರನು ಅತೀವೇಗದಲ್ಲಿದ್ದ ತನ್ನ ಮೋಟಾರ್ ಸೈಕಲನ್ನು ನಿಯಂತ್ರಿಸಲು ಸಾಧ್ಯವಾಗದೇ ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆಯ ಪಕ್ಕ ನಿಂತಿದ್ದ ಗಣರಾಯನಿಗೆ ಡಿಕ್ಕಿ ಪಡಿಸಿ, ಆತನಿಗೆ ಬಲಗಾಲಿನ ಮಂಡಿಯ ಕೆಳಗಿನ ಮೂಳೆಗೆ ಗಂಭೀರ ಸ್ವರೂಪದ ರಕ್ತಗಾಯ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ಹಾಗೂ ತನ್ನ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ವ್ಯಕ್ತಿಯು ರಸ್ತೆಯ ಮೇಲೆ ಬಿದ್ದು, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೆ ಮುಖದ ಭಾಗಕ್ಕೆ ಹಾಗೂ ತಲೆಯ ಭಾಗಕ್ಕೆ ರಕ್ತಗಾಯ ಪಡಿಸಿಕೊಂಡು ಹಾಗೂ ತನ್ನ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಅಲ್ಲಾನ್ ಜೂಡ್ ಅಲ್ಫಾನ್ಸೊ, ಪ್ರಾಯ-25 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕಾರವಾರ ಈತನ ಬಲಗೈಗೆ ತೆರಚಿದ ಗಾಯವಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಸಂಜಯ ತಂದೆ ನಾರಾಯಣ ಭಗತ, ಪ್ರಾಯ-49 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಭಗತವಾಡ, ಅಸ್ನೋಟಿ, ಕಾರವಾರ ರವರು ದಿನಾಂಕ: 05-11-2021 ರಂದು 21-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಿಹಾನ್ ಅಣ್ಣಿಗೇರಿ, ಸಾ|| ಅಕ್ಕಿಆಲೂರು, ಹಾವೇರಿ (ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/ಎ-3087 ನೇದರ ಚಾಲಕ). ಈತನು ದಿನಾಂಕ: 04-11-2021 ರಂದು ಸಾಯಂಕಾಲ 19-45 ಗಂಟೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮೊರಬಾ ಗ್ರಾಮದ ಮಕರ ಹೋಟೆಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/ಎ-3087 ನೇದನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಚಲಾಯಿಸಿಕೊಂಡು ಬಂದು ಅದೇ ದಿಸೆಯಿಂದ ಪಿರ್ಯಾದಿಯವರು ತಮ್ಮ ಕಾರ್ ನಂ: ಕೆ.ಎ-47/ಎಮ್-8395 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದವರಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದು, ಪಿರ್ಯಾದಿಯವರ ಕಾರಿನ ಹಿಂಬದಿಯ ಎಡಬದಿಗೆ ಹಾಗೂ ತನ್ನ ವಾಹನದ ಮುಂಬದಿಯ ಬಲಭಾಗಕ್ಕೆ ಡಿಕಕ್ಇ ಹೊಡೆದು ಡ್ಯಾಮೇಜ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದರ್ಶನ ತಂದೆ ನಾಗೇಶ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ನಾಮಧಾರಿ ಕಲ್ಯಾಣ ಮಂಟಪದ ಪಕ್ಕ, ಬಗ್ಗೋಣ ಗ್ರಾಮ, ತಾ: ಕುಮಟಾ ರವರು ದಿನಾಂಕ: 05-11-2021 ರಂದು 18-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 197/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಮಂಜುನಾಥ ಮಡಿವಾಳ, ಪ್ರಾಯ-25 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-9610 ನೇದರ ಸವಾರ). ಈತನು ದಿನಾಂಕ: 04-11-2021 ರಂದು 22-50 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-9610 ನೇದರ ಮೇಲಾಗಿ ಪಿರ್ಯಾದಿಯವರ ತಮ್ಮ ಮೃತ ಶ್ರೀ ಸಂಜಯ ತಂದೆ ಪಾಂಡುರಂಗ ಪಾವಸ್ಕರ, ಪ್ರಾಯ-29 ವರ್ಷ, ವೃತ್ತಿ-ಐ.ಆರ್.ಬಿ ಕಂಪನಿಯಲ್ಲಿ ಖಾಸಗಿ ಉದ್ಯೋಗಿ, ಸಾ|| ಹೊಸ ಹೆರವಟ್ಟಾ. ತಾ: ಕುಮಟಾ ಈತನಿಗೆ ಕೂಡ್ರಿಸಿಕೊಂಡು ರಾಜ್ಯ ಹೆದ್ದಾರಿ ಸಂಖ್ಯೆ-48 ನೇದರ ಮೇಲೆ ಕುಮಟಾ ಕಡೆಯಿಂದ ಚಂದಾವರ ಕಡೆಗೆ ಹೋಗಲು ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಸ್ಥಳದಲ್ಲಿ ರಸ್ತೆ ತಿರುವು ಇದ್ದರೂ ಸಹ ತನ್ನ ಮೋಟಾರ್ ಸೈಕಲನ್ನು ನಿಯಂತ್ರಣ ಮಾಡದೇ ರಸ್ತೆಯ ಎಡಕ್ಕೆ ಚಲಾಯಿಸಿ ರಸ್ತೆಯ ಬದಿಯಿದ್ದ ಗಟಾರದ ತಡೆಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡು, ತನ್ನ ತಲೆಗೆ ಗಂಭೀರ ಗಾಯನೋವು ಪಡಿಸಿಕೊಂಡು ಸ್ಥಳದಲ್ಲಿಯೇ ಮೃತ ಪಟ್ಟಿದ್ದಲ್ಲದೇ, ಮೋಟಾರ್ ಸೈಕಲ್ ಹಿಂದೆ ಕುಳಿತ ಸಂಜಯ ಈತನ ತಲೆಗೆ ಗಂಭೀರ ಗಾಯನೋವು ಪಡಿಸಿ, ಆತನ ಸಾವಿಗೂ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ಪಾಂಡುರಂಗ ಪಾವಸ್ಕರ, ಪ್ರಾಯ-34 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಉದ್ಯೋಗಿ, ಸಾ|| ಹೊಸ ಹೆರವಟ್ಟಾ, ತಾ: ಕುಮಟಾ ರವರು ದಿನಾಂಕ: 05-11-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 295/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಜೀವನ ತಂದೆ ಕನ್ನಾ ಮುಕ್ರಿ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲ್ಲ್ಕಟ್ಟೆ, ಹಳದಿಪುರ, ತಾ: ಹೊನ್ನಾವರ, 2]. ದೇವರಾಜ ತಂದೆ ಗಜಾನನ ಹೊಸಮಕ್ಕಿ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲ್ಲ್ಕಟ್ಟೆ, ಹಳದಿಪುರ, ತಾ: ಹೊನ್ನಾವರ, 3]. ಸತ್ಯನಾರಾಯಣ ತಂದೆ ಉಗಾದಿ ಮುಕ್ರಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲ್ಲ್ಕಟ್ಟೆ, ಹಳದಿಪುರ, ತಾ: ಹೊನ್ನಾವರ, 4]. ಗಜಾನನ ತಂದೆ ಗಂಗಾಧರ ಮುಕ್ರಿ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲ್ಲ್ಕಟ್ಟೆ, ಹಳದಿಪುರ, ತಾ: ಹೊನ್ನಾವರ, 5]. ಕನ್ನಾ ತಂದೆ ಮಾಬ್ಲು ಮುಕ್ರಿ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲ್ಲ್ಕಟ್ಟೆ, ಹಳದಿಪುರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು 11-15 ಗಂಟೆಗೆ ಹೊನ್ನಾವರ ತಾಲೂಕಿನ ಹಳದಿಪುರ ಕಲ್ಲ್ಕಟ್ಟೆ ಗ್ರಾಮದ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ತಮ್ಮ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ಆರೋಪಿತರೆಲ್ಲರೂ ನಗದು ಹಣ 1,360/- ರೂಪಾಯಿ, ಇಸ್ಪೀಟ್ ಎಲೆ-52, ಹಾಗೂ ಪೇಪರ್ ಮಂಡ-01, ಇವುಗಳೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸಾವಿತ್ರಿ ಎ. ನಾಯಕ. ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 296/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುರೇಶ ತಂದೆ ಮಂಜುನಾಥ ಗೌಡ, ಪ್ರಾಯ-21 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಅಗ್ರಹಾರ, ಹಳದಿಪುರ, ತಾ: ಹೊನ್ನಾವರ, 2]. ಮಾಸ್ತಿ ತಂದೆ ಬೈರು ಗೌಡ, ಪ್ರಾಯ-30 ವರ್ಷ, ವೃತ್ತಿ-ಸೆಂಟರಿಂಗ ಕೆಲಸ, ಸಾ|| ಅಗ್ರಹಾರ, ಹಳದಿಪುರ, ತಾ: ಹೊನ್ನಾವರ, 3]. ಗಣಪು ತಂದೆ ನಾಗಪ್ಪ ಗೌಡ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಗ್ರಹಾರ, ಬಡಗಣಿಕೇರಿ, ಹಳದಿಪುರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು 14-00 ಗಂಟೆಗೆ ಹೊನ್ನಾವರ ತಾಲೂಕಿನ ಹಳದಿಪುರ ಬಡಗಣಿಕೇರಿ ಗ್ರಾಮದ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿಯ ವೇಳೆ ಆರೋಪಿತರು 1). ಒಟ್ಟು ನಗದು ಹಣ 1,510/- ರೂಪಾಯಿ, 2). ಇಸ್ಪೀಟ್ ಎಲೆಗಳು ಒಟ್ಟು-52, ಅ||ಕಿ|| 00.00/- ರೂಪಾಯಿ, 3). ನೀಲಿ ಬಣ್ಣದ ಪ್ಲಾಸ್ಟಿಕ್ ತಾಡಪಲ್ ಮಂಡ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸಾವಿತ್ರಿ ಎ. ನಾಯಕ, ಪಿ.ಎಸ್.ಐ (ತನಿಖೆ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 297/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣಪತಿ ತಂದೆ ಮಂಜು ಗೌಡ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರ, ತಾ: ಹೊನ್ನಾವರ, 2]. ಶ್ರೀಧರ ತಂದೆ ಗಣಪ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರ, ತಾ: ಹೊನ್ನಾವರ, 3]. ವಿಷ್ಣು ತಂದೆ ಗೋವಿಂದ ಗೌಡ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರ, ತಾ: ಹೊನ್ನಾವರ, 4]. ಕೃಷ್ಣ ತಂದೆ ಗಣಪ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರ, ತಾ: ಹೊನ್ನಾವರ, 5]. ತಿಮ್ಮಪ್ಪ ತಂದೆ ಗಣಪ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರ, ತಾ: ಹೊನ್ನಾವರ, 6]. ದಿನೇಶ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರ, ತಾ: ಹೊನ್ನಾವರ, 7]. ಮಂಜುನಾಥ ತಂದೆ ನಾರಾಯಣ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರ, ತಾ: ಹೊನ್ನಾವರ, 8]. ನಾರಾಯಣ ತಂದೆ ಗಣಪಯ್ಯ ಗೌಡ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು 16-50 ಗಂಟೆಗೆ ಹೊನ್ನಾವರ ತಾಲೂಕಿನ ಕಾವೂರ ಬಸ್ ಸ್ಟಾಪ್ ಹತ್ತಿರ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿಯ ಕಾಲಕ್ಕೆ ಒಟ್ಟು ನಗದು ಹಣ 3,300/- ರೂಪಾಯಿ, ಇಸ್ಪೀಟ್ ಎಲೆಗಳು-52, ಅ ಅ||ಕಿ|| 00.00/- ರೂಪಾಯಿ ಹಾಗೂ ಬಿಳಿ ಬಣ್ಣದ ಗೆರೆಯುಳ್ಳ ಕೆಂಪು ಬಣ್ಣದ ಟವೆಲ್ ಮಂಡ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸಾವಿತ್ರಿ ಎ. ನಾಯಕ. ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಎಮ್. ಪ್ರಶಾಂತ ಪುಂಡರಿಕಾಕ್ಷ ತಂದೆ ಎಮ್. ಪ್ರಭಾಕರ ಆಚಾರ್ಯ, ಸಾ|| ಮಲ್ಪೆ, ತೊಟ್ಟಮ್, ಕೊಡವೂರು ಪೋಸ್ಟ್, ಉಡುಪಿ (ಮಿನಿ ಬಸ್ ನಂ: ಕೆ.ಎ-20/ಎ.ಎ-1598 ನೇದರ ಚಾಲಕ). ಈತನು ದಿನಾಂಕ: 05-11-2021 ರಂದು ಬೆಳಿಗ್ಗೆ 09-15 ಗಂಟೆಯ ಸುಮಾರಿಗೆ ಮಾವಿನಕಟ್ಟಾ ಸಣ್ಣಬಾವಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತಾನು ಚಲಾಯಿಸುತ್ತಿದ್ದ ಮಿನಿ ಬಸ್ ನಂ: ಕೆ.ಎ-20/ಎ.ಎ-1598 ನೇದನ್ನು ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಸಣ್ಣಬಾವಿ ಕ್ರಾಸ್ ಕಡೆಯಿಂದ ಹೆದ್ದಾರಿಮನೆ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ದಾಟಲು ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿದ್ದ ಪಾದಚಾರಿ ಪಿರ್ಯಾದಿಯ ಅಣ್ಣನಾದ ನಾಗರಾಜ ತಂದೆ ಕೃಷ್ಣ ದೇವಡಿಗ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಂಗಾರಮಕ್ಕಿ ಬ್ರಿಡ್ಜ್ ಹತ್ತಿರ, ಬೆಂಗ್ರೆ-2, ಭಟ್ಕಳ ಈತನಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಆತನ ತಲೆಗೆ ಪೆಟ್ಟಾಗಿ ಕಿವಿಯಿಂದ ರಕ್ತ ಸೋರಿ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ಕೃಷ್ಣ ದೇವಡಿಗ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೇಶುಮನೆ, ಮೊಳೆಮನೆ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 05-11-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 193/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೋಹನ ತಂದೆ ಪುಟ್ಟಯ್ಯ ಪೂಜಾರಿ, ಪ್ರಾಯ-39 ವರ್ಷ, ವೃತ್ತಿ-ಚಾಲಕ, ಸಾ|| ಉಮ್ಮಚಗಿ, ತಾ: ಯಲ್ಲಾಪುರ, 2]. ಅಶೋಕ್ ತಂದೆ ಶಂಕರ್ ಪಟಗಾರ್, ಪ್ರಾಯ-41 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾವಿನಕಟ್ಟಾ, ತಾ: ಯಲ್ಲಾಪುರ, 3]. ಉಮ್ಮರ್ ತಂದೆ ನೂರುದ್ದಿನ್ ಖಾನ್, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಮ್ಮಚಗಿ, ತಾ: ಯಲ್ಲಾಪುರ, 4]. ಮಂಜು ಕರಿಯಾ ಪೂಜಾರಿ, ಪ್ರಾಯ-56 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಮ್ಮಚಗಿ, ತಾ: ಯಲ್ಲಾಪುರ, 5]. ವಿನಾಯಕ ಶೇಖರ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಜಡ್ಡಿಗದ್ದೆ, ತಾ: ಯಲ್ಲಾಪುರ, 6]. ರಾಘು ತಂದೆ ಗೋವಿಂದ್ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಮ್ಮಚಗಿ, ತಾ: ಯಲ್ಲಾಪುರ, 7]. ಗಣೇಶ ತಂದೆ ರಾಮಪ್ಪಾ ವಡ್ಡರ್, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಮ್ಮಚಗಿ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು ರಾತ್ರಿ 20-30 ಗಂಟೆಗೆ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಹೊರಮನೆ ಅರಣ್ಯದಲ್ಲಿಯ ಸಾರ್ವಜನಿಕ ಸ್ಧಳದಲ್ಲಿ ತಮ್ಮ ತಮ್ಮ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಮೇಣದ ಬತ್ತಿಯ ಬೆಳಕಿನಲ್ಲಿ ಅಂದರ್-ಬಾಹರ್ ಜೂಗಾರಾಟ ನಡೆಸಿದಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿ ಆರೋಪಿತರು ನಗದು ಹಣ 4,700/- ರೂಪಾಯಿ ಹಾಗೂ ಜೂಗಾರಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಗೌಡರ್, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಆಕಾಶ ತಂದೆ ಅಣ್ಣಾಬಳಗ ಬೋವಿ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ರಾಜೀವ ನಗರ, ತಾ: ಶಿರಸಿ, 2]. ಶುಕುರ್ ಅಹಮ್ಮದ್ ತಂದೆ ರಜಾಕ ಸಾಬ್ ಹಾನಗಲ್, ಪ್ರಾಯ-35 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಶಿರಗೋಡ, ತಾ: ಹಾನಗಲ್, ಜಿ: ಹಾವೇರಿ, 3]. ಗೌಸಮೊದಿನ್ ತಂದೆ ಅಬ್ದುಲ್ ಅಜೀಜ್, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಸೀದಿಯ ಹತ್ತಿರ, ನೆಹರೂ ನಗರ, ತಾ: ಶಿರಸಿ, 4]. ಲೋಹಿತ ತಂದೆ ಕರಿಯಪ್ಪ ಬೋವಿ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಭಾಸ್ಕರ ಸರ್ಕಲ್ ಹತ್ತಿರ, ಗಣೇಶ ನಗರ, ತಾ: ಶಿರಸಿ, 5]. ಮಾರುತಿ ತಂದೆ ಮಂಜಪ್ಪ ಅಗಸನಹಳ್ಳಿ, ಪ್ರಾಯ-32 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಮಂಜುನಾಥ ಕಾಲೋನಿ, ಗಣೇಶ ನಗರ, ತಾ: ಶಿರಸಿ, 6]. ಹಸನ್ ತಂದೆ ಹಯಾತ್ ಸಾಬ್ ಬೆಣ್ಣೆ, ಪ್ರಾಯ-48 ವರ್ಷ, ವೃತ್ತಿ-ವ್ಯಾಪಾರ, ಸಾ|| ರಾಜೀವ ನಗರ, ತಾ: ಶಿರಸಿ, 7]. ಮೈನುದ್ದೀನ್ ತಂದೆ ಅಬ್ದುಲ್ ಕರಿಂ ಆಲೂರ, ಪ್ರಾಯ-32 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಹವಾಲ್ದಾರ್ ಗಲ್ಲಿ, ತಾ: ಶಿರಸಿ, 8]. ಜನಾರ್ಧನ ತಂದೆ ನಾಗಣ್ಣ ಆಲಂಪುರ, ಪ್ರಾಯ-49 ವರ್ಷ, ವೃತ್ತಿ-ಕಟಿಂಗ ಶಾಪ್, ಸಾ|| ರಾಮನತಗ್ಗು, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು 00-15 ಗಂಟೆಗೆ ಶಿರಸಿ ಶಹರದ ಬಿಡ್ಕಿ ಸರ್ಕಲ್ ಹತ್ತಿರ ಸಂತೆ ಮಾರ್ಕೆಟಿನ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿರುವಾಗ ಆರೋಪಿತರ ತಾಬಾ ಹಾಗೂ ಮಂಡದ ಮೇಲೆ ಸಿಕ್ಕ ಒಟ್ಟು ನಗದು ಹಣ ಒಟ್ಟೂ 8,400/- ರೂಪಾಯಿ, 52 ಇಸ್ಪೀಟ್ ಎಲೆಗಳು, ಮಂಡಕ್ಕೆ ಬಳಸಿದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಇವುಗಳೊಂದಿಗೆ ಆರೋಪಿತರೆಲ್ಲರೂ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ರಶೀದ್ ತಂದೆ ಮಹ್ಮದ್ ಗೌಸ್, ಪ್ರಾಯ-38 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಇಂದಿರಾ ನಗರ, ತಾ: ಶಿರಸಿ 2]. ಗಣೇಶ ತಂದೆ ಮಲ್ಲಪ್ಪಾ ಡಳ್ಳೇಕರ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ರಾಮನಬೈಲ್, ತಾ: ಶಿರಸಿ, 3]. ಮಹ್ಮದಗೌಸ್ ತಂದೆ ಗೂಡುಸಾಬ್ ನದಾಫ್, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಸ್ತೂರಬಾ ನಗರ, ತಾ: ಶಿರಸಿ, 4]. ಸುರೇಶ ತಂದೆ ತಿಮ್ಮಣ್ಣಾ ಬಂಡಿವಡ್ಡರ, ಪ್ರಾಯ-32 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ತಾರಗೋಡ, ತಾ: ಶಿರಸಿ, 5]. ಗಣಪತಿ ತಂದೆ ಹನಮಂತ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಮನಬೈಲ, ತಾ: ಶಿರಸಿ, 6]. ಶಿವಾನಂದ ಯಲ್ಲಪ್ಪಾ ಬೋವಿ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಮನಬೈಲ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು 13-30 ಗಂಟೆಗೆ ಶಿರಸಿ ಶಹರದ ಬಿಡ್ಕಿ ಸರ್ಕಲ್ ಹತ್ತಿರ ಸಂತ್ತೆ ಮಾರ್ಕೆಟಿನ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿರುವಾಗ ಆರೋಪಿತರೆಲ್ಲರೂ ತಮ್ಮ ತಾಬಾ ಹಾಗೂ ಮಂಡದ ಮೇಲೆ ಸಿಕ್ಕ ಒಟ್ಟು ನಗದು ಹಣ ಒಟ್ಟೂ 10,500/- ರೂಪಾಯಿ, 52 ಇಸ್ಪೀಟ್ ಎಲೆಗಳು, ಮಂಡಕ್ಕೆ ಬಳಸಿದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ. (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವರಾಯ ತಂದೆ ಹನುಮಂತ ಬೊಮ್ಮನಹಳ್ಳಿ, ಪ್ರಾಯ-50 ವರ್ಷ, ಸಾ|| ನಿರ್ಮಲ್ ನಗರ, ತಾ: ದಾಂಡೇಲಿ, 2]. ರಾಜು ತಂದೆ ವಸಂತ ಶಿಂಗೆ, ಪ್ರಾಯ-41 ವರ್ಷ, ಸಾ|| ಬಾಂಬೂ ಗೇಟ್, ತಾ: ದಾಂಡೇಲಿ, 3]. ಮಹಮ್ಮದ್ ಹುಸೇನ್ ತಂದೆ ಫೀರಸಾಬ್ ನದಾಫ್, ಪ್ರಾಯ-33 ವರ್ಷ, ಸಾ|| 3 ನಂಬರ್ ಗೇಟ್, ಹಳಿಯಾಳ ರಸ್ತೆ, ತಾ: ದಾಂಡೇಲಿ, 4]. ಸಿಕಂದರ್ ತಂದೆ ಮೆಹಬೂಬಸಾಬ್ ಬೇಪಾರಿ, ಪ್ರಾಯ-36 ವರ್ಷ, ಸಾ|| 3 ನಂಬರ್ ಗೇಟ್, ಹಳಿಯಾಳ ರಸ್ತೆ, ತಾ: ದಾಂಡೇಲಿ, 5]. ಮಹಮ್ಮದ್ ಯಾಕೂಬ್ ತಂದೆ ಶಬ್ಬೀರ್ ಪಟೇಲ್, ಪ್ರಾಯ-28 ವರ್ಷ, ಸಾ|| ಕೋಗಿಲಬನ, ತಾ: ದಾಂಡೇಲಿ, 6]. ಮಕುಮಸಾಬ್ ತಂದೆ ಅಬ್ದುಲ್ ಸಾಬ್ ನದಾಫ್, ಪ್ರಾಯ-45 ವರ್ಷ, ಸಾ|| 3 ನಂಬರ್ ಗೇಟ್, ಹಳಿಯಾಳ ರಸ್ತೆ, ತಾ: ದಾಂಡೇಲಿ, 7]. ಆಸೀಫ್ ತಂದೆ ಹುಸೇನ್ ಕಾಸೇನಹಟ್ಟಿ, ಪ್ರಾಯ-29 ವರ್ಷ, ಸಾ|| ಹಳೇ ದಾಂಡೇಲಿ, ತಾ: ದಾಂಡೇಲಿ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು 01-00 ಗಂಟೆಗೆ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳಿಯಾಳ ರಸ್ತೆಯ ಕೆ.ಇ.ಬಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಂದು ವಿದ್ಯುತ್ ಕಂಬದ ಲೈಟಿನ ಬೆಳಕಿನಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಹಾಗೂ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿ ಅಂದರ್-ಬಾಹರ್ ಜುಗಾರಾಟವನ್ನು ನಡೆಸುತ್ತಾ ಜುಗಾರಾಟದ ಸಾಧನ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ಹಳೆಯ ಚಾಪೆ-01, ನಗದು ಹಣ 5,500/- ರೂಪಾಯಿ ಸಮೇತ ದಾಳಿಯ ಕಾಲಕ್ಕೆ ಆರೋಪಿ 1 ರಿಂದ 5 ನೇಯವರು ದಾಳಿಯ ಕಾಲಕ್ಕೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 6 ಮತ್ತು 7 ನೇಯವರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಎಸ್. ಪಾಟೀಲ್, ಪಿ.ಎಸ್.ಐ (ತನಿಖೆ), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 03-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ಮೋಟಾರ್ ಸೈಕಲ್ ಸವಾರನಾಗಿದ್ದು, ಮೋಟಾರ್ ಸೈಕಲ್ ನಂಬರ್ ಹಾಗೂ ಸವಾರನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 03-11-2021 ರಂದು 21-30 ಗಂಟೆಯ ಸುಮಾರಿಗೆ ತನ್ನ ಬಾಬ್ತು ಮೋಟಾರ್ ಸೈಕಲನ್ನು ದಾಂಡೇಲಿಯ ಕುಳಗಿ ಬ್ರಿಡ್ಜಿನ ಮೇಲೆ ಕುಳಗಿ ಕಡೆಯಿಂದ ದಾಂಡೇಲಿಯ ಕಡೆಗೆ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಸೈಡಿನಿಂದ ನಡೆದುಕೊಂಡು ಹೊರಟಿದ್ದ ನಾಗಪ್ಪ @ ನಾಗರಾಜ ಸೋಮಪ್ಪ ನಾಯ್ಕ, ಪ್ರಾಯ-35 ವರ್ಷ, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ನಾಗಪ್ಪ ನಾಯ್ಕ ಈತನಿಗೆ ಎಡಗಾಲಿನ ಮೊಣಗಂಟಿನ ಕೆಳಗಿನ ಮೂಳೆ ಮುರಿಯುವಂತೆ ಭಾರೀ ರಕ್ತಗಾಯ ಪಡಿಸಿ, ಮೋಟಾರ್ ಸೈಕಲನ್ನು ಅಪಘಾತದ ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ಭೀಮರಾವ್ ಚವಲಗಿ, ಪ್ರಾಯ-48 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಹಳಿಯಾಳ ರೋಡ್, ಅಲೈಡ್ ಏರಿಯಾ, ತಾ: ದಾಂಡೇಲಿ ರವರು ದಿನಾಂಕ: 05-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಮೇಶ ತಂದೆ ಹನುಮಂತಪ್ಪ ಸುಣಗಾರ, ಪ್ರಾಯ-49 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಗಣೇಶ ನಗರ, ತಾ: ಮುಂಡಗೋಡ, 2]. ಮಹೇಶ ತಂದೆ ಪರಶುರಾಮ ಸೋರಗಿ, ಪ್ರಾಯ-46 ವರ್ಷ, ವೃತ್ತಿ-ಚಾಲಕ, ಸಾ|| ವಿವೇಕಾನಂದ ನಗರ, ತಾ: ಮುಂಡಗೋಡ, 3]. ಗಂಗಾಧರ ತಂದೆ ರಾಮಚಂದ್ರ ಕಲಾಲ, ಪ್ರಾಯ-45 ವರ್ಷ, ವೃತ್ತಿ-ಹೋಟೆಲ್ ವ್ಯಾಪಾರ, ಸಾ|| ವಿವೇಕಾನಂದ ನಗರ, ತಾ: ಮುಂಡಗೋಡ, 4]. ರಾಮು ತಂದೆ ಲಕ್ಷ್ಮಣ ಕೊಪ್ಪರಿಸಿಕೊಪ್ಪ, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೆಹರೂ ನಗರ, ತಾ: ಮುಂಡಗೋಡ, 5]. ಯುವರಾಜ ತಂದೆ ಪರಶುರಾಮ ಪಾಟೀಲ್, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಕಂಬಾರಗಟ್ಟಿ ಪ್ಲಾಟ್, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು ರಾತ್ರಿ 02-00 ಗಂಟೆಗೆ ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಪ್ಲಾಟ್ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಾ ನಗದು ಹಣ 1,500/- ರೂಪಾಯಿ ಹಾಗೂ ಜುಗಾರಾಟದ ಸಲಕರಣೆಗಳಾದ 01 ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳು ಹಾಗೂ 01 ಮೇಣದ ಬತ್ತಿ. ಇವುಗಳೊಂದಿಗೆ ಆರೋಪಿತರೆಲ್ಲರೂ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಸಿಮಾನಿ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 03-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಆದಮ್ ಸಾಬ್ ತಂದೆ ಮುಜುರುಕ್ ಮಖಾಂದರ್, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ, 2]. ಪರಮೇಶ ತಂದೆ ಮಾಹದೇವಪ್ಪ ಕೆರಿಮನಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ, 3]. ಪಾಂಡುರಂಗ ತಂದೆ ಪಕ್ಕೀರಪ್ಪ ರಾಣೋಜಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ, 4]. ತುಕಪ್ಪ ತಂದೆ ಕೆಂಚಪ್ಪ ನಾಯಕವಾಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ, 5]. ಶ್ರೀಕಾಂತ ತಂದೆ ಚಂದ್ರಶೇಖರ ಅಗಸಿಮನೆ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ, 6]. ಬಸವರಾಜ ತಂದೆ ಶಿವರಾಮಪ್ಪ ಸೊಪ್ಪಣ್ಣನವರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ, 7]. ನೂರ್ ಅಹಮ್ಮದ್ ತಂದೆ ಗೌಸಸಾಬ್ ಹುಬ್ಬಳ್ಳಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ, 8]. ಮಹಾಂತೇಶ ತಂದೆ ಶಂಬು ರಾಣೋಜಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ, 9]. ಅಂಜು ತಂದೆ ಮಂಜು, ಸಾ|| ಚಿಗಳ್ಳಿ, ತಾ: ಮುಂಡಗೋಡ, 10]. ನಿಂಗಜ್ಜ ತಂದೆ ಅಂಬೋಜಪ್ಪ ರಾಣೆಬೆನ್ನೂರು, ಸಾ|| ಚಿಗಳ್ಳಿ, ತಾ: ಮುಂಡಗೋಡ, 11]. ಗೋವಿಂದ ತಂದೆ ನಿಂಬೋಜಿ ನ್ಯಾಸರ್ಗಿ, ಸಾ|| ಚಿಗಳ್ಳಿ, ತಾ: ಮುಂಡಗೋಡ, 12]. ಪಾಂಡು ತಂದೆ ನಿಂಬೋಜಿ ನ್ಯಾಸರ್ಗಿ, ಸಾ|| ಚಿಗಳ್ಳಿ, ತಾ: ಮುಂಡಗೋಡ, 13]. ರಾಘು ತಂದೆ ಈರಪ್ಪ ಗುಲ್ಯಾನವರ, ಸಾ|| ಚಿಗಳ್ಳಿ, ತಾ: ಮುಂಡಗೋಡ, 14]. ಈರಪ್ಪ ತಂದೆ ವಿಷ್ಣು ನಿಂಬಾಯಿ, ಸಾ|| ಚಿಗಳ್ಳಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 05-11-2021 ರಂದು ಬೆಳಿಗ್ಗೆ 06-00 ಗಂಟೆಗೆ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಶ್ರೀ ಕಲ್ಮೇಶ್ವರ ಮಠದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಜುಗಾರಾಟ ಆಡುತ್ತಾ ನಗದು ಹಣ 3,500/- ರೂಪಾಯಿ ಹಾಗೂ ಜುಗಾರಾಟದ ಸಲಕರಣೆಗಳಾದ 01 ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳು ಆರೋಪಿ 1 ರಿಂದ 4 ನೇಯವರು ದಾಳಿಯ ಕಾಲಕ್ಕೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ರಿಂದ 14 ನೇಯವರು ದಾಳಿಯ ಕಾಲಕ್ಕೆ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಸಿಮಾನಿ, ಪೊಲೀಸ್ ನಿರೀಕ್ಷಕರು, ತಾ: ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 07-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

     

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 139/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟರಾಜ ಎನ್. ತಂದೆ ನಟರಾಜ ಎಮ್, ಸಾ|| ಪಿಲ್ಲಗುಂಪೆ, ಹೊಸಕೋಟೆ, ಬೆಂಗಳೂರು (ಕಾರ್ ನಂ: ಕೆ.ಎ-53/ಎನ್-6441 ನೇದರ ಚಾಲಕ). ಈತನು ದಿನಾಂಕ: 05-11-2021 ರಂದು ಮಧ್ಯಾಹ್ನ 15-30 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-53/ಎನ್-6441 ನೇದನ್ನು ಕ್ಯಾದಗಿ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು 15-30 ಗಂಟೆಯ ಸುಮಾರಿಗೆ ಸಿದ್ದಾಪುರ-ಕುಮಟಾ ರಸ್ತೆಯ ಕ್ಯಾದಗಿ ಸಮೀಪದ ಹಿರೇಕೈ ಫೂಲ್ ಕಟ್ಟೆಯ ಹತ್ತಿರದ ತಿರುವಾದ ರಸ್ತೆಯಲ್ಲಿ ಕುಮಟಾ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಕಾರ್ ನಂ: ಕೆ.ಎ-31/ಎನ್-7730 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎದುರುಗಡೆಯ ಕಾರಿನಲಿದ್ದ ದೀಪಕ ತಂದೆ ಅಶೋಕ ನಾಯ್ಕ, ಸಾ|| ಹಸ್ವಿಗುಳಿ, ತಾ: ಸಿದ್ದಾಪುರ ಇವರಿಗೆ ತಲೆಗೆ, ಎಡಗಾಲಿಗೆ ಗಾಯನೋವನ್ನುಂಟು ಪಡಿಸಿದ್ದಲ್ಲದೇ, ತನ್ನ ಕಾರಿನಲ್ಲಿದ್ದ ವಸಂತ ತಿಮ್ಮಾ ನಾಯ್ಕ, ಸಾ|| ಕ್ಯಾದಗಿ, ತಾ: ಸಿದ್ದಾಪುರ ಹಾಗೂ ನಂದಶ್ರೀ ಕೋಂ. ತಿಮ್ಮಾ ನಾಯ್ಕ, ಸಾ|| ಕ್ಯಾದಗಿ, ತಾ: ಸಿದ್ದಾಪುರ ಇವರ ತಲೆಗೆ ಗಾಯನೋವು ಮತ್ತು ಗಗನ್ ತಂದೆ ಮಂಜುನಾಥ, ಸಾ|| ಪಿಲ್ಲಗುಂಪೆ, ಬೆಂಗಳೂರು ಇವರಿಗೆ ಎಡಗೈಗೆ ಒಳ ಪೆಟ್ಟನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಯರಾಮ ತಂದೆ ಮಾರ್ಯಾ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಸ್ವಿಗುಳಿ, ತಾ: ಸಿದ್ದಾಪುರ ರವರು ದಿನಾಂಕ: 05-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಿರಾಜ್ ತಂದೆ ಬಸೀರ್ ಮುಲ್ಲಾ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೋಯಿಡಾ, 2]. ಶೆಟ್ಟಪ್ಪ ಫಕೀರಪ್ಪ ಬೋವಿವಡ್ಡರ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೋಯಿಡಾ, 3]. ಸಾಗರ ತಂದೆ ಗೋವಿಂದ ಗಾವಡೆ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಸಾಯಿ ಗಲ್ಲಿ, ರಾಮನಗರ, ತಾ: ಜೋಯಿಡಾ, 4]. ಸೂರಜ ತಂದೆ ಸಂದೀಪ ಜೋತಕರ, ಪ್ರಾಯ-43 ವರ್ಷ, ವೃತ್ತಿ-ಹೋಟೆಲ ವ್ಯಾಪಾರ, ಸಾ|| ಮಾರ್ಕೆಟ್ ಏರಿಯಾ, ರಾಮನಗರ, ತಾ: ಜೋಯಿಡಾ, 5]. ರಾಹುಲ ತಂದೆ ಯಶ್ವಂತ ಗುಂಜೇಕರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೋಯಿಡಾ, 6]. ಕರಣ ತಂದೆ ಸುಧಾಕರ ನಂಬಿಯಾರ್, ಪ್ರಾಯ-26 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಇಂಡಸ್ಟ್ರೀಯಲ್ ಏರಿಯಾ, ರಾಮನಗರ, ತಾ: ಜೋಯಿಡಾ, 7]. ಸಲಿಂ ತಂದೆ ಬಸೀರ್ ಮುಲ್ಲಾ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಮಲಿಂಗ ಗಲ್ಲಿ, ರಾಮನಗರ, ತಾ: ಜೋಯಿಡಾ, 8]. ಯಲ್ಲಪ್ಪ ತಂದೆ ರಮೇಶ ಬೋವಿವಡ್ಡರ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೋಯಿಡಾ, 9]. ಬಸವರಾಜ ತಂದೆ ಗುಂದಪ್ಪ ಐಹೊಳೆ, ಪ್ರಾಯ-46 ವರ್ಷ, ವೃತ್ತಿ-ಚಾಲಕ, ಸಾ|| ಸಾಯಿ ಗಲ್ಲಿ, ರಾಮನಗರ, ತಾ: ಜೋಯಿಡಾ, 10]. ಮಂಜುನಾಥ ತಂದೆ ಸುಬ್ಬಯ್ಯ ಬೋವಿವಡ್ಡರ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೋಯಿಡಾ, 11]. ಲಕ್ಷ್ಮಣ ತಂದೆ ರಂಗಪ್ಪ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಸಾಯಿ ಗಲ್ಲಿ, ರಾಮನಗರ, ತಾ: ಜೋಯಿಡಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ತನ್ನ ಲಾಭಕ್ಕಾಗಿ ರಾಮನಗರದ ಹನುಮಾನ್ ಗಲ್ಲಿಯಿಂದ ರೆಡ್ಡಿ ಕಲ್ಲು ಕ್ವಾರಿಗೆ ಹೋಗುವ ದಾರಿಯಲ್ಲಿ ವಿದ್ಯುತ್ ಕಂಬದ ಕೆಳಗೆ ಅದರ ಲೈಟಿನ ಬೆಳಕಿನಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಯಾವುದೇ ಅಧೀಕೃತ ಪರವಾನಗಿ ಇಲ್ಲದೇ ಇಸ್ಪೀಟ್ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡಿಸುತ್ತಾ 1). ಇಸ್ಪೀಟ್ ಎಲೆಗಳು-52, 2). ಇಸ್ಪೀಟ್ ಎಲೆಗಳಿರುವ ಪ್ಯಾಕೆಟ್ ಗಳು-02, 3). ಮಂಡದ ಮೇಲೆ ಇದ್ದ ನಗದು ಹಣ ಹಾಗೂ ಆರೋಪಿತರ ಅಂಗ ಜಡ್ತಿಯಿಂದ ಜಪ್ತಾದ ಒಟ್ಟು ನಗದು ಹಣ ಸೇರಿ 9,450/- ರೂಪಾಯಿ ಹಾಗೂ 4). ಮಂಡಕ್ಕೆ ಹಾಸಿದ ಪ್ಲಾಸ್ಟಿಕ್ ಚೀಲ-01 ಇವುಗಳೊಂದಿಗೆ ಆರೋಪಿತರೆಲ್ಲರೂ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 05-11-2021 ರಂದು 01-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

Daily District U.D Report

Date:- 05-11-2021

at 00:00 hrs to 24:00 hrs

 

No Cases Reported....

 

======||||||||======

 

 

 

 

 

 

Last Updated: 08-11-2021 05:41 PM Updated By: SP KARWAR


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Uttara Kannada District Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080