ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-10-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 123/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-10-2021 ರಂದು ಬೆಳಿಗ್ಗೆ 11-30 ಗಂಟೆಯಿಂದ 13-00 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ಪಟ್ಟಣದ ಶಿರಸಿ ರೋಡ್ ಬೆಂಡಿಗೇರಿ ಪೆಟ್ರೋಲ್ ಪಂಪ್ ಎದುರಿನ ಖುಲ್ಲಾ ಜಾಗದಲ್ಲಿ ನಿಲ್ಲಿಸಿಟ್ಟ ಪಿರ್ಯಾದಿಯ ಬಾಬ್ತು ಅ||ಕಿ|| 20,000/- ರೂಪಾಯಿ ಬೆಲೆಬಾಳುವ ಕಪ್ಪು ಮಿಶ್ರಿತ ಕೆಂಪು ಬಣ್ಣದ ಬಜಾಜ್ ಸಿಟಿ 100 ಮೋಟಾರ್ ಸೈಕಲ್ ನಂ: ಕೆ.ಎ-04/ಜೆ.ಡಿ-4495 (ಚಾಸಿಸ್ ನಂ: MD2A18AZ3GWA10684 ಹಾಗೂ ಇಂಜಿನ್ ನಂ: DUZWGA09433) ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಾಜು ತಂದೆ ವರ್ಗಿಸ್, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಲಕ್ಕೊಳ್ಳಿ, ತಾ: ಮುಂಡಗೋಡ ರವರು ದಿನಾಂಕ: 05-10-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-10-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 37/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಜಾನಕಿ ತಂದೆ ಮಂಜುನಾಥ ಹೆಗಡೆ, ಪ್ರಾಯ-65 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಕೆರಕೋಣ, ಅರೆಅಂಗಡಿ, ತಾ: ಹೊನ್ನಾವರ. ಪಿರ್ಯಾದಿಯ ಅತ್ತೆಯಾದ ಇವರು ದಿನಾಂಕ: 04-10-2021 ರಂದು ಸಂಜೆ 18-30 ಗಂಟೆಯ ಸಮಯಕ್ಕೆ ತಮ್ಮ ಮನೆಯಾದ ಕೆರೆಕೋಣದಿಂದ ಅರೆಅಂಗಡಿಗೆ ಬರಲು ತಮ್ಮ ಮನೆಯ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಆಕಸ್ಮಿಕವಾಗಿ ತಲೆ ಸುತ್ತು ಬಂದು ರಸ್ತೆಯಲ್ಲಿ ಬಿದ್ದು ತಲೆಯ ಹಿಂಬದಿಗೆ ಗಾಯವಾಗಿ ಚಿಕಿತ್ಸೆಯ ಸಲುವಾಗಿ ಹೊನ್ನಾವರದ ಸೇಂಟ್ ಇಗ್ನೀಶಿಯಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ದಿನಾಂಕ: 05-10-2021 ರಂದು ಮಧ್ಯಾಹ್ನ 14-55 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ರಾಮಕೃಷ್ಣ ತಂದೆ ಸಂಭಯ್ಯ ಹೆಗಡೆ, ಪ್ರಾಯ-35 ವರ್ಷ, ವೃತ್ತಿ-ಪೋಟೋಗ್ರಾಪರ್, ಸಾ|| ದಿಬ್ಬಣಗಲ್, ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 05-10-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಅವಪ್ಪ ತಂದೆ ಶರಣಪ್ಪ ಬಗಲೂರು, ಪ್ರಾಯ-49 ವರ್ಷ, ವೃತ್ತಿ-ಬಸ್ ಕಂಡಕ್ಟರ್, ಸಾ|| ಅನುಗೃಹ ಶಾಲೆಯ ಹತ್ತಿರ, ಉಜಿರೆ, ತಾ: ಬೆಳ್ತಂಗಡಿ, ಜಿ: ದಕ್ಷಿಣ ಕನ್ನಡ. ಪಿರ್ಯಾದಿ ಗಂಡನವರಾದ ಇವರು ಕೆ.ಎಸ್.ಆರ್.ಟಿ.ಸಿ ಬಸ್ ಘಟಕ, ಧರ್ಮಸ್ಥಳದಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದವರು, ದಿನಾಂಕ: 04-10-2021 ರಂದು ಧರ್ಮಸ್ಥಳ-ಹುಬ್ಬಳ್ಳಿ ಮಾರ್ಗದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಕಂಡಕ್ಟರ್ ಕರ್ತವ್ಯಕ್ಕೆ ಬಂದವರಿಗೆ ದಿನಾಂಕ: 04-10-2021 ರಂದು 18-45 ಗಂಟೆಯ ಸುಮಾರಿಗೆ ಶಿರಸಿಯ ಬಸ್ ಡಿಪೋ ಹತ್ತಿರ ಎದೆ ಮತ್ತು ಬೆನ್ನು ನೊವು ಕಾಣಿಸಿಕೊಂಡವರಿಗೆ ಶಿರಸಿಯ ಖಾಸಗಿ ಕ್ಲಿನಿಕ್ ಮತ್ತು ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಕುರಿತು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ 20-21 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟ ಬಗ್ಗೆ ತಿಳಿಸಿರುವುದಾಗಿ ತನ್ನ ಗಂಡನ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಾದ ಶ್ರೀ ಪ್ರವೀಣ ಇವರು ಪೋನ್ ಕರೆ ಮಾಡಿ ತಮಗೆ ತಿಳಿಸಿದಂತೆ, ತಾನು ದಿನಾಂಕ: 04-10-2021 ರಂದು ತನ್ನ ಸಂಬಂಧಿಕರೊಂದಿಗೆ ಶಿರಸಿಗೆ ಬಂದು ಶಿರಸಿ ಟಿ.ಎಸ್.ಎಸ್ ಆಸ್ಪತ್ರೆಯ ಶವಾಗಾರದಲ್ಲಿದ್ದ ತನ್ನ ಗಂಡನ ಮೃತದೇಹವನ್ನು ನೋಡಿ ಮೃತ ತನ್ನ ಗಂಡನವರು ಹೃದಯಘಾತದಿಂದ ಅಥವಾ ಬೇರೆ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾರೆಯೇ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಕಾರಣ ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗುಂಡಮ್ಮ ಕೋಂ. ಅವಪ್ಪ ಬಗಲೂರು, ಪ್ರಾಯ-38 ವರ್ಷ, ವೃತ್ತಿ-ಗೃಹಿಣಿ, ಸಾ|| ಅನುಗೃಹ ಶಾಲೆಯ ಹತ್ತಿರ, ಉಜಿರೆ, ತಾ: ಬೆಳ್ತಂಗಡಿ, ಜಿ: ದಕ್ಷಿಣ ಕನ್ನಡ ರವರು ದಿನಾಂಕ: 05-10-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 06-10-2021 07:34 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080