ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 05-09-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಜ್ಞಾನೇಶ್ವರ ಪುತ್ತುರೈ ಕೊಡ್ಲೇಕರ್, ಪ್ರಾಯ-46 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತದಡಿ, ಗೋಕರ್ಣ, ತಾ: ಕುಮಟಾ, 2]. ತುಕಾರಾಮ ಪಾಂಡುರಂಗ ರೇಡಕರ್, ಪ್ರಾಯ-36 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತದಡಿ, ಗೋಕರ್ಣ, ತಾ: ಕುಮಟಾ, 3]. ಮಹಮ್ಮದ್ ಅರ್ಷದ್ ಅಬ್ದುಲ್ ಶಿಕೂರ, ಪ್ರಾಯ-48 ವರ್ಷ. ವೃತ್ತಿ-ರಿಕ್ಷಾ ಚಾಲಕ, ಸಾ|| ತದಡಿ, ಗೋಕರ್ಣ, ತಾ: ಕುಮಟಾ, 4]. ಮೂಬೀನ್ ಅಬ್ದುಲ್ ಗಫೂರ್ ಶೇಖ್, ಪ್ರಾಯ-51 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ತದಡಿ, ಗೋಕರ್ಣ, ತಾ: ಕುಮಟಾ, 5]. ಅಬ್ದುಲ್ ಕರೀಂ ಅಬು ತಾಹೀರ್ ಶೇಖ್, ಪ್ರಾಯ-62 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಹಾರುಮಾಸ್ಕೇರಿ, ಗೋಕರ್ಣ, ತಾ: ಕುಮಟಾ, 6]. ಉಮೇಶ ಜಟ್ಟಿ ಮುಕ್ರಿ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೇಲೆಕಾನ್, ಗೋಕರ್ಣ, ತಾ: ಕುಮಟಾ, 7]. ಮಾರುತಿ ಕೇಶವ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ತದಡಿ, ಗೋಕರ್ಣ, ತಾ: ಕುಮಟಾ, 8]. ಮಹಮ್ಮದ್ ನೂರ್ ಖಾನ್, ಪ್ರಾಯ-70 ವರ್ಷ, ವೃತ್ತಿ-ಮನೆ ಕೆಲಸ, ಸಾ|| ತದಡಿ, ಗೋಕರ್ಣ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 05-09-2021 ರಂದು ಮಧ್ಯಾಹ್ನ 13-15 ಗಂಟೆಯ ಸುಮಾರಿಗೆ ತದಡಿ ಗ್ರಾಮದ ಬಂದರಿನ ಬಾರ್ಜ್ ಹತ್ತಿರದ ಖುಲ್ಲಾ ಜಾಗದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ್ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 8,480/- ರೂಪಾಯಿ, 2). 52 ಇಸ್ಪೀಟ್ ಎಲೆಗಳು (ಅ||ಕಿ|| 00.00/- ರೂಪಾಯಿ), 3). ಮಂಡಕ್ಕೆ ಹಾಸಿದ ಬಿಳಿ ನಮೂನೆಯ ಪ್ಲಾಸ್ಟಿಕ್ ಚೀಲ-01 (ಅ||ಕಿ|| 00.00/- ರೂಪಾಯಿ), 4). ಮೊಬೈಲ್ ಗಳು-09 (ಅ||ಕಿ|| 12,000/- ರೂಪಾಯಿ), 5). ಬೈಕ್ ಗಳು-03 (ಅ||ಕಿ|| 70,000/- ರೂಪಾಯಿ). ಈ ನಮೂದಿತ ಸ್ವತ್ತಿನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 05-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 157/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶೇಖರ ತಂದೆ ಗೋಪಾಲ ಅಂಬಿಗ, ಪ್ರಾಯ-30 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಅಂಬಿಗರಕೇರಿ, ಹೆಗಡೆ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-2540 ನೇದರ ಚಾಲಕ). ಈತನು ದಿನಾಂಕ: 02-09-2021 ರಂದು-15-45 ಗಂಟೆಗೆ ಮಾಸೂರು-ಹೆಗಡೆ ಊರಿಗೆ ಹೋಗುವ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-2540 ನೇದನ್ನು ಮಡಿವಾಳ ಕೇರಿಯ ಹತ್ತಿರ ಸಣ್ಣದಾದ ರಸ್ತೆಯ ಮೂಲಕ ಅತೀವೇಗವಾಗಿ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದವನು, ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ನಿಷ್ಕಾಳಜೀತನದಿಂದ ಒಮ್ಮೇಲೆ ಮುಖ್ಯ ರಸ್ತೆಗೆ ಅಡ್ಡವಾಗಿ ಬಂದು ಚಿಟ್ಟಿಕಂಬಿ ಕಡೆಯಿಂದ ಹೆಗಡೆ ಕಡೆಗೆ ನೇರ ರಸ್ತೆಯಲ್ಲಿ ಹೋಗುತ್ತಿದ್ದ ಪಿರ್ಯಾದಿಯ ನೆಂಟ ಕಾರ್ತಿಕ ನಾಯ್ಕ ಈತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಕ್ಸ್-0158 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಸ್ತೆಯ ಮೇಲೆ ಬೀಳುವಂತೆ ಮಾಡಿ ಕಾರ್ತಿಕ ಮಹಾದೇವ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಜಿಯೋ ಕಂಪನಿಯಲ್ಲಿ ಕೆಲಸ, ಸಾ|| ಮೂಡಕೇರಿ, ಹೆಗಡೆ, ತಾ: ಕುಮಟಾ ಈತನಿಗೆ ಎಡಭುಜದ ಮೂಳೆ ಮುರಿದು ತೀವೃ ಗಾಯವಾದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮೀಕಾಂತ ತಂದೆ ರಾಮಚಂದ್ರ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಇಲೆಕ್ಟ್ರೀಶಿಯನ್, ಸಾ|| ಚಿಟ್ಟಿಕಂಬಿ, ಹೆಗಡೆ, ತಾ: ಕುಮಟಾ ರವರು ದಿನಾಂಕ: 05-09-2021 ರಂದು 12-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 121/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲಿಜಾ ಪಿ. ಸಿ. ತಂಡಥಿಲ್ ಜೇಮ್ಸ್, ಸಾ|| ಪುಲ್ಲೂರು, ಪೋ: ಕನ್ನಂಗಡ, ಕಾಸರಗೋಡ, ಕೇರಳ (ಬೊಲೆರೋ ವಾಹನ ನಂ: ಕೆ.ಎಲ್-60/ಎಚ್-4905 ನೇದರ ಚಾಲಕ). ಈತನು ದಿನಾಂಕ: 05-09-2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಗುಣವಂತೆಯ ಸಿಂದಾಣಿಕೇರಿಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಬೊಲೆರೋ ವಾಹನ ನಂ: ಕೆ.ಎಲ್-60/ಎಚ್-4905 ನೇದನ್ನು ಹೊನ್ನಾವರ ಕಡೆಯಿಂದ ಮಂಕಿ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ವಾಹನದ ಮೇಲಿನ ವೇಗದ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಹೊಂಡದಲ್ಲಿ ಇಳಿಸಿ ಅಪಘಾತ ಪಡಿಸಿ, ವಾಹನದಲ್ಲಿದ್ದ ಪಿರ್ಯಾದಿಯ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ವಾಹನವನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿನ್ಸೆಂಟ್ ಟಿ. ಎಂ. ತಂದೆ ಮಾಥ್ಯೂ, ಪ್ರಾಯ-48 ವರ್ಷ, ವೃತ್ತಿ-ಮಾನಸಿಕ ಆಶ್ರಮದಲ್ಲಿ ಕೆಲಸ, ಸಾ|| ಪುಲ್ಲೂರು, ಪೋ: ಕನ್ನಂಗಡ, ಕಾಸರಗೋಡ, ಕೇರಳ ರವರು ದಿನಾಂಕ: 05-09-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ದಿನೇಶ ತಂದೆ ಸುಕ್ರಯ್ಯ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಜೆ.ಸಿ.ಬಿ ಚಾಲಕ, ಸಾ|| ಕಾಕನಗದ್ದೆ ಮನೆ, ತೆಂಗಿನಗುಂಡಿ, ತಾ: ಭಟ್ಕಳ, 2]. ಹೇಮಂತ ವೆಂಕಟ್ರಮಣ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಮಸಿಕಾನ ಮನೆ, ತೆಂಗಿನಗುಂಡಿ, ತಾ: ಭಟ್ಕಳ, 3]. ವೆಂಕಟೇಶ ನಾರಯಾಣ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಮರಿ ಮನೆ, ತೆಂಗಿನಗುಂಡಿ, ತಾ: ಭಟ್ಕಳ, 4]. ಗಿರೀಶ ಸುಕ್ರ ಗೊಂಡ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಸಹಕ್ಕಲ ಮನೆ, ಮಾರುಕೇರಿ, ತಾ: ಭಟ್ಕಳ, 5]. ಗಣೇಶ ನಾಗಪ್ಪ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಂಜನ ಮನೆ, ಮಾರುಕೇರಿ, ತಾ: ಭಟ್ಕಳ, 6]. ಗಣಪತಿ ಮಾಸ್ತಿ ಗೊಂಡ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೂಂದಡನ ಮನೆ, ಕೋಟಖಂಡ, ಕಲ್ಲಬ್ಬೆ, ತಾ: ಭಟ್ಕಳ, 7]. ಗಣೇಶ ಮಾದೇವ ಗೊಂಡ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಂಗಳ ಮನೆ, ಹಸ್ರವಳ್ಳಿ, ತಾ: ಭಟ್ಕಳ, 8]. ನಾಗಯ್ಯ ಈರಯ್ಯ ಗೊಂಡ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿಳೂರು ಮನೆ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 05-09-2021 ರಂದು ಸಾಯಂಕಾಲ 17-30 ಗಂಟೆಗೆ ಭಟ್ಕಳ ತಾಲೂಕಿನ ಕೋಣಾರ ಗ್ರಾಮದ ಸಬ್ಬತ್ತಿ, ಲೊಕಟ್ಟೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ತಮ್ಮ ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿ ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಪಂಥ ಕಟ್ಟಿ ಜೂಗಾರಾಟ ಆಡುತ್ತಿದ್ದಾಗ ಒಟ್ಟು ನಗದು ಹಣ 2,650/- ರೂಪಾಯಿ, 2 ಕೋಳಿ ಹುಂಜಗಳು (ಅ||ಕಿ|| 600/- ರೂಪಾಯಿ) ಹಾಗೂ 2 ಕೋಳಿ ಕತ್ತಿಗಳು (ಅ||ಕಿ|| 20/- ರೂಪಾಯಿ) ಮತ್ತು 2 ದಾರ (ಅ||ಕಿ|| 00.00/- ರೂಪಾಯಿ) ಇವುಗಳೊಂದಿಗೆ ಒಟ್ಟು 08 ಜನ ಆರೋಪಿತರು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 05-09-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 23-03-2021 ರಂದು ರಾತ್ರಿ 12-00 ಗಂಟೆಯಿಂದ ದಿನಾಂಕ: 24-03-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಕಾರ್ ಸ್ಟ್ರೀಟ್ ನಲ್ಲಿರುವ ಏರಟೆಲ್ ಆಫೀಸ್ ಎದುರುಗಡೆ ನಿಲ್ಲಿಸಿಟ್ಟ ನೀಲಿ ಬಣ್ಣದ 200 ಸಿ.ಸಿ. ಯ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-2121 (ಇಂಜಿನ್ ನಂ: JLZCDK58308 ಹಾಗೂ ಚಾಸಿಸ್ ನಂ: MD2A36FZ5DCK62535) ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸಯ್ಯದ್ ಅಹಮದ್ ಸುಹೈಬ್ ತಂದೆ ಸಯ್ಯದ್ ಮೊಹಮ್ಮದ್ ಶಫೀಕ್ ಬರ್ಮಾವರ್, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರಸ್ಥ, ಸಾ|| #09, ಬರ್ಮಾವರ್ ಹೌಸ್, ಕಾರ್ ಸ್ಟ್ರೀಟ್, ತಾ: ಭಟ್ಕಳ ರವರು ದಿನಾಂಕ: 05-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 139/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-09-2021 ರಂದು ಬೆಳಿಗ್ಗೆ 07-00 ಯಿಂದ ಸಾಯಂಕಾಲ 07-00 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕ್ಯಾಂಟೀನ್ ಪಕ್ಕದಲ್ಲಿ ನಿಲ್ಲಿಸಿಟ್ಟ ಪಿರ್ಯಾದಿಯ ಬಾಬ್ತು ಅ||ಕಿ|| 60,000/- ರೂಪಾಯಿ ಮೌಲ್ಯದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-6767 (ಇಂಜಿನ್ ನಂ: DHXWLF35048 ಹಾಗೂ ಚಾಸಿಸ್ ನಂ: MD2B68BX5LWF11153) ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸಯ್ಯ ತಂದೆ ಶಾಂತಯ್ಯ ಹಿರೇಮಠ, ಪ್ರಾಯ-30 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಮೆಕ್ಯಾನಿಕ್, ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ವಿಭಾಗೀಯ ಕಾರ್ಯಾಗಾರ, ತಾ: ಶಿರಸಿ, ಹಾಲಿ ಸಾ|| ಶಾರದಾ ಗಲ್ಲಿ, ತಾ: ಯಲ್ಲಾಪುರ ರವರು ದಿನಾಂಕ: 05-09-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 8(c), 20(B)(ii)(b) ಎನ್.ಡಿ.ಪಿ.ಎಸ್.ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ರೇವಪ್ಪ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ವ್ಯವಸಾಯ, ಸಾ|| ಕುಳಗಾ, ಪೋ: ದ್ಯಾವನಹಳ್ಳಿ, ತಾ: ಸೊರಬಾ, ಜಿ: ಶಿವಮೊಗ್ಗ, 2]. ವೀರಭದ್ರಪ್ಪ ತಂದೆ ಕೇರಿಯಪ್ಪ ಈಡಿಗ, ಪ್ರಾಯ-42 ವರ್ಷ, ವೃತ್ತಿ-ವ್ಯವಸಾಯ, ಸಾ|| ಕುಳಗಾ, ಪೋ: ದ್ಯಾವನಹಳ್ಳಿ, ತಾ: ಸೊರಬಾ, ಜಿ: ಶಿವಮೊಗ್ಗ. ಈ ನಮೂದಿತ ಆರೋಪಿತರು ದಿನಾಂಕ: 05-09-2021 ರಂದು ಬೆಳಿಗ್ಗೆ 09-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಶ್ರೀರಾಮ ಕಾಲೋನಿಯ ಹತ್ತಿರದ ಅರಣ್ಯ ಪ್ರದೇಶದ ಕಚ್ಚಾ ರಸ್ತೆಯ ಮೇಲೆ ಬಿಳಿ ಬಣ್ಣದ ಚೀಲದಲ್ಲಿ ಒಟ್ಟು 1 ಕೆ.ಜಿ 910 ಗ್ರಾಂ ತೂಕದ ಅ||ಕಿ|| 25,000/- ರೂಪಾಯಿ ಮೌಲ್ಯದ ಗಾಂಜಾ ಪದಾರ್ಥವನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ತಮ್ಮ ಅಕ್ರಮ ಲಾಭಕ್ಕಾಗಿ ಹೀರೋ ಕಂಪನಿಯ ಮೋಟಾರ್ ಸೈಕಲ್ ನಂ: ಕೆ.ಎ-15/ಇ.ಬಿ-8312 ನೇದರ ಮೇಲೆ ಸಾಗಾಟ ಮಾಡಿಕೊಂಡು ಬಂದು ಜನರಿಗೆ ಮಾರಾಟ ಮಾಡಲು ನಿಂತುಕೊಂಡಿರುವಾಗ ಹಾಗೂ ಸಲಕರಣೆಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 05-09-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 05-09-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸಂಜು ತಂದೆ ಫಕೀರಪ್ಪ ಹೊನ್ನಳ್ಳಿ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುನಗುಂದ, ತಾ: ಮುಂಡಗೋಡ. ಸುದ್ದಿದಾರನ ಮಗನಾದ ಈತನು ವಿಪರೀತ ಸರಾಯಿ ಕುಡಿಯುವ ಚಟದವನಿದ್ದು, ಸರಾಯಿ ಕುಡಿದ ನಶೆಯಲ್ಲಿ ತಂದೆ ತಾಯಿಯವರೊಂದಿಗೆ ಗಲಾಟೆಯನ್ನು ಮಾಡುತ್ತಿದ್ದವನು, ಸರಾಯಿ ಕುಡಿದ ನಶೆಯಲ್ಲಿ ದಿನಾಂಕ: 04-09-2021 ರಂದು ರಾತ್ರಿ 08-30 ಗಂಟೆಯಿಂದ ರಾತ್ರಿ 10-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಹಕ್ಕೆಯಲ್ಲಿಯ ಜಂತಿಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ವ ಕಾರಣ ಇರುವುದಿಲ್ಲ. ನನ್ನ ಮಗನ ಮೃತದೇಹವು ಮುಂಡಗೋಡದ ಸರಕಾರಿ ಆಸ್ಪತ್ರೆಯಲ್ಲಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫಕೀರಪ್ಪ ತಂದೆ ಹನುಮಂತಪ್ಪ ಹೊನ್ನಳ್ಳಿ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುನಗುಂದ, ತಾ: ಮುಂಡಗೋಡ ರವರು ದಿನಾಂಕ: 05-09-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಮಚಂದ್ರ ತಂದೆ ಕನ್ನಾ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಸಳ್ಳಿ, ತಾ: ಸಿದ್ದಾಪುರ, ಹಾಲಿ ಸಾ|| ಹಲಗೇರಿ, ತಾ: ಸಿದ್ದಾಪುರ. ಸುದ್ದಿದಾರನ ಗಂಡನಾದ ಈತನು ತನ್ನ ತಂದೆ ತಾಯಿಗೆ ಹಿರಿಯ ಮಗನಾಗಿ ಅವನ ಮನೆಯ ಕಡೆಗಿನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಅಂತಾ ಮನೆಯವರು ಹೇಳುತ್ತಿದ್ದುದ್ದರಿಂದ ಅಲ್ಲಿಯೂ ಸರಿಯಾಗಿ ನಿಭಾಯಿಸಲು ಆಗದೇ ಅಲ್ಲದೇ ತನ್ನ ಹೆಂಡತಿ ಮಕ್ಕಳ ಸಂಸಾರವನ್ನು ಸರಿಯಾಗಿ ನಿಭಾಯಿಸಲು ಆಗದೇ ಮತ್ತು ಬೇರೆ ಬೇರೆ ಕಡೆಗಳಲ್ಲಿ ಸಾಲವನ್ನು ಮಾಡಿ ಅದನ್ನು ತೀರಿಸಲಾಗದೇ ಮನಸ್ಸಿಗೆ ಹಚ್ಚಿಕೊಂಡು ಕಳೆದ ಕೇಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಾ, ಕಳೆದ ಒಂದು ವರ್ಷದಿಂದ ಹೆಂಡತಿಯನ್ನು ಬಿಟ್ಟಿದ್ದನು. ಅವನಿಗಿರುವ ಮಾನಸಿಕ ಅಸ್ವಸ್ಥತೆ ವಿಪರೀತವಾಗಿ ಮನೆಯನ್ನು ಬಿಟ್ಟು ಅಲ್ಲಿ ಇಲ್ಲಿ ಅಲೆದಾಡುತ್ತಿದ್ದವನು, ದಿನಾಂಕ: 04-09-2021 ರಂದು ರಾತ್ರಿ 10-00 ಗಂಟೆಯಿಂದ 11-00 ಗಂಟೆಯ ನಡುವಿನ ಅವಧಿಯಲ್ಲಿ ಸಿದ್ದಾಪುರ ಶಹರದ ತರಕಾರಿ ಮಾರುಕಟ್ಟೆ ಹತ್ತಿರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸವಿತಾ ರಾಮಚಂದ್ರ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಗಾರ್ಮೆಂಟ್ಸ್ ನಲ್ಲಿ ಕೆಲಸ, ಸಾ|| ಹಲಗೇರಿ, ತಾ: ಸಿದ್ದಾಪುರ, ಹಾಲಿ ಸಾ|| ಚಂದ್ರಮಾವಿನಕೊಪ್ಲ, ತಾ: ಸಾಗರ, ಜಿ: ಶಿವಮೊಗ್ಗ ರವರು ದಿನಾಂಕ: 05-09-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹಾದೇವ ತಂದೆ ಚೌಡ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಸುವಂತೆ, ಪೋ: ನೆಜ್ಜೂರು, ತಾ: ಸಿದ್ದಾಪುರ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 05-09-2021 ರಂದು ನಮ್ಮ ಮನೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದ ಹಸ್ವಂತೆ ಗ್ರಾಮದ ನಂಜಳಮಕ್ಕಿಯಲ್ಲಿರುವ ಗದ್ದೆಗೆ ಕೃಷಿ ಕೆಲಸಕ್ಕೆ ಹೋಗಿದ್ದವರು, ಮಧ್ಯಾಹ್ನ ಆದರೂ ಊಟಕ್ಕೆ ಬರಲಿಲ್ಲವಾದ್ದರಿಂದ ತನ್ನ ತಾಯಿಯು ಅವರಿಗೆ ಹುಡುಕುತ್ತಾ ಹೋಗಿದ್ದವರು 15-00 ಗಂಟೆಯ ಸುಮಾರಿಗೆ ಗದ್ದೆಗೆ ಹೋಗಿ ನೋಡಿದಾಗ ತಂದೆಯು ಗದ್ದೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ತಂದೆಯು ದಿನಾಂಕ: 05-09-2021 ರಂದು ಬೆಳಿಗ್ಗೆ 10-00 ಗಂಟೆಯಿಂದ 15-00 ಗಂಟೆಯ ನಡುವಿನ ಆವಧಿಯಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಿ ಕೊಡಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಮೂರ್ತಿ ತಂದೆ ಮಹಾದೇವ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಸ್ವಂತೆ, ಪೋ: ನೆಜ್ಜೂರು, ತಾ: ಸಿದ್ದಾಪುರ ರವರು ದಿನಾಂಕ: 05-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 06-09-2021 07:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080