ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-04-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಸನ್ನಕುಮಾರ ತಂದೆ ಶಿವರಾಮ ಭಟ್ಟ, ಪ್ರಾಯ-36 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಳಸ, ತಾ: ಕುದುರೆಮುಖ, ಜಿ: ಚಿಕ್ಕಮಗಳೂರು (ಕಾರ್ ನಂ: ಕೆ.ಎ-18/ಜೆಡ್-3353 ನೇದರ ಚಾಲಕ). ಈ ನಮೂದಿತ ಆರೋಪಿತನು ದಿನಾಂಕ: 06-04-2021 ರಂದು ಬೆಳಗಿನ ಜಾವ 03-15 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರದ ಕೋಣಕಾರದಲ್ಲಿ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಬರುವ ಏಕಮುಖ ಸಂಚಾರ ರಸ್ತೆಯಲ್ಲಿ ತನ್ನ ಕಾರ್ ನಂ: ಕೆ.ಎ-18/ಜೆಡ್-3353 ನೇದನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಲಾರಿ ನಂ: ಕೆ.ಎ-22/ಡಿ-0323 ನೇದಕ್ಕೆ ಮುಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿತನ ಹೆಂಡತಿ ಶ್ರೀಮತಿ ಸಿಂಧು ಕೋಂ. ಪ್ರಸನ್ನ ಕುಮಾರ ಭಟ್, ಪ್ರಾಯ-32 ವರ್ಷ, ಗೃಹಿಣಿ, ಇವರಿಗೆ ತಲೆಗೆ, ಬಲಗಾಲಿಗೆ, ಬಲಗೈಗೆ ಮತ್ತು ಮೈಮೇಲೆ ಅಲ್ಲಲ್ಲಿ ರಕ್ತಗಾಯ, ಮಗಳು ಕುಮಾರಿ: ಪೂರ್ವಿ ತಂದೆ ಪ್ರಸನ್ನಕುಮಾರ ಭಟ್, ಪ್ರಾಯ-4 ವರ್ಷ, ಇವಳಿಗೆ ಎಡಗಾಲಿಗೆ ರಕ್ತಗಾಯ ಪಡಿಸಿ, ಬಲಗಣ್ಣು ಕೆಂಪಾಗಿದ್ದು, ಇನ್ನೊಬ್ಬ ಮಗಳು ಕುಮಾರಿರ: ಪರೀಕ್ಷಿತಾತ ತಂದೆ ಪ್ರಸನ್ನಕುಮಾರ ಭಟ್, ಪ್ರಾಯ-1 ವರ್ಷ, ಇವಳಿಗೆ ಒಳನೋವು ಆಗಿದ್ದು, ಮೇಲ್ನೋಟಕ್ಕೆ ಯಾವುದೇ ಗಾಯಪೆಟ್ಟು ಕಂಡು ಬಂದಿಲ್ಲ. ಸಾ|| (ಎಲ್ಲರೂ) ಕಳಸ, ತಾ: ಕುದುರೆಮುಖ, ಜಿ: ಚಿಕ್ಕಮಗಳೂರು ಇವರಿಗೆ ರಕ್ತದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ರಕ್ತದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಿವು ತಂದೆ ನಾರಾಯಣ ಮುಕ್ರಿ, ಪ್ರಾಯ-49 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಕೋಣಕಾರ, ತಾ: ಹೊನ್ನಾವರ ರವರು ದಿನಾಂಕ: 06-04-2021 ರಂದು 06-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಮಂಜುನಾಥ ತಂದೆ ಕೇಶವ ಆಚಾರಿ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಗಪ್ಪ ನಾಯ್ಕ ರೋಡ್, ತಾ: ಭಟ್ಕಳ. ಈತನು ದಿನಾಂಕ: 29-03-2021 ರಂದು ತನ್ನ ಮನೆಯಾದ ನಾಗಪ್ಪ ನಾಯ್ಕ ರೋಡ್, ಭಟ್ಕಳದಿಂದ ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಎದ್ದು ಸ್ನಾನ ಮಾಡಿ ತಯಾರಾಗಿ ಬೆಂಗಳೂರಿಗೆ ಕೆಲಸದ ಮೇಲೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು, ಈವರೆಗೂ ಮನೆಗೆ ವಾಪಸ್ ಬಾರದೇ, ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಕೇಶವ ಆಚಾರಿ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಗಪ್ಪ ನಾಯ್ಕ ರೋಡ್, ತಾ: ಭಟ್ಕಳ ರವರು ದಿನಾಂಕ: 06-04-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಲಕ್ಷ್ಮಣ ತಂದೆ ಕುಪ್ಪಯ್ಯ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪಟೇಲರ ಮನೆ, ಹುರುಳಿಸಾಲ, ತಾ: ಭಟ್ಕಳ. ಈತನು ದಿನಾಂಕ: 06-04-2021 ರಂದು 10-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಮುಖ್ಯ ರಸ್ತೆಯ ಹಳೇ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ, ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,220/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡುಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 06-04-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜಗದೀಶ ತಂದೆ ಕುಪ್ಪಾ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪಟೇಲರ ಮನೆ, ಹುರುಳಿಸಾಲ, ತಾ: ಭಟ್ಕಳ. ಈತನು ದಿನಾಂಕ: 06-04-2021 ರಂದು 14-15 ಗಂಟೆಯ ಸುಮಾರಿಗೆ ಭಟ್ಕಳ ಶಹರದ ದೇವಿ ನಗರ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ, ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,260/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡುಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 06-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 507 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಮೊಬೈಲ್ ನಂ: 94645540399 ನೇದರಿಂದ ಕರೆ ಮಾಡಿದ ಅನಾಮಧೇಯ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರ ಆಪ್ತ ಕಾರ್ಯದರ್ಶಿಯವರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಿರಸಿಯ ಕೆ.ಎಚ್.ಬಿ ಕಾಲೋನಿಯಲ್ಲಿರುವ ಮಾನ್ಯ ಸಂಸದರ ಸ್ಥಿರ ದೂರವಾಣಿ ಸಂಖ್ಯೆ: 08384-234337 ನೇದಕ್ಕೆ ದಿನಾಂಕ: 05-04-2021 ರಂದು ಬೆಳಗಿನ ಜಾವ 02-00 ಗಂಟೆಯ ಸುಮಾರಿಗೆ ಮೊಬೈಲ್ ನಂ: 94645540399 ನೇದರಿಂದ ಅನಾಮಧೇಯ ಆರೋಪಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದ್ದು, ಮೊದಲನೆಯ ಸಲ ಕರೆ ಬಂದಾಗ ಕರೆಯನ್ನು ಸ್ವೀಕರಿಸುವ ಮೊದಲೇ ಸಂಪರ್ಕ ಕಡಿತಗೊಂಡಿದ್ದು, ಪುನಃ ಪೋನ್ ರಿಂಗಣಿಸಿದಾಗ ಶ್ರೀ ಅನಂತ ಕುಮಾರ ಹೆಗಡೆಯವರು ಕರೆಯನ್ನು ಸ್ವೀಕರಿಸಿದ್ದು, ಆ ಕಡೆಯಿಂದ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ‘ಅನಂತಕುಮಾರ ಹೆಗಡೆ ಎಮ್.ಪಿ ಅಲ್ವಾ? ನೀನು ಈ ಬಾರಿ ಏನು ಮಾಡುತ್ತೀಯಾ? ಹಿಂದಿನ ಬಾರಿ ಪೋನ್ ಮಾಡಿದಾಗ ಪೊಲೀಸ್ ದೂರು ನೀಡಿದ್ದಿ, ಪತ್ರಿಕೆಗಳಲ್ಲಿಯೂ ಸುದ್ದಿ ಆಗಿತ್ತು. ಈಗ ನಿನ್ನನ್ನು ಏನು ಮಾಡುತ್ತೇನೆ ನೋಡು, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಅಂತಾ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಗೋವಿಂದ ಶೆಟ್ಟಿ, ಪ್ರಾಯ-38 ವರ್ಷ, ವೃತ್ತಿ-ಸಂಸದರಾದ ಶ್ರೀ ಅನಂತ ಕುಮಾರ ಹೆಗಡೆ ರವರ ಆಪ್ತ ಕಾರ್ಯದರ್ಶಿ, ಸಾ|| ಕೆ.ಎಚ್.ಬಿ ಕಾಲೋನಿ, ತಾ: ಶಿರಸಿ ರವರು ದಿನಾಂಕ: 06-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಪ್ಪ ತಂದೆ ಕಲ್ಲಪ್ಪ ಸುಣಗಾರ, ಪ್ರಾಯ-31 ವರ್ಷ, ಸಾ|| ಮುಗದಕೊಪ್ಪ, ತಾ: ಹಳಿಯಾಳ (ಬೊಲೆರೋ ವಾಹನ ನಂ: ಕೆ.ಎ-65/ಎಮ್-1620 ನೇದರ ಚಾಲಕ). ಈತನು ದಿನಾಂಕ: 06-04-2021 ರಂದು 16-30 ಗಂಟೆಗೆ ಹಳಿಯಾಳ ತಾಲೂಕಿನ ಮುಗದಕೊಪ್ಪ ಕ್ರಾಸ್ ಹತ್ತಿರ ತನ್ನ ಬೊಲೆರೋ ವಾಹನ ನಂ: ಕೆ.ಎ-65/ಎಮ್-1620 ನೇದನ್ನು ಮುಗದಕೊಪ್ಪ ಕಡೆಯಿಂದ ಮುರ್ಕವಾಡ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ, ಮುರ್ಕವಾಡ ಕಡೆಯಿಂದ ಮುಗದಕೊಪ್ಪ ಕಡೆಗೆ ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-3985 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಮೇಘರಾಜ ತಂದೆ ಮಾರುತಿ ಕೊಲ್ಲಾಪುರ, ಸಾ|| ಮುರ್ಕವಾಡ, ತಾ: ಹಳಿಯಾಳ ಇವನ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಓಮಣ್ಣ ಗುಂಜಗೇರಿ, ಪ್ರಾಯ-29 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮುಗದಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 06-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲೋಹಿತ ತಂದೆ ಮೋಹನ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಬಗ್ಗೊಣ, ಪೋ: ಕಲಭಾಗ, ತಾ: ಕುಮಟಾ (ಟಿಪ್ಪರ್ ಲಾರಿ ನಂ: ಜಿ.ಎ-04/ಟಿ-4230 ನೇದರ ಚಾಲಕ). ಈತನು ದಿನಾಂಕ: 06-04-2021 ರಂದು ಬೆಳಿಗ್ಗೆ ತನ್ನ ಟಿಪ್ಪರ್ ಲಾರಿ ನಂ: ಜಿ.ಎ-04/ಟಿ-4230 ನೇದನ್ನು ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಕುಮಟಾ ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬರುತ್ತಿದ್ದವನು, ಸಮಯ 10-00 ಗಂಟೆಯ ಸುಮಾರಿಗೆ ಸಿದ್ದಾಪುರ ತಾಲೂಕಿನ ಬೇಡ್ಕಣಿ ಊರಿಗಿಂತ 1 ಕಿ.ಮೀ ಹಿಂದೆ ತಿರುವಾದ ರಸ್ತೆಯಲ್ಲಿ ಟಿಪ್ಪರ್ ಲಾರಿಯನ್ನು ಏಕಾಏಕಿ ಬಲಕ್ಕೆ ಕಟ್ ಹೊಡೆದು ಟಿಪ್ಪರ್ ಲಾರಿಯನ್ನು ಬಲಕ್ಕೆ ಚಲಾಯಿಸಿ ಎದುರಿನಿಂದ ಅಂದರೆ ಸಿದ್ದಾಪುರ ಕಡೆಯಿಂದ ಕುಮಟಾ ಕಡೆಗೆ ಗಾಯಾಳು ಕುಮಾರಿ: ರಶ್ಮಿ ಜೆ. ಪಿ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಚನ್ನಪಟ್ಟಣ, ಪೋ: ಚಂದ್ರಗುತ್ತಿ, ತಾ: ಸೊರಬಾ, ಜಿ: ಶಿವಮೊಗ್ಗ ಇವಳು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-15/ಇ.ಬಿ-6791 ನೇದಕ್ಕೆ ಮುಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲನ್ನು ಚಲಾಯಿಸುತ್ತಿದ್ದ ಕುಮಾರಿ: ರಶ್ಮಿ ಪಿ. ಜೆ, ಇವಳ ತಲೆಗೆ, ಮುಖಕ್ಕೆ ಹಾಗೂ ಎರಡೂ ಕಾಲಿಗೆ ಗಂಭೀರ ಸ್ವರೂಪದ ಗಾಯನೋವನ್ನುಂಟು ಪಡಿಸಿದ್ದಲ್ಲದೇ, ಸದರ ಮೋಟಾರ್ ಸೈಕಲಿನ ಹಿಂಬದಿ ಸವಾರನಾದ ಪಿರ್ಯಾದಿಯ ಈತನ ತಲೆಗೆ, ಮುಖಕ್ಕೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಚಿನ್ ಆರ್. ತಂದೆ ರಾಮಪ್ಪ ಎಚ್, ಪ್ರಾಯ-22 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಚಿಕ್ಕಶಕುನ, ಜೂನಿಯರ್ ಕಾಲೇಜ್ ಹಿಂದುಗಡೆ, ತಾ: ಸೊರಬಾ, ಜಿ: ಶಿವಮೊಗ್ಗ ರವರು ದಿನಾಂಕ: 06-04-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-04-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 05-04-2021 ರಂದು ರಾತ್ರಿ 23-40 ಗಂಟೆಗೆ ಮುಡಗೇರಿ ರೈಲ್ವೇ ಟ್ರ್ಯಾಕ್ ಮೇಲೆ ಕಿ.ಮೀ ಕಲ್ಲು 489/5, 489/6 ನೇದರ ಮಧ್ಯ ನೇತ್ರಾವತಿ ರೈಲ್ವೇ ಸಂಖ್ಯೆ: 06345 ನೇದು ಬರುತ್ತಿರುವಾಗ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಚಲಿಸುತ್ತಿರುವ ರೈಲ್ವೇ ಎದುರುಗಡೆ ಟ್ರ್ಯಾಕಿಗೆ ಹಾರಿ ರೈಲ್ವೇಗೆ ಸಿಲುಕಿ ದೇಹ ಛಿದ್ರ-ಛಿದ್ರಗೊಂಡು ಮರಣಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಂದಕಿಶೋರ ತಂದೆ ಬಿಕಾಜಿ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಬಿಸಿನೆಸ್, ಸಾ|| ಹೊಸಾಳಿ, ಕಾರವಾರ ರವರು ದಿನಾಂಕ: 06-04-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 08-04-2021 05:06 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080