Feedback / Suggestions

Daily District Crime Report

Date:- 06-04-2022

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 279, 337 ಐಪಿಸಿ ಹಾಗೂ ಕಲಂ: 134(ಎ)&(ಬಿ) ಮತ್ತು 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕೆಂಪು ಬಣ್ಣದ ಕಾರ್ ನಂ: ಕೆ.ಎ-22/ಪಿ-4188 ನೇದರ ಚಾಳಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 05-04-2022 ರಂದು ಪಿರ್ಯಾದಿಯ ಗಂಡನಾದ ಶ್ರೀ ಪ್ರಶಾಂತ ತಂದೆ ಮಧುಕರ ಹಳನಕರ, ಪ್ರಾಯ-49 ವರ್ಷ, ಸಾ|| ದುರ್ಗಾದೇವಿ ದೇವಸ್ಥಾನದ ಹತ್ತಿರ, ಕೋಡಿಭಾಗ, ಕಾರವಾರ ಈತನು ಬೆಳಿಗ್ಗೆ ಸುಮಾರು 11-00 ಗಂಟೆಗೆ ಮನೆಯಿಂದ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-7964 ನೇದರ ಮೇಲಾಗಿ ಕಾರವಾರದಿಂದ ಕದ್ರಾಕ್ಕೆ ತನ್ನ ಸೈಡಿನಿಂದ ಬರುತ್ತಿರುವಾಗ ಸುಮಾರು 11-40 ಗಂಟೆಗೆ ಕದ್ರಾ ಕಡೆಯಿಂದ ಕಾರವಾರ ಕಡೆಗೆ ನಮೂದಿತ ಆರೋಪಿತನು ಚಲಾಯಿಸಿಕೊಂಡು ಬರುತ್ತಿದ್ದ ಕೆಂಪು ಬಣ್ಣದ ಕಾರ್ ನಂ: ಕೆ.ಎ-22/ಪಿ-4188 ನೇದನ್ನು ಮಾನವೀಯ ಪ್ರಾಣಕ್ಕೆ ಹಾನಿಯಾಗುವಂತೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದವನು, ಬೋರೆ ಗ್ರಾಮದ ಚಿತಲಮಕ್ಕಿ ಬಸ್ ನಿಲ್ದಾಣದ ರಸ್ತೆಯ ತಿರುವಿನ ಹತ್ತಿರ ಎದುರುಗಡೆಯಿಂದ ತನ್ನ ಸೈಡಿನಿಂದ ಬರುತ್ತಿದ್ದ ಪಿರ್ಯಾದಿಯ ಗಂಡ ಶ್ರೀ ಪ್ರಶಾಂತ ತಂದೆ ಮಧುಕರ ಹಳನಕರ ಇವರಿಗೆ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಜಖಂಗೊಳಿಸಿ, ಪಿರ್ಯಾದಿಯ ಗಂಡನಿಗೆ ಬಲಗಾಲಿನ ಮೊಣಗಂಟಿಗೆ ಹಾಗೂ ಬಲಗಾಲಿನ ಹಿಮ್ಮಡಿಗೆ ರಕ್ತಗಾಯ ಹಾಗೂ ಬಲಗೈ ಮೊಣಗಂಟಿನ ಹತ್ತಿರ ತೆರಚಿದ ಗಾಯನೋವು ಪಡಿಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಮತ್ತು ಪೊಲೀಸರಿಗೂ ಮಾಹಿತಿಯನ್ನು ನೀಡದೆ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಪಲ್ಲವಿ ಕೋಂ. ಪ್ರಶಾಂತ ಹಳನಕರ, ಪ್ರಾಯ-37 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದುರ್ಗಾದೇವಿ ದೇವಸ್ಥಾನದ ಹತ್ತಿರ, ಕೋಡಿಭಾಗ, ಕಾರವಾರ ರವರು ದಿನಾಂಕ: 06-04-2022 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2022, ಕಲಂ: 323, 506, 379 ಸಹಿತ 34 ಐಪಿಸಿ ಮತ್ತು ಕಲಂ: 8, 9, 11 ಗೋ ಹತ್ಯೆ ನಿಷೇಧ ಕಾಯ್ದೆ-2020 ನೇದ್ದರ ವಿವರ...... ನಮೂದಿತ ಆರೋಪಿತರು 1]. ಆತೀಕ ಇಬ್ರಾಹಿಂಸಾಬ್ ಖಾಜಿ, ಪ್ರಾಯ-40 ವರ್ಷ, ವೃತ್ತಿ-ಗೌಂಡಿ ಕೆಲಸ ಸಾ|| ಕಾಣಿಕೇರಿ, ತಾ: ಸೊರಬಾ, ಜಿ: ಶಿವಮೊಗ್ಗಾ, 2]. ರಾಹತುನ್ನಿಸಾ ಫಜುಲ್ ಶೇಖ್, ಸಾ|| ಹೊಸಾಳಿ, ಕಾರವಾರ, 3]. ಅಜರ್ ಸೈಯದ್, ಸಾ|| ಹೊಸಾಳಿ, ಕಾರವಾರ. ಪಿರ್ಯಾದಿಯು ಹೊಸಾಳಿಯ ದುಗಣವಾಡಾದ ನಿವಾಸಿಯಾಗಿದ್ದು, ತಾನು ತೋಟಗಾರಿಕೆ ಮತ್ತು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತಾನು ತೋಟದಲ್ಲಿ ಹೈನುಗಾರಿಕೆಗೋಸ್ಕರ ಹಸುಗಳನ್ನು ಸಾಕಿಕೊಂಡಿದ್ದು, ಅವುಗಳನ್ನು ನೋಡಿಕೊಳ್ಳಲು ಸುದೇಶ ಉಲ್ಲಾಸ ತಳೇಕರ ಎಂಬುವವರನ್ನು ಇಟ್ಟಿರುತ್ತೇನೆ. ಪಿರ್ಯಾದಿಯು ತನ್ನ ಅಣ್ಣನಿಗೆ ಹೃದಯಾಘಾತದ ಚಿಕಿತ್ಸೆಯ ಸಲುವಾಗಿ ಓಡಾಟದಲ್ಲಿರುವಾಗ ಮನೆಗೆ ಬರದೇ ಇದ್ದುದರಿಂದ ದಿನಾಂಕ: 22-03-2022 ರಂದು ಮನೆಗೆ ಬಂದಾಗ ತನ್ನ ಮನೆಯಲ್ಲಿದ್ದ ಶಿರಸಿಯಿಂದ ತಂದಿದ್ದ ಹಸು ಕಾಣಿಸಲಿಲ್ಲ, ಅಲ್ಲಿಯೇ ಇದ್ದ ಸುದೇಶನಿಗೆ ವಿಚಾರಿಸಲಾಗಿ ಕಳೆದ 2 ದಿವಸಗಳಿಂದ ಹಸು ಕಾಣಿಸುತ್ತಿಲ್ಲ ಅದರ ಹುಡುಕಾಟದಲ್ಲಿ ಇರುವ ಬಗ್ಗೆ ತಿಳಿಸಿದನು. ನಂತರ ಇಬ್ಬರು ಸೇರಿಕೊಂಡು ಹಸುವಿನ ಹುಡುಕಾಟದಲ್ಲಿರುವಾಗ ಹೊಸಾಳಿಯ ಕಿಶನ್ ಪಡುವಳ್ಕರ, ಶ್ಯಾಮಕಾಂತ ನಾಯ್ಕ, ಸೂರಜ್ ನಾಯ್ಕ ರವರು ಪಿರ್ಯಾದಿಗೆ ಕರೆದು ಆರೋಪಿ 2 ನೇಯವಳ ಮಗಳ ಮದುವೆಗೆ ಬಂದಿದ್ದ ಅವರ ಅಣ್ಣ ಒಂದು ಹಸುವನ್ನು ಓಡಿಸಿಕೊಂಡು ಹೋಗುವುದನ್ನು ನೋಡಿರುವ ಬಗ್ಗೆ ತಿಳಿಸಿದಂತೆ ಪಿರ್ಯಾದುದಾರರು ಹೊಸಾಳಿಯ ಜಮಾತ್ ನವರೊಂದಿಗೆ ಸೇರಿಕೊಂಡು ಈ ಕುರಿತು ಆರೋಪಿ 2 ನೇಯವಳ ಮನೆಗೆ ಹೋಗಿ ವಿಚಾರಿಸಲಾಗಿ ಅವರ ತಂಗಿಗೆ ಆತನನ್ನು ಹೊಸಾಳಿಗೆ ಬರುವಂತೆ ತಿಳಿಸಿದಂತೆ, ಸದ್ರಿಯವನು ದಿನಾಂಕ: 05-04-2022 ರಂದು ಹೊಸಾಳಿಗೆ ಬಂದಾಗ ಪಿರ್ಯಾದಿಯು ತನ್ನ ಅಣ್ಣನ ಚಿಕಿತ್ಸೆಗೆ ಧಾರವಾಡಕ್ಕೆ ಹೋಗಿದ್ದರಿಂದ, ದಿನಾಂಕ: 06-04-2022 ರಂದು ಪುನಃ ಪಿರ್ಯಾದಿಯು ಜಮಾತ್ ರವರೊಂದಿಗೆ ಸೇರಿಕೊಂಡು ಆರೋಪಿ 2 ನೇಯವಳ ಮನೆಗೆ ಹೋಗಿ ಅಲ್ಲಿಯೇ ಇದ್ದ ಅವಳ ಅಣ್ಣ ಆರೋಪಿ 1 ನೇಯವನಿಗೆ ವಿಚಾರಿಸಲಾಗಿ ಆತನು ಹಸುವನ್ನು ತೆಗೆದುಕೊಂಡು ಹೋಗಿರುವುದಿಲ್ಲವಾಗಿ ತಿಳಿಸಿ, ತದನಂತರ ಆತನಿಗೆ ಜಮಾತ್ ರವರು ವಿಚಾರಿಸಿದಾಗ ಮೊದಲಿಗೆ ಹಸುವನ್ನು ಕಾರವಾರ ಕಡೆಗೆ ಓಡಿಸಿಕೊಂಡ ಹೋದ ಬಗ್ಗೆ ತಿಳಿಸಿ, ಜಮಾತ್ ರವರು ಆ ಹಸುವನ್ನು ತಂದು ಕೊಡಲು ತಿಳಿಸಿದಾಗ, ಆತನು ಆ ಹಸುವನ್ನು ಸೊರಬಾಕ್ಕೆ ತೆಗೆದುಕೊಂಡು ಹೋಗಿ ಅದನ್ನು ಹಣದ ಆಸೆಗೆ ತಾನೇ ಕಟ್ ಮಾಡಿ 200/- ರೂಪಾಯಿ ಕೆ.ಜಿ ಯಂತೆ ಮಾರಾಟ ಮಾಡಿರುವ ಬಗ್ಗೆ ಒಪ್ಪಿಕೊಂಡಾಗ ಪಿರ್ಯಾದುದಾರರು ಸಿಟ್ಟಿನಿಂದ ‘ನನ್ನ ಹಸುವನ್ನು ಏಕೆ ಸಾಯಿಸಿದಿಯಾ?’ ಅಂತಾ ವಿಚಾರಿಸಿದಾಗ ಆರೋಪಿತನು ಸಿಟ್ಟಿನಿಂದ ಪಿರ್ಯಾದುದಾರರ ಮೈ ಮೇಲೆ ಹೋಗಿ ದೂಡಿದ್ದರಿಂದ ಕೆಳಗಡೆ ಬಿದ್ದಾಗ, ಅಲ್ಲಿಯೇ ಬಿದ್ದಿದ್ದ ಕಲ್ಲು ಕೈಗೆ ತಾಗಿ ಒಳನೋವು ಆಗಿದ್ದರಿಂದ ಹಾಗೂ ಹಸುವನ್ನು ಕಳ್ಳತನ ಮಾಡಲು ಆರೋಪಿ 2 ನೇಯವಳು ಸಹಕರಿಸಿದ್ದಲ್ಲದೇ, ಅವಳ ಅಳಿಯನಾದ ಆರೋಪಿ 3 ನೇಯವನು ದಿನಾಂಕ: 04-04-2022 ರಂದು ಸಾಯಂಕಾಲ 18-09 ಗಂಟೆಗೆ ತನ್ನ ಮೊಬೈಲ್ ನಂ: 8431127002 ನೇದರಿಂದ ಪಿರ್ಯಾದುದಾರರಿಗೆ ಕರೆ ಮಾಡಿ ‘ನೀನು ಅದು ಹೇಗೆ ಮನೆಗೆ ಬಂದು ವಿಚಾರಣೆ ಮಾಡುತ್ತಿಯಾ ನಾನು ನೋಡಿಕೊಳ್ಳುತ್ತೇನೆ’ ಅಂತಾ ಜೀವದ ಧಮಕಿ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ನಂದಕಿಶೋರ ತಂದೆ ಭೀಕಾಜಿ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ವ್ಯಾಪಾರ, ಸಾ|| ದುಗಣವಾಡಾ, ಗೌರೀಶ ಸರ್ಕಲ್ ಹತ್ತಿರ, ಹೊಸಾಳಿ, ಕಾರವಾರ ರವರು ದಿನಾಂಕ: 06-04-2022 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪುರಂದರ ತಂದೆ ಹನುಮಂತ ಗೌಡ, ಪ್ರಾಯ-42 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಜವರುಮನೆ, ಅಘನಾಶಿನಿ, ತಾ: ಕುಮಟಾ, ಹಾಲಿ ಸಾ|| ಮಿರ್ಜಾನ, ಖೈರೆ, ತಾ: ಕುಮಟಾ. ಈತನು ದಿನಾಂಕ: 06-04-2022 ರಂದು 13-50 ಗಂಟೆಗೆ ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಿರ್ಜಾನ ಖೈರೆಯ ಗೂಡಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸರಾಯಿಯನ್ನು ಕುಡಿದು ಅಪರಾಧ ಎಸಗಿದ್ದು, ದಾಳಿಯ ಕಾಲ 1). ಅರ್ಧಭಾಗ ಸರಾಯಿ ಇದ್ದ  90 ML ಅಳತೆಯ HAYWARDS ಟೆಟ್ರಾ ಪ್ಯಾಕೆಟ್-01, ಅ||ಕಿ|| 00.00/- ರೂಪಾಯಿ, 2). ಸರಾಯಿ ತುಂಬಿದ 90 ML ಅಳತೆಯ HAYWARDS ಟೆಟ್ರಾ ಪ್ಯಾಕೆಟ್-01, ಅ||ಕಿ|| 36.00/- ರೂಪಾಯಿ, 3). ಖಾಲಿ ಇದ್ದ 90 ML ಅಳತೆಯ HAYWARDS ಟೆಟ್ರಾ ಪ್ಯಾಕೆಟ್-01, ಅ||ಕಿ|| 00.00/- ರೂಪಾಯಿ, 4). ಪ್ಲಾಸ್ಟಿಕ್ ಗ್ಲಾಸ್-01, ಅ||ಕಿ|| 00.00/- ರೂಪಾಯಿ, 5). Max Aqua ಕಂಪನಿಯ ಅರ್ಧ ತುಂಬಿದ 1/2 ಲೀಟರ್ ಅಳತೆಯ ನೀರಿನ ಬಾಟಲಿ-01, ಅ||ಕಿ|| 00.00/- ರೂಪಾಯಿ. ಸದರಿ ಸ್ವತ್ತಿನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ತನಿಖೆ-1) ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 06-04-2022 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 133/2022, ಕಲಂ: 448, 323, 324, 341, 342, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂದೀಪ ಲಕ್ಷ್ಮಣ ಖಾರ್ವಿ, ಪ್ರಾಯ-27 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಲ್ಲಮಸ್ತಿಕೇರಿ, ಕಾಸರಕೋಡ, ತಾ: ಹೊನ್ನಾವರ, 2]. ಉಲ್ಲಾಸ ತಂದೆ ವಾಸುದೇವ ತಾಂಡೇಲ, ಪ್ರಾಯ-27 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹಿರೇಮಠ, ಕಾಸರಕೋಡ, ತಾ: ಹೊನ್ನಾವರ, 3]. ರೋಹಿತ ನಾರಾಯಣ ತಾಂಡೇಲ, ಪ್ರಾಯ-24 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ರಾಮನಗರ, ಕಾಸರಕೋಡ, ತಾ: ಹೊನ್ನಾವರ, 4]. ಜೀವನ ಗಣಪತಿ ಖಾರ್ವಿ, ಪ್ರಾಯ-25 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಾಸರಕೋಡ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯು ಒಂದೇ ಊರಿನವರಿದ್ದು, ಒಂದೇ ಸಮಾಜದವರಿರುತ್ತಾರೆ. ದಿನಾಂಕ: 05-04-2022 ರಂದು ಕಾಸರಕೋಡದ ಬಟ್ಟೆವಿನಾಯಕ ಕೇರಿಯ ಗಣಪತಿ ನಾರಾಯಣ ದೇವಸ್ಥಾನದ ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ರಾತ್ರಿ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಿರ್ಯಾದಿಯೊಂದಿಗೆ ಆರೋಪಿತರು ತಂಟೆ ತಕರಾರು ಮಾಡಿಕೊಂಡಿದ್ದು, ಈ ಬಗ್ಗೆ ದೇವಸ್ಥಾನ ಕಮಿಟಿಯವರು ಹಾಗೂ ಪಿರ್ಯಾದಿಯವರು ಸೇರಿ ಆರೋಪಿತರಿಗೆ ಬುದ್ಧಿವಾದ ಹೇಳಿ ಕಳಿಸಿದ್ದು, ಇದೇ ವಿಷಯವಾಗಿ ಸಿಟ್ಟಿನಿಂದ ಇದ್ದ ಆರೋಪಿತರು ದಿನಾಂಕ: 06-04-2022 ರಂದು ಸಾಯಂಕಾಲ 16-45 ಗಂಟೆಯ ಸುಮಾರಿಗೆ ಪಿರ್ಯಾದಿಯು ಹೊನ್ನಾವರ ತಾಲೂಕಿನ ಕಾಸರಕೋಡದ ಬಟ್ಟೆವಿನಾಯಕ ಕೇರಿಯಲ್ಲಿರುವ ತಮ್ಮ ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಸೇರಿ ಎರಡೂ ಮೋಟಾರ್ ಸೈಕಲ್ ಮೇಲೆ ಬಟ್ಟೆ ವಿನಾಯಕ ಕೇರಿಯ ಪಿರ್ಯಾದಿಯವರ ಮನೆಯ ಹತ್ತಿರ ಬಂದವರು, ಪಿರ್ಯಾದಿಯ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ, ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೇ, ನಿನ್ನೆ ದೇವಸ್ಥಾನದಲ್ಲಿ ಎಲ್ಲರ ಮುಂದೆ ನಮಗೆ ಬುದ್ಧಿವಾದ ಹೇಳಿಸುತ್ತಿಯಾ?’ ಅಂತಾ ಅವಾಚ್ಯವಾಗಿ ಬೈಯ್ದು, ಆರೋಪಿ 2 ನೇಯವನು ತಾನು ತಂದಿದ್ದ ಕಟ್ಟಿಗೆಯ ದೊಣ್ಣೆಯಿಂದ ಪಿರ್ಯಾದಿಯ ಬಲಗಣ್ಣಿಗೆ ಹಾಗೂ ತಲೆಯ ಹಿಂಭಾಗಕ್ಕೆ ಹೊಡೆದಿದ್ದು, ಮತ್ತು ಆರೋಪಿ 1 ಹಾಗೂ 4 ನೇಯವರಿಬ್ಬರೂ ಸೇರಿ ತಮ್ಮ ಕೈಗಳಿಂದ ಪಿರ್ಯಾದಿಯ ಮೈಮೇಲೆ ಹೊಡೆದು, ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯನ್ನು ಮನೆಯಿಂದ ಹೊರಗೆ ಎಳೆದು ತಂದು ಪಿರ್ಯಾದಿಗೆ ಸುತ್ತುವರೆದು ಅಡ್ಡಗಟ್ಟಿದ್ದು, ಆರೋಪಿ 3 ನೇಯವನು ತನ್ನ ಕೈಯಲ್ಲಿ ಇದ್ದ ಚಾಕುವಿನಿಂದ ಪಿರ್ಯಾದಿಯ ಎಡಗೈ ಮುಂಗೈಗೆ ಚುಚ್ಚಿದ್ದು, ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾಗ ಪಿರ್ಯಾದಿಯ ಮಗ ಹರ್ಷವರ್ಧನ ಹಾಗೂ ಊರಿನವರಾದ ಲಕ್ಷ್ಮಣ ನಾಗೇಶ ತಾಂಡೇಲ, ಹನುಮಂತ ನಾಗಪ್ಪ ಗೌಡ, ಇತರರು ಸೇರಿ ಆರೋಪಿತರಿಂದ ಪಿರ್ಯಾದಿಯನ್ನು ತಪ್ಪಿಸಿದಾಗ ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯನ್ನು ಉದ್ದೇಶಿಸಿ ‘ಈ ದಿನ ನೀನು ಉಳಿದುಕೊಂಡೆ. ಇನ್ನು ಮುಂದೆ ಟೊಂಕಾದಲ್ಲಿ ಹೇಗೆ ಮೀನುಗಾರಿಕೆ ಕೆಲಸ ಮಾಡುತ್ತಿಯಾ ಅಂತಾ ನೋಡುತ್ತೇವೆ. ನಿನ್ನನ್ನು ಜೀವ ಸಮೇತ ಬಿಡುವುದಿಲ್ಲ. ಒಂದು ಗತಿ ಕಾಣಿಸುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ್ದಲ್ಲದೇ, ಆರೋಪಿತರೆಲ್ಲರೂ ಜನರು ಬರುವುದನ್ನು ನೋಡಿ ಸ್ಥಳದಿಂದ ಓಡಿ ಹೋಗುವಾಗ, ಆರೋಪಿತರು ಮದ್ಯ ಸೇವನೆ ಮಾಡಿದ್ದರಿಂದ ಓಡಲಾಗದೇ ನೆಲದ ಮೇಲೆ ಬಿದ್ದಿದ್ದು, ಆರೋಪಿತರಲ್ಲಿ 4 ನೇಯವನು ಸ್ಥಳದಿಂದ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ರಾಮ ಖಾರ್ವಿ, ಪ್ರಾಯ-48 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಟ್ಟೆ ವಿನಾಯಕ ಕೇರಿ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 06-04-2022 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಹಾಬಲೇಶ್ವರ ತಂದೆ ಗುತ್ಯಪ್ಪ ಹರಿಜನ, ಪ್ರಾಯ-35 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ವಡಗೇರಿ, ತಾ: ಸಿದ್ದಾಪುರ. ಈತನು ದಿನಾಂಕ: 06-04-2022 ರಂದು 17-45 ಗಂಟೆಗೆ ಸಿದ್ದಾಪುರ ತಾಲೂಕಿನ ವಡಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ತನ್ನ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕರಿಗೆ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). ORIGINAL CHOICE 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು, 2). 2 ಪ್ಲಾಸ್ಟಿಕ್ ಗ್ಲಾಸುಗಳು, 3). ORIGINAL CHOICE 90 ML ಅಂತಾ ಬರೆದ 2 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 06-04-2022 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಲೋಕೇಶ ತಂದೆ ರಾಮಾ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಕಾನಗೋಡ, ತಾ: ಸಿದ್ದಾಪುರ. ಈತನು ದಿನಾಂಕ: 06-04-2022 ರಂದು 18-30 ಗಂಟೆಗೆ ಸಿದ್ದಾಪುರ ತಾಲೂಕಿನ ಕಾನಗೋಡಿನಲ್ಲಿರುವ ತನ್ನ ಕಿರಾಣಿ ಅಂಗಡಿಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕರಿಗೆ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ 1). HAYWARDS CHEERS WHISKY 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು, 2). 2 ಪ್ಲಾಸ್ಟಿಕ್ ಗ್ಲಾಸುಗಳು, 3). HAYWARDS CHEERS WHISKY 90 ML ಅಂತಾ ಬರೆದ 2 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 06-04-2022 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸಾಗರ ತಂದೆ ಗೋವಿಂದ ಗಾವಡೆ, ಪ್ರಾಯ-32 ವರ್ಷ, ವೃತ್ತಿ-ಚಹಾ ಅಂಗಡಿ ವ್ಯಾಪಾರ, ಸಾ|| ಸಾಯಿಗಲ್ಲಿ, ರಾಮನಗರ, ತಾ: ಜೋಯಿಡಾ. ಈತನು ದಿನಾಂಕ: 06-10-2022 ರಂದು 16-10 ಗಂಟೆಗೆ ರಾಮನಗರದ ಶಿವಾಜಿ ಸರ್ಕಲ್ ನಲ್ಲಿರುವ ತನ್ನ ಚಹಾ ಮಾರಾಟ ಮಾಡುವ ಹೊಟೇಲ್ ಮಾದರಿಯ ಅಂಗಡಿಯಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿಗೆ ಅವನಲ್ಲಿದ್ದ UB EXPORT STRONG PREMIUM BEER ಎಂಬ ಸರಾಯಿಯನ್ನು ಕುಡಿಯಲು ಅನುವು ಮಾಡಿಕೊಟ್ಟು ತನ್ನಲ್ಲಿಯ ಪ್ಲಾಸ್ಟಿಕ್ ಗ್ಲಾಸು ಹಾಗೂ ತಿನಿಸುಗಳನ್ನು ಕೊಟ್ಟು ತನ್ನ ಹೊಟೇಲ್ ಮಾದರಿಯ ಚಹಾ ಅಂಗಡಿಯಲ್ಲಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). ಅರ್ಧದಷ್ಟು ಬಿಯರ್ ಸರಾಯಿ ಹೊಂದಿರುವ 650 ನ UB EXPORT STRONG PREMIUM BEER ಎಂಬ ಮದ್ಯ ಹೊಂದಿರುವ ಗಾಜಿನ ಬಾಟಲಿ-01, ಅ||ಕಿ|| 130/- ರೂಪಾಯಿ, 2). 90 ML ನ ORIGINAL CHOICE WHISKY ಯ ಟೆಟ್ರಾ ಪ್ಯಾಕೆಟ್ ಗಳು-02, ಅ||ಕಿ|| 70.26/- ರೂಪಾಯಿ, 3). 90 ML ನ DK Double Kick Fime Whisky-02, ಅ||ಕಿ|| 55.96/- ರೂಪಾಯಿ, 4). ಅರ್ಧದಷ್ಟು UB EXPORT STRONG PREMIAM BEER ಹೊಂದಿರುವ ಪ್ಲಾಸ್ಟಿಕ್ ಗ್ಲಾಸು-01, ಅ||ಕಿ|| ೦೦.೦೦/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ದಯಾನಂದ ಗೋಪಾಲ ಶೇಗುಣಸಿ, ಪೊಲೀಸ್ ವೃತ್ತ ನಿರೀಕ್ಷಕರು, ಜೋಯಿಡಾ ವೃತ್ತ, ಜೋಯಿಡಾ ರವರು ದಿನಾಂಕ: 06-04-2022 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

Daily District U.D Report

Date:- 06-04-2022

at 00:00 hrs to 24:00 hrs

 

No Cases Reported....

 

======||||||||======

 

 

 

 

 

 

 

Last Updated: 21-04-2022 05:05 PM Updated By: SP KARWAR


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Uttara Kannada District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080