ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 118/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಮಲ್ಲಪ್ಪ ಎತ್ತಿನಮನೆ, ಸಾ|| ಕಲಘಟಗಿ, ಧಾರವಾಡ ಜಿಲ್ಲೆ (ಕ್ಯಾಂಟರ್ ಲಾರಿ ನಂ: ಕೆ.ಎ-43/2189 ನೇದರ ಚಾಲಕ). ಈತನು ದಿನಾಂಕ: 06-08-2021 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಸರಳೇಬೈಲ್ ಗ್ರಾಮದಿಂದ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ತನ್ನ ಕ್ಯಾಂಟರ್ ಲಾರಿ ನಂ: ಕೆ.ಎ-43/2189 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ತನ್ನ ಸೈಡ್ ಬಿಟ್ಟು ರಸ್ತೆಯ ತೀರಾ ಬಲಕ್ಕೆ ಬಂದವನು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟ ಲಾರಿ ನಂ: ಕೆ.ಎ-36/ಬಿ-8284 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕ್ಯಾಂಟರ್ ಲಾರಿಯ ಕ್ಲೀನರ್ ಬಸವರಾಜ ತಂದೆ ನಾಗಪ್ಪ ಉಮ್ಮಚಗಿ, ಪ್ರಾಯ-19 ವರ್ಷ, ಸಾ|| ಕಲಘಟಗಿ, ಧಾರವಾಡ ಈತನ ಎಡಗಾಲಿನ ಮಂಡಿಯ ಹತ್ತಿರ ಹಾಗೂ ಮುಖದ ಮೇಲೆ ಭಾರೀ ರಕ್ತಗಾಯವಾಗಿ ಬಲ ಕಿವಿಯಿಂದ, ಮೂಗಿಂದ ಮತ್ತು ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ್ದಲ್ಲದೇ, ಪಿರ್ಯಾದಿಯ ಎಡಗೈ ಹಸ್ತಕ್ಕೆ ಮತ್ತು ಬಲಗಾಲಿನ ತೊಡೆಯ ಹತ್ತಿರ ಸಾದಾ ಗಾಯ ಮತ್ತು ಲಾರಿ ಕ್ಲೀನರ್ ಬಲಗಾಲಿಗೆ, ಹಣೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದು ಹಾಗೂ ಆರೋಪಿ ಕ್ಯಾಂಟರ್ ಲಾರಿ ಚಾಲಕನು ತನಗೂ ಸಹ ಮೈ ಮೇಲೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದುರ್ಗಪ್ಪ ತಂದೆ ಚೌಡಪ್ಪ ಸುಡಗಾಡಸಿದ್ದ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಹೊಸಪೇಟೆ, ಜಮ್ಮುನಾಥ ಬೈಪಾಸ್ ರಸ್ತೆ, ಆಶ್ರಯ ಕಾಲೋನಿ, ವಿಜಯನಗರ ರವರು ದಿನಾಂಕ: 06-08-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 119/2021, ಕಲಂ: 279, 337, 338, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಕೆ.ಎ-25/ಸಿ-6500 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 06-08-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹೆಬ್ಬುಳ ಗ್ರಾಮದಿಂದ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ತನ್ನ ಲಾರಿ ನಂ: ಕೆ.ಎ-25/ಸಿ-6500 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ಬಂದವನು, ಮುಂದಿನಿಂದ ಹೋಗುತ್ತಿದ್ದ ಯಾವುದೋ ಲಾರಿ ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ರಸ್ತೆಯ ತೀರಾ ಬಲಕ್ಕೆ ಬಂದವನು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟ ಕಾರ್ ನಂ: ಕೆ.ಎ-50/ಝೆಡ್-0354 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರಿನ ಮುಂದಿನ ಸೀಟಿನಲ್ಲಿ ಕುಳಿತ ವಸಂತ ಟಾಕಪ್ಪ ಅಕ್ಕಿ, ಪ್ರಾಯ-78 ವರ್ಷ, ಸಾ|| 3 ನೇ ಕ್ರಾಸ್, ಪಂಚಾಕ್ಷರಿ ನಗರ, ಅಕ್ಕಿ ಬಿಲ್ಡಿಂಗ್, ಗದಗ ಇವರಿಗೆ ಹಣೆಗೆ, ಎಡಗಣ್ಣಿಗೆ, ಬಾಯಿಗೆ ಮತ್ತು ಮೈಮೇಲೆ ಅಲ್ಲಲ್ಲಿ ಭಾರೀ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ್ದಲ್ಲದೇ, ಕಾರಿನ ಹಿಂದಿನ ಸೀಟಿನಲ್ಲಿ ಕುತಿದ್ದ ಅಶೋಕ ಟಾಕಪ್ಪ ಅಕ್ಕಿ ಇವರಿಗೆ ಎಡಗೈಗೆ, ಹಣೆಯ ಎಡಬದಿಗೆ ಹಾಗೂ ಎಡಗಾಲಿಗೆ ಭಾರೀ ಗಾಯ, ಪ್ರಕಾಶ ಟಾಕಪ್ಪ ಅಕ್ಕಿ ಇವರಿಗೆ ತಲೆಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯನೋವು ಪಡಿಸಿ, ಆರೋಪಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ವಿಕಾಸ ತಂದೆ ವಿಜಯಕುಮಾರ ಅಕ್ಕಿ, ಪ್ರಾಯ-31 ವರ್ಷ, ವೃತ್ತಿ-ಸಾಫ್ಟವೇರ್ ಇಂಜನಿಯರ್, ಸಾ|| 3 ನೇ ಕ್ರಾಸ್, ಪಂಚಾಕ್ಷರಿ ನಗರ, ಅಕ್ಕಿ ಬಿಲ್ಡಿಂಗ್, ಗದಗ ರವರು ದಿನಾಂಕ: 06-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 142/2021, ಕಲಂ: 279 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು  ಪ್ಯಾಸೆಂಜರ್ ಆಟೋ ರಿಕ್ಷಾ ಕೆ.ಎ-47/5311 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 06-08-2021 ರಂದು-16-30 ಗಂಟೆಗೆ ಮಾಸ್ತಿಕಟ್ಟೆಯಿಂದ ಮೂರಕಟ್ಟೆ ಕಡೆಗೆ ಹಾಯ್ದಿರುವ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-47/5311 ನೇದನ್ನು ಮಾಸ್ತಿಕಟ್ಟೆ ಕಡೆಯಿಂದ ಮೂರಕಟ್ಟೆ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದವನು, ಶಾರದಾ ಶೆಟ್ಟಿ ಮನೆಯ ಎದುರು ತನ್ನ ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಓವರಟೇಕ್ ಮಾಡಲು ಹೋಗಿ ತಾನು ಚಲಾಯಿಸುತ್ತಿದ್ದ ಪ್ಯಾಸೆಂಜರ್ ಆಟೋ ರಿಕ್ಷಾವನ್ನು ಒಮ್ಮೇಲೆ ಬಲಗಡೆಯಲ್ಲಿ ಚಲಾಯಿಸಿ, ಮೂರಕಟ್ಟೆ ಕಡೆಯಿಂದ ಮಾಸ್ತಿಕಟ್ಟೆ ಕಡೆಗೆ ತನ್ನ ಸೈಡಿನಲ್ಲಿ ನಿಧಾನವಾಗಿ ಹೋಗುತ್ತಿದ್ದ ಪಿರ್ಯಾದಿಯು ಪ್ರಯಾಣಿಸುತಿದ್ದ ಟಾಟಾ ಸುಮೋ ವಾಹನ ನಂ: ಕೆ.ಎ-22/ಡಿ-1726 ನೇದಕ್ಕೆ ಮುಂಬದಿಯಿಂದ ಡಿಕ್ಕಿ ಹೊಡೆದು ಅಘಪಾತ ಪಡಿಸಿ, ಎರಡು ವಾಹನ ಜಖಂ ಆಗಲು ಕಾರಣವಾಗಿರುವುದ್ದಲ್ಲದೇ, ಅಪಘಾತದ ಸ್ಥಳದಲ್ಲಿ ತನ್ನ ಪ್ಯಾಸೆಂಜರ್ ಆಟೋ ರಿಕ್ಷಾ ಕೆ.ಎ-47/5311 ನೇದನ್ನು ಬಿಟ್ಟು ಸ್ಥಳದಿಂದ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ಈಶ್ಚರ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ತಾರಿಬಾಗಿಲು, ಹೆಗಡೆ, ತಾ: ಕುಮಟಾ ರವರು ದಿನಾಂಕ: 06-08-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 124/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ  ಯಾರೋ ಕಳ್ಳರು ದಿನಾಂಕ: 05-08-2021 ರಂದು ಸಾಯಂಕಾಲ 18-00 ಗಂಟೆಯಿಂದ ದಿನಾಂಕ: 06-08-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಹಿತ್ಲಳ್ಳಿಯಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನದ ಬಾಗಿಲ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಮುರಿದು ಒಳಗೆ ಹೋಗಿ ದೇವಸ್ಥಾನದಲ್ಲಿದ್ದ 1). ಹಿತ್ತಾಳೆಯ ದೊಡ್ಡ ಗಂಟೆ-02, ಅ||ಕಿ|| 8,000/- ರೂಪಾಯಿ, 2). ಹಿತ್ತಾಳೆಯ ಸಣ್ಣ ಗಂಟೆ-08, ಅ||ಕಿ|| 4,000/- ರೂಪಾಯಿ, 3). ದೀಪ ಹಚ್ಚುವ ಹಿತ್ತಾಳೆಯ ದೊಡ್ಡ ಗುಡ್ಣ-01, ಅ||ಕಿ|| 2,000/- ರೂಪಾಯಿ, 4). ಊದಬತ್ತಿ ಹಚ್ಚುವ ಹಿತ್ತಾಳೆಯ ಸ್ಟಾಂಡ್-01, ಅ||ಕಿ|| 300/- ರೂಪಾಯಿ, 5). ಎಲೆಕ್ಟ್ರಿಕಲ್ ಕೇಬಲ್ ಬಾಕ್ಸ್-01, ಅ||ಕಿ|| 1,100/- ರೂಪಾಯಿ ಹಾಗೂ ದೇವಸ್ಥಾನಲ್ಲಿಯ ಕಾಣಿಕೆ ಹುಂಡಿಯ ಬೀಗವನ್ನು ಮೀಟಿ ಮುರಿದು ಅದರಲ್ಲಿದ್ದ ಸುಮಾರು 1,250/- ರೂಪಾಯಿ, ಹೀಗೆ ಒಟ್ಟು 16,750/- ರೂಪಾಯಿ ಬೆಲೆಯ ಸ್ವತ್ತನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ದೇವೇಂದ್ರ ತಂದೆ ನಾರಾಯಣ ನಾಯ್ಕ, ಪ್ರಾಯ-59 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೊಪ್ಪದಗದ್ದೆ, ಹಿತ್ಲಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 06-08-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಸತ್ಯನಾರಾಯಣ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಂಚಿನಕೇರಿ, ತಾ: ಶಿರಸಿ. ಈತನು ದಿನಾಂಕ: 06-08-2021 ರಂದು 18-50 ಗಂಟೆಯ ಸುಮಾರಿಗೆ ಶಿರಸಿ ಶಹರದ ಬಿಡಕಿಬೈಲಿನ ಸಂತೆ ಮಾರ್ಕೆಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 970/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01, ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮೋಹಿನಿ ಶೆಟ್ಟಿ, ಪಿ.ಎಸ್.ಐ (ಕ್ರೈಂ), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 06-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-08-2021 ರಂದು 19-00 ಗಂಟೆಯಿಂದ ದಿನಾಂಕ: 06-08-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ತಾಲೂಕಿನ ಕಾನಕೊಪ್ಪದ ಶಿರಸಿ-ಕೊರ್ಲಕಟ್ಟಾ ರಸ್ತೆಯಲ್ಲಿರುವ ಸೈಯದ್ ಮೋತಿಷಾ ಖಾದ್ರಿ ಹೆಸರಿನ ದರ್ಗಾದ ಮುಂದಿನ ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಡಿ.ವಿ.ಆರ್ ಇಟ್ಟ ಕೋಣೆಯ ಲಾಲದಂಡಿಯನ್ನು ಯಾವುದೋ ಆಯುಧದಿಂದ ಕಟ್ ಮಾಡಿ 1). ಡಿ.ವಿ.ಆರ್-01, ಅ||ಕಿ|| 3,950/- ರೂಪಾಯಿ, 2). ಡೆಲ್ ಕಂಪನಿಯ ಮೊನಿಟರ್-01, ಅ||ಕಿ|| 5,500/- ರೂಪಾಯಿ, 3). ಜಿಯೋ 5 ಮೊಡೆಮ್ ಮತ್ತು ಅದಕ್ಕೆ ಅಳವಡಿಸಿದ ಜಿಯೋ ಸಿಮ್ ನಂ: 8088248068, ಅ||ಕಿ|| 1,800/- ರೂಪಾಯಿ ಮತ್ತು ದರ್ಗಾದೊಳಗಿದ್ದ ಕಾಣಿಕೆ ಹುಂಡಿ-01, ಅದರಲ್ಲಿದ್ದ ಸುಮಾರು 8,000/- ರಿಂದ 10,000/- ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ವಸ್ತುಗಳ ಒಟ್ಟೂ ಮೊತ್ತ 21,250/- ರೂಪಾಯಿ ಇರುತ್ತದೆ. ಹೀಗೆ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಲತೀಫ್ ತಂದೆ ನಸುರುದ್ದೀನ್ ಶೇಖ್, ಪ್ರಾಯ-51 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬ್ಯಾಗದ್ದೆ, ಪೋ: ದೊಡ್ನಳ್ಳಿ, ತಾ: ಶಿರಸಿ ರವರು ದಿನಾಂಕ: 06-08-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 43/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹಮ್ಮದ್ ಎನ್. ಎ. ತಂದೆ ಅಕ್ಬರ್, ಪ್ರಾಯ-26 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಇಂಜೀನಿಯರ್, ಸಾ|| ನೆಡುಪುರಕಲ್ ಮನೆ, ತುರ್ತುಮಲ್ ರೋಡ್, ವೆಲ್ಲಾನ್‍ ಗಲ್ಲೂರು, ವಡಕ್ಕುಂಕಾರ್, ತ್ರಿಶ್ಯೂರ್, ಕೇರಳಾ. ಈತನು ದಿನಾಂಕ: 05-08-2021 ರಂದು ಬೆಳಗಿನ ಜಾವ 00-11 ಗಂಟೆಗೆ ರೈಲು ಗಾಡಿ ನಂ: 09332 ಇಂದೋರ್-ಕೊಚ್ಚವೇಲಿ ಎಕ್ಸಪ್ರೆಸ್ ರೈಲು ಗಾಡಿಯ ಮೂಲಕ ಮುಂಬೈಯಿಂದ ಕೇರಳಾಕ್ಕೆ ಪ್ರಯಾಣಿಸುತ್ತಿದ್ದವನು, ಹಾರವಾಡದ ರೈಲು ನಿಲ್ಧಾಣದಲ್ಲಿ ರೈಲು ಕ್ರಾಸಿಂಗ್ ಸಮಯದಲ್ಲಿ ಯಾವುದೋ ಕಾರಣಕ್ಕೆ ತಾನು ಪ್ರಯಾಣಿಸುತ್ತಿದ್ದ ರೈಲಿನಿಂದ ಕೆಳಗೆ ಇಳಿದಾಗ ರೈಲು ತಪ್ಪಿಸಿಕೊಂಡು ಹಾರವಾಡ ರೈಲು ನಿಲ್ದಾಣದಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತಿರುಗಾಡುತ್ತಿದ್ದವನು, ದಿನಾಂಕ: 05-08-2021 ರಂದು ಬೆಳಗಿನ ಜಾವ 03-20 ಗಂಟೆಗೆ ಚಲಿಸುತ್ತಿದ್ದ ರೈಲು ಗಾಡಿ ನಂ: 06311 ಗಂಗಾನಗರ-ಕೊಚ್ಚವೇಲಿ ಎಕ್ಸಪ್ರೆಸ್ ರೈಲಿಗೆ ಹಾರಿ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಎನ್. ಎಮ್. ಅಕ್ಬರ್ ತಂದೆ ಮಹಮ್ಮದ್, ಪ್ರಾಯ-62 ವರ್ಷ, ವೃತ್ತಿ-ಚಾಲಕ, ಸಾ|| ನೆಡುಪುರಕಲ್ ಮನೆ, ತುರ್ತುಮಲ್ ರೋಡ್, ವೆಲ್ಲಾನ್ ಗಲ್ಲೂರು, ವಡಕ್ಕುಂಕಾರ್, ತ್ರಿಶ್ಯೂರ್, ಕೇರಳಾ ರವರು ದಿನಾಂಕ: 06-08-2021 ರಂದು 00-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 27/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಮುಸ್ಕಾನ್ ತಂದೆ ಸುಲೇಮಾನ್ ಶೇಖ್, ಪ್ರಾಯ-21 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಇಂದಿರಾನಗರ, ತಾ: ಮುಂಡಗೋಡ. ಪಿರ್ಯಾದಿಯ ಅಕ್ಕನ ಮಗಳಾದ ಇವಳು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 06-08-2021 ರಂದು ಮಧ್ಯಾಹ್ನ 02-00 ಗಂಟೆಯಿಂದ ಸಾಯಂಕಾಲ 06-00 ಗಂಟೆಯ ನಡುವಿನ ಅವಧಿಯಲ್ಲಿ ಅವಳು ಒಬ್ಬಳೇ ವಾಸವಾಗಿದ್ದ ತಗಡಿನ ಶೆಡ್ಡಿನ ರೂಮಿನಲ್ಲಿ ಅಡ್ಡದಾಗಿ ಹಾಕಿದ್ದ ಕಟ್ಟಿಗೆಯ ಎಳೆಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಆದರೂ ಸಹ ಅವಳ ಮರಣದ ಬಗ್ಗೆ ಸಂಶಯವಿದ್ದು, ಈ ಕುರಿತು ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಗೌಸಮೊಹಿದ್ದೀನ್ ತಂದೆ ಇಮಾಮಸಾಬ್ ಕಲೇಗಾರ್, ಪ್ರಾಯ-35 ವರ್ಷ, ವೃತ್ತಿ-ಹಿಟ್ಟಿನ ಗಿರಣಿ ಕೆಲಸ, ಸಾ|| ಇಂದಿರಾನಗರ, ತಾ: ಮುಂಡಗೋಡ ರವರು ದಿನಾಂಕ: 06-08-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 07-08-2021 03:32 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080