ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-02-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಭಾಷ ತಂದೆ ಗುಣಾಕರ ಪಡ್ತಿ, ಪ್ರಾಯ-32 ವರ್ಷ, ಸಾ|| ಹೆಬ್ಬುಳ, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-4052 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 05-02-2021 ರಂದು 19-00 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-4052 ನೇದನ್ನು ಅಗಸೂರು ಕಡೆಯಿಂದ ಸರಳೆಬೈಲ್ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಬಲಬದಿಗೆ ಇರುವ ಅಗಸೂರು ಪೆಟ್ರೋಲ್ ಪಂಪ್ ಕಡೆಗೆ ಹೋಗಲು ಯಾವುದೇ ಸೂಚನೆಗಳನ್ನು ನೀಡದೇ ಇಂಡಿಕೇಟರ್ ಅನ್ನು ಹಾಕದೇ ಒಮ್ಮೇಲೆ ಬಲಬದಿಗೆ ತೆಗೆದುಕೊಂಡು ತನ್ನ ಹಿಂದಿನಿಂದ ಅಂದರೆ ಅಗಸೂರು ಕಡೆಯಿಂದ ಸರಳೇಬೈಲ್ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-9601 ನೇದಕ್ಕೆ ಡಿಕ್ಕಿಯಾಗುವಂತೆ ಮಾಡಿ ಅಪಘಾತ ಪಡಿಸಿದ್ದು, ಮೋಟಾರ್ ಸೈಕಲ್ ನಂ: ಕೆ.ಎ-30/ವಿ-9601 ನೇದರ ಸವಾರರಾದ ಶ್ರೀ ವಿನೋದ ತಂದೆ ಮಾದೇವ ಗೌಡ, ಸಾ|| ಸರಳೆಬೈಲ್, ತಾ: ಅಂಕೋಲಾ ಮತ್ತು ಶ್ರೀ ಮಹೇಶ ಶಿವು ಗೌಡ, ಸಾ|| ಶಿರಗುಂಜಿ, ತಾ: ಅಂಕೋಲಾ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಚಂದ್ರು ಗೌಡ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸರಳೇಬೈಲ್, ತಾ: ಅಂಕೋಲಾ ರವರು ದಿನಾಂಕ: 06-02-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 379, 323, 504, 506 ಐಪಿಸಿ ಮತ್ತು ಕಲಂ: 4, 12 ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ ಕಾಯ್ದೆ-2020 ನೇದ್ದರ ವಿವರ...... ನಮೂದಿತ ಆರೋಪಿತ ರಾಮ ತಂದೆ ಮರ್ತಪ್ಪ ನಾಯ್ಕ, ಪ್ರಾಯ-48 ವರ್ಷ, ಸಾ|| ಜಡ್ಡಿ, ಮಂಕಿ, ತಾ: ಹೊನ್ನಾವರ. ನಮೂದಿತ ಆರೋಪಿತನು ದಿನಾಂಕ: 12-01-2021 ರಂದು ಬೆಳಿಗ್ಗೆ 06-00 ಗಂಟೆಯಿಂದ ಸಾಯಂಕಾಲ 19-00 ಗಂಟೆಯ ನಡುವಿನ ಅವಧಿಯಲ್ಲಿ ಮುಳಗೋಡ ಗ್ರಾಮದಲ್ಲಿ ಪಿರ್ಯಾದಿಯು ಮೇಯಿಸಲು ಬಿಟ್ಟ ಜರ್ಸಿ ತಳಿಯ ಕಪ್ಪು ಬಣ್ಣದ ಆಕಳನ್ನು ಕಳುವು ಮಾಡಿ ಕಸಾಯಿಖಾನೆಗೆ ಸಾಗಿಸಿ ವಧೆ ಮಾಡಲು ಕಾರಣನಾಗಿದ್ದಲ್ಲದೇ, ದಿನಾಂಕ: 03-02-2021 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಪಿರ್ಯಾದಿಯು ಆರೋಪಿತನ ಮನೆಯ ಹತ್ತಿರ ಕೇಳಲು ಹೋದಾಗ ಅವಾಚ್ಯವಾಗಿ ಬೈಯ್ದು, ಕೈಯಿಂದ ಹೊಡೆದು ದೂಡಿ ಹಾಕಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಗಣಪಯ್ಯ ತಂದೆ ಕನ್ಯಾ ಗೌಡ, ಪ್ರಾಯ-36 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮುಳಗೋಡ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 06-02-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುಬ್ರಹ್ಮಣ್ಯ ತಂದೆ ಸಣ್ಣತಮ್ಮ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಕೋಟೆಬಾಗಿಲು, ಶಿರಾಲಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 06-02-2021 ರಂದು 13-00 ಗಂಟೆಯ ಸಮಯಕ್ಕೆ ಭಟ್ಕಳ ಶಿರಾಲಿಯ ಕೋಟೆಬಾಗಿಲು ಕ್ರಾಸ್ ಹತ್ತಿರ ಬೀಡಾ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜೂಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,200/- ರೂಪಾಯಿಗಳೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಓಂಕಾರಪ್ಪ, ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 06-02-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೊಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 06-02-2021 ರಂದು ಬೆಳಗಿನ ಜಾವ 01-05 ಗಂಟೆಯಿಂದ ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಮುಂದಿನ ಅಂಗಳದಲ್ಲಿ ಇರುವ ಪಿರ್ಯಾದಿಯ ಗೋದಾಮಿನಲ್ಲಿ ಮೂರು ಗೋಣಿ ಚೀಲದಲ್ಲಿ ಹಾಕಿಟ್ಟಿದ್ದ ಪಿರ್ಯಾದಿಗೆ ಸೇರಿದ ಸುಮಾರು 1.2 ಕ್ವಿಂಟಾಲ್ ಅಡಿಕೆ (ಅಂದಾಜು ಮೌಲ್ಯ 60,000/- ರೂಪಾಯಿ) ಯನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಶಿವರಾಮ ತಂದೆ ತಮ್ಮಣ್ಣ ದಾನಗೇರಿ, ಪ್ರಾಯ-66 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕರಿಯಾದಿ, ಪೋ: ಗುಂದ, ತಾ: ಜೊಯಿಡಾ ರವರು ದಿನಾಂಕ: 06-02-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ನಾಗರಾಜ ಉಡುಪಿ, ಪ್ರಾಯ-31 ವರ್ಷ, ಸಾ|| ಮಾರಿಕಾಂಬಾ ನಗರ, ತಾ: ಶಿರಸಿ (ಹೊಸದಾದ ಮೋಟಾರ್ ಸೈಕಲ್ ಚಾಸಿಸ್ ನಂ: MBLHAW113L5M85025 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 06-02-2021 ರಂದು ಸಂಜೆ 16-30 ಗಂಟೆಯ ಸುಮಾರಿಗೆ ಆರೋಪಿತನು ತನ್ನ ಬಾಬ್ತು ಹೊಸದಾದ ಮೋಟಾರ್ ಸೈಕಲ್ ಚಾಸಿಸ್ ನಂ: MBLHAW113L5M85025 ನೇದನ್ನು ವೆಂಕಟೇಶ್ವರ ಕ್ಲಿನಿಕ್ ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಅದೇ ವೇಗದಲ್ಲಿ ಶಿರಸಿ ಯಲ್ಲಾಪುರ ರಸ್ತೆಯನ್ನು ಪ್ರವೇಶಿಸಿ, ಆದಿಶಕ್ತಿ ಹೋಂಡಾ ಶೋ-ರೂಮ್ ಕಡೆಯಿಂದ ಅಶ್ವಿನಿ ಸರ್ಕಲ್ ಕಡೆಗೆ ಗಾಯಾಳು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿ ನಂ: ಕೆ.ಎ-31/ಇ.ಎ-6857 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಗುರುಪ್ರಸಾದ ತಂದೆ ರವಿಂದ್ರ ಪೈ ಇವರಿಗೆ ಮೂಗು, ಬಲಗೈ ಮತ್ತು ಬಲಗಾಲಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಆನಂದ ತಂದೆ ರಮಾಕಾಂತ ಕಾಮತ್, ಪ್ರಾಯ-36 ವರ್ಷ, ವೃತ್ತಿ-ಆದಿಶಕ್ತಿ ಹೋಂಡಾ ಶೋ-ರೂಮದಲ್ಲಿ ಜನರಲ್ ಮ್ಯಾನೇಜರ್, ಸಾ|| ವಿಜಯನಗರ, ತಾ: ಶಿರಸಿ ರವರು ದಿನಾಂಕ: 06-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಚಿನ್ ತಂದೆ ರಾಮಚಂದ್ರ ವಾಸನಕರ್, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾಂಬುಗೇಟ್, ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 06-02-2021 ರಂದು 18-10 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಸೋಮಾನಿ ಸರ್ಕಲ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ನಂಬರ್ ಬರೆದಿರುವ ಚೀಟಿ ಹಾಗೂ ನಗದು ಹಣ 1,200/- ರೂಪಾಯಿಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 06-02-2021 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣಾ ಚಂದೂರಿ, ಸಾ|| ಡಿ.ಎಫ್.ಎ ಗೇಟ್ ಹತ್ತಿರ, ದಾಂಡೇಲಿ. ನಮೂದಿತ ಆರೋಪಿತನು, ಪಿರ್ಯಾದುದಾರರು ಮತ್ತು ಅವರ ಸ್ನೇಹಿತರು ಪಾರ್ಟಿ ಮಾಡುವ ಕುರಿತು ದಾಂಡೇಲಿಯ ಡಿ.ಎಫ್.ಎ ಮೈದಾನದ ಹತ್ತಿರ ಹೋಗಿದ್ದಾಗ ಪಾರ್ಟಿ ಕೊಡಿಸುವ ವಿಚಾರದಲ್ಲಿ ನಮೂದಿತ ಆರೋಪಿತನು ದಿನಾಂಕ: 06-02-2021 ರಂದು 21-15 ಗಂಟೆಗೆ ಪಿರ್ಯಾದುದಾರರಿಗೆ ‘ನೀನ್ಯಾಕೆ ಪಾರ್ಟಿ ಕೊಡಸ್ತೀಯಾ ಬೋಳಿ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ, ಮೈಮೇಲೆ ಏರಿ ಬಂದು, ಅಲ್ಲಿಯೇ ಬಿದ್ದಿದ್ದ ಒಂದು ಬಾಟಲಿಯಿಂದ ಪಿರ್ಯಾದಿಯ ತಲೆಗೆ ಹೊಡೆದು, ಹಣೆಗೆ ರಕ್ತಗಾಯ ಪಡಿಸಿದ್ದಲ್ಲದೇ, ‘ಇನ್ನೊಮ್ಮೆ ಸಿಕ್ಕಲ್ಲಿ ನಿನ್ನನ್ನು ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಅಪ್ಪಯ್ಯ ಗುರವ, ಪ್ರಾಯ-36 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಂ ನೌಕರ, ಸಾ|| ಬಾಂಬೇಚಾಳ, ದಾಂಡೇಲಿ ರವರು ದಿನಾಂಕ: 06-02-2021 ರಂದು 22-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ವೀರೇಶ ತಂದೆ ವಿರುಪಾಕ್ಷಪ್ಪ ಮುಚ್ಚಟ್ಟಿ, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮೈನಳ್ಳಿ, ತಾ: ಮುಂಡಗೋಡ. ಪಿರ್ಯಾದಿಯ ಮಗನಾದ ಈತನು ತನ್ನ ಹೆಂಡತಿ ನೇತ್ರಾವತಿ ಇವಳು ನೇಣು ಹಾಕಿಕೊಳ್ಳಲು ಪ್ರಯತ್ನಪಟ್ಟವಳಿಗೆ ಬಿಡಿಸಿ, ಅವಳ ತವರು ಮನೆಯವರು ಕರೆದುಕೊಂಡು ಹೋದ ನಂತರ ಕಾಣೆಯಾದವನು ದಿನಾಂಕ: 12-10-2020 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೇ ತನ್ನ ಬಟ್ಟೆ-ಬರೆ ತೆಗೆದುಕೊಂಡು ಮನೆಯಿಂದ ಹೋದವನು ಮನೆಗೂ ಬಾರದೇ ಹೆಂಡತಿಯ ಮನೆಗೂ ಹೋಗದೇ, ತನ್ನ ಮೊಬೈಲ್ ಪೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿರುತ್ತಾನೆ. ಅವನು ಈವರೆಗೆ ಮರಳಿ ಬಾರದೇ ಇದ್ದುದರಿಂದ ಮತ್ತು ಅವನ ಮೊಬೈಲ್ ಪೋನ್ ಸ್ವಿಚ್ ಆಫ್ ಅಂತಾ ಬರುತ್ತಿದ್ದರಿಂದ ದೂರು ನೀಡಲು ವಿಳಂಬವಾಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿರುಪಾಕ್ಷಪ್ಪ ತಂದೆ ಹೇಮಪ್ಪ ಮುಚ್ಚಟ್ಟಿ, ಪ್ರಾಯ-74 ವರ್ಷ, ವೃತ್ತಿ-ಅರಣ್ಯ ಇಲಾಖೆಯ ನಿವೃತ್ತ ನೌಕರ, ಸಾ|| ಮೈನಳ್ಳಿ, ತಾ: ಮುಂಡಗೋಡ ರವರು ದಿನಾಂಕ: 06-02-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-02-2021 ರಂದು 20-00 ಗಂಟೆಯಿಂದ ದಿನಾಂಕ: 06-02-2021 ರಂದು ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ತತ್ವಣಗಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು ಒಳಹೊಕ್ಕು ದೇವರ ಮೇಲಿದ್ದ 1). 15 ಗ್ರಾಮ್ ತೂಕದ ಬಂಗಾರದ ನೆಕ್ಲೇಸ್-01, ಅ||ಕಿ|| 41,000/- ರೂಪಾಯಿ, 2). 05 ಗ್ರಾಮ್ ತೂಕದ ಬಂಗಾರದ ಕಿವಿಯೋಲೆ-01 ಜೊತೆ, ಅ||ಕಿ|| 14,000/- ರೂಪಾಯಿ, 3). 10 ಗ್ರಾಮ್ ತೂಕದ ಬಂಗಾರದ ಕಿವಿ ಜುಮಕಿ-01 ಜೊತೆ, ಅ||ಕಿ|| 33,000/- ರೂಪಾಯಿ, 4). 05 ಗ್ರಾಮ್ ತೂಕದ ಬಂಗಾರದ ಕಿವಿ ಸರಪಳಿ-01 ಜೊತೆ, ಅ||ಕಿ|| 14,000/- ರೂಪಾಯಿ, 5). 02 ಗ್ರಾಮ್ ತೂಕದ ಬಂಗಾರದ ಮೂಗುತಿ-01, ಅ||ಕಿ|| 1,100/- ರೂಪಾಯಿ, 6). 05 ಗ್ರಾಮ್ ತೂಕದ ಬೋರಮಾಳ ಸರ-01, ಅ||ಕಿ|| 14,000/- ರೂಪಾಯಿ ಇವುಗಳನ್ನು ಮತ್ತು ಗರ್ಭಗುಡಿ ತಿಜೋರಿಯಲ್ಲಿದ್ದ 7). 40 ಗ್ರಾಮ್ ಬಂಗಾರದ ಗುಂಡುಗಳು-200, ಅ||ಕಿ|| 1,18,000/- ರೂಪಾಯಿ, 8) 600 ಗ್ರಾಮ್ ತೂಕದ ಬೆಳ್ಳಿ ಆಭರಣಗಳು, ಅ||ಕಿ|| 18,800/- ರೂಪಾಯಿ, 9) ನಗದತ ಹಣ- 35,000/- ರೂಪಾಯಿ. ಹೀಗೆ ಒಟ್ಟೂ 2,88,900/- ರೂಪಾಯಿ ಮೌಲ್ಯದ ಬಂಘಾರ ಹಾಗೂ ಬೆಳ್ಳಿ ಆಭರಣ ಮತ್ತು ನಗದು ಹಣವನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಪುನ್ನಪ್ಪ ತಂದೆ ಲಕ್ಷ್ಮಣ ಕೇಳೋಜಿ, ಪ್ರಾಯ-51 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತತ್ವಣಗಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 06-02-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಲಲಿತಾ ತಂದೆ ನಾರಾಯಣ ದೇಸೂರಕರ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಶೇಖನಕಟ್ಟಾ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 05-02-2021 ರಂದು ಸಾಯಂಕಾಲ 06-00 ಗಂಟೆಗೆ ತನ್ನ ‘ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಹೋದವಳು, ತನ್ನ ಗೆಳತಿಯರ ಹಾಗೂ ಸಂಬಂಧಿಕರ  ಮನೆಗೂ ಹೋಗದೇ ಯಾವುದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಎಲ್ಲಿಯೋ ಹೋದವಳು, ವಾಪಸ್ ಮನೆಗೂ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಪಕೀರ ದೇಸೂರಕರ, ಪ್ರಾಯ-68 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶೇಖನಕಟ್ಟಾ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 06-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಸಾಕಮ್ಮ ಕೋಂ. ಹನುಮಂತಪ್ಪ, ಪ್ರಾಯ-70 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಸಂಪೆಕೇರಿ, ಹೊಸೂರು, ತಾ: ಸಿದ್ದಾಪುರ. ಪಿರ್ಯಾದುದಾರಳ ತಾಯಿಯಾದ ಇವಳಿಗೆ ಕಳೆದ 3 ವರ್ಷಗಳಿಂದ ಮರೆವಿನ ಖಾಯಿಲೆಯಿಂದ ಹಾಗೂ ಹಲವಾರು ವರ್ಷಗಳಿಂದ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು. ತಂಗಿ ಯಶೋಧಮ್ಮ ಇವಳು ಮರಣಪಟ್ಟ ನಂತರ ಸ್ವಲ್ಪ ಬೇಜಾರು ಮಾಡಿಕೊಂಡಿದ್ದಳು, ಹೀಗಿರುವಲ್ಲಿ ದಿನಾಂಕ: 06-02-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಪಿರ್ಯಾದುದಾರಳು ಮನೆಯಲ್ಲಿ ಸ್ನಾನಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ತಾಯಿಯನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕಾಂತಿ ಕೋಂ. ಕೇಶವ ಮೂರ್ತಿ, ಪ್ರಾಯ-51 ವರ್ಷ, ವೃತ್ತಿ-ಗೃಹಿಣಿ, ಸಾ|| ಸಂಪೆಕೇರಿ, ಬಂಕೇಶ್ವರ ದೇವಸ್ಥಾನದ ಹಿಂಭಾಗ, ಹೊಸೂರು, ಸಿದ್ದಾಪುರ ಶಹರ ರವರು ದಿನಾಂಕ: 06-02-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-02-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಚಂದ್ರಶೇಖರ ತಂದೆ ರಾಮ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವರುಗದ್ದೆ, ಹೆಬೈಲ್, ತಾ: ಕುಮಟಾ. ಇವರು ದಿನಾಂಕ: 06-02-2021 ರಂದು ಬೆಳಿಗ್ಗೆ 09-00 ಗಂಟೆಯಿಂದ 13-00 ಗಂಟೆಯ ಅವಧಿಯಲ್ಲಿ ಸರಾಯಿ ಕುಡಿದ ನಶೆಯಲ್ಲಿಯೋ ಅಥವಾ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯ ಎದುರಿಗೆ ಇರುವ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ಕಟ್ಟಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಸುಪ್ರೀತ ತಂದೆ ಚಂದ್ರಶೇಖರ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ದೇವರುಗದ್ದೆ, ಹೆಬೈಲ್, ತಾ: ಕುಮಟಾ ರವರು ದಿನಾಂಕ: 06-02-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶ್ರೀಧರ ತಂದೆ ಗೋವಿಂದ ಖಾರ್ವಿ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿದ್ರಕೇರಿ, ಬೈಲೂರ, ತಾ: ಭಟ್ಕಳ. ಈತನು ದಿನಾಂಕ: 06-02-2021 ರಂದು ಬೆಳಿಗ್ಗೆ 05-00 ಗಂಟೆಗೆ ತನ್ನ ಪಾತಿ ದೋಣಿಯಲ್ಲಿ ಬೈಲೂರು ಅರಬ್ಬೀ ಸಮುದ್ರಕ್ಕೆ ಕಂಟ್ಲೆ ಬಲೆಯ ಸಹಾಯದಿಂದ ಮೀನು ಹಿಡಿಯಲು ಸುಮಾರು 10 ಮಾರು ದೂರ ಹೋದಾಗ ಅರಬ್ಬೀ ಸಮುದ್ರದ ನೀರಿನಲ್ಲಿ ಬಿಟ್ಟಿರುವ ಬಲೆ ಸಮುದ್ರದ ಕಲ್ಲಿಗೆ ಸಿಲುಕಿದಾಗ ಪಾತಿ ದೋಣಿಯ ಸಹಾಯದಿಂದ ತಪ್ಪಿಸಲು ಹೋದಾಗ ನೀರಿನ ಅಲೆಗೆ ಪಾತಿ ದೋಣಿ ಮುಗುಚಿ ಶ್ರೀಧರ ಖಾರ್ವಿ ಈತನು ಆಯ ತಪ್ಪಿ ನೀರಿನಲ್ಲಿ ಬಿದ್ದಾಗ ಬಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಇರುತ್ತದೆ. ನಂತರ ಪಿರ್ಯಾದಿ ಮತ್ತು ಸ್ಥಳೀಯರು ಸೇರಿಕೊಂಡು ಬಲೆಯಲ್ಲಿ ಸಿಲುಕಿದ ಮೃತದೇಹವನ್ನು ಬಲೆಯ ಸಹಾಯದಿಂದ ಎಳೆದುಕೊಂಡು ಶವವನ್ನು ದಡಕ್ಕೆ ತಂದಿದ್ದು ಇರುತ್ತದೆ. ಈ ಘಟನೆಯು ಬೆಳಗಿನ ಜಾವ 05-30 ಗಂಟೆಯಿಂದ 06-30 ಗಂಟೆಯ ವೇಳೆಯಲ್ಲಿ ಸಂಭವಿಸಿದ್ದು ಇರುತ್ತದೆ, ಮೃತನ ಶವವು ಬೈಲೂರಿನ ಅರಬ್ಬೀ ಸಮುದ್ರದ ದಂಡೆಯ ಮೇಲೆ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಳು ವಿನಂತಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ನಾರಾಯಣ ಹರಿಕಾಂತ, ಪ್ರಾಯ-48 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹರಿಕಂತ್ರಕೇರಿ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 06-02-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 08-02-2021 01:11 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080