ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-01-2022

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-01-2022 ರಂದು 21-00 ಗಂಟೆಯಿಂದ ದಿನಾಂಕ: 06-01-2022 ರಂದು 08-00 ಗಂಟೆಯ ನಡುವಿನ ಅವಧಿಯಲ್ಲಿ ಗೋಟೆಗಾಳಿಯಲ್ಲಿರುವ ಪಿರ್ಯಾದಿಯವರ ಕಿರಾಣಿ ಅಂಗಡಿಯಾದ ಶ್ರೀ ಮಹಾಮಾಯಾ ಕಿರಾಣಿ ಸ್ಟೋರ್ಸ್ ನ ಮೇಲಿನಿಂದ ಹಂಚನ್ನು ತೆಗೆದು ಒಳಗೆ ಇಳಿದು ಅಂಗಡಿಯಲ್ಲಿನ ಗಲ್ಲೆ ಪೆಟ್ಟಿಗೆ ಮತ್ತು ದೇವರ ಹುಂಡಿಯಲ್ಲಿದ್ದ ಸುಮಾರು 1,500/- ರೂಪಾಯಿ ಹಣವನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಶಶಿಕಾಂತ ಕಲ್ಗುಟಕರ, ಪ್ರಾಯ-27 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ ಸಾ|| ಗೋಟೆಗಾಳಿ, ಕಾರವಾರ ರವರು ದಿನಾಂಕ: 06-01-2022 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಚೀನ ತಂದೆ ಗಣಪತಿ ನಾಯ್ಕ, ಪ್ರಾಯ-24 ವರ್ಷ, ಸಾ|| ಮಂಕಿ, ಮಡಿ, ತಾ: ಹೊನ್ನಾವರ. ಈತನು ದಿನಾಂಕ: 06-01-2022 ರಂದು ಮಧ್ಯಾಹ್ನ 12-30 ಗಂಟೆಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ಸರಕೊಂಡ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಕೂಗಿ ಕರೆದು ಅವರಿಂದ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿ, ಹಣ ಪಡೆದು ಅವರಿಗೆ ಓ.ಸಿ ಮಟಕಾ ಅಂಕೆ-ಸಂಖ್ಯೆಯ ಚೀಟಿಯನ್ನು ಬರೆದು ಕೊಡುತ್ತಾ ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಒಟ್ಟು ನಗದು ಹಣ 720/-ರೂಪಾಯಿ, ಓ.ಸಿ ಮಟಕಾ ಸಂಖ್ಯೆಗಳನ್ನು ಬರೆದ ಚೀಟಿ-1, ಬಾಲ್ ಪೆನ್-1. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಎಮ್. ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 06-01-2022 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನೋದ ತಂದೆ ಮಂಜುನಾಥ ನಾಯ್ಕ, ಸಾ|| ಬೈಲೂರು, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-7296 ನೇದರ ಸವಾರ). ಈತನು ದಿನಾಂಕ: 28-12-2021 ರಂದು 19-00 ಗಂಟೆಯ ಸುಮಾರಿಗೆ ಮೂಲೆಕೇರಿಯ ಹತ್ತಿರ ಬೈಲೂರು ದೊಡ್ಡಗುಂದ ರಸ್ತೆಯ ತಿರುವಿನಲ್ಲಿ, ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-7296 ನೇದನ್ನು ಬೈಲೂರು ಕಡೆಯಿಂದ ದೊಡ್ಡಗುಂದ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ವೇಗವನ್ನು ನಿಯಂತ್ರಿಸಲಾಗದೇ, ದೊಡ್ಡಗುಂದ ಕಡೆಯಿಂದ ಬೈಲೂರಿನ ತನ್ನ ಮನೆ ಕಡೆಗೆ ಹೋಗಲು ತನ್ನ ಬದಿಯಿಂದ ಮೋಟಾರ್ ಸೈಕಲ್ ನಂ: ಕೆ.ಎ-19/ಇ.ಎಸ್-7411 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ರಾಘವೇಂದ್ರ ತಂದೆ ಬಾಬು ಕೆಲ್ಸಿ ಇವರಿಗೆ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ಬೀಳಿಸಿ, ಬಲಗಾಲಿಗೆ ಭಾರೀ ಗಾಯ ಪಡಿಸಿದ್ದಲ್ಲದೇ, ಎರಡು ಕೈಗಳಿಗೆ ಹಾಗೂ ತಲೆಗೆ ರಕ್ತದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಾಲಚಂದ್ರ ತಂದೆ ಗಣಪತಿ ಹೆಗಡೆ, ಪ್ರಾಯ-44 ವರ್ಷ, ವೃತ್ತಿ-ಟೇಲರಿಂಗ್ ಕೆಲಸ, ಸಾ|| ಬೈಲೂರು, ಮಡಿಕೇರಿ, ತಾ: ಭಟ್ಕಳ ರವರು ದಿನಾಂಕ: 06-01-2022 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಮೀರ್ ತಂದೆ ಅಬ್ದುಲ್ ಖಾದರ್ ಶೇಖ್, ಪ್ರಾಯ-45 ವರ್ಷ, ವೃತ್ತಿ-ವೆಲ್ಡಿಂಗ್ ವರ್ಕ್, ಸಾ|| ಇಸ್ಲಾಂ ಗಲ್ಲಿ, ತಾ: ಯಲ್ಲಾಪುರ. ಈತನು ಯಲ್ಲಾಪುರ ಪಟ್ಟಣದ ಐ.ಬಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ: 06-01-2022 ರಂದು 15-45 ಗಂಟೆಗೆ ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ತನ್ನ ಲಾಭಕ್ಕಾಗಿ 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಾಕ್ಷಿದಾರ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಭೆರಿ ದಾಳಿ ಮಾಡಿದಾಗ ಓ.ಸಿ ಆಟದ ಸಲಕಣೆಗಳಾದ ಓ.ಸಿ ಚೀಟಿ-1, ಬಾಲ್ ಪೆನ್-01 ಮತ್ತು  ನಗದು ಹಣ 950/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕು: ಪ್ರಿಯಾಂಕಾ ನ್ಯಾಮಗೌಡ, ಡಬ್ಲ್ಯೂ.ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 06-01-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈಸ್ಟನ್ ತಂದೆ ಫ್ರಾನ್ಸಿಸ್ ಪಿಂಟೋ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆನಕಾ ಕಾಲೋನಿ, ಗಣೇಶನಗರ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-0894 ನೇದರ ಸವಾರ). ಈತನು ದಿನಾಂಕ: 01-01-2022 ರಂದು 11-00 ಗಂಟೆಯ ಸುಮಾರಿಗೆ ಶಿರಸಿ ಶಹರದ ಝೂ ಸರ್ಕಲ್ ನಲ್ಲಿರುವ ಡಾಂಬರ್ ರಸ್ತೆಯ ಮೇಲೆ ತಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-0894 ನೇದನ್ನು ಐದು ರಸ್ತೆ  ಕಡೆಯಿಂದ ಝೂ ಸರ್ಕಲ್ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ, ತನ್ನ ಮುಂದೆ ಗಾಯಾಳು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-3189 ನೇದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಗಾಯಾಳುವಿನ ಮೈ ಕೈಗಳಿಗೆ, ತಲೆಗೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ದಾಳು ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಗಣೇಶನಗರ, ತಾ: ಶಿರಸಿ ರವರು ದಿನಾಂಕ: 06-01-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 323, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಾಹೀದಾ ಶೇಖ್, ಸಾ|| ಎಲ್.ಐ.ಜಿ.1/46, ಗಣೇಶನಗರ, ತಾ: ದಾಂಡೇಲಿ, 2]. ಫಿರ್ದೋಸ್ ಶಾಹೀದಾ ಶೇಖ್, ಸಾ|| ಎಲ್.ಐ.ಜಿ.1/46, ಗಣೇಶನಗರ, ತಾ: ದಾಂಡೇಲಿ. ಪಿರ್ಯಾದುದಾರರು ದಿನಾಂಕ: 26-12-2021 ರಂದು ನಡೆಯಲಿರುವ ತನ್ನ ಮಾವನ ಮಗಳ ಮದುವೆಗೆ ದಿನಾಂಕ: 25-12-2021 ರಂದು ಹುಬ್ಬಳ್ಳಿಯಿಂದ ದಾಂಡೇಲಿಯ ಗಾಂಧಿನಗರಕ್ಕೆ ಮಾವನ ಮನೆಗೆ ಬಂದಿದ್ದು, ಅದೇ ದಿವಸ ರಾತ್ರಿ 22-00 ರಿಂದ 22-15 ಗಂಟೆಯ ನಡುವೆ ಪಿರ್ಯಾದಿಯ ಮಾವನ ಮಗಳ ಮದುವೆಯ ಅರಿಶಿಣ ಶಾಸ್ತ್ರದ ಕಾರ್ಯಕ್ರಮದಲ್ಲಿ ಧ್ವನಿವರ್ಧಕದ ಅತಿಯಾದ ಶಬ್ದದಿಂದ ಅರ್ಜಿದಾರರಿಗೆ ಕಿರಿಕಿರಿ ಉಂಟಾದಾಗ, ಈ ಬಗ್ಗೆ ತನ್ನ ಮಾವನ ಮಗ ತೌಕೀರ್ ಈತನೊಂದಿಗೆ ಮಾತಿಗೆ ಮಾತಾಗಿ ಜಗಳವಾಗುತ್ತಿದ್ದಾಗ ಪಿರ್ಯಾದಿಯ ಚಿಕ್ಕಮ್ಮಳಾದ ಆರೋಪಿತೆ 1 ನೇಯವಳು ಹಾಗೂ ಅವರ ಮಗಳಾದ ಆರೋಪಿ 1 ನೇಯವನು ಸೇರಿ ಮದ್ಯ ಬಂದು ಪಿರ್ಯಾದುದಾರರನ್ನು ದೂಡಾಡಿ, ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆದ ಬಗ್ಗೆ ಪಿರ್ಯಾದಿ ಶ್ರೀ ನದೀಂ ತಂದೆ ಸಾಹೇಬಜಾನ್ ಬಹದ್ದೂರ್, ಸಾ|| ಮನೆ ನಂ: 94, ಮಧುರಾ ಪಾರ್ಕ್, ಜೆ.ಕೆ ಕಾಲೇಜ್ ಹತ್ತಿರ, ಸಂತೋಷನಗರ ಪಕ್ಕದಲ್ಲಿ, ಹುಬ್ಬಳ್ಳಿ ರವರು ದಿನಾಂಕ: 06-01-2022 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-01-2022

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೃಷ್ಣಮೂರ್ತಿ ತಂದೆ ದೇವಪ್ಪಾ ನಾಯ್ಕ, ಪ್ರಾಯ-59 ವರ್ಷ, ವೃತ್ತಿ-ಕಾರವಾರ ಮಹಿಳಾ ಕಾಲೇಜಿನಲ್ಲಿ ಎಸ್.ಡಿ.ಎ, ಸಾ|| ಅರುಣಾ ಹೌಸ್, ಕಂತ್ರಿ ರಸ್ತೆ, ಜೋಗಳಸೆ, ತಾ: ಅಂಕೋಲಾ. ಪಿರ್ಯಾದಿಯ ಗಂಡನಾದ ಈತನು ಕಾರವಾರದ ಮಹಿಳಾ ಕಾಲೇಜಿನಲ್ಲಿ ಎಸ್.ಡಿ.ಎ ಆಗಿ ನೌಕರಿ ಮಾಡುತ್ತಿದ್ದು, ದಿನಾಂಕ: 05-01-2022 ರಂದು ಅನಾರೋಗ್ಯದಿಂದ ಮನೆಯಲ್ಲಿ ಕುಸಿದು ಬಿದ್ದವರಿಗೆ ಅಂಕೋಲಾದಲ್ಲಿ ಖಾಸಗಿ ಕ್ಲಿನಿಕ್ ದಲ್ಲಿ ಉಪಚಾರ ಕೊಡಿಸಿದ್ದು, ದಿನಾಂಕ: 06-01-2022 ರಂದು ಎಂದಿನಂತೆ ಕಾರವಾರಕ್ಕೆ ಕರ್ತವ್ಯಕ್ಕೆ ಹೋಗಿದ್ದರು. ಸಾಯಂಕಾಲ ಸುಮಾರು 17-10 ಘಂಟೆಗೆ ಕರ್ತವ್ಯದಲ್ಲಿ ಇರುವಾಗ ಒಮ್ಮೇಲೆ ಕುಸಿದು ಬಿದ್ದು ರಕ್ತ ನಮೂನೆಯ ವಾಂತಿ ಹಾಗೂ ಬೇಧಿ ಮತ್ತು ಮೂತ್ರ ವಿಸರ್ಜನೆ ಮಾಡಿಕೊಂಡವರಿಗೆ ಮಹಿಳಾ ಕಾಲೇಜ್ ಪ್ರಾಂಶುಪಾಲರು ಚಿಕಿತ್ಸೆಯ ಕುರಿತು ಖಾಸಗಿ ಆಂಬ್ಯುಲೆನ್ಸ್ ದಲ್ಲಿ ಕಾರವಾರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಪಡಿಸಿದ್ದು, ತನ್ನ ಗಂಡ ಶ್ರೀ ಕೃಷ್ಣಮೂರ್ತಿ ತಂದೆ ದೇವಪ್ಪ ನಾಯ್ಕ ಇವರಿಗೆ ಪರೀಕ್ಷಿಸಿದ ವೈದ್ಯರು ಆಗಲೇ ಮೃತಪಟ್ಟಿರುವ ಬಗೆ ತಿಳಿಸಿರುತ್ತಾರೆ. ತನ್ನ ಗಂಡನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದು, ಇದರ ಹೊರತು ಅವರ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕಲಾವತಿ ಕೋಂ. ಕೃಷ್ಣಮೂರ್ತಿ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಗೃಹಿಣಿ, ಸಾ|| ಅರುಣಾ ಹೌಸ್, ಕಂತ್ರಿ ರಸ್ತೆ, ಜೋಗಳಸೆ, ತಾ: ಅಂಕೋಲಾ ರವರು ದಿನಾಂಕ: 06-01-2022 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೇಶವ ತಂದೆ ವೆಂಕಟಪ್ಪ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೇರಂಕಿ, ಕೊಂಡದಕುಳಿ, ತಾ: ಹೊನ್ನಾವರ. ಪಿರ್ಯಾದಿಯ ತಂದೆಯಾದ ಈತನು ದಿನಾಂಕ: 06-01-2022 ರಂದು 17-30 ಗಂಟೆಯ ಸುಮಾರಿಗೆ ಬೇರಂಕಿಯ ಕೊಂಡದಕುಳಿಯಲ್ಲಿರುವ ತಮ್ಮ ತೋಟದ ನೆಲಬಾವಿಯ ಮೇಲ್ಬದಿಗೆ ಅಳವಡಿಸಿದ ನೀರಿನ ಪಂಪನ್ನು ಸರಿಪಡಿಸುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ 12 ಫೂಟ್ ಆಳದ ನೀರು ಇದ್ದ ನೆಲಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಯಂತ ತಂದೆ ನಾರಾಯಣ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಪೋಸ್ಟ್ ಆಡುಕುಳ, ನೀಲಗಿರಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 06-01-2022 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 09-01-2022 02:11 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080