ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 184/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಪ್ರತಿಮಾ ತಂದೆ ಸತ್ಯನಾರಾಯಣ ನಾಯ್ಕ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಗುಡ್ಡಿನಕಟ್ಟು, ಕಡತೋಕಾ, ತಾ: ಹೊನ್ನಾವರ. ಇವಳು ಪಿರ್ಯಾದಿಯ ಮಗಳಾಗಿದ್ದು, ದಿನಾಂಕ: 06-07-2021 ರಂದು ಬೆಳಿಗ್ಗೆ ಪಿರ್ಯಾದಿಯವರು ಕೂಲಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ 13-00 ಗಂಟೆಗೆ ಮರಳಿ ಮನೆಗೆ ಬಂದು ನೋಡಿದಾಗ ತನ್ನ ಮಗಳಾದ ಪ್ರತಿಮಾ ಇವಳು ಮನೆಯಲ್ಲಿ ಇಲ್ಲದಿರುವುದನ್ನು ನೋಡಿ ಅವಳ ಸ್ನೇಹಿತೆಯಾದ ಪವಿತ್ರಾ ರಾಮಚಂದ್ರ ನಾಯ್ಕ ಇವಳಿಗೆ ವಿಚಾರಿಸಿದಾಗ ಪ್ರತಿಮಾ ಇವಳು ಮಧ್ಯಾಹ್ನ 13-00 ಗಂಟೆಯ ಸುಮಾರಿಗೆ ತಾನು ಹೊನ್ನಾವರಕ್ಕೆ ಹೋಗುತ್ತೇನೆ ಅಂತಾ ಹೇಳಿದ್ದ ಬಗ್ಗೆ ತಿಳಿಸಿರುತ್ತಾಳೆ. ತನ್ನ ಮಗಳು ಕಾಣೆಯಾದ ಬಗ್ಗೆ ತಮ್ಮ ಸಂಬಂಧಿಕರು ಹಾಗೂ ಪರಿಚಯದವರಿಗೆ ವಿಚಾರಿಸಿದಾಗ ಹಾಗೂ ತಮ್ಮ ಮನೆಯ ಸುತ್ತಮುತ್ತ ಕೇರಿಯಲ್ಲೆಲ್ಲಾ ಹುಡುಕಾಡಿದರೂ ಪತ್ತೆಯಾಗಿದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ನಾಗರತ್ನಾ ಕೋಂ. ಸತ್ಯನಾರಾಯಣ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಗುಡ್ಡಿನಕಟ್ಟು, ಕಡತೋಕಾ, ತಾ: ಹೊನ್ನಾವರ ರವರು ದಿನಾಂಕ: 06-07-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 549/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಮ್ಮದ್ ಝುಹೇರ್ ತಂದೆ ಮಹಮ್ಮದ್ ಝಾಹೀದ್ ಹಸನ್, ಪ್ರಾಯ-22 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಹಡವಿನಕೊಣೆ, ಶಿರೂರು, ತಾ: ಬೈಂದೂರ, ಜಿ: ಉಡುಪಿ, 2]. ಅಪ್ನಾನ್ ಅಹ್ಮದ್ ತಂದೆ ಸಯ್ಯದ್ ಅಹ್ಮದ ಮಾಮ್ಡು, ಪ್ರಾಯ-19 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಗೌಸಿಯಾ ಮೊಹಲ್ಲಾ, ಹಡವಿನಕೊಣೆ, ರೇಲ್ವೆಗೇಟ್ ಮಾರ್ಕೆಟ್ ರೋಡ್, ಶಿರೂರು, ತಾ: ಬೈಂದೂರ, ಜಿ: ಉಡುಪಿ. ಈ ನಮೂದಿತ ಆರೋಪಿತರು ದಿನಾಂಕ: 06-07-2021 ರಂದು ಬೆಳಿಗ್ಗೆ 10-10 ಗಂಟೆಗೆ ಬೈಲೂರು ಗ್ರಾಮದ ಎಡಬಡ್ರು ರಸ್ತೆಯ ರೈಲ್ವೆ ಬ್ರಿಡ್ಜ್ ಹತ್ತಿರದಲ್ಲಿ ಅಂದಾಜು 8,000/- ರೂಪಾಯಿ ಮೌಲ್ಯದ 518 ಗ್ರಾಂ. ತೂಕದ ಗಾಂಜಾ ಮಾದಕ ಪದಾರ್ಥವನ್ನು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ತಮ್ಮ ತಾಬಾ ಇಟ್ಟುಕೊಂಡು ಯಾರಿಗೋ ಮಾರಾಟ ಮಾಡಲು ಕಾಯುತ್ತಾ ಗಾಂಜಾ ಮಾದಕ ಪದಾರ್ಥಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 06-07-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಹರೀಶ ತಂದೆ ಕೇಶವ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಣ್ಣಕೇರಿ, ಪೋ: ಇಸಳೂರು, ತಾ: ಶಿರಸಿ, 2]. ಉದಯ ತಂದೆ ಶೆಟ್ಟಿ, ಸಾ|| ಚಿಪಗಿ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 06-07-2021 ರಂದು 11-45 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಸ್ಥಳದಲ್ಲಿ ನಿಂತು ತಮ್ಮ ಲಾಭಕ್ಕಾಗಿ ಬರ-ಹೋಗುವ ಜನರಿಂದ ಅಂಕೆ-ಸಂಖ್ಯೆಗಳ ಮೇಲೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗಾರಾಟ ನಡೆಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸುರೇಶ ಎಚ್. ಯಳ್ಳೂರ, ಪೊಲೀಸ್ ನಿರೀಕ್ಷಕರು, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 06-07-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಮಂಜುನಾಥ ತಂದೆ ಸಂಗಯ್ಯ ದೇವನಾಳಮಠ, ಪ್ರಾಯ-37 ವರ್ಷ, ವೃತ್ತಿ-ಚಾಲಕ, ಸಾ|| ನಾಗೇಶ ಶೆಟ್ಟಿ ಕಾಲೋನಿ, ಗಣೇಶ ನಗರ, ತಾ: ಶಿರಸಿ. ಪಿರ್ಯಾದಿಯವರ ಮಗನಾದ ಈತನು ಸೌದಿ ದೇಶದಲ್ಲಿ 2 ವರ್ಷ ಕೆಲಸ ಮಾಡಿಕೊಂಡಿದ್ದು, ಕಳೆದ ಸೆಪ್ಟೆಂಬರ್-2020 ರಲ್ಲಿ ವಾಪಸ್ ಮನೆಗೆ ಬಂದವನು, ಇಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದನು ಮತ್ತು ಕೊರೋನಾ ಲಾಕಡೌನ್ ನಿಮಿತ್ತ ಡ್ರೈವರ್ ಕೆಲಸ ಇಲ್ಲದೇ ಮನೆಯಲ್ಲಿಯೇ ಇದ್ದವನಿಗೆ ಪಿರ್ಯಾದಿಯವರು ‘ಬೇರೆ ಏನಾದರೂ ಕೆಲಸ ಮಾಡು. ಹೆಂಡತಿ ಮಕ್ಕಳಿದ್ದು ಅವರನ್ನು ನೋಡಿಕೊ’ ಅಂತಾ ಬುದ್ಧಿವಾದ ಹೇಳಿದ್ದು ಇರುತ್ತದೆ. ದಿನಾಂಕ: 03-07-2021 ರಂದು ಸಂಜೆ ಪಿರ್ಯಾದಿಗೆ ಸ್ಕೂಟಿ ನಂ: ಕೆ.ಎ-31/8086 ನೇದರ ಮೇಲೆ ಮನೆಯಿಂದ ಕರೆದುಕೊಂಡು 18-15 ಗಂಟೆಯ ಸುಮಾರಿಗೆ ಹೊಸ ಬಸ್ ನಿಲ್ದಾಣದ ಹತ್ತಿರ ಪಿರ್ಯಾದಿಯನ್ನು ಅವರ ತಂಗಿಯ ಮನೆಯ ಹತ್ತಿರ ಇಳಿಸಿ, ತಂಗಿ ಕೆಲಸ ಮಾಡುವ ಪ್ರಿಂಟಿಂಗ್ ಪ್ರೆಸ್ ಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು. ಅವರ ಪ್ರಿಂಟಿಂಗ್ ಪ್ರೆಸ್ ಗೆ ಹೋಗದೇ ಸಂಬಂಧಿಕರ ಮನೆಗೆ ಹೋಗದೇ ಈವರೆಗೆ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ತನ್ನ ಮಗ ತೆಗೆದುಕೊಂಡು ಹೋಗಿದ್ದ ಸ್ಕೂಟಿ ನಂ: ಕೆ.ಎ-31/8086 ನೇದು ದಿನಾಂಕ: 04-07-2021 ರಂದು ರಾತ್ರಿಯ ವೇಳೆ ಶಿರಸಿ ಹೆಡ್ ಪೋಸ್ಟ್ ಕಛೇರಿಯ ಹತ್ತಿರ ವಾಹನ ನಿಲ್ಲಿಸಿಟ್ಟಿರುವುದು ಸಿಕ್ಕಿದ್ದು, ತನ್ನ ಮಗ ಸಿಕ್ಕಿರುವುದಿಲ್ಲ. ಆತನ ಬಗ್ಗೆ ಸಂಬಂಧಿಕರಲ್ಲಿ ಮತ್ತು ಆತನ ಸ್ನೇಹಿತರಲ್ಲಿ ವಿಚಾರಿಸಿ, ಆತನ ಪತ್ತೆಗೆ ಪ್ರಯತ್ನಿಸಿ ಪತ್ತೆಯಾಗದೇ ಇದ್ದು, ಕಾಣೆಯಾದ ತನ್ನ ಮಗನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕಮಲಾ ಕೋಂ. ಸಂಗಯ್ಯ ದೇವನಾಳಮಠ, ಪ್ರಾಯ-51 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನಾಗೇಶ ಶೆಟ್ಟಿ ಕಾಲೋನಿ, ಗಣೇಶ ನಗರ, ತಾ: ಶಿರಸಿ ರವರು ದಿನಾಂಕ: 06-07-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 122/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಾರ್ತಿಕ ತಂದೆ ಶಿವಾಜಿ ಗುಂಡೂಪಕರ, ಪ್ರಾಯ-24 ವರ್ಷ, ಸಾ|| ಮಂಗಳವಾಡ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-4133 ನೇದರ ಸವಾರ). ಈತನು ದಿನಾಂಕ: 04-07-2021 ರಂದು 17-30 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-4133 ನೇದನ್ನು ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಹತ್ತಿರ ಹವಗಿ-ಮಂಗಳವಾಡ ಡಾಂಬರ್ ರಸ್ತೆಯಲ್ಲಿ ಮಂಗಳವಾಡ ಕಡೆಯಿಂದ ಹವಗಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದವನು, ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ, ಡಾಂಬರ್ ರಸ್ತೆಯ ಬದಿಗೆ ನಿಂತಿದ್ದ ಸಾತಪ್ಪ ಮೇತ್ರಿ ಮತ್ತು ಮಾರುತಿ ಬೇಡರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ಜನರಿಗೆ ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಲ್ಲಪ್ಪ ತಂದೆ ಸಾತಪ್ಪ ಮೇತ್ರಿ, ಪ್ರಾಯ-45 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಹವಗಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 06-07-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಜಾಫರ್ ತಂದೆ ಅಬ್ದುಲ್ ಜಬ್ಬಾರ್ ಸಾಬ್, ಪ್ರಾಯ-27 ವರ್ಷ, ವೃತ್ತಿ-ಅಡಿಕೆ ವ್ಯಾಪಾರ, ಸಾ|| ಬೇಡ್ಕಣಿ, ತಾ: ಸಿದ್ದಾಪುರ, 2]. ಸುಬ್ರಮಣ್ಯ @ ಸುಬ್ಬು ತಂದೆ ಹುಚ್ಚರಾಯ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೇಡ್ಕಣಿ, ತಾ: ಸಿದ್ದಾಪುರ, 3]. ಜಯರಾಮ ನಾಯ್ಕ, ಸಾ|| ಬೇಡ್ಕಣಿ, ತಾ: ಸಿದ್ದಾಪುರ, 4]. ಸೋಮಶೇಖರ ನಾಯ್ಕ, ಸಾ|| ತ್ಯಾರ್ಸಿ, ತಾ: ಸಿದ್ದಾಪುರ, 5]. ಈಶ್ವರ, ಸಾ|| ಕಟ್ಟೆಕೈ, ತಾ: ಸಿದ್ದಾಪುರ, 6]. ಅಣ್ಣಪ್ಪ ಮಡಿವಾಳ, ಸಾ|| ಬೇಡ್ಕಣಿ, ಪುಟ್ಟೆನಹಕ್ಲು, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 06-07-2021 ರಂದು 16-00 ಗಂಟೆಗೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಹೊಸಳ್ಳಿ ಭಟ್ಟರ ಮನೆಯ ಹತ್ತಿರದ ಅಕೇಶಿಯಾ ಪ್ಲಾಂಟೇಶನದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರ ಪೈಕಿ ಆರೋಪಿ 1 ಮತ್ತು 2 ನೇಯವರು 1). ನಗದು ಹಣ 5,600/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ. ಇವುಗಳೊಂದಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ರಿಂದ 6 ನೇಯವರು ದಾಳಿಯ ಕಾಲಕ್ಕೆ ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಮಾರ ಕೆ, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 06-07-2021 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 06-07-2021 ರಂದು 08-30 ಗಂಟೆಗೆ ತಾನು ಚಲಾಯಿಸಿಕೊಂಡು ಬಂದ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹುಡೇಲಕೊಪ್ಪ ಕನ್ನಡ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ಮಲ್ಲೇಶಪ್ಪ ತಂದೆ ಗುಡ್ಡಪ್ಪ ಬಾರ್ಕಿ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿಂಗಾಪೂರ, ಪೋ: ಬೆಳಗಲಪೇಟ, ತಾ: ಹಾನಗಲ್, ಜಿ: ಹಾವೇರಿ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ಕೈಗಳಿಗೆ ತೆರಚಿದ ಗಾಯ ಪಡಿಸಿದ್ದಲ್ಲದೇ, ಸೊಂಟದ ಎಡಭಾಗ ಮಾರಣಾಂತಿಕ ರಕ್ತಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಉಂಟು ಪಡಿಸಿ, ಅಪಘಾತದ ವಿಷಯವನ್ನು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸದೇ, ಗಾಯಾಳುವಿಗೆ ಆಸ್ಪತ್ರೆಗೆ ದಾಖಲಿಸಿದೇ ವಾಹನದ ಸಮೇತ ಸ್ಥಳದಿಂದ ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಸಹದೇವಪ್ಪ ತಂದೆ ಗುಡ್ಡಪ್ಪ ಬಾರ್ಕಿ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿಂಗಾಪೂರ, ಪೋ: ಬೆಳಗಲಪೇಟ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 06-07-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು ಅಬ್ದುಲ್ ಬಾಷಾ ತಂದೆ ಯುಸೂಬ್ ಸಾಬ್, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿವಪುರ, ತಾ: ಹಾನಗಲ್, ಜಿ: ಹಾವೇರಿ. ಈತನು ದಿನಾಂಕ: 06-07-2021 ರಂದು ಬೆಳಿಗ್ಗೆ 14-00 ಗಂಟೆಗೆ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ 41,000/- ರೂಪಾಯಿ ಮೌಲ್ಯದ 1047 ಗ್ರಾಂ. ತೂಕದ ಗಾಂಜಾ ಮಾದಕ ವಸ್ತುಗಳನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಮೋಟಾರ್ ಸೈಕಲ್ ನಂ: ಕೆ.ಎ-31/ಆರ್-5363 ನೇದರ ಮೇಲಾಗಿ ಹಾನಗಲ್ ಕಡೆಯಿಂದ ದಾಸನಕೊಪ್ಪ ಮಾರ್ಗವಾಗಿ ಗೋವಾ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಮಚಂದ್ರ ನಾಯಕ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 06-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಉದಯ ತಂದೆ ದಾಮೋದರ ತಾಂಡೇಲ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ ಸಾ|| ಟೊಂಕಾ-1, ಕಾಸರಕೋಡ, ತಾ: ಹೊನ್ನಾವರ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 06-07-2021 ರಂದು ಮೀನುಗಾರಿಕೆಗೆ ಎಂದು ಅರಬ್ಬೀ ಸಮುದ್ರಕ್ಕೆ ಮೋಟಾರಿಕೃತ ನಾಡದೋಣಿಯಲ್ಲಿ ವಿಜಯ ತಂದೆ ಕ್ರಾಸ್ತ ದಾಸ ಫರ್ನಾಂಡಿಸ್, ಶಂಕರ ತಂದೆ ಮಾದೇವ ತಾಂಡೇಲ ಹಾಗೂ ಕಾಮೇಶ್ವರ ತಂದೆ ದೇವಯ್ಯ ತಾಂಡೇಲ, ಇವರೊಂದಿಗೆ ಹೋಗಿದ್ದು, ಬೆಳಿಗ್ಗೆ 05-30 ಗಂಟೆಯ ಸುಮಾರಿಗೆ ನನ್ನ ತಮ್ಮ ಹೋಗುತ್ತಿದ್ದ ಮೋಟಾರಿಕೃತ ನಾಡದೋಣಿಯು ಸಮುದ್ರದ ಅಲೆಗಳಿಗೆ ಸಿಲುಕಿ ಮುಗುಚಿ ಬಿದ್ದು ನೀರಿನಲ್ಲಿ ಮುಳುಗಿದ್ದು, ವಿಜಯ, ಶಂಕರ, ಕಾಮೇಶ್ವರ ಇವರು ಈಜಿ ದಡ ಸೇರಿದ್ದು, ನನ್ನ ತಮ್ಮ ಉದಯ ದಾಮೋದರ ತಾಂಡೇಲ, ಈತನು ಕಾಣೆಯಾದ ಬಗ್ಗೆ ವಿಷಯ ತಿಳಿದು, ಹುಡುಕಾಡಿದರೂ ಪತ್ತೆಯಾಗಿದ್ದು ಇರುವುದಿಲ್ಲ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 182/2021, ಕಲಂ: ಮನುಷ್ಯ ಕಾಣೆ ನೇದರಂತೆ ಪ್ರಕರಣ ದಾಖಲಿಸಿದ್ದು, ದಿನಾಂಕ: 06-07-2021 ರಂದು ಬೆಳಿಗ್ಗೆ 09-00 ಗಂಟೆಗೆ ಕಾಣೆಯಾದ ನನ್ನ ತಮ್ಮ ಉದಯ ತಂದೆ ದಾಮೋದರ ತಾಂಡೇಲ, ಈತನ ಮೃತದೇಹವು ಹೊನ್ನಾವರ ತಾಲೂಕಿನ ಅಪ್ಸರಕೊಂಡದ ಹತ್ತಿರ ಕಾಸರಕೋಡ ಸಮುದ್ರದ ದಂಡೆಯಲ್ಲಿ ಇರುವ ಬಗ್ಗೆ ರಮೇಶ ಪವಾರ್, ರಾಜೇಶ ಎಮ್ ತಾಂಡೇಲ ಇವರು ಕರೆ ಮಾಡಿ ತಿಳಿಸಿದಂತೆ, ತಾನು ಮತ್ತು ತನ್ನ ಮನೆಯವರು ಸಂಬಂಧಿಕರು ಅಲ್ಲಿಗೆ ಹೋಗಿ ನೋಡಲಾಗಿ ಮೃತದೇಹವು ತನ್ನ ತಮ್ಮ ಉದಯ ದಾಮೋದರ ತಾಂಡೇಲ ಈತನದೇ ಇರುತ್ತದೆ. ಕಾರಣ ಕಾಣೆಯಾದ ನನ್ನ ತಮ್ಮ ಪತ್ತೆ ಆಗಿದ್ದು, ಆತನ ಮೃತದೇಹದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ದಾಮೋದರ ತಾಂಡೇಲ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಟೊಂಕಾ-1, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 06-07-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೃಷ್ಣ ತಂದೆ ಜಟ್ಟಪ್ಪ ಹರಿಕಂತ್ರ. ಪ್ರಾಯ-45 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸರ್ವೋದಯ ನಗರ, ಕೋಡಿಬಾಗ, ಕಾರವಾರ, ಹಾಲಿ ಸಾ|| ಗಾಳಿಗಿಡ, ಬೈಲೂರು, ತಾ: ಭಟ್ಕಳ. ಪಿರ್ಯಾದಿಯ ಬಾವನಾದ ಈತನು ಹಾಗೂ ಪಿರ್ಯಾದಿಯವರು ಸೇರಿಕೊಂಡು ದಿನಾಂಕ: 06-07-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಮನೆಯ ಹತ್ತಿರದಲ್ಲಿರುವ ಗಾಳಿಗಿಡ ಬೈಲೂರು ಅರಬ್ಬಿ ಸಮುದ್ರದ ತೀರದಲ್ಲಿ ಮಾರನ ಬಲೆ ಬಿಡುತ್ತಿರುವಾಗ ಮಧ್ಯಾಹ್ನ 01-15 ಗಂಟೆಯ ಸುಮಾರಿಗೆ ಪಿರ್ಯಾದಿಯ ಬಾವನವರಿಗೆ ಅರಬ್ಬಿ ಸಮುದ್ರದ ಅಲೆಯು ಬಡಿದು ಕಾಲು ತಪ್ಪಿ ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತದೇಹವು ಬೈಲೂರು ಗಾಳಿಗಿಡದ ಅರಬ್ಬಿ ಸಮುದ್ರದ ದಂಡೆಯ ಮೇಲೆ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸಹದೇವ ತಂದೆ ಕುಪ್ಪ ಹರಿಕಾಂತ, ಪ್ರಾಯ-29 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗಾಳಿಗಿಡ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 06-07-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 09-07-2021 10:27 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080