ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-06-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 160/2021, ಕಲಂ: 269, 270 ಸಹಿತ 34 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣಪತಿ ತಂದೆ ಮಾಸ್ತಿ ಗೌಡ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿಕಾರ ಕರ್ಕಿ, ತಾ: ಹೊನ್ನಾವರ, 2]. ಮಂಜುನಾಥ ತಂದೆ ತಿಮ್ಮು ಗೌಡ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿಕಾರ ಕರ್ಕಿ, ತಾ: ಹೊನ್ನಾವರ, 3]. ಕೃಷ್ಣಾ ತಂದೆ ಜಟ್ಟು ಗೌಡ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಂದ್ರಾಣಿ, ತಾ: ಹೊನ್ನಾವರ, 4]. ತುಳುಸು ತಂದೆ ಶಂಕರ ಗೌಡ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದುಗ್ಗುರು, ತಾ: ಹೊನ್ನಾವರ, 5]. ರವಿ ತಂದೆ ಪುರುಷೊತ್ತಮ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದುರ್ಗಾಕೇರಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಕೊರೋನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಘನ ಸರ್ಕಾರ ಲಾಕಡೌನ್ ಆದೇಶ ಮಾಡಿದ್ದರೂ ಸಹ ಮುಂಜಾಗೃತಾ ಕ್ರಮವಾಗಿ ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಘನ ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೇ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ, ನಿರ್ಲಕ್ಷ್ಯತನದಿಂದ ದಿನಾಂಕ: 06-06-2021 ರಂದು 16-45 ಗಂಟೆಗೆ ಹೊನ್ನಾವರ ತಾಲೂಕಿನ ದುಗ್ಗುರು ಬೆಟ್ಟದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಕೋಳಿಗಳ ಮೇಲೆ ಹಣವನ್ನು ಪಂಥ ಕಟ್ಟಿ, ಕೋಳಿ ಅಂಕ ಜೂಜಾಟ ಆಡುತ್ತಿದ್ದಾಗ, ದಾಳಿಯ ವೇಳೆ 1). ನಗದು ಹಣ ಒಟ್ಟು 1,700/- ರೂಪಾಯಿ, 2). ಕೋಳಿ ಹುಂಜಗಳು-03, ಅ||ಕಿ|| 450/- ರೂಪಾಯಿ ನೇದವುಗಳೊಂದಿಗೆ ಆರೋಪಿ 1 ರಿಂದ 4 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ನೇಯವನು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 06-06-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ವಿಷ್ಣು ನಾಯ್ಕ, ಪ್ರಾಯ-35 ವರ್ಷ, ಸಾ|| ಬೈಲೂರು, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-8657 ನೇದರ ಸವಾರ). ಈತನು ದಿನಾಂಕ: 05-06-2021 ರಂದು 11-30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಕಡೆಯಿಂದ ಖಾಜಿ ಮನೆಕೇರಿ ಕಡೆಗೆ ಹೋಗಲು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-8657 ನೇದನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ ಖಾಜಿ ಮನೆ ರಸ್ತೆಯ ತಿರುವಿನಲ್ಲಿ ತನ್ನ ಮೋಟಾರ್ ಸೈಕಲನ್ನು ನಿಯಂತ್ರಿಸಲಾಗದೇ ಖಾಜಿ ಮನೆ ಕಡೆಯಿಂದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ರಾಜು ತಂದೆ ವಿಷ್ಣು ನಾಯ್ಕ, ಇವರಿಗೆ ಎದುರಿನಿಂದ ಡಿಕ್ಕಿ ಹೊಡೆದು ಗಟಾರದಲ್ಲಿ ಕೆಡವಿ, ಬಲಗಾಲಿಗೆ ರಕ್ತಗಾಯ, ಒಳನೋವು ಹಾಗೂ ಮೈ ಕೈಗೆ ಅಲ್ಲಿಲ್ಲಿ ತೆರಚಿದ ನಮೂನೆಯ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಸಣ್ಣಪುಟ್ಟ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-36 ವರ್ಷ,  ವೃತ್ತಿ-ಚಾಲಕ, ಸಾ|| ಖಾಜಿ ಮನೆ, ತಾಳಮಕ್ಕಿ, ತಾ: ಹೊನ್ನಾವರ ರವರು ದಿನಾಂಕ: 06-06-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಫತ್ಅಲಿ ತಂದೆ ನೂರಮಹಮ್ಮದ್, ಸಾ|| ಅಜ್ಮೇರ, ರಾಜಸ್ಥಾನ (ಟ್ರೇಲರ್ ನಂ: ಆರ್.ಜೆ-01/ಜಿ.ಎ-7158 ನೇದರ ಚಾಲಕ). ಈತನು ದಿನಾಂಕ: 31-05-2021 ರಂದು 22-00 ಗಂಟೆಗೆ ಇಡಗುಂಜಿ ಕ್ರಾಸ್ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಟ್ರೇಲರ್ ನಂ: ಆರ್.ಜೆ-01/ಜಿ.ಎ-7158 ನೇದನ್ನು ಮಂಕಿ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗಿ ಹಿಂದೆ ಬರುತ್ತಿದ್ದ ಲಾರಿಗೆ ಸೈಡ್ ಕೊಡಲು ವಾಹನವನ್ನು ರಸ್ತೆ ಬದಿಗೆ ತೆಗೆದುಕೊಳ್ಳಲು ಹೋಗಿ, ರಸ್ತೆ ಬದಿಯಲ್ಲಿದ್ದ ಮೋರಿ ಕಟ್ಟೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮುಂದೆ ಹೋಗಿ ವಾಹನವನ್ನು ಗಟಾರದಲ್ಲಿ ಪಲ್ಟಿ ಪಡಿಸಿ, ಟ್ರೇಲರಿನ ಮುಂಭಾಗದಲ್ಲಿ ಜಖಂಗೊಳಿಸಿ, ಟಾಯರ್ ಒಡೆದಿದ್ದಲ್ಲದೇ, ಟ್ರೇಲರ್ ನಲ್ಲಿ ಲೋಡ್ ಮಾಡಿದ 1 ಟಾಯ್ಲೆಟ್ ಬಂಕ್ ಮತ್ತು 1 ಕ್ಯಾಂಟೀನ್ ಕ್ಯಾಬಿನ್ ಪೂರ್ಣ ಜಖಂಗೊಳಿಸಿ, ಇನ್ನುಳಿದ 3 ಟಾಯ್ಲೆಟ್ ಕ್ಯಾಬಿನಿಗೆ ಸಣ್ಣ ಪುಟ್ಟ ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ಧನ್ಯಕುಮಾರ ದೊಡ್ಮನಿ, ಪ್ರಾಯ-25 ವರ್ಷ, ವೃತ್ತಿ-ಎ.ಟಿ.ಎ ಟ್ರಾನ್ಸಪೋರ್ಟ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್, ಸಾ|| ಮನೆ ನಂ. 3/611ಡಿ, ನೆಹರು ನಗರ, ಗೋಕುಲ ರೋಡ್, ಹುಬ್ಬಳ್ಳಿ ರವರು ದಿನಾಂಕ: 06-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವೀಂದ್ರ ತಂದೆ ವೆಂಕಟೇಶ ವೈದ್ಯ, ಪ್ರಾಯ-59 ವರ್ಷ, ವೃತ್ತಿ-ಶಿಕ್ಷಕ, ಸಾ|| ಶಾರದಾಹೊಳೆ, ಬೆಂಗ್ರೆ-1, ಮುರ್ಡೇಶ್ವರ, ತಾ: ಭಟ್ಕಳ (ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-4507 ನೇದರ ಸವಾರ). ಈತನು ದಿನಾಂಕ: 05-06-2021 ರಂದು ತನ್ನ ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-4507 ನೇದನ್ನು ಭಟ್ಕಳಕ್ಕೆ ಬರಲು ನೂಜ್ ರಸ್ತೆಯಲ್ಲಿ ಅತೀವೇಗವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ರಾತ್ರಿ ಸುಮಾರು 07-30 ಗಂಟೆಯಿಂದ ರಾತ್ರಿ 11-00 ಗಂಟೆಯ ನಡುವಿನ ಅವಧಿಯಲ್ಲಿ ಹೆರಬುಡಕಿ ಹತ್ತಿರ ಮಳೆ ಗಾಳಿಯಿಂದ ರಸ್ತೆಯ ಮೇಲೆ ಮರದ ಸಣ್ಣ ಸಣ್ಣ ತುಂಡುಗಳು ಬಿದ್ದ ಪರಿಣಾಮ ಆರೋಪಿತನಿಗೆ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಮೋಟಾರ್ ಸೈಕಲ್ ಸಮೇತ ಬಿದ್ದು, ಈ ಅಪಘಾತದಲ್ಲಿ ಅವನ ತಲೆಯ ಹಣೆಯ ಭಾಗಕ್ಕೆ ಮತ್ತು ಕೈಗೆ ತೀವ್ರ ರಕ್ತಗಾಯ ಪಡಿಸಿಕೊಂಡು ತನ್ನ ಮರಣಕ್ಕೆ ತಾನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ದರ್ಶನ ತಂದೆ ರವೀಂದ್ರ ವೈದ್ಯ, ಪ್ರಾಯ-31 ವರ್ಷ, ವೃತ್ತಿ-ವ್ಯಾಪಾರ, ಸಾ|| ಶಾರದಾಹೊಳೆ, ಬೆಂಗ್ರೆ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 06-06-2021 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-06-2021 ರಂದು 23-30 ಗಂಟೆಯಿಂದ ದಿನಾಂಕ: 06-06-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಕಾಮತ್ ಕ್ರಾಸಿನಲ್ಲಿ ಇರುವ ಶ್ರೀ ಆರ್. ಕೃಷ್ಣ ಮೆಡಿಕಲ್ & ಜನರಲ್ ಸ್ಟೋರ್ ನ ಮುಂದುಗಡೆ ಶೆಟರ್ಸ್ ಗೆ ಹಾಕಿದ ಬೀಗವನ್ನು ಯಾವುದೋ ವಸ್ತುವಿನಿಂದ ಮೀಟಿ ಮುರಿದು ಅಂಗಡಿಯ ಒಳಗೆ ಇದ್ದ LENOVO ಕಂಪನಿಯ ಲ್ಯಾಪಟಾಪ್-01, ಅ||ಕಿ|| 10,000/- ರೂಪಾಯಿ ಹಾಗೂ ಅಂಗಡಿಯ ಡ್ರಾವರನಲ್ಲಿ ಇಟ್ಟಿದ್ದ ನಗದು ಹಣ 20,000/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಭಿಜೀತ ತಂದೆ ರಮೇಶ ಗಾಂವಕರ, ಪ್ರಾಯ-24 ವರ್ಷ, ವೃತ್ತಿ-ವ್ಯಾಪಾರ, ಸಾ|| ಕಸದಗುಂಡಿ, ಕರಿಗುಂಡಿ ರೋಡ್, ತಾ: ಶಿರಸಿ ರವರು ದಿನಾಂಕ: 06-06-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 328 ಸಹಿತ 34 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ಅರುಣಾ ರಂಜಿತ ಕಂಜರಭಾಟ, 2]. ಶ್ರೀಮತಿ ಬೇಬಿ ಜುಗುಣು ಕಂಜರಬಾಟ, ಸಾ|| (ಇಬ್ಬರೂ) ಗಾಂಧಿನಗರ, ದಾಂಡೇಲಿ. ಈ ನಮೂದಿತ ಆರೋಪಿತರು ದಿನಾಂಕ: 06-06-2021 ರಂದು 11-00 ಗಂಟೆಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂವಠಾಣಾ ಗ್ರಾಮದ ಆಟೋರಿಕ್ಷಾ ನಿಲ್ದಾಣದ ಎದುರು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತುಕೊಂಡು ಕಳ್ಳಭಟ್ಟಿ ಸರಾಯಿ ಸೇವನೆ ಮಾನವನ ದೇಹಕ್ಕೆ ಅಪಾಯಕಾರಿ ಅಂತಾ ಗೊತ್ತಿದ್ದರೂ ಸಹ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವಾಗ ಪಿರ್ಯಾದಿಯು ಸಿಬ್ಬಂದಿಗಳು ಹಾಗೂ ಪಂಚರ ಸಮಕ್ಷಮ ಸೇರಿ ದಾಳಿ ಮಾಡಿದಾಗ ಆರೋಪಿತರು ಸ್ಥಳದಿಂದ ಓಡಿ ಪರಾರಿಯಾಗಿದ್ದು, ಸುಮಾರು 09 ಲೀಟರ್ ಆಗುವಷ್ಟು ಕಳ್ಳಭಟ್ಟಿ ಸರಾಯಿ ಹಸಿರು ಚೀಲದ ಸಹಿತ ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ, ಪಿ.ಎಸ್.ಐ (ಕಾ&ಸು), ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 06-06-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೃಷ್ಣ ತಂದೆ ವೆಂಕಟೇಶ ಮರಾಠಿ, ಪ್ರಾಯ-34 ವರ್ಷ, ವೃತ್ತಿ-ರೈತಾಬಿ ಮತ್ತು ಕೂಲಿ ಕೆಲಸ, ಸಾ|| ಮಾಬಗಿ, ಅಚವೆ, ತಾ: ಅಂಕೋಲಾ. ಈತನು ಕಳೆದ 2 ವರ್ಷದ ಹಿಂದೆ ಮೃತಪಟ್ಟ ತನ್ನ ಮಗ ಸತ್ತ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಲೂ ಸರಾಯಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿದ್ದವನು, ದಿನಾಂಕ: 05-06-2021 ರಂದು 21-45 ಗಂಟೆಗೆ ತನ್ನ ಮಗ ಸತ್ತ ವಿಷಯದ ಬಗ್ಗೆ ಅಥವಾ ಇನ್ನಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಬೇಸರಗೊಂಡು ಮನೆಯಲ್ಲಿದ್ದ ಕಳೆನಾಶಕ ಔಷಧಿಯನ್ನು ಸೇವಿಸಿದನಿಗೆ ಉಪಚಾರದ ಕುರಿತು ಅಂಕೋಲಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 06-06-2021 ರಂದು 00-45 ಗಂಟೆಗೆ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲ ತಂದೆ ಬಾಬಲ್ಯಾ ಮರಾಠಿ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾಬಗಿ, ಅಚವೆ, ತಾ: ಅಂಕೋಲಾ ರವರು ದಿನಾಂಕ: 06-06-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೃಷ್ಣ ತಂದೆ ರಾಮಾ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳಲೆ, ಪೋ: ಅರಸಾಪುರ, ತಾ: ಶಿರಸಿ. ಪಿರ್ಯಾದಿಯವರ ತಂದೆಯವರಾದ ಈತನು ತನ್ನ ಮಗಳ ಮದುವೆ ಮತ್ತು ಕೃಷಿ ಭೂಮಿ ಅಭಿವೃದ್ಧಿಗಾಗಿ ಕಳೆದ 4-5 ವರ್ಷದ ಹಿಂದೆ ಶಿರಸಿ ತಾಲೂಕಿನ ಭೈರುಂಬೆ ಸೊಸೈಟಿಯಲ್ಲಿ 1 ಲಕ್ಷ ಹಾಗೂ ತೋಳಗೊಡ ಸೊಸೈಟಿಯಲ್ಲಿ 2 ಲಕ್ಷ ಸಾಲ ತೆಗೆದಿದ್ದು, ಅದು ಬಡ್ಡಿ ಸೇರಿ 5 ಲಕ್ಷ ಆಗಿದ್ದು, ಅದನ್ನು ಮರುಪಾವತಿ ಮಾಡಲಾಗದೇ ಅಥವಾ ಇನ್ಯಾವುದೋ ಕಾರಣದಿಂದ ಮನನೊಂದು ದಿನಾಂಕ: 05-06-2021 ರಂದು ಬೆಳಿಗ್ಗೆ 11-00 ಗಂಟೆಗೆ ‘ಯಲ್ಲಾಪುರ ತಾಲೂಕಿನ ಬೆಳಗುಂದ್ಲಿ ಗ್ರಾಮದಲ್ಲಿ ತೋಟ ಕಾಯುವ ಕೆಲಸ ಸಿಕ್ಕರೆ ನೋಡಿ ಬರುತ್ತೇನೆ’ ಅಂತಾ ಮನೆಯಲ್ಲಿ ಹೇಳಿ ತನ್ನ ಮೋಟಾರ್ ಸೈಕಲ್ ಮೇಲೆ ಹೋದವನು, ಯಲ್ಲಾಪುರ ತಾಲೂಕಿನ ಬೆಳಗುಂದ್ಲಿ ಗ್ರಾಮದ ಕೆರೆ ಹತ್ತಿರ ಬಂದು ಮೋಟಾರ್ ಸೈಕಲನ್ನು ರಸ್ತೆ ಪಕ್ಕ ನಿಲ್ಲಿಸಿ, ಬೆಳಗುಂದ್ಲಿ ಕೆರೆಯ ದಡದಲ್ಲಿರುವ ಕೌಲ್ ಎಂಬ ಕಾಡುಜಾತಿಯ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟವನಿಗೆ ದಿನಾಂಕ: 06-06-2021 ರಂದು 00-30 ಗಂಟೆಗೆ ನೋಡಿದ್ದು, ಮೃತನ ಮೈಮೇಲೆ ಗಾಯ ಇರುವುದರಿಂದ ಈತನ ಮರಣದಲ್ಲಿ ಸಂಶಯ ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮನೋಹರ ತಂದೆ ಕೃಷ್ಣ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಬೆಳಲೆ, ಪೋ: ಅರಸಾಪುರ, ತಾ: ಶಿರಸಿ ರವರು ದಿನಾಂಕ: 06-06-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 07-06-2021 06:10 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080