ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-03-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 436, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ರಾಮಾ ಮೊಗೇರ, ಸಾ|| ಪೆಟ್ರೋಲ್ ಪಂಪ್ ಹತ್ತಿರ, ಬೈತಖೊಲ್, ಕಾರವಾರ. ನಮೂದಿತ ಆರೋಪಿತನು ದಿನಾಂಕ: 05-03-2021 ರಂದು ಸಾಯಂಕಾಲ 17-00 ಗಂಟೆಗೆ ಆತನ ಪಕ್ಕದ ಮನೆಯವರಾದ ಪಿರ್ಯಾದಿಯ ಬಳಿ 200/- ರೂಪಾಯಿ ಹಣವನ್ನು ಕೇಳಿದಾಗ ಪಿರ್ಯಾದಿಯವರು ‘ತನ್ನ ಬಳಿ ಹಣ ಇಲ್ಲ’ ಅಂತಾ ತಿಳಿಸಿದ್ದರು. ಆರೋಪಿತನು ಪುನಃ ಅಂದು ರಾತ್ರಿ 22-30 ಗಂಟೆಗೆ ಪಿರ್ಯಾದಿಯವರು ಮನೆಯಲ್ಲಿ ಒಬ್ಬಳೆ ಇರುವಾಗ ಮನೆಯ ಬಳಿ ಬಂದು, ಆರೋಪಿತನು ಪಿರ್ಯಾದಿಗೆ ಹಣ ನೀಡುವಂತೆ ಕೇಳಿದಾಗ ಪಿರ್ಯಾದಿಯು ‘ತನ್ನ ಬಳಿ ಹಣ ಇಲ್ಲ’ ಅಂತಾ ಹೇಳಿದಾಗ, ಆರೋಪಿತನು ಸಿಟ್ಟಿಗೆದ್ದು ಪಿರ್ಯಾದಿಗೆ ‘ಸೂಳೆ, ರಂಡೆ, ನನಗೆ ಹಣ ನೀಡುವುದಿಲ್ಲವಾ?’ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಮಾನಕ್ಕೆ ಕುಂದುಂಟು ಮಾಡುವಂತೆ ಮಾತನಾಡಿದ್ದು, ಆಗ ಪಿರ್ಯಾದಿಯವರು ಆತನಿಗೆ ಹೆದರಿ ಬಾಗಿಲು ತೆರೆಯದೇ ಇದ್ದಾಗ, ಆರೋಪಿತನು ಪಿರ್ಯಾದಿಯ ಮನೆಯ ಬಾಗಿಲನ್ನು ಜೋರಾಗಿ ತುಳಿದು ಮನೆಯ ಬಾಗಿಲಿನ ಬಳಿ ಹಾಕಿದ್ದ ತೆಂಗಿನ ಗರಿಗೆ ಬೆಂಕಿ ಹಚ್ಚಿ ‘ನೀನು ಹಣ ನೀಡದೇ ಹೋದರೆ ಪೂರ್ತಿ ನಿನ್ನ ಮನೆಗೆ ಬೆಂಕಿ ಹಾಕುತ್ತೇನೆ’ ಅಂತ ಹೇಳಿ ಅಲ್ಲಿಂದ ಹೋಗಿದ್ದವನು, ದಿನಾಂಕ: 06-03-2021 ರಂದು ಮಧ್ಯಾಹ್ನ 15-30 ಗಂಟೆಗೆ ಪಿರ್ಯಾದಿಯ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾನಿ ಮಾಡಿರುವ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ರವಿ ಗೌಡ, ಪ್ರಾಯ-38 ವರ್ಷ, ವೃತ್ತಿ-ನಗರ ಸಭೆ ದಿನಗೂಲಿ ಪೌರ ನೌಕರ, ಸಾ|| ಪೆಟ್ರೋಲ್ ಪಂಪ್ ಹತ್ತಿರ, ಬೈತಖೊಲ್, ಕಾರವಾರ ರವರು ದಿನಾಂಕ: 06-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಶುಭಾನಿ ತಂದೆ ನಾಗರಾಜ ಇಂದ್ರ, ಪ್ರಾಯ-22 ವರ್ಷ, ವೃತ್ತಿ-ಮನೆ ಕೆಲಸ, ಸಾ|| ತಾರಿಬಾಗಿಲು, ಹಳದೀಪುರ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 06-03-2021 ರಂದು ಸಾಯಾಂಕಾಲ 17-30 ಗಂಟೆಗೆ ಪಿರ್ಯಾದಿಯ ಅಣ್ಣನ ಮಗಳು ಧಾರಣಿ ಜೈನ್ ಹಾಗೂ ಮಕ್ಕಳಾದ ಯಶಸ್ವಿ ಮತ್ತು ಧನುಷ್ ಇವರೊಂದಿಗೆ ಪಿರ್ಯಾದಿಯ ಮನೆಯ ಹತ್ತಿರದ ತಾರಿಬಾಗಿಲ ಬೀಚಿಗೆ ಹೋದಾಗ ಕುಮಾರಿ: ಶುಭಾನಿ ಇವರು ತಮ್ಮ ಜೊತೆಯಲ್ಲಿದ್ದ ಧಾರಣಿ ಇವರಿಗೆ 18-00 ಗಂಟೆಗೆ ‘ನೀವು ಬೀಚಿನಲ್ಲಿ ಆಟ ಆಡಿ ಬನ್ನಿ. ನಾನು ಮನೆ ಕಡೆಗೆ ಹೋಗುತ್ತೇನೆ’ ಅಂತಾ ಹೇಳಿ ಹೋದವಳು, ಸಾಯಂಕಾಲ 18-45 ಗಂಟೆಯಾದರೂ ಸಹ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಗುಣಮಾಲಾ ಕೋಂ. ನಾಗರಾಜ ಇಂದ್ರ, ಪ್ರಾಯ-42 ವರ್ಷ, ವೃತ್ತಿ-ಸಮಾಜ ಸೇವಕಿ, ಸಾ|| ತಾರಿಬಾಗಿಲು, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 06-03-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರವುದಿಲ್ಲ. ದಿನಾಂಕ: 04-03-2021 ರಂದು ಬೆಳಿಗ್ಗೆ ಮನೆಯಿಂದ ಪಿರ್ಯಾದಿಯವರು ತಮ್ಮ ಬಾಬ್ತು ಹೀರೋ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-2958 ನೇದನ್ನು ಸವಾರಿ ಮಾಡಿಕೊಂಡು ಮುರ್ಡೇಶ್ವರ ನಾಕಾದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಪಕ್ಕ ಫಾರೆಸ್ಟ್ ವಸತಿ ಗೃಹದ ಎದುರುಗಡೆ ಖುಲ್ಲಾ ಸ್ಥಳದಲ್ಲಿ ಬೆಳಿಗ್ಗೆ 06-30 ಗಂಟೆಗೆ ತಮ್ಮ ಮೋಟಾರ್ ಸೈಕಲ್ ನಿಲ್ಲಿಸಿ ಪ್ರಯಾಣಿಕರ ಟೆಂಪೋ ಚಾಲಕ ವೃತ್ತಿಗೆ ಭಟ್ಕಳಕ್ಕೆ ಹೋದವರು, ಮರಳಿ ಮಧ್ಯಾಹ್ನ 03-30 ಗಂಟೆಯ ಸುಮಾರಿಗೆ ಫಾರೆಸ್ಟ್ ವಸತಿ ಗೃಹದ ಎದುರುಗಡೆ ಬಂದು ನೋಡಿದಾಗ ಪಿರ್ಯಾದುದಾರರ ಮೋಟಾರ್ ಸೈಕಲ್ ಇರಲಿಲ್ಲ. ಯಾರೋ ಬದಲಿ ಚಾವಿದಾರ ತಮ್ಮ ವಾಹನ ತೆಗೆದುಕೊಂಡು ಹೋಗಿರಬಹುದು ಅಂತಾ ಅಲ್ಲಿಯೇ ಉಳಿದು ಅಲ್ಲಿರುವ ಎಲ್ಲಾ ವಾಹನ ಖಾಲಿ ಆದ ನಂತರ ಮನೆಗೆ ಹೋಗಿ ಈ ವಿಷಯ ತಮ್ಮವರಿಗೆ ತಿಳಿಸಿ ಅವರು ಸಹ ಹುಡುಕಾಡಿದರೂ ಈವರೆಗೂ ವಾಹನ ಎಲ್ಲಿಯೂ ಪತ್ತೆಯಾಗಿದ್ದು ಇರುವುದಿಲ್ಲ. ನಮೂದಿತ ಆರೋಪಿತರು ದಿನಾಂಕ: 04-03-2021 ರಂದು ಬೆಳಿಗ್ಗೆ 06-30 ಗಂಟೆಯಿಂದ 15-30 ಗಂಟೆಯ ನಡುವಿನ ಅವದಿಯಲ್ಲಿ ಮುರ್ಡೇಶ್ವರ ನಾಕಾ ಫಾರೆಸ್ಟ್ ವಸತಿ ಗೃಹದ ಎದುರುಗಡೆ ನಿಲ್ಲಿಸಿಟ್ಟಿದ್ದ ಪಿರ್ಯಾದುದಾರರ ಅ||ಕಿ|| 23,000/- ರೂಪಾಯಿ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-2958. ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಕೃಷ್ಣ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಕೆಂಡ್ರಿಮನೆ, ಮಡಿಕೇರಿ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 06-03-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಪಣಸೋಲಿ ವನ್ಯ ಜೀವಿ ವಲಯದ ಅರಣ್ಯಾಧಿಕಾರಿಗಳು ಜೊಯಿಡಾ ತಾಲೂಕಿನ ವಿರ್ನೋಲಿ ಗ್ರಾಮಕ್ಕೆ ಸಂಬಂಧ ಪಡುವ ಅರಣ್ಯ ಸರ್ವೇ ನಂ: 48, ಬ್ಲಾಕ್ ನಂ: II-18 ರಲ್ಲಿ ಹಾಯ್ದಿರುವ ಕುಳ್ನಾ-ಸಾಂಗರ್ಲಿ ಸಫಾರಿ ರಸ್ತೆಯ ಮಾರ್ಗದ ಎರಡು ಬದಿಯಲ್ಲಿ ವನ್ಯ ಪ್ರಾಣಿಗಳ ಗಣತಿ, ವನ್ಯ ಪ್ರಾಣಿಗಳ ಚಲನವಲನ, ಅರಣ್ಯ ಅಪರಾಧಗಳನ್ನು ನಿಯಂತ್ರಿಸುವ ಉದ್ದೇಶದಿಂದ ದಿನಾಂಕ: 04-03-2021 ರಂದು ಎರಡು ಕ್ಯಾಮೆರಾ ಬಾಕ್ಸ್ ಸ್ಟ್ಯಾಂಡಿಗೆ ಕುಡ್ಡೆ ಬಾಕ್ ಕಂಪನಿಯ 20 ಮೆಗಾ ಪಿಕ್ಸಲ್ ಡಿಜಿಟಲ್ ಕ್ಯಾಮೆರಾ-2, ಅ||ಕಿ|| 36,000/-ರೂಪಾಯಿ ನೇದವುಗಳನ್ನು ಅಳವಡಿಸಿದ್ದು, ದಿನಾಂಕ: 05-03-2021 ರಂದು 16-30 ಗಂಟೆಯಿಂದ ದಿನಾಂಕ: 06-03-2021 ರಂದು 11-00 ಗಂಟೆಯ ನಡುವಿನ ಅವದಿಯಲ್ಲಿ ಈ ಎರಡು ಕ್ಯಾಮೆರಾ ಸ್ಟ್ಯಾಂಡ್ ಗಳ ಬಾಕ್ಸ್ ಅನ್ನು ಒಡೆದು, 2 ಕುಡ್ಡೆ ಕಂಪನಿಯ ಕ್ಯಾಮೆರಾಗಳನ್ನು ನಮೂದಿತ ಆರೋಪಿತರಾದ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪಾ ತಂದೆ ಹನುಮಂತಪ್ಪಾ ಮುದಕಣ್ಣವರ, ಪ್ರಾಯ-35 ವರ್ಷ, ವೃತ್ತಿ-ಉಪವಲಯ ಅರಣ್ಯಾಧಿಕಾರಿ, ಸಾ|| ವನ್ಯಜೀವಿ ವಲಯ, ಅರಣ್ಯಾಧಿಕಾರಿ ಕಚೇರಿ, ಪಣಸೋಲಿ, ತಾ: ಜೊಯಿಡಾ ರವರು ದಿನಾಂಕ: 06-03-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಜೊಯೆಲ್ @ ಅಜೇಯ ತಂದೆ ನೊಯೆಲ್ ಪಿಂಟೋ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಪುಟ್ಟನ ಮನೆ ರಸ್ತೆ, ಮರಾಠಿಕೊಪ್ಪ, ತಾ: ಶಿರಸಿ, 2]. ಮಾರುತಿ ತಂದೆ ದುರ್ಗಪ್ಪಾ ಇಳಿಗೇರ, ಪ್ರಾಯ-38 ವರ್ಷ, ವೃತ್ತಿ-ಬಾರ್ ಬೆಂಡಿಂಗ್ ಕೆಲಸ, ಸಾ|| ಗೋಳಿಫಾಯರ್, ಮರಾಠಿಕೊಪ್ಪ, ತಾ: ಶಿರಸಿ, 3]. ಪ್ರಶಾಂತ ತಂದೆ ನಾರಾಯಣ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಅಡಿಕೆ ವಕಾರಿಯಲ್ಲಿ ಕೆಲಸ, ಸಾ|| ಕನ್ನಡ ಶಾಲೆಯ ಹತ್ತಿರ, ಮರಾಠಿಕೊಪ್ಪ, ತಾ: ಶಿರಸಿ, 4]. ರವಿಕುಮಾರ ತಂದೆ ಮಹಾದೇವಪ್ಪ, ಪ್ರಾಯ-36 ವರ್ಷ, ವೃತ್ತಿ-ಪೆಟ್ರೋಲ್ ಬಂಕಿನಲ್ಲಿ ಕೆಲಸ, ಸಾ|| ಟಿ.ಎಸ್.ಎಸ್ ರಸ್ತೆ, ತಾ: ಶಿರಸಿ, 5]. ಕಾರ್ತಿಕ ತಂದೆ ಪ್ರದೀಪ ಶೆಟ್ಟಿ, ಪ್ರಾಯ-20 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಮರಾಠಿಕೊಪ್ಪ, ಶಶಿಕಲಾ ಹೊಟೇಲ್ ಹಿಂದುಗಡೆ, ತಾ: ಶಿರಸಿ, 6]. ಚಂದ್ರು ತಂದೆ ಮರ್ಲಾ ಪೂಜಾರಿ, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮರಾಠಿಕೊಪ್ಪ, ಪುಟ್ಟನ ಮನೆ ರೋಡ್, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 06-03-2021 ರಂದು 16-50 ಗಂಟೆಗೆ ತಮ್ಮ ಲಾಭಕ್ಕೋಸ್ಕರ ಶಿರಸಿ ನಗರದ ಮರಾಠಿಕೊಪ್ಪದ ಪುಟ್ಟನಮನೆ ರಸ್ತೆಯ ನಾಗರಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). ವಿವಿಧ ಮುಖಬೆಲೆಯ ನಗದು ಹಣ 2,300/- ರೂಪಾಯಿ, 2). ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 3). ಜೂಜಾಟ ಆಡಲು ನೆಲಕ್ಕೆ ಹಾಸಿಕೊಳ್ಳಲು ಬಳಸಿದ ಗೋಣಿ ಚೀಲ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ (ಕಾ&ಸು), ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 06-03-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭಾಸ್ಕರ ತಂದೆ ಮಾಬ್ಲಾ ಗೌಡ, ಸಾ|| ಬಳೂರು, ತಾ: ಸಿದ್ದಾಪುರ (ಮೋಟಾರ್ ಸೈಕಲ್ ನಂ: ಕೆ.ಎ-31/ಎಕ್ಸ್-4953 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 28-02-2021 ರಂದು ಮಧ್ಯಾಹ್ನ 15-15 ಗಂಟೆಗೆ ಗಾಯಾಳು ರಾಘವೇಂದ್ರ ತಂದೆ ಬೈರಾ ನಾಯ್ಕ ಈತನಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಎಕ್ಸ್-4953 ನೇದರ ಹಿಂಬದಿಗೆ ಕೂಡ್ರಿಸಿಕೊಂಡು ಬಿದ್ರಕಾನ್ ಕಡೆಯಿಂದ ಸಿದ್ದಾಪುರ ಕಡೆಗೆ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸಿದ್ದಾಪುರ-ಹಾರ್ಸಿಕಟ್ಟಾ ರಸ್ತೆಯ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಸ್ತೆಗೆ ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಹಾಗೂ ರಸ್ತೆಯಲ್ಲಿದ್ದ ಹಂಪ್ಸ್ ಅನ್ನು ನೋಡಿ ಒಮ್ಮೆಲೆ ಮೋಟಾರ್ ಸೈಕಲಿನ  ಬ್ರೇಕ್ ಅನ್ನು ಹಾಕಿ ಮೋಟಾರ್ ಸೈಕಲನ್ನು ಬೀಳಿಸಿ ಅಪಘಾತ ಪಡಿಸಿ, ಮೋಟಾರ್ ಸೈಕಲಿನ ಹಿಂಬದಿ ಸವಾರನಾದ ಗಾಯಾಳು ರಾಘವೇಂದ್ರ ಇವರ ಎಡಗಾಲಿಗೆ ತೀವೃ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಜೇಶ ತಂದೆ ತಿಮ್ಮಾ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಸಿಗಂಧೂರು ಯಕ್ಷಗಾನ ಮೇಳದಲ್ಲಿ ಅಡುಗೆ ಕೆಲಸ, ಸಾ|| ಅಂಕಣಗೊಪ್ಪ, ಬ್ಯಾಕೋಡ ಗ್ರಾಮ, ತಾ: ಸಾಗರ, ಜಿ: ಶಿವಮೊಗ್ಗ ರವರು ದಿನಾಂಕ: 06-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪಾಂಡುರಂಗ ತಂದೆ ಕೃಷ್ಣ ಬಡಿಗೇರ, ಸಾ|| ಭಾಶಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-8462 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 05-03-021 ರಂದು ಸಾಯಂಕಾಲ 07-00 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-8462 ನೇದನ್ನು ಭಾಶಿ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಪುಟ್ಟಪ್ಪ ಗೌಡ್ರ ರವರ ತೋಟದ ಬಳಿ ಬನವಾಸಿ ಕಡೆಯಿಂದ ಭಾಶಿ ಕಡೆಗೆ ಮೋಟಾರ್ ಸೈಕಲ್ ನಂ: ಕೆ.ಎ-31/ಯು-1282 ನೇದರ ಮೇಲೆ ಹೋಗುತ್ತಿದ್ದ ಪಿರ್ಯಾದಿಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಲೆಗೆ ರಕ್ತಗಾಯ, ಬಲಭುಜಕ್ಕೆ, ಬಲಗಾಲಿನ ಮೊಣಕಾಲು, ಎಡಭುಜದ ಹಿಂಭಾಗ ಹಾಗೂ ಹಣೆಯ ಎಡಭಾಗಕ್ಕೆ ತೆರಚಿದ ಗಾಯನೋವು ಪಡಿಸಿ, ತನಗೂ ಸಹ ಬಾಯಿಗೆ ಮತ್ತು ಕಿವಿಯ ಹತ್ತಿರ ರಕ್ತಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ತಿಮ್ಮಪ್ಪ ಬಡಿಗೇರ, ಪ್ರಾಯ-34 ವರ್ಷ, ವೃತ್ತಿ-ಕಮ್ಮಾರಿಕೆ ಕೆಲಸ, ಸಾ|| ಮನೆ ನಂ: 65, ಭಾಶಿ, ತಾ: ಶಿರಸಿ ರವರು ದಿನಾಂಕ: 06-03-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭರಮಾ ತಂದೆ ರಾಮಾ ಇರಗಾರ, ಸಾ|| ವಾರಿ, ಮಾಸ್ತಿಹೋಳಿ, ತಾ: ಹುಕ್ಕೇರಿ, ಜಿ: ಬೆಳಗಾವಿ (ಲಾರಿ ನಂ: ಕೆ.ಎ-22/ಸಿ-8598 ನೇದರ ಚಾಲಕ). ಪಿರ್ಯಾದಿಯವರು ಬೆಂಗಳೂರಿನಿಂದ ಗೋವಾ ಪ್ರವಾಸಕ್ಕೆಂದು ತಮ್ಮ ಕುಟುಂಬ ಸದಸ್ಯರೊಂದಿಗೆ ರಾಮನಗರ-ಗೋವಾ ರಸ್ತೆಯಲ್ಲಿ ಅನಮೋಡ ದಾಟಿದ ನಂತರದಲ್ಲಿ ಬರುವ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ದಿನಾಂಕ: 06-03-2021 ರಂದು ಬೆಳಿಗ್ಗೆ 10-45 ಗಂಟೆಯ ಸಮಯಕ್ಕೆ ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಗೋವಾ ಬದಿಯಿಂದ ಬರುತ್ತಿದ್ದ ಲಾರಿ ನಂ: ಕೆ.ಎ-22/ಸಿ-8598 ನೇದರ ಚಾಲಕನಾದ ನಮೂದಿತ ಆರೋಪಿತನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯವರ ಕಾರಿನ ಮುಂಭಾಗದಿಂದ ಬಲಭಾಗದಲ್ಲಿ ಪೂರ್ಣ ಭಾಗದಲ್ಲಿ ಲಾರಿಯಿಂದ ಡಿಕ್ಕಿ ಹೊಡೆದುಕೊಂಡು ಹೋಗಿ ಕಾರಿನ ಬಲಭಾಗ ಪೂರ್ಣ ಡ್ಯಾಮೇಜ್ ಆಗಿರುತ್ತದೆ ಹಾಗೂ ಕಾರಿನಲ್ಲಿದ್ದ ನಮಗೆ ಯಾವುದೇ ಪೆಟ್ಟುಗಳು ಆಗಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಎಮ್. ಎಸ್. ಅರುಣಕುಮಾರ ತಂದೆ ಎಮ್. ಎಚ್. ಶಂಕರ, ಪ್ರಾಯ-40 ವರ್ಷ, ವೃತ್ತಿ-ಗಾರ್ಮೆಂಟ್ ಕೆಲಸ, ಸಾ|| ಮನೆ ನಂ: 288, ಬಿ & ಎ.ಎಸ್.ಓ ಲೇಔಟ್, ಹಂಪಿನಗರ, ಆರ್.ಪಿ.ಸಿ ಲೇಔಟ್, ಬೆಂಗಳೂರು ರವರು ದಿನಾಂಕ: 06-03-2021 ರಂದು 18-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಬೀರಾ ತಂದೆ ಬೋಳಾ ಗೌಡ, ಪ್ರಾಯ-47 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮಾರುಗದ್ದೆ, ಪೋ: ಅಗಸೂರು, ತಾ: ಅಂಕೋಲಾ. ಈತನು ಕೃಷಿ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 06-03-2021 ರಂದು ಮಧ್ಯಾಹ್ನ 13-45 ಗಂಟೆಗೆ ಅಂಕೋಲಾ ತಾಲೂಕಿನ ಮಾರುಗದ್ದೆಯಲ್ಲಿರುವ ತನ್ನ ಮನೆಯ ಹತ್ತಿರದ ತೆಂಗಿನ ಮರವನ್ನು ಹತ್ತಿ, ಮರದಲ್ಲಿದ್ದ ತೆಂಗಿ ಕಾಯಿಯನ್ನು ಕೊಯ್ಯುತ್ತಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಇನ್ನಾವುದೋ ಕಾರಣದಿಂದ ಮರದಿಂದ ಕೆಳಗೆ ಬಿದ್ದು ಒಳ ಗಾಯನೋವು ಆದವನಿಗೆ ಉಪಚಾರಕ್ಕಾಗಿ 108 ಆಂಬುಲೆನ್ಸ್ ನಲ್ಲಿ ಅಂಕೋಲಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಉಪಚಚರಿಸಿದ ವೈದ್ಯರು ಮಧ್ಯಾಹ್ನ ಸುಮಾರು 15-40 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಕ್ಷು ತಂದೆ ಬೋಳಾ ಗೌಡ, ವೃತ್ತಿ-ರೈತಾಬಿ ಕೆಲಸ, ಸಾ|| ಮಾರುಗದ್ದೆ, ಪೋ: ಅಗಸೂರು, ತಾ: ಅಂಕೋಲಾ ರವರು ದಿನಾಂಕ: 06-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 08-03-2021 05:20 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080