ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-10-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಮಲೇಶ ತಂದೆ ವಕೀಲ್ ಸಾಬ್, ಸಾ|| ಗೋಪಾಲಗಂಜ್, ಬಿಹಾರ ರಾಜ್ಯ (ಲಾರಿ ನಂ: ಎನ್‍.ಎಲ್-01/ಕೆ-6697 ನೇದರ ಚಾಲಕ). ಈತನು ದಿನಾಂಕ: 04-10-2021 ರಂದು 19-30 ಗಂಟೆಗೆ ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಲಾರಿ ನಂ: ಎನ್.ಎಲ್-01/ಕೆ-6697 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ತನ್ನ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬಲಕ್ಕೆ ಬಂದವನು, ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ರಸ್ತೆಯ ತನ್ನ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿ ನಂ: ಎನ್.ಎಲ್-01/ಎಲ್-2120 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅದರ ಚಾಲಕನಾದ ಕುಲವಿಂದರ್ ಸಿಂಗ್, ಪ್ರಾಯ-40 ವರ್ಷ, ಸಾ|| ಪಂಜಾಬ್ ರಾಜ್ಯ ಈತನ ಎರಡೂ ಕಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಲಾರಿ ಚಾಲಕನು ತನಗೂ ಕೂಡಾ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಭಜರಂಗ ಲಾಲ್ ತಂದೆ ದರೀಯಾ ಸಿಂಗ್, ಪ್ರಾಯ-41 ವರ್ಷ, ವೃತ್ತಿ-ಶ್ರೀ ಶ್ಯಾಮ್ ರೋಡ್ ಕ್ಯಾರಿಯರ್ ಕಂಪನಿಯಲ್ಲಿ ಮ್ಯಾನೇಜರ್ ಕೆಲಸ, ಸಾ|| ಫರಿಟಿಯಾ ಭಿಮಾ ಗ್ರಾಮ, ತಾ: ಲೊಹರು, ಜಿ: ಭಿವಾನಿ, ಹರಿಯಾಣ ರಾಜ್ಯ, ಹಾಲಿ ಸಾ|| ಪ್ಲಾಟ್ ನಂ: ಪಿ.ಎಫ್.ಎಸ್-1, ಕುಂಡಿಯಮ್ ಇಂಡಸ್ಟ್ರಿಯಲ್ ಎಸ್ಟೇಟ್, ಕುಂಡಿಯಮ್, ಗೋವಾ ರಾಜ್ಯ ರವರು ದಿನಾಂಕ: 06-10-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 454, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 28-08-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಾಂಯಕಾಲ 16-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಬಾಗಿಲನ್ನು ಬಲವಾದ ವಸ್ತುವಿನಿಂದ ಒಡೆದು ಮನೆಯ ಬೆಡ್ ರೂಮಿನ ಅಲ್ಮೇರಾದ ಬಾಗಿಲನ್ನು ತೆರೆದು ಅಲ್ಮೇರಾದಲ್ಲಿದ್ದ 1). ಕಿವಿ ಓಲೆ-03 ಜೊತೆ, 24.00 ಗ್ರಾಂ, ಅ||ಕಿ|| 35,000/- ರೂಪಾಯಿ, 2). ಉಂಗುರ-02, 05 ಗ್ರಾಂ ಅ||ಕಿ|| 20,000/- ರೂಪಾಯಿ, 3). ನೆಕ್ಲೇಸ್-01, 40 ಗ್ರಾಂ, ಅ||ಕಿ|| 70,000/- ರೂಪಾಯಿ, 4). ಬ್ರೇಸಲೆಟ್-01, 4.5 ಗ್ರಾಂ, ಅ||ಕಿ|| 15,000/- ರೂಪಾಯಿ. ಹೀಗೆ ಒಟ್ಟೂ ಅಂದಾಜು 73.5 ಗ್ರಾಂ ತೂಕದ ಬಂಗಾರದ ಆಭರಣಗಳು, ಅ||ಕಿ|| 1,40,000/- ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಬಿಬಿ ಫಾತಿಮಾ ಕೋಂ. ಅಬ್ದುಲ್ ರಜಾಕ್ ಶೇಖ್, ಪ್ರಾಯ-40 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಜಾಲಿ ರೋಡ್, ತಗ್ಗರಗೋಡ, ತಾ: ಭಟ್ಕಳ ರವರು ದಿನಾಂಕ: 01-10-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿತ್ತು.

ದಿನಾಂಕ: 06-10-2021 ರಂದು ಪಿರ್ಯಾದಿಯು ಠಾಣೆಗೆ ಮರಳಿ ಹಾಜರಾಗಿ, ದಿನಾಂಕ: 06-10-2021 ರಂದು ತನ್ನ ಗಂಡ ಮನೆಗೆ ಬಂದಾಗ ಮರಳಿ ತಾವು ತಮ್ಮ ಕಳುವಾಗಿದ್ದ ಚಿನ್ನಾಭರಣಗಳ ರಶೀದಿಗಳನ್ನು ಪರಿಶೀಲಿಸಿದಾಗ ತಾನು ದೂರಿನಲ್ಲಿ ನಮೂದಿಸಿದ್ದ 1). 24.00 ಗ್ರಾಂ ತೂಕದ ಕಿವಿ ಓಲೆ-03 ಜೊತೆ, 16 ಗ್ರಾಂ, ಅ||ಕಿ|| 80,000/- ರೂಪಾಯಿ, 2). 5 ಗ್ರಾಂ ತೂಕದ ಉಂಗುರ-02, ಅ||ಕಿ|| 25,000/- ರೂಪಾಯಿ, 3). 40 ಗ್ರಾಂ ತೂಕದ ನೆಕ್ಲೇಸ್, 59 ಗ್ರಾಂ, ಅ||ಕಿ|| 2,95,000/- ರೂಪಾಯಿ, 4). 4.5 ಗ್ರಾಂ ತೂಕದ ಬ್ರೇಸಲೆಟ್-01, ಇದು 2 ಗ್ರಾಂ ತೂಕದ್ದು ಆಗಿರುತ್ತದೆ. ಅ||ಕಿ|| 10,000/- ರೂಪಾಯಿ. ಇನ್ನೂ ತಾವು ಮನೆಯ ಅಲ್ಮೇರಾವನ್ನು ಪರಿಶೀಲಿಸಿದಾಗ ಅಲ್ಮೇರಾದಲ್ಲಿ ಕಳುವಾಗಿದ್ದ ಈ ಮೇಲಿನ ಆಭರಣಗಳ ಜೊತೆ ಇಟ್ಟಿದ್ದ ಅ||ಕಿ|| 1,10,000/- ರೂಪಾಯಿ ಮೌಲ್ಯದ 22 ಗ್ರಾಂ ತೂಕದ ಬಂಗಾರದ ಬಳೆ-1 ಸಹ ಕಳುವಾಗಿದ್ದು ಇರುತ್ತದೆ. ಸದ್ರಿ ಕಳುವಾಗಿದ್ದ ಚಿನ್ನಾಭರಣಗಳ ಒಟ್ಟೂ ಅಂದಾಜು 5,20,000/- ರೂಪಾಯಿ ಆಗಿದ್ದು, ಚಿನ್ನಾಭರಣಗಳು ಅಂದಾಜು 104 ಗ್ರಾಂ ತೂಕದ್ದು ಇರುತ್ತದೆ. ಇದನ್ನು ತನ್ನ ದೂರಿನಲ್ಲಿ ಅಳವಡಿಸಿಕೊಂಡು ಎಲ್ಲಾ ಆಭರಣಗಳನ್ನು ಹುಡುಕಿ ಕೊಡಲು ಪಿರ್ಯಾದಿಯು ದಿನಾಂಕ: 06-10-2021 ರಂದು 15-00 ಗಂಟೆಗೆ ತನ್ನ ಮರು ಹೇಳಿಕೆಯ ಮೂಲಕ ತಿಳಿಸಿರುತ್ತಾರೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 406, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಾಲ್ವಡರ್ ಡಿಸೋಜಾ, ಪ್ರಾಯ-41 ವರ್ಷ, ಸಾ|| ಭೀಮನಗುಡ್ಡ, ಸಿದ್ದಾಪುರ ರೋಡ್, ನಿಲೇಕಣಿ, ತಾ: ಶಿರಸಿ, 2]. ಫಯಾಜ್ ತಂದೆ ಮದರ್ ಸಾಬ್ ಚೌಟಿ, ಪ್ರಾಯ-42 ವರ್ಷ, ಸಾ|| ಆರ್.ಟಿ.ಓ ಆಫೀಸ್ ಹಿಂದುಗಡೆ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪರಿಚಯದವನಿದ್ದು ದಿನಾಂಕ: 27-02-2017 ರಂದು ಪಿರ್ಯಾದಿಯವರು ಶಿರಸಿಗೆ ಬಂದಾಗ ಆರೋಪಿ 1 ನೇಯವನಿಗೆ ಭೇಟಿಯಾದಾಗ ಪಿರ್ಯಾದಿಯವರಿಗೆ ಶಿರಸಿ ನಗರದ ಅಯ್ಯಪ್ಪನಗರ ಶ್ರೀ ಅಯ್ಯಪ್ಪ ದೇವಸ್ಥಾನದ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಆರೋಪಿ 2 ನೇಯವನಿಗೆ ಪರಿಚಯ ಮಾಡಿಸಿ ಒಂದು ವಜ್ರದ ಹಾರವನ್ನು ಪಿರ್ಯಾದಿಗೆ ತೋರಿಸಿ ‘ತಮಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಹಣದ ಅವಶ್ಯಕತೆ ಇರುತ್ತದೆ. ಆದ್ದರಿಂದ ವಜ್ರದ ಹಾರವನ್ನು ಮಾರಾಟ ಮಾಡುತ್ತೇವೆ’ ಎನ್ನುವುದಾಗಿ ಹೇಳಿ ಪಿರ್ಯಾದಿಗೆ ಖರೀದಿಸಲು ಅಥವಾ ಬೇರೆ ಯಾರಿಗಾದರೂ ಮಾರಾಟ ಮಾಡಿಸಿಕೊಡಲು ಹೇಳಿದಾಗ ಪಿರ್ಯಾದಿಯವರು ‘ವಿಚಾರಿಸಿ ಹೇಳುತ್ತೇನೆ’ ಎಂದು ಸಮಯ ತೆಗೆದುಕೊಂಡು ಹೋದವರು, ದಿನಾಂಕ: 28-02-2021 ರಂದು ಶಿರಸಿಗೆ ಬಂದಾಗ ಆರೋಪಿ 1 ನೇಯವನು ಪಿರ್ಯಾದಿಯವರಿಗೆ ಆರೋಪಿ 2 ನೇಯವನ ಮನೆಗೆ ಕರೆದುಕೊಂಡು ಹೋಗಿ ವಜ್ರದ ಹಾರದ ಬಿಲ್ ಮತ್ತು ಗುಣಮಟ್ಟದ ಸರ್ಟಿಫಿಕೇಟ್ ತೋರಿಸಿ, ಹಾರವನ್ನು ತೆಗೆದುಕೊಳ್ಳುವಂತೆ ತಮಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಹಣದ ಅವಶ್ಯಕತೆ ಇರುವುದಾಗಿ ಪಿರ್ಯಾದಿಗೆ ಒತ್ತಾಯಿಸಿದಾಗ ಪಿರ್ಯಾದಿಯವರು ವಜ್ರದ ಹಾರದ ಬೆಲೆ ಕೇಳಿದಾಗ ಆರೋಪಿ 2 ನೇಯವನು ಹಾರದ ಮಾರುಕಟ್ಟೆ ಬೆಲೆ 25,00,000/- ರೂಪಾಯಿ ಇದ್ದು, ಪಿರ್ಯಾದಿ ಖರೀದಿಸುವುದಾದರೆ 20,00,000/- ರೂಪಾಯಿಗೆ ಕೊಡುವುದಾಗಿ ಹೇಳಿದಾಗ ಪಿರ್ಯಾದಿಗೆ ಮುಂಗಡವಾಗಿ ಸ್ವಲ್ಪ ಹಣ ನೀಡುವಂತೆ ಉಳಿದ ಹಣವನ್ನು 3 ತಿಂಗಳೊಳಗೆ ನೀಡುವಂತೆ ವಿನಂತಿಸಿಕೊಂಡಾದ ಪಿರ್ಯಾದಿಯವರು ಆ ದಿವಸ ಆರೋಪಿ 2 ನೇಯವನಿಗೆ 10,000/- ರೂಪಾಯಿಯನ್ನು ಮುಂಗಡವಾಗಿ ನೀಡಿದ್ದು, ಆನಂತರ ದಿನಾಂಕ: 06-03-2017 ಪಿರ್ಯಾದಿಯವರು ಶಿರಸಿಗೆ ಬಂದಾಗ ಆರೋಪಿ 2 ನೇಯವನಿಗೆ 2,00,000/- ರೂಪಾಯಿ ನಗದಾಗಿ, ದಿನಾಂಕ: 14-02-2017 ರಂದು ಪಿರ್ಯಾದಿಯವರ ಐ.ಸಿ.ಐ.ಸಿ.ಐ ಬ್ಯಾಂಕ್ ಖಾತೆ ನಂ: 0269015XXXXX ನೇದರಿಂದ ಆರೋಪಿ 2 ನೇಯವನ ಕೆನರಾ ಬ್ಯಾಂಕ್ ಶಿರಸಿ ಶಾಖೆಯ ಖಾತೆ ನಂ: 2941101007126 ನೇದಕ್ಕೆ 1,00,000/- ರೂಪಾಯಿಯನ್ನು, ದಿನಾಂಕ: 17-03-2017 ರಂದು ಆರೋಪಿ 1 ನೇಯವನು ಹೇಳಿದಂತೆ ಆತನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ನಂ:  3297466301 ನೇದಕ್ಕೆ 3,00,000/- ರೂಪಾಯಿಯನ್ನು ಆರ್.ಟಿ.ಜಿ.ಎಸ್ ಮೂಲಕ ಮತ್ತು  ದಿನಾಂಕ: 10-04-2017 ರಂದು ಪಿರ್ಯಾದಿಯವರು 5,00,000/- ರೂಪಾಯಿಯನ್ನು ಹಂತ ಹಂತವಾಗಿ ಆರೋಪಿ 1 ನೇಯವನ ಕೆನರಾ ಬ್ಯಾಂಕ್ ಖಾತೆ ನಂ: 2941101007126 ನೇದಕ್ಕೆ ಮತ್ತು ಆರೋಪಿ 2 ನೇಯವನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ನಂ: 3297466301 ನೇದಕ್ಕೆ 8,00,000/- ರೂಪಾಯಿಯನ್ನು, ಹೀಗೆ ಒಟ್ಟೂ 19,10,000/- ರೂಪಾಯಿ ಹಣವನ್ನು ನೀಡಿದ್ದು, ಆನಂತರ ಪಿರ್ಯಾದಿಯವರು ಹಾರವನ್ನು ನೀಡುವಂತೆ ಆರೋಪಿತರಿಗೆ ಹೇಳಿದಾಗ ಇಂದು, ನಾಳೆ ಎನ್ನುತ್ತಾ ಹಾರವನ್ನು ನೀಡದೇ ಬಾಕಿ ಉಳಿದ 90,000/- ರೂಪಾಯಿ ಹಣವನ್ನು ನೀಡುವಂತೆ ಹೇಳಿದ್ದು, ಆಗ ಪಿರ್ಯಾದಿಯವರು ವಜ್ರದ ಹಾರವನ್ನು ತಂದು ಮುಟ್ಟಿಸಿ ಬಾಕಿ ಹಣವನ್ನು ತೆಗೆದುಕೊಂಡು  ಹೋಗುವಂತೆ ಹೇಳಿದ್ದು, 2017 ನೇ ಸಾಲಿನ ಆಗಸ್ಟ್ ಮೊದಲ ವಾರದಲ್ಲಿ ಆರೋಪಿತರು ಪಿರ್ಯಾದಿಗೆ ಕರೆ ಮಾಡಿ ಪೊಲೀಸರು ವಜ್ರದ ಹಾರವನ್ನು ಜಪ್ತ ಪಡಿಸಿಕೊಂಡಿರುತ್ತಾರೆ. ಅದಕ್ಕೆ ಬದಲಿಗೆ ಅದೇ ಮೌಲ್ಯದ ಬೇರೆ ಹಾರವನ್ನು ನೀಡುತ್ತೇವೆ. ಸ್ವಲ್ಪ ಸಮಯ ನೀಡಲು ಹೇಳಿದ್ದು, ನಂತರ ಪಿರ್ಯಾದಿಯು ಆರೋಪಿತರಿಗೆ ಕರೆ ಮಾಡಿದಾಗ ಪಿರ್ಯಾದಿಯವರ ಕರೆಯನ್ನು ಬ್ಲಾಕ್ ಮಾಡಿದ್ದು, ಪಿರ್ಯಾದಿಯವರು ಶಿರಸಿಗೆ ಬಂದಾಗ ಆರೋಪಿ 2 ನೇಯವನ ಭೇಟಿಗೆ ಹೋದಾಗ ಸಿಗದೇ, ಆರೋಪಿ 1 ನೇಯವನನ್ನು ಭೇಟಿಯಾದಾಗ ಎಲ್ಲಾ ಹಣವನ್ನು ಆರೋಪಿ 2 ನೇಯವನಿಗೆ ನೀಡಿದ್ದು, ಆತನ ಬಳಿ ಕೇಳುವಂತೆ ಹೇಳಿ ಜವಾಬ್ದಾರಿಯಿಂದ ಜಾರಿಕೊಂಡಿದ್ದು, ಆರೋಪಿತರು ಹಾರವನ್ನು ನೀಡಬಹುದು ಎಂದು ಈವರೆಗೆ ಕಾಯ್ದ ಪಿರ್ಯಾದಿಯವರು ಆರೋಪಿತರು ವಜ್ರದ ಹಾರವನ್ನು ಕೊಡುವುದಾಗಿ ತನಗೆ ನಂಬಿಸಿ, ಮೋಸ ಮಾಡಿದ್ದು, ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಶ್ವೇಶ್ವರ ತಂದೆ ಕೇಶವ ಭಟ್ಟ, ಸಾ|| 114 ಹವ್ಯಕ, ಎಸ್-3, 3 ನೇ ಪ್ಲೋರ್, ಅನುಗ್ರಹ ಲೇಔಟ್, ಬಿ.ಟಿ.ಎಮ್ 3 ನೇ ಸ್ಟೇಜ್, ಬೆಂಗಳೂರು-560076 ರವರು ದಿನಾಂಕ: 06-10-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಧಾಕೃಷ್ಣ  ತಂದೆ ಗಣೇಶ ಪಿಳ್ಳೈ, ಪ್ರಾಯ-40 ವರ್ಷ, ವೃತ್ತಿ-ಜಿಮ್ ಕೋಚಿಂಗ್ ಕೆಲಸ, ಸಾ|| ರಾಮಾನಂದ ನಗರ, ಕೊಲ್ಲಾಪುರ, ಮಹಾರಾಷ್ಟ್ರ ರಾಜ್ಯ (ಸ್ಕಾರ್ಪಿಯೋ ಕಾರ್ ನಂ: ಎಮ್.ಎಚ್-10/ಇ-9675 ನೇದರ ಚಾಲಕ). ಈತನು ತನ್ನ ಬಾಬ್ತು ಸ್ಕಾರ್ಪಿಯೋ ಕಾರ್ ನಂ: ಎಮ್.ಎಚ್-10/ಇ-9675 ನೇದರಲ್ಲಿ ಪಿರ್ಯಾದಿ ಹಾಗೂ ಪಿರ್ಯಾದಿಯ ಹೆಂಡತಿ ಶ್ರೀಮತಿ ಮೀನಾ ಕೋಂ. ಗಣೇಶ ಪಿಳ್ಳೈ ಹಾಗೂ ಪಿರ್ಯಾದಿಯ ಹೆಂಡತಿಯ ತಂಗಿ ಶ್ರೀಮತಿ ರಾಜಮ್ಮ ಪಿಳ್ಳೈ ಹಾಗೂ ಆರೋಪಿತನ ಹೆಂಡತಿ ಶ್ರೀಮತಿ ಸರಸ್ವತಿ ಹಾಗೂ ಪಿರ್ಯಾದಿಯ ಮಗಳು ಜ್ಯೋತಿ ಇವರನ್ನು ಕೂಡ್ರಿಸಿಕೊಂಡು ಮಹಾರಾಷ್ಟ್ರ ರಾಜ್ಯದಿಂದ ಅಂಕೋಲಾಕ್ಕೆ ತಮ್ಮ ಸಂಬಂಧಿಕರ ಮನೆಗೆ ಶ್ರಾದ್ಧ ಕಾರ್ಯಕ್ರಮಕ್ಕೆ ಅಂತಾ ದಿನಾಂಕ: 06-10-2021 ರಂದು ಬೆಳಗಿನ ಜಾವ ಹೊರಟು ಬಂದವರು ಹಳಿಯಾಳ-ಯಲ್ಲಾಪುರ ಮಾರ್ಗವಾಗಿ ಹೋಗುತ್ತಿದ್ದಾಗ, ಆರೋಪಿ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸಮಯ ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದ ತಟ್ಟಿಹಳ್ಳ ಕ್ರಾಸ್ ಹತ್ತಿರ ತನ್ನ ಕಾರಿನ ಚಾಲನೆಯ ಮೇಲೆ ನಿಯಂತ್ರಣ ಕಳೆದುಕೊಂಡು ಕಾರನ್ನು ಡಾಂಬರ್ ರಸ್ತೆಯ ಮೇಲೆ ಸ್ಕಿಡ್ ಆಗಿ ಪಲ್ಟಿ ಕೆಡವಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗಾಯಾಳುವಾದ ಪಿರ್ಯಾದಿಯವರಿಗೆ ಸಾದಾ ಗಾಯ ಹಾಗೂ ಶ್ರೀಮತಿ ಸರಸ್ವತಿ ಕೋಂ. ರಾಧಾಕೃಷ್ಣ ಪಿಳ್ಳೈ ರವರಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ಕಾರಿನಲ್ಲಿದ್ದ, ಶ್ರೀಮತಿ ಮೀನಾ ಕೋಂ ಗಣೇಶ ಪಿಳ್ಳೈ ಹಾಗೂ ಶ್ರೀಮತಿ ರಾಜಮ್ಮ ಪಿಳ್ಳೈ ರವರಿಗೆ ಗಂಭಿರ ಸ್ವರೂಪದ ಗಾಯನೋವು ಪಡಿಸಿ, ಸ್ಥಳದಲ್ಲಿಯೇ ಮರಣ ಉಂಟು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಗಾಯನೋವು ಪಡಿಸಿಕೊಂಡು ಕಾರನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ರಾಜಾರಾಮ ಪಿಳ್ಳೈ, ಪ್ರಾಯ-66 ವರ್ಷ, ವೃತ್ತಿ-ಮನೆ ಕೆಲಸ, ಸಾ|| ರಾಮಾನಂದ ನಗರ, ಕೊಲ್ಲಾಪುರ, ಮಹಾರಾಷ್ಟ್ರ ರಾಜ್ಯ ರವರು ದಿನಾಂಕ: 06-10-2021 ರಂದು 15-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿತ್ತು.

ಈ ಅಪಘಾತದಲ್ಲಿ ಗಾಯಗೊಂಡ ಶ್ರೀಮತಿ ಸರಸ್ವತಿ ಕೋಂ. ರಾಧಾಕೃಷ್ಣ ಪಿಳ್ಳೈ, ಪ್ರಾಯ-35 ವರ್ಷ, ವೃತ್ತಿ-ಮನೆವಾರ್ತೆ, ಸಾ|| ರಾಮಾನಂದ ನಗರ, ಕೊಲ್ಲಾಪುರ, ಮಹಾರಾಷ್ಟ್ರ ರಾಜ್ಯ ಇವಳಿಗೆ ಅಪಾಘತದಲ್ಲಿ ಗಂಭೀಓರ ಗಾಯನೋವು ಆದ್ದರಿಂದ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಉಪಚಾರವನ್ನು ನೀಡಿ ಹೆಚ್ಚಿನ ಉಪಚಾರಕ್ಕಾಗಿ ಆಂಬ್ಯುಲೆನ್ಸ್ ಮೇಲಾಗಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ದಿನಾಂಕ: 06-10-2021 ರಂದು 15-40 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-10-2021

at 00:00 hrs to 24:00 hrs

 

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಏಮನ್ ಪಿ. ಹಸನ್, ಪ್ರಾಯ-21 ವರ್ಷ, ವೃತ್ತಿ-ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿ, ಸಾ|| ಮನೆ ನಂ: 2858/ಎಫ್/5, ಮೊದಲನೇ ಮಹಡಿ, ಪ್ರೈಡ್ಸ್ ಅಪಾರ್ಟಮೆಂಟ್, ದೇವಳಿವಾಡಾ, ನಂದನಗದ್ದಾ, ಬಾಡ, ಕಾರವಾರ. ಇವಳು ಕಾರವಾರದ ಸರಕಾರಿ ಕಾಲೇಜಿನಲ್ಲಿ ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದವಳು, ದಿನಾಂಕ: 06-10-2021 ರಂದು ಮಧ್ಯಾಹ್ನ 14-00 ಗಂಟೆಗೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದವಳು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತಾ ನಿರ್ಧರಿಸಿ ಮನೆಯ ಬಾತರೂಮಿನೊಳಗೆ ಹೋಗಿ ಸ್ನಾನದ ಶವರ್ ಎಂಗಲ್ ಗೆ ತನ್ನ ವೇಲಿನಿಂದ ಕಟ್ಟಿ ಕತ್ತಿಗೆಗೆ ಉರುಳು ಮಾಡಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಇದರ ಹೊರತು ತನ್ನ ಮಗಳ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ನವಿಹಸನ್ ತಂದೆ ಎಮ್. ಡಿ. ಖಲೀಲ್, ಪ್ರಾಯ-46 ವರ್ಷ, ವೃತ್ತಿ-ನೌಕಾದಳದಲ್ಲಿ ಸೂಪರವೈಸರ್ ಕೆಲಸ, ಸಾ|| ಮನೆ ನಂ: 2858/ಎಫ್/5, ಮೊದಲನೇ ಮಹಡಿ, ಪ್ರೈಡ್ಸ್ ಅಪಾರ್ಟಮೆಂಟ್, ದೇವಳಿವಾಡಾ, ನಂದನಗದ್ದಾ, ಬಾಡ, ಕಾರವಾರ ರವರು ದಿನಾಂಕ: 06-10-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಮಾಯಾ ಕೋಂ. ದಿನೇಶ ಜಾಧವ, ಪ್ರಾಯ-43 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಗಾಬಿತವಾಡಾ, ಮಾಜಾಳಿ, ಕಾರವಾರ. ಇವಳು ಸುಮಾರು 10 ವರ್ಷಗಳಿಂದ ಕಾಲು ಹಾಗೂ ಕೈ ಗುಂಪಿನ ಸಂಧಿಯಲ್ಲಿ ಊದಿಕೊಂಡ ನೋವಿನಿಂದ ಬಳಲುತ್ತಿದ್ದವಳು, ಮಣಿಪಾಲ, ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ಔಷಧೋಪಚಾರವನ್ನು ಮಾಡಿಕೊಂಡಿದ್ದಳು. ತನ್ನ ಅತಿಯಾದ ನೋವು ಹಾಗೂ ವೇದನೆಯನ್ನು ಅನುಭವಿಸುತ್ತಿದ್ದವಳು, ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ: 01-10-2021 ರಂದು ಬೆಳಿಗ್ಗೆ 07-15 ಗಂಟೆಗೆ ಗಾಬಿತವಾಡಾದ ತನ್ನ ಮನೆಯಲ್ಲಿನ ಬಚ್ಚಲು ಕೋಣೆಯಲ್ಲಿನ ಪಕಾಶಿಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದವಳಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕಾರವಾರದಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದವಳು, ದಿನಾಂಕ: 06-10-2021 ರಂದು ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಾರವಾರದಲ್ಲಿ ಬೆಳಗಿನ ಜಾವ 02-35 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಸದರಿಯವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ಮಹಾದೇವ ಜಾಧವ, ಪ್ರಾಯ-48 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗಾಬಿತವಾಡಾ, ಮಾಜಳಿ, ಕಾರವಾರ ರವರು ದಿನಾಂಕ: 06-10-2021 ರಂದು 06-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬಸ್ಯಾ ತಂದೆ ಲಿಂಗಾ ಚಲವಾದಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಲವಾದಿಕೇರಿ, ಬೆಳಲೆ, ಪೋ: ಅರಸಾಪುರ, ತಾ: ಶಿರಸಿ. ಪಿರ್ಯಾದಿಯ ಗಂಡನಾದ ಇವರು ಸರಾಯಿ ಕುಡಿಯುವ ಚಟ ಹೊಂದಿದ್ದವರು, ದಿನಾಲು ಸರಾಯಿ ಕುಡಿದುಕೊಂಡು ಮನೆಗೆ ಬಂದು ತನ್ನ ಜೊತೆಗೆ ಗಲಾಟೆ ಮಾಡುತ್ತಿದರು. ದಿನಾಂಕ: 05-10-2021 ರಂದು ರಾತ್ರಿ ಸರಾಯಿ ಕುಡಿಯಲಿಕ್ಕೆ ಹಣ ಕೊಡಲಿಲ್ಲ ಎಂದು ತನ್ನ ಗಂಡನು ತನ್ನ ಜೊತೆಗೆ ಗಲಾಟೆ ಮಾಡಿಕೊಂಡು 22-00 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದವರು. ದಿನಾಂಕ:06-10-2021 ರಂದು 06-00 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಹಿಂದಿರುವ ಹಲಸಿನ ಮರಕ್ಕೆ ನೈಲಾನ್ ಹಗ್ಗದಿಂದ ತನ್ನ ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಇದರ ಹೊರತು ತನ್ನ ಗಂಡನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸರಸ್ವತಿ ಬಸ್ಯಾ ಚಲವಾದಿ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಲವಾದಿಕೇರಿ, ಬೆಳಲೆ, ಪೋ: ಅರಸಾಪುರ, ತಾ: ಶಿರಸಿ ರವರು ದಿನಾಂಕ: 06-10-2021 ರಂದು 07-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶರೀಫ್ ತಂದೆ ಹಜೇರೆಸಾಬ್ ಮಾಂಡ್ವೇಕರ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೆಂದಲಗೇರಿ, ತಾ: ಮುಂಡಗೋಡ. ಸುದ್ದಿದಾರರ ತಂದೆಯವರಾದ ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದವರು, ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದೇ ವಿಪರೀತ ಸರಾಯಿ ಕುಡಿಯುತ್ತಿದ್ದುದರಿಂದ ದಿನಾಂಕ: 05-10-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 06-10-2021 ರಂದು ಬೆಳಿಗ್ಗೆ 10-00 ಗಂಟೆಯ ಅವಧಿಯಲ್ಲಿ ಮನೆಯಲ್ಲಿ ಮೃತಪಟ್ಟಿರುತ್ತಾರೆ. ಇದರ ಹೊರತು ಅವರ ಮರಣದ ಬಗ್ಗೆ ನಮಗೆ ಯಾವುದೇ ಸಂಶಯವಿರುವುದಿಲ್ಲ, ನನ್ನ ತಂದೆಯವರ ಮೃತದೇಹವು ಮುಂಡಗೋಡದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತದೆ. ಈ ಕುರಿತಿ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಭಾನಿ ತಂದೆ ಶರೀಫ್ ಸಾಬ್ ಮಾಂಡ್ವೇಕರ, ಪ್ರಾಯ-22 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಕೆಂದಲಗೇರಿ, ತಾ: ತಾ: ಮುಂಡಗೋಡ ರವರು ದಿನಾಂಕ: 06-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 07-10-2021 01:50 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080