ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 06-09-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 158/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾತ್ರೇಯ ತಂದೆ ರಾಜರಾಮ ಭಟ್ಟ, ಪ್ರಾಯ-48 ವರ್ಷ, ವೃತ್ತಿ-ಇಲೆಕ್ಟ್ರಿಕಲ್ ಕೆಲಸ, ಸಾ|| ಮಾಸ್ತಿಕಟ್ಟೆ, ಹೊಲನಗದ್ದೆ, ತಾ: ಕುಮಟಾ (ಇಕೋ ವಾಹನ ನಂ: ಕೆ.ಎ-20/ಎಮ್.ಸಿ-7749 ನೇದರ ಚಾಲಕ). ಈತನು ದಿನಾಂಕ: 06-09-2021 ರಂದು 14-20 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಇಕೋ ವಾಹನ ನಂ: ಕೆ.ಎ-20/ಎಮ್.ಸಿ-7749 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕುಮಟಾ ಕಡೆಯಿಂದ ಗೋಕರ್ಣ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಕುಮಟಾ ತಾಲೂಕಿನ ಖೈರೆ ಕ್ರಾಸ್ ಹತ್ತಿರ ತಲುಪಿದಾಗ ರಸ್ತೆಯ ಮೇಲಿರುವ ಮಳೆಯ ನೀರನ್ನು ನೋಡಿ ನಿಷ್ಕಾಳಜಿಯಿಂದ ಒಮ್ಮೇಲೆ ಬ್ರೇಕ್ ಹಾಕಿ ಇಕೋ ವಾಹನವನ್ನು ಪಲ್ಟಿ ಕೆಡವಿ, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಆರೋಪಿತನ ಹೆಂಡತಿ: ಶ್ರೀಮತಿ ರಮಾ @ ರಮಾದೇವಿ ಕೋಂ. ದತ್ತಾತ್ರೇಯ ಭಟ್ಟ, ಪ್ರಾಯ-45 ವರ್ಷ, ಇವಳಿಗೆ ತಲೆಯ ಹಿಂಬದಿಗೆ ಭಾರೀ ಗಾಯವಾಗಿ ಮೃತಳಾಗಲು ಹಾಗೂ ಮಗ: ಪ್ರಥಮ ದತ್ತಾತ್ರೇಯ ಭಟ್ಟ, ಪ್ರಾಯ-13 ವರ್ಷ, ಇವನಿಗೆ ಕುತ್ತಿಗೆಗೆ ಹಾಗೂ ಕಾಲಿಗೆ ತೆರಚಿದ ಗಾಯವಾಗಲು, ಮಗಳು: ಪ್ರತೀಕ್ಷಾ ಭಟ್ಟ, ಇವಳಿಗೆ ಬಲಭುಜಕ್ಕೆ ಗಾಯನೋವು ಆಗಲು ಕಾರಣನಾಗಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಮೈಕೈಗೆ ತೆರಚಿದ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ವಿಶ್ವೇಶ್ವರ ಅಡಿ, ಪ್ರಾಯ-52 ವರ್ಷ, ವೃತ್ತಿ-ಎಲ್.ಐ.ಸಿ ಏಜೆಂಟ್ ಕೆಲಸ, ಸಾ|| ನಾಗಬೀದಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 06-09-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 04-09-2021 ರಂದು 19-00 ಗಂಟೆಯಿಂದ ದಿನಾಂಕ: 05-09-2021 ರಂದು 15-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಗಾಂಧಿನಗರದ 7 ನೇ ಕ್ರಾಸಿನಲ್ಲಿ ಇರುವ ಪಿರ್ಯಾದಿಯವರ ಮನೆಗೆ ಪಿರ್ಯಾದಿಯವರು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗದ ತಟ್ಟೆಯನ್ನು ಯಾವುದೋ ಒಂದು ಗಟ್ಟಿ ವಸ್ತುವಿನಿಂದ ಮುರಿದು ಒಳಗಡೆ ಪ್ರವೇಶ ಮಾಡಿ, ದೇವರ ಕೋಣೆಯಲ್ಲಿದ್ದ ಅಲ್ಮೇರಾದ ಬಾಗಿಲನ್ನು ಯಾವುದೋ ಗಟ್ಟಿ ವಸ್ತುವಿನಿಂದ ಮೀಟಿ ತೆಗೆದು ಅದರಲ್ಲಿದ್ದ 30 ಗ್ರಾಂ ತೂಕದ ಕರಿಮಣಿ ಮಂಗಳಸೂತ್ರ-01, ಅ||ಕಿ|| 50,000/- ರೂಪಾಯಿ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಇಂದಿರಾ ಕೋಂ. ದತ್ತಾತ್ರೇಯ ಶೆಟ್ಟಿ, ಪ್ರಾಯ-62 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಗಾಂಧಿನಗರ, 7 ನೇ ಕ್ರಾಸ್, ತಾ: ಶಿರಸಿ ರವರು ದಿನಾಂಕ: 06-09-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಬಸವರಾಜ ಜಮಖಂಡಿ, ಪ್ರಾಯ-46 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಅಂಬೇವಾಡಿ, ಗಾಂವಠಾಣ, ದಾಂಡೇಲಿ. ಈತನು ದಿನಾಂಕ: 06-09-2021 ರಂದು ಬೆಳಿಗ್ಗೆ 10-00 ಗಂಟೆಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂವಠಾಣ ಮಾಳಂಗಿ ರಸ್ತೆಯ ಕೊಣಪಾ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ನಿಂತು ರಸ್ತೆಯ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂಕೆ-ಸಂಖ್ಯೆಯನ್ನು ಬರೆದ ಓ.ಸಿ ಚೀಟಿ-01 ಹಾಗೂ ಓ.ಸಿ ಜೂಗಾರಾಟ ನಡೆಸಿದ ನಗದು ಹಣ 860/- ರೂಪಾಯಿ ಹಾಗೂ ಓ.ಸಿ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ, ಪಿ.ಎಸ್.ಐ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 06-09-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಲಿಸಾಬ್ ತಂದೆ ರಾಜೇಸಾಬ್ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಂಧಿನಗರ, ದಾಂಡೇಲಿ. ಈತನು ದಿನಾಂಕ: 06-09-2021 ರಂದು ಬೆಳಿಗ್ಗೆ 11-15 ಗಂಟೆಯಿಂದ 11-30 ಗಂಟೆಯ ನಡುವೆ ದಾಂಡೇಲಿಯ ಗಾಂಧಿನಗರದಲ್ಲಿರುವ ತನ್ನ ಮನೆಯಲ್ಲಿ ತನ್ನ ಮಗ ಗಾಯಾಳು ಇಬ್ರಾಹಿಂ ಈತನೊಂದಿಗೆ ಇಬ್ರಾಹಿಂ ಈತನು ಯಾರಿಗೋ ಹಣ ಕೊಡಬೇಕಾಗಿದ್ದ ವಿಷಯದಲ್ಲಿ ಜಗಳ ತೆಗೆದು ‘ರಾಂಡಕೆ, ಬೋಸಡಿಕೆ ‘ಅಂತಾ ಅವಾಚ್ಯವಾಗಿ ಬೈಯ್ದು, ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆಯಿಂದ ಮೈಗೆ ಹೊಡೆದು, ಅಲ್ಲದೇ ಅರೆಯುವ ಕಲ್ಲಿನಿಂದ ಇಬ್ರಾಹಿಂ ಈತನ ತಲೆಗೆ ಹೊಡೆದು ಗಾಯ ಪಡಿಸಿದ್ದಲ್ಲದೇ, ’ನಿನ್ನನ್ನು ಕೊಂದೇ ಬಿಡುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಫಾತೀಮಾ ಅಲಿಸಾಬ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಗೃಹಿಣಿ, ಸಾ|| ಗಾಂಧಿನಗರ, ದಾಂಡೇಲಿ ರವರು ದಿನಾಂಕ: 06-09-2021 ರಂದು 13-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಹನುಮಂತ ಹರಿಶ್ಚಂದ್ರ ರಾಠೋಡ, ಪ್ರಾಯ-40 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಸಾ ಮಿಲ್ ಚಾಳ, ಹಳೇ ದಾಂಡೇಲಿ, 2]. ಸಾಯಿಪ್ರಸಾದ ರಾಮ ಚೆನ್ನಪ್ಪಗೋಳ, ಪ್ರಾಯ-21 ವರ್ಷ, ವೃತ್ತಿ-ವೆಲ್ಡರ ಕೆಲಸ, ಸಾ|| ಕನ್ನಡ ಶಾಲೆಯ ಹತ್ತಿರ, ಹಳೇ ದಾಂಡೇಲಿ, 3]. ಸಂತೋಷ ತಂದೆ ಮತ್ತಯ್ಯ ಮಾದರ, ಪ್ರಾಯ-22 ವರ್ಷ, ವೃತ್ತಿ-ಸಪ್ಲಾಯರ ಕೆಲಸ, ಸಾ|| ಹಳೇ ದಾಂಡೇಲಿ, 4]. ಪೀರಪ್ಪ ತಂದೆ ವಸಂತ ಲಮಾಣಿ, ಪ್ರಾಯ-48 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಲಮಾಣಿ ಚಾಳ, ದಾಂಡೇಲಿ, 5]. ಅಶೋಕ ತಂದೆ ಕುಬ್ಬಣ್ಣ ಲಮಾಣಿ, ಪ್ರಾಯ-47 ವರ್ಷ, ವೃತ್ತಿ-ಕಂಟ್ರಾಕ್ಟರ, ಸಾ|| ಕನ್ನಡ ಶಾಲೆಯ ಹತ್ತಿರ, ಹಳೇ ದಾಂಡೇಲಿ, 6]. ಸ್ಟೀವನ್ ಯೇಸಯ್ಯ ಮೈತಕುರಿ, ಪ್ರಾಯ-32 ವರ್ಷ, ವೃತ್ತಿ-ಕೇಬಲ್ ಅಪರೇಟರ್, ಸಾ|| ಕನ್ನಡ ಶಾಲೆಯ ಹತ್ತಿರ, ಹಳೇ ದಾಂಡೇಲಿ, 7]. ಅನಿಲ ಅಶೋಕ ಬವರಾ @ ಲಮಾಣಿ, ಪ್ರಾಯ-20 ವರ್ಷ, ವೃತ್ತಿ-ರೆಸಾರ್ಟನಲ್ಲಿ ಕೆಲಸ, ಸಾ|| ಹಳೇ ಕೊರ್ಟ ಹತ್ತಿರ, ಹಳೇ ದಾಂಡೇಲಿ, 8]. ಷಣ್ಮುಖ ತಂದೆ ಶಿವಾ ಅಂಕೋಲೆಕರ್, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಸಾ ಮಿಲ್ ಚಾಳ, ಹಳೇ ದಾಂಡೇಲಿ, 9]. ಹನುಮಂತ ಪ್ರಕಾಶ ತಳವಾರ, ಪ್ರಾಯ-25 ವರ್ಷ, ವೃತ್ತಿ-ನ್ಯೂಸ ಪೇಪರ ವ್ಯಾಪಾರ, ಸಾ|| ಸಾ ಮಿಲ್ ಚಾಳ, ಹಳೇ ದಾಂಡೇಲಿ. ಈ ನಮೂದಿತ ಆರೋಪಿತರು ದಿನಾಂಕ: 06-09-2021 ರಂದು 13-30 ಗಂಟೆಗೆ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ದಾಂಡೇಲಿಯ ಕನ್ನಡ ಶಾಲೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನೆಲದ ಮೇಲೆ ಸುತ್ತಲು ಕುಳಿತು ಒಬ್ಬರಿಗೆ ಅನ್ಯಾಯದ ಲಾಭ ಹಾಗೂ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟವನ್ನು ನಡೆಸುತ್ತಾ ಅಂದರ್-ಬಾಹರ್ ಜುಗಾರಾಟದ ಸಾಧನ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ನಗದು ಹಣ ಒಟ್ಟೂ 3,900/- ರೂಪಾಯಿಗಳ ಸಮೇತ ದಾಳಿಯ ಕಾಲಕ್ಕೆ ಪಿರ್ಯಾದಿಯವರಿಗೆ ಎಲ್ಲಾ ಆರೋಪಿತರು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 06-09-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 06-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 52/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗಪ್ಪ ತಂದೆ ಬೆಚ್ಚು ಗೌಡ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಬಾರಕೊಡ್ಲ, ತಾ: ಅಂಕೋಲಾ. ಈತನು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದವನು, ವಿಪರೀತ ಸರಾಯಿ ಕುಡಿದು ಕೂಲಿ ಕೆಲಸ ಮಾಡಿ ಅಲ್ಲಿ ಇಲ್ಲಿ ಮಲಗಿಕೊಳ್ಳುತ್ತಿದ್ದವನು, ದಿನಾಂಕ: 06-09-2021 ರಂದು ಮಧ್ಯಾಹ್ನ 14-00 ಗಂಟೆಯಿಂದ ಸಾಯಂಕಾಲ 18-15 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತಂಗುವ ಸ್ಥಳದಲ್ಲಿ ಮಲಗಿಕೊಂಡಿದ್ದವನು, ಮಲಗಿದ್ದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಹಾಸ ತಂದೆ ಬೆಚ್ಚು ಗೌಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಬಾರಕೊಡ್ಲ, ತಾ: ಅಂಕೋಲಾ ರವರು ದಿನಾಂಕ: 06-09-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಸ್ಟೆಲ್ಲಾ ತಂದೆ ತಿಮೋಥಿ ಜೇಮ್ಸ್, ಪ್ರಾಯ-24 ವರ್ಷ, ವೃತ್ತಿ-ಐ.ಟಿ ಕಂಪನಿ (ವರ್ಕ್ ಫ್ರಾಮ್ ಹೋಮ್) ಕೆಲಸ, ಸಾ|| ಮಾರ್ಕೆಟ್ ಏರಿಯಾ, ಗಣೇಶಗುಡಿ, ತಾ: ಜೋಯಿಡಾ. ಪಿರ್ಯಾದಿಯ ಮಗಳಾದ ಇವಳು ಕಳೆದ 3-4 ವರ್ಷಗಳ ಹಿಂದೆ ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾವನ್ನು ಒಳ್ಳೆಯ ಅಂಕಗಳೊಂದಿಗೆ ಮುಗಿಸಿ, ಕಳೆದ 2-3 ವರ್ಷಗಳಿಂದ ಕೆಲಸವಿಲ್ಲದೇ ಮನೆಯಲ್ಲಿ ಖಾಲಿ ಉಳಿದು ಬೇಸರ ಮಾಡಿಕೊಂಡಿದ್ದವಳಿಗೆ ಕಳೆದ ತಿಂಗಳು ಬೆಂಗಳೂರಿನ ಐ.ಟಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಾಗಿ ಅಲ್ಲಿ ಕೆಲಸವು ಕಷ್ಟಕರವಾಗಿದ್ದರಿಂದ ಮತ್ತು ವಾತಾವರಣ ಹಿಡಿಸದೇ ಇರುವುದರಿಂದ ಬಿಟ್ಟು ಬಂದಿದ್ದು, ಕಳೆದ 15 ದಿನಗಳಿಂದ ಬೆಂಗಳೂರಿನ ಎಚ್.ಆರ್.ಎಸ್ ಲೇಔಟ್ ನ ಬ್ರಿಟಿಷ್ ಓಒರಿಯಂಟ್ ಇನ್ಫೋಟೆಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದವಳಿಗೆ, ಕಳೆದ 15 ದಿನಗಳ ಸಂಬಳವಾಗಿ 6,000/- ರೂಪಾಯಿ ಹಣವನ್ನು ನೀಡಿದ್ದು, ಕಳೆದ 2-3 ವರ್ಷಗಳಿಂದ ಒಳ್ಳೆಯ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದವಳು, ತನಗಿಷ್ಟವಾದ ರೀತಿಯಲ್ಲಿ ಕೆಲಸ ಸಿಗದೇ ಸಿಕ್ಕ ಕೆಲಸದಲ್ಲಿ ತೃಪ್ತಿ ಇಲ್ಲದೇ ಮನೆಯಲ್ಲಿ ಮನೆಯ ಜನರು ಯಾರೂ ಇಲ್ಲದ ವೇಳೆಯಲ್ಲಿ ದಿನಾಂಕ: 05-09-2021 ರಂದು ಮಧ್ಯಾಹ್ನ 12-30 ಗಂಟೆಯಿಂದ 14-30 ಗಂಟೆಯ ಅವಧಿಯಲ್ಲಿ ತಮ್ಮ ಮನೆಯಲ್ಲಿಯ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ಅವಳ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ತಿಮೋಥಿ ಜೇಮ್ಸ್, ಪ್ರಾಯ-52 ವರ್ಷ, ವೃತ್ತಿ-ಚಾಲಕ, ಸಾ|| ಮಾರ್ಕೆಟ್ ಏರಿಯಾ, ಗಣೇಶಗುಡಿ, ತಾ: ಜೋಯಿಡಾ ರವರು ದಿನಾಂಕ: 06-09-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 07-09-2021 04:44 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080