ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-04-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 109, 341, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಪ್ರಶಾಂತ ನಾಯಕ, ಸಾ|| ಬಾಸಗೋಡ, ತಾ: ಅಂಕೋಲಾ ಮತ್ತು ಇಬ್ಬರು ವ್ಯಕ್ತಿಗಳು (ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ). ದಿನಾಂಕ: 02-04-2021 ರಂದು ಅಂಕೋಲಾ ಪುರಸಭಾ ವ್ಯಾಪ್ತಿಯ ಶ್ರೀ ಕಣಕಣೇಶ್ವರ ದೇವಸ್ಥಾನದಿಂದ ಶಿರಕುಳಿ ವರೆಗಿನ ಕಾರವಾರ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯ ಕಾರ್ಯಕ್ರಮವನ್ನು ಅಂಕೋಲಾ ಶಹರದ ಶ್ರೀ ಕಣಕಣೇಶ್ವರ ದೇವಸ್ಥಾನದ ಹತ್ತಿರ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಪ್ರಯುಕ್ತ ಶ್ರೀ ಕಣಕಣೇಶ್ವರ ದೇವಸ್ಥಾನದ ಹತ್ತಿರ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿಯರಾದ ಮಾನ್ಯ ಶ್ರೀಮತಿ ರೂಪಾಲಿ ನಾಯ್ಕ ರವರ ಭಾವಚಿತ್ರವಿರುವ ಪ್ಲೆಕ್ಸ್ ಬೋರ್ಡನ್ನು ಹಾಕಿದ್ದು ಇರುತ್ತದೆ. ಗುದ್ದಲಿ ಪೂಜಾ ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ಆರೋಪಿತನಾದ ಪ್ರಶಾಂತ ನಾಯಕ ಈತನು ಯಾವುದೋ ದುರುದ್ದೇಶದಿಂದ ಕಾರವಾರ-ಅಂಕೋಲಾ ಕ್ಷೇತ್ರದ ನಮ್ಮ ಜನಪ್ರಿಯ ಶಾಸಕಿಯರಾದ ಶ್ರೀಮತಿ ರೂಪಾಲಿ ನಾಯ್ಕ ಇವರಿಗೆ ಅವಮಾನ ಮಾಡುವ ದುರುದ್ದೇಶದಿಂದ ಕಾರ್ಯಕ್ರಮ ಮುಗಿದ ಸ್ವಲ್ಪ ಸಮಯದೊಳಗೆ ಶ್ರೀ ಕಣಕಣೇಶ್ವರ ದೇವಸ್ಥಾನದ ಹತ್ತಿರ ಹಾಕಿರುವ ಸ್ವಾಗತ ಕೋರುವ ಫ್ಲೆಕ್ಸ್ ಬೋರ್ಡ್ ನ್ನು ಹರಿದು ಹಾಕುವಂತೆ ಇಬ್ಬರು ವ್ಯಕ್ತಿಗಳಿಗೆ ಪ್ರೇರೇಪಿಸಿದ್ದಲ್ಲದೇ, ಆ ಇಬ್ಬರು ವ್ಯಕ್ತಿಗಳು ಶ್ರೀ ಕಣಕಣೇಶ್ವರ ದೇವಸ್ಥಾನದ ಹತ್ತಿರ ಅಳವಡಿಸಿದ ಸ್ವಾಗತ ಕೋರುವ ಫ್ಲೆಕ್ಸ್ ಬೋರ್ಡ್ ನ್ನು ಹರಿದು ಹಾಕುತ್ತಿದ್ದು, ಈ ಬಗ್ಗೆ ಪಿರ್ಯಾದಿ ಮತ್ತು ಸಾಕ್ಷಿದಾರರು ಆ ವ್ಯಕ್ತಿಗಳ ಹತ್ತಿರ ವಿಚಾರಿಸಲು ಹಾಗೂ ಫ್ಲೆಕ್ಸ್ ಬೋರ್ಡ್ ನ್ನು ಹರಿದು ಹಾಕುವುದನ್ನು ತಡೆಯಲು ಹೋಗುತ್ತಿದ್ದಾಗ ಪಿರ್ಯಾದಿಗೆ ಮತ್ತು ಸಾಕ್ಷಿದಾರರಿಗೆ ಅಡ್ಡ ಹಾಕಿ ನಿಲ್ಲಿಸಿದ್ದು, ಆಗ ಪಿರ್ಯಾದಿ ಮತ್ತು ಸಾಕ್ಷಿದಾರರು ಆ ವ್ಯಕ್ತಿಗಳ ಹತ್ತಿರ ‘ಕಾರ್ಯಕ್ರಮ ಮಗಿದ ಸ್ವಲ್ಪ ಸಮಯ ಆಗುವುದರೊಳಗೆ ನೀವು ಯಾಕೆ ಫ್ಲೆಕ್ಸ್ ಬೋರ್ಡ್ ಗಳನ್ನು ಹರಿದು ಹಾಕುತ್ತಿದ್ದೀರಿ?’ ಅಂತಾ ವಿಚಾರಿಸಿದಾಗ ಅವರು ಕೆಟ್ಟ ಕೆಟ್ಟ ಶಬ್ದಗಳಿಂದ ಬೈಯ್ದು ‘ನಮಗೆ ಕೇಳಲು ನೀವು ಯಾರು? ನಾವು ನಮ್ಮ ಕಾಂಟ್ರಾಕ್ಟರ್ ಪ್ರಶಾಂತ ನಾಯಕ ಹೇಳಿದಂತೆ ಹರಿದು ಹಾಕುತ್ತೇವೆ’ ಅಂತಾ ಅವರು ತಿಳಿಸರುತ್ತಾರೆ. ಆದರೂ ನಾವು ‘ಹರಿದು ಹಾಕಬೇಡಿ’ ಎಂದು ತಿಳಿಸಿದರೂ ಅವರು ಹರಿದು ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಕೃಷ್ಣಾ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ವ್ಯಾಪಾರ, ಸಾ|| ಬೇಳಾಬಂದರ, ತಾ: ಅಂಕೋಲಾ ರವರು ದಿನಾಂಕ: 07-04-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಟಿಪ್ಪರ್ ವಾಹನ ನಂ: ಜಿ.ಎ-09/ಯು-4440 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 07-04-2021 ರಂದು 12-45 ಗಂಟೆಗೆ ತಾನು ಚಾಲನೆ ಮಾಡುತ್ತಿದ್ದ ಟಿಪ್ಪರ್ ವಾಹನ ನಂ: ಜಿ.ಎ-09/ಯು-4440 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಅಂಕೋಲಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಕುಮಟಾ ಪಟ್ಟಣದ ಮೂರೂರು ಕ್ರಾಸ್ ಹತ್ತಿರ ಪಿರ್ಯಾದಿಯ ಚಿಕ್ಕಪ್ಪಾ ಉಮಾಕಾಂತ ತಂದೆ ಗಣೇಶ ವೆಂಗೂರ್ಲೇಕರ್, ಇವರು ಸವಾರಿ ಮಾಡಿಕೊಂಡು ರಸ್ತೆ ದಾಟುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-02/ಜೆ.ಈ-9185 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಉಮಕಾಂತ ಇವರು ರಸ್ತೆಗೆ ಬಿದ್ದು ಎದೆಯ ಎಡಭಾಗದ ಮೂಳೆ ಮುರಿದು ಭಾರೀ ಗಾಯವಾಗಲು, ತಲೆಗೆ ಸಾದಾ ಗಾಯವಾಗಲು ಹಾಗೂ ಮೋಟಾರ್ ಸೈಕಲ್ ಜಖಂ ಆಗಲು ಆರೋಪಿ ಟಿಪ್ಪರ್ ವಾಹನದ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ಚಂದ್ರಕಾಂತ ವೆಂಗೂರ್ಲೇಕರ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿದ್ದನಬಾವಿ, ಕುಮಟಾ ರವರು ದಿನಾಂಕ: 07-04-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ಠಾಣಾ ಗುನ್ನಾ ನಂ: 81/2021, ಕಲಂ: 279, 337, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದರಂತೆ ಪ್ರಕರಣ ದಾಖಲಾಗಿರುತ್ತದೆ.

ಸದರಿ ಅಪಘಾತದಲ್ಲಿ ಎದೆಗೆ ಹಾಗೂ ತಲೆಗೆ ಗಂಭೀರ ಗಾಯಗೊಂಡ ಗಾಯಾಳು ಉಮಾಕಾಂತ ತಂದೆ ಗಣೇಶ ವೆಂಗೂರ್ಲೇಕರ್, ಇವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 07-04-2021 ರಂದು 18-23 ಗಂಟೆಗೆ ಮೃತಪಟ್ಟಿದ್ದು, ಆದಕಾರಣ ಈ ಪ್ರಕರಣಕ್ಕೆ ಕಲಂ: 304(ಎ) ಐಪಿಸಿ ನೇದನ್ನು ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 447, 341, 323, 504, 506(2) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ಹನುಮಂತ ನಾಯ್ಕ, ಸಾ|| ದೊಡ್ಡಗುಂದ, ಮಂಕಿ, ತಾ: ಹೊನ್ನಾವರ. ಈತನು ದಿನಾಂಕ: 06-04-2021 ರಂದು 22-30 ಗಂಟೆಗೆ ದೊಡ್ಡಗುಂದದಲ್ಲಿರುವ ಪಿರ್ಯಾದಿಯ ಮನೆಯ ಕಂಪೌಂಡ್ ಒಳಗೆ ಬಂದು ಪಿರ್ಯಾದಿಯ ಗಂಡನನ್ನು ಉದ್ದೇಶಿಸಿ ‘ಏ ಬೋಳಿ ಮಗನೆ ಉಲ್ಲಾಸ, ಬಾ. ತಾನು ನಿನ್ನ ಮನೆಯ ಗೇಟಿನ ಒಳಗೆ ಬಂದಿದ್ದೇನೆ. ನಿನ್ನನ್ನು ನೋಡಿಕೊಳುತ್ತೇನೆ’ ಅಂತಾ ಹೇಳಿ ಬೈಯ್ಯುತ್ತಿದ್ದಾಗ ಪಿರ್ಯಾದಿಯ ಗಂಡನು ‘ಏನು?’ ಅಂತಾ ವಿಚಾರಿಸುತ್ತಾ ಮುಂದೆ ಹೋದಾಗ ಆರೋಪಿತನು ಪಿರ್ಯಾದಿಯ ಗಂಡನಿಗೆ ಬೈಯ್ದು ಕೈಯಿಂದ ದೂಡಿ ಹಾಕಿ, ಆತನ ಕೈಯಲ್ಲಿದ್ದ ಬಿಯರ್ ಬಾಟಲಿಯನ್ನು ಅಲ್ಲೆ ಒಡೆದು ‘ಬಾ ಬೋಳಿ ಮಗನೆ, ನಿನಗೆ ಒಂದು ಗತಿ ಕಾಣಿಸುತ್ತೇನೆ’ ಅಂತಾ ಬಾಟಲಿ ಹಿಡಿದು ಪಿರ್ಯಾದಿಯ ಗಂಡನಿಗೆ ಹೊಡೆಯಲು ಬರುತ್ತಿರುವುದನ್ನು ನೋಡಿ ಪಿರ್ಯಾದಿ ಹಾಗೂ ಪಿರ್ಯಾದಿಯ ಮಾವ ಈಶ್ವರ ನಾಯ್ಕ ಕೂಡಿ ಕೂಗುತ್ತಾ ಅಲ್ಲಿಗೆ ಹೋಗುವಷ್ಟರಲ್ಲಿ ಅಕ್ಕಪಕ್ಕದವರು ಬರುವುದನ್ನು ನೋಡಿದ ಆರೋಪಿತನು ಬಾಟಲಿಯನ್ನು ಅಲ್ಲೇ ಬಿಸಾಡಿ ‘ಏ ಬೋಳಿ ಮಗನೆ ಉಲ್ಲಾಸ, ನಿನಗೆ ಇನ್ನೊಂದು ದಿನ ನೋಡಿಕೊಳ್ಳುತ್ತೇನೆ’ ಅಂತಾ ಓಡಿ ಹೋಗಿದ್ದಲ್ಲದೇ, ಈ ಹಿಂದೆಯೂ ಸಹ ಪಿರ್ಯಾದಿಯ ಗಂಡನಿಗೆ ಅವಾಚ್ಯವಾಗಿ ಬೈಯ್ದು ಜೀವ ಬೆದರಿಕೆ ಹಾಕಿದ್ದಲ್ಲದೇ, ಕಳೆದ 1 ತಿಂಗಳ ಹಿಂದೆ ಪಿರ್ಯಾದಿಯ ಗಂಡನಿಗೆ ಪಿರ್ಯಾದಿಯ ಮನೆಯ ಹತ್ತಿರ ಅಡ್ಡಗಟ್ಟಿ ತಡೆದು ಬೈಯ್ದಾಡಿದ ಬಗ್ಗೆ ಪಿರ್ಯಾದಿ ಶ್ರೀಮತಿ ಶೋಭಾ ಕೋಂ. ಉಲ್ಲಾಸ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದೊಡ್ಡಗುಂದ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 07-04-2021 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭಾಸ್ಕರ ತಂದೆ ನಾರಾಯಣ ಗೌಡ, ಸಾ|| ಅನಂತವಾಡಿ, ಕೋಟಾ, ತಾ: ಹೊನ್ನಾವರ (ಲಾರಿ ನಂ: ಕೆ.ಎ-30/6313 ನೇದರ ಚಾಲಕ). ಈತನು ದಿನಾಂಕ: 07-04-2021 ರಂದು ಬೆಳಿಗ್ಗೆ 09-00 ಗಂಟೆಗೆ ಮಂಕಿಯಿಂದ ಹಾಮಕ್ಕಿಗೆ ಹಾದು ಹೋದ ರಸ್ತೆಯ ಬೊಳಕಟ್ಟೆಯಲ್ಲಿ ತನ್ನ ಲಾರಿ ನಂ: ಕೆ.ಎ-30/6313 ನೇದನ್ನು ಇಡಗುಂಜಿ ರಸ್ತೆಯ ಕಡೆಯಿಂದ ಹಾಮಕ್ಕಿ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗಿ, ಹಾಮಕ್ಕಿ ಕಡೆಯಿಂದ ಮಂಕಿ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-2138 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ವಿನಾಯಕ ತಂದೆ ತಿಪ್ಪಯ್ಯ ನಾಯ್ಕ ಇವನಿಗೆ ಬಲಗಾಲ ಮೊಣಗಂಟಿನ ಹತ್ತಿರ ಒಳನೋವು, ಮೂಗಿಗೆ ಗಾಯ ಹಾಗೂ ಮೋಟಾರ್ ಸೈಕಲ್ ಹಿಂದೆ ಕುಳಿತ ದಿವಾಕರ ತಂದೆ ಪಾಂಡು ನಾಯ್ಕ, ಇವನಿಗೆ ಬಲಗಾಲ ಮೊಣಗಂಟಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಕೇಶವ ತಂದೆ ಸಣ್ಣಯ್ಯ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಗುತ್ತಿಗೆದಾರರು, ಸಾ|| ಹಾಮಕ್ಕಿ, ಪೋ: ಬಳಕೂರ, ತಾ: ಹೊನ್ನಾವರ ರವರು ದಿನಾಂಕ: 07-04-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 448, 323, 504, 506(2) ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಉಲ್ಲಾಸ ಈಶ್ವರ ನಾಯ್ಕ, 2]. ಈಶ್ವರ ಅಣ್ಣಪ್ಪ ನಾಯ್ಕ, ಸಾ|| (ಇಬ್ಬರು) ದೊಡ್ಡಗುಂದ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 06-04-2021 ರಂದು 23-00 ಗಂಟೆಗೆ ದೊಡ್ಡಗುಂದದಲ್ಲಿರುವ ಪಿರ್ಯಾದಿಯ ಮನೆಯ ಹತ್ತಿರ ಕಟ್ಟಿಗೆಯ ಬಡಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಸಡಿ ಮಗನೆ, ಸೂಳಾ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಪಿರ್ಯಾದಿ ಹಾಗೂ ಪಿರ್ಯಾದಿಯ ಹೆಂಡತಿ ಸುಲೋಚನಾ ಇವರಿಗೆ ಕೈಯಿಂದ ದೂಡಿ ಹಾಕಿ, ಪಿರ್ಯಾದಿಗೆ ‘ಮನೆಗೆ ಬೆಂಕಿ ಹಾಕುತ್ತೇವೆ’ ಅಂತಾ ಬೆದರಿಕೆ ಹಾಕಿದ್ದಲ್ಲದೇ, ಪಿರ್ಯಾದಿಯ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಮನೆಯ ಜನರಿಗೆ ಬೆದರಿಕೆ ಹಾಕಿದ್ದು, ಆಗ ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯ ಜನರು ಕೂಗಿಕೊಂಡಾಗ ಆರೋಪಿತರು ಪೊಲೀಸರು ಬಂದ ಸುದ್ದಿ ತಿಳಿದು, ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯ ಜನರನ್ನು ‘ಬಿಡುವುದಿಲ್ಲ’ ಅಂತಾ ಹೇಳುತ್ತಾ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಹುನುಮಂತ ತಂದೆ ಮಾಬ್ಲೇಶ್ವರ ನಾಯ್ಕ ಪ್ರಾಯ-66 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದೊಡ್ಡಗುಂದ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 07-04-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 3(a), 4 The Explosive Substances Act-1908ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 05-04-2021 ರಂದು ಬೆಳಿಗ್ಗೆ 09-00 ಗಂಟೆಯಿಂದ ದಿನಾಂಕ: 06-04-2021 ರಂದು ಬೆಳಿಗ್ಗೆ 11-00 ಗಂಟೆಯ ನಡುವಿನ ಅವಧಿಯಲ್ಲಿ ಸನವಳ್ಳಿ ಗ್ರಾಮ ಅರಣ್ಯ ಸರ್ವೇ ನಂ: 83 ರಲ್ಲಿನ ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಎಲ್ಲಿಂದಲೋ ಸ್ಫೋಟಕವನ್ನು ಸಂಗ್ರಹಿಸಿಕೊಂಡು ಬಂದು ಅದರಿಂದ ತಯಾರಿಸಿದ ವಸ್ತುವನ್ನು ಅರಣ್ಯ ಪ್ರದೇಶದಲ್ಲಿ ಇರಿಸಿ, ಸನವಳ್ಳಿ ಗ್ರಾಮದ ಮಂಜುನಾಥ ಅಪ್ಪಣ್ಣ ನಾಯರ ಇವರ ಹೋರಿಗೆ ಗಾಯ ಪಡಿಸಿದ್ದು, ಅಲ್ಲದೇ ಮಾನವರಿಗಾಗಲೀ ಅಥವಾ ಪ್ರಾಣಿಗಳಿಗಾಗಲೀ ಜೀವಹಾನಿ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದವರ ಮೇಲೆ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಿರೀಶ ತಂದೆ ಲಕ್ಷ್ಮಣರಾವ್ ಕೋಳೇಕರ, ಪ್ರಾಯ-36 ವರ್ಷ, ವೃತ್ತಿ-ಉಪ ವಲಯ ಅರಣ್ಯಾಧಿಕಾರಿ, ಶಾಖೆ ಮತ್ತು ವಲಯ, ಮುಂಡಗೋಡ, ಸಾ|| ನಂದೀಶ್ವರ ನಗರ, ತಾ: ಮುಂಡಗೋಡ ರವರು ದಿನಾಂಕ: 07-04-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-04-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶಂಕರ ತಂದೆ ಗಿರಗೋಲಿ ಸಿದ್ದಿ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೇದೆಹಕಲ್ಲು, ಪೋ: ಹಾಸಣಗಿ, ತಾ: ಯಲ್ಲಾಪುರ. ಪಿರ್ಯಾದಿಯವರ ತಂದೆಯವರಾದ ಇವರು ಸರಾಯಿ ಕುಡಿಯುವ ಚಟವನ್ನು ಬೆಳಸಿಕೊಂಡಿದವರಾಗಿದ್ದು, ದಿನಾಂಕ: 06-04-2021 ರಂದು ಸಮಯ ಸುಮಾರು 23-00 ಗಂಟೆಗೆ ತನ್ನ ಮನೆಯ ಪಕ್ಕದ ರಸ್ತೆಯಲ್ಲಿ ಸರಾಯಿ ಕುಡಿದ ನಶೆಯಲ್ಲಿ ಟಿಮಿಟ್ ಎಂಬ ಕ್ರಿಮಿನಾಶಕ ಔಷಧಿಯನ್ನು ಸರಾಯಿಯಲ್ಲಿ ಮಿಶ್ರಣ ಮಾಡಿಕೊಂಡು ಕುಡಿದು ನರಳಾಡುತ್ತಿದ್ದವರಿಗೆ ಚಿಕಿತ್ಸೆಗೆ ಅಂತಾ ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾದೇ ದಿನಾಂಕ: 07-04-2021 ರಂದು ಸಮಯ ಸುಮಾರು ಬೆಳಗಿನ ಜಾವ 01-08 ಗಂಟೆಗೆ ಮೃತಪಟ್ಟಿರುತ್ತಾರೆ. ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕಮಲಾಕರ ತಂದೆ ಶಂಕರ ಸಿದ್ದಿ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ||  ಬೇದೆಹಕಲ್ಲು, ಪೋ: ಹಾಸಣಗಿ, ತಾ: ಯಲ್ಲಾಪುರ ರವರು ದಿನಾಂಕ: 07-04-2021 ರಂದು 09-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ವಿಲಾಸ ತಂದೆ ಸೂರ್ಯದತ್ತ ಗೌಡ್ರು, ಪ್ರಾಯ-25 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ ಹಾಗೂ ಕೃಷಿ ಕೆಲಸ, ಸಾ|| ಸಂತೋಳ್ಳಿ, ಕುಪಗಡ್ಡೆ, ತಾ: ಶಿರಸಿ. ನಮೂದಿತ ಮೃತನು ವೆಲ್ಡಿಂಗ್ ಕೆಲಸದ ಸಮುವಾಗಿ ಅವರಿವರಿಂದ ಕೈಗಡ ಸಾಲ ಮಾಡಿ ಮಷೀನ್ ಖರೀದಿಸಿದ್ದು, ಕೈಗಡ ಸಾಲವನ್ನು ನಿಗದಿತ ಸಮಯದಲ್ಲಿ ತೀರಿಸಲು ಆಗದೇ ಇದ್ದುದರಿಂದ, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 05-04-2021 ರಂದು ಮಧ್ಯಾಹ್ನ 02-30 ಗಂಟೆಯ ಪೂರ್ವದಲ್ಲಿ ಸಂತೋಳ್ಳಿ-ಕಿರವತ್ತಿ ರಸ್ತೆಯಲ್ಲಿ ಕಳೆನಾಶಕ ವಿಷ ಸೇವಿಸಿ, ಅಸ್ವಸ್ಥಗೊಂಡು ಉಪಚಾರದ ಕುರಿತು ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 07-04-2021 ರಂದು ಬೆಳಗಿನ ಜಾವ 02-00 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ವಿಕಾಸ ತಂದೆ ಸೂರ್ಯದತ್ತ ಗೌಡ್ರು, ಪ್ರಾಯ-24 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂತೋಳ್ಳಿ, ಕುಪಗಡ್ಡೆ, ತಾ: ಶಿರಸಿ ರವರು ದಿನಾಂಕ: 07-04-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 08-04-2021 05:42 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080