ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 07-04-2022
at 00:00 hrs to 24:00 hrs
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ, ಕಾರವಾರ
ಅಪರಾಧ ಸಂಖ್ಯೆಃ 06/2022, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತನು ಮೊಬೈಲ್ ನಂ: 8046323796 ನೇದರ ಬಳಕೆದಾರನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಪುಣೆಯ ಒಂದು ಆಸ್ಪತ್ರೆಯಿಂದ ಔಷಧಿಯನ್ನು ಖರೀದಿಸಿದ್ದು, ಪುಣಾ ಆಸ್ಪತ್ರೆಯವರು ಔಷಧಿಯನ್ನು DTDC ಕೊರಿಯರ್ ಗೆ ಕಳುಹಿಸಿದ್ದರು. ಪಿರ್ಯಾದಿಯವರು ದಿನಾಂಕ: 02-04-2022 ರಂದು ಸಾಯಂಕಾಲ 04-00 ಗಂಟೆಯ ಸಮಯಕ್ಕೆ ಅವರ ಕೊರಿಯರ್ ಬರದೇ ಇರುವುದರಿಂದ ಅವರು DTDC ಕೊರಿಯರ್ ನ ಕಸ್ಟಮರ್ ಕೇರ್ ದೂರವಾಣಿ ಸಂಖ್ಯೆಯನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದು, ಆಗ ಅವರಿಗೆ ನಮೂದಿತ ಆರೋಪಿತನ ಮೊಬೈಲ್ ನಂ: 8046323796 ನೇದು ಸಿಕ್ಕಿದ್ದು, ಅದಕ್ಕೆ ಅವರು ಕರೆ ಮಾಡಿ ವಿಚಾರಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯು ‘ANYDESK APP ನ್ನು ನಿಮ್ಮ ಮೊಬೈಲಿನಲ್ಲಿ ಇನಸ್ಟಾಲ್ ಮಾಡಿ. ನಾವು ಕೊರಿಯರ್ ತಂದು ಕೊಡುತ್ತೇವೆ’ ಎನ್ನುವುದಾಗಿ ತಿಳಿಸಿದ್ದು, ಅದರಂತೆ ಪಿರ್ಯಾದಿಯವರು ANYDESK APP ನ್ನು ಇನಸ್ಟಾಲ್ ಮಾಡಿಕೊಂಡು, ಅದರಲ್ಲಿ ಆತನು ತಿಳಿಸಿದಂತೆ ಅವರ ಐ.ಡಿ.ಬಿ.ಐ ಹಾಗೂ ಎಚ್.ಡಿ.ಎಫ್.ಸಿ ಬ್ಯಾಂಕ್ ಡೆಬಿಟ್ ಕಾರ್ಡಿನ ನಂಬರ್ ಹಾಗೂ ಸಿ.ವಿ.ವಿ ನಂಬರ್ ಹಾಕಿದ್ದು, ಆಗ ಓ.ಟಿ.ಪಿ ಬಂದಿದ್ದು, ಅದನ್ನು ಕೂಡಾ ಸದರಿ ಆ್ಯಪ್ ನಲ್ಲಿ ನಮೂದಿಸಿದ್ದು, ಕೂಡಲೇ ಪಿರ್ಯಾದಿಯವರ 2 ಬ್ಯಾಂಕ್ ಖಾತೆಯಿಂದ ತಲಾ 2,999/- ರೂಪಾಯಿಯಂತೆ 2 ಬಾರಿ ಹಣ ಕಡಿತಗೊಂಡಿದ್ದು ಇರುತ್ತದೆ. DTDC ಕೊರಿಯರ್ ನ ಕಸ್ಟಮರ್ ಕೇರ್ ಎಂದು ನಂಬಿಸಿ ಕೊರಿಯರ್ ಕಳುಹಿಸುವುದಾಗಿ ತಿಳಿಸಿ, ANYDESK APP ನ್ನು ಇನಸ್ಟಾಲ್ ಮಾಡಿಸಿ, ಪಿರ್ಯಾದಿಯವರ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಒಟ್ಟು 5,998/- ರೂಪಾಯಿ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಡಾ|| ಬಸವರಾಜ ತಂದೆ ಭೀಮಣ್ಣ ಧಬಾಲೆ, ಪ್ರಾಯ-46 ವರ್ಷ, ವೃತ್ತಿ-ಅಸಿಸ್ಟೆಂಟ್ ಪ್ರೊಫೆಸರ್ (ಶರೀರ ರಚನಾ ಶಾಸ್ತ್ರ ವಿಭಾಗ), ಸಾ|| ಕೇ/ಆಫ್: ವಿದ್ಯಾಧರ ನಾಯ್ಕ, ಕೆನರಾ ಬ್ಯಾಂಕ್ ಕಾಲೋನಿ, ಪದ್ಮನಾಭ ನಗರ, ಮಹಾದೇವ ದೇವಸ್ಥಾನದ ಹತ್ತಿರ, ನಂದನಗದ್ದಾ, ಕಾರವಾರ ರವರು ದಿನಾಂಕ: 07-04-2022 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ, ಕಾರವಾರ
ಅಪರಾಧ ಸಂಖ್ಯೆಃ 07/2022, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತನು ಮೊಬೈಲ್ ನಂ: 6370460879 ನೇದರ ಬಳಕೆದಾರನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ದಿನಾಂಕ: 23-03-2022 ರಂದು SBI BANK, YONO APP ನಲ್ಲಿ ಟ್ರಾನ್ಸಾಕ್ಷನ್ ಮಾಡಲು ಪ್ರಯತ್ನಿಸಿದ್ದು, ಸರ್ವರ್ ಪ್ರಾಬ್ಲಮ್ ನಿಂದಾಗಿ ಟ್ರಾನ್ಸಾಕ್ಷನ್ ಮಾಡಲು ಆಗಲಿಲ್ಲ. ಅದೇ ವೇಳೆ 16-17 ಗಂಟೆಯ ಸಮಯಕ್ಕೆ ಪಿರ್ಯಾದಿಯವರ ಮೊಬೈಲ್ ನಂಬರಿಗೆ ಆರೋಪಿತನ ಮೊಬೈಲ್ ನಂ: 6370460879 ನೇದರಿಂದ ಒಂದು ಎಸ್.ಎಮ್.ಎಸ್ ಬಂದಿದ್ದು, ಸದರಿ ಮೆಸೇಜ್ ನಲ್ಲಿ ಪಿರ್ಯಾದಿಯವರ ಎಸ್.ಬಿ.ಐ ಬ್ಯಾಂಕಿನ YONO APP ಸ್ಥಗಿತಗೊಳ್ಳುತ್ತಿದ್ದು, ಅದನ್ನು ಎಕ್ಟಿವೇಟ್ ಮಾಡಲು ಮೆಸೇಜ್ ನಲ್ಲಿರುವ ಲಿಂಕ್ ಅನ್ನು ಬಳಸುವಂತೆ ಸೂಚಿಸಲಾಗಿತ್ತು. ಅದರಂತೆ ಪಿರ್ಯಾದಿಯವರು ಸದರಿ ಲಿಂಕ್ ಅನ್ನು ಓಪನ್ ಮಾಡಿ ಅದರಲ್ಲಿ ತಮ್ಮ ಎಸ್.ಬಿ.ಐ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಪಾಸವರ್ಡನ್ನು ನಮೂದಿಸಿದ್ದು, ನಂತರ ಅವರಿಗೆ ಮೊಬೈಲ್ ನಂ: 6370460879 ನೇದರಿಂದ ಕರೆ ಬಂದಿದ್ದು, ಪಿರ್ಯಾದಿಯವರು ಕರೆಯನ್ನು ಸ್ವೀಕರಿಸಿದಾಗ ಕರೆ ಮಾಡಿದ ವ್ಯಕ್ತಿಯು ತಾನು ಎಸ್.ಬಿ.ಐ ಬ್ಯಾಂಕಿನ ಅಧಿಕಾರಿಯೆಂದು ಹೇಳಿ ಪಿರ್ಯಾದಿಯವರಿಗೆ YONO APP ಅಪ್ಡೇಟ್ ಮಾಡಲು TEAM VIEWER ಎಂಬ ಹೆಸರಿನ APP ಅನ್ನು ಇನಸ್ಟಾಲ್ ಮಾಡುವಂತೆ ಸೂಚಿಸಿದನು. ಅದರಂತೆ ಪಿರ್ಯಾದಿಯವರು ಸದರಿ APP ಅನ್ನು ಇನಸ್ಟಾಲ್ ಮಾಡಿದ 5 ನಿಮಿಷದ ಒಳಗೆ ಅವರ ಎಸ್.ಬಿ.ಐ ಓ.ಡಿ ಖಾತೆಯಲ್ಲಿದ್ದ ಎಫ್.ಡಿ ಹಣದಲ್ಲಿ 50,000/- ರೂಪಾಯಿ ಹಾಗೂ 25,000/- ರೂಪಾಯಿ. ಹೀಗೆ ಒಟ್ಟೂ 75,000/- ರೂಪಾಯಿ ಡೆಬಿಟ್ ಆದ ಬಗ್ಗೆ ಪಿರ್ಯಾದಿ ಶ್ರೀಮತಿ ಜೋಷ್ನಾ ಮೊಹಾಂತಿ ಕೋಂ. ವಿನಯ ನಾಯಕ್, ಪ್ರಾಯ-57 ವರ್ಷ, ವೃತ್ತಿ-ಆರ್ಕಿಟೆಕ್ಟ್ ಇಂಜಿನಿಯರ್, ಸಾ|| ಅರ್ಜುನ ಟಾಕೀಜ್ ಹಿಂದುಗಡೆ, ಕೋಡಿಬಾಗ, ಕಾರವಾರ ರವರು ದಿನಾಂಕ: 07-04-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 24/2022, ಕಲಂ: 302 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹನುಮಂತ ತಂದೆ ಮನವೆಲ್ ಸಿದ್ದಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹನುಮಾಪುರ, ನಾಗನೂರು, ತಾ: ಮುಂಡಗೋಡ, ಹಾಲಿ ಸಾ|| ಕಳಸವಾಡಾ, ಕಾರವಾರ. ಈತನು ತನ್ನ ಜೊತೆಗೆ ವಾಸವಾಗಿದ್ದ ಮಹಿಳೆ ಶ್ರೀಮತಿ ಶಾಂತಾಗೌಡಾ ಕೋಂ. ಬಾಬು ಗೌಡಾ, ಪ್ರಾಯ-43 ವರ್ಷ, ಸಾ|| ವಾಣಿವಾಡಾ, ಮಖೇರಿ, ಶೇಜವಾಡಾ ಇವಳು ಬೆಳಗ್ಗಿನ ಜಾವ 04-30 ಘಂಟೆಯಿಂದ 07-40 ಘಂಟೆಯ ನಡುವಿನ ಅವಧಿಯಲ್ಲಿ ‘ತನಗೆ ಸರಾಯಿ ಕುಡಿಯಲು ತಂದು ಕೊಡು’ ಅಂತಾ ಆರೋಪಿತನ ಶರ್ಟ್ ಹಿಡಿದು ಎಳೆದವಳಿಗೆ, ಆರೋಪಿತನು ಸಿಟ್ಟಿನಿಂದ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಅವಳಿಗೆ ‘ಸಾಯು ನೀನು, ದಿನಾಲೂ ನಿನ್ನದು ಇದೇ ಕತೆ ಆಯಿತು’ ಅಂತಾ ಕುತ್ತಿಗೆ ಹಿಡಿದು ಜೋರಾಗಿ ದೂಡಿ, ಅವಳು ಮನೆಯ ಬಾಗಿಲು ಮೆಟ್ಟಿಲ ಮೇಲೆ ಬೀಳುವಂತೆ ಮಾಡಿ, ತಲೆಯ ಭಾಗಕ್ಕೆ ಗಂಭೀರ ಒಳಗಾಯ ಪಡಿಸಿ, ಸ್ಥಳದಲ್ಲಿಯೇ ಸಾಯಿಸಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ಎಮ್. ಕೋಳಮಕರ್, ಪ್ರಾಯ-26 ವರ್ಷ, ವೃತ್ತಿ-ಆಂಬ್ಯುಲೆನ್ಸ್ ಚಾಲಕ, ಸಾ|| ನಂದನಗದ್ದಾ, ಬಾಡ, ಕಾರವಾರ ರವರು ದಿನಾಂಕ: 07-04-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 73/2022, ಕಲಂ: 447, 341, 323, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಜಾನನ ಪರಮೇಶ್ವರ ಭಟ್, ಸಾ|| ಕೋಣಾರೆ, ಮುರೂರು, ತಾ: ಕುಮಟಾ, 2]. ಶೀಕಾಂತ ಪರಮೇಶ್ವ ಭಟ್, ಸಾ|| ಕೋಣಾರೆ, ಮುರೂರು, ತಾ: ಕುಮಟಾ, 3]. ಪ್ರಸನ್ನ ಮಾದೇವ ಹೆಗಡೆ, ಸಾ|| ಕೋಣಾರೆ, ಮುರೂರು, ತಾ: ಕುಮಟಾ, 4]. ಉದಯ ಶಂಕರ ಹೆಗಡೆ, ಸಾ|| ವಾಲಗಳ್ಳಿ, ಕುಮಟಾ. ಈ ನಮೂದಿತ ಆರೋಪಿತರಲ್ಲಿ ಆರೆ ಪಿರ್ಯಾದಿ ಹಾಗೂ ಆರೋಪಿ 1 ಮತ್ತು 2 ನೇಯವರು ಪಿರ್ಯಾದಿಯ ಪಕ್ಕದ ಮನೆಯವರಿದ್ದು, ತಿರುಗಾಡುವ ದಾರಿಯ ವಿಷಯದಲ್ಲಿ ಆರೋಪಿ 1 ಮತ್ತು 2 ನೇಯವರಿಗೆ ಹಾಗೂ ಪಿರ್ಯಾದಿಗೆ ಮೊದಲಿನಿಂದಲೂ ತಂಟೆ ತಕರಾರು ಆಗಿ ಆರೋಪಿತರೆಲ್ಲರೂ ಪಿರ್ಯಾದಿಯವರ ಮೇಲೆ ದ್ವೇಷದಿಂದ ಇದ್ದವರು, ದಿನಾಂಕ: 07-04-2022 ರಂದು ಪಿರ್ಯಾದಿಯವರು ತಮ್ಮ ಬಾಗಾಯಿತ್ ಜಮೀನಿನಲ್ಲಿ ಜೆ.ಸಿ.ಬಿ ಯಿಂದ ನೆಲವನ್ನು ಸಮತಟ್ಟು ಮಾಡುತ್ತಿದ್ದಾಗ ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಆರೋಪಿ 1 ನೇಯವನು ತನ್ನ ಜೊತೆಯಲ್ಲಿ ಆರೋಪಿ 2, 3 ಹಾಗೂ 4 ನೇಯವರಿಗೆ ಕರೆದುಕೊಂಡು ಪಿರ್ಯಾದಿಯ ಬಾಗಾಯಿತ್ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೆ, ಸೂಳಾ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ‘ಇದು ನಾವು ಅನಾದಿ ಕಾಲದಿಂದ ತಿರುಗಾಡುವ ದಾರಿ ಇರುತ್ತದೆ’ ಅಂತಾ ಹೇಳಿ ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ಆರೋಪಿತರೆಲ್ಲರೂ ಸೇರಿ ಕೈಯಿಂದ ಪಿರ್ಯಾದಿಯ ಮುಖಕ್ಕೆ ಹಾಗೂ ಬೆನ್ನಿನ ಮೇಲೆ ಹಲ್ಲೆ ಮಾಡಿ ‘ಇನ್ನೊಮ್ಮೆ ದಾರಿಯ ವಿಷಯಕ್ಕೆ ಬಂದರೆ ನಿನ್ನನ್ನು ಕೊಂದು ಹಾಕುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಬಾಲಚಂದ್ರ ತಂದೆ ಶಂಕರ ಹೆಗಡೆ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೋಣಾರೆ, ಮುರೂರು, ತಾ: ಕುಮಟಾ ರವರು ದಿನಾಂಕ: 07-04-2022 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 134/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದೀಪಕ ತಂದೆ ಕುಪ್ಪು ಗೌಡ, ಪ್ರಾಯ-24 ವರ್ಷ, ಸಾ|| ಕೂಜಳ್ಳಿ, ತಾ: ಕುಮಟಾ, ಹಾಲಿ ಸಾ|| ಹಾಲಿಗದ್ದೆಕೇರಿ, ಚಂದಾವರ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ವಿ-3462 ನೇದರ ಚಾಲಕ). ಈತನು ದಿನಾಂಕ: 07-4-2022 ರಂದು 19-00 ಗಂಟೆಗೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-3462 ನೇದನ್ನು ಚಂದಾವರ ಕಡೆಯಿಂದ ಬಡಾಳ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಚಂದಾವರ ಸೊಸೈಟಿಯ ಮುಂದೆ ರಸ್ತೆ ಬದಿ ನಿಂತಿದ್ದ ಕುಮಾರಿ: ಆದ್ಯ ತಂದೆ ಚಂದ್ರಕಾಂತ ನಾಯ್ಕ, ಪ್ರಾಯ-5.5 ವರ್ಷ, ಸಾ|| ಚಂದಾವರ ನಾಕಾ, ಚಂದಾವರ, ತಾ: ಹೊನ್ನಾವರ ಇವಳಿಗೆ ಡಿಕ್ಕಿ ಪಡಿಸಿ, ಅವಳ ತುಟಿ ಮತ್ತು ಎಡಗಾಲಿಗೆ ದುಃಖಾಪತ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿದ್ಯಾಧರ ತಂದೆ ಶಿವಪ್ಪ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಂದಾವರ ನಾಕಾ, ಚಂದಾವರ, ತಾ: ಹೊನ್ನಾವರ ರವರು ದಿನಾಂಕ: 07-04-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 83/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದಿನೇಶ ತಂದೆ ಸುಬ್ಬಣ್ಣ ಶೆಟ್ಟಿ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಬ್ಬಿನಗದ್ದೆ ಪೋ: ಮಂಚಿಕೇರಿ, ತಾ: ಯಲ್ಲಾಪುರ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-7132 ನೇದರ ಸವಾರ), 2]. ಪರಮೇಶ್ವರ ತಂದೆ ವಿಘ್ನೇಶ್ವರ ಹೆಗಡೆ, ಪ್ರಾಯ-64 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶೀಗೆಮನೆ, ಪೋ: ಉಮ್ಮಚಗಿ, ತಾ: ಯಲ್ಲಾಪುರ (ಕಾರ್ ನಂ: ಕೆ.ಎ-31/ಎನ್-5480 ನೇದರ ಚಾಲಕ). ದಿನಾಂಕ: 06-04-2022 ರಂದು 15-30 ಗಂಟೆ ಸುಮಾರಿಗೆ ಯಲ್ಲಾಪುರ ತಾಲೂಕಿನ ಚೌವತ್ತಿ ಗ್ರಾಮದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ-93 ರ ನೇರವಾದ ರಸ್ತೆಯ ಮೇಲೆ ಆರೋಪಿ 1 ನೇಯವನು ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಆರೋಪಿ 2 ನೇಯವನು ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ತಮ್ಮ ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಾಜ್ಯ ಹೆದ್ದಾರಿ-93 ರ ರಸ್ತೆಯ ಮಧ್ಯದಲ್ಲಿ ತಮ್ಮ ವಾಹನಗಳನ್ನು ಮುಖಾಮುಖಿ ಢಿಕ್ಕಿ ಪಡಿಸಿಕೊಂಡಿದ್ದು, ಈ ಅಪಘಾತದಿಂದ ಆರೋಪಿ 1 ನೇಯವನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಸೀಟಿನಲ್ಲಿ ಕುಳಿತುಕೊಂಡ ಬಂದ 1). ಕುಮಾರಿ: ದೀಕ್ಷಾ ತಂದೆ ರಾಘವೇಂದ್ರ ಶೆಟ್ಟಿ, 2). ಕುಮಾರಿ: ಶ್ರಾವ್ಯ ತಂದೆ ದಿನೇಶ ಶೆಟ್ಟಿ, ಇವರಿಗೆ ಎಡಗಾಲಿಗೆ ಮತ್ತು ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ 1 ನೇಯವನು ತಾನೂ ಸಹ ತನ್ನ ಎದೆಗೆ, ತಲೆಗೆ ಹಾಗೂ ಎಡಗಾಲಿಗೆ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವರಾಯ ತಂದೆ ನಾರಾಯಣ ಪೂಜಾರಿ, ಪ್ರಾಯ-47 ವರ್ಷ, ವೃತ್ತಿ-ವ್ಯವಸಾಯ, ಸಾ|| ತಾರೇಹಳ್ಳಿ, ಚೌವತ್ತಿ, ತಾ: ಯಲ್ಲಾಪುರ ರವರು ದಿನಾಂಕ: 07-04-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 07-04-2022
at 00:00 hrs to 24:00 hrs
ಸಿದ್ದಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 14/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಆನಂದ ತಂದೆ ಶಿವಾನಂದ ಮಾಯಾಕಾರ, ಪ್ರಾಯ-21 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಈಶ್ವರ ನಗರ, ಬೈರಿದೇವರಕೊಪ್ಪ, ಹುಬ್ಬಳ್ಳಿ. ಈತನು ಸುದ್ದಿದಾರನ ಮಗನಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಅವನ ಸಂಬಂಧಿಕನಾದ ಈರಣ್ಣ ತಂದೆ ಈರಪ್ಪ ಗಂಜಿಗೌಡ್ರ ಇವನೊಂದಿಗೆ ಸಿದ್ದಾಪುರದ ಹೊಸೂರಿನಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದವನು, ಎಂದಿನಂತೆ ದಿನಾಂಕ: 07-04-2022 ರಂದು ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಸಿದ್ದಾಪುರದಲ್ಲಿ ಅವನು ಉಳಿದುಕೊಂಡಿರುವ ರೂಮಿನ ಹತ್ತಿರದಲ್ಲಿರುವ ಪುಟ್ಟಪ್ಪನ ಕೆರೆಗೆ ಸ್ನಾನ ಮಾಡಲು ಒಬ್ಬನೇ ಹೋದವನು ಬಹಳ ಹೊತ್ತಾದರೂ ಬಾರದೇ ಇದ್ದುದ್ದರಿಂದ ಸಿದ್ದಾಪುರದಲ್ಲಿದ್ದ ಅವನ ಸಂಬಂಧಿಕ ಈರಣ್ಣನು ಅಲ್ಲಿಗೆ ಹೋಗಿ ನೋಡಲು ಪುಟ್ಟಪ್ಪನ ಕೆರೆಯ ದಡದ ಮೇಲೆ ಅವನ ಬಟ್ಟೆಗಳು, ಚಪ್ಪಲಿಗಳು ಮತ್ತು ಮೊಬೈಲ್ ಕಂಡಿದ್ದು, ತದನಂತರ ಅಗ್ನಿಶಾಮಕ ದಳದವರನ್ನು ಕರೆಯಿಸಿ, ಹುಡುಕಾಡಲು 10-45 ಗಂಟೆಗೆ ಕೆರೆಯಲ್ಲಿ ಮೃತದೇಹ ಸಿಕ್ಕಿರುತ್ತದೆ. ಈ ವಿಷಯ ತಿಳಿದು ಮೃತನ ತಂದೆಯಾದ ಸುದ್ದಿದಾರನು ಬಂದು ನೋಡಿ ವಿಚಾರಿಸಿದ್ದು, ಮೃತ ತನ್ನ ಮಗನು ಕೆರೆಯಲ್ಲಿ ಸ್ನಾನ ಮಾಡಲು ಹೊದಾಗ ಬೆಳಿಗ್ಗೆ 07-30 ಗಂಟೆಯಿಂದ 8-00 ಗಂಟೆಯ ನಡುವಿನ ಅವಧಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಈಜಲು ಬಾರದೇ ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದಲ್ಲಿ ಬೇರೇನು ಕಾರಣಗಳು ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಶಿವಪ್ಪ ಮಾಯಾಕಾರ, ಪ್ರಾಯ-56 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಈಶ್ವರ ನಗರ, ಬೈರಿದೇವರಕೊಪ್ಪ, ಹುಬ್ಬಳ್ಳಿ ರವರು ದಿನಾಂಕ: 07-04-2022 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======