ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 119/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ನಾಗೇಶ ಭಂಡಾರಿ, ಸಾ|| ಇಂದಿರಾನಗರ, ತಾ: ಮುಂಡಗೋಡ (ಇನ್ನೋವಾ ಕಾರ್ ನಂ: ಕೆ.ಎ-22/ಡಿ-6111 ನೇದರ ಚಾಲಕ). ಈತನು ದಿನಾಂಕ: 07-08-2021 ರಂದು ಬೆಳಿಗ್ಗೆ 10-20 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬಾಳೆಗುಳಿಯ ಗೌರಿಕೆರೆಯ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ತನ್ನ ಇನ್ನೋವಾ ಕಾರ್ನಂ: ಕೆ.ಎ-22/ಡಿ-6111 ನೇದನ್ನು ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದವನು, ತನ್ನ ಕಾರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದೇ ಪಲ್ಟಿ ಕೆಡವಿ ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಾರುತಿ ಹನುಮಂತಪ್ಪ ಮುದುಕಣ್ಣನವರ, ಎ.ಇ.ಇ, ಸಿದ್ದಾಪುರ ಇವರಿಗೆ ಎಡಗೈಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಂಭೀರ ಸ್ವರೂಪದ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಮಾಡಿದ್ದಲ್ಲದೇ, ಎಚ್. ಎಮ್. ಕೃಷ್ಣ ರೆಡ್ಡಿ, ಇ.ಇ, ಶಿರಸಿ ಇವರಿಗೆ ಎಡಗೈಗೆ, ಬೆನ್ನಿಗೆ ಹಾಗೂ ಗದ್ದಕ್ಕೆ, ರವೀಂದ್ರ ಪಾಟೀಲ್, ತಾಂತ್ರಿಕ ಸಹಾಯಕರು, ಶಿರಸಿ ಇವರಿಗೆ ತಲೆಗೆ ಹಾಗೂ ಎಡಗೈಗೆ ಭಾರೀ ಗಾಯನೋವು ಮತ್ತು ಚೇತನ ತಳವಾರ, ದ್ವೀತಿಯ ದರ್ಜೆ ಸಹಾಯಕರು, ಶಿರಸಿ ಇವರಿಗೆ ಮೂಗಿಗೆ ಹಾಗೂ ಬಲಗಾಲಿಗೆ ಸಾದಾ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಕೂಡ ಮೈಮೇಲೆ ಅಲ್ಲಲ್ಲಿ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಮಹಾಬಲೇಶ್ವರ ಭಟ್, ಪ್ರಾಯ-57 ವರ್ಷ, ವೃತ್ತಿ-ಪಿ.ಡಬ್ಲ್ಯೂ.ಡಿ, ಎ.ಇ.ಇ, ಯಲ್ಲಾಪುರ, ಸಾ|| ಗುರುನಗರ, ಎಲ್.ಐ.ಸಿ ಆಫೀಸ್ ಹಿಂದೆ, ತಾ: ಶಿರಸಿ ರವರು ದಿನಾಂಕ: 07-08-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಧುಕೇಶ್ವರ ತಂದೆ ತಿಮ್ಮಾ ಚೆನ್ನಯ್ಯಾ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಿಡಮಾವಿನಕಟ್ಟಾ, ತಾ: ಶಿರಸಿ. ಈತನು ದಿನಾಂಕ: 07-08-2021 ರಂದು 17-50 ಗಂಟೆಯ ಸುಮಾರಿಗೆ ಶಿರಸಿ ಶಹರದ ಐದು ರಸ್ತೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 850/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 07-08-2021 ರಂದು 19-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾ ತಂದೆ ಪ್ರಕಾಶ ಬೆಳಗಾಂವಕರ, ಸಾ|| ಅಸು, ತಾ: ಜೋಯಿಡಾ (ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-1315 ನೇದರ ಚಾಲಕ). ದಿನಾಂಕ: 07-08-2021 ರಂದು ಪಿರ್ಯಾದಿಯವರು ತಮ್ಮ ಮೋಟಾರ್ ಸೈಕಲ್ ನಂ: ಎಮ್.ಎಚ್-09/ಎ.ಜೆಡ್-2961 ನೇದರ ಮೇಲೆ ಅಸು ಗ್ರಾಮದಿಂದ ರಾಮನಗರಕ್ಕೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡು ಜಗಲಬೇಟ ಗ್ರಾಮಕ್ಕೆ ಹೋಗಬೇಕೆಂದು ರಾಮನಗರದ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ರಾಮನಗರ ಕಡೆಯಿಂದ ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-1315 ನೇದರ ಆರೋಪಿ ಚಾಲಕನು ತನ್ನ ಬಾಬ್ತು ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಧ್ಯಾಹ್ನ 15-45 ಗಂಟೆಯ ಸುಮಾರಿಗೆ ರಾಮನಗರ-ಜೋಯಿಡಾ ರಸ್ತೆಯಲ್ಲಿ ಬರುವ ಪೆಟ್ರೋಲ್ ಬಂಕ್ ಹತ್ತಿರದ ಕ್ರಾಸಿನಲ್ಲಿ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿಯವರಿಗೆ ತಲೆಗೆ, ಬಲಗಾಲ ಮೊಣಗಂಟು ಹಾಗೂ ಪಾದದ ಭಾಗದಲ್ಲಿ ರಕ್ತಗಾಯ ಹಾಗೂ ಬಲಭುಜ ಹಾಗೂ ಕುತ್ತಿಗೆಯ ಭಾಗದಲ್ಲಿ ಒಳನೋವುಗಳಾಗಿದ್ದು, ತನ್ನ ಮೋಟಾರ್ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದ ಅನಂತ ಮಿರಾಶಿ ಇವನಿಗೆ ಹಣೆಯ ಭಾಗದಲ್ಲಿ ಭಾರೀ ರಕ್ತಗಾಯ ಹಾಗೂ ಬಲಗೈ ಮುರಿದಿದ್ದು, ಆರೋಪಿ ಮೋಟಾರ್ ಸೈಕಲ್ ಸವಾರನ ಬಲಗಣ್ಣಿನ ಹುಬ್ಬಿನ ಭಾಗದಲ್ಲಿ ಭಾರೀ ರಕ್ತಗಾಯವಾಗಿರುತ್ತದೆ. ಈ ಅಪಘಾತವು ಆರೋಪಿ ಮೋಟಾರ್ ಸೈಕಲ್ ಸವಾರನ ಅತೀವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ತುಳಸಿದಾಸ ತಂದೆ ನೀಳಬಾ ಗಾವಡೆ, ಪ್ರಾಯ-31 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕಾಮ್ರಾ, ಅಸು, ತಾ: ಜೋಯಿಡಾ ರವರು ದಿನಾಂಕ: 07-08-2021 ರಂದು 21-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 26/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 45-50 ವರ್ಷ ವಯಸ್ಸಿನ ಅನಾಮಧೇಯ ಗಂಡಸ್ಸಾಗಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ಕಳೆದ 2-3 ದಿನಗಳಿಂದ ಸತ್ಯಸಾಯಿ ಕಾಂಪ್ಲೆಕ್ಸಿನಲ್ಲಿರುವ ಪಿರ್ಯಾದಿಯ ಟಾಯರ್ ಅಂಗಡಿಯ ಮುಂದಿನ ಕಟ್ಟೆ ಮೇಲೆ ಮಲಗಿಕೊಂಡಿದ್ದವನು, ದಿನಾಂಕ: 07-08-2021 ರಂದು ಪಿರ್ಯಾದಿಯು ಅಂಗಡಿಗೆ ಬಂದಾಗ ಸುಮಾರು 10-00 ಗಂಟೆಗೆ ಮೃತಪಟ್ಟಿದ್ದು ಕಂಡಿದ್ದು ಇರುತ್ತದೆ. ಮೃತನು ಯಾವುದೋ ಅನಾರೋಗ್ಯದಿಂದ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ತಿಮ್ಮಪ್ಪ ತಂದೆ ಗಣಪತಿ ಹೆಗಡೆ, ಪ್ರಾಯ-55 ವರ್ಷ, ವೃತ್ತಿ-ಟಾಯರ್ ವ್ಯಾಪಾರ, ಸಾ|| ನೀಲಕೋಡ, ತಾ: ಹೊನ್ನಾವರ ರವರು ದಿನಾಂಕ: 07-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 09-08-2021 10:13 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080