ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-02-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ಕೆಂಚಪ್ಪ ಲಿಂಗದಹಳ್ಳಿ, ಪ್ರಾಯ-25 ವರ್ಷ, ವೃತ್ತಿ-ಚಾಲಕ. ಸಾ|| ರಟ್ಟಿಹಳ್ಳಿ, ತಾ: ರಟ್ಟಿಹಳ್ಳಿ, ಜಿ: ಹಾವೇರಿ (ಗೂಡ್ಸ್ ರಿಕ್ಷಾ ನಂ: ಕೆ.ಎ-68/2558 ನೇದರ ಚಾಲಕ). ನಮೂದಿ ಆರೋಪಿತನು ದಿನಾಂಕ: 07-02-2021 ರಂದು ಬೆಳಗಿನಾವ 03-20 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-206 ರಲ್ಲಿ ಹೊನ್ನಾವರ ತಾಲೂಕಿನ ಕಡಗೇರಿಯ ಗುಂಡಿಬೈಲ್ ಕ್ರಾಸ್ ಹತ್ತಿರ ತನ್ನ ಬಾಬ್ತು ಗೂಡ್ಸ್ ರಿಕ್ಷಾ ನಂ: ಕೆ.ಎ-68/2558 ನೇದರಲ್ಲಿ ಪಿರ್ಯಾದಿ ಹಾಗೂ ಮೃತ ಅಬ್ದುಲ್ ಗನಿ ತಂದೆ ಗೌಸುಸಾಬ್ ಪಾಟೀಲ್, ಪ್ರಾಯ-55 ವರ್ಷ, ವೃತ್ತಿ-ವ್ಯಾಪಾರ, ಸಾ|| ಯಲಿವಾಳ, ತಾ: ರಟ್ಟಿಹಳ್ಳಿ, ಜಿ: ಹಾವೇರಿ ಇವರಿಗೆ ಕೂಡ್ರಿಸಿಕೊಂಡು ತನ್ನ ಗೂಡ್ಸ್ ರಿಕ್ಷಾವನ್ನು ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಗೂಡ್ಸ್ ರಿಕ್ಷಾವನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಗೂಡ್ಸ್ ರಿಕ್ಷಾದಲ್ಲಿದ್ದ ಪಿರ್ಯಾದಿಗೆ ಎಡ ಹಾಗೂ ಬಲಗಾಲಿನ ಮೊಣಗಂಟಿನ ಕೆಳಗೆ ಹಾಗೂ ಎಡಗಾಲಿನ ಪಾದಕ್ಕೆ ಗಾಯ ಗಾಯ ಪಡಿಸಿದ್ದಲ್ಲದೇ ಮೃತ ಅಬ್ದುಲ್ ಗನಿ ತಂದೆ ಗೌಸುಸಾಬ ಪಾಟೀಲ್, ಈತನಿಗೆ ಗದ್ದಕ್ಕೆ, ಬಲಗೈ ಮೊಣಗಂಟಿನ ಹತ್ತಿರ, ಎಡಗಾಲಿನ ಪಾದಕ್ಕೆ ಗಾಯ ಪಡಿಸಿದ್ದಲ್ಲದೇ, ಕುತ್ತಿಗೆಗೆ ಪೆಟ್ಟು ಹಾಗೂ ಎಡ ಕಿವಿಯಿಂದ ರಕ್ತ ಸೋರುವಂತೆ ಮಾಡಿ ಸ್ಥಳದಲ್ಲಿಯೇ ಮೃತಪಡುವಂತೆ ಮಾಡಿದ್ದಲ್ಲದೇ, ಆರೋಪಿ ಗೂಡ್ಸ್ ರಿಕ್ಷಾ ಚಾಲಕನು ತಾನೂ ಸಹ ತನ್ನ ಎಡಗೈ ಮತ್ತು ಬಲಗೈ ಹೆಬ್ಬರಳಿಗೆ, ಎಡಗೈ ಅಂಗೈ ಹತ್ತಿರ ಹಾಗೂ ಎಡಭುಜಕ್ಕೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ನರಸಪ್ಪ ಕೊರವರ, ಪ್ರಾಯ-50 ವರ್ಷ, ವೃತ್ತಿ-ವ್ಯಾಪಾರ, ಸಾ|| ಯಲಿವಾಳ, ತಾ: ರಟ್ಟಿಹಳ್ಳಿ, ಜಿ: ಹಾವೇರಿ ರವರು ದಿನಾಂಕ: 07-02-2021 ರಂದು 05-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಚಿನ ತಂದೆ ರಾಧಾಕೃಷ್ಣ ಅಸ್ನೋಟಿಕರ. ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ. ಸಾ|| ಬೆಲೇಕೇರಿ, ತಾ: ಅಂಕೋಲಾ (ಕಾರ್ ನಂ: ಜಿ.ಎ-04/ಸಿ-9870 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 07-02-2021 ರಂದು 16-20 ಗಂಟೆಯ  ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮ ಪಂಚಾಯತ್ ಕ್ರಾಸ್ ಹತ್ತಿರ ತನ್ನ ಬಾಬ್ತು ಕಾರ್ ನಂ: ಜಿ.ಎ-04/ಸಿ-9870 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಮುನ್ಸೂಚನೆ ನೀಡದೇ ಕಾರನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಕಾಸರಕೋಡ ಗ್ರಾಮ ಪಂಚಾಯತ್ ರಸ್ತೆಯ ಕಡೆಗೆ ಚಲಾಯಿಸಿ, ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಗಾಯಾಳು ಕೇತನ ತಂದೆ ತಿಮ್ಮಾ ಹೊನ್ನೆಗುಂಡಿ. ಪ್ರಾಯ-53 ವರ್ಷ, ವೃತ್ತಿ-ಎಕ್ಸ್-ರೇ ಆಪರೇಟರ್. ಸಾ|| ಮಡಿವಾಳಕೇರಿ, ಬಗ್ಗೋಣ, ತಾ: ಕುಮಟಾ ಈತನು ತನ್ನ ಮೋಟಾರ್ ಸೈಕಲ್ ನಂ: ಕೆಎ-47/ಕೆ-7213 ನೇದರ ಹಿಂಬದಿ ತನ್ನ ಮಗನಾದ ಕು: ಪ್ರೀತಮ್ ತಂದೆ ಕೇತನ್ ಹೊನ್ನೆಗುಂಡಿ, ಪ್ರಾಯ-16 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಮಡಿವಾಳಕೇರಿ, ಬಗ್ಗೋಣ, ತಾ: ಕುಮಟಾ ಈತನಿಗೆ ಕೂಡ್ರಿಸಿಕೊಂಡು ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಕೇತನ ತಂದೆ ತಿಮ್ಮಾ ಹೊನ್ನೆಗುಂಡಿ ಈತನಿಗೆ ತಲೆಗೆ ಹಾಗೂ ಮುಖಕ್ಕೆ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಅನಂತ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚಂದ್ರಾಣಿ, ಪೋ: ವಂದೂರ, ತಾ: ಹೊನ್ನಾವರ, ಹಾಲಿ ಸಾ|| ಪ್ರಭಾತನಗರ, ತಾ: ಹೊನ್ನಾವರ ರವರು ದಿನಾಂಕ: 07-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 06-02-2021 ರಂದು 22-00 ಗಂಟೆಯಿಂದ ದಿನಾಂಕ: 07-02-2021 ರಂದು ಬೆಳಿಗ್ಗೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಹಿನ್ನೂರಿನ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಒಳಗೆ ಪ್ರವೇಶಿಸಿ ದೇವಸ್ಥಾನದಲ್ಲಿದ್ದ ಕಬ್ಬಿಣದ ಕಪಾಟನ್ನು ದೇವಸ್ಥಾನದಲ್ಲಿ ತೆಂಗಿನ ಕಾಯಿ ಒಡೆಯುವ ಕತ್ತಿಯಿಂದ ಮೀಟಿ ಕಪಾಟು ತೆರೆದು, ಕಪಾಟಿನ ಒಳಗಿನ ಬಾಕ್ಸ್ (ಲಾಕ್) ಒಳಗೆ ಇಟ್ಟಿರುವ 60,000/- ರೂಪಾಯಿ ಮೌಲ್ಯದ ಸುಮಾರು 10 ಗ್ರಾಂ ತೂಕದ ಬಂಗಾರದ ಚೈನ್-1 ಹಾಗೂ ಸುಮಾರು 5 ಗ್ರಾಂ ತೂಕದ ಬಂಗಾರದ ಗುಂಡುಗಳಿರುವ ಕರಿಮಣಿ ಪೋಣಿಸಿದ ತಾಳಿ-1 ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ತಿಮ್ಮಪ್ಪ ತಂದೆ ನಾಗಪ್ಪ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಿನ್ನೂರ ಗ್ರಾಮ, ತಾ: ಹೊನ್ನಾವರ ರವರು ದಿನಾಂಕ: 07-02-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಜೇಶ ಮಾಬ್ಲೇಶ್ವರ ನಾಯ್ಕ, ಪ್ರಾಯ-33 ವರ್ಷ, ಸಾ|| ಗುಳದಕೇರಿ, ಮಂಕಿ, ತಾ: ಹೊನ್ನಾವರ, 2]. ಗೌರೀಶ ಧರ್ಮ ಹಳ್ಳೆರ, ಪ್ರಾಯ-23 ವರ್ಷ, ಸಾ|| ತಲಗೋಡ, ತಾ: ಹೊನ್ನಾವರ, 3]. ಪ್ರಸಾದ ತಿಮ್ಮಪ್ಪ ಶೆಟ್ಟಿ, ಪ್ರಾಯ-25 ವರ್ಷ, ಸಾ||  ತಲಗೋಡ, ತಾ: ಹೊನ್ನಾವರ, 4]. ಯೋಗೇಶ ನಾಗಪ್ಪ ನಾಯ್ಕ, ಪ್ರಾಯ-28 ವರ್ಷ, ಸಾ|| ದೊಡ್ಡಗುಂದ, ತಾ: ಹೊನ್ನಾವರ, 5]. ರಾಜೇಶ ನಾಯ್ಕ, ಸಾ|| ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 07-02-2021 ರಂದು 21-20 ಗಂಟೆಗೆ ಮಂಕಿಯ ತುಳಸಿ ವೈನ್ ಶಾಪಿನ ಎಡಬದಿಯ ಗೋಡೆಗೆ ತಾಗಿರುವ ಕಟ್ಟೆಯ ಮೇಲೆ ಸರಾಯಿ ಕುಡಿಯಲು ಯಾವುದೇ ಪಾಸ್/ಪರ್ಮಿಟ್ ಇಲ್ಲದೇ ಕುಡಿಯುತ್ತಾ ಕುಳಿತಿರುವಾಗ ಆರೋಪಿ 5 ನೇಯವನು ಆರೋಪಿ 1 ರಿಂದ 4 ನೇಯವರಿಗೆ ಸರಾಯಿ ಕುಡಿಯಲು ಬೇಕಾದ ನೀರು, ಗ್ಲಾಸ್, ಸರಾಯಿ ಪೂರೈಸಿದ್ದು, ಆರೋಪಿತರೆಲ್ಲರೂ ಸದ್ರಿ ಸ್ಥಳದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವಾಗುವ ರೀತಿಯಲ್ಲಿ ಸರಾಯಿ ಕುಡಿಯುತ್ತಾ ಕುಳಿತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 07-02-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪಾಂಡು ಯಾನೆ ಪಾಂಡುರಂಗ ಬೊಂಬ್ಡು ಮರಾಠಿ, ಪ್ರಾಯ-28 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಹೇರಬಡಕಿ, ನೂಜ್, ಕೆಕ್ಕೋಡ, ತಾ: ಭಟ್ಕಳ, 2]. ಸುರೇಶ ಮಂಜಯ್ಯ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕೂಲಿ  ಕೆಲಸ, ಸಾ|| ಅಗ್ಗ, ಪೋ: ಹಾಡವಳಿ, ತಾ: ಭಟ್ಕಳ, 3]. ಜಗದೀಶ ಶನಿಯರ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಂಡಳ್ಳಿ, ತಾ: ಭಟ್ಕಳ, 4]. ನಾರಾಯಣ ಸುಕ್ರಾ ಮರಾಠಿ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಳುವಾಡಿ, ಕೊಳಗೇರಿಮನೆ, ತಾ: ಭಟ್ಕಳ, 5]. ನಾಗರಾಜ ಶೇಷ ಮರಾಠಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಯಡ್ತಾರೆ ಗ್ರಾಮ, ಪೋ: ಶಿರೂರ, ತಾ: ಬೈಂದೂರ, 6]. ನಾರಾಯಣ ಶಿವು ಮರಾಠಿ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಳಗೇರಿ, ಉತ್ತರಕೊಪ್ಪ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 07-02-2021 ರಂದು 01-30 ಗಂಟೆಗೆ ಹೆಂಜಲೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸೇರಿಕೊಂಡು ತಮ್ಮ ಲಾಭಕ್ಕೋಸ್ಕರ ಹೆಂಜಲೆ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಾಟವನ್ನು ಆಡುತ್ತಿದ್ದಾಗ ದಾಳಿಯ ಕಾಲಕ್ಕೆ 1). ನಗದು ಹಣ 4,350/- ರೂಪಾಯಿ, 2). ಇಸ್ಪೀಟ್ ಎಲೆಗಳು-52, 3). ಹಳೆಯ ಪಾಲಿಥಿನ್ ಚೀಲ-1, 4). ಮೇಣದ ಬತ್ತಿ-02, ಅ||ಕಿ|| 00.00/- ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ (ಕಾ&ಸು),  ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 07-02-2021 ರಂದು 03-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 341, 323, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಿಜ್ವಾನ್ ತಂದೆ ರಿಯಾಜ್ ಶೇಖ್ ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ ಸಾ|| ಹನೀಪಬಾದ್, ತಾ: ಭಟ್ಕಳ. ನಮೂದಿತ ಆರೋಪಿತನು ಪಿರ್ಯಾದಿಯ ಅಳಿಯನಿದ್ದು, ಪಿರ್ಯಾದಿಯವರು ಕಳೆದ 13 ವರ್ಷದ ಹಿಂದೆ ಅಪಘಾತದಲ್ಲಿ ಎಡಾಗಾಲಿಗೆ ಭಾರಿ ಗಾಯವಾಗಿ ಓಡಾಡಲು ಆಗದೇ ಉರುಗೋಲು ಹಿಡಿದುಕೊಂಡು ಓಡಾಡಿಕೊಂಡಿರುತ್ತಾರೆ. ಆರೋಪಿತನು ಪ್ರತಿ ದಿನ ಸರಾಯಿ ಕುಡಿದುಕೊಂಡು ಬಂದು ಜಗಳವಾಡಿ ಮನೆಯಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಮಾಡುತ್ತಿದ್ದವನು, ದಿನಾಂಕ: 07-02-2021 ರಂದು ಮಧ್ಯಾ 04-30 ಗಂಟೆಯ ಸಮಯಕ್ಕೆ ಆರೋಪಿತನು ಮನೆಗೆ ಬಂದವನು, ಮನೆಯ ಹೊರಗೆ ತನ್ನ ಹೆಂಡತಿ ರಜೀಯಾ ಮತ್ತು ಮಕ್ಕಳು ಅವಲಕ್ಕಿ ತಿನ್ನುತಿರುವುದನ್ನು ನೋಡಿ ತನ್ನ ಹೆಂಡತಿಯನ್ನು ಉದ್ದೇಶಿಸಿ ‘ಏ ರಾಂಡಕೀ, ಚಿನಾಲಕಿ, ಅವಲಕ್ಕಿ ತಿನ್ನುತಿದ್ದೀಯಾ?’ ಅಂತಾ ಅವಳ ಕೈಯಲ್ಲಿದ್ದ ಅವಲಕ್ಕಿ ಬಿಸಾಡಿದ್ದು, ಅದಕ್ಕೆ ಪಿರ್ಯಾದಿಯು ಆರೋಪಿತನಿಗೆ ‘ಈ ರೀತಿ ಮಾಡುವುದು ಸರಿಯಲ್ಲ’ ಅಂತಾ ಹೇಳಿದಕ್ಕೆ ಆರೋಪಿತನು ಸಿಟ್ಟಾಗಿ ಪಿರ್ಯಾದಿಗೆ ಅಡ್ಡಗಟ್ಟಿ ತಡೆದು ಅವರನ್ನು ಉದ್ದೇಶಿಸಿ ‘ರಾಂಡಕಾ, ಚಿನಾಲಕಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ದೂಡಿ ಹಾಕಿದ್ದರಿಂದ ಅವರು ನೆಲದ ಮೇಲೆ ಮುಗುಚಿ ಬಿದ್ದು ಅವರ ಬಲಗಾಲಿಗೆ ಪೆಟ್ಟಾಗಿದ್ದು, ನಂತರ ಆರೋಪಿತನು ಹೋಗುವಾಗ ಅವರಿಗೆ ‘ಕೊಲೆ ಮಾಡಿ ಬಿಸಾಕುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿ, ಮನೆಯ ಹೊರಗಡೆ ಇದ್ದ ತನ್ನ ಮೋಟಾರ್ ಸೈಕಲ್ ಹತ್ತಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ಗಟಾರಿಗೆ ಬಿದ್ದು ತನ್ನ ಮುಖಕ್ಕೆ, ತುಟಿಗೆ ಮತ್ತು ಕೈಗಳಿಗೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಅನ್ವರ್ ತಂದೆ ಖಾದರ ಬೇಗ್, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಾಮೀಯಾಬಾದ್, ಶೇಡಬರಿ ರಸ್ತೆ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 07-02-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾತ್ರೇಯ ತಂದೆ ಕೃಷ್ಣ ವಟ್ಲೇಕರ, ಪ್ರಾಯ-50 ವರ್ಷ, ವೃತ್ತಿ-ದಾಂಡೇಲಿ ಪೇಪರ್ ಮಿಲ್ ನಲ್ಲಿ ಕೆಲಸ, ಸಾ|| ಆಲೂರು, ತಾ:  ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 07-02-2021 ರಂದು 12-30 ಗಂಟೆಗೆ ತಮ್ಮ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಜೆ-9609 ನೇದನ್ನು ಕೆಸರೊಳ್ಳಿ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದವನು, ಮೋಟಾರ್ ಸೈಕಲ್ ವೇಗವನ್ನು ನಿಯಂತ್ರಿಸಲಾಗದೇ, ಗಾಂಧಿಕೇರಿ ಗಲ್ಲಿಯಿಂದ ಹರೀಶ್ಚಂದ್ರಪುರ ಗಲ್ಲಿಗೆ ಹೋಗಲು ಹಳಿಯಾಳ ಶಹರದ ಯಲ್ಲಾಪುರ ನಾಕಾದ ಉರ್ದು ಶಾಲೆಯ ಹತ್ತಿರ ಡಾಂಬರ್ ರಸ್ತೆ ದಾಟುತ್ತಿದ್ದ ಕು: ಪ್ರೇಮ್ ತಂದೆ ಸಿದ್ದಪ್ಪ ಚಲವಾದಿ, ಇವನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ರುದ್ರಪ್ಪ ಕಲಭಾವಿ, ಪ್ರಾಯ-39 ವರ್ಷ, ವೃತ್ತಿ-ಗುತ್ತಿಗೆದಾರರು, ಸಾ|| ಗಾಂಧಿಕೇರಿ ಗಲ್ಲಿ, ಯಲ್ಲಾಪುರ ನಾಕಾ, ಹಳಿಯಾಳ ಶಹರ ರವರು ದಿನಾಂಕ: 07-02-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೈಫುಲ್ಲಾ ಖಾನ್ ತಂದೆ ಶಾಭುಖಾನ್, ಸಾ|| ಕಾನಗೋಡ, ತಾ:  ಸಿದ್ದಾಪುರ (ಕಾರ್ ನಂ: ಕೆ.ಎ-20/ಝಡ್-0032 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 07-02-2021 ರಂದು ಮಧ್ಯಾಹ್ನ 15-00 ಗಂಟೆಗೆ ಸಿದ್ದಾಪುರ ತಾಲೂಕಿನ ಕಾನಗೋಡದಲ್ಲಿ ರಸ್ತೆ ಬದಿಯ ತನ್ನ ಮನೆಯ ಪಕ್ಕದಲ್ಲಿ ನಿಲ್ಲಸಿಟ್ಟಿದ್ದ ತನ್ನ ಕಾರ್ ನಂ: ಕೆ.ಎ-20/ಝಡ್-0032 ನೇದನ್ನು ಮುಖ್ಯರಸ್ತೆಗೆ ತರಲು ಒಮ್ಮೆಲೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಚಂದ್ರಗುತ್ತಿ-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಚಂದ್ರಗುತ್ತಿ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ವಾಯ್-4585 ನೇದಕ್ಕೆ ಡಿಕ್ಕಿ ಹೊಡೆಯುವಂತೆ ಮಾಡಿ ಅಪಘಾತ ಪಡಿಸಿ, ಮೋಟಾರ್ ಸೈಕಲಿನ ಹಿಂಬದಿ ಸವಾರನಾದ ಪಿರ್ಯಾದಿಗೆ ಎಡಗಣ್ಣಿನ ಹತ್ತಿರ, ಮುಖಕ್ಕೆ, ಮೂಗಿಗೆ ಹಾಗೂ ಮೋಟಾರ್ ಸೈಕಲ್ ಸವಾರನಾದ ಯಶವಂತ ತಂದೆ ರಾಮಾ ಅಂಬಿಗ ಇವರಿಗೆ ತಲೆಗೆ, ಎಡಹುಬ್ಬಿನ ಹತ್ತಿರ, ಮೂಗಿಗೆ ಹಾಗೂ ಬಲಗೈಗೆ ಗಾಯನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ರಾಮಾ ಅಂಬಿಗ, ಪ್ರಾಯ-42 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ರವೀಂದ್ರ ನಗರ, ಸಿದ್ದಾಪುರ ಶಹರ ರವರು ದಿನಾಂಕ: 07-02-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-02-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

ಇತ್ತೀಚಿನ ನವೀಕರಣ​ : 08-02-2021 01:31 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080