ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-01-2022

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಕರಿಯ ಗೌಡ, ಪ್ರಾಯ-30 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಕರ್ಕಿಮಕ್ಕಿ, ಮೂರುರು, ತಾ: ಕುಮಟಾ. ಈತನು ದಿನಾಂಕ: 07-01-2022 ರಂದು 14-35 ಗಂಟೆಗೆ ಕುಮಟಾ ತಾಲೂಕಿನ ಹೆಗಡೆ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 1,900/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00 ರೂಪಾಯಿಯ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ ನಾಯ್ಕ, ಪಿ.ಎಸ್.ಐ (ತನಿಖೆ-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 07-01-2022 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 406, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಯಾರೋ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 20-12-2021 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿಯವರು ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿರುವ ಎ.ಟಿ.ಎಮ್ ನಲ್ಲಿ ಹಣವನ್ನು ತೆಗೆಯಲು ಹೋದ ಕಾಲಕ್ಕೆ ಅವರ ಹಿಂದೆ ನಿಂತ ನಮೂದಿತ ವ್ಯಕ್ತಿಯಾಗಿದ್ದು, ಎ.ಟಿ.ಎಮ್ ಮೂಲಕ ಹಣ ತೆಗೆದುಕೊಡುವುದಾಗಿ ಹೇಳಿ ನಂಬಿಸಿ ಪಿರ್ಯಾದಿಯ ಎ.ಟಿ.ಎಮ್ ಪಾಸವರ್ಡ್ ಅನ್ನು ನೋಡಿಕೊಂಡು ಪಿರ್ಯಾದಿಯವರ ಎ.ಟಿ.ಎಮ್ ಅನ್ನು ಅವನ ಬಳಿ ಇಟ್ಟುಕೊಂಡು ಬೇರೆಯವರ ಹೆಸರಿನಲ್ಲಿರುವ ಎ.ಟಿ.ಎಮ್ ಕಾರ್ಡ್ ಅನ್ನು ಪಿರ್ಯಾದಿಗೆ ನೀಡಿ ಅವರ ಖಾತೆಯಿಂದ 26,000/- ರೂಪಾಯಿ ಹಣವನ್ನು ಯಾವುದೋ ಎ.ಟಿ.ಎಮ್ ನಿಂದ ತೆಗೆದು ಪಿರ್ಯಾದಿಗೆ ಮೋಸ ವಂಚನೆ ಮಾಡಿರುತ್ತಾನೆ. ಆರೋಪಿತ ವ್ಯಕ್ತಿಯು ಅಜಮಾಸು ಸುಮಾರು 35 ರಿಂದ 40 ವರ್ಷ ಪ್ರಾಯದವನಿದ್ದು, ಸುಮಾರು 05 ಫೂಟ್ 06 ಇಂಚು ಎತ್ತರ ಇದ್ದು, ಸಶಕ್ತ ಮೈ ಕಟ್ಟು ಹೊಂದಿದ್ದು, ಮುಖಕ್ಕೆ ಮಾಸ್ಕ್ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ಶಿವಾಜಿ ಸುಭಾಂಜಿ, ಪ್ರಾಯ-31 ವರ್ಷ, ವೃತ್ತಿ-ಸರ್ವೇಯರ್, ಸಾ|| ಅಟ್ಟಣಗಿ, ತಾ: ಮುಂಡಗೋಡ ರವರು ದಿನಾಂಕ: 07-01-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಸ್ಕೋಡಾ ರ್ಯಾಪಿಡ್ ಕಾರ್ ಚಾಲಕನಾಗಿದ್ದು, ಕಾರ್ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯ ಮಗನಾದ ಗಾಯಾಳು ಶ್ರೀ ವಿನಾಯಕ ತಂದೆ ವಿಜಯಕುಮಾರ, ಈತನು ದಿನಾಂಕ: 02-12-2022 ರಂದು ಸಂಜೆ 16-30 ಗಂಟೆಯ ಸುಮಾರಿಗೆ ಎನಫೀಲ್ಡ್ ಮೋಟಾರ್ ಸೈಕಲ್ ನೇದರ ಮೇಲಾಗಿ ಸಿದ್ದಾಪುರ ಕಡೆಯಿಂದ ಜೋಗ ಹೋಗುವಾಗ ಮಾವಿನಗುಂಡಿ ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಸ್ಕೋಡಾ ರ್ಯಾಪಿಡ್ ಕಾರಿನ ಆರೋಪಿ ಚಾಲಕನು ಸಿದ್ದಾಪುರ-ಮಾವಿನಗುಂಡಿ ರಸ್ತೆಯ ಬೆಳಲಘಟ್ಟಾ ತಿರುವಿನಲ್ಲಿ ವಿನಾಯಕ, ಈತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರನು ಕೆಳಗೆ ಬಿದ್ದುದರಿಂದ ಬಲಗಾಲಿನ ಹಿಮ್ಮಡಿಗೆ ಗಾಯನೋವನ್ನುಂಟು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಹಾಗೆಯೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕೆ. ವಿಜಯಕುಮಾರ ತಂದೆ ಕೆ. ಬಸವರಾಜಪ್ಪ, ಪ್ರಾಯ-56 ವರ್ಷ, ವೃತ್ತಿ-ಶಿಕ್ಷಕರು, ಸಾ|| ಮಾರ್ಕೆಟ್ ರೋಡ್, ತಾ: ಸೊರಬಾ, ಜಿ: ಶಿವಮೊಗ್ಗ ರವರು ದಿನಾಂಕ: 07-01-2022 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-01-2022

at 00:00 hrs to 24:00 hrs

 

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಯೋಗೇಶ ತಂದೆ ಮಂಜಯ್ಯ ದೇವಡಿಗ, ಪ್ರಾಯ-41 ವರ್ಷ, ವೃತ್ತಿ-ಹೂವಿನ ವ್ಯಾಪಾರ, ಸಾ|| ಉಳ್ಮಣ, ಬೇಂಗ್ರೆ-1, ತಾ: ಭಟ್ಕಳ. ಪಿರ್ಯಾದಿಯ ಅಕ್ಕನ ಗಂಡನಾದ ಈತನು ದಿನಾಂಕ: 07-01-2022 ರಂದು ಬೆಳಿಗ್ಗೆ ತಮ್ಮ ಮನೆಯ ಹತ್ತಿರ ಇರುವ ಮಲ್ಲಿಗೆ ಹೂವು ಕೊಯ್ದುಕೊಂಡು ಮರಳಿ ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ಮನೆಗೆ ಬಂದವರು, ತನಗೆ ಆಯಾಸವಾಗುತ್ತಿದ್ದು, ಜೀರಿಗೆ ನೀರು ಕುಡಿಯಲು ಕೇಳಿ ನೀರು ಕುಡಿದು ಸ್ವಲ್ಪ ಸಮಯ ಮನೆಯಲ್ಲಿ ಕುಳಿತವರು, ಸಮಯ 08-45 ಗಂಟೆಗೆ ಅಲ್ಲಿಯೇ ಕುಸಿದ್ದು ಬಿದ್ದಿದ್ದು, ನಂತರ ಅವರಿಗೆ ಸ್ಥಳೀಯರು ಸೇರಿಕೊಂಡು ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ಕರೆ ತಂದಿದ್ದು, ಮಾತನಾಡದೇ ಇದ್ದುದರಿಂದ ವೈದ್ಯರು ಪರೀಕ್ಷಿಸಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಪಿರ್ಯಾದಿ ಹಾಗೂ ಸ್ಥಳೀಯರು ಸೇರಿಕೊಂಡು ಒಂದು ಆಂಬ್ಯುಲೆನ್ಸ್ ಮೇಲಾಗಿ 09-50 ಗಂಟೆಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ, ಆಸ್ಪತ್ರೆಗೆ ತರುವ ಪೂರ್ವದಲ್ಲಿ ಮೃತ್ತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಈ ಕುರಿತು ಮರಣದ ಖಚಿತ ಕಾರಣ ತಿಳಿದುಕೊಳ್ಳಲು ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೇಶವ ತಂದೆ ಗಣಪಯ್ಯ ದೇವಡಿಗ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೇಶುಮನೆ, ಶಿರಾಲಿ-1, ತಾ: ಭಟ್ಕಳ ರವರು ದಿನಾಂಕ: 07-01-2022 ರಂದು 11-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಕುಮಾರಿ: ಕವನಾ ತಂದೆ ಮಂಜುನಾಥ ನಾಯ್ಕ, ಪ್ರಾಯ-17 ವರ್ಷ ಸಾ|| ಬೆಳಕೆ, ಕಾಮಮದ್ಲು, ಬೊಮ್ಮನಕೇರಿ, ತಾ: ಭಟ್ಕಳ. ಇವಳು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 07-01-2022 ರಂದು 13-30 ಗಂಟೆಯಿಂದ 14-00 ಗಂಟೆಯ ನಡುವಿನ ಅವಧಿಯಲ್ಲಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮನೆಯ ಮಲಗುವ ಕೋಣೆಯಲ್ಲಿ ಕುತ್ತಿಗೆಗೆ ವೇಲ್ ಸುತ್ತಿಕೊಂಡು ಅದೇ ವೇಲನ್ನು ಮನೆಯ ಮೇಲ್ಛಾವಣಿಯ ಪಕಾಶಿಗೆ ಕಟ್ಟಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಅವಳ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಟ್ಟಾ ತಂದೆ ಸುಬ್ಬ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಬೆಳಕೆ, ಕಾಮಮದ್ಲು, ಬೊಮ್ಮನಕೇರಿ, ತಾ: ಭಟ್ಕಳ ರವರು ದಿನಾಂಕ: 07-01-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರಕಾಶ ತಂದೆ ಸುರೇಶ ದೇಸಾಯಿ, ಪ್ರಾಯ-37 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ವಡೆಹುಕ್ಕಳಿ, ಪೋ: ಕನ್ನಡಗಲ್, ತಾ: ಯಲ್ಲಾಪುರ. ಪಿರ್ಯಾದಿಯವರ ತಮ್ಮನಾದ ಈತನು ದಿನಾಂಕ: 07-01-2022 ರಂದು ಮಧ್ಯಾಹ್ನ ಸಮಯ ಸುಮಾರು 12-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ದುರ್ಗದ ಚಿನ್ನಹುಕ್ಕಳಿ ಗ್ರಾಮದ ಶ್ರೀಕಾಂತ ತಂದೆ ರಾಮಾ ಮರಾಠಿ, ಇವರ ಮಾಲೀಕತ್ವದ ಸಂಬಂಧಿಸಿದ ಅಡಿಕೆ ತೋಟದಲ್ಲಿ ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿರುವಾಗ ಅಡಿಕೆ ಮರ ಮುರಿದು ಅಡಿಕೆ ಮರದಿಂದ ಕೆಳಗೆ ಬಿದ್ದು, ಮೈಕೈಗೆ, ಹಣೆಗೆ ಮತ್ತು ಎರಡು ಕಾಲಿನ ಮಂಡಿಯ ಕೆಳಗೆ ತೀವೃ ಗಾಯಗೊಂಡು ಸ್ಧಳದಲ್ಲಿ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಾಬಲೇಶ್ವರ ತಂದೆ ಸುರೇಶ ದೇಸಾಯಿ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ವಡೆಹುಕ್ಕಳಿ, ಪೋ: ಕನ್ನಡಗಲ್, ತಾ: ಯಲ್ಲಾಪುರ ರವರು ದಿನಾಂಕ: 07-01-2022 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 35 ರಿಂದ 40 ವರ್ಷ ಪ್ರಾಯದ ಯಾರೋ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಮುಸ್ಲಿಂ ಗಲ್ಲಿಯ ನಿವಾಸಿಯಾಗಿದ್ದು, ದಿನಾಂಕ: 06-01-2022 ರಂದು ಎಂದಿನಂತೆ ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಕುಟುಂಬದ ಸಹಿತವಾಗಿ ರಾತ್ರಿ 11-00 ಗಂಟೆಯ ಸುಮಾರಿಗೆ ತಮ್ಮ ಮನೆಯಲ್ಲಿ ಮಲಗಿದ್ದವರು, ದಿನಾಂಕ: 07-01-2022 ರಂದು ಬೆಳಿಗ್ಗೆ 06-15 ಗಂಟೆಯ ಸುಮಾರಿಗೆ ನಮಾಜ್ ಮಾಡಲು ಮಸೀದಿಗೆ ಹೋಗುವ ಸಲುವಾಗಿ ಮನೆಯ ಮುಂದಿನ ಬಾಗಿಲು ತೆಗೆದಾಗ ನಸು ಬೆಳಕಿನಲ್ಲಿ ಮನೆಯ ಮುಂದಿನ ಹಲಸಿನ ಮರದ ಕೆಳಗೆ ಯಾರೋ ಕುಳಿತುಕೊಂಡಿರುವಂತೆ ಕಂಡು ಬಂದು, ಯಾರು ಅಂತಾ ಮಾತನಾಡಿಸಲು ಹತ್ತಿರ ಹೋಗಿ ನೋಡಿದಾಗ ನಮೂದಿತ ಮೃತನು ಹಲಸಿನ ಮರದ ಅಡ್ಡ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮೃತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆಸೀಫ್ ತಂದೆ ಸೈಪುಲ್ಲಾ ಶುಂಠಿ, ಪ್ರಾಯ-34 ವರ್ಷ, ವೃತ್ತಿ-ಅಡಿಕೆ ವ್ಯಾಪಾರ, ಸಾ|| ಮುಸ್ಲಿಂ ಗಲ್ಲಿ, ತಾ: ಶಿರಸಿ ರವರು ದಿನಾಂಕ: 07-01-2022 ರಂದು 07-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 08-01-2022 05:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080