ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-07-2021

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ, ಕಾರವಾರ

ಅಪರಾಧ ಸಂಖ್ಯೆಃ 10/2021, ಕಲಂ: 66(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 24-06-2021 ರಂದು ಕಾರವಾರದ ಮಾಜಾಳಿ ಗ್ರಾಮದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ಕಾರದ ವತಿಯಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ಅನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೋವಿಡ್-19 ಇರುವುದರಿಂದ ಸದರಿ ಕಾರ್ಯಕ್ರಮದಲ್ಲಿ ಕೇವಲ 12 ಜನ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಅನ್ನು ನೀಡಲು ನಿಶ್ಚಯಿಸಿ, ಸದರಿ ಕಾರ್ಯಕ್ರಮವನ್ನು ಉಳಿದ ವಿದ್ಯಾರ್ಥಿಗಳಿಗೆ ವೀಕ್ಷಿಸಲು ಆನಲೈನ್ ಲಿಂಕ್ ಅನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಸದರಿ ಕಾರ್ಯಕ್ರಮದ ಮಧ್ಯದಲ್ಲಿ ನಮೂದಿತ ಯಾರೋ ಆರೋಪಿತರು ಕಾಲೇಜ್ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಿದ ಲಿಂಕ್ ನಲ್ಲಿ ಅಕ್ರಮವಾಗಿ ಪ್ರವೇಶಿಸಿ, ವಿದ್ಯಾರ್ಥಿಗಳಿಗೆ ಕೆಟ್ಟದಾಗಿ ಪ್ರಚೋದನೆಯಿರುವ ಮೆಸೇಜ್ ಗಳನ್ನು ಹರಿಬಿಟ್ಟಿರುತ್ತಾರೆ. ಆದ್ದರಿಂದ ಕಾಲೇಜಿನ ಅಧೀಕೃತ ಆನಲೈನ್ ಲಿಂಕ್ ನಲ್ಲಿ ಅಕ್ರಮವಾಗಿ ಪ್ರವೇಶಿಸಿ, ಪ್ರಚೋದನಾಕಾರಿ ಮೆಸೇಜ್ ಗಳನ್ನು ಪ್ರಸಾರ ಮಾಡಿರುವ ಆರೋಪಿತರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಡಾ|| ಶಾಂತಲಾ ಬಿ, ಪ್ರಾಂಶುಪಾಲರು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ಮಾಜಾಳಿ, ಕಾರವಾರ ರವರು ದಿನಾಂಕ: 07-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 406, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪುರುಷೋತ್ತಮ್ ತಂದೆ ಸೂರ್ಯನಾರಾಯಣ ಕುಲಕರ್ಣಿ, ಸಾ|| ಬಸವನಗರ, ತಾ: ಸಿಂಧನೂರು, ಜಿ: ರಾಯಚೂರು. ಈತನು ದಿನಾಂಕ: 09-01-2021 ರಿಂದ ಪಿರ್ಯಾದಿಯವರ ಮನೆಯ 2 ನೇ ಮಹಡಿಯಲ್ಲಿ ಬಾಡಿಗೆಗೆ ವಾಸವಿದ್ದು, ತಾನು M/s ಎಸ್ ಫುಡ್ಸ್ ಕಂಪನಿಯ ವತಿಯಿಂದ ಕಾರವಾರದಲ್ಲಿ ಫಾಸ್ಟ್ ಫುಡ್ಸ್ ವ್ಯವಹಾರ ಮಾಡುತ್ತಿದ್ದುದಾಗಿ ಹೇಳಿ, ತಾನು ಮತ್ತು ಪಿರ್ಯಾದಿಯವರು ಸೇರಿಕೊಂಡು 50% - 50% ಬಂಡವಾಳ ಹೂಡಿಕೆ ಆಧಾರ ಮೇಲೆ M/s ಎಸ್ ಫುಡ್ಸ್ ಕಂಪನಿಯ ಮೂಲಕ ಕಾರವಾರದಲ್ಲಿ ಫಾಸ್ಟ್ ಫುಡ್ಸ್ ಅಂಗಡಿಯನ್ನು ಪ್ರಾರಂಭ ಮಾಡುವ ಕುರಿತು ಮಾತನಾಡಿಕೊಂಡು, ಆ ಕುರಿತು ಹಬ್ಬುವಾಡದಲ್ಲಿ ಅಂಗಡಿಯನ್ನು ಬಾಡಿಗೆ ಪಡೆದು My-Taste ಎಂಬ ಹೆಸರಿನಲ್ಲಿ ಫಾಸ್ಟ್ ಫುಡ್ಸ್ ಅಂಗಡಿಯನ್ನು ಪ್ರಾರಂಭಿಸುವುದಾಗಿ ಪಿರ್ಯಾದಿಯವರೊಂದಿಗೆ ಒಪ್ಪಂದ ಮಾಡಿಕೊಂಡು, ಪಿರ್ಯಾದಿಯವರಿಂದ ಪ್ರಾರಂಭದ ಬಂಡವಾಳದ ಹಣ ಅಂತಾ ಹೇಳಿ 3.5 ಲಕ್ಷ ರೂಪಾಯಿ ಹಣ ಪಡೆದು ಹಾಗೂ ಅಂಗಡಿಗೆ ಬೇಕಾಗುವ ಫಾಸ್ಟ್ ಫುಡ್ಸ್ ಸಾಮಾಗ್ರಿಗಳನ್ನು ಪೂನಾದಿಂದ ತರಿಸಿಕೊಳ್ಳುವ ಬದಲು ಕಾರವಾರದಲ್ಲಿಯೇ ತಯಾರು ಮಾಡುವ ಅಂತಾ ಹೇಳಿ ಪಿರ್ಯಾದಿಯವರ ಬಾಬ್ತು ಮನೆಯ ಮೊದಲನೇ ಮಹಡಿಯನ್ನು ಬಾಡಿಗೆಗೆ ಪಡೆದು, ಅಲ್ಲಿ Speedy Natural Foods ಎಂಬ ಹೆಸರಿನಲ್ಲಿ ಅಂಗಡಿಯನ್ನು ಪ್ರಾರಂಭಿಸುವುದಾಗಿ ಹೇಳಿ ಪಿರ್ಯಾದಿಯವರಿಗೆ ನಂಬಿಕೆ ಬರುವಂತೆ ಮಾಡಿ, ನಂತರದಲ್ಲಿ ಅಂಗಡಿಯಲ್ಲಿ ಸಾಮಾನು ಖರೀದಿ ಹಾಗೂ ಇತರೇ ಖರ್ಚುಗಳಿಗೆ ಅಂತಾ ಹೇಳಿ ಪಿರ್ಯಾದಿಯವರಿಂದ ಹಂತ ಹಂತವಾಗಿ ಒಟ್ಟು 14 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ಅಂಗಡಿಯನ್ನು ಪ್ರಾರಂಭಿಸದೇ ಮತ್ತು ಪಿರ್ಯಾದಿಯವರಿಗೆ ಹಣವನ್ನು ಮರಳಿ ನೀಡದೇ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀಮತಿ ಶರಾವತಿ ಕೋಂ. ದಯಾನಂದ ಲಕ್ಕುಮನೆ, ಪ್ರಾಯ-60 ವರ್ಷ, ವೃತ್ತಿ-ನಿವೃತ್ತ ಉದ್ಯೋಗಿ, ಸಾ|| ಪಂಚವಟಿ, ಕೆ.ಇ.ಬಿ ಹತ್ತಿರ, ಕೋಣೆವಾಡಾ, ಕಾರವಾರ ರವರು ದಿನಾಂಕ: 07-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 323, 324, 307, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ತುಷಾರ ಸತ್ಯಜೀತ್ ವiರಾಠೆ, ಸಾ|| ಪುಣೆ, ಮಹಾರಾಷ್ಟ್ರ. ಈತನು ಪಿರ್ಯಾದಿಯ ಮಾಜಿ ಬಾಯಫ್ರೆಂಡ್ ಆಗಿದ್ದು, ಅವರು ಕಳೆದ 02 ವರ್ಷಗಳ ಹಿಂದೆ ಬೇರ್ಪಟ್ಟಿದ್ದು, ಆವಾಗಿನಿಂದ ಆರೋಪಿತನು ಪಿರ್ಯಾದಿಗೆ ಜೀವದ ಬೆದರಿಕೆ ಹಾಕುತ್ತಾ ಬಂದಿದ್ದವನು, ಪಿರ್ಯಾದಿಯವಳು ಗೋಕರ್ಣದ ಕುಡ್ಲೆ ಬೀಚ್ ನ ಕುಡ್ಲೆ ವ್ಯೂ ಬೀಚ್ ರೆಸಾರ್ಟ್ ನಲ್ಲಿ ಉಳಿದುಕೊಂಡ ಬಗ್ಗೆ ತಿಳಿದುಕೊಂಡು ಹಿಂಬಾಲಿಸಿಕೊಂಡು ಬಂದವನು, ದಿನಾಂಕ: 07-07-2021 ರಂದು ಮಧ್ಯಾಹ್ನ 15-00 ಗಂಟೆಗೆ ಗೋಕರ್ಣದ ಕುಡ್ಲೆ ಬೀಚ್ ನ ಕುಡ್ಲೆ ಬೀಚ್ ವ್ಯೂ ರೆಸಾರ್ಟ್ ನಲ್ಲಿ ಪಿರ್ಯಾದಿಯು ಉಳಿದುಕೊಂಡಿದ್ದ ರೂಮ್ ನಂ: 306 ನೇದರಲ್ಲಿ ಬಂದು ಪಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಎರಡು ಕೈಗಳಿಂದ ಮುಖಕ್ಕೆ, ಕಣ್ಣಿಗೆ ಗುದ್ದಿ, ಗಂಟಲನ್ನು ಒತ್ತಿ ಹಿಡಿದು, ತಂತಿಯಿಂದ ಕತ್ತು ಹಿಸುಕಿ, ಮುಖಕ್ಕೆ ಬಲವಾಗಿ ಹೊಡೆದು ಗಂಭೀರ ಗಾಯನೋವು ಪಡಿಸಿ, ತಲೆದಿಂಬಿನಿಂದ ಮುಖಕ್ಕೆ ಒತ್ತಿ ಕೊಲೆ ಮಾಡಲು ಪ್ರಯತ್ನಿಸಿ ಓಡಿ ಹೋದ ಬಗ್ಗೆ ಪಿರ್ಯಾದಿ ಕುಮಾರಿ: ಕೃತಿಕಾ ಚೌಧರಿ, ಪ್ರಾಯ-24 ವರ್ಷ, ವೃತ್ತಿ-ಗೂಗಲ್ ನೇಮಕಾತಿ, ಸಾ|| ಫತೇಹಾಬಾದ್, ಹರಿಯಾಣ ರವರು ದಿನಾಂಕ: 07-07-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 341, 326, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಮ್ಮದ್ ಇಫ್ಜಾಲ್ ತಂದೆ ಅಬ್ದುಲ್ ವದೂದ್ ಖಾಜಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ/ವ್ಯಾಪಾರ, ಸಾ|| ನ್ಯಾಷನಲ್ ಕಾಲೋನಿ, 8 ನೇ ಕ್ರಾಸ್, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ, 2]. ಅಬ್ರಾರ್ ತಂದೆ ಜೂಬೇರ ವಲ್ಕಿ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನ್ಯಾಷನಲ್ ಕಾಲೋನಿ, 6 ನೇ ಕ್ರಾಸ್, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಕಳೆದ 15 ದಿನಗಳಿಂದ ಪಿರ್ಯಾದಿಗೆ ಜಾನುವಾರು ಕಳುವು ಮಾಡಿಕೊಂಡು ಬರಲು ತನ್ನ ಜೊತೆ ಬರುವಂತೆ ಒತ್ತಾಯ ಮಾಡುತ್ತಿದ್ದು, ಅದಕ್ಕೆ ಪಿರ್ಯಾದಿಯು ‘ಈಗಾಗಲೇ ತನ್ನ ಮೇಲೆ ಕೇಸ್ ಇದೆ. ತಾನು ಬರುವುದಿಲ್ಲ’ ಅಂತಾ ಹೇಳಿದರೂ ಸಹ ಆರೋಪಿ 1 ನೇಯವನು ಕೇಳದೆ ಜಾನುವಾರು ಕಳುವು ಮಾಡಿಕೊಂಡು ಬರಲು ತನ್ನ ಜೊತೆ ಬರುವಂತೆ ಪಿರ್ಯಾದಿಗೆ ಒತ್ತಾಯ ಮಾಡಿ ತೊಂದರೆ ನೀಡುತ್ತಿದ್ದವನು, ದಿನಾಂಕ: 06-07-2021 ರಂದು ರಾತ್ರಿ 08-30 ಗಂಟೆಗೆ ಪಿರ್ಯಾದಿಯು ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಮೂದಿತ ಆರೋಪಿತರು ಮುರ್ಡೇಶ್ವರದ ನ್ಯಾಷನಲ್ ಕಾಲೋನಿಯ 6 ನೇ ಕ್ರಾಸಿನಲ್ಲಿ ಪಿರ್ಯಾದಿಗೆ ರಸ್ತೆಯಲ್ಲಿ ಅಡ್ಡಗಟ್ಟಿದ್ದು, ಆರೋಪಿ 1 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ‘ನೀನು ಜಾನುವಾರು ಕಳುವು ಮಾಡಿಕೊಂಡು ಬರಲು ತನ್ನ ಜೊತೆ ಬರುವುದಿಲ್ಲವಾ’ ಅಂತಾ ಹೇಳಿ ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿ 2 ನೇಯವನು ಪಿರ್ಯಾದಿಯ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆರೋಪಿ 1 ನೇಯವನು ಕಬ್ಬಿಣದ ರಾಡಿನಿಂದ ಪಿರ್ಯಾದಿಯ ತಲೆಯ ಎಡಬದಿಗೆ ಬಲವಾಗಿ ಹೊಡೆದು ಗಂಭೀರವಾಗಿ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಬಾನ್ ತಂದೆ ಅಬ್ದುಲ್ಲಾ ಶೇಖ್, ಪ್ರಾಯ-21 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ಬಸ್ತಿಮಕ್ಕಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 07-07-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೈಲಾರ ತಂದೆ ನಾಗರಾಜ ಅಣ್ವೇಕರ, ಸಾ|| ಸಂಭಾಜಿನಗರ, ತಾ: ವಡಗಾಂವ, ಜಿ: ಬೆಳಗಾವಿ (ಟಾಟಾ ಟಿಯಾಗೋ ಕಾರ್ ನಂ: ಕೆ.ಎ-22/ಎಮ್.ಸಿ-1447 ನೇದರ ಚಾಲಕ). ಈತನು ದಿನಾಂಕ: 07-07-2021 ರಂದು ಬೆಳಿಗ್ಗೆ 11-35 ಗಂಟೆಗೆ ತಾನು ಚಲಾಯಿಸಿಕೊಂಡು ಬಂದ ಟಾಟಾ ಟಿಯಾಗೋ ಕಾರ್ ನಂ: ಕೆ.ಎ-22/ಎಮ್.ಸಿ-1447 ನೇದನ್ನು ಶಿರಸಿ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬನವಾಸಿಯ ಕಲಾಶ್ರೀ ಪೆಟ್ರೋಲ್ ಬಂಕ್ ಬಳಿ ಮೋಟಾರ್ ಸೈಕಲ್ ನಂ: ಕೆ.ಎ-31/ವ್ಹಾಯ್-9516 ನೇದನ್ನು ಚಲಾಯಿಸಿಕೊಂಡು ಬನವಾಸಿ ಕಡೆಗೆ ಹೋಗುತ್ತಿದ್ದ  ಪಿರ್ಯಾದಿಯ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಪಿರ್ಯಾದಿಯ ಹಣೆಯ ಬಲಭಾಗ, ಎರಡೂ ಕಾಲಿನ ಮಂಡಿಯ ಬಳಿ ಮತ್ತು ಎಡಗೈಗೆ ತೆರಚಿದ ನಮೂನೆಯ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಸಂತ ತಂದೆ ಗಣೇಶ ಪುರೋಹಿತ, ಪ್ರಾಯ-42 ವರ್ಷ, ವೃತ್ತಿ-ಪೌರೋಹಿತ್ಯ, ಸಾ|| ಮಧುಕೇಶ್ವರ ದೇವಸ್ಥಾನದ ಹಿಂದುಗಡೆ, ಬನವಾಸಿ, ತಾ: ಶಿರಸಿ ರವರು ದಿನಾಂಕ: 07-07-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 323, 341, 355, 427, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಠೋಬಾ ತಂದೆ ಬಿಸೋ ಗಾವಡಾ, ಸಾ|| ಕಾಮ್ರಾ, ತಾ: ಜೋಯಿಡಾ. ಈತನು ಹಾಗೂ ಪಿರ್ಯಾದಿಯವರು ಸೇರಿ ಅವರು ಒಟ್ಟು ಐದು ಜನ ಅಣ್ಣ-ತಮ್ಮಂದಿರಿದ್ದು, ಎಲ್ಲರ ಜಮೀನುಗಳು ಒಂದೇ ಕಡೆಯಲ್ಲಿ ಇರುತ್ತವೆ. ಪಿರ್ಯಾದಿಯ ಪಾಲಿಗೆ ಬಂದಿರುವ ಜಮೀನು ಎಲ್ಲರ ಜಮೀನುಗಳಿಗಿಂತ ಕೊನೆಯಲ್ಲಿ ತಗ್ಗಿನಲ್ಲಿದ್ದು, ಅವರು ತಮ್ಮ ಜಮೀನಿಗೆ ನೀರು ತೆಗೆದುಕೊಂಡು ಹೋಗಬೇಕಾಗಿದ್ದಲ್ಲಿ ಅವರ ಜಮೀನಿನ ಮೇಲ್ಭಾಗದಲ್ಲಿರುವ ಅವರ ಅಣ್ಣ-ತಮ್ಮಂದಿರ ಜಮೀನುಗಳ ಮೂಲಕ ನೀರನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಪಿರ್ಯಾದಿಯವರು ತಮ್ಮ ಜಮೀನನಲ್ಲಿ ಭತ್ತದ ನಾಟಿ ಮಾಡಲು ಜಮೀನು ಹದ ಮಾಡಿಕೊಂಡು, ಭತ್ತದ ನಾಟಿ ಮಾಡಲು ನೀರಿನ ಅವಶ್ಯಕತೆ ಇರುವುದರಿಂದ ನಾಲೆಯ ನೀರನ್ನು ಬಿಟ್ಟಿದ್ದು, ಸದರ ನೀರನ್ನು ಆರೋಪಿತನು ತಮ್ಮ ಮಧ್ಯ ಬರುವ ಜಮೀನಿನಲ್ಲಿ ಪಿರ್ಯಾದಿಯವರು ಬಿಟ್ಟ ನೀರನ್ನು ತಾನು ತುಂಬಿಸಿಕೊಳ್ಳಲು ನೀರು ಮುಂದೆ ಹರಿಯದಂತೆ ಒಡ್ಡು ಕಟ್ಟಿದ್ದು, ಅದಕ್ಕೆ ದಿನಾಂಕ: 06-07-2021 ರಂದು ಮಧ್ಯಾಹ್ನ 03-20 ಗಂಟೆಯ ಸುಮಾರಿಗೆ ‘ನಾನು ಭತ್ತದ ನಾಟಿ ಮಾಡಲು ಜಮೀನು ಹದ ಮಾಡಿದ್ದೇನೆ. ಅದರಲ್ಲಿ ನಾನು ಬಿಟ್ಟ ನೀರನ್ನು ನೀನು ಯಾಕೆ ಕಟ್ಟಿ ಹಾಕಿದ್ದಿ? ನೀರನ್ನು ಮುಂದಕ್ಕೆ ಹರಿಯುವುದಕ್ಕೆ ಬಿಡು’ ಅಂತಾ ಹೇಳುತ್ತಾ ತಮ್ಮ ಜಮೀನಿನ ಕಡೆಗೆ ಹೋಗುತ್ತಿರುವಾಗ ಆರೋಪಿತನು ಪಿರ್ಯಾದಿಯವರ ದಾರಿಗೆ ಅಡ್ಡಗಟ್ಟಿ, ‘ಪೋದ್ರಿಚಾ ನೀನು ಕೇಳುವವನು ಯಾರು? ನನ್ನ ಜಮೀನನಲ್ಲಿ ನಾನು ಏನು ಬೇಕಾದರೂ ಮಾಡುತ್ತೇನೆ. ಚಪ್ಪಲಿಯಿಂದ ಹೊಡೆಯುತ್ತೇನೆ’ ಅಂತಾ ಹೇಳಿದಾಗ ‘ಹೊಡಿ ನೋಡುವಾ’ ಅಂತಾ ಹೇಳಿದ್ದಕ್ಕೆ ಚಪ್ಪಲಿಯಿಂದ ಪಿರ್ಯಾದಿಯವರ ಮುಖ ಹಾಗೂ ಬೆನ್ನಿನ ಭಾಗದಲ್ಲಿ ಹೊಡೆದು, ಅಲ್ಲದೇ ಕೈಯಿಂದ ಸಹ ಬೆನ್ನಿನ ಭಾಗದಲ್ಲಿ  ಹೊಡೆದಿರುತ್ತಾನೆ. ಅವನು ಹೊಡೆದಿದ್ದರಿಂದಾಗಿ ತನ್ನ ಎಡಗಣ್ಣಿನ ಹುಬ್ಬಿನ ಭಾಗದಲ್ಲಿ ರಕ್ತದ ಗಾಯವಾಗಿದ್ದು, ಕನ್ನಡಕ (ಚಸ್ಮಾ) ಮುರಿದು ಹಾಳಾಗಿರುತ್ತದೆ. ಅಲ್ಲಿಂದ ಹೋಗುವಾಗ ‘ನಿನಗೆ ಕೊಂದು ಹಾಕುತ್ತೇನೆ’ ಎನ್ನುವುದಾಗಿ ಧಮಕಿ ಹಾಕಿ ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀ ಬಾಲಕೃಷ್ಣ ತಂದೆ ಬಿಸೋ ಗಾವಡಾ, ಪ್ರಾಯ-71 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಮ್ರಾ, ತಾ: ಜೋಯಿಡಾ ರವರು ದಿನಾಂಕ: 07-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 323, 447, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ 1]. ಬಾಲಕೃಷ್ಣ ಬಿಸೋ ಗಾವಡಾ, 2]. ಪ್ರಶಾಂತ ಬಾಲಕೃಷ್ಣಾ ಗಾವಡಾ, 3]. ಪುಂಡ್ಲೀಕ ಬಿಸೋ ಗಾವಡಾ, ಸಾ|| (ಮೂವರೂ) ಕಾಮ್ರಾ, ತಾ: ಜೋಯಿಡಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಹಾಗೂ 3 ನೇಯವರು ಮತ್ತು ಪಿರ್ಯಾದಿಯವರು ಸೇರಿ ಐವರು ಅಣ್ಣ-ತಮ್ಮಂದಿರು ಇದ್ದು, ಅವರ ಜಮೀನುಗಳು ಒಂದೇ ಕಡೆಯಲ್ಲಿ ಇದ್ದು, ಅವುಗಳನ್ನು ಪಾಲು ಮಾಡಿಕೊಂಡು ಸಾಗುವಳಿ ಮಾಡಿಕೊಂಡಿರುತ್ತಾರೆ. ದಿನಾಂಕ: 06-07-2021 ರಂದು ಮಧ್ಯಾಹ್ನ 03-15 ಗಂಟೆಯ ಸುಮಾರಿಗೆ ಪಿರ್ಯಾದಿಯವರು ತಮ್ಮ ಜಮೀನಿನ ಕಡೆಗೆ ಹೋದಾಗ ತಮ್ಮ ಜಮೀನಿನಲ್ಲಿಯ ಹಾಳಿಯ ಬದವನ್ನು ಒಡೆದು ನೀರು ಬಿಟ್ಟುಕೊಂಡಿದ್ದನ್ನು ನೋಡಿ ನೀರು ಹರಿಯುತ್ತಿರುವುದನ್ನು ಕಟ್ಟಲು ಹೋದಾಗ ಅಲ್ಲೇ ತನ್ನ ಗದ್ದೆಯಲ್ಲಿದ್ದ ಪಿರ್ಯಾದಿಯ ತಮ್ಮನಾದ ಆರೋಪಿ 1 ನು ಪಿರ್ಯಾದಿಯವರಿಗೆ ಹೊಡೆಯುವ ಉದ್ದೇಶದಿಂದ ‘ನಾಲಾಯಕ್ ಪೋದ್ರಿಚಾ, ನೀರು ಯಾಕೆ ಕಟ್ಟುತ್ತಾ ಇದ್ದಿ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಪಿರ್ಯಾದಿಯವರ ಗದ್ದೆಯಲ್ಲಿ ಅಕ್ರಮ ಪ್ರವೇಶ ಮಾಡಿ ಬಂದವನೆ, ಪಿರ್ಯಾದಿಯವರಿಗೆ ದೂಡಿ ಹಾಕಿ ಕಾಲಿನಿಂದ ಹೊಟ್ಟೆಯ ಭಾಗದಲ್ಲಿ ಒದ್ದಾಗ ಕೆಳಗಡೆ ಬಿದ್ದ ಪಿರ್ಯಾದಿಯವರು ಎದ್ದು ಸಿಟ್ಟು ಬಂದು ಆರೋಪಿತನಿಗೆ ದೂಡಿ ಹಾಕಿದ್ದು, ಅವನು ಹೆಗಲ ಮೇಲೆ ಪಾವಡಾ ಇಟ್ಟುಕೊಂಡು ಬಂದಿದ್ದರಿಂದ, ಬಿದ್ದಾಗ ಪಾವಡಾ ಅವನ ಹಣೆಗೆ ತಾಗಿ ರಕ್ತದ ಗಾಯವಾಗಿದ್ದು, ಆರೋಪಿ 1 ನೇಯವನು ಅಲ್ಲಿಂದ ತನ್ನ ಮನೆ ಕಡೆಗೆ ಹೋಗುತ್ತಾ ‘ತಾನು ಏನು ಅಂತಾ ತೋರಿಸುತ್ತೇನೆ’ ಅಂತಾ ಹೇಳುತ್ತಾ ಹೋಗಿದ್ದು, ಪಿರ್ಯಾದಿಯವರು ಸಹ ತಮ್ಮ ಮನೆಗೆ ಬಂದಾಗ 16-00 ಗಂಟೆಯ ಸುಮಾರಿಗೆ ಆರೋಪಿ 1 ನೇಯವನ ಮಗನಾದ ಆರೋಪಿ 2 ಹಾಗೂ ಪಿರ್ಯಾದಿಯವರ ಇನ್ನೊಬ್ಬ ತಮ್ಮನಾದ ಆರೋಪಿ 3 ನೇಯವರು ತಮ್ಮ ಕೈಯಲ್ಲಿ ಕಟ್ಟಿಗೆಯ ಬಡಿಗೆಗಳನ್ನು ಹಿಡಿದುಕೊಂಡು ಪಿರ್ಯಾದಿಯವರ ಮನೆಯ ಅಂಗಳದಲ್ಲಿ ಬಂದು ‘ಚೋರಾ (ಕಳ್ಳ ಮಗನೇ) ಹೊರಗಡೆ ಬಾ’ ಅಂತಾ ಕೂಗಿದಾಗ ಹೊರಗಡೆ ಬಾಗಿಲಿನಲ್ಲಿ ಬಂದು ನಿಂತು ‘ಏನು?’ ಅಂತಾ ಕೇಳಿದಾಗ, ‘ಹೊರಗಡೆ ಸಿಗು, ರಾಂಡೇಚಾ, ನಿನಗೆ ಕೊಂದು ಹಾಕುತ್ತೇವೆ’ ಅಂತಾ ಧಮಕಿ ಹಾಕಿರುವ ಬಗ್ಗೆ ಪಿರ್ಯಾದಿ ಶ್ರೀ ವಿಠೋಬಾ ತಂದೆ ಬಿಸೋ ಗಾವಡಾ, ಪ್ರಾಯ-77 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಮ್ರಾ, ತಾ: ಜೋಯಿಡಾ ರವರು ದಿನಾಂಕ: 07-07-2021 ರಂದು 16-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-07-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹಾಬಲೇಶ್ವರ ತಂದೆ ಮಾರ್ಯಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೂಲಿ ಕೆಲಸ ಹಾಗೂ ಕಟ್ಟಡ ಕೂಲಿ ಕೆಲಸ, ಸಾ|| ಜಾರಗಲ್, ಭರತನಳ್ಳಿ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯವರ ತಂದೆಯವರಾದ ಇವರು ದಿನಾಂಕ: 06-07-2021 ರಂದು 18-30 ಗಂಟೆಯಿಂದ ದಿನಾಂಕ: 07-07-2021 ರಂದು 11-00 ಗಂಟೆಯ ನಡುವಿನ ಅವಧಿಯಲ್ಲಿ ಕೃಷಿ ಕೂಲಿ ಕೆಲಸಕ್ಕೆ ಹೋದವರು, ವಾಪಸ್ ಮನೆಗೆ ಬರುತ್ತಿರುವಾಗ ಯಲ್ಲಾಪುರ ತಾಲೂಕಿನ ಭರತನಳ್ಳಿ ಜಾರಗಲ್ ಊರಿನ ಅರಣ್ಯ ಪ್ರದೇಶದಲ್ಲಿ ದಿನಾಂಕ: 06-07-2021 ರಂದು ಬೀಸಿದ ಜೋರಾದ ಗಾಳಿಯಿಂದ ಕಿಂದಳ ಎಂಬ ಜಾತಿಯ ಮರದ ಟೊಂಗೆ ಆಕಸ್ಮಿಕವಾಗಿ ಮುರಿದು ಮೈ ಮೇಲೆ ಬಿದ್ದಿದ್ದರಿಂದ ಕಿಬ್ಬೊಟ್ಟೆಯ ಹತ್ತಿರ ಹಾಗೂ ಎಡಗಾಲಿನ ಮೊಣಗಂಟಿನ ಕೆಳಕ್ಕೆ ತೀವ್ರ ಸ್ವರೂಪದ ಗಾಯನೋವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಮಹಾಬಲೇಶ್ವರ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೂಲಿ ಕೆಲಸ, ಸಾ|| ಜಾರಗಲ್, ಭರತನಳ್ಳಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 07-07-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 11-07-2021 07:19 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080