ಅಭಿಪ್ರಾಯ / ಸಲಹೆಗಳು

 

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ರಮೇಶ ಆಚಾರಿ, ಪ್ರಾಯ-30 ವರ್ಷ, ವೃತ್ತಿ-ಕಲ್ಲಿನ ಕೆತ್ತನೆ ಕೆಲಸ, ಸಾ|| ಹಡವ, ಕಣಗಿಲ್, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-2663 ನೇದರ ಸವಾರ). ಈತನು ದಿನಾಂಕ: 07-06-2021 ರಂದು ಮಧ್ಯಾಹ್ನ 13-45 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ. ಕೆ.ಎ-30/ಡಬ್ಲ್ಯೂ-2663 ನೇದನ್ನು ಶೆಟಗೇರಿ ಪಂಚಾಯತ ಕ್ರಾಸ್ ಕಡೆಯಿಂದ ಕಡೆಯಿಂದ ಅಂಕೋಲಾ-ಕಾರವಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಸವಾರಿ ಮಾಡಿಕೊಂಡು ತನ್ನ ಸೈಡ್ ಬಿಟ್ಟು ರಸ್ತೆಯ ಬಲಕ್ಕೆ ಬಂದವನು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಕಡೆಯಿಂದ ಶೆಟಗೇರಿ ಗ್ರಾಮ ಪಂಚಾಯತ ಕ್ರಾಸ್ ಕಡೆಗೆ ಹೊರಟ ಲಾರಿ ನಂ: ಕೆ.ಎ-47/3224 ನೇದಕ್ಕೆ ಎಡ ಸೈಡಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ತಲೆಗೆ ಹಾಗೂ ಎರಡು ಕಾಲುಗಳಿಗೆ ಭಾರೀ ಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಭಾರ್ಗವ ತಂದೆ ಹರೀಶ್ಚಂದ್ರ ನಾಯಕ, ಪ್ರಾಯ-27 ವರ್ಷ, ವೃತ್ತಿ-ಪಿಗ್ಮಿ ಕಲೆಕ್ಟರ್, ಸಾ|| ಹೊಸ್ಕೇರಿ, ತಾ: ಅಂಕೋಲಾ ರವರು ದಿನಾಂಕ: 07-06-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗೋವಿಂದ ತಂದೆ ಕೃಷ್ಣ ಗೌಡ, ಪ್ರಾಯ-41 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾವಿಕೊಡ್ಲ, ತಾ: ಕುಮಟಾ, 2]. ಗುರು ತಂದೆ ಹೊಸಬು ಗೌಡ, ಪ್ರಾಯ-24 ವರ್ಷ, ವೃತ್ತಿ: ಗಾವಡಿ ಕೆಲಸ, ಸಾ|| ಹಾರುಮಾಸ್ಕೇರಿ, ತಾ: ಕುಮಟಾ, 3]. ಕಮಲಾಕರ ತಂದೆ ಪೊಕ್ಕಾ ಗೌಡ, ಪ್ರಾಯ:29 ವರ್ಷ, ವೃತ್ತಿ: ಕೂಲಿ ಕೆಲಸ, ಸಾ|| ಬಾವಿಕೊಡ್ಲ, ತಾ: ಕುಮಟಾ, 4]. ನಾಗಪ್ಪ ತಂದೆ ಹನುಮಂತ ಗೌಡ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರುಮಾಸ್ಕೇರಿ, ತಾ: ಕುಮಟಾ, 5]. ದೇವರಾಜ ತಂದ ಮಂಜುನಾಥ ಗೌಡ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾವಿಕೊಡ್ಲ, ತಾ: ಕುಮಟಾ, 6]. ಗೊಯ್ದು ತಂದೆ ನಾಗು ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾವಿಕೊಡ್ಲ, ತಾ: ಕುಮಟಾ. ಈ ನಮೂದಿತ ಆರೋಪಿತರೆಲ್ಲರೂ ದಿನಾಂಕ: 07-06-2021 ರಂದು ರಾತ್ರಿ 00-55 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಬಾವಿಕೊಡ್ಲ ಗ್ರಾಮದ ಗದ್ದೆ ಪ್ರದೇಶದ ಪಕ್ಕದ ಖುಲ್ಲಾ ಜಾಗದಲ್ಲಿ ಕೊರೋನಾ ರೋಗ ಹರಡುವ ಸಂಭವ ಇದ್ದ ಬಗ್ಗೆ ಮಾನ್ಯ ಕರ್ನಾಟಕ ಸರಕಾರದ ಹಾಗೂ ಜಿಲ್ಲಾಧಿಕಾರಿಯವರ ಲಾಕಡೌನ್ ಆದೇಶ ಇದ್ದ ಬಗ್ಗೆ ಗೊತ್ತಿದ್ದರೂ ಸಹ ವಿಧಿ ವಿರುದ್ದವಾಗಿ ನಿರ್ಲಕ್ಷ್ಯತನದಿಂದ ಉದ್ದೇಶ ಪೂರ್ವಕವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಕೊರೋನಾ ರೋಗದ ಸೋಂಕು ಹರಡಿ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಕುಳಿತುಕೊಂಡು ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಾ ನಗದು ಹಣ 2,950/- ರೂಪಾಯಿ ಹಾಗೂ ಇಸ್ಪೀಟ್ ಜೂಗಾರಾಟದ ಸಲಕರಣೆಗಳ ಸಮೇತ ಆರೋಪಿ 1 ರಿಂದ 4 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ಮತ್ತು 6 ನೇಯವರು ಓಡಿ ಹೋಗಿ ತಪ್ಪಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 07-06-2021 ರಂದು 02-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 269, 271, 328 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಜಾನು ಗಾವಡಾ, ಅಂದಾಜು ಪ್ರಾಯ-37 ವರ್ಷ, ಸಾ|| ಕೆಲೋಲಿ, ಝಲಾವಳಿ, ತಾ: ಜೊಯಿಡಾ. ಈತನು ದೇಶಾದ್ಯಂತ ಕೊರೋನಾ ಮಹಾಮಾರಿ ವೈರಸ್ ರೋಗವು ಹರಡಿದ್ದು, ಈ ವೈರಸ್ ರೋಗದಿಂದ ಸಾಕಷ್ಟು ಮಾನವ ಪ್ರಾಣಕ್ಕೆ ಹಾನಿಯುಂಟಾಗುತ್ತಿದ್ದು. ಈ ಬಗ್ಗೆ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಿವಿಧ ರೀತಿಯಲ್ಲಿ ನಿಬಂಧನೆಗಳನ್ನು ಹೊರಡಿಸಿದ್ದರೂ ಸಹ ಕೊರೋನಾ ಮಹಾಮಾರಿ ವೈರಸ್ ದೇಶವ್ಯಾಪಿ ಹರಡುತ್ತಿದ್ದ ಇಂತಹ ಸಮಯದಲ್ಲಿ ಈತನು ಪ್ರಾಣಕ್ಕೆ ಅಪಾಯಕಾರಿ ಸೋಂಕು ಹರಡುವ ಸಂಭವವಿರುವುದೆಂದು ತಿಳಿದೂ ಸಹ ನಿರ್ಲಕ್ಷ್ಯತನ ಮಾಡಿ ಹಾಗೂ ರೋಗ ನಿರೋಧಕ ನಿರ್ಬಂಧದ ನಿಯಮಗಳನ್ನು ತಿಳಿದೂ ಉಲ್ಲಂಘನೆ ಮಾಡಿ, ದಿನಾಂಕ: 07-06-2021 ರಂದು 15-20 ಗಂಟೆಗೆ ಯಾವುದೇ ರೀತಿಯ ಅಧೀಕೃತ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಗೋವಾ ರಾಜ್ಯದಿಂದ ಸಾರಾಯಿ ತಂದು ಮಾರಾಟ ಮಾಡುವ ಉದ್ದೇಶದಿಂದ ತನ್ನ ಮನೆಯ ಪಕ್ಕದ ಗುಡಿಸಲು ಹತ್ತಿರ ಇಟ್ಟುಕೊಂಡು ಸದರ ಸ್ವತ್ತುಗಳ ಸಮೇತ ಇದ್ದಾಗ ದಾಳಿಯ ಕಾಲ ದಸ್ತಗಿರಿಗೆ ಸಿಗದೇ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಂಜುಳಾ ರಾವೋಜಿ, ಡಬ್ಲ್ಯೂ.ಪಿ.ಎಸ್.ಐ, ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 07-06-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಧನಂಜಯ ತಂದೆ ಮನೋಹರ ಪೇಟ್ನೇಕರ, ಪ್ರಾಯ-58 ವರ್ಷ, ಸಾ|| ಜವಾಹರ ರೋಡ್, ತಾ: ಹಳಿಯಾಳ (ಲಾರಿ ನಂ: ಕೆ.ಎ-22/ಎ-5263 ನೇದರ ಮಾಲಿಕರು). ದಿನಾಂಕ: 28-05-2021 ರಂದು 15-30 ಗಂಟೆಯ ಸುಮಾರಿಗೆ ಶ್ರೀ ಮಕ್ಬುಲ್ ಅಹಮ್ಮದ್ ತಂದೆ ದಸ್ತಗಿರಸಾಬ್ ಇಟಗಿ, ಪ್ರಾಯ-43 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ವಾಟರ್ ಟ್ಯಾಂಕ್ ಹತ್ತಿರ, ಪಟೇಲ್ ನಗರ, ದಾಂಡೇಲಿ, ಈತನು ದಾಂಡೇಲಿಯ ಡಬ್ಲೂ.ಸಿ.ಪಿ.ಎಮ್ ನ ಫೋಲ್ಸ್ ಗಳನ್ನು ಖಾಲಿ ಮಾಡುವ ಸ್ಥಳದ ಹತ್ತಿರ ಲಾರಿ ನಂ: ಕೆ.ಎ-22/ಎ-5263 ನೇದರಲ್ಲಿದ್ದ ಫೋಲ್ಸ್ ಗಳನ್ನು ಖಾಲಿ ಮಾಡುತ್ತಿರುವಾಗ ಲಾರಿ ಮೇಲಿನಿಂದ ಕೆಳಗೆ ನೆಲದ ಮೇಲೆ ಬಿದ್ದು, ಬಲಗಾಲಿಗೆ, ಬಲಗೈಗೆ ಹಾಗೂ ಸೊಂಟಕ್ಕೆ ಭಾರೀ ಒಳನೋವು ಆಗಿದ್ದು, ಈ ಘಟನೆಗೆ ಲಾರಿ ನಂ: ಕೆ.ಎ-22/ಎ-5263 ನೇದರ ಮಾಲಿಕನಾದ ನಮೂದಿತ ಆರೋಪಿತನ ನಿರ್ಲಕ್ಷ್ಯತನದಿಂದಲೇ ಈ ಘಟನೆ ಸಂಭವಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಹುಸೇನಭಿ ಕೋಂ. ಮಕ್ಬುಲ್ ಅಹಮ್ಮದ್ ಇಟಗಿ, ಪ್ರಾಯ-39 ವರ್ಷ, ವೃತ್ತಿ-ಗೃಹಿಣಿ, ಸಾ|| ವಾಟರ್ ಟ್ಯಾಂಕ್ ಹತ್ತಿರ, ಪಟೇಲ್ ನಗರ, ದಾಂಡೇಲಿ ರವರು ದಿನಾಂಕ: 07-06-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 269, 328 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು ಶ್ರೀಮತಿ ಆಸ್ಮಾ ಕೋಂ. ಜೀತು @ ಜಿತೇಂದ್ರ ಕಂಜರಬಾಟ, ಪ್ರಾಯ-35 ವರ್ಷ, ಸಾ|| ಕಂಜರಬಾಟ, ಗಾಂಧಿನಗರ, ದಾಂಡೇಲಿ. ನಮೂದಿತ ಆರೋಪಿತಳು ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರವು ಲಾಕಡೌನ್ ಘೊಷಣೆ ಮಾಡಿ ಆದೇಶಿಸಿದ್ದು, ಅಲ್ಲದೇ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಸಹ ದಿನಾಂಕ: 14-06-2021 ರವರೆಗೆ ಲಾಕಡೌನ್ ಘೋಷಿಸಿ ಕಠಿಣ ಕ್ರಮ ಕೈಗೊಳ್ಳಲು ಆದೇಶಸಿದ್ದಲ್ಲದೇ, ದಾಂಡೇಲಿ ನಗರದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದ್ದರಿಂದ ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಒಬ್ಬರಿಂದೊಬ್ಬರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಆದೇಶಿಸಿದ್ದರೂ ಕೂಡ ಲಾಕಡೌನ್ ಆದೇಶವನ್ನು ಉಲ್ಲಂಘಿಸಿ, ಕಳ್ಳಭಟ್ಟಿ ಸರಾಯಿ ಕುಡಿದರೆ ಮನುಷ್ಯರ ಸಾವು ಸಂಭವಿಸಬಹುದು ಅಂತಾ ಗೊತ್ತಿದ್ದೂ ಸಹ ತನ್ನ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಎಲ್ಲಯೋ ಕಳ್ಳಭಟ್ಟಿ ಸರಾಯಿಯನ್ನು ತಯಾರು ಮಾಡಿ, ಅದನ್ನು ಮಾರಾಟ ಮಾಡುವ ಉದ್ದೇಶದಿಂದ ದಿನಾಂಕ: 07-06-2021 ರಂದು 17-00 ಗಂಟೆಗೆ ದಾಂಡೇಲಿಯ ಅಂಬೇವಾಡಿಯ ರೈಲ್ವೇ ಗೇಟ್ ಹತ್ತಿರ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಬರುತ್ತಿರುವಾಗ ದಾಳಿಯ ಕಾಲಕ್ಕೆ ಸುಮಾರು ಐದು ಲೀಟರ್ ಕಳ್ಳಭಟ್ಟಿ ಸರಾಯಿ ಇರುವ ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾನ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 07-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: 323, 324, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಪ್ಪಾರಾವ ತಂದೆ ಈರಪ್ಪ ಘಟಗೋಳಕರ, ಪ್ರಾಯ-66 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತೇರಗಾಂವ ಗ್ರಾಮ, ತಾ: ಹಳಿಯಾಳ, 2]. ಶ್ರೀಮತಿ ಪಾರ್ವತಿ ಕೋಂ. ಅಪ್ಪಾರಾವ ಘಟಗೋಳಕರ, ಪ್ರಾಯ-62 ವರ್ಷ, ವೃತ್ತಿ-ಮನೆ ಕೆಲಸ, ಸಾ|| ತೇರಗಾಂವ ಗ್ರಾಮ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ತೇರಗಾಂವ ಗ್ರಾಮದಲ್ಲಿ ಪಿರ್ಯಾದಿ ಮನೆಯ ಪಕ್ಕದ ಮನೆಯವರಾಗಿದ್ದು, ದಿನಾಂಕ: 17-04-2021 ರಂದು ಸಾಯಂಕಾಲ 06-00 ಗಂಟೆಗೆ ಪಿರ್ಯಾದಿಯವರು ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದಲ್ಲಿ ತಾವು ಹೊಸದಾಗಿ ಕಟ್ಟುತಿದ್ದ ಮನೆಗೆ ನೀರನ್ನು ಹಾಕುತ್ತಿದ್ದಾಗ ಆರೋಪಿತರು ಸಂಗನಮತ ಮಾಡಿಕೊಂಡು ಬಂದು ಪಿರ್ಯಾದಿಯ ಮನೆಗೆ ಅಕ್ರಮ ಪ್ರವೇಶ ಮಾಡಿ, ಏಕಾಏಕಿ ಪಿರ್ಯಾದಿಯ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ, ‘ನಮ್ಮ ಮನೆಯ ಮೇಲೆ ನೀರನ್ನು ಏಕೆ ಹಾಕುತ್ತೀ ಬೋಸಡಿ ಮಗನೇ, ಚಿನಾಲಿ ಮಗನೇ’ ಅಂತಾ ಅವಾಚ್ಯವಾಗಿ ಬೈಯ್ದು, ‘ನಿನಗೆ ಮತ್ತು ನಿನ್ನ ಮಗನಿಗೆ ಜೀವ ಸಮೇತ ಕೊಂದು ಹಾಕುತ್ತೇನೆ’ ಅಂತಾ ಆರೋಪಿ 1 ನೇಯವನು ಜೀವ ಬೆದರಿಕೆ ಹಾಕಿರುತ್ತಾನೆ. ಅಲ್ಲದೇ ತಮ್ಮ ಜಗಳವನ್ನು ಬಿಡಿಸಲು ಬಂದ ಪಿರ್ಯಾದಿಯ ಮಗ ಸಂತೋಷನಿಗೆ ಆರೋಪಿ 1 ನೇಯವನು ಬಾಯಿಂದ ಕಚ್ಚಿ ನೆಲಕ್ಕೆ ಬೀಳಿಸಿ, ಸುಟ್ಟ ಇಟ್ಟಿಗೆಯಿಂದ ಮತ್ತು ಕೈಯಿಂದ ಎಳೆದಾಡಿ ಹೊಡೆಯುತ್ತಿದ್ದಾಗ, ಆರೋಪಿ 2 ನೇಯವಳು ಪಿರ್ಯಾದಿಯನ್ನು ಹಿಡಿದು ಎಳೆದಾಡಿದ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಈರಪ್ಪ ಘಟಗೋಳಕರ, ಪ್ರಾಯ-62 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತೇರಗಾಂವ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 07-06-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಸುರೇಶ ಗೌಡ, ಪ್ರಾಯ-27 ವರ್ಷ, ವೃತ್ತಿ-ಟೇಲರಿಂಗ್ ಕೆಲಸ, ಸಾ|| ಕಬ್ಬಗಾರ, ಕಲಕೈ ಗ್ರಾಮ, ತಾ: ಸಿದ್ದಾಪುರ. ಈತನು ದಿನಾಂಕ: 07-06-2021 ರಂದು ಸಂಜೆ 17-30 ಗಂಟೆಗೆ ಸಿದ್ದಾಪುರ ತಾಲೂಕಿನ ವಂದಾನೆಯ ಕಬ್ಬಗಾರ ಊರಿನಲ್ಲಿರುವ ಅಂಗನವಾಡಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದುಕೊಟ್ಟು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತನು ದಾಳಿಯ ಕಾಲಕ್ಕೆ ಓ.ಸಿ ಜೂಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ -1 ಮತ್ತು 3). ನಗದು ಹಣ 510/- ರೂಪಾಯಿ ಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 07-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ರಾಮಾ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕ್ಯಾದಗಿ, ತಾ: ಸಿದ್ದಾಪುರ. ಈತನು ದಿನಾಂಕ: 07-06-2021 ರಂದು 19-15 ಗಂಟೆಗೆ ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿರುವ ತನ್ನ ಅಂಗಡಿಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 6 ಟೆಟ್ರಾ ಪ್ಯಾಕೆಟ್ ಗಳು, ತಲಾ ಒಂದಕ್ಕೆ 35.13/- ರಂತೆ ಒಟ್ಟು ಅ||ಕಿ|| 210.78/- ರೂಪಾಯಿ, 2). 2 ಪ್ಲಾಸ್ಟಿಕ್ ಗ್ಲಾಸುಗಳು, ಅ||ಕಿ|| 00.00/- ರೂಪಾಯಿ, 3). Original Choice Deluxe Whisky 90 ML ಅಂತಾ ಬರೆದ 2 ಮದ್ಯದ ಖಾಲಿ ಟೆಟ್ರಾ ಪ್ಯಾಕೆಟ್ ಗಳು, ಅ||ಕಿ|| 00.00/- ರೂಪಾಯಿ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ಕ್ರೈಂ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 07-06-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-06-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

ಇತ್ತೀಚಿನ ನವೀಕರಣ​ : 08-06-2021 01:05 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080