ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-03-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 05/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ಗೋಪಾಲ ಮಡಿವಾಳ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಬಳ್ಕೂರ, ತಾ: ಹೊನ್ನಾವರ, ಹಾಲಿ ಸಾ|| ಲಿಂಗನಾಯ್ಕವಾಡ, ಕಾರವಾರ (ಕಾರ್ ನಂ: ಕೆ.ಎ-30/ಎ-1195 ನೇದರ ಚಾಲಕ). ದಿನಾಂಕ: 07-03-2021 ರಂದು ಬೆಳಗ್ಗೆ 09-30 ಗಂಟೆಯಲ್ಲಿ ಪಿರ್ಯಾದಿಯು ತನ್ನ ಕಾರ್ ನಂ: ಜಿ.ಎ-05/ಡಿ-6775 ನೇದನ್ನು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕಾರವಾರದಿಂದ ಅಂಕೋಲಾ ಕಡೆಗೆ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಕಾರವಾರ ಕಡೆಯಿಂದ ಅಂದರೆ ಪಿರ್ಯಾದಿಯ ಕಾರಿನ ಹಿಂದಿನಿಂದ ಬಂದ ಕಾರ್ ನಂ: ಕೆ.ಎ.-30/ಎ-1195 ನೇದರ ಆರೋಪಿ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಕಾರವಾರದ ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಬಿಣಗಾದ ಲಕ್ಷ್ಮೀ ಪುಡ್ ಕಾರ್ನರ್ ಎದುರುಗಡೆ ತನ್ನ ಕಾರಿನನ ಮುಂದಿನಿಂದ ಹೋಗುತ್ತಿದ್ದ ಪಿರ್ಯಾದಿಯವರ ಕಾರಿನ ಹಿಂದಿನ ಭಾಗಕ್ಕೆ ತನ್ನ ಕಾರಿನ ಮುಂದಿನ ಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಕಾರಿನ ಹಿಂದಿನ ಭಾಗದಲ್ಲಿ ಜಖಂ ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನ್ನ ಕಾರಿನ ಮುಂದಿನ ಭಾಗದಲ್ಲಿ ಜಖಂ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮನೋಜ ಕುಮಾರ ತಂದೆ ಬಾಮದೇವ ನಾಯಕ, ಪ್ರಾಯ-41 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮನೆ ನಂ: 264, ಪ್ಲಾಟ್ ನಂ: ಎಫ್-4, ಮೊದಲನೇ ಮಹಡಿ, ಆನಂದ ನಿವಾಸ, ಪರಪತ್ತಿವಾಡ, ಬೋರಿಂ ಪಂಚಾಯತ ಹಿಂದುಗಡೆ, ಬೋರಿಂ, ಪೊಂಡಾ, ನಾರ್ಥ ಗೋವಾ ರವರು ದಿನಾಂಕ: 07-03-2021 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 447, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜು ತಂದೆ ನಾಗು ಗೌಡಾ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪಿನಪಟ್ಟಣ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 26-01-2021 ರಂದು 16-00 ಗಂಟೆಗೆ ಪಿರ್ಯಾದಿಯವರು ಕಾವಲು ಕಾಯುತ್ತಿದ್ದ ಕುಮಟಾ ತಾಲೂಕಿನ ಶಿರಗುಂಜಿ ಗ್ರಾಮದ ಶ್ರೀಮತಿ ಲಲಿತಾ ಕೋಂ. ರಾಮಕೃಷ್ಣ ಹೆಗಡೆ ಇವರ ಹೆಸರಿನ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿಯವರಿಗೆ ಉದ್ದೇಶಿಸಿ ‘ಎಲೈ ಬೋಳಿ ಮಗನೇ, ಸೂಳಾ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ‘ಇಲ್ಲಿ ಕೆಲಸ ಮಾಡಿದರೆ, ನಿನ್ನನ್ನು ಕೊಲೆ ಮಾಡಿ ಬಿಸಾಡುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿದ್ದಲ್ಲದೇ, ಆರೋಪಿತನು ಜಮೀನಿನ ಮಾಲೀಕರಿಗೆ ಹಾಗೂ ಅವರ ಪತಿ ಆರ್. ಟಿ. ಹೆಗಡೆ ಇವರಿಗೂ ಸಹ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಂಜು ತಂದೆ ನಾಗು ಗೌಡಾ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪಿನ ಪಟ್ಟಣ, ತಾ ಕುಮಟಾ ರವರು ದಿನಾಂಕ: 07-03-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿ ಎಮ್. ಎನ್, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಟಿ.ದಾಸರಹಳ್ಳಿ, ಬೆಂಗಳೂರು (ಕಾರ್ ನಂ: ಕೆ.ಎ-44/ಎಂ-3314 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 06-03-2021 ರಂದು 17-30 ಗಂಟೆಗೆ ತನ್ನ ಕಾರ್ ನಂ: ಕೆ.ಎ-44/ಎಂ-3314 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲಾಗಿ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಬಲಕ್ಕೆ ಚಲಾಯಿಸಿ ಡಿವೈಡರಿಗೆ ತಾಗಿ ಕಾರ್ ಮೇಲಿನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಪಕ್ಕ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿಟ್ಟ ಐ.ಆರ್.ಬಿ ಕಂಪನಿಯ ಪೇವರ್ ಮಶೀನಿಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿದ್ದು, ಕಾರಿನಲ್ಲಿದ್ದ 1). ಎಚ್. ಗಂಗಾಧರ, ಪ್ರಾಯ-52 ವರ್ಷ, ಸಾ|| ಕೊಪ್ಪ, ತಿಪಟೂರ, ಇವರಿಗೆ ಎದೆಗೆ ಹಾಗೂ ಭುಜಕ್ಕೆ ಸಾದಾ ಗಾಯನೋವು ಪಡಿಸಿದ್ದು, 2). ಶ್ರೀಮತಿ ಸರ್ವಮಂಗಳಾ, ಪ್ರಾಯ-46 ವರ್ಷ, ಸಾ|| ಕೊಪ್ಪ, ತಿಪಟೂರ, ಇವರಿಗೆ ಬಲಗಾಲಿಗೆ ಮತ್ತು ಸೊಂಟಕ್ಕೆ ಸಾದಾ ಗಾಯನೋವು ಮತ್ತು 3). ತೇಜಸ್, ಸಾ|| ಕೊಪ್ಪ, ತಿಪಟೂರ, ಪ್ರಾಯ-8 ವರ್ಷ, ಈತನಿಗೆ ತಲೆಗೆ ಸಾದಾ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಕಾರ್ ಚಾಲಕನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ರಫೀಕ್ ತಂದೆ ಅನ್ವರ್ ಸಾಬ್, ಪ್ರಾಯ-35 ವರ್ಷ, ವೃತ್ತಿ-ಐ.ಆರ್.ಬಿ ಕಂಪನಿಯಲ್ಲಿ ಸೂಪರವೈಸರ್ ಕೆಲಸ, ಸಾ|| ಮಾದನಗೇರಿ, ತಾ: ಕುಮಟಾ ರವರು ದಿನಾಂಕ: 07-03-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹನುಮಪ್ಪ ತಂದೆ ಈರಪ್ಪ ಕುರಿ, ಪ್ರಾಯ-28 ವರ್ಷ, ಸಾ|| ಜಕ್ಕಲಿ, ತಾ: ರೋಣ, ಜಿ: ಗದಗ (ಲಾರಿ ನಂ: ಕೆ.ಎ-27/ಸಿ-0245 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕಃ 07-03-2021 ರಂದು ಬೆಳಗಿನ ಜಾವ 04-15 ಗಂಟೆಯ ಸಮಯಕ್ಕೆ  ಹೊನ್ನಾವರದ ಕಾಸರಕೋಡ ಇಕೋ ಬೀಚ್ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-27/ಸಿ-0245 ನೇದನ್ನು ಹೊನ್ನಾವರ ಕಡೆಯಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿ ಬದಿಯಲ್ಲಿ ಇಂಡಿಕೇಟರ್ ಹಾಕಿ ಪಿರ್ಯಾದಿ ನಿಲ್ಲಿಸಿದ್ದ ಕಾರ್ ನಂ: ಕೆ.ಎ-05/ಎ.ಜಿ-0281 ನೇದಕ್ಕೆ ಹಿಂಬದಿಯಿಂದ ಡಿಕ್ಕಿ ಪಡಿಸಿ ಕಾರ್ ಜಖಂಗೊಳಿಸಿದ್ದಲ್ಲದೇ, ಕಾರಿನಲ್ಲಿದ್ದ ಮಕ್ಕಳಾದ ಶ್ರೀನಿಧಿ ವಿಕಾಸ ನಾಯಕ ಮಾಗೋಡ, ಇವರಿಗೆ ಹಣೆಯ ಎಡಬದಿಗೆ ಹಾಗೂ ನಿರೀಕ್ಷಾ ದೇವಣ್ಣ ನಾಯಕ ಮೊಗಟಾ, ಇವರಿಗೆ ತುಟಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದೇವಣ್ಣ ತಂದೆ ನಾರಾಯಣ ನಾಯಕ, ಪ್ರಾಯ-49 ವರ್ಷ, ವೃತ್ತಿ-ಚಾಲಕ, ಸಾ|| ಮೊಗಟಾ, ತಾ: ಅಂಕೋಲಾ ರವರು ದಿನಾಂಕ: 07-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಂಗರಾಜು ತಂದೆ ಮುನಿಯಪ್ಪ, ಪ್ರಾಯ-46 ವರ್ಷ, ಸಾ|| 1 ನೇ ಮುಖ್ಯರಸ್ತೆ, ಮಾದನಾಯಕನಹಳ್ಳಿ, ರಾಜರಾಜೇಶ್ವರಿ ನಗರ, ನೆಲಮಂಗಲ, ಬೆಂಗಳೂರು (ಕ್ಯಾಂಟರ್ ವಾಹನ ನಂ: ಕೆ.ಎ-52/ಎ-7195 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 06-03-2021 ರಂದು ಬೆಳಗ್ಗೆ 11-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ಗೇರುಸೊಪ್ಪದ ಸೂಳೇಮುರ್ಕಿ ಕ್ರಾಸ್ ಹತ್ತಿರ ತನ್ನ ಬಾಬ್ತು ಕ್ಯಾಂಟರ್ ವಾಹನ ನಂ: ಕೆ.ಎ-52/ಎ-7195 ನೇದನ್ನು ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಕ್ಯಾಂಟರ್ ವಾಹನವನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಕ್ಯಾಂಟರ್ ವಾಹನ ಹಾಗೂ ಕ್ಯಾಂಟರ್ ವಾಹನದಲ್ಲಿದ್ದ ಪಿರ್ಯಾದಿಯವರಿಗೆ ಸಂಬಂಧಪಟ್ಟ ಗ್ಲಾಸಿನ ಲೋಡ್ ಅನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅರುಣ ತಂದೆ ಮಧುಕರ ಭಂಡಾರಕರ, ಪ್ರಾಯ-25 ವರ್ಷ, ವೃತ್ತಿ-ವ್ಯಾಪಾರ, ಸಾ|| ಕರ್ಕಿ, ಗ್ರಾಮ ಪಂಚಾಯತ್ ಹತ್ತಿರ, ತಾ: ಹೊನ್ನಾವರ ರವರು ದಿನಾಂಕ: 07-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ರಮೇಶ ನಾಯಕ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಕೆಳದಿ ರೋಡ್, ಚನ್ನಮ್ಮ ಸರ್ಕಲ್, ತಾ: ಸಾಗರ, ಜಿ: ಶಿವಮೊಗ್ಗ (ಟೆಂಪೋ ನಂ: ಕೆ.ಎ-05/ಎ.ಎಫ್-2484 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 07-03-2021 ರಂದು 15-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ತಾಲೂಕಿನ ಖರ್ವಾ ಧನ್ವಂತ್ರಿ ಕ್ರಾಸಿನ ಅಮ್ಮಾ ಹೊಟೇಲ್ ಹತ್ತಿರ ತನ್ನ ಬಾಬ್ತು ಟೆಂಪೋ ನಂ: ಕೆ.ಎ-05/ಎ.ಎಫ್-2484 ನೇದರಲ್ಲಿ ಒಟ್ಟೂ 21 ಜನರನ್ನು ತನ್ನ ಟೆಂಪೋದಲ್ಲಿ ಕೂಡ್ರಿಸಿಕೊಂಡು ಟೆಂಪೋವನ್ನು ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಟೆಂಪೋ ವಾಹನವನ್ನು ರಸ್ತೆಯಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ಟೆಂಪೋ ವಾಹನದಲ್ಲಿದ್ದ ಪ್ರಯಾಣಿಸುತ್ತಿದ್ದ ಒಟ್ಟೂ 17 ಜನ ಹೆಂಗಸರು ಮತ್ತು 2 ಜನ ಹೆಣ್ಣು ಮಕ್ಕಳಿಗೆ ಮೈಮೇಲೆ ಅಲ್ಲಲ್ಲಿ ಗಾಯನೋವುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜೆ. ದಾಮೋದರ ತಂದೆ ಜೆ. ನರಸಿಂಹ ನಾಯಕ, ಪ್ರಾಯ-60 ವರ್ಷ, ವೃತ್ತಿ-ವ್ಯಾಪಾರ, ಸಾ|| ಇಂದಿರಾಕಾಂತ ನಗರ, ವರದಳ್ಳಿ ರಸ್ತೆ, ತಾ: ಸಾಗರ, ಜಿ: ಶಿವಮೊಗ್ಗ ರವರು ದಿನಾಂಕ: 07-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶ್ಪಾಕ್ ಶೇಖ್ ತಂದೆ ಕಾಸಿಂ ಶೇಖ್, ಪ್ರಾಯ-46 ವರ್ಷ, ಸಾ|| ಟೊಂಕ, ಕಾಸರಕೋಡ, ತಾ: ಹೊನ್ನಾವರ (ಆಟೋ ರಿಕ್ಷಾ ನಂ: ಕೆ.ಎ-47/ಎ-1968 ನೇದ ಚಾಲಕ). ನಮೂದಿತ ಆರೋಪಿತನು ದಿನಾಂಕಃ 07-03-2021 ರಂದು ಮಧ್ಯಾಹ್ನ 16-45 ಗಂಟೆಯ ಸಮಯಕ್ಕೆ ಹೊನ್ನಾವರ ಬಾಳೆಗದ್ದೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ  ತಾನು ಚಲಾಯಿಸುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-47/ಎ-1968 ನೇದನ್ನು ಮುಗ್ವಾ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಾಳೆಗದ್ದೆ ಹೆದ್ದಾರಿಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ರಿಕ್ಷಾವನ್ನು ಹೆದ್ದಾರಿಯ ಬದಿಯ ಕಾಲುವೆಯಲ್ಲಿ ಪಲ್ಟಿಗೊಳಿಸಿ ಅಪಘಾತ ಪಡಿಸಿ, ರಿಕ್ಷಾದಲ್ಲಿದ್ದ ಶ್ರೀಮತಿ ಆಸಿಯಾ ಕೋಂ. ಅಬ್ದುಲ್ ರಜಾಕ್ ಶೇಖ್, ಇವರಿಗೆ ತಲೆಗೆ ಮತ್ತು ಕುಮಾರಿ: ಅಪ್ಫಸಿಯಾ ಅಂಜುಂ ತಂದೆ ಹಕ್ಕಿಂ ಖಾನ್, ಇವಳಿಗೆ ಬಲತೊಡೆಗೆ, ಕುಮಾರ: ಅಫ್‍ಜಾನ್ ಹಸನ್ ಕೆವುಕಾ, ಇವನಿಗೆ ಬಲಭುಜಕ್ಕೆ ದುಃಖಾಪತ್ ಪಡಿಸಿದ್ದಲ್ಲದೇ, ಆರೋಪಿ ರಿಕ್ಷಾ ಚಾಲಕನು ತನಗೂ ಸಹ ಬಲಭುಜಕ್ಕೆ ಹಾಗೂ ಬೆನ್ನಿಗೆ ದುಃಖಾಪತ್ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ನೌಶಾದ್ ತಂದೆ ಅಬ್ದುಲ್ ರಜಾಕ್ ಶೇಖ್, ಪ್ರಾಯ-26 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ಟೊಂಕಾ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 07-03-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀ ಕಂಡು ತಂದೆ ಬಾಬು ಪಟಕಾರೆ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೊಂಬಡಿಕೊಪ್ಪಾ, ತಾ: ಯಲ್ಲಾಪುರ (ಮಹೀಂದ್ರಾ ಬೊಲೆರೋ ಮಾಕ್ಸಿ ಕ್ಯಾಬ್ ವಾಹನ ನಂ: ಕೆ.ಎ-31/ಎ-2168 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 05-03-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ತನ್ನ ಮಹೀಂದ್ರಾ ಬೊಲೆರೋ ಮಾಕ್ಸಿ ಕ್ಯಾಬ್ ವಾಹನ ನಂ: ಕೆ.ಎ-31/ಎ-2168 ನೇದನ್ನು ಯಲ್ಲಾಪುರ ಕಡೆಯಿಂದ ದೊಣಗಾರ್ ಗ್ರಾಮದ ಕಡೆಗೆ ಒಳ ರಸ್ತೆಯಲ್ಲಿ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಗೆರಗದ್ದೆ ಕ್ರಾಸಿನಿಂದ 100 ಮೀಟರ್ ಅಂತರದಲ್ಲಿ ದೊಣಗಾರ್ ಕಡೆಗೆ ತನ್ನ ಎದುರಿನಿಂದ ನಿಧಾನವಾಗಿ ರಸ್ತೆಯ ಎಡಬದಿಯಿಂದ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಎ-8552 ನೇದನ್ನು ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯ ಅಣ್ಣ ಸಾಕ್ಷಿದಾರ ಶ್ರೀ ಸುಬ್ರಾಯ ತಂದೆ ರಾಮಚಂದ್ರ ಹೆಬ್ಬಾರ್, ಪ್ರಾಯ-49 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ದೊಣಗಾರ್, ಹಾಲೇಪಾಲ್, ತಾ: ಯಲ್ಲಾಪುರ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸುಬ್ರಾಯ ರವರಿಗೆ ಬಲಗೈ ಹಸ್ತ ಮತ್ತು ಕೈ ಬೆರಳುಗಳಿಗೆ ಭಾರೀ ಗಾಯನೋವು ಮತ್ತು ಬಲಗಾಲಿನ ಮೊಣಗಂಟು ಹಾಗೂ ಪಾದದ ಹತ್ತಿರ ರಕ್ತಗಾಯ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವೆಂಕಟ್ರಮಣ ತಂದೆ ರಾಮಚಂದ್ರ ಹೆಬ್ಬಾರ್, ಪ್ರಾಯ-47 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ದೊಣಗಾರ್, ಹಾಲೇಪಾಲ್, ತಾ: ಯಲ್ಲಾಪುರ ರವರು ದಿನಾಂಕ: 07-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ಶಂಕರ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಸಣ್ಣಕೇರಿ, ಪೋ: ಇಸಳೂರ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 07-03-2021 ರಂದು 10-00 ಗಂಟೆಯ ಸುಮಾರಿಗೆ ಶಿರಸಿ ತಾಲೂಕಿನ ಎಕ್ಕಂಬಿ ಬಾಪುನಗರದಲ್ಲಿ ತನಗೆ ಸೇರಿದ ದಾಬಾ ಎದುರಿನಲ್ಲಿ ಮದ್ಯಪಾನ ಕುಡಿಯಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ಪಿರ್ಯಾದಿಯವರು ದಾಳಿ ಮಾಡಿ, ದಾಳಿಯ ಕಾಲಕ್ಕೆ 1). Haywards Cheers Whisky ಹೆಸರಿನ 90 ML ಅಳತೆಯ ಪ್ಯಾಕೆಟ್ ಗಳು-08, ಅ||ಕಿ|| ತಲಾ ಒಂದಕ್ಕೆ 35.13/- ರೂಪಾಯಿಗಳಂತೆ ಒಟ್ಟೂ ಅ||ಕಿ|| 281.04/- ರೂಪಾಯಿ, 2). Haywards Cheers Whisky ಹೆಸರಿನ 90 ML ಅಳತೆಯ ಖಾಲಿ ಪ್ಯಾಕೆಟ್ ಗಳು-02, ಅ||ಕಿ|| 00.00/- ರೂಪಾಯಿ, 3). ಮದ್ಯಪಾನ ಕುಡಿಯಲು ಉಪಯೋಗಿಸಿದ Use & through Plastic Glass-03, ಅ||ಕಿ|| 00.00/- ರೂಪಾಯಿ. ಇವುಗಳು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಂಜಾನಾಯ್ಕ್ ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 07-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-03-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

 

======||||||||======

 

 

 

ಇತ್ತೀಚಿನ ನವೀಕರಣ​ : 08-03-2021 05:20 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080