ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-05-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಂದ್ರ ತಂದೆ ದತ್ತಾತ್ರೆಯ ಶೆಟ್ಟಿ, ಪ್ರಾಯ-30 ವರ್ಷ, ವೃತ್ತಿ-ಕಿರಾಣಿ ವ್ಯಾಪಾರಿ, ಸಾ|| ಶಂಕರ ಮಠದ ಹತ್ತಿರ, ಕಾರವಾರ. ಈತನು ದೇಶಾದ್ಯಂತ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುತ್ತಿದ್ದು, ಕೋವಿಡ್-19 ಖಾಯಿಲೆಯ 2 ನೇ ಅಲೆ ಹೆಚ್ಚಾಗಿರುವುದರಿಂದಾಗಿ ಖಾಯಿಲೆ ನಿಯಂತ್ರಣಕ್ಕಾಗಿ ಮಾನ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಜಿಲ್ಲೆಯಾದ್ಯಂತ ಕರ್ಫ್ಯೂ ಘೋಷಣೆ ಮಾಡಿ, ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯವರೆಗೆ ಜನರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲು ಅನುಮತಿಸಿದ್ದು, 10-00 ಗಂಟೆಯ ನಂತರ ಸಂಪೂರ್ಣ ಕರ್ಫ್ಯೂ ಘೋಷಣೆ ಮಾಡಿ ಅಗತ್ಯ ಕೆಲಸದ ಹೊರತು ಯಾರೂ ಸಾರ್ವಜನಿಕವಾಗಿ ಓಡಾಡದಂತೆ ಹಾಗೂ ಎಲ್ಲಾ ರೀತಿಯ ಮಳಿಗೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದು, ಕರ್ಫ್ಯೂ ಆದೇಶ ಇದ್ದಾಗಲೂ ಸಹ ನಮೂದಿತ ಆರೋಪಿತನು ದಿನಾಂಕ: 07-05-2021 ರಂದು 10-45 ಗಂಟೆಯವರೆಗೆ ತನ್ನ ಎನ್.ಡಿ ಶೆಟ್ಟಿ ಅಂತ ಹೆಸರಿನ ಕಿರಾಣಿ ಅಂಗಡಿಯನ್ನು ತೆರೆದು ಜನರು ಓಡಾಡುವಂತೆ ಮಾಡಿ ಸಾರ್ವಜನಿಕವಾಗಿ ಸಾಂಕ್ರಾಮಿಕ ಕೋವಿಡ್-19 ಕೊರೋನಾ ಖಾಯಿಲೆ ಇತರರಿಗೆ ಹರಡುವ ಸಂಭವ ಇದ್ದರೂ ಸಹ ತನ್ನ ನಿರ್ಲಕ್ಷ್ಯತನದಿಂದ ತನ್ನ ಲಾಭದ ಸಲುವಾಗಿ ಇತರರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂವವಿರುವಂತೆ ಮಾಸ್ಕ್ ವಗೈರೆ ಧರಿಸದೇ ಅಂಗಡಿಯನ್ನು ತೆರೆದು ರೋಗ ನಿರೋಧಕ ನಿರ್ಬಂಧ ನಿಯಮದ ಆದೇಶವನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 07-05-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 269, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಜಬ್ಬಾರ್ ತಂದೆ ಇಬ್ರಹಿಮ್ ಸಾಬ್, ಪ್ರಾಯ-42 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ (ಲುಕ್ ಅಂಡ್ ಸೀ ಬಟ್ಟೆ ಅಂಗಡಿ ಮಾಲಕ), ಸಾ|| ಹಳದಿಪುರ, ಪಳ್ಳಿಕೇರಿ, ತಾ: ಹೊನ್ನಾವರ. ಈತನು ಕೋವಿಡ್-19 ವೈರಸ್ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ಮಾಡಿರುವ ಕೋವಿಡ್ ಕರ್ಫ್ಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಕೋವಿಡ್-19 ಕೊರೋನಾ ಸೋಂಕು ಸಾರ್ವಜನಿಕರಿಗೆ ಹರಡುವ ಬಗ್ಗೆ ತಿಳಿದಿದ್ದರೂ ಸಹ ದಿನಾಂಕ: 07-05-2021 ರಂದು 09-30 ಗಂಟೆಯ ಸುಮಾರಿಗೆ ಕುಮಟಾದ ನೆಲ್ಲಿಕೇರಿಯಲ್ಲಿರುವ ತನ್ನ ಲುಕ್ ಅಂಡ್ ಸೀ ಬಟ್ಟೆ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ಮಾಡಿ, ಕೋವಿಡ್-19 ವೈರಾಣು ಹರಡುವಿಕೆಯಲ್ಲಿ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 07-05-2021 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 269, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಮಲಾಕರ ತಂದೆ ಶಾಂತಪ್ಪಾ ಪಾಲೇಕರ, ಪ್ರಾಯ-54 ವರ್ಷ, ವೃತ್ತಿ-ಫುಟವೇರ್ ವ್ಯಾಪಾರ (ಕೆನರಾ ಫುಟವೇರ್ ಮತ್ತು ವೈಷ್ಣವಿ ಆರ್ಟ್ಸ್ ಅಂಗಡಿ ಮಾಲಕ), ಸಾ|| ಮಿರ್ಜಾನ, ಕೋಟೆ ರಸ್ತೆ, ತಾ: ಕುಮಟಾ. ಈತನು ಕೋವಿಡ್-19 ವೈರಸ್ ಪ್ರಸರಣವನ್ನು ತಡೆಟಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ಮಾಡಿರುವ ಕೋವಿಡ್ ಕರ್ಫ್ಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೋವಿಡ್-19 ಕೊರೋನಾ ಸೋಂಕು ಸಾರ್ವಜನಿಕರಿಗೆ ಹರಡುವ ಬಗ್ಗೆ ತಿಳಿದಿದ್ದರೂ ಸಹ ದಿನಾಂಕ: 07-05-2021 ರಂದು 11-15 ಗಂಟೆಯ ಸುಮಾರಿಗೆ ಕುಮಟಾ ಹೊಸ ಬಸ್‍ ನಿಲ್ದಾಣದ ಎದುರಿಗೆ ಇರುವ ತನ್ನ ಕೆನರಾ ಫುಟವೇರ್ ಮತ್ತು ವೈಷ್ಣವಿ ಆರ್ಟ್ಸ್ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ಮಾಡಿ ಕೋವಿಡ್-19 ವೈರಾಣು ಹರಡುವಿಕೆಯಲ್ಲಿ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 07-05-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ಹಾಗೂ ಕಲಂ: 269, 270, 336 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಉದಯ ತಂದೆ ಮರ್ತು ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ವ್ಯಾಪಾರ/ಕೃಷಿ ಕೆಲಸ, ಸಾ|| ಸಾಲೆಹಿತ್ತಲ, ತಾ: ಹೊನ್ನಾವರ, 2]. ನಾಗರಾಜ ತಂದೆ ನಾಗಪ್ಪ ಶೆಟ್ಟಿ. ಪ್ರಾಯ-43 ವರ್ಷ, ವೃತ್ತಿ-ವ್ಯಾಪಾರ, ಸಾ|| ಹೊನ್ನಮಾವು, ತಾ: ಕುಮಟಾ, 3]. ಪಾಂಡುರಂಗ ತಂದೆ ಬೀರಪ್ಪ ಪಟಗಾರ, ಪ್ರಾಯ-42 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಹೆಗಡೆ, ತಾ: ಕುಮಟಾ, 4]. ನಾಗರಾಜ ತಂದೆ ಗಣಪತಿ ಮಡಿವಾಳ, ಪ್ರಾಯ-34 ವರ್ಷ, ವೃತ್ತಿ-ವ್ಯಾಪಾರ, ಸಾ|| ರೈಲ್ವೇ ನಿಲ್ದಾಣದ ಹತ್ತಿರ, ಕರ್ಕಿ, ತಾ: ಹೊನ್ನಾವರ, 5]. ಶೇಖರ ತಂದೆ ಗಣಪ ನಾಯ್ಕ, ಪ್ರಾಯ-66 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಇಡಗುಂಜಿ, ಮಂಕಿ, ತಾ: ಹೊನ್ನಾವರ, 6]. ವಿಶ್ವೇಶ್ವರಯ್ಯ ತಂದೆ ಕೇಶವ ಭಟ್, ಪ್ರಾಯ-39 ವರ್ಷ, ವೃತ್ತಿ-ವ್ಯಾಪಾರ, ಸಾ|| ರೈಸ್ ಮಿಲ್ ಹತ್ತಿರ, ಕರ್ಕಿ, ತಾ: ಹೊನ್ನಾವರ, 7]. ಮಂಜುನಾಥ ತಂದೆ ವೆಂಕಟ್ರಮಣ ಶೆಟ್ಟಿ, ಪ್ರಾಯ-55 ವರ್ಷ, ವೃತ್ತಿ-ಚಾಲಕ, ಸಾ|| ಲಕ್ಷ್ಮೀನಾರಾಯಣ ನಗರ, ತಾ: ಹೊನ್ನಾವರ, 8]. ಸಂತೋಷ ತಂದೆ ನಾರಾಯಣ ಗೌಡ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಗ್ವಾ, ಗೌಡರಕೇರಿ, ತಾ: ಹೊನ್ನಾವರ, 9]. ಶೇಕುಂಜಿ ತಂದೆ ಅಬ್ದುಲ್ ಸಾಬ್, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಟೊಂಕಾ, ಕಾಸರಕೋಡ, ತಾ: ಹೊನ್ನಾವರ, 10]. ಸುಬ್ರಾಯ ತಂದೆ ಮಾಬ್ಲಾ ಗೌಡ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋಟಾ, ಅನಂತವಾಡಿ, ತಾ: ಹೊನ್ನಾವರ, 11]. ಸಂತೋಷ ತಂದೆ ನಾಗಪ್ಪ ತಾಂಡೇಲ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಾಸರಕೋಡ, ಟೊಂಕಾ, ತಾ: ಹೊನ್ನಾವರ ಹಾಗೂ ಇನ್ನೂ 8-10 ಜನರು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ಕೊರೋನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಘನ ಸರ್ಕಾರ ಲಾಕಡೌನ್ ಆದೇಶ ಮಾಡಿದ್ದರೂ ಸಹ, ಮುಖಕ್ಕೆ ಮಾಸ್ಕ್ ಹಾಕದೇ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಘನ ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ನಿರ್ಲಕ್ಷಿಸಿ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ್ಯತನದಿಂದ ನಮೂದಿತ ಆರೋಪಿತರು ದಿನಾಂಕ: 07-05-2021 ರಂದು 16-45 ಗಂಟೆಗೆ ಹೊನ್ನಾವರ ತಾಲೂಕಿನ ಕರ್ಕಿಕೋಡಿಯ ಆರೋಪಿ 1 ನೇಯವನ ತೋಟದ ಹತ್ತಿರದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ತಮ್ಮ-ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಇಸ್ಪೀಟ್ ಅಂದರ್-ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಜುಗರಾಟದ ಸಲಕರಣೆಗಳು ಹಾಗೂ ನಗದು ಹಣ 70,600/- ರೂಪಾಯಿ ಮತ್ತು 12 ಮೋಟಾರ್ ಸೈಕಲ್ ಸಮೇತ ಆರೋಪಿ 1 ರಿಂದ 11 ನೇಯವರು ಸೆರೆ ಸಿಕ್ಕಿದ್ದು ಹಾಗೂ ಇನ್ನು 8-10 ಜನ ಆರೋಪಿತರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 07-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ನಾರಾಯಣ ನಾಯ್ಕ, ಸಾ|| ಮೊಗೇರಕೇರಿ, ಶಿರಾಲಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4316 ನೇದರ ಸವಾರ). ಈತನು ದಿನಾಂಕ: 28-12-2020 ರಂದು ಮಧ್ಯಾಹ್ನ  12-45 ಗಂಟೆಗೆ ತಾನು ಚಲಾಯಿಸಿಕೊಂಡ ಬಂದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4316 ನೇದನ್ನು ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು ಮೋಟಾರ್ ಸೈಕಲ್ ವೇಗವನ್ನು ನಿಯಂತ್ರಿಸಲಾಗದೆ ಶಿರಾಲಿಯ ಶಿವಶಕ್ತಿ ಬಟ್ಟೆ ಅಂಗಡಿಯ ಎದುರಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ರಸ್ತೆ ದಾಟುತ್ತಿದ್ದ ಪಾದಚಾರಿ ಜಗದೀಶ ತಂದೆ ಧನರಾಜ ಜೈನ್ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಈ ಅಪಘಾತದಲ್ಲಿ ಜಗದೀಶ ಇವರ ಮೂಗಿಗೆ ಹಾಗೂ ಮುಖಕ್ಕೆ ರಕ್ತಗಾಯ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಸಣ್ಣಪುಟ್ಟ ಗಾಯ ಪಡಿಸಿಕೊಂಡು, ತನ್ನ ಮೋಟಾರ್ ಸೈಕಲ್ ಹಿಂಬದಿ ಕುಳಿತ ಅಣ್ಣಪ್ಪ ತಂದೆ ನಾರಾಯಣ ನಾಯ್ಕ ಈತನ ತಲೆಗೆ, ಮುಖಕ್ಕೆ, ಕೈಗೆ ಹಾಗೂ ಕಾಲಿಗೆ ಗಾಯವಾದವನಿಗೆ ಉಪಚಾರದ ಕುರಿತು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದವನಿಗೆ ಉಪಚಾರದಲ್ಲಿರುವಾಗ ದಿನಾಂಕ: 01-01-2021 ರಂದು ಅಪಘಾತದಲ್ಲಿ ಆದ ಗಾಯದಿಂದ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಚಂದ್ರು ತಂದೆ ಮಂಜುನಾಥ ನಾಯ್ಕ, ಪ್ರಾಯ-32 ವರ್ಷ, ಸಾ|| ಚಿತ್ರಾಪುರ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 07-05-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿತೇಶ ತಂದೆ ಸದಾನಂದ ಸುವರ್ಣಾ ಕೊಟ್ಯಾನ್, ಪ್ರಾಯ-43 ವರ್ಷ, ವೃತ್ತಿ-ಭಾರತಿ ಟ್ರಾವೆಲ್ಸಿನಲ್ಲಿ ಬಸ್ ಚಾಲಕ, ಸಾ|| ಕಲ್ಕುಡಾ, ಕೃಪಾ ಹೌಸ್, ಮೂಡಬಿಳ್ಳೆ, ಯಡಮೀರ್, ಉಡುಪಿ (ಭಾರತಿ ಸ್ಲೀಪರ್ ಕೋಚ್ ಬಸ್ ನಂ: ಕೆ.ಎ-51/ಡಿ-2306 ನೇದರ ಚಾಲಕ). ಈತನು ದಿನಾಂಕ: 26-05-2019 ರಂದು 00-45 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಭಾರತಿ ಸ್ಲೀಪರ್ ಕೋಚ್ ಬಸ್ ನಂ: ಕೆ.ಎ-51/ಡಿ-2306 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಕುಕನೀರ್ ಕ್ರಾಸ್ ಹತ್ತಿರ ರಸ್ತೆ ಕ್ರಾಸ್ ಮಾಡಲು ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪಿರ್ಯಾದಿಯ ಮಗ ವೆಂಕಟೇಶ ತಂದೆ ಲಕ್ಷ್ಮಣ ಮೊಗೇರ, ಪ್ರಾಯ-29 ವರ್ಷ, ವೃತ್ತಿ-ಮಲ್ಪೆಯಲ್ಲಿ ಮೊಬೈಲ್ ಅಂಗಡಿ, ಸಾ|| ಕರಿಕಲ್, ತಾ: ಭಟ್ಕಳ ಈತನ ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-8529 ನೇದಕ್ಕೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದರ ಪರಿಣಾಮ ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ಸವಾರನು ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ವೆಂಕ್ಟಪ್ಪ ಮೊಗೇರ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಲಗೋಡ, ಮಾವಿನಕುರ್ವೆ, ತಾ: ಭಟ್ಕಳ ರವರು ದಿನಾಂಕ: 07-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ಸುಕ್ರಯ್ಯ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಜೆ.ಸಿ.ಬಿ ಚಾಲಕ, ಸಾ|| ಕಾಕನಗದ್ದೆ ಮನೆ, ತೆಂಗಿನಗುಂಡಿ, ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-0851 ನೇದರ ಚಾಲಕ). ಈತನು ದಿನಾಂಕ: 15-02-2021 ರಂದು 19-30 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-0851 ನೇದನ್ನು ಹೆಬಳೆ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅದರ ವೇಗ ನಿಯಂತ್ರಿಸದೇ ಶಮ್ಸ್ ಸ್ಕೂಲ್ ಹತ್ತಿರ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಊ-1405 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿಯ ಕಿರು ಬೆರಳು ತುಂಡಾದ ಬಗ್ಗೆ ಪಿರ್ಯಾದಿ ಶ್ರೀ ನಾಸಿರ್ ಸಾಬ್ ತಂದೆ ಬಾಷಾ ಸಾಬ್, ಸಾ|| ಹನೀಫಾಬಾದ್, ತಲಾ ಕಾಲೋನಿ, ತಾ: ಭಟ್ಕಳ ರವರು ದಿನಾಂಕ: 07-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸರಸ್ವತಿ ಕೋಂ. ಮಹಾಬಲೇಶ್ವರ ಗೌಡಾ, ಪ್ರಾಯ-45 ವರ್ಷ, ವೃತ್ತಿ-ಆಶಾ ಕಾರ್ಯಕರ್ತೆ, ಸಾ|| ಬೆಳ್ಳೆ, ಅಂತ್ರವಳ್ಳಿ, ತಾ: ಕುಮಟಾ. ಪಿರ್ಯಾದಿಯ ಅಕ್ಕಳಾದ ಇವಳು ಕಳೆದ ಎರಡು ಮೂರು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಆ ಬಗ್ಗೆ ಅವಳು ಚಿಕಿತ್ಸೆ ಪಡೆದುಕೊಂಡರೂ ಸಹ ಗುಣಮುಖವಾಗದೇ ಹೊಟ್ಟೆನೋವಿನಿಂದ ಬಳಲುತ್ತಿದ್ದವಳು, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡೋ ಅಥವಾ ಇನ್ಯಾವುದೋ ವಿಷಯಕ್ಕೆ ಜೀವನದಲ್ಲಿ ಬೇಸತ್ತು ದಿನಾಂಕ: 06-05-2021 ರಂದು 22-00 ಗಂಟೆಯಿಂದ ದಿನಾಂಕ: 07-05-2021 ರಂದು 07-00 ಗಂಟೆಯ ನಡುವಿನ ಅವಧಿಯಲ್ಲಿ ತಾವು ಹೊಸದಾಗಿ ಕಟ್ಟುತ್ತಿರುವ ಮನೆಯ ಕೋಣೆಯಲ್ಲಿ ಸ್ಲಾಬಿನ ಹುಕ್ಕಿಗೆ ನೈಲಾನ್ ಹಗ್ಗವನ್ನು ಕಟ್ಟಿ ಅದಕ್ಕೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಪರಮೇಶ್ವರ ಗೌಡಾ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಗಲ, ತಾ: ಕುಮಟಾ ರವರು ದಿನಾಂಕ: 07-05-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸುಶೀಲಾ ಜಟ್ಟಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೇಲಿನಕೇರಿ, ಗುಂಡಬಾಳ, ತಾ: ಹೊನ್ನಾವರ. ಪಿರ್ಯಾದಿಯ ತಾಯಿಯಾದ ಇವರು ತನ್ನ ತಂದೆ ಜಟ್ಟಾ ನಾಯ್ಕ ರವರು ಪದೇ ಪದೇ ಸರಾಯಿ ಕುಡಿದು ತನ್ನ ತಾಯಿಯೊಂದಿಗೆ ಪದೇ ಪದೇ ಜಗಳ ಮಾಡುತ್ತಿದ್ದರಿಂದ ಬೇಸತ್ತು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 07-05-2021 ರಂದು 00-30 ಗಂಟೆಯಿಂದ ದಿನಾಂಕ: 07-05-2021 ರಂದು ಬೆಳಿಗ್ಗೆ 05-50 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಮಧ್ಯದ ಕೋಣೆಯ ಜಂತಿಗೆ ಸೀರೆಯಿಂದ ಕುಣಿಕೆ ಬಿಗಿದು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾಳೆ. ಇದರ ಹೊರತು ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಜಟ್ಟಾ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಮೇಲಿನಕೇರಿ, ಗುಂಡಬಾಳ, ತಾ: ಹೊನ್ನಾವರ ರವರು ದಿನಾಂಕ: 07-05-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 08-05-2021 12:43 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080