ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಾಬಲೇಶ ತಂದೆ ಶಿವಾನಂದ ಕಲ್ಗುಟ್ಕರ, ಪ್ರಾಯ-45 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತಾರಿವಾಡ, ಕೋಡಿಬಾಗ, ಕಾರವಾರ, 2]. ದತ್ತಾತ್ರೇಯ ತಂದೆ ಮಧು ರೇವಂಡಿಕರ, ಪ್ರಾಯ-35 ವರ್ಷ, ವೃತ್ತಿ-ಮೊಬೈಲ್ ಶಾಪಿನಲ್ಲಿ ಕೆಲಸ, ಸಾ|| ತಾಮ್ಸೆವಾಡಾ, ಕೋಡಿಬಾಗ, ಕಾರವಾರ, 3]. ಪ್ರಶಾಂತ ತಂದೆ ನಾಗೇಶ ತಾಮ್ಸೆ, ಪ್ರಾಯ-44 ವರ್ಷ, ವೃತ್ತಿ-ಚಾಲಕ, ಸಾ|| ಜನಾಭಾಗ, ಕೋಡಿಬಾಗ, ಕಾರವಾರ, 4]. ರಾಘೋಬಾ ತಂದೆ ಸುಬ್ಬಾ ಕೋಳಂಬಕರ, ಪ್ರಾಯ-71 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮದೇವಾಡಾ, ಕೋಡಿಬಾಗ, ಕಾರವಾರ, 5]. ಗುರುಪ್ರಸಾದ ತಂದೆ ದಿಗಂಬರ ಕಲ್ಗುಟ್ಕರ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಮದೇವಾಡಾ, ಕೋಡಿಬಾಗ, ಕಾರವಾರ, 6]. ರಾಜು ತಂದೆ ಗುರುನಾಥ ರೇವಂಡಿಕರ, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಡಾ ಕೋಡಿಬಾಗ, ಕಾರವಾರ 7]. ಶರತ್ ತಂದೆ ಶಾಂತಾರಾಮ ರೇವಂಡಿಕರ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ತಾಮ್ಸೆವಾಡಾ, ಕೋಡಿಬಾಗ, ಕಾರವಾರ, 8]. ಪ್ರದೀಪ ತಂದೆ ಕಾಶಿನಾಥ ಕೋಳಂಬಕರ, ಪ್ರಾಯ-47 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮದೇವಾಡಾ, ಕೋಡಿಬಾಗ, ಕಾರವಾರ, 9]. ಏಕನಾಥ ತಂದೆ ವಿಷ್ಣು ಕಲ್ಗುಟ್ಕರ, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಾಮ್ಸೆವಾಡಾ, ಕೋಡಿಬಾಗ, ಕಾರವಾರ, 10]. ಶ್ರೀನಿವಾಸ ತಂದೆ ಜಗನ್ನಾಥ ಮಾಸೂರಕರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮದೇವಾಡಾ, ಕೋಡಿಬಾಗ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 07-11-2021 ರಂದು 19-05 ಗಂಟೆಗೆ ಕೋಡಿಬಾಗ ಕಾಳಿ ರಿವರ್ ಗಾರ್ಡನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಅಂದರ್-ಬಾಹರ್ ಜುಗಾರಾಟಕ್ಕೆ ಬಳಸಿದ ಒಟ್ಟೂ ನಗದು ಹಣ 7,750/- ರೂಪಾಯಿ ಹಾಗೂ 52 ಇಸ್ಪೀಟ್ ಕಾರ್ಡ್ ಮತ್ತು ಕುಳಿತುಕೊಳ್ಳಲು ಬಳಸಿದ ಬಟ್ಟೆಯ ಚಾದರ್. ಇವುಗಳೊಂದಿಗೆ ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಬೀಳಗಿ, ಪೊಲೀಸ್ ನಿರೀಕ್ಷಕರು, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 07-11-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 299/2021, ಕಲಂ: 324, 354, 448, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಧರ ತಂದೆ ತ್ರಿವಿಕ್ರಮ ಭಟ, ಪ್ರಾಯ-ಅಂದಾಜು 62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಠದಕೇರಿ, ನಗರ ಬಸ್ತಿಕೇರಿ, ತಾ: ಹೊನ್ನಾವರ, 2]. ಶ್ರೀಮತಿ ಗಾಯಿತ್ರಿ ಶ್ರೀಧರ ಭಟ, ಪ್ರಾಯ-ಅಂದಾಜು 57 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಠದಕೇರಿ, ನಗರ ಬಸ್ತಿಕೇರಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ಚಿಕ್ಕಪ್ಪ ಹಾಗೂ ಆರೋಪಿ 2 ನೇಯವಳು ಪಿರ್ಯಾದಿಯ ಚಿಕ್ಕಮ್ಮಳಾಗಿದ್ದು, ಆರೋಪಿತರು ಈ ಹಿಂದಿನಿಂದಲೂ ಪಿರ್ಯಾದಿಯ ಮನೆಯವರೊಂದಿಗೆ ಜಮೀನಿನ ವಿಚಾರವಾಗಿ ಮತ್ತು ಪಿರ್ಯಾದಿ ಮತ್ತು ಆರೋಪಿತರ ಮನೆಯ ಎದರಿಗೆ ಇರುವ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ನೀರಿನ ಪಂಪ್ ಸೆಟ್ ವಿಚಾರವಾಗಿ ತಂಟೆ ತಕರಾರು ಮಾಡಿಕೊಂಡು ಬಂದವರು, ದಿನಾಂಕ; 07-11-2021 ರಂದು ಬೆಳಿಗ್ಗೆ 09-15 ಗಂಟೆಯ ಸುಮಾರಿಗೆ ಆರೋಪಿತರಿಬ್ಬರು ಪಿರ್ಯಾದಿಯ ಮನೆಯ ಹಿಂದಿನ ಬಾಗಿಲಿನಿಂದ ಪಿರ್ಯಾದಿಯವರ ಅಡುಗೆ ಮನೆಗೆ ಅಕ್ರಮ ಪ್ರವೇಶ ಮಾಡಿ, ಅಡುಗೆ ಮನೆಯಲ್ಲಿದ್ದ ಪಿರ್ಯಾದಿ ಮತ್ತು ಪಿರ್ಯಾದಿಯ ತಾಯಿಗೆ ಆರೋಪಿತರು ‘ಬೋಸಡಿ ಮಕ್ಕಳಾ, ಸೂಳೆ ಮಕ್ಕಳಾ, ನಿಮಗೆ ಸೊಕ್ಕು ಬಂದಿದೆ. ನಮ್ಮ ವಿರುದ್ಧ ಮಾತನಾಡುವಂತಾಗಿದ್ದಿರಾ?’ ಅಂತಾ ಅವಾಚ್ಯವಾಗಿ ಬೈಯ್ಯುತ್ತಿರುವಾಗ, ಪಿರ್ಯಾದಿಯು ‘ಹೀಗೆ ಯಾಕೆ ಕೂಗಾಡುತ್ತಿದ್ದಿರಾ?’ ಅಂತಾ ಕೇಳಲು ಹೋದಾಗ, ಆರೋಪಿ 1 ನೇಯವನು ಪಿರ್ಯಾದಿಗೆ ದೂಡಿ ಹಾಕಿ, ಪಿರ್ಯಾದಿಯ ತಾಯಿಯ ಕೈ ರಟ್ಟೆಯನ್ನು ಹಿಡಿದು ಎಳೆದು, ಅಲ್ಲಿಯೇ ಅಡುಗೆ ಮನೆಯಲ್ಲಿದ್ದ ಕುಳಿತುಕೊಳ್ಳುವ ಮಣೆಯಿಂದ ತಲೆಗೆ ಹೊಡೆದಿದ್ದು, ನಂತರ ಆರೋಪಿ 2 ನೇಯವಳು  ಅಡುಗೆ ಮನೆಯಲ್ಲಿದ್ದ ಕಾವಲಗೆಯಿಂದ (ದೋಸೆ ಹಂಚು) ಪಿರ್ಯಾದಿಯ ತಾಯಿಯ ಕಾಲಿಗೆ ಹೊಡೆದು ಗಾಯನೋವುಂಟು ಮಾಡಿದಾಗ, ಪಿರ್ಯಾದಿಯ ತಾಯಿಯ ಕಿರುಚಾಟ ಕೇಳಿ ಮನೆಯಲ್ಲಿ ಇದ್ದ ಪಿರ್ಯಾದಿಯ ಅಣ್ಣ ಮತ್ತು ಅತ್ತಿಗೆಯವರು ಬಂದು ಪಿರ್ಯಾದಿಯ ತಾಯಿಗೆ ಹೊಡೆಯುವದನ್ನು ತಪ್ಪಿಸಿದ್ದು, ಆಗ ಆರೋಪಿತರಿಬ್ಬರು ಮನೆಯಿಂದ ಹೋಗುವಾಗ ‘ಈ ದಿನ ಇಷ್ಟಕ್ಕೆ ಹೋಗುತ್ತಿದ್ದೇವೆ. ಮತ್ತೆ ನೀವು ಒಬ್ಬೊಬ್ಬರೇ ಸಿಕ್ಕಾಗ ನಿಮ್ಮನ್ನು ಕೊಂದು ಹಾಕುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಶ್ರೀರಾಜ ತಂದೆ ಪದ್ಮನಾಭ ಭಟ, ಪ್ರಾಯ-31 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಠದಕೇರಿ, ನಗರ ಬಸ್ತಿಕೇರಿ, ತಾ: ಹೊನ್ನಾವರ ರವರು ದಿನಾಂಕ: 07-11-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 300/2021, ಕಲಂ: 143, 147, 447, 427 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1] ರಾಧಾ ಆಚಾರಿ, 2] ನಾಗೇಶ ಆಚಾರಿ, 3] ಅನಂತ ಹುಲಸ್ವಾರ್, 4] ಕಲ್ಪನಾ ಶೆಟ್ಟಿ, 5] ಅಚ್ಯುತ ಶೆಟ್ಟಿ, 6] ನಾಗರತ್ನಾ ಹುಲಸ್ವಾರ್, 7] ಕೇಶವ ಆಚಾರಿ, 8] ಸುಬ್ರಾಯ ಶೆಟ್ಟಿ, 9] ಸಾವಿತ್ರಿ ಶೆಟ್ಟಿ, ಸಾ|| (ಎಲ್ಲರೂ) ಕಾಸೊಳ್ಳಿ, ಹಳದೀಪುರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ಸೇರಿ ಅಕ್ರಮ ಕೂಟ ಕಟ್ಟಿಕೊಂಡು ದಿನಾಂಕ: 07-11-2021 ರಂದು 18-00 ಗಂಟೆಗೆ ಪಿರ್ಯಾದಿಯವರ ಬಾಬ್ತು ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮದ ಸರ್ವೇ ನಂ: 1439/01 ಹಾಗೂ 1439/02 ನೇದ್ದರ ಕ್ಷೇತ್ರ 1-17-08 ನೇದ್ದರ ಸುತ್ತ ಇರುವ ಕಂಪೌಂಡ್ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ, ಜಾಗದ ಕಂಪೌಂಡನ್ನು ದೂಡಿ ಹಾಕಿ, ಪಿರ್ಯಾದಿಯವರಿಗೆ 25,000/- ರೂಪಾಯಿಯಷ್ಟು ನಷ್ಟ ಉಂಟು ಮಾಡಿದ ಬಗ್ಗೆ ಪಿರ್ಯಾದಿ ಶ್ರೀಮತಿ ಕೋಂ ಮಾಬ್ಲೇಶ್ವರ ಭಟ್, ಪ್ರಾಯ-63 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಕುದಬೈಲ್, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 07-11-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 132/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಜಾನನ ತಂದೆ ತಿಮ್ಮಪ್ಪ ಗೌಡ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಮುಗುಳಿ, ತಾ: ಹೊನ್ನಾವರ (ಟಾಟಾ 407 ವಾಹನ ನಂ: ಕೆ.ಎ-47/5526 ನೇದರ ಚಾಲಕ). ಈತನು ದಿನಾಂಕ: 06-11-2021 ರಂದು 18-45 ಗಂಟೆಯ ಸುಮಾರಿಗೆ ಮಂಕಿಯ ಲಕೋಟೆಕೇರಿಯಲ್ಲಿ ತಾನು ಚಲಾಯಿಸುತ್ತಿದ್ದ ಟಾಟಾ 407 ವಾಹನ ನಂ: ಕೆ.ಎ-47/5526 ನೇದನ್ನು ತಲಗೋಡ ಗ್ರಾಮದ ಕಡೆಯಿಂದ ಮಂಕಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನು, ರಸ್ತೆಯ ತಿರುವಿನಲ್ಲಿ ವೇಗದ ಮೇಲಿನ ನಿಯಂತ್ರಣ ತಪ್ಪಿ ವಾಹನವನ್ನು ರಸ್ತೆಯ ಪಕ್ಕದಲ್ಲಿರುವ ತಗ್ಗಿನಲ್ಲಿ ಇಳಿಸಿ ಅಪಘಾತ ಪಡಿಸಿ, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮಾರು ತಿಮ್ಮು ಗೌಡ ಮತ್ತು ಜಯಾ ಬಾಬು ನಾಯ್ಕ, ಇವರಿಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತಾನೂ ಕೂಡಾ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದೇವಿದಾಸ ತಂದೆ ವೆಂಕಟ್ರಮಣ ಶೆಟ್ಟಿ, ಪ್ರಾಯ-56 ವರ್ಷ, ವೃತ್ತಿ-ಟ್ರಾನ್ಸಪೋರ್ಟ್ ವ್ಯವಹಾರ, ಸಾ|| ಬಳಕೂರು, ತಲಗೋಡ, ತಾ: ಹೊನ್ನಾವರ ರವರು ದಿನಾಂಕ: 07-11-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 142/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ತಾರಾ ತಂದೆ ನಾರಾಯಣ ಮರಾಠಿ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಯತ್ನಳ್ಳಿ, ಆಡುಕಾಲ್, ಮಂಕಿ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 05-11-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು, ಅಲ್ಲಿಗೂ ಹೋಗದೇ ಈವರೆಗೂ ಮನೆಗೆ ವಾಪಸ್ ಬಾರದೇ, ಸಂಬಂಧಿಕರ ಮನೆಗೂ ಕೂಡಾ ಹೋಗದೇ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ವೇಣು ಮರಾಠಿ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಯತ್ನಳ್ಳಿ, ಆಡುಕಾಲ್, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 07-11-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 172/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಶಾಲ ತಂದೆ ಶಾಂತಾರಾಮ ಗಿರಿಯಪ್ಪನವರ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಮುಂಡವಾಡಾ ಗ್ರಾಮ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-22/ಇ.ಎಲ್-0339 ನೇದರ ಚಾಲಕ). ಈತನು ದಿನಾಂಕ: 07-11-2021 ರಂದು 22-15 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-22/ಇ.ಎಲ್-0339 ನೇದನ್ನು ಹಳಿಯಾಳ ಬದಿಯಿಂದ ಮುಂಡವಾಡದ ಬದಿಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಾ ಹಳಿಯಾಳ ತಾಲೂಕಿನ ಎಲ್.ಪಿ ಕ್ರಾಸ್ ದಿಂದ ಸುಮಾರು 200 ಮೀಟರ್ ಅಂತರದಲ್ಲಿ ಹಳಿಯಾಳ-ಕಲಘಟಗಿ ಡಾಂಬರ್ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಡಾಂಬರ್ ರಸ್ತೆಯ ಮೇಲೆ ತನಗೆ ತಾನೇ ಸ್ಕಿಡ್ಡಾಗಿ ಪಲ್ಟಿ ಕೆಡವಿಕೊಂಡ ಪರಿಣಾಮ ಹಣೆಯ ಎಡಬದಿಗೆ ಗಂಭೀರ ಸ್ವರೂಪದ ರಕ್ತಗಾಯ ಹಾಗೂ ಬಲಗೈ ತೋಳಿಗೆ ಒಳನೋವು ಮತ್ತು ಬಲಗೈ ತೋರು ಬೆರಳಿಗೆ ರಕ್ತಗಾಯ ಪಡಿಸಿಕೊಂಡಿದ್ದಲ್ಲದೇ, ಮೋಟಾರ್ ಸೈಕಲನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಾಂತಾರಾಮ ತಂದೆ ಹನುಮಂತ ಗಿರಿಯಪ್ಪನವರ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮುಂಡವಾಡಾ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 07-11-2021 ರಂದು 23-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 105/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರ ಹೆಸರಿನಲ್ಲಿರುವ ಬ್ಯಾಗದ್ದೆ ಗ್ರಾಮದ ಸರ್ವೇ ನಂ: 04 ರಲ್ಲಿ, 2-24-08 ಕ್ಷೇತ್ರದ ಜಮೀನಿನಲ್ಲಿ ಅಡಿಕೆ ಮತ್ತು ಬಾಳೆ ಬೆಳೆಗಳನ್ನು ಬೆಳೆಸಿರುತ್ತಾರೆ. ನಮೂದಿತ ಆರೋಪಿತರು ದಿನಾಂಕ: 03-11-2021 ರಂದು 17-00 ಗಂಟೆಯಿಂದ 04-11-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಬಾಬ್ತು ಬ್ಯಾಗದ್ದೆ ಗ್ರಾಮದ ಸರ್ವೇ ನಂ: 4 ರಲ್ಲಿ ಬೆಳೆದ ಸುಮಾರು 60 ಹಸಿ ಅಡಿಕೆ ಕೊನೆಗಳು, ಅಂದಾಜು ತೂಕ 1 ರಿಂದ 11/2 ಕ್ವಿಂಟಾಲ್, ಅ||ಕಿ|| 10,000/- ರೂಪಾಯಿ. ಇವುಗಳನ್ನು ಯಾವುದೋ ಹರಿತವಾದ ಆಯುಧದಿಂದ ಕೊಯ್ದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ವೆಂಕಟ್ರಮಣ ತಂದೆ ತಿಮ್ಮಯ್ಯ ಹೆಗಡೆ, ಪ್ರಾಯ-89 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಗ್ಗಿಸರ, ಬ್ಯಾಗದ್ದೆ, ಪೋ: ದೊಡ್ನಳ್ಳಿ, ತಾ: ಶಿರಸಿ ರವರು ದಿನಾಂಕ: 07-11-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-11-2021

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

ಇತ್ತೀಚಿನ ನವೀಕರಣ​ : 08-11-2021 05:43 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080