ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-10-2021

at 00:00 hrs to 24:00 hrs

 

ಮಹಿಳಾ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 09/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಯಶೋಧಾ ಉಮೇಶ ಅದರಗುಂಜಿ, ಪ್ರಾಯ-20 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಚಿಂಚಲಿ, ತಾ&ಜಿ: ಗದಗ, ಹಾಲಿ ಸಾ|| ಕನ್ನಡ ಶಾಲೆಯ ಹತ್ತಿರ, ಕಳಸವಾಡ, ಕಾರವಾರ. ಪಿರ್ಯಾದಿಯವರ ಹೆಂಡತಿಯಾದ ಈಕೆಯು ದಿನಾಂಕ: 05-10-2021 ರಂದು 15-30 ಯಿಂದ 16-30 ಗಂಟೆಯ ಸಮಯದಲ್ಲಿ ಪಿರ್ಯಾದಿಯವರು ಪಕ್ಕದ ಮನೆಯ ಹತ್ತಿರ ಹೋದಾಗ ಈಕೆಯು ಮನೆಯಲ್ಲಿ ಇದ್ದವಳು, ನಂತರ ಪಿರ್ಯಾದಿಯವರು ಮರಳಿ ಮನೆಗೆ ಬಂದು ನೋಡಿದಾಗ ಅವರ ಹೆಂಡತಿಯು ಮನೆಯಲ್ಲಿ ಇರಲಿಲ್ಲ. ಪಿರ್ಯಾದಿಯವರ ಹೆಂಡತಿಯು ಮನೆಯಲ್ಲಿ ಯಾರಿಗೂ ತಿಳಿಸದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಈವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ತಿಮ್ಮಣ್ಣ ಅದರಗುಂಜಿ, ಪ್ರಾಯ-26 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಚಿಂಚಲಿ, ತಾ&ಜಿ: ಗದಗ, ಹಾಲಿ ಸಾ|| ಕನ್ನಡ ಶಾಲೆಯ ಹತ್ತಿರ, ಕಳಸವಾಡ, ಕಾರವಾರ ರವರು ದಿನಾಂಕ: 07-10-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಹ್ಬಾನ್ ತಂದೆ ಮಹಮ್ಮದ್ ಸಿದ್ದಿಕಿ, ಪ್ರಾಯ-21 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಹೌಸಿಂಗ ಬೋರ್ಡ್, ಕೆ.ಎಚ್.ಬಿ ಕಾಲೋನಿ, ಹಾರುನಿಷಾ ಅಮಿನುದ್ದೀನ್ ರೋಡ್, 2 ನೇ ಕ್ರಾಸ್, ಮದಿನಾ ಕಾಲೋನಿ, ತಾ: ಭಟ್ಕಳ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ನಂ: ಕೆ.ಎ-19/ಇ.ವಿ-6522 ನೇದರ ಸವಾರ). ದಿನಾಂಕ: 07-10-201 ರಂದು ಪಿರ್ಯಾದಿಯವರು ಹೊನ್ನಾವರಕ್ಕೆ ಹೋಗುವ ಕುರಿತು ತೆರ್ನಮಕ್ಕಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಸಬಾತಿ ಕ್ರಾಸ್ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತುಕೊಂಡಿರುವಾಗ, ಬೆಳಿಗ್ಗೆ ಸುಮಾರು 08-45 ಗಂಟೆಗೆ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಬಜಾಜ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-19/ಇ.ವಿ-6522 ನೇದರ ಚಾಲಕನಾದ ನಮೂದಿತ ಆರೋಪಿತನು, ಬಸ್ತಿ ಕ್ರಾಸ್ ಹತ್ತಿರ ತನ್ನ ಮೋಟಾರ್ ಸೈಕಲ್ ಮುಂದುಗಡೆಯಿಂದ ಹೋಗುತ್ತಿದ್ದ ಒಂದು ವಾಹನಕ್ಕೆ ಓವರಟೇಕ್ ಮಾಡಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಪಿರ್ಯಾದಿಯ ಮನೆಯ ಪಕ್ಕದಲ್ಲಿದ್ದ ಗಾಯಾಳು ಆದಿತ್ಯ ತಂದೆ ಕೃಷ್ಣಾ ಶೆಟ್ಟಿ, ಈತನು ಆರ್.ಎನ್.ಎಸ್ ಕಾಲೇಜಿಗೆ ಹೋಗುವ ಕುರಿತು ತನ್ನ ಮನೆಯಿಂದ ಬಂದು ಸಬಾತಿ ಕ್ರಾಸ್ ಕಡೆಗೆ ಹೋಗಲು ರಸ್ತೆ ದಾಟಲು ನಿಂತುಕೊಂಡಿದ್ದವನಿಗೆ ಸದ್ರಿ ಆರೋಪಿ ಮೋಟಾರ್ ಸೈಕಲ್ ಸವಾರನು ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆದಿತ್ಯ ಈತನಿಗೆ ತಲೆಯ ಹಿಂಬದಿಗೆ ಭಾರೀ ರಕ್ತದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ ತಂದೆ ಸುಬ್ರಾಯ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ವ್ಯಾಪಾರ, ಸಾ|| ಕಟಗೇರಿ, ತೆರ್ನಮಕ್ಕಿ, ತಾ: ಭಟ್ಕಳ ರವರು ದಿನಾಂಕ: 07-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 165/2021, ಕಲಂ: 8(c) ಸಹಿತ 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ದೊಂಡು ತಂದೆ ವಿಠ್ಠು ಬಿಚಕುಲೆ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾದೇವಕೊಪ್ಪ, ತಾ: ಯಲ್ಲಾಪುರ. ಈತನು ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ಸಮೀಪದ ಸಾತನಕೊಪ್ಪಾ ಕ್ರಾಸಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ತಾಬಾ ಯಾವುದೇ ಪಾಸ್ ಯಾ ಪರವಾನಗಿ ಇಲ್ಲದೇ ಅನಧೀಕೃತವಾಗಿ ತನ್ನ ಲಾಭಕ್ಕೋಸ್ಕರ ಸುಮಾರು 6,000/- ರೂಪಾಯಿ ಮೌಲ್ಯದ 354 ಗ್ರಾಂ ಒಣಗಿದ ಗಾಂಜಾವನ್ನು ತನ್ನ ತಾಬಾದಲಿಟ್ಟುಕೊಂಡು ಮಾರಾಟ ಮಾಡಲು ನಿಂತಿದ್ದಾಗ ದಿನಾಂಕ: 07-10-2021 ರಂದು ಮಧ್ಯಾಹ್ನ 13-40 ಗಂಟೆಗೆ ಸರ್ಕಾರದ ಪರವಾಗಿ ಪಿರ್ಯಾದುದಾರರು ಪಂಚರು ಮತ್ತು ಠಾಣಾ ಸಿಬ್ಬಂದಿಯವರು ಹಾಗೂ ಪತ್ರಾಂಕಿತ ಅಧಿಕಾರಿಯವರೊಂದಿಗೆ ಕೂಡಿ ದಾಳಿ ಮಾಡಿ ಹಿಡಿದು ಆರೋಪಿತನು ಗಾಂಜಾ ಮಾರಾಟದಿಂದ ಸಂಪಾದಿಸಿದ ನಗದು ಹಣ 300/- ರೂಪಾಯಿ ಮತ್ತು ಗಾಂಜಾ ಮಾರಾಟಕ್ಕೆ ಬಳಸಿದ ಸ್ವತ್ತಿನೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸುರೇಶ ಎಚ್. ಯಳ್ಳೂರ್, ಪೊಲೀಸ್ ನಿರೀಕ್ಷಕರು, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 07-10-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: 4,5,7,12 THE KARNATAKA PREVENTION OF SLAUGHTER AND RESERVATION OF CATTLE ORDINANCE-2020 ಹಾಗೂ ಕಲಂ: 192(ಎ) ಐ.ಎಮ್.ವಿ ಎಕ್ಟ್-1988 ಹಾಗೂ ಕಲಂ: 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಇಮ್ಮುಸಾಬ್ ಖಲಂದರಸಾಬ್, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುತ್ತೂರು, ಪೋ: ಗುತ್ತೂರ, ತಾ: ಹರಿಹರ, ಜಿ: ದಾವಣಗೇರಿ, ಹಾಲಿ ಸಾ|| ಚಿಕ್ಕಾಂಶಿ, ಹೊಸೂರು, ತಾ: ಹಾನಗಲ್, ಜಿ: ಹಾವೇರಿ, 2]. ಬಸವರಾಜ ಗುತ್ತೇಪ್ಪ ಕೊಪ್ಪದ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಮೂಡುರು, ಪೋ: ಮೂಡುರು, ತಾ: ಹಾನಗಲ್, ಜಿ: ಹಾವೇರಿ, 3]. ಚಂದನ್ ಹೆಗಡೆ, ಪ್ರಾಯ-55 ವರ್ಷ, ಸಾ|| ಬೊಮ್ಮನಳ್ಳಿ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ದಿನಾಂಕ: 07-10-2021 ರಂದು 20-15 ಗಂಟೆಯ ಸುಮಾರಿಗೆ 1). ಅಂದಾಜು 1 ವರ್ಷ ಪ್ರಾಯದ ಕಂದು ಬಣ್ಣದ ಹೋರಿ-1, ಅ||ಕಿ|| 2,000/- ರೂಪಾಯಿ, 2) ಅಂದಾಜು 1 ವರ್ಷ ಪ್ರಾಯದ ಕಪ್ಪು ಮತ್ತು ಬಿಳಿ ಬಣ್ಣದ ಹೋರಿ-1, ಅ||ಕಿ|| 2,000/- ರೂಪಾಯಿ. ಇವುಗಳನ್ನು ಆರೋಪಿ 3 ನೇಯವರಿಂದ ಖರೀದಿಸಿಕೊಂಡು ಶಿರಸಿ ತಾಲೂಕಿನ ಬೊಮ್ಮನಳ್ಳಿ ಗ್ರಾಮದಿಂದ ಮಾರುತಿ ಸುಜಕಿ ಕಂಪನಿಯ SUPER CARRY DIESEL STD ಗೂಡ್ಸ್ ವಾಹನ ನಂ: ಕೆ.ಎ-27/ಸಿ-1659 ನೇದರಲ್ಲಿ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅಕ್ರಮವಾಗಿ ತುಂಬಿಕೊಂಡು ಅವುಗಳಿಗೆ ಮೇವು, ನೀರು ನೀಡದೇ, ಸರಿಯಾಗಿ ಮಲಗಿರಲು ವ್ಯವಸ್ಥೆ ಮಾಡದೇ, ಇಕ್ಕಟ್ಟಾಗಿ ಹಿಂಸಾತ್ಮಕ ರೀತಿಯಲ್ಲಿ ಒತ್ತೊತ್ತಿಗೆ ಹಗ್ಗದಿಂದ ಕಟ್ಟಿಕೊಂಡು ಬೊಪ್ಪನಳ್ಳಿ ಕಡೆಯಿಂದ ಇಸಳೂರ ಮಾರ್ಗವಾಗಿ ಹಾನಗಲ್ ಕಡೆಗೆ ಬಲಿ ಕೊಡುವ ಸಲುವಾಗಿ ಸಾಗಾಟ ಮಾಡಿಕೊಂಡು ಹೊರಟಿದ್ದಾಗ ಬೊಪ್ಪನಳ್ಳಿ-ಇಸಳೂರ ರಸ್ತೆಯ ನಿಸರ್ಗ ಲೇಔಟ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ದೇವು ಹರಿಕಂತ್ರ, ಎ.ಎಸ್.ಐ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 07-10-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 124/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಲ್ಲಪ್ಪ ತಂದೆ ಮೈಲಾರಪ್ಪ ಕಮ್ಮಾರ, ಪ್ರಾಯ-64 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊಟಗೋಡಿಕೊಪ್ಪ, ತಾ: ಮುಂಡಗೋಡ, 2]. ಫಕ್ಕಿರಪ್ಪ ಮಲ್ಲೇಶಪ್ಪ ಕಮ್ಮಾರ, ಸಾ|| ಧರ್ಮಾ ಕಾಲೋನಿ, ಮಳಗಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 07-10-2021 ರಂದು 20-00 ಗಂಟೆಗೆ ಮುಂಡಗೋಡ ತಾಲೂಕಿನ ಗೊಟಗೋಡಿಕೊಪ್ಪ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಜುಗಾರಾಟ ನಡೆಸಿ, ನಗದು ಹಣ 770/- ರೂಪಾಯಿ ಹಾಗೂ ಓ.ಸಿ ಜೂಗಾರಾಟದ ಸಲಕರಣೆಗಾಳದ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ನೇದವುಗಳೊಂದಿಗೆ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಸಿಕ್ಕಿದ್ದಲ್ಲದೇ, ಓ.ಸಿ ಮಟಕಾ ಜುಗಾರಾಟದಿಂದ ಸಂಗ್ರಹವಾದ ಹಣವನ್ನು ಆರೋಪಿ 2 ನೇಯವನಿಗೆ ನೀಡುತ್ತಿದ್ದುದರಿಂದ ಸದ್ರಿ ಆರೋಪಿತರ ಮೇಲೆ ಸರಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಸಿಮಾನಿ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 07-10-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-10-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174(3)(IV) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದತ್ತಾತ್ರೇಯ ತಂದೆ ಗಣಪತಿ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ತಾಮ್ರದ ಕೆಲಸ, ಸಾ|| ಹೆರವಟ್ಟಾ, ಕೆನರಾ ಹೆಲ್ತಕೇರ್ ಆಸ್ಪತ್ರೆ ಹತ್ತಿರ, ತಾ: ಕುಮಟಾ. ಪಿರ್ಯಾದುದಾರರ ತಮ್ಮನಾದ ಇವರು ಮೊದಲಿನಿಂದಲೂ ಸಾರಾಯಿ ಕುಡಿಯುವ ಚಟದವರಿದ್ದು, ಕಳೆದ ಒಂದು ವರ್ಷದ ಹಿಂದೆ ತನ್ನ ತಾಯಿ ತೀರಿಕೊಂಡಿದ್ದು, ಅಂದಿನಿಂದ ಮಾನಸಿಕವಾಗಿ ನೊಂದು ಸರಿಯಾಗಿ ಕೆಲಸಕ್ಕೆ ಹೋಗದೇ ಸಾರಾಯಿ ಕುಡಿಯುತ್ತಿದ್ದವರು, ದಿನಾಂಕ: 06-10-2021 ರಂದು ರಾತ್ರಿ ಕುಮಟಾದ ಸರ್ಕಾರಿ ಆಸ್ಪತ್ರೆಯ ಎದುರಿಗೆ ಇರುವ ಸಿಂಧೂರ ಬೇಕರಿ ಹತ್ತಿರ ಸಾರಾಯಿ ಕುಡಿದ ನಿಶೆಯಲ್ಲಿ ಯಾರಿಗೋ ಬೈಯ್ಯುತ್ತಾ ಇದ್ದವನಿಗೆ, ವಿನಾಯಕ ತಂದೆ ಅಶೋಕ ಭಂಡಾರಿ, ಸಾ|| ಬಗ್ಗೋಣ ಕ್ರಾಸ್, ತಾ: ಕುಮಟಾ ಎಂಬುವವರು ಆತನಿಗೆ ಸ್ಥಳದಿಂದ ಹೋಗಲು ಹೇಳಿದಾಗ, ಮೃತನು ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿದ್ದು, ನಂತರ ವಿಷಯ ತಿಳಿದ ಆತನ ಸಂಬಂಧಿಕರು ಮೃತ: ದತ್ತಾತ್ರೇಯಯ ನಾಯ್ಕ ಇವರಿಗೆ ಅವರ ಮನೆಗೆ ಒಯ್ದು ರಾತ್ರಿ 09-00 ಗಂಟೆಗೆ ಮಲಗಿಸಿದ್ದು, ದಿನಾಂಕ: 07-10-2021 ರಂದು ಬೆಳಿಗ್ಗೆ 07-30 ಗಂಟೆಗೆ ಪಿರ್ಯಾದಿಯವರು ಮೃತನ ಮನೆಗೆ ಬಂದು ನೋಡಿದಾಗ ಮೃತನ ಮುಖದ ಭಾಗ, ಬಲಗಣ್ಣಿನ ಭಾಗ ಕಪ್ಪಾಗಿದ್ದು, ಮೂಗಿನಿಂದ ರಕ್ತ ಬಂದು ಸೋರುತ್ತಿದ್ದು, ಮೃತನು ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದ್ದು, ಮೃತನ ಮರಣದ ಬಗ್ಗೆ ಸಂಶಯ ಇರುವ ಬಗ್ಗೆ ಪಿರ್ಯಾದಿ ಶ್ರೀಮತಿ ಬೀನಾ ದೇವರಾಯ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಾಡಾ, ಕಟ್ಟಿಗೆ ಡಿಪೋ ಹತ್ತಿರ, ತಾ: ಕುಮಟಾ ರವರು ದಿನಾಂಕ: 07-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಮಾ ತಂದೆ ದುರ್ಗಾ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂಪೀಕೇರಿ, ಹೊಸೂರು, ಸಿದ್ದಾಪುರ ಶಹರ. ಸುದ್ದಿದಾರಳ ಗಂಡನಾದ ಇವರು ದಿನಾಂಕ: 07-10-2021 ರಂದು ಬೆಳಿಗ್ಗೆ ಸಿದ್ದಾಪುರ ಶಹರದ ಹೊಸೂರಿನ ಮುಂಡಿಗೆ ಹಳ್ಳದ ಹತ್ತಿರ ಇರುವ ತನ್ನ ಗದ್ದೆಯಲ್ಲಿ ಹಾಳೆಯ ಹುಲ್ಲು ಕೊಯ್ಯುತ್ತಿದ್ದವರು ಸಮಯ 11-30 ಗಂಟೆಯ ಸುಮಾರಿಗೆ ಏಕಾಏಕಿಯಾಗಿ ಕುಸಿದು ಬಿದ್ದು ತೀರಾ ಅಸ್ವಸ್ಥರಾದವರಿಗೆ ಚಿಕಿತ್ಸೆಗೆಂದು 108 ಆಂಬ್ಯುಲೆನ್ಸ್ ಮೇಲಾಗಿ ಸಿದ್ದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗಮಧ್ಯ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಸಿದ್ದಾಪುರ ಶಹರದ ಗಂಗೋತ್ರಿ ಹೊಟೇಲ್ ಹತ್ತಿರ ಮೃತಪಟ್ಟಿದ್ದು, ಇದರ ಹೊರತು ಮೃತ ತನ್ನ ಗಂಡನ ಸಾವಿನಲ್ಲಿ ಬೇರೇ ಏನೂ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಹಾಲಕ್ಷ್ಮಿ ಕೋಂ. ರಾಮಾ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಂಪೀಕೇರಿ, ಹೊಸೂರು, ತಾ|| ಸಿದ್ದಾಪುರ ರವರು ದಿನಾಂಕ: 07-10-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 10-10-2021 09:10 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080