ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 07-09-2021

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ತಂಗರಾಜ ತಂದೆ ಚೆಲ್ಲಪ್ಪಾ ಗೌಡರ, ಪ್ರಾಯ-63 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಜೀವನಗರ, ಕದ್ರಾ, ಕಾರವಾರ. ಈತನು ದಿನಾಂಕ: 07-09-2021 ರಂದು 11-00 ಗಂಟೆಗೆ ಕದ್ರಾ ರಾಜೀವನಗರದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಚೀಟಿಯನ್ನು ಬರೆದು ಕೊಡುತ್ತಿದ್ದವನಿಗೆ ದಾಳಿ ನಡೆಸಿ ಹಿಡಿದು ಅವನಿಂದ ನಗದು ಹಣ 670/- ರೂಪಾಯಿ ಹಾಗೂ ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ಬಾಲ್ ಪೆನ್ ಅನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾದೇವ ಭೋಸಲೆ, ಪಿ.ಎಸ್.ಐ, ಕದ್ರಾ ಪೊಲೀಸ್ ಠಾಣೆ ರವರು ದಿನಾಂಕ: 07-09-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಬಾಳು ತಂದೆ ವಿಷ್ಣು ಕಡೇಕರ, ಪ್ರಾಯ-39 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಾವಳ, ಮಾಜಾಳಿ, ಕಾರವಾರ. ಈತನು ದಿನಾಂಕ: 07-09-2021 ರಂದು ದಾಂಡೆಭಾಗ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಚೀಟಿಯನ್ನು ಬರೆದು ಕೊಡುತ್ತಿದ್ದವನಿಗೆ ಪಿರ್ಯಾದಿಯವರು ಮಧ್ಯಾಹ್ನ 12-40 ಗಂಟೆಗೆ ದಾಳಿ ನಡೆಸಿ ಆತನನ್ನು ಹಿಡಿದು, ಅವನಿಂದ ನಗದು ಹಣ 975/- ರೂಪಾಯಿ ಹಾಗೂ ಅಂಕೆ-ಸಂಖ್ಯೆ ಬರೆದ ಚೀಟಿ-1, ಮತ್ತು ಬಾಲ್ ಪೆನ್-1 ನ್ನು  ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಕಲ್ಪನಾ ಬಿ. ಆರ್, ಪಿ.ಎಸ್.ಐ (ತನಿಖೆ), ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 07-09-2021 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 238/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಸುಹಾನಾ ಕೋಂ. ವಿಶ್ವನಾಥ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹೊದ್ಕೆಶಿರೂರು, ತಾ: ಹೊನ್ನಾವರ. ಪಿರ್ಯಾದಿಯ ಮೊಮ್ಮಗಳಾದ ಇವಳು ದಿನಾಂಕ: 06-09-2021 ರಂದು 11-00 ಗಂಟೆಯಿಂದ 16-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಗಂಡನ ಮನೆಯಿರುವ ಹೊನ್ನಾವರ ತಾಲೂಕಿನ ಹೊದ್ಕೆಶಿರೂರನಿಂದ ಹೋದವಳು ಈವರೆಗೂ ತನ್ನ ಗಂಡನ ಮನೆಗೂ ಹಾಗೂ ತನ್ನ ತಾಯಿಯ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮೊಮ್ಮಗಳಿಗೆ ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಆಶಾಭಿ ಕೋಂ. ಅಬ್ದುಲ್ ಸೈಯ್ಯದ್ ಖಾಜಿ, ಪ್ರಾಯ-65 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನೂರಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ ರವರು ದಿನಾಂಕ: 07-09-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನೀಲ್ ತಂದೆ ಶ್ರೀಕಾಂತ ಮುತಗೇಕರ್, ಪ್ರಾಯ-30 ವರ್ಷ, ಸಾ|| ಕೇರವಾಡ, ತಾ: ದಾಂಡೇಲಿ (ಆಟೋ ರಿಕ್ಷಾ ನಂ: ಕೆ.ಎ-65/0905 ನೇದರ ಚಾಲಕ). ಈತನು ದಿನಾಂಕ: 07-09-2021 ರಂದು 15-10 ಗಂಟೆಗೆ ದಾಂಡೇಲಿ ತಾಲೂಕಿನ ಕೇರವಾಡ ಗ್ರಾಮದ ಶ್ರೇಯಸ್ ಪೇಪರ್ ಮಿಲ್ ಕ್ರಾಸಿನಿಂದ ಹಳಿಯಾಳ ಬದಿಗೆ ಸುಮಾರು 1 ಕೀ.ಮೀ ದೂರದಲ್ಲಿ ರಾಜ್ಯ ಹೆದ್ದಾರಿಯ ತಾನು ಚಲಾಯಿಸುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-65/0905 ನೇದನ್ನು ಆಲೂರು ಕಡೆಯಿಂದ ಹಾಲಮಡ್ಡಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷತನದಿಂದ ಮಾನವಿಯ ಪ್ರಾಣಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು, ರಿಕ್ಷಾದ ವೇಗವನ್ನು ನಿಯಂತ್ರಿಸಲಾಗದೇ ಒಮ್ಮೇಲೆ ರಾಜ್ಯ ಹೆದ್ದಾರಿಯ ಬಲಬದಿಗೆ ಹೋಗಿ ರಾಜ್ಯ ಹೆದ್ದಾರಿಯ ಪಕ್ಕದ ಒಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆಟೋ ರಿಕ್ಷಾದಲ್ಲಿದ್ದ 1). ಶ್ರೀಮತಿ ನಿರ್ಮಲಾ ಕೋಂ. ಮಡಿವಾಳಪ್ಪಾ ಸುಣಗಾರ, ಪ್ರಾಯ-42 ವರ್ಷ, ಸಾ|| ದಾಂಡೇಲಪ್ಪಾ ನಗರ, ಕೇರವಾಡ, ತಾ: ದಾಂಡೇಲಿ ಇವರಿಗೆ ತಲೆಯ ಹಿಂಬದಿಗೆ ಹಾಗೂ ಮುಂಬದಿಗೆ ಭಾರೀ ಸ್ವರೂಪದ ಗಾಯ, 2). ಶ್ರೀಮತಿ ಶಿವಕ್ಕಾ ಕೋಂ. ಮಡಿವಾಳಪ್ಪಾ ಸುಣಗಾರ, ಪ್ರಾಯ-43 ವರ್ಷ, ಸಾ|| ದಾಂಡೇಲಪ್ಪಾ ನಗರ, ಕೇರವಾಡ, ತಾ: ದಾಂಡೇಲಿ ಇವರಿಗೆ ಬಲಬದಿಯ ಹಣೆ, ಹುಬ್ಬು, ಮುಖಕ್ಕೆ, ಗದ್ದಕ್ಕೆ ಹಾಗೂ ಬಲಗಾಲಿಗೆ ಗಾಯ, 3). ಶ್ರೀಮತಿ ಶೋಭಾ ಕೋಂ. ಈರಯ್ಯಾ ಗಣಚಾರಿ, ಪ್ರಾಯ-38 ವರ್ಷ, ಸಾ|| ದಾಂಡೇಲಪ್ಪಾ ನಗರ, ಕೇರವಾಡ, ತಾ: ದಾಂಡೇಲಿ ಇವರಿಗೆ ಎರಡು ಕಿವಿಯಿಂದ ರಕ್ತ ಹೊರ ಬಂದು, ಬಲಗಾಲು ಮತ್ತು ಎಡಗಾಲು ಹಿಮ್ಮಡಿಗೆ ಗಾಯ, 4). ಶ್ರೀಮತಿ ರೂಪಾ ಕೋಂ. ನಿಂಗಪ್ಪಾ ಬ್ಯಾನಿ, ಪ್ರಾಯ-40 ವರ್ಷ, ಸಾ|| ಹಾಲಮಡ್ಡಿ, ಕೇರವಾಡ, ತಾ: ದಾಂಡೇಲಿ ಇವರಿಗೆ ಎಡಗಾಲು, ಎಡಗೈಗೆ ಒಳಗೆ ಎಲುಬು ಫ್ರ್ಯಾಕ್ಚರ್, ಮೂಗಿಗೆ ಹಾಗೂ ಹಣೆಗೆ ಗಾಯ, 5). ಶ್ರೀಮತಿ ಲಕ್ಷ್ಮೀ ಕಲ್ಲಪ್ಪಾ ಅರುಟಗಿ, ಪ್ರಾಯ-48 ವರ್ಷ, ಸಾ|| ಹಾಲಮಡ್ಡಿ, ಕೇರವಾಡ, ತಾ: ದಾಂಡೇಲಿ ಎಡಗೈಗೆ ಫ್ರ್ಯಾಕ್ಚರ್ ಪಡಿಸಿದ್ದು ಹಾಗೂ ಆರೋಪಿ ರಿಕ್ಷಾ ಚಾಲಕನು ತನಗೂ ಸಹ ತಲೆಯ ಬಲಗಡೆ, ಎಡಗೈಗೆ ರಕ್ತಗಾಯ, ಕುತ್ತಿಗೆಯ ಬಲಗಡೆಗೆ ಹರಿತವಾದ ರಕ್ತಗಾಯ ಹಾಗೂ ಬಲಗಾಲು ಫ್ರ್ಯಾಕ್ಚರ್ ಪಡಿಸಿಕೊಂಡು, ಶ್ರೀಮತಿ ನಿರ್ಮಲಾ ಕೋಂ. ಮಡಿವಾಳಪ್ಪಾ ಸುಣಗಾರ, ಪ್ರಾಯ-42 ವರ್ಷ, ಸಾ|| ದಾಂಡೇಲಪ್ಪಾ ನಗರ, ಕೇರವಾಡ, ತಾ: ದಾಂಡೇಲಿ ಇವರಿಗೆ ತಲೆಗೆ ತೀವೃ ಸ್ವರೂಪದ ಗಾಯನೋವು ಪಡಿಸಿ, ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯದಲ್ಲಿ ಮೃತಪಡುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಸಂಜೀವ ತಂದೆ ಶೇಖರ ಬೊರಗಿ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾಲಮಡ್ಡಿ, ತಾ: ದಾಂಡೇಲಿ ರವರು ದಿನಾಂಕ: 07-09-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 143/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಚಟ್ಟಪ್ಪ ತಂದೆ ಹನುಮಂತ ವಡ್ಡರ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿಧ್ಧರಾಮೇಶ್ವರ ಗಲ್ಲಿ, ಹಳಿಯಾಳ ಶಹರ. ಈತನು ದಿನಾಂಕ: 07-09-2021 ರಂದು 16-00 ಗಂಟೆಗೆ ಹಳಿಯಾಳ ಶಹರದ ಫಿಶ್ ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ ಕರೆದು, ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುತ್ತೇನೆ ಅಂತ ಜನರ ಮನವೊಲಿಸಿ ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ, ದಾಳಿಯ ಕಾಲಕ್ಕೆ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 640/- ರೂಪಾಯಿ, 2). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟ್-1, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಎಲ್&ಓ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 07-09-2021 ರಂದು 20-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 144/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಕಾಂತ ತಂದೆ ರಾಮಾ ಕೋಡೇಕರ, ಪ್ರಾಯ-49 ವರ್ಷ, ವೃತ್ತಿ-ಹೊಟೇಲ್ ವ್ಯವಹಾರ, ಸಾ|| ಕುರಿಗದ್ದಾ, ತಾ: ಹಳಿಯಾಳ. ಈತನು ದಿನಾಂಕ: 24-08-2021 ರಂದು 18-10 ಗಂಟೆಗೆ ಹಳಿಯಾಳ ತಾಲೂಕಿನ ಹುಲ್ಲಟ್ಟಿ ಗ್ರಾಮದ ಶುಗರ್ ಫ್ಯಾಕ್ಟರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕಾಗಿ ಬರ-ಹೋಗುವ ಜನರಿಗೆ ಕರೆದು, ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುತ್ತೇನೆ ಅಂತ ಜನರ ಮನವೊಲಿಸಿ, ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ, ದಾಳಿಯ ಕಾಲಕ್ಕೆ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 470/- ರೂಪಾಯಿ, 2). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟ್-1, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಸತ್ಯಪ್ಪ ಹುಕ್ಕೇರಿ, ಪಿ.ಎಸ್.ಐ (ತನಿಖೆ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 07-09-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 07-09-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಸುಜಾತಾ ತಂದೆ ಶಿವಾನಂದ ಉಪ್ಪಾರ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಕಾವಲವಾಡ, ತಾ: ಹಳಿಯಾಳ. ಪಿರ್ಯಾದಿಯವರ ತಮ್ಮನ ಮಗಳಾದ ಇವಳು ದಿನಾಂಕ: 29-08-2021 ರಂದು ಸಂಜೆ 04-30 ಗಂಟೆಗೆ ತನ್ನ ತಂದೆ ತಾಯಿಯವರು ತಮ್ಮ ವೈಯಕ್ತಿಕ ವಿಚಾರದಲ್ಲಿ ತಮ್ಮ ಮನೆಯಲ್ಲಿ ಜಗಳ ಮಾಡಿಕೊಂಡು, ತಾಯಿ ಮಗನೊಂದಿಗೆ ತವರು ಮನೆಗೆ ಹೋಗಿದ್ದು, ನಂತರ ತನ್ನ ತಂದೆ ಲಾರಿ ಚಾಲಕನಾಗಿ ಕೆಲಸದ ಮೇಲೆ ಹೋಗಿದ್ದು, ಮನೆಯಲ್ಲಿ ತಾನೊಬ್ಬಳೇ ಇರಬೇಕಾಯಿತು ಅಂತಾ ವಿಚಾರ ಮಾಡಿ, ತುಂಬಾ ಸೂಕ್ಷ ಸ್ವಭಾವದವಳಾಗಿದ್ದ ಸುಜಾತಾ ಇವಳು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಬೇಸರ ಮಾಡಿಕೊಂಡು ದಿನಾಂಕ: 01-09-2021 ರಂದು 14-00 ಗಂಟೆಯಿಂದ 19-00 ಗಂಟೆ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಕಾವಲವಾಡದ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಕುಡಿದು ಅಸ್ವಸ್ಥಗೊಂಡವಳಿಗೆ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ, ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಅಲ್ಲಿಂದ ಅದೇ ದಿವಸ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಿಸಿದ್ದು, ಹೀಗೆ ಉಪಚಾರದಲ್ಲಿದ್ದ ಸುಜಾತಾ ಇವಳು ದಿನಾಂಕ: 07-09-2021 ರಂದು 00-50 ಗಂಟೆಗೆ ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಇದರ ಹೊರತು ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಭೀಮರಾಯ್ ಉಪ್ಪಾರ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾವಲವಾಡ, ತಾ: ಹಳಿಯಾಳ ರವರು ದಿನಾಂಕ: 07-09-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 08-09-2021 01:46 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080