ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-04-2022

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2022, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಿಶನ ತಂದೆ ಕೃಷ್ಣಾನಂದ ಕಳಸ, ಪ್ರಾಯ-26 ವರ್ಷ, ಸಾ|| ಕಡವಾಡ, ಕುಂಬಾರವಾಡ, ಕಾರವಾರ (ಕೆ.ಟಿ.ಎಮ್ ಮೋಟಾರ್ ಸೈಕಲ್ ನಂ: ಎ.ಎನ್-01/ಪಿ-2504 ನೇದರ ಸವಾರ). ಈತನು ದಿನಾಂಕ: 08-04-2022 ರಂದು 18-15 ಗಂಟೆಯ ಸಮಯಕ್ಕೆ ತಾನು ಸವಾರಿ ಮಾಡುತ್ತಿದ್ದ  ಕೆ.ಟಿ.ಎಮ್ ಮೋಟಾರ ಸೈಕಲ್ ನಂ: ಎ.ಎನ್.01/ಪಿ-2504 ನೇದನ್ನು ರಾಜ್ಯ ಹೆದ್ದಾರಿ ಸಂಖ್ಯೆ-06 ನೇದರ ಮೇಲೆ ಕಡವಾಡ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಶೇಜವಾಡ ಬ್ರಿಡ್ಜ್ ಹತ್ತಿರ ಕಾರವಾರ ಕಡೆಯಿಂದ ಶಿರವಾಡ ಕಡೆಗೆ ಎಕ್ಟಿವಾ ವಾಹನ ನಂ: ಕೆ.ಎ-30/ಯು-8363 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿಯವರ ಅಣ್ಣ ಶ್ರೀ ನರೇಂದ್ರ ತಂದೆ ತುಳಸಿರಾಮ ಲಾಂಜೇಕರ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ಹಣೆಗೆ, ಬಲಗಾಲಿಗೆ, ಬಲಗೈಗೆ ಮಾರಣಾಂತಿಕ ಗಾಯ ಪಡಿಸಿ ಮರಣ ಪಡಿಸಿದ್ದಲ್ಲದೇ, ತನ್ನ ಹಿಂಬದಿ ಸವಾರ ಶ್ರೀ ರೋಶನ ತಂದೆ ಕೃಷ್ಣಾನಂದ ಕಳಸ, ಈತನಿಗೂ ಹಾಗೂ ತನಗೂ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದರ್ಶನ ತಂದೆ ತುಳಸಿರಾಮ ಲಾಂಜೇಕರ, ಪ್ರಾಯ-40 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಹಳಕೋಟ, ಕಡವಾಡ, ಕಾರವಾರ ರವರು ದಿನಾಂಕ: 08-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2022, ಕಲಂ: 323, 324, 447, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಲಕ್ಷ್ಮೀಕಾಂತ ಅನಂತ ನಾಯಕ, ಪ್ರಾಯ-32 ವರ್ಷ, 2]. ಉಮಾಕಾಂತ ಅನಂತ ನಾಯಕ, ಪ್ರಾಯ-30 ವರ್ಷ, ಸಾ|| (ಇಬ್ಬರೂ) ಬೆಲೇಕೇರಿ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 08-04-2022 ರಂದು 17-00 ಗಂಟೆಗೆ ಬೆಲೇಕೇರಿ ಗ್ರಾಮದಲ್ಲಿರುವ ಪಿರ್ಯಾದಿಯವರ ಬಾಬ್ತು ಸರ್ವೇ ನಂ: 84 ಅ ಮತ್ತು ಬ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಪಿರ್ಯಾದಿಯವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕೆಟ್ಟ ಕೆಟ್ಟ ಶಬ್ದಗಳಿಂದ ಬೈಯ್ದು ಕೊಲೆ ಮಾಡುವ ಬೆದರಿಕೆ ಹಾಕಿ, ಪಿರ್ಯಾದಿಯವರಿಗೆ ಎದೆಯ ಮೇಲೆ ಕೈ ಹಾಕಿ ದೂಡಿರುತ್ತಾರೆ. ಅದೇ ಸಮಯಕ್ಕೆ ಪಿರ್ಯಾದಿಯವರ ಮಗನಾದ ಶ್ರೀ ನಿತ್ಯಾನಂತ ತಂದೆ ಪಾಂಡುರಂಗ ನಾಯಕ, ಇವರು ಕೆಲಸದ ನಿಮಿತ್ತ ಊರಿಗೆ ಬರುತ್ತಿದ್ದಾಗ ಇಬ್ಬರೂ ಆರೋಪಿತರು ತಡೆದು ನಿಲ್ಲಿಸಿ ಸಿಮೆಂಟ್ ಪಟ್ಟಿಯಿಂದ ಕೈ ಮತ್ತು ಬೆನ್ನಿನ ಮೇಲೆ ಹಲ್ಲೆ ಮಾಡಿ ಕೆಟ್ಟ ಶಬ್ದಗಳಿಂದ ಬೈಯ್ದು ‘ಕೊಲೆ ಮಾಡುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಪಾಂಡುರಂಗ ತಂದೆ ಹೊನ್ನಪ್ಪ ನಾಯಕ, ಪ್ರಾಯ-64 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜೈನಬೀರ ದೇವಸ್ಥಾನದ ಹತ್ತಿರ, ಬೆಲೇಕೇರಿ, ತಾ: ಅಂಕೋಲಾ ರವರು ದಿನಾಂಕ: 08-04-2022 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2022, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಬಸವರಾಜ ತಂದೆ ಪಾಂಡಪ್ಪ ಗೊಂದಳಿ, ಪ್ರಾಯ-36 ವರ್ಷ, ವೃತ್ತಿ-ಎಗ್ ರೈಸ್ ಅಂಗಡಿ ವ್ಯಾಪಾರ, ಸಾ|| ಕುಪ್ಪಳ್ಳಿ. ಪೋ: ಬಂಕನಾಳ, ತಾ: ಶಿರಸಿ. ಈತನು ಪಿರ್ಯಾದಿಯ ಗಂಡನಾಗಿದ್ದು, ದಿನಾಂಕ: 01-04-2022 ರಂದು ರಾತ್ರಿ ಮನೆಗೆ ಬಂದು ಮನೆಯಲ್ಲಿ ಊಟ ಮಾಡಿಕೊಂಡು ‘ಬೆಳಿಗ್ಗೆ ಶನಿವಾರ ಸಂತೆ ಇರುವುದರಿಂದ ತಾನು ರಾತ್ರಿ ಅಂಗಡಿಯಲ್ಲಿಯೇ ಮಲಗಿಕೊಂಡು ಬೆಳಿಗ್ಗೆ ಬೇಗನೆ ಅಂಗಡಿ ತೆರೆಯುತ್ತೇನೆ’ ಎಂದು ಹೇಳಿ 23-30 ಗಂಟೆಯ ಸುಮಾರಿಗೆ ಮನೆಯಿಂದ ಹೋಗಿದ್ದವರು, ತಾನೂ ದಿನಾಂಕ: 02-04-2022 ರಂದು ಬೆಳಿಗ್ಗೆ 09-00 ಗಂಟೆಗೆ ಅಂಗಡಿಯ ಬಳಿ ಎಂದಿನಂತೆ ಹೋಗಿದ್ದಾಗ ಅಂಗಡಿಗೆ ಬೀಗ ಹಾಕಿದಿದ್ದರಿಂದ ಈ ನಡುವಿನ ಅವದಿಯಲ್ಲಿ ನನ್ನ ಗಂಡ ನಮ್ಮ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಈವರೆಗೂ ಮನೆಗೂ ಬಾರದೇ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮಾ ಬಸವರಾಜ ಗೊಂದಳಿ, ಪ್ರಾಯ-25 ವರ್ಷ, ವೃತ್ತಿ-ಗೃಹಿಣಿ, ಸಾ|| ಕುಪ್ಪಳ್ಳಿ. ಪೋ: ಬಂಕನಾಳ, ತಾ: ಶಿರಸಿ ರವರು ದಿನಾಂಕ: 08-04-2022 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-04-2022

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಕುಮಾರಿ: ಇಂದಿರಾ ತಂದೆ ಶಂಕರ ಗೌಡಾ, ಪ್ರಾಯ-12 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹೊಸಳ್ಳಿ, ಕಲ್ಲಬ್ಬೆ, ತಾ: ಕುಮಟಾ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 07-04-2022 ರಂದು 17-00 ಗಂಟೆಯ ಸುಮಾರಿಗೆ ತಮ್ಮ ಬಾಗಾಯತು ಅಡಿಕೆ ತೋಟಕ್ಕೆ ನೀರು ಬಿಡಲು ಅಘನಾಶಿನಿ ನದಿಗೆ ಜೋಡಿಸಿದ ನೀರಿನ ಪಂಪ್ ಚಾಲು ಮಾಡಲು ಹೋದವಳು, ಆಕಸ್ಮಾತ್ ಕಾಲು ಜಾರಿ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು, ಅವಳ ಮೃತದೇಹವು ದಿನಾಂಕ: 08-04-2022 ರಂದು 01-00 ಗಂಟೆಗೆ ಮೃತಳ ಮನೆಯ ತೋಟದ ಪಕ್ಕದಲ್ಲಿಯೇ ಹರಿದಿರುವ ಅಘನಾಶಿನಿ ನದಿಯ ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ಶಿವು ಗೌಡಾ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಸಳ್ಳಿ, ಕಲ್ಲಬ್ಬೆ, ತಾ: ಕುಮಟಾ ರವರು ದಿನಾಂಕ: 08-04-2022 ರಂದು 05-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2022, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಣಪತಿ ತಂದೆ ಪುಟ್ಟಾ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬರಗದ್ದೆ ಗ್ರಾಮ, ತಾ: ಯಲ್ಲಾಪುರ. ಈತನು ಕಳೆದ ಹಲವು ವರ್ಷಗಳಿಂದ ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ಮನೆಯಲ್ಲಿ ಹೆಂಡತಿ ಮಕ್ಕಳ ಮೇಲೆ ರೇಗಾಡುತ್ತಾ ‘ತನಗೆ ಹೊಟ್ಟೆನೋವು, ತನಗೆ ಬದುಕಲು ಇಷ್ಟ ಇಲ್ಲ. ತಾನು ಸಾಯಬೇಕು’ ಅಂತಾ ಹೇಳುತ್ತಿದ್ದವನು, ದಿನಾಂಕ: 07-04-2022 ರಂದು ಮಧ್ಯಾಹ್ನ 03-00 ಗಂಟೆಯಿಂದ ಸಾಯಂಕಾಲ 06-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಥವಾ ಹೊಟ್ಟೆನೊವು ತಾಳಲಾರದೇ ತನ್ನ ಮನೆಯ ಹಿಂದಿನ ಪಡಸಾಲೆಯಲ್ಲಿಯ ಮೇಲ್ಜಂತಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮೃತನ ಹೊಟ್ಟೆಗೆ ಸಣ್ಣ ಸಣ್ಣ ಗಾಯಗಳಿರುವುದರಿಂದ ಮೃತನ ಮರಣದಲ್ಲಿ ಸಂಶಯ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗೌರಿ ಕೋಂ. ಗಣಪತಿ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬರಗದ್ದೆ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 08-04-2022 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 23-04-2022 12:30 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080