ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-08-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 269, 271 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಂಬಾಜಿ ರಘುನಾಥ ಪಾಟೀಲ್, ಪ್ರಾಯ-37 ವರ್ಷ, ವೃತ್ತಿ-ಹಣ್ಣು ವ್ಯಾಪಾರ, ಸಾ|| ಹಳೆ ಬುದಗಾಂವ ರಸ್ತೆ, ಸಾಂಗ್ಲಿ, ಮಹಾರಾಷ್ಟ್ರ, 2]. ಗೋವಿಂದ ಬಬನ್ ಜೇಡಗಿ, ಪ್ರಾಯ-25 ವರ್ಷ, ವೃತ್ತಿ-ಹಣ್ಣು ವ್ಯಾಪಾರ, ಸಾ|| ಹಳೆ ಬುದಗಾಂವ ರಸ್ತೆ, ಸಾಂಗ್ಲಿ, ಮಹಾರಾಷ್ಟ್ರ. ಈ ನಮೂದಿತ ಆರೋಪಿತರು ಯಾವುದೇ ಕೋವಿಡ್ ನಿಯಮ ಪಾಲಿಸದೇ ದಿನಾಂಕ: 08-08-2021 ರಂದು 11-00 ಗಂಟೆಯ ಸುಮಾರಿಗೆ ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯದ ಕಾರವಾರಕ್ಕೆ ತಮ್ಮ ಗೂಡ್ಸ್ ವಾಹನ ನಂ: ಎಮ್.ಎಚ್-10/ಬಿ.ಆರ್-3567 ನೇದರ ಮೇಲೆ ಬಂದು ಹಣ್ಣು ವ್ಯಾಪಾರ ಮಾಡಲು ತಯಾರಿಯಲ್ಲಿ ಇರುವವರಿಗೆ ಕರೆದುಕೊಂಡು ಬಂದು ನಗರಸಭೆ ಹತ್ತಿರ ಇಟ್ಟುಕೊಂಡಿದ್ದು, ಈ ಕುರಿತು ಆರೋಪಿತರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿಜಲಿಂಗೇಶ್ವರ ಶಂಕರ ಮಾಲದಿನ್ನಿ, ಪ್ರಾಯ-30 ವರ್ಷ, ವೃತ್ತಿ-ನಗರಸಭೆಯಲ್ಲಿ ಟ್ಯಾಕ್ಸ್ ಇನ್ಸಪೆಕ್ಟರ್, ಸಾ|| ನಗರಸಭೆ, ಕಾರವಾರ ರವರು ದಿನಾಂಕ: 08-08-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗೋವಿಂದು ತಂದೆ ಮಿಂಚು ಹರಿಕಂತ್ರ, ಪ್ರಾಯ-47 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತೋರೆಗಜನಿ, ಗೋಕರ್ಣ, ತಾ: ಕುಮಟಾ. ಈತನು ದಿನಾಂಕ: 08-08-2021 ರಂದು 18-45 ಗಂಟೆಗೆ ಸಾಣಿಕಟ್ಟಾ ಗ್ರಾಮದ ಉಪ್ಪಿನಾಗಾರದ ಎದುರಿನ ರಸ್ತೆಯ ಪಕ್ಕದ ಗೂಡಂಗಡಿಯ ಪಕ್ಕದ ತಾತ್ಕಾಲಿಕ ಶೆಡ್ ಒಳಗೆ ಸಾರ್ವಜನಿಕರಿಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ಮತ್ತು ಅವರ ಸಿಬ್ಬಂದಿಯವರು ಕೂಡಿ ಮುತ್ತಿಗೆ ಹಾಕಿ ದಾಳಿ ಮಾಡಿದಾಗ HAYWARDS CHEERS WHISKY-90 ML ಅಂತಾ ಬರೆದ 03 ಪ್ಯಾಕೆಟ್ (ಪೌಚ್) ಗಳು, ಅ||ಕಿ|| 105.39/- ರೂಪಾಯಿ ಹಾಗೂ HAYWARDS CHEERS WHISKY-90 ML ಅಂತಾ ಲೇಬಲ್ ಇರುವ 2 ಖಾಲಿ ಪೌಚ್ ಗಳು, ಅ||ಕಿ|| 00.00/- ರೂಪಾಯಿ ಮತ್ತು 2 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಹಾಗೂ ನಗದು ಹಣ 120/- ರೂಪಾಯಿಗಳೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 08-08-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 127/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 19-07-2021 ರಂದು ಮಧ್ಯಾಹ್ನ 14-00 ಗಂಟೆಯಿಂದ ದಿನಾಂಕ: 20-07-2021 ರಂದು ಬೆಳಿಗ್ಗೆ 09-30 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ತಾಲೂಕಿನ ಶಿರನಾಳ ಅಂಗನವಾಡಿ ಕೇಂದ್ರದ ಮೇಲ್ಛಾವಣಿಯ ಹಂಚನ್ನು ತೆಗೆದು ಒಳಗಡೆ ಇಳಿದು ಅಂಗನವಾಡಿಯಲ್ಲಿರುವ 1). ಡಿಜಿಟಲ್ ತೂಕದ ಮಷೀನ್-01, ಅ||ಕಿ|| 4,000/- ರೂಪಾಯಿ, 2). ಕೊಟರ್ ಸ್ಕೇಲ್ ತೂಕದ ಮಷೀನ್-02, ಅ||ಕಿ|| 2,000/- ರೂಪಾಯಿ, 3). ರೌಂಡ್ ಸ್ಕೇಲ್ ತೂಕದ ಮಷೀನ್-01, ಅ||ಕಿ|| 1,200/- ರೂಪಾಯಿ, 4). ಉಪ್ಪಿಟ್ಟು ಮಾಡುವ ಅಲ್ಯೂಮಿನಿಯಂ ಸಣ್ಣ ಬಂಡಿ-01, ಅ||ಕಿ|| 400/- ರೂಪಾಯಿ, 5). ನಗದು ಹಣ 450/- ರೂಪಾಯಿ. ಹೀಗೆ ಒಟ್ಟು 8,050/- ರೂಪಾಯಿ ಬೆಲೆಯ ಸ್ವತ್ತನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಆರತಿ ಕೋಂ. ರವೀಂದ್ರ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಅಂಗನವಾಡಿ ಕಾರ್ಯಕರ್ತೆ, ಸಾ|| ಶಿರನಾಳ, ತಾ; ಯಲ್ಲಾಪುರ ರವರು ದಿನಾಂಕ: 08-08-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 04-08-2021 ರಂದು 19-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಹಳೇ ಬಸ್ ನಿಲ್ದಾಣದಲ್ಲಿ ಶಿವಮೊಗ್ಗ-ಕುಮಟಾ ಬಸ್ ಹತ್ತುವಾಗ ಜನರ ನೂಕುನುಗ್ಗಲಿನಲ್ಲಿ ಪಿರ್ಯಾದಿಯ ಪ್ಯಾಂಟಿನ ಮುಂದುಗಡೆಯ ಒಳ ಜೇಬಿಗೆ ಬ್ಲೇಡ್ ಹೊಡೆದು ಜೇಬಿನಲ್ಲಿ ಇಟ್ಟಿದ್ದ 30,000/- ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಗಂಗಾಧರ ಶೇಟ್, ಪ್ರಾಯ-65 ವರ್ಷ, ವೃತ್ತಿ-ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಬಂಗಾರದ ಮೌಲ್ಯ ಮಾಪಕರು, ಸಾ|| ಚಿಕ್ಕಜಾಜೂರು, ತಾ: ಹೊಳಲಕೆರೆ, ಜಿ: ಚಿತ್ರದುರ್ಗ ರವರು ದಿನಾಂಕ: 08-08-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 105/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿಂಗನಗೌಡ ತಂದೆ ಸಾತನಗೌಡ ಬಿದರಕೊಪ್ಪ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ಪಾಳಾ, ತಾ: ಮುಂಡಗೋಡ (ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/ಎ-1889 ನೇದರ ಚಾಲಕ). ಈತನು ದಿನಾಂಕ: 07-08-2021 ರಂದು ರಾತ್ರಿ 10-30 ಗಂಟೆಗೆ ತನ್ನ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/ಎ-1889 ನೇದನ್ನು ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮುಂಡಗೋಡ-ಶಿರಸಿ ರಸ್ತೆಯ ಮಳಗಿ ಗ್ರಾಮದ ಪ್ರಮೋದ ದವಳ ಇವರ ಹೊಲದ ಹತ್ತಿರದ ಡಾಂಬರ್ ರಸ್ತೆಯ ಮೇಲೆ ತನ್ನ ಸೈಡನ್ನು ಬಿಟ್ಟು ಎದುರಿನಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಡಿಜೈರ್ ಕಾರ್ ನಂ: ಕೆ.ಎ-31/ಎನ್-4428 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನ ಮುಂದಿನ ಶೋ ಗ್ಲಾಸ್, ಡ್ಯಾಶ್ ಬೋರ್ಡ್, ಎರಡು ವ್ಹೀಲ್, ಮುಂದಿನ ಚೆಸ್, ರೇಡಿಯೇಟರ್ ಡ್ಯಾಮೇಜ್ ಪಡಿಸಿದ್ದಲ್ಲದೇ, ಸ್ವಯಂಕೃತ ಅಪಘಾತದಿಂದ ತನ್ನ ಬೊಲೆರೋ ಪಿಕಪ್ ವಾಹನದ ಮುಂದುಗಡೆಯ ಬಂಪರ್ ಭಾಗ, ಮುಂದಿನ ಶೋ ಗ್ಲಾಸ್, ಡ್ಯಾಶ್ ಬೋರ್ಡ್ ಡ್ಯಾಮೇಜ್ ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಮಿತ ತಂದೆ ರೋಹಿತ ಗೌಡ, ಪ್ರಾಯ-32 ವರ್ಷ, ವೃತ್ತಿ-ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ, ಸಾ|| ಕಾನಗೋಡ, ತಾ: ಶಿರಸಿ ರವರು ದಿನಾಂಕ: 08-08-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅರುಣ ತಂದೆ ಶೇಖರ ಚಲವಾದಿ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಕೆಳಗಿನಕೇರಿ, ಕೊರ್ಲಕಟ್ಟಾ, ತಾ: ಶಿರಸಿ. ಈತನು ದಿನಾಂಕ: 08-08-2021 ರಂದು 17-00 ಗಂಟೆಗೆ ಕೊರ್ಲಕಟ್ಟಾ ಗ್ರಾಮದ ಕೆಳಗಿನಕೇರಿಯ ತನ್ನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದ ತಾತ್ಕಾಲಿಕ ಶೆಡ್ಡಿನಲ್ಲಿ ಸಾರ್ವಜನಿಕರಿಗೆ ಮದ್ಯಸೇವಿಸಲು ಅನುವು ಮಾಡಿಕೊಡುತ್ತಿರುವಾಗ ಅಬಕಾರಿ ಸ್ವತ್ತುಗಳಾದ 1). Haywards Cheers Whisky-90 ML ಟೆಟ್ರಾ ಪ್ಯಾಕೆಟ್ ಗಳು-05, ಅ||ಕಿ|| 175.65/- ರೂಪಾಯಿ, 2). Original Choice DELUXE WISKY-90 ML ಟೆಟ್ರಾ ಪ್ಯಾಕೆಟ್ ಗಳು-05, ಅ||ಕಿ|| 175.65/- ರೂಪಾಯಿ, 3). Haywards Cheers Whisky-90 ML ಅಂತಾ ಲೇಬಲ್ ಮದ್ಯದ ಖಾಲಿ ಟೆಟ್ರಾ ಪ್ಯಾಕ್-03, ಅ||ಕಿ|| 00.00/- ರೂಪಾಯಿ, 4). ನಗದು ಹಣ 210/- ರೂಪಾಯಿ ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 08-08-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-08-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪಾಂಡು ತಂದೆ ಕೃಷ್ಣಾ ಗೌಡ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೆಹರೂ ನಗರ, ತಾ: ಕುಮಟಾ. ಪಿರ್ಯಾದಿಯವರ ತಮ್ಮನಾದ ಈತನು ಕಳೆದ 3 ವರ್ಷಗಳಿಂದ ಎಡಗಾಲಿಗೆ ಗಾಯವಾಗಿ ಗ್ಯಾಂಗ್ರೀನ್ ಖಾಯಿಲೆಯಿಂದ ಬಳಲುತ್ತಿದ್ದು, ವಿಪರೀತ ಸಾರಾಯಿ ಕುಡಿಯುವ ಚಟದವನಿದ್ದು, ತನಗಿದ್ದ ಗ್ಯಾಂಗ್ರೀನ್ ಖಾಯಿಲೆಗೆ ಮತ್ತು ಸಾರಾಯಿ ಕುಡಿಯುವ ಚಟವನ್ನು ಬಿಡಲಾಗದೇ, ಮನಸ್ಸಿಗೆ ಬೇಸರಗೊಂಡು ದಿನಾಂಕ: 08-08-2021 ರಂದು ಬೆಳಿಗ್ಗೆ 08-30 ಗಂಟೆಯಿಂದ 14-30 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ಪಟ್ಟಣದಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಫಾರ್ಮಿನಲ್ಲಿರುವ ಬಾವಿಯ ನೀರಿನಲ್ಲಿ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಕೃಷ್ಣಾ ಗೌಡ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೆಹರೂ ನಗರ, ತಾ: ಕುಮಟಾ ರವರು ದಿನಾಂಕ: 08-08-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಜಯಂತ ತಂದೆ ರಾಮಾ ಗೊಂಡ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಾ|| ಹೆಗ್ಗಲ, ವೆಂಕಟಾಪುರ, ತಾ: ಭಟ್ಕಳ. ಈತನು ದಿನಾಂಕ: 08-08-08-2021 ರಂದು ಮಧ್ಯಾಹ್ನ 12-45 ಗಂಟೆಯ ಸಮಯಕ್ಕೆ ಗದ್ದೆ ಕೆಲಸ ಮಾಡಿಕೊಂಡು ಹೆಗ್ಗಲದ ವೆಂಕಟಾಪುರ ಹೊಳೆಯಲ್ಲಿ ಕೈ ಕಾಲು ತೊಳೆಯಲು ಬಟ್ಟೆಗಳನ್ನು ಬಿಚ್ಚಿ ಹೊಳೆಯಲ್ಲಿ ಇಳಿದಾಗ ಅಕಸ್ಮಾತ್ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇದರ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ಸಣ್ಣು ಗೊಂಡ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗ್ಗಲ, ವೆಂಕಟಾಪುರ, ತಾ: ಭಟ್ಕಳ ರವರು ದಿನಾಂಕ: 08-08-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 09-08-2021 06:08 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080