ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-02-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2021, ಕಲಂ: 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಬಿನ್ ತಂದೆ ಸಂತಾನ್ ಡಿಸೋಜಾ, ಸಾ|| ಕ್ರಿಶ್ಚಿಯನ್ ವಾಡಾ, ಮಲ್ಲಾಪುರ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 07-02-2021 ರಂದು 22-00 ಗಂಟೆಗೆ ಪಿರ್ಯಾದಿಯು ತನ್ನ ತಮ್ಮನೊಂದಿಗೆ ಮಲ್ಲಾಪುರದ ಕುರ್ನಿಪೇಟೆಯ ಸುಭದ್ರಾ ಹೊಟೇಲಿನಲ್ಲಿ ಸಭೆ ಮುಗಿಸಿ ಮನೆಗೆ ಹೋಗಲು ಹೊಟೇಲಿನಿಂದ ಹೊರಗೆ ಬರುತ್ತಿರುವಾಗ ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ‘ನೀನು ನನಗೆ ಕೆಲಸ ಏಕೆ ಕೊಡುತ್ತಿಲ್ಲ?’ ಎಂದು ಹೇಳಿದಾಗ, ಪಿರ್ಯಾದಿಯು ‘ತನ್ನಲ್ಲಿ ಕೆಲಸ ಇದ್ದರೆ ಕೊಡುತ್ತೇನೆ’ ಅಂತಾ ಹೇಳಿದ್ದಕ್ಕೆ, ಆರೋಪಿತನು ಸಿಟ್ಟಿನಿಂದ ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೇ’ ಎಂದು ಇನ್ನಿತರೆ ಅವಾಚ್ಯ ಶಬ್ಧಗಳಿಂದ ಬೈಯ್ದು ‘ನನಗೆ ಕೆಲಸ ಕೊಡದೇ ಹೋದರೆ ನಿನ್ನನ್ನು ಹೊಡೆದು ಕೊಲ್ಲುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಭಿಲಾಷ ಎನ್. ತಂದೆ ವಾಸವನ್, ಪ್ರಾಯ-40 ವರ್ಷ, ವೃತ್ತಿ-ಗುತ್ತಿಗೆದಾರ, ಸಾ|| ಮನೆ ನಂ: 311, ಕೆ.ಪಿ.ಸಿ ಕಾಲೋನಿ, ಕದ್ರಾ, ಕಾರವಾರ ರವರು ದಿನಾಂಕ: 08-02-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಕಮಲಾಕರ ನಾರಾಯಣ ಪಟಗಾರ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಣ್ಣೆಮಠ, ಹೊಲನಗದ್ದೆ, ತಾ: ಕುಮಟಾ, 2]. ರಾಮಕೃಷ್ಣ ತಂದೆ ಕುಪ್ಪು ಪಟಗಾರ, ಪ್ರಾಯ-50 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಹಣ್ಣೆಮಠ, ಹೊಲನಗದ್ದೆ, ತಾ: ಕುಮಟಾ, 3]. ಸೀತಾರಾಮ ಗಣಪತಿ ಹೆಗಡೆ, ಪ್ರಾಯ-68 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಣ್ಣೆಮಠ, ಹೊಲನಗದ್ದೆ, ತಾ: ಕುಮಟಾ, 4]. ಸುಬ್ರಾಯ ಬಬ್ಬೂ ಪಟಗಾರ, ಪ್ರಾಯ-52 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕಡ್ಲೆ, ಕೆರೆಮನೆ, ತಾ: ಕುಮಟಾ, 5]. ತಿಮ್ಮಣ್ಣಾ ಗೊಯ್ದು ಪಟಗಾರ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಣ್ಣೆಮಠ, ಹೊಲನಗದ್ದೆ, ತಾ: ಕುಮಟಾ, 6]. ವೆಂಕಟ್ರಮಣ ಪರಮಯ್ಯಾ ಪಟಗಾರ, ಪ್ರಾಯ-68 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಣ್ಣೆಮಠ, ಹೊಲನಗದ್ದೆ, ತಾ: ಕುಮಟಾ. ಈ ನಮೂದಿತ ಆರೋಪಿತರುಗಳು ಸೇರಿ ದಿನಾಂಕ: 07-02-2021 ರಂದು 17-10 ಗಂಟೆಗೆ ಹಣ್ಣೆಮಠ ಅರಣ್ಯದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ನಗದು ಹಣ 810/- ರೂಪಾಯಿ ಮತ್ತು ಜೂಗಾರಾಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ಕಾ&ಸು-2), ಕುಮಟಾ ಪೋಲಿಸ್ ಠಾಣೆ ರವರು ದಿನಾಂಕ: 08-02-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ರಾಮಾ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ವ್ಯಾಪಾರ, ಸಾ|| ದಾಮುಜಾಲಿ, ಜಾಲಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 08-02-2021 ರಂದು 11-00 ಗಂಟೆಯ ಸುಮಾರಿಗೆ ಭಟ್ಕಳದ ದಾಮು ಜಾಲಿಯಲ್ಲಿರುವ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,360/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡುಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 08-02-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಲೋಕೇಶ ತಂದೆ ಗಣಪತಿ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ವ್ಯಾಪಾರ, ಸಾ|| ಹನುಮಾನ ನಗರ, ಗಣೇಶ ಮಂಟಪದ ಹತ್ತಿರ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 08-02-2021 ರಂದು 11-15 ಗಂಟೆಯ ಸುಮಾರಿಗೆ ಶಂಷುದ್ದೀನ್ ಸರ್ಕಲ್ ಹತ್ತಿರದ ಜಾನಕಿ ಹೊಟೇಲ್ ಎದುರಿಗೆ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,810/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 08-02-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಸಂಜಯ ತಂದೆ ಮಂಜುನಾಥ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಪಾನ್ ಶಾಪ್, ಸಾ|| ರಘುನಾಥ ರೋಡ್, ಮಣ್ಕುಳಿ, ತಾ: ಭಟ್ಕಳ 2]. ರವಿ ತಂದೆ ಅನಂತ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಪಾನ್ ಶಾಪ್, ಸಾ|| ತಲಾಂದ, ತಾ: ಭಟ್ಕಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 08-02-2021 ರಂದು 14-00 ಗಂಟೆಗೆ ಭಟ್ಕಳದ ಶಂಷುದ್ದೀನ್ ಸರ್ಕಲಿನ ಛಾಯಾ ಲಾಡ್ಜ್ ಹತ್ತಿರ ಸರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 4,680/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ಪಿರ್ಯಾದಿಗೆ ಸಿಕ್ಕಿದ್ದು ಹಾಗೂ ಆ ಎಲ್ಲಾ ಓ.ಸಿ ಮಟಕಾ ಜೂಗಾರಾಟದ ಹಣ ಮತ್ತು ಓ.ಸಿ ಚೀಟಿಯನ್ನು ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುವ ಕುರಿತು ತಿಳಿದು ಬಂದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್, ಬಿ ಕುಡಗುಂಟಿ ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 08-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಮೀರ್ ತಂದೆ ರುಸ್ತುಂಸಾಬ್ ತಾಶಿವಾಲೆ, ಪ್ರಾಯ-24 ವರ್ಷ, ಸಾ|| ಸುಭಾಷನಗರ, ದಾಂಡೇಲಿ (ಮೋಟಾರ್ ಸೈಕಲ್ ನಂ: ಕೆ.ಎ-31/ಕ್ಯೂ-9437 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 04-02-2021 ರಂದು 15-20 ಗಂಟೆಗೆ ಹರೆಗಾಳಿ ಕಡೆಯಿಂದ ಭರ್ಚಿ ಕಡೆಗೆ 1 ಕೀ.ಮೀ ಅಂತರದಲ್ಲಿ ರಾಜ್ಯ ಹೆದ್ದಾರಿಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಕ್ಯೂ-9437 ನೇದನ್ನು ಭರ್ಚಿ ಕಡೆಯಿಂದ ಗಣೇಶಗುಡಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ತನ್ನ ಮೋಟಾರ್ ಸೈಕಲ್ ನಿಯಂತ್ರಿಸಲಾಗದೇ ರಾಜ್ಯ ಹೆದ್ದಾರಿಯ ಪಕ್ಕದ ಕಚ್ಚಾ ರಸ್ತೆಯ ಆಚೆಗಿನ ಅರಣ್ಯದಲ್ಲಿ ತನ್ನ ಮೋಟಾರ್ ಸೈಕಲ್ ಚಲಾಯಿಸಿ, ಅಲ್ಲಿದ್ದ ಒಂದು ಕಲ್ಲಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತವಾಗಿ ಬಿದ್ದು, ತನ್ನ ಹಣೆಯ ಎಡಬದಿಯ ಹುಬ್ಬಿನ ಹತ್ತಿರ ತೀವೃ ಸ್ವರೂಪದ ರಕ್ತದ ಗಾಯನೋವು ಪಡಿಸಿಕೊಂಡ ಬಗ್ಗೆ ಶ್ರೀ ಫಾರುಕ್ ತಂದೆ ರಫೀಕ್ ಶೇಖ್, ಪ್ರಾಯ-20ವರ್ಷ, ವೃತ್ತಿ-ರ್ಯಾಪ್ಟಿಂಗ್ ಕೆಲಸ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ ರವರು ದಿನಾಂಕ: 04-02-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ದಾಂಡೇಲಿ ಗ್ರಾಮೀಣ ಠಾಣೆ ಗುನ್ನಾ ನಂ: 04/2021, ಕಲಂ: 279, 338 ಐಪಿಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.

ಸದರಿ ಪ್ರಕರಣದಲ್ಲಿ ಗಾಯಾಳು ಆರೋಪಿತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 08-02-2021 ರಂದು ಬೆಳಿಗ್ಗೆ ಮೃತಪಟ್ಟಿರುವುದರಿಂದ ಈ ಪ್ರಕರಣಕ್ಕೆ ಕಲಂ: 304(ಎ) ಐಪಿಸಿ ನೇದನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು ಇರುತ್ತದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶರಣಬಸಪ್ಪಾ ತಂದೆ ಸಂಗನಬಸಪ್ಪಾ ಬಳಿಗೇರ, ಸಾ|| ಸುಭಾಷನಗರ, ದಾಂಡೇಲಿ. ನಮೂದಿತ ಆರೋಪಿತನು ಪಿರ್ಯಾದಿಯವರಿಗೆ ತುರ್ಕಿ ದೇಶದ NCC* NCC NORGE AS ಕಂಪನಿಯಲ್ಲಿ ಕೆಲಸ ಹಾಗೂ ಅಲ್ಲಿ ಹೋಗಲು ವೀಸಾ ಕೊಡಿಸುವುದಾಗಿ ನಂಬಿಸಿ, ಪಿರ್ಯಾದಿಯವರ ನೌಕರಿಯ ಸಲುವಾಗಿ 55,000/- ರೂಪಾಯಿ, ಪಿರ್ಯಾದಿಯ ತಮ್ಮನಾದ ನದೀಮ್ ಅಹ್ಮದ್ ದಾದಾಪೀರ್ ಖಾನಾಪುರ ಈತನ ನೌಕರಿ ಸಲುವಾಗಿ 60,000/- ರೂಪಾಯಿ, ಇನ್ನೊಬ್ಬ ತಮ್ಮನಾದ ಅಜರ್ ಅಹ್ಮದ್ ದಾದಾಪೀರ್ ಖಾನಾಪುರ ಈತನ ನೌಕರಿ ಸಲುವಾಗಿ 50,000/- ರೂಪಾಯಿ, ಪಿರ್ಯಾದಿಯ ಅಣ್ಣನಾದ ಇಮಾಮ್ ಹುಸೇನ್ ದಾದಾಪೀರ್ ಖಾನಾಪುರ ಈತನ ನೌಕರಿ ಸಲುವಾಗಿ 60,000/- ರೂಪಾಯಿ. ಹೀಗೆ ಒಟ್ಟೂ 2,25,000/- ರೂಪಾಯಿಗಳನ್ನು ಆರೋಪಿತನು ತನ್ನ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆ ಸಂಖ್ಯೆ: 00000054050973183 ನೇದಕ್ಕೆ ಜಮಾ ಮಾಡಿಸಿಕೊಂಡು ಈವರೆಗೂ ಕೆಲಸವನ್ನು ಕೊಡಿಸದೇ ಹಾಗೂ ವೀಸಾವನ್ನು ಕೊಡಿಸದೇ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ನಿಯಾಜ್ ಅಹ್ಮದ್ ತಂದೆ ದಾದಾಪೀರ್ ಖಾನಾಪುರ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಮೊಹರಂ ದರ್ಗಾ ಹತ್ತಿರ, ಡಿ.ಎಫ್.ಎ ರೋಡ್, ಪಟೇಲನಗರ, ದಾಂಡೇಲಿ ರವರು ದಿನಾಂಕ: 08-02-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಸನ್ನ ತಂದೆ ಶ್ರೀನಿವಾಸ ಭಟ್ಟ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಂದಿರಾ ನಗರ, ತಾ: ಹಾನಗಲ್, ಜಿ: ಹಾವೇರಿ, 2]. ಸಂತೋಷ ತಂದೆ ಅಶೋಕ ಬ್ಯಾಡಗಿ, ಪ್ರಾಯ-28 ವರ್ಷ, ವೃತ್ತಿ-ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸ, ಸಾ|| ಇಂದಿರಾ ನಗರ, ತಾ: ಹಾನಗಲ್, ಜಿ: ಹಾವೇರಿ, 3]. ಅರುಣ ತಂದೆ ಜಗದೀಶ ಸುಭಾಂಜಿ, ಪ್ರಾಯ-22 ವರ್ಷ, ವೃತ್ತಿ-ಚಾಲಕ, ಸಾ|| ಓಣಿಕೇರಿ, ತಾ: ಮುಂಡಗೋಡ, 4]. ಮುಜಾಫರ ತಂದೆ ಅಬ್ದುಲ್ ಖಾದರ್ ಹುಬ್ಬಳ್ಳಿ, ಪ್ರಾಯ-31 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಕೊಪ್ಪರಸಿಕೊಪ್ಪ, ತಾ: ಹಾನಗಲ್, ಜಿ: ಹಾವೇರಿ, 5]. ಮಹೇಂದ್ರ ತಂದೆ ವಿರೂಪಾಕ್ಷಪ್ಪ ಸುಭಾಂಜಿ, ಸಾ|| ಓಣಿಕೇರಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 08-02-2020 ರಂದು ರಾತ್ರಿ 01-10 ಗಂಟೆಗೆ ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದಲ್ಲಿರುವ ಮೈಲಾರಲಿಂಗ ದೇವರ ಶಿಬರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಾ ನಗದು ಹಣ 19,200/- ರೂಪಾಯಿ ಹಾಗೂ ಜುಗಾರಾಟದ ಸಲಕರಣೆಗಳಾದ ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳ ಸಮೇತ ಆರೋಪಿ 1 ರಿಂದ 4 ನೇಯವರು ದಾಳಿಯ ಕಾಲಕ್ಕೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ನೇಯವನು ದಾಳಿಯ ಕಾಲಕ್ಕೆ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 08-02-2021 ರಂದು 03-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-02-2021

at 00:00 hrs to 24:00 hrs

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಂಜುನಾಥ ತಂದೆ ರಾಮಕೃಷ್ಣಪ್ಪ, ಪ್ರಾಯ-37 ವರ್ಷ, ಸಾ|| ತಾವರೆಹಳ್ಳಿ, ತಾ: ಸೊರಬಾ, ಜಿ: ಶಿವಮೊಗ್ಗ, ಹಾಲಿ ಸಾ|| ಹೆಗ್ಗೆಕೊಪ್ಪಾ, ತಾ: ಸಿದ್ದಾಪುರ. ಸುದ್ದಿದಾರನ ಮಗನಾದ ಈತನು ಮನೆಯ ಅಳಿಯತನಕ್ಕೆಂದು ಬಂದು ಸಿದ್ದಾಪುರ ತಾಲೂಕಿನ ಹೆಗ್ಗೆಕೊಪ್ಪಾದಲ್ಲಿರುವ ತನ್ನ ಹೆಂಡತಿ ಮಕ್ಕಳೊಂದಿಗೆ ಇದ್ದವನು, ದಿನಾಂಕ: 07-02-2021 ರಂದು ಸಂಜೆ 06-30 ಗಂಟೆಗೆ ತಾನು ದುಡಿದ ಹಣವನ್ನು ಮನೆಯ ಖರ್ಚಿಗೆ ಕೊಡದೇ ಇದ್ದ ವಿಷಯವಾಗಿ ಹೆಂಡತಿಯೊಂದಿಗೆ ಮಾತಿಗೆ ಮಾತಾಗಿ ಸಿಟ್ಟುಗೊಂಡು ದುಡುಕಿನಿಂದ ಮನೆಯ ಮುಂಬಾಗಿಲನ್ನು ಹಾಕಿಕೊಂಡು ಮನೆಯ ಹಾಲ್ ನಲ್ಲಿರುವ ಅಡ್ಡ ತೊಲೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಾಮಕೃಷ್ಣಪ್ಪಾ ತಂದೆ ನಾರಾಯಣಪ್ಪಾ, ಪ್ರಾಯ-70 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಾವರೆಹಳ್ಳಿ, ತಾ: ಸೊರಬಾ, ಜಿ: ಶಿವಮೊಗ್ಗ ರವರು ದಿನಾಂಕ: 08-02-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 ======||||||||======

 

 

 

ಇತ್ತೀಚಿನ ನವೀಕರಣ​ : 10-02-2021 01:36 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080