Feedback / Suggestions

Daily District Crime Report

Date:- 08-01-2022

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 03-01-2022 ಪಿರ್ಯಾದಿಯವರು ಪಂಚಗಂಗಾ ಎಕ್ಸಪ್ರೆಸ್ ಬೆಂಗಳೂರು-ಕಾರವಾರ ಟ್ರೇನ್ ನಂ: 16595 ನೇದರ ಮೇಲೆ ಪ್ರಯಾಣಿಸುತ್ತಿದ್ದಾಗ ಕುಮಟಾ ರೇಲ್ವೆ ಸ್ಟೇಷನ್ ಹತ್ತಿರ ಬೆಳಿಗ್ಗೆ ಸುಮಾರು 07-00 ಗಂಟೆಯ ಸುಮಾರಿಗೆ ಆರೋಪಿತ ಕಳ್ಳರು ಪಿರ್ಯಾದಿಯ ಬಾಬ್ತು 1). ಹ್ಯಾಂಡ್ ಬ್ಯಾಗ್, 2). ಲ್ಯಾಪಟಾಪ್, 3). ಮೊಬೈಲ್ ಸೆಟ್-2, 4). ಪವರ್ ಬ್ಯಾಂಕ್, 5). ಬ್ಯಾಂಕ್ ಎ.ಟಿ.ಎಮ್ ಕಾರ್ಡ್ ಗಳು, 6). ಸ್ಕೂಟರ್ ಕೀ, 8). ನಗದು ಹಣ 2,000/- ರೂಪಾಯಿ ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ರೇಣುಕಾ ಪ್ರಭು, ಸಾ|| ಮೈಕ್ರೋ ಬೈಯೊಲೊಜಿಸ್ಟ್, ಡಿಸ್ಟಿಕ್ ಸರ್ವೇಲೆನ್ಸ್ ಯುನಿಟ್, ಹೆಲ್ತ್ ಡಿಪಾರ್ಟಮೆಂಟ್, ಕಾರವಾರ ರವರು ರೈಲ್ವೇ ಪೊಲೀಸರಿಗೆ ನೀಡಿದ ದೂರು ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಮುಖಾಂತರ ಕುಮಟಾ ಪೊಲೀಸ್ ಠಾಣೆಗೆ ಬಂದಿದ್ದನ್ನು ದಿನಾಂಕ: 08-01-2022 ರಂದು 10-45 ಗಂಟೆಗೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 269, 270, 280, 336 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಮ್ಕೂಸ್ ತಂದೆ ತಿಮ್ಮಪ್ಪ ಗೌಡ, ಪ್ರಾಯ-46 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸಾನಾಮೋಟಾ, ಮಾವಿನಕುರ್ವಾ, ತಾ: ಹೊನ್ನಾವರ, 2]. ಸಿ. ಪಳನಿ ತಂದೆ ಚಂದ್ರನ್ ಎಸ್, ಪ್ರಾಯ-36 ವರ್ಷ, ವೃತ್ತಿ-ಫೋಟೋಗ್ರಾಫರ್, ಸಾ|| ನಂ 67, 7ನೇ ಎ ಕ್ರಾಸ್, ಅರಳಿಮರ, ಸುಬ್ಬಣ್ಣಪಾಳ್ಯ, ಬೆಂಗಳೂರು-33, 3]. ಗೌತಮ ಯು. ತಂದೆ ಉಮಾಪತಿ ವಿ, ಪ್ರಾಯ-29 ವರ್ಷ, ವೃತ್ತಿ-ಸಾಪ್ಟವೇರ್ ಇಂಜಿನಿಯರ್, ಸಾ|| ನಂ: 257, 7ನೇ ಕ್ರಾಸ್, 3 ನೇ ಮೇನ್, ಪ್ರಕಾಶನಗರ, ಶ್ರೀರಾಮಪುರಂ, ಬೆಂಗಳೂರು, 4]. ಕುಮಾರಿ: ಸೌಮ್ಯ ಕೆ. ತಂದೆ ಪಿ. ಕೃಷ್ಣ, ಪ್ರಾಯ-25 ವರ್ಷ, ವೃತ್ತಿ-ಇಂಜಿನೀಯರ್, ಸಾ|| ನಂ: 257, 7ನೇ ಕ್ರಾಸ್, 3 ನೇ ಮೇನ್, ಪ್ರಕಾಶನಗರ, ಶ್ರೀರಾಮಪುರಂ, ಬೆಂಗಳೂರು, 5]. ಗಜಾನನ ಶಂಭು ಗೌಡ, ಸಾ|| ಸಾಲೆಹಿತ್ತಲ, ಮಾವಿನಕುರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಸರ್ಕಾರದ ಕೊರೋನಾ ವೀಕೆಂಡ್ ಲಾಕಡೌನ್ ಆದೇಶ ಇದ್ದರೂ ಸಹ ಆದೇಶ ಉಲ್ಲಂಘಿಸಿ, ಉದ್ದೇಶ ಪೂರ್ವಕವಾಗಿ ದಿನಾಂಕ: 08-01-2022 ರಂದು ಬೆಳಿಗ್ಗೆ 08-30 ಗಂಟೆಗೆ ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಆರೋಪಿ 1 ನೇಯವನು ವೀರಾಂಜನೇಯ ಹೆಸರಿನ ಬೋಟಿನಲ್ಲಿ ಆರೋಪಿ 2 ರಿಂದ 4 ನೇ ಪ್ರವಾಸಿಗರನ್ನು ಶರಾವತಿ ನದಿಯಲ್ಲಿ ವಿಹಾರಕ್ಕೆ ಕರೆದುಕೊಂಡು ಹೋಗುತ್ತಾ, ಆರೋಪಿ 5 ನೇಯವನು ತನ್ನ ಜೈ ಭಜರಂಗಿ ಬೋಟಿನಲ್ಲಿ ಇವರು ಸರ್ಕಾರದ ಕೊರೋನಾ ವೀಕೆಂಡ್ ಲಾಕಡೌನ್ ಆದೇಶ ಇದ್ದರೂ ಸಹ ಆದೇಶ ಉಲ್ಲಂಘಿಸಿ, ಉದ್ದೇಶ ಪೂರ್ವಕವಾಗಿ ದಿನಾಂಕ: 08-01-2022 ರಂದು ಬೆಳಿಗ್ಗೆ 08-30 ಗಂಟೆಗೆ ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ನಿಲ್ಲಿಸುವಂತೆ ಸೂಚನೆ ನೀಡಿದರೂ ಸಹ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಪ್ರವಾಸಿಗರನ್ನು ಶರಾವತಿ ನದಿಯಲ್ಲಿ ವಿಹಾರಕ್ಕೆ ಕರೆದುಕೊಂಡು ಹೋಗಿ ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ವೀಕೆಂಡ್ ಲಾಕಡೌನ್ ಆದೇಶ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ, ಬೋಟಿನಲ್ಲಿ ಜೀವರಕ್ಷಕ ಲೈಫ್ ಜ್ಯಾಕೆಟ್ ಗಳನ್ನು ಇಟ್ಟುಕೊಳ್ಳದೇ ನಿರ್ಲಕ್ಷ್ಯದ ಕೃತ್ಯ ಎಸಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ತನಿಖೆ-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 08-01-2022 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆದಿತ್ಯ ತಂದೆ ಚಂದ್ರಶೇಖರ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ಚಂಡೇಶ್ವರ, ಹಳದಿಪುರ, ತಾ: ಹೊನ್ನಾವರ (ಸ್ಕೂಟರ್ ನಂ: ಕೆ.ಎ-47/ಆರ್-5133 ನೇದರ ಚಾಲಕ). ಈತನು ದಿನಾಂಕ: 07-01-2022 ರಂದು ಮಧ್ಯಾಹ್ನ 14-15 ಗಂಟೆಯ ಸುಮಾರಿಗೆ ತನ್ನ ಸ್ಕೂಟರ್ ನಂ: ಕೆ.ಎ-47/ಆರ್-5133 ನೇದರ ಹಿಂಬದಿಯಲ್ಲಿ ತನ್ನ ತಾಯಿ ಶ್ರೀಮತಿ ಯಶೋಧಾ ಗಂಡ ಚಂದ್ರಶೇಖರ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಚಂಡೇಶ್ವರ, ತಾ: ಹಳದಿಪುರ, ತಾ: ಹೊನ್ನಾವರ ಇವರನ್ನು ಕೂಡಿಸಿಕೊಂಡು ಹಳದಿಪುರ ಕಡೆಯಿಂದ ಹಬ್ಬಗದ್ದೆ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದವನು, ಹಳದಿಪುರದ ಸರ್ಕಾರಿ ಆಸ್ಪತ್ರೆಯ ತಿರುವಿನಲ್ಲಿ ತನ್ನ ಎದುರಿಗೆ ಬಂದ ದನವನ್ನು ತಪ್ಪಿಸಲು ಹೋಗಿ, ತಾನು ಚಲಾಯಿಸುತ್ತಿದ್ದ ಸ್ಕೂಟರ್ ಮೇಲಿನ ನಿಯಂತ್ರಣ ಕಳೆದುಕೊಂಡು ನಿರ್ಲಕ್ಷ್ಯತನದಿಂದ ತನ್ನ ಸ್ಕೂಟರನ್ನು ರಸ್ತೆಯ ಮೇಲೆ ಬೀಳಿಸಿ ಅಪಘಾತ ಪಡಿಸಿ, ಸ್ಕೂಟರ್ ಹಿಂಬದಿಯ ಸವಾರಳಾದ ಶ್ರೀಮತಿ ಯಶೋಧಾ ಗಂಡ ಚಂದ್ರಶೇಖರ ನಾಯ್ಕ, ಇವರಿಗೆ ತಲೆ ಹಾಗೂ ಮೈಮೇಲೆ ಅಲ್ಲಲ್ಲಿ ಸಣ್ಣಪುಟ್ಟ ಗಾಯವಾಗಲೂ ಆರೋಪಿ ಸ್ಕೂಟರ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ನಿತ್ಯಾನಂದ ತಂದೆ ಸೀತಾರಾಮ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಚಂಡೇಶ್ವರ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 08-01-2022 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಚಂದ್ರ ತಂದೆ ನಾರಾಯಣ ನಾಯ್ಕ, ಸಾ|| ಪುರವರ್ಗ, ತಾ: ಭಟ್ಕಳ (ಮಿನಿ ಬಸ್ ನಂ: ಕೆ.ಎ-47/ಎ-1060 ನೇದರ ಚಾಲಕ). ಈತನು ದಿನಾಂಕ: 07-01-2022 ರಂದು ಬೆಳಿಗ್ಗೆ 08-30 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಮಿನಿ ಬಸ್ ನಂ: ಕೆ.ಎ-47/ಎ-1060 ನೇದನ್ನು ಮೂಲಿಗದ್ದೆ ಕಡೆಯಿಂದ ಸರ್ಪನಕಟ್ಟಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು,  ಸರ್ಪನಕಟ್ಟಾ ಕಡೆಯಿಂದ ಮೂಲಿಗದ್ದೆ ಕಡೆಗೆ ಪಿರ್ಯಾದಿಯ ತಂದೆ ಶ್ರೀ ದುರ್ಗಪ್ಪ ತಂದೆ ಅಣ್ಣಪ್ಪ ನಾಯ್ಕ, ಪ್ರಾಯ-62 ವರ್ಷ, ಇವರು ತಮ್ಮ ಟಿ.ವಿ.ಎಸ್ ಎಕ್ಸ್ಸೆಲ್ ವಾಹನ ನಂ: ಕೆ.ಎ-47/ವಿ-0187 ನೇದರ ಹಿಂಬದಿಯಲ್ಲಿ ಶ್ರೀ ಗಣಪತಿ ತಂದೆ ಕುಪ್ಪಯ್ಯಾ ನಾಯ್ಕ, ಸಾ|| ಬೆಣಂದೂರ, ತಾ: ಭಟ್ಕಳ ಇವರನ್ನು ಕೂಡ್ರಿಸಿಕೊಂಡು ಹೋಗುತ್ತಿರುವಾಗ ಅವರ ಟಿ.ವಿ.ಎಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ವಾಹನ ಸವಾರರು ವಾಹನದ ಸಮೇತ ರಸ್ತೆಯ ಮೇಲೆ ಬಿದ್ದು, ಶ್ರೀ ದುರ್ಗಪ್ಪ ತಂದೆ ಅಣ್ಣಪ್ಪ ನಾಯ್ಕ, ಇವರಿಗೆ ಮೂಗಿಗೆ, ಬಾಯಿಗೆ, ಎದೆಯ ಭಾಗಕ್ಕೆ ಮತ್ತು ಕಾಲಿಗೆ ಹಾಗೂ ವಾಹನದ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಶ್ರೀ ಗಣಪತಿ ತಂದೆ ಕುಪ್ಪಯ್ಯಾ ನಾಯ್ಕ, ಸಾ|| ಬೆಣಂದೂರ, ತಾ: ಭಟ್ಕಳ ಇವರಿಗೆ ತಲೆಯ ಭಾಗಕ್ಕೆ ಹಾಗೂ ಕಾಲಿಗೆ ಪೆಟ್ಟು ಪಡಿಸಿ, ವಾಹನ ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ದುರ್ಗಪ್ಪ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸರ್ಪನಕಟ್ಟಾ, ಹಡೀನ, ಬಾಳೆಹಿತ್ತಲು, ಪೋ: ಬೆಳಕೆ, ತಾ: ಭಟ್ಕಳ ರವರು ದಿನಾಂಕ: 08-01-2022 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 406, 418, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಿಲೇಶ ತಂದೆ ಮಿಶ್ರಮಿಲ್ ದಹಿಯಾ, ಪ್ರಾಯ-25 ವರ್ಷ, ವೃತ್ತಿ-ಖಾಸಗಿ ಕೆಲಸ, 2]. ಮಿಶ್ರಮಿಲ್ ದಹಿಯಾ, ಪ್ರಾಯ-50 ವರ್ಷ, ವೃತ್ತಿ-ಖಾಸಗಿ ಕೆಲಸ, 3]. ಶಾಂತುದೇವಿ ಮಿಶ್ರಮಿಲ್ ದಹಿಯಾ, ಪ್ರಾಯ-45 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| (ಎಲ್ಲರೂ) ಟಿ.ಎಸ್.ಎಸ್ ರಸ್ತೆ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಹಾಗೂ ಪಿರ್ಯಾದಿಯು ಹಲವು ವರ್ಷಗಳಿಂದ ಸ್ನೇಹಿತರಿದ್ದು, ಆರೋಪಿ 1 ನೇಯವನಿಗೆ ಹಣದ ತೊಂದರೆ ಇದ್ದಾಗ ಪಿರ್ಯಾದಿಯಿಂದ ಹಣ ಪಡೆದು ಮತ್ತೆ ಹಣ ಮರಳಿಸುತ್ತಾ ಬಂದವನು, 2019 ನೇ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಆರೋಪಿ 1 ನೇಯವನು ಅವನ ತಂದೆಯಾದ ಆರೋಪಿ 2 ನೇಯವನೊಂದಿಗೆ ಬಿಡ್ಕಿ ಸರ್ಕಲ್ ದಲ್ಲಿ ಪಿರ್ಯಾದಿಗೆ ಭೇಟಿಯಾಗಿ ತಮಗೆ ಸಿಕ್ಕಾಪಟ್ಟೆ ಹಣಕಾಸಿನ ಸಮಸ್ಯೆ ಇದ್ದು, ತಮಗೆ ತುರ್ತಾಗಿ 3,50,000/- ರೂಪಾಯಿ ಹಣವನ್ನು ನೀಡುವಂತೆ, ಅದನ್ನು 3 ತಿಂಗಳ ಒಳಗೆ ಮರಳಿ ನೀಡುವಂತೆ ನಂಬಿಸಿ, ಪಿರ್ಯಾದಿಯಿಂದ 3,50,000/- ರೂಪಾಯಿ ಹಣವನ್ನು ಪಡೆದುಕೊಂಡಿದ್ದು, ಪಿರ್ಯಾದಿಯು ತಾನು ನೀಡಿದ ಹಣವನ್ನು ಮರಳಿ ನೀಡುವಂತೆ ಆರೋಪಿ 1 ಮತ್ತು 2 ನೇಯವರಿಗೆ ಕೇಳಿದಾಗ ಒಂದಲ್ಲಾ ಒಂದು ರೀತಿ ನೆಪ ಹೇಳುತ್ತಾ ಬಂದವರು, ಆರೋಪಿ 1 ನೇಯವನು 2021 ರ ಫೆಬ್ರುವರಿ ತಿಂಗಳಿನಲ್ಲಿ ಎಸ್.ಬಿ.ಐ. ಬ್ಯಾಂಕ್ ಚೆಕ್ ನಂ: 082760 ನೇದು ನೀಡಿದ್ದು, ಪಿರ್ಯಾದಿಯು ದಿನಾಂಕ: 02-09-2021 ರಂದು ಚೆಕ್ ಕಲೆಕ್ಷನ್ ಗೆ ಹಾಕಿದ್ದು, ಸದರ ಅಕೌಂಟಿನಲ್ಲಿ ಹಣ ಇಲ್ಲವಾಗಿ ಬ್ಯಾಂಕಿನವರು ಹಿಂಬಹರ ನೀಡಿದ್ದು, ಆರೋಪಿ 1 ನೇಯವನ ತಾಯಿಯಾದ ಆರೋಪಿ 3 ನೇಯವರು ತಮ್ಮ ಮಗನು ಪಡೆದುಕೊಂಡ ಹಣವನ್ನು 2021 ರ ಅಕ್ಟೋಬರ್ 15 ನಂತರ ನಗದೀಕರಿಸಲು ಎಸ್.ಬಿ.ಐ ಬ್ಯಾಂಕಿನ ಚೆಕ್ ನೀಡಿದ್ದು, ದಿನಾಂಕ: 21-10-2021 ರಂದು ಅಶ್ವಿನಿ ಸರ್ಕಲ್ ಶಾಖೆಯಲ್ಲಿ ಚೆಕ್ ಕಲೆಕ್ಷನ್ ಹಾಕಿದ್ದು, ಸದರ ಅಕೌಂಟಿನಲ್ಲಿ ಹಣ ಇಲ್ಲವಾಗಿ ಹಿಂಬಹರ ನೀಡಿರುತ್ತಾರೆ. ಆರೋಪಿ 2 ನೇಯವನು ನಡೆಸುತ್ತಿರುವ ಬಿಡ್ಕಿ ಸರ್ಕಲ್ ನಲ್ಲಿ ಇರುವ ಶ್ರೀಕೃಷ್ಣಾ ಪಾನಿಪುರಿ ಸೆಂಟರಿಗೆ ಹೋಗಿ ಹಣ ನೀಡುವಂತೆ ಪದೇ ಪದೇ ಕೇಳಿದರೂ ಸಹ ಹಣ ನೀಡಿದ್ದು ಇರುವುದಿಲ್ಲ. ಈ ನಮೂದಿತ ಆರೋಪಿತರು ಪಿರ್ಯಾದಿಗೆ ಮೋಸ ವಂಚನೆ ಮತ್ತು ನಂಬಿಕೆ ದ್ರೋಹ ಮಾಡುವ ಉದ್ದೇಶದಿಂದ, ಉದ್ದೇಶಪೂರ್ವಕವಾಗಿ ಹಣವನ್ನು ಪಡೆದು ಚೆಕ್ ಮೂಲಕ ಹಣ ಮರುಪಾವತಿಸುವುದಾಗಿ ನಂಬಿಸಿರುವ ಬಗ್ಗೆ ಪಿರ್ಯಾದಿ ಶ್ರೀ ರಾಜೇಶ ತಂದೆ ರಮೇಶ ಹೇರೂರಕರ, ಪ್ರಾಯ-33 ವರ್ಷ, ವೃತ್ತಿ-ವ್ಯಾಪಾರ, ಸಾ|| ನಿಲೇಕಣಿ, ಕುಮಟಾ ರಸ್ತೆ, ತಾ: ಶಿರಸಿ, ಹಾಲಿ ಸಾ|| ನೆಹರೂನಗರ, ಅಂಡಗಿ ರಸ್ತೆ, ತಾ: ಶಿರಸಿ ರವರು ದಿನಾಂಕ: 08-01-2022 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಮಚಂದ್ರ ತಂದೆ ನಾಗಪ್ಪ ಹರಕಡೆ ಸಾ|| ಹಳೇ ಸ್ಟಾಫ್ ಕ್ವಾರ್ಟರ್ಸ್, ಬಂಗೂರ ನಗರ, ತಾ: ದಾಂಡೇಲಿ. ಈತನು ದಿನಾಂಕ: 08-01-2022 ರಂದು 06-50 ಗಂಟೆಯ ಸುಮಾರಿಗೆ ದಾಂಡೇಲಿಯ ಪೆಟ್ರೋಲ್ ಪಂಪ್ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಲಾಭಗಳಿಸುವ ಉದ್ದೇಶದಿಂಧ ಒಂದು ಖಾಕಿ ಬಣ್ಣದ ರಟ್ಟಿನ ಬಾಕ್ಸ್ ನಲ್ಲಿ ಒಟ್ಟು 3,115/- ರೂಪಾಯಿ ಮೌಲ್ಯದ Original Choice Deluxe whisky 90 ML ನ ಒಟ್ಟು 89 ಸರಾಯಿ ಪ್ಯಾಕೆಟ್ ಗಳನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಾ ದಾಳಿಯ ಕಾಲಕ್ಕೆ ಆರೋಪಿತನು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಎಸ್. ಪಾಟೀಲ್, ಪಿ.ಎಸ್.ಐ (ಕಾ&ಸು), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 08-01-2022 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 324 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಚಂದ್ರಶೇಖರ ತಂದೆ ನಾರಾಯಣ ಗೌಡ, 2]. ನಾರಾಯಣ ತಂದೆ ಅಮ್ಮು ಗೌಡ, ಸಾ|| (ಇಬ್ಬರೂ) ಬಿಳೇಗೋಡ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ಪಿರ್ಯಾದಿಯ ಸಂಬಂಧಿಕರಿದ್ದು, ಪಿರ್ಯಾದಿ ಹಾಗೂ ಆರೋಪಿತರ ಮಧ್ಯೆ ತೋಟ ಹಾಗೂ ದಾರಿಯ ವಿಷಯದಲ್ಲಿ ತಕರಾರು ನಡೆಯುತ್ತಿದ್ದು, ಇದೇ ವಿಷಯಕ್ಕೆ ಪಿರ್ಯಾದಿಯ ಮೇಲೆ ದ್ವೇಷದಿಂದ ಇದ್ದ ಆರೋಪಿತರು ದಿನಾಂಕ: 08-01-2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯು ತನ್ನ ಊರಿನ ತೋಟದಿಂದ ನಡೆದುಕೊಂಡು ಮನೆಗೆ ಬರುವ ಮಾರ್ಗದ ಗದ್ದೆಯಲ್ಲಿ ಬರುತ್ತಿರುವಾಗ ಆರೋಪಿ 1 ನೇಯವನು ’ಬೇಲಿಯನ್ನು ಯಾಕೆ ತೆಗೆಯಲಿಲ್ಲ?’ ಅಂತಾ ಹೇಳಿ ತನ್ನ ಕೈಯಲಿದ್ದ ಬಡಿಗೆಯಿಂದ ಪಿರ್ಯಾದಿಗೆ ಎಡಪಕ್ಕೆಗೆ ಹೊಡೆದು ಒಳನೋವು ಪಡಿಸಿದ್ದು, ತಪ್ಪಿಸಲು ಬಂದ ಪಿರ್ಯಾದಿಯ ಹೆಂಡತಿಗೆ ಆರೋಪಿ 2 ನೇಯವನು ಬಡಿಗೆಯಿಂದ ಎಡಗೈಗೆ ಹೊಡೆದಿದ್ದರಿಂದ ಗಾಯನೋವಾದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಬೊಮ್ಮ ಗೌಡ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಿಳೇಗೋಡ, ತಾ: ಸಿದ್ದಾಪುರ ರವರು ದಿನಾಂಕ: 08-01-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

Daily District U.D Report

Date:- 08-01-2022

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಕುಮಾರಿ: ಕವಿತಾ ತಂದೆ ದೇವು ಗೌಡ, ಪ್ರಾಯ-22 ವರ್ಷ, ವೃತ್ತಿ-ಮನೆ ಕೆಲಸ, ಸಾ|| ರುದ್ರಪಾದ, ಗೋಕರ್ಣ, ತಾ: ಕುಮಟಾ. ಪಿರ್ಯಾದಿಯ ನಾದಿನಿಯಾದ ಇವಳು ಯಾವುದೋ ವೈಯಕ್ತಿಕ ಕಾರಣದಿಂದ ಜೀವ£ದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ದಿನಾಂಕ: 08-01-2022 ರಂದು ಮಧ್ಯಾಹ್ನ 14-00 ಗಂಟೆಗೆ ಸುಮಾರಿಗೆ ಗಿಡಕ್ಕೆ ಹಾಕುವ ಕೀಟನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥಗೊಂಡವಳನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕುಮಟಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾಯಂಕಾಲ 17-00 ಗಂಟೆಗೆ ಮೃತಪಟ್ಟಿರುತ್ತಾಳೆ. ಇದರ ಹೊರತು ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೇಶವ ತಂದೆ ಮಾಣೇಶ್ವರ ಗೌಡ, ಪ್ರಾಯ-38 ವರ್ಷ, ವೃತ್ತಿ-ಚಹಾ ಅಂಗಡಿ ವ್ಯಾಪಾರ, ಸಾ|| ಬಿಜ್ಜೂರು, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 08-01-2022 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಕುಮಾರಿ: ಕವನಾ ತಂದೆ ಮಂಜುನಾಥ ನಾಯ್ಕ, ಪ್ರಾಯ-17 ವರ್ಷ, ಸಾ|| ಬೆಳಕೆ, ಕಾನಮದ್ಲು, ಬೊಮ್ಮನಕೇರಿ, ತಾ: ಭಟ್ಕಳ. ಇವಳು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 07-01-2022 ರಂದು 13-30 ಗಂಟೆಯಿಂದ 14-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮನೆಯ ಮಲಗುವ ಕೋಣೆಯಲ್ಲಿ ಕುತ್ತಿಗೆಗೆ ವೇಲ್ ಸುತ್ತಿಕೊಂಡು ಅದೇ ವೇಲನ್ನು ಮನೆಯ ಮೇಲ್ಛಾವಣಿಯ ಪಕಾಶಿಗೆ ಕಟ್ಟಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಅವಳ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಟ್ಟಾ ತಂದೆ ಸುಬ್ಬ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಬೆಳಕೆ, ಕಾಮಮದ್ಲು, ಬೊಮ್ಮನಕೇರಿ, ತಾ: ಭಟ್ಕಳ ರವರು ದಿನಾಂಕ: 08-01-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಶ್ರೀಮತಿ ಬಿಬಿ ಜೈನಾಬ್ ಕೋಂ. ಅಹ್ಮದ ಬಂಡಿ, ಪ್ರಾಯ-74 ವರ್ಷ, ಸಾ|| ಜಾಮೀಯಾಬಾದ್, ಹೆಬಳೆ, ತಾ: ಭಟ್ಕಳ. ಇವಳು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವಳು, ದಿನಾಂಕ: 08-12-2021 ರಂದು ಬೆಳಿಗ್ಗೆ 08-00 ಗಂಟೆ ಸಮಯಕ್ಕೆ ಮನೆಯಿಂದ ಹೋದವಳು, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾದವಳು, ಅವಳ ಮೃತದೇಹವು ದಿನಾಂಕ: 08-01-2022 ರಂದು ಮಧ್ಯಾಹ್ನ 15-30 ಗಂಟೆಯ ನಡುವಿನ ಅವಧಿಯಲ್ಲಿ ಹೆಬಳೆ ಗಣೆಶ ನಗರದ ಅರೆಗುಳಿ ದೇವಸ್ಥಾನದ ಹಿಂದೆ ಅಕೇಶಿಯಾ ನೆಡುತೋಪಿನಲ್ಲಿ ವಯೋಸಹಜವಾಗಿ ಮೃತಪಟ್ಟಿದ್ದು, ಇದರ ಹೊರತು ಅವಳ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಂಗಾಲಿ ಜಾಫ್ರಿ ತಂದೆ ಅಲಿ ಮೂಸಾ, ಪ್ರಾಯ-69 ವರ್ಷ, ವೃತ್ತಿ-ಮೀನುಗಾರಿಕೆ ಕೆಲಸ, ಸಾ|| ದಾರುಲ್ ಹಸನಾಥ್, ಫಿರ್ದೌಸ್ ನಗರ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 08-01-2022 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಉಮೇಶ ತಂದೆ ಸೂಲಪ್ಪ ಪಟಗಾರ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊಟಗೇರಿ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯ ಮಗನಾದ ಈತನು ದಿನಾಂಕ: 29-12-2021 ರಂದು ತಮ್ಮ ಹೊಟಗೇರಿ ಗ್ರಾಮದಲ್ಲಿಯ ಸರ್ವೇ ನಂ: 7 ರಲ್ಲಿಯ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಯಲು ಹೋದವನು, ಅಡಿಕೆ ಕೊಯ್ಯುವ ದೋಟಿ ಸರಿ ಇಲ್ಲದ ಕಾರಣ, ತಮ್ಮ ತೋಟದ ಪಕ್ಕದಲ್ಲಿರುವ ಚಂದ್ರು ಬಿಲ್ಲವ ರವರ ತೋಟಕ್ಕೆ ಹೋಗಿ ಅಡಿಕೆ ಮರದಲ್ಲಿ ಸಿಕ್ಕಿಸಿದ ದೋಟಿ ತೆಗೆಯಲು ಅಡಿಕೆ ಮರ ಹತ್ತಿದಾಗ ಆಕಸ್ಮಿಕವಾಗಿ ಅಡಿಕೆ ಮರ ಮುರಿದು ಕೆಳಗೆ ಬಿದ್ದು, ಎದೆಗೆ ಪೆಟ್ಟು ಮಾಡಿಕೊಂಡವನಿಗೆ ಚಿಕಿತ್ಸೆ ಕುರಿತು ಅದೇ ದಿನ ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ಒಯ್ದು ಚಿಕಿತ್ಸೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ: 31-12-2021 ರಂದು ಮಂಗಳೂರು ವೆನಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಿಸದೇ ದಿನಾಂಕ: 08-01-2022 ರಂದು ಬೆಳಿಗ್ಗೆ 06-36 ಗಂಟೆಗೆ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೂಲಪ್ಪ ತಂದೆ ಬಬ್ಬು ಪಟಗಾರ, ಪ್ರಾಯ-75 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊಟಗೇರಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 08-01-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹಾಬಲೇಶ್ವರ ತಂದೆ ಜಾನು ಕುಣಬಿ, ಪ್ರಾಯ-48 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಜಮಟಗಾರ, ತೋಳಗೋಡ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯ ಅಣ್ಣನಾದ ಈತನು ದಿನಾಂಕ: 07-01-2022 ರಂದು 16-45 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಇಳೇಹಳ್ಳಿ ಊರಿನ ಅನಂತ ಸುಬ್ರಾಯ ಭಟ್, ಇವರಿಗೆ ಸೇರಿದ ತೋಟದಲ್ಲಿ ಅಡಿಕೆ ಕೊಯ್ಯುವ ಕೆಲಸಕ್ಕೆ ಹೋದಾಗ ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಕ್ಕೆ ಬಿದ್ದು ಒಳಪೆಟ್ಟು ಮಾಡಿಕೊಂಡವನಿಗೆ ಚಿಕಿತ್ಸೆ ಕುರಿತು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಉಪಚಾರದಲ್ಲಿರುತ್ತಾ ರಾತ್ರಿ 10-40 ಗಂಟೆಗೆ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ಜಾನು ಕುಣಬಿ, ಪ್ರಾಯ-46 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಜಮಟಗಾರ, ತೋಳಗೋಡ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 08-01-2022 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಬಿಕಾನಗರ ಪೊಲೀಸ್ ಠಾಣೆ         

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪರಶುರಾಮ ತಂದೆ ದುಂಡಪ್ಪ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೇಗದಾಳ, ಅಂಬಿಕಾನಗರ, ತಾ: ದಾಂಡೇಲಿ. ಪಿರ್ಯಾದಿಯ ಗಂಡನಾದ ಈತನು ಮನೆಯಲ್ಲಿ ಸಣ್ಣ ಗೂಡಂಗಡಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದವನು, ದಿನಾಂಕ: 08-01-2022 ರಂದು ಬೆಳಿಗ್ಗೆ 10-00 ಗಂಟೆಗೆ ಎದೆನೋವು ಕಾಣಿಸಿಕೊಂಡು ಈತನ ಹೆಂಡತಿಯಾದ ಪಿರ್ಯಾದಿ ಶ್ರೀಮತಿ ದೀಪಾ ಕೋಂ. ಪರಶುರಾಮ ನಾಯ್ಕ ಹಾಗೂ ಇತರರು ಸೇರಿ ಈತನನ್ನು ಒಂದು ಖಾಸಗಿ ವಾಹನದ ಮೇಲೆ ಚಿಕಿತ್ಸೆಗೆ ಭಾಗವತಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಕುರಿತು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಭಾಗವತಿ ದಾಟಿದ ನಂತರ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಮಯ 11-50 ಗಂಟೆಯ ಸುಮಾರಿಗೆ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಹೋಗಿ ತಲುಪಿದಾಗ ವೈದ್ಯಾಧಿಕಾರಿ ಇವರು ಪರೀಕ್ಷೀಸಿ ಪರಶುರಾವi ಈತನು ಮೃತಪಟ್ಟ ಬಗ್ಗೆ ತಿಳಿಸಿದ್ದು ಇರುತ್ತದೆ. ಕಾರಣ ಪಿರ್ಯಾದಿಯ ಗಂಡನಾದ ಪರಶುರಾವi ಈತನ ಮರಣವು ಹೃದಯಾಘಾತದಿಂದ ಸಂಭವಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಕೋಂ. ಪರಶುರಾಮ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಕೇಗದಾಳ, ಅಂಬಿಕಾನಗರ, ತಾ: ದಾಂಡೇಲಿ ರವರು ದಿನಾಂಕ: 08-01-2022 ರಂದು 11-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

Last Updated: 10-01-2022 05:12 PM Updated By: SP KARWAR


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Uttara Kannada District Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080