ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-07-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: 201, 302 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ಶ್ವೇತಾ ಕೋಂ. ರಾಜೇಶ ನಾಯ್ಕ, ಪ್ರಾಯ-29 ವರ್ಷ, ಸಾ|| ಅತ್ತಗಾರ್, ಬಳಗಾರ್, ತಾ: ಯಲ್ಲಾಪುರ, ಹಾಲಿ ಸಾ|| ಚಿಕ್ಕಮಾವಳ್ಳಿ ಗ್ರಾಮ, ತಾ: ಯಲ್ಲಾಪುರ, 2]. ದೀಪಕ ತಂದೆ ಬುದ್ದಾ ಮರಾಠಿ, ಪ್ರಾಯ-53 ವರ್ಷ, 3]. ಗಂಗಾಧರ ತಂದೆ ದೀಪಕ ಮರಾಠಿ, ಪ್ರಾಯ-26 ವರ್ಷ, 4]. ಶ್ರೀಮತಿ ಯಮುನಾ ಕೋಂ. ದೀಪಕ ಮರಾಠಿ, ಪ್ರಾಯ-50 ವರ್ಷ, ಸಾ|| (ಎಲ್ಲರೂ) ಚಿಕ್ಕಮಾವಳ್ಳಿ ಗ್ರಾಮ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವಳು ಮೃತನ ಹೆಂಡತಿ ಇದ್ದು, ಆರೋಪಿ 2 ನೇಯವನು ಮೃತನ ಹೆಂಡತಿಯ ತಂದೆ ಇದ್ದು, ಆರೋಪಿ 3 ನೇಯವನು ಮೃತನ ಹೆಂಡತಿಯ ತಮ್ಮನಿದ್ದು ಹಾಗೂ ಆರೋಪಿ 4 ನೇಯವಳು ಮೃತನ ಹೆಂಡತಿಯ ತಾಯಿ ಇರುತ್ತಾರೆ. ಆರೋಪಿ 1 ನೇಯವಳು ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ತಿಳಿದ ಪಿರ್ಯಾದಿ ಹಾಗೂ ಪಿರ್ಯಾದಿಯ ತಮ್ಮ ಮೃತ ರಾಜೇಶ ಹಾಗೂ ಪಿರ್ಯಾದಿಯ ಮನೆಯ ಜನರು ಆರೋಪಿ 1 ನೇಯವಳು ಹಾಗೂ ಉಳಿದವರೊಂದಿಗೆ ರಾಜಿ ಪಂಚಾಯತಿ ಮಾಡಿ ಹೊಂದಾಣಿಕೆ ಮಾಡಿದ್ದರೂ ಸಹ ಅದೇ ದ್ವೇಷದಿಂದ ಪಿರ್ಯಾದಿಯ ತಮ್ಮನೊಂದಿಗೆ ಆಗಾಗ ಜಗಳ ಮಾಡಿ ಹೊಡೆಬಡೆ ಮಾಡುತ್ತಾ ಬಂದವರು, ಆರೋಪಿ 1 ರಿಂದ 4 ನೇಯವರು ಸಂಗನಮತ ಮಾಡಿಕೊಂಡು ಪಿರ್ಯಾದಿಯ ತಮ್ಮ: ಶ್ರೀ ರಾಜೇಶ ತಂದೆ ನಾರಾಯಣ ನಾಯ್ಕ ಇವನಿಗೆ ಸಾಯಿಸುವ ಉದ್ದೇಶದಿಂದ ದಿನಾಂಕ: 10-06-2021 ರಂದು ರಾತ್ರಿ ಸುಮಾರು 07-00 ಗಂಟೆಯಿಂದ 08-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ತಮ್ಮ ರಾಜೇಶನಿಗೆ ಯಾವುದೋ ಕಾರಣದ ವಿಷಯಕ್ಕೆ ಅವನೊಂದಿಗೆ ಜಗಳ ಮಾಡಿ ಹೊಡೆದು ಸಾಯಿಸಿ, ಅವನ ಮೃತದೇಹವನ್ನು ಯಾರಿಗೂ ಸಿಗದಂತೆ ಎಲ್ಲೋ ಮುಚ್ಚಿಟ್ಟು, ಸಾಕ್ಷಿ ನಾಶ ಪಡಿಸಿ, ಪಿರ್ಯಾದಿ ಹಾಗೂ ಪಿರ್ಯಾದಿಯವರ ಮನೆಯ ಜನರಿಗೆ ವಿಷಯವನ್ನು ಹೇಳದೇ ಪಿರ್ಯಾದಿಯ ತಮ್ಮ ಕಾಣೆಯಾಗಿದ್ದಾನೆ ಅಂತಾ ಹೇಳಿ, ಪಿರ್ಯಾದಿ ಹಾಗೂ ಪಿರ್ಯಾದಿಯವರ ಮನೆಯವರಿಗೆ ದಾರಿ ತಪ್ಪಿಸಿದ್ದು, ಆರೋಪಿ 1 ರಿಂದ 4 ನೇಯವರು ಪಿರ್ಯಾದಿಯ ತಮ್ಮ ರಾಜೇಶನಿಗೆ ಸಾಯಿಸಿರಬಹುದು ಅಂತಾ ಪಿರ್ಯಾದಿಗೆ ಸಂಶಯವಿದ್ದು, ಈ ಕುರಿತು ಅವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ತಂದೆ ನಾರಾಯಣ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಳಗಾರ, ತಾ: ಯಲ್ಲಾಪುರ, ಹಾಲಿ ಸಾ|| ಶಾರದಾ ಗಲ್ಲಿ, ತಾ: ಯಲ್ಲಾಪುರ ರವರು ದಿನಾಂಕ: 08-07-2021 ರಂದು 07-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ  ಯಾರೋ ಕಳ್ಳರು ದಿನಾಂಕ: 07-07-2021 ರಂದು 14-00 ಗಂಟೆಯಿಂದ 14-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ಶಿರಸಿ ಶಹರದಲ್ಲಿ ಕಾಂಗ್ರೆಸ್ ಪಕ್ಷದ ಸೈಕಲ್ ಜಾಥಾದಲ್ಲಿ ಭಾಗಿಯಾಗಿದ್ದಾಗ ಶಿರಸಿ ಶಹರದ ಬಿಡ್ಕಿ ಸರ್ಕಲ್ ಹತ್ತಿರ ಪಿರ್ಯಾದಿಯ ಪ್ಯಾಂಟಿನ ಕಿಸೆಯ ಪರ್ಸಿನಲ್ಲಿ ಹಾಕಿಟ್ಟಿದ್ದ ನಗದು ಹಣ 8,000/- ರೂಪಾಯಿ ಹಾಗೂ ಚುನಾವಣ ಗುರುತಿನ ಕಾರ್ಡ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ನಾಗೇಶ ದುಬಾಶಿ, ಪ್ರಾಯ-54 ವರ್ಷ, ವೃತ್ತಿ-ವ್ಯವಹಾರ, ಸಾ|| ಬನವಾಸಿ ರೋಡ್, ಗಾಯತ್ರಿ ನಗರ, 5 ನೇ ಕ್ರಾಸ್, ತಾ: ಶಿರಸಿ ರವರು ದಿನಾಂಕ: 08-07-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 07-07-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 08-07-2021 ರಂದು ನಸುಕಿನ ಜಾವ 04-30 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ತಾಲೂಕಿನ  ಚಿಪಗಿ ಗ್ರಾಮದ ದಮನಬೈಲ್ ಎಂಬಲ್ಲಿ ಹಂಚಿನ ಮಾಡನ್ನು ಹೊಂದಿರುವ ಪಿರ್ಯಾದಿಯ ವಾಸದಮನೆ ಹೊಟೇಲ್ ಮತ್ತು ಕಿರಾಣಿ ಅಂಗಡಿಯಿರುವ ಕಟ್ಟಡದ ಮಾಡಿನ ಹಂಚನ್ನು ತೆಗೆದು ಅಂಗಡಿಯೊಳಗೆ ಪ್ರವೇಶಿಸಿ, ಅಲ್ಲಿ ದೇವರ ಪೋಟೋಗಳನ್ನಿಟ್ಟ ಪಾಟಿ ಕಲ್ಲಿನ ಸೆಲ್ಫ್ ನ ಮೇಲಿಟ್ಟ ಸ್ಟೀಲಿನ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣ ಸುಮಾರು 9,000/- ರೂಪಾಯಿಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸಂಜೀವ ತಂದೆ ತಿಮ್ಮಾ ಪೂಜಾರಿ, ಪ್ರಾಯ-59 ವರ್ಷ, ವೃತ್ತಿ-ವ್ಯಾಪಾರ, ಸಾ|| ದಮನಬೈಲ್, ಪೋ; ಚಿಪಗಿ, ತಾ: ಶಿರಸಿ ರವರು ದಿನಾಂಕ: 08-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-07-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶಿವಕುಮಾರ ತಂದೆ ಕುಬೇಂದ್ರಪ್ಪ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮರವಂಜಿ, ತಾ: ಚೆನ್ನಗಿರಿ, ಜಿ: ದಾವಣಗೆರೆ. ಈತನು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವನು ಹಾಗೂ ಅತೀಯಾದ ಕುಡಿತದ ಚಟ ಹೊಂದಿದ್ದವನಿಗೆ ಕುಡಿತದ ಚಟ ಬಿಡಿಸುವ ಸಲುವಾಗಿ ಆತನ ಹೆಂಡತಿಯಾದ ಪಿರ್ಯಾದಿಯವರು ಕಳೆದ ದಿನಾಂಕ: 01-07-2021 ರಂದು ಕಾರವಾರದ ಸುರಭೀ ವ್ಯಸನ ಮುಕ್ತ ಹಾಗೂ ಪುನರ್ವಸತಿ ಕೇಂದ್ರಕ್ಕೆ ದಾಖಲು ಮಾಡಿದ್ದು, ಅಂದಿನಿಂದ ಮೃತನು ಪುನರ್ವಸತಿ ಕೇಂದ್ರದಲ್ಲಿದ್ದವನು, ಜಮೀನಿನ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 07-07-2021 ರಂದು ಮದ್ಯಾಹ್ನ 01-30 ಗಂಟೆಯ ಸುಮಾರಿಗೆ ತಾನು ಚಿಕಿತ್ಸೆ ಪಡೆಯುತ್ತಿದ್ದ ಸುರಭೀ ವ್ಯಸನ ಮುಕ್ತ ಕೇಂದ್ರದ 2 ನೇ ಮಹಡಿಯಲ್ಲಿರುವ ಶೌಚಾಲಯದ ಮೇಲ್ಛಾವಣಿಯ ಸ್ಟೀಲ್ ಸ್ಕ್ವೇರ್ ಬಾರ್ ಗೆ ಇಲೆಕ್ಟ್ರಿಕಲ್ ವಾಯರ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡವನಿಗೆ ಸುರಭೀ ವ್ಯಸನ ಮುಕ್ತ ಕೇಂದ್ರದ ಯೋಜನಾ ನಿರ್ದೇಶಕರಾದ ಶ್ರೀ ಹಾಲೇಶ್ ವ್ಹಾಯ್ ರವರು ಕೂಡಲೇ ಚಿಕಿತ್ಸೆಯ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಾರವಾರಕ್ಕೆ 14-15 ಗಂಟೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಸದರಿ ಮೃತನು ಆಸ್ಪತ್ರಗೆ ಚಿಕಿತ್ಸೆ ಹೋಗುವ ಪೂರ್ವದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಜಯಮ್ಮ ಕೋಂ. ಶಿವಕುಮಾರ್, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮರವಂಜಿ, ತಾ: ಚೆನ್ನಗಿರಿ, ಜಿ: ದಾವಣಗೆರೆ ರವರು ದಿನಾಂಕ: 08-07-2021 ರಂದು 08-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಜೋಯಿಡಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಅನೀತಾ ಕೋಂ. ಅನಂತ ಎಲ್ಲೇಕರ, ಪ್ರಾಯ-48 ವರ್ಷ, ವೃತ್ತಿ-ಅಂಗನವಾಡಿ ಸಹಾಯಕಿ, ಸಾ|| ಭೀಮಗಾಳಿ, ಯರಮುಖ, ತಾ: ಜೋಯಿಡಾ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 21-06-2021 ರಂದು 08-30 ಗಂಟೆಗೆ ತಮ್ಮ ಮನೆಯಿಂದ ಎಲ್ಲಿಗೋ ಹೋಗಿ ಕಾಣೆಯಾಗಿದ್ದಳು, ಈ ಬಗ್ಗೆ ಜೊಯಿಡಾ ಠಾಣಾ ಗುನ್ನಾ ನಂ: 31/2021, ಕಲಂ: ಮಹಿಳೆ ಕಾಣೆ ನೇದರಂತೆ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆದರೆ ದಿನಾಂಕ: 08-07-2021 ರಂದು ಬೆಳಿಗ್ಗೆ 08-00 ಗಂಟೆಗೆ ಜೋಯಿಡಾ ತಾಲೂಕಿನ ತಮ್ಮಣಗಿ ಗ್ರಾಮದ ಹತ್ತಿರ ನಾಸ ಹಳ್ಳದ ನೀರಿನಲ್ಲಿ ಶ್ರೀಮತಿ ಅನೀತಾ ಕೋಂ. ಅನಂತ ಎಲ್ಲೇಕರ ಇವಳ ಮೃತದೇಹವು ಪತ್ತೆಯಾಗಿದ್ದು ಇರುತ್ತದೆ. ಕಾರಣ ಶ್ರೀಮತಿ ಅನೀತಾ ಕೋಂ. ಅನಂತ ಎಲ್ಲೇಕರ ಇವಳು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 21-06-2021 ರಂದು 08-30 ಗಂಟೆಯಿಂದ ದಿನಾಂಕ: 08-07-2021 ರಂದು 08-00 ಗಂಟೆಯ ನಡುವಿನ ಅವಧಿಯಲ್ಲಿ ಜೋಯಿಡಾ ತಾಲೂಕಿನ ತಮ್ಮಣಗಿ ಗ್ರಾಮದ ಹತ್ತಿರ ಇರುವ ನಾಸ ಹಳ್ಳದ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾಳೆ. ಇದರ ಹೊರತು ಇವಳ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅನಂತ ತಂದೆ ಬಾಬು ಎಲ್ಲೇಕರ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭೀಮಗಾಳಿ, ಯರಮುಖ, ತಾ: ಜೋಯಿಡಾ ರವರು ದಿನಾಂಕ: 08-07-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 11-07-2021 07:19 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080