ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-06-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 10/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉದಯ ತಂದೆ ರಾಮ ತುಳಸ್ಕರ, ಪ್ರಾಯ-50 ವರ್ಷ, ವೃತ್ತಿ-ಮೀನಿನ ಬಲೆ ಹೆಣೆಯುವುದು, ಸಾ|| ಜೋಷಿವಾಡಾ, ನಂದನಗದ್ದಾ, ಕಾರವಾರ (ಮೋಟಾರ್ ಸ್ಕೂಟರ್ ನಂ: ಕೆ.ಎ-30/ವಿ-7541 ನೇದರ ಸವಾರ). ಈತನು ಪಿರ್ಯಾದಿಯ ಭಾವನಾಗಿದ್ದು, ದಿನಾಂಕ: 08-06-2021 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದಿಯ ತಂಗಿಯಾದ ಶ್ರೀಮತಿ ಲಕ್ಷ್ಮೀ ಕೋಂ. ಉದಯ ತುಳಸ್ಕರ ಇವಳನ್ನು ತನ್ನ ಮೋಟಾರ್ ಸ್ಕೂಟರ್ ನಂ: ಕೆ.ಎ-30/ವಿ-7541 ನೇದರ ಹಿಂದಿನ ಸೀಟಿನಲ್ಲಿ ಕೂಡ್ರಿಸಿಕೊಂಡು ಕಾರವಾರ-ಹುಬ್ಬುವಾಡದಿಂದ ಪಿ&ಟಿ ಕ್ವಾರ್ಟರ್ಸ್ ಕಡೆಗೆ ಹೋಗುವ ರಸ್ತೆಯ ಹಬ್ಬುವಾಡಾ ಕಡೆಯಿಂದ ಸೋನಾರವಾಡಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಮೋಟಾರ್ ಸ್ಕೂಟರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸೋನಾವರವಾಡಾದ ಶ್ರೀ ಬ್ರಹ್ಮದೇವ ಪ್ರಸನ್ನ ಬ್ರಹ್ಮಕಟ್ಟೆ ದೇವಸ್ಥಾನದ ಹತ್ತಿರ ರಸ್ತೆಯಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ನೀರು ಹಾಯ್ದು ಹೋಗಲು ಅಳವಡಿಸಿದ ಸಿಮೆಂಟ್ ಪೈಪಿನ ಮೇಲೆ ಸ್ವಲ್ಪ ಉಬ್ಬು ಇದ್ದುದ್ದರಿಂದ ಮೋಟಾರ್ ಸ್ಕೂಟರಿನ ವೇಗವನ್ನು ನಿಯಂತ್ರಿಸಲು ಹೋಗಿ ಒಮ್ಮೇಲೆ ರಸ್ತೆಯ ಬಲಕ್ಕೆ ಮೋಟಾರ್ ಸ್ಕೂಟರನ್ನು ತಿರುಗಿಸಿ, ಮೋಟಾರ್ ಸ್ಕೂಟರಿನ ಹಿಂದಿನ ಸೀಟಿನಲ್ಲಿ ಕುಳಿತ ಪಿರ್ಯಾದಿಯ ತಂಗಿಯಾದ ಶ್ರೀಮತಿ ಲಕ್ಷ್ಮೀ ಇವಳು ರಸ್ತೆಯ ಮೇಲೆ ಬೀಳುವಂತೆ ಮಾಡಿ ಅಪಘಾತ ಪಡಿಸಿ, ಶ್ರೀಮತಿ ಲಕ್ಷ್ಮೀ ಇವಳಿಗೆ ತಲೆಯ ಮೇಲೆ ಹಾಗೂ ತಲೆಯ ಹಿಂಭಾಗದಲ್ಲಿ ಒಳನೋವು ಹಾಗೂ ಎಡಗೈ ಭುಜದ ಹತ್ತಿರ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಈಶ್ವರ ಲೋನೆ, ಪ್ರಾಯ-46 ವರ್ಷ, ವೃತ್ತಿ-ಮೀನು ಹಿಡಿಯುವುದು, ಸಾ|| ನಾಗನಾಥವಾಡಾ, ನಂದನಗದ್ದಾ, ಕಾರವಾರ ರವರು ದಿನಾಂಕ: 08-06-2021 ರಂದು 14-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 161/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಸಮಿ ತಂದೆ ಅಬ್ದುಲ್ ಸತ್ತಾರ್, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಮೂಸಾನಗರ, ತಾ: ಭಟ್ಕಳ (ಲೈಲ್ಯಾಂಡ್ ಇನ್ಸುಲೇಟರ್ ವಾಹನ ನಂ: ಕೆ.ಎ-47/8893 ನೇದರ ಚಾಲಕ). ಈತನು ದಿನಾಂಕ: 08-06-2021 ರಂದು 03-45 ಗಂಟೆಗೆ ತಾನು ಚಲಾಯಿಸುತ್ತಿದ್ದ ಮೀನು ಲೋಡ್ ತುಂಬಿದ್ದ ಲೈಲ್ಯಾಂಡ್ ಇನ್ಸುಲೇಟರ್ ವಾಹನ ನಂ: ಕೆ.ಎ-47/8893 ನೇದನ್ನು ಶಿವಮೊಗ್ಗಾದಿಂದ ಹೊನ್ನಾವರ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ, ಸಾಗರ ದಾಟಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಗೇರುಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಚಲಾಯಿಸಿಕೊಂಡು ಬಂದು ಹೊನ್ನಾವರ ತಾಲೂಕಿನ ಬಾಳೆಗದ್ದೆ ಕ್ರಾಸ್ ಹತ್ತಿರ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹ ತಾನು ಚಲಾಯಿಸುತ್ತಿದ್ದ ವಾಹನವನ್ನು ನಿಯಂತ್ರಿಸದೇ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ತಾನು ಚಲಾಯಿಸುತ್ತಿದ್ದ ವಾಹನವನ್ನು ಒಮ್ಮೇಲೆ ರಸ್ತೆಯ ಎಡಕ್ಕೆ ಪಲ್ಟಿ ಕೆಡವಿ ವಾಹನವನ್ನು ಜಖಂಗೊಳಿಸಿ, ವಾಹನದಲ್ಲಿದ್ದ ಮೀನು ಲೋಡ್ ರಸ್ತೆಯ ಮೇಲೆ ಬೀಳುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಸವುದ್ ತಂದೆ ಅಬ್ದುಲ್ ಸತ್ತಾರ್ ಕರೂರಿ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಮೂಸಾನಗರ, ತಾ: ಭಟ್ಕಳ ರವರು ದಿನಾಂಕ: 08-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಹುಲ ಶಾಜಿ ತಂದೆ ಶಾಜಿ ರಾಘವನ್, ಪ್ರಾಯ-21 ವರ್ಷ, ವೃತ್ತಿ-ಚಾಲಕ, ಸಾ|| ಮಣ್ಣಿಪರಂಬಿಲ್ ಹೌಸ್, ಚೆಟ್ಟುಥೋಡ್ ಪೋಸ್ಟ್, ಕೊಂಡುರ, ಕೊಟ್ಟಾಯಮ್, ಕೇರಳಾ (ಲಾರಿ ನಂ: ಕೆ.ಎ-51/ಎಎ-1223 ನೇದರ ಚಾಲಕ). ಈತನು ದಿನಾಂಕ: 08-06-2021 ರಂದು ಬೆಳಿಗ್ಗೆ 11-30 ಗಂಟೆಗೆ ತನ್ನ ಲಾರಿ ನಂ: ಕೆ.ಎ-51/ಎಎ-1223 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ಮಾವಿನಕಟ್ಟಾದ ಗೊಂಚಿಹಿತ್ಲ ಕ್ರಾಸ್ ಎದುರಿನಲ್ಲಿ ತನ್ನ ಮುಂದೆ ಅಂದರೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-1121 ನೇದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಮಾರುತಿ ತಂದೆ ದುರ್ಗಯ್ಯ ನಾಯ್ಕ, ಸಾ|| ಶಾರದಾಹೊಳೆ, ಶಿರಾಲಿ, ತಾ: ಭಟ್ಕಳ ಇವರಿಗೆ ತಲೆಯ ಬಲಭಾಗಕ್ಕೆ ಗಂಭೀರ ಸ್ವರೂಪದ ಗಾಯ ಹಾಗೂ ಎಡಗಾಲಿಗೆ ಮತ್ತು ಎಡಗೈಗೆ ತೆರಚಿದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಮಾದೇವ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಬೊಡ್ಡಿಮನೆ, ಪಡುಶಿರಾಲಿ, ಬೇಂಗ್ರೆ-2, ತಾ: ಭಟ್ಕಳ ರವರು ದಿನಾಂಕ: 08-06-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ತಂದೆ ಮಾದೇವ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ರೂಮಬಾಯ್ ಕೆಲಸ, ಸಾ|| ಸಣ್ಣಹುಡುಗಮನೆ, ಶೆಟ್ಟರಕೇರಿ, ಮಾವಳ್ಳಿ-2, ಮುರ್ಡೇಶ್ವರ, ತಾ: ಭಟ್ಕಳ, 2]. ಕುಮಾರ ತಂದೆ ನಾಗಯ್ಯ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಕೊಲ್ಲುರಾಸರಮನೆ, ಮಾವಿನಕಟ್ಟಾ, ಬೇಂಗ್ರೆ-1, ತಾ: ಭಟ್ಕಳ, 3]. ಸೋಮಯ್ಯ ತಂದೆ ಗೊಯ್ದಾ ಗೊಂಡ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗೊಂಡ್ರಮನೆ, ಹಡಾಳ, ಮಾವಳ್ಳಿ-2, ಮುರ್ಡೇಶ್ವರ, ತಾ: ಭಟ್ಕಳ, 4]. ಜಯಂತ ತಂದೆ ನಾಗಪ್ಪ ನಾಯ್ಕ, ಸಾ|| ಮಲ್ಲಾರಿ, ಬೇಂಗ್ರೆ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕ ರೋಗವು ತೀವೃವಾಗಿ ಹರಡುತ್ತಿದ್ದು, ಅದನ್ನು ತಡೆಗಟ್ಟುವ ಉದ್ದೇಶದಿಂದ ಸುರಕ್ಷತಾ ಕ್ರಮವನ್ನು ಕೈಗೊಳ್ಳಲು ಘನ ಕರ್ನಾಟಕ ಸರಕಾರದ ಪರವಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದಂತೆ ಯಾರೂ ಮನೆಯಿಂದ ಹೊರೆಗೆ ಬಾರದಂತೆ ಲಾಕಡೌನ್ ಆದೇಶವನ್ನು ಜಿಲ್ಲಾದ್ಯಂತ ಜಾರಿಗೊಳಿಸಿದ ವಿಷಯ ಗೊತ್ತಿದ್ದರೂ ಸಹ ನಮೂದಿತ ಆರೋಪಿತರು ದಿನಾಂಕ: 08-06-2021 ರಂದು 14-35 ಗಂಟೆಗೆ ಮುಖಕ್ಕೆ ಯಾವುದೇ ಮಾಸ್ಕ್ ಅನ್ನು ಧರಿಸದೇ, ಯಾವುದೇ ರಕ್ಷಣೆಯನ್ನು ಹೊಂದದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ನಿರ್ಲಕ್ಷ್ಯತನ ತೋರಿಸಿ, ಆರ್.ಎನ್.ಎಸ್ ಹೈವೇ ಹೊಟೇಲ್ ಎದುರಿನ ಉತ್ತರಕೊಪ್ಪ ರಸ್ತೆಯ ರೇಲ್ವೆ ಬ್ರಿಡ್ಜ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟವನ್ನು ಆಡುತ್ತಿದ್ದಾಗ ಆರೋಪಿ 1 ರಿಂದ 3 ನೇಯವರು 1). ನಗದು ಹಣ 2,070/- ರೂಪಾಯಿ, 2). ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 3). ಹಳೆಯ ದಿನಪತ್ರಿಕೆಗಳು-2, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 4 ನೇಯವನು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 08-06-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ನಾರಾಯಣ ಹರಿಕಾಂತ, ಪ್ರಾಯ-34 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹಿರೇದೊಮ್ಮಿ, ಮುರ್ಡೇಶ್ವರ, ತಾ: ಭಟ್ಕಳ. ಈತನು ಪಿರ್ಯಾದಿಯೊಂದಿಗೆ ಬೋಟ್ ವ್ಯವಹಾರ ಹೊಂದಿದ್ದು, ಬೋಟ್ ವ್ಯವಾಹರದಲ್ಲಿ ಪಿರ್ಯಾದಿಯ ಕಡೆಯಿಂದ 4 ಲಕ್ಷ ರೂಪಾಯಿ ಹಣ ಪಡೆದುಕೊಂಡು, ವ್ಯವಹಾರದಲ್ಲಿ ಪಿರ್ಯಾದಿಯೊಂದಿಗೆ ವೈಮನಸ್ಸು ಹೊಂದಿದ್ದವನು, ದಿನಾಂಕ: 08-06-2021 ರಂದು 16-45 ಗಂಟೆಗೆ ಮುರ್ಡೇಶ್ವರ ದೇವಸ್ಥಾನದ ಹತ್ತಿರ ಸುಲಭ ಶೌಚಾಲಯದ ಹಳೆ ಕಟ್ಟಡದ ಎದುರು ಪಿರ್ಯಾದಿಯ ಮೋಟಾರ್ ಸೈಕಲನ್ನು ಅಡ್ಡಗಟ್ಟಿ ‘ಬೋಸಡಿ ಮಕ್ಕಳಾ, ನಮ್ಮ ಮನೆಗೆ ಯಾಕೆ ಹೋಗಿದ್ದು? ನೀವು ಬರುವುದನ್ನೇ ಕಾಯುತ್ತಾ ನಿಂತಿದ್ದೆ’ ಅಂತಾ ಹೇಳಿದಾಗ, ಪಿರ್ಯಾದಿಯು ‘ಯಾಕೆ ಸುಮ್ಮನೆ ಜಗಳ ಮಾಡುತ್ತೀ? ನಮ್ಮ ಮೇಲೆ ಯಾಕೆ ಕೇಸ್ ಮಾಡಿದ್ದು?’ ಅಂತಾ ಕೇಳಲಾಗಿ, ಆರೋಪಿತನು ‘ನಿಮ್ಮ ಸೊಕ್ಕು ಮುರಿಯಲು ದೂರು ನೀಡಿದ್ದೇನೆ, ಏನು ಬೇಕಾದರೂ ಮಾಡಿಕೊಳ್ಳಿ’ ಅಂತಾ ಹೇಳಿ ಪಿರ್ಯಾದಿಗೆ ಹೊಡೆಯಲು ಪ್ರಯತ್ನಿಸಿ, ‘ಇನ್ನೊಮ್ಮೆ ನಮ್ಮ ಮನೆಯ ಹತ್ತಿರ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಜೈರಾಮ ತಂದೆ ಜಟಗಾ ಮೊಗೇರ, ಪ್ರಾಯ-38 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕರ್ಕನಮನೆ, ಬಸ್ತಿ, ಪೋ: ಕಾಯ್ಕಿಣಿ, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 08-06-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1)(r) PREVENTION OF CRUELTY TO ANIMALS ACT-1960 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ಮುಕ್ಸಿದ್ ತಂದೆ ಮೊಹಮ್ಮದ್ ಜಾಫರ್, ಪ್ರಾಯ-26 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಂದರ್ ರೋಡ್, 5ನೇ ಕ್ರಾಸ್, ತಾ: ಭಟ್ಕಳ, 2]. ನಯೀಮ್ ಖಾಸಿಮಜಿ ತಂದೆ ಜಾಫರ್ ಅಲಿ ಖಾಸಿಮಜಿ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಹೀಲ್ ಪ್ಯಾಲೇಸ್, ಬಂದರ್ ರೋಡ್, ತಾ: ಭಟ್ಕಳ, 3]. ಅಬ್ದುಲ್ ಮಕಿತ್ ತಂದೆ ಮೊಹಮ್ಮದ್ ಜಾಫರ್, ಪ್ರಾಯ-41 ವರ್ಷ, ವೃತ್ತಿ-ಮೌಲಾನಾ, ಸಾ|| ಬಂದರ್ ರೋಡ್, 5 ನೇ ಕ್ರಾಸ್, ತಾ: ಭಟ್ಕಳ, 4]. ಸಫಿವುಲ್ಲಾ ತಂದೆ ಸಿಗ್ಬತುಲ್ಲಾ ರುಕ್ನುದ್ದೀನ್, ಪ್ರಾಯ-19 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಂದರ್ ರೋಡ್, 5ನೇ ಕ್ರಾಸ್, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 08-06-2021 ರಂದು ಬೆಳಿಗ್ಗೆ 10-30 ಗಂಟೆಗೆ ವಧೆ ಮಾಡುವ ಉದ್ದೇಶದಿಂದ 80,000/- ರೂಪಾಯಿ ಮೌಲ್ಯದ 02 ಎತ್ತುಗಳನ್ನು ಯಾವುದೇ ದಾಖಲೆಗಳು ಇಲ್ಲದೇ ಭಟ್ಕಳ ಶಹರದ ಬಂದರ್ ರೋಡ್ 5 ನೇ ಕ್ರಾಸ್ ಮನೆಯ ಕಂಪೌಂಡ್ ಒಳಗಡೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಅವುಗಳಿಗೆ ಆಹಾರ ನೀರು ಕೊಡದೇ ತಮ್ಮ ತಾಬಾದಲ್ಲಿ ಇಟ್ಟುಕೊಂಡಿರುವಾಗ ಮೋಟಾರ್ ಸೈಕಲ್ ನಂ: ಕೆಎ47/ಡಬ್ಲ್ಯೂ-2524 ನೇದವುಗಳ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಸುಮಾ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 08-06-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 3 ಸಹಿತ 25 ಭಾರತೀಯ ಆಯುಧ ಕಾಯ್ದೆ-1959 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಜಾನು ಗಾವಡಾ, ಅಂದಾಜು ಪ್ರಾಯ-37 ವರ್ಷ, ಸಾ|| ಕೆಲೋಲಿ, ಝಲಾವಳಿ, ತಾ: ಜೋಯಿಡಾ. ಈ ನಮೂದಿತ ಆರೋಪಿತನನ್ನು ಜೋಯಿಡಾ ಠಾಣಾ ಗುನ್ನಾ ನಂ: 29/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ಮತ್ತು ಕಲಂ: 269, 271, 328 ಐ.ಪಿ.ಸಿ ನೇದರಲ್ಲಿ ಪರಾರಿಯಾಗಿದ್ದವನಿಗೆ, ದಿನಾಂಕ: 08-06-2021 ರಂದು 07-15 ಗಂಟೆಗೆ ಜೋಯಿಡಾ ತಾಲೂಕಿನ ಝಲಾವಳಿ ಗ್ರಾಮದ ಕೆಲೋಲಿ ಮಜಿರೆಯ ಹತ್ತಿರ ಪತ್ತೆ ಮಾಡಿ ಹಿಡಿಯಲು ಹೋದಾಗ, ಈತನು ತನ್ನ ತಾಬಾದಲ್ಲಿದ್ದ ಒಂದು ಒಂಟಿ ನಳಿಕೆಯ ನಾಡ ಬಂದೂಕು ಹಾಗೂ ಒಂದು ಮೋಟಾರ್ ಸೈಕಲನ್ನು ಜಾಗದಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಈತನು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಒಂದು ಒಂಟಿ ನಳಿಕೆಯ ನಾಡ ಬಂದೂಕು ಇಟ್ಟುಕೊಂಡಿದ್ದು, ದಾಳಿಯ ಕಾಲಕ್ಕೆ ಸಿಗದೆ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಂಜುಳಾ ರಾವೋಜಿ, ಡಬ್ಲ್ಯೂ.ಪಿ.ಎಸ್.ಐ, ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 08-06-2021 ರಂದು 11-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಹುಚ್ಚರಾಯಪ್ಪ ತಂದೆ ತಿಮ್ಮಾ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶಿರಳಗಿ, ತಾ: ಸಿದ್ದಾಪುರ. ಈತನು ದಿನಾಂಕ: 08-06-2021 ರಂದು 17-30 ಗಂಟೆಗೆ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ತಿರ ಇರುವ ತನ್ನ ಮನೆಯ ಎದುರಿನ ಅಂಗಳದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 06 ಟೆಟ್ರಾ ಪ್ಯಾಕೆಟ್ ಗಳು, 2). 04 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 04 ಮದ್ಯದ ಖಾಲಿ ಟೆಟ್ರಾ ಪಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 08-06-2021 ರಂದು 19-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 3 ಸಹಿತ 25 ಭಾರತೀಯ ಆಯುಧ ಕಾಯ್ದೆ-1959 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ರಾಮಾ ಪಾಲೇಕರ ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗಡಗೇರಿ, ತಾ: ಶಿರಸಿ. ದಿನಾಂಕ: 08-06-2021 ರಂದು 08-30 ಗಂಟೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನ ಪಡೆದುಕೊಂಡು, ಪಂಚರು ಹಾಗೂ ಠಾಣೆಯ ಸಿಬ್ಬಂದಿಗಳೊಂದಿಗೆ ಸೇರಿ ಮಾಹಿತಿ ಬಂದ ಸ್ಥಳವಾದ ಗಡಗೇರಿಯ ನಮೂದಿತ ಆರೋಪಿತನ ಮನೆಯ ಪಕ್ಕದಲ್ಲಿದ್ದ ಖುಲ್ಲಾ ಶೆಡ್ಡಿನಲ್ಲಿ ಪರಿಶೀಲಿಸಲಾಗಿ, ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುವ ಉದ್ದೇಶಕ್ಕಾಗಿ ಯಾವುದೇ ಅಧಿಕೃತ ಲೈಸನ್ಸ್ ಇಲ್ಲದೇ, ಅಕ್ರಮವಾಗಿ ಒಂಟಿ ನಳಿಕೆಯ ಕಳ್ಳ ಬಂದೂಕನ್ನು ಬಚ್ಚಿಟ್ಟಿದ್ದನ್ನು ವಶಕ್ಕೆ ಪಡೆದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ, (ಕಾ&ಸು) ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 08-06-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶಿವಾನಂದ ತಂದೆ ರಾಮಾ ಹರಿಕಂತ್ರ, ಪ್ರಾಯ-46 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಂಯ್ಗಿ, ತಾ: ಅಂಕೋಲಾ. ಈತನು ಸಾರಾಯಿ ಕುಡಿಯುವ ಚಟದವನಾಗಿದ್ದು, ದಿನಾಂಕ: 08-06-2021 ರಂದು ಸಾಯಂಕಾಲ 04-00 ಗಂಟೆಯಿಂದ ಸಾಯಂಕಾಲ 06-15 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಯಾವುದೋ ಕಾರಣಕ್ಕೆ ಬಿಳಿಹೊಂಯ್ಗಿಯ ಗಜನಿ ಪ್ರದೇಶದ ದಂಡೆಯ ಮೇಲಿರುವ ಮರಕ್ಕೆ ಅಂಗಿಯಿಂದ ನೇಣು ಹಾಕಿಕೊಂಡು ಉಪಚಾರದ ಸಲುವಾಗಿ ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಉಪಚರಿಸಿದ ವೈದ್ಯರು ಸಮಯ 07-55 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿರಂಜನ ತಂದೆ ಶಿವಾನಂದ ಹರಿಕಂತ್ರ, ಪ್ರಾಯ-20 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಂಯ್ಗಿ, ತಾ: ಅಂಕೋಲಾ ರವರು ದಿನಾಂಕ: 08-06-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರತ್ನಪ್ಪ ತಂದೆ ಎಸಯ್ಯ ಮಂಡಲ, ಪ್ರಾಯ-32 ವರ್ಷ, ವೃತ್ತಿ-ಪೌರ ಕಾರ್ಮಿಕ, ಸಾ|| ಇಂದಿರಾನಗರ, ತಾ: ಹಳಿಯಾಳ. ಪಿರ್ಯಾದಿಯವರ ಮಗನಾದ ಈತನು ತನ್ನ ಹೆಂಡತಿಯ ಶೀಲ ಶಂಕಿಸಿ ಜಗಳ ಮಾಡಿಕೊಂಡ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 08-06-2021 ರಂದು ಮಧ್ಯಾಹ್ನ 03-00 ಗಂಟೆಯಿಂದ 03-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ಶಹರದ ಇಂದಿರಾನಗರದಲ್ಲಿರುವ ತನ್ನ ಮನೆಯಲ್ಲಿ ಫ್ಯಾನಿಗೆ ಬೆಡ್ ಶೀಟಿನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಇದರ ಹೊರತು ಆತನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಬ್ಬಮ್ಮ ಕೋಂ. ಎಸಯ್ಯ ಮಂಡಲ, ಪ್ರಾಯ-60 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಇಂದಿರಾನಗರ, ತಾ: ಹಳಿಯಾಳ ರವರು ದಿನಾಂಕ: 08-06-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 09-06-2021 12:23 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080