ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಅಂಕೋಲಾ ತಾಲೂಕಿನ ಶೆಟಗೇರಿ ಕ್ರಾಸಿಲ್ಲಿ ತನ್ನ ಹೆಂಡತಿಯೊಂದಿಗೆ ವಾಸವಾಗಿರುವ ಪಿರ್ಯಾದಿಯು ವೈದ್ಯಕೀಯ ಉಪಚಾರ ಮತ್ತು ಮಂಗಳೂರಿನಲ್ಲಿ ವಾಸವಾಗಿರುವ ತನ್ನ ಮಕ್ಕಳನ್ನು ನೋಡಿಕೊಂಡು ಬರಲು ಮಂಗಳೂರಿಗೆ ಹೋಗಿದ್ದಾಗ, ದಿನಾಂಕ: 07-03-2021 ರಂದು 19-00 ಗಂಟೆಯಿಂದ ದಿನಾಂಕ: 08-03-2021 ರಂದು 07-00 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರಾದ ಯಾರೋ ಕಳ್ಳರು ಪಿರ್ಯಾದಿಯವರ ಮನೆಯ ಮುಂಬಾಗಿನ ಬೀಗ ಮುರಿದು ಮನೆಯ ಒಳಗೆ ಹೊಕ್ಕಿ ಬೆಡ್ ರೂಮಿನಲ್ಲಿದ್ದ ಮತ್ತು ಮೊದಲ ಮಹಡಿಯಲ್ಲಿದ್ದ ಎರಡು ಗೋದ್ರೇಜ್ ಕಪಾಟ ಮತ್ತು ಎರಡು ಮರದ ಕಪಾಟನ್ನು ತೆರೆದು ಕೀ ಯನ್ನು ಬಳಸಿ ಕಪಾಟಿನ ಡ್ರಾಯರನ್ನು ತೆಗೆದು, ಮೂರು ಕಪಾಟಿನಲ್ಲಿದ್ದ ನಗದು ಹಣ ಸುಮಾರು 35,000/- ರೂಪಾಯಿಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ಕಳ್ಳರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಂದ್ರೇಶ ತಂದೆ ನಾರಾಯಣ ನಾಯಕ, ಪ್ರಾಯ-68 ವರ್ಷ, ವೃತ್ತಿ-ನಿವೃತ್ತ ಸಹಾಯಕ ಅರಣ್ಯಾಧಿಕಾರಿ, ಸಾ|| ಚಂದ್ರಗಿರಿ ನಿಲಯ, ಶೆಟಗೇರಿ ಕ್ರಾಸ್, ತಾ: ಅಂಕೋಲಾ ರವರು ದಿನಾಂಕ: 08-03-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೇಶವ ತಂದೆ ವೆಂಕಟಪ್ಟ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೊರಬಳ್ಳಿ, ಜಲವಳ್ಳಿ, ತಾ: ಹೊನ್ನಾವರ, 2]. ಗಿರೀಶ ತಂದೆ ಗಣಪತಿ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೊರಬಳ್ಳಿ, ಜಲವಳ್ಳಿ, ತಾ: ಹೊನ್ನಾವರ, 3]. ಮಾರುತಿ ತಂದೆ ಸುಬ್ರಾಯ ಗೌಡ, ಪ್ರಾಯ-34 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೊರಬಳ್ಳಿ, ಜಲವಳ್ಳಿ, ತಾ: ಹೊನ್ನಾವರ, 4]. ತಿಪ್ಪಯ್ಯ ನಾರಾಯಣ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೊರಬಳ್ಳಿ, ಜಲವಳ್ಳಿ, ತಾ: ಹೊನ್ನಾವರ. ಈ ನಮೂದಿತ ಆರೊಪಿತರು ದಿನಾಂಕ: 07-03-2021 ರಂದು 17-45 ಗಂಟೆಗೆ ಹೊನ್ನಾವರ ತಾಲೂಕಿನ ಜಲವಳ್ಳಿಯ ಪ್ರಭಾತಕೇರಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳನ್ನು ಎರಡು ಕಡೆಯಿಂದಲು ಕಾದಾಡಲು ಬಿಟ್ಟು ತಮ್ಮ ಲಾಭಕ್ಕೋಸ್ಕರ ಅವುಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಕೋಳಿ ಅಂಕ ಜೂಜಾಟ ಆಡುತ್ತಿದ್ದಾಗ ದಾಳಿಯ ವೇಳೆ 1). ಒಟ್ಟು ನಗದು ಹಣ 1,250/- ರೂಪಾಯಿ, 2). ಕೋಳಿ ಹುಂಜಗಳು-04, ಅ||ಕಿ|| 400/- ರೂಪಾಯಿ ನೇದವುಗಳೊಂದಿಗೆ 4 ಜನ ಆರೋಪಿತರು ವಶಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 08-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಜ್ಯೋತಿ ಕೆಂಚಪ್ಪ ಬ್ಯಾಗದಿ, ಸಾ|| ಹನುಮಾಪುರ, ತಾ: ಮುಂಡಗೋಡ, ಹಾಲಿ ಸಾ|| ಹನೀಫಾಬಾದ್, ತಾ: ಭಟ್ಕಳ, 2]. ರಮೇಶ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ, 3]. ಕೆಂಚಪ್ಪ ಹನುಮಂತಪ್ಪ ಬ್ಯಾಗದಿ, ಸಾ|| ಹನುಮಾಪುರ, ತಾ: ಮುಂಡಗೋಡ, ಹಾಲಿ ಸಾ|| ಹನೀಫಾಬಾದ್, ತಾ: ಭಟ್ಕಳ. ಈ ನಮೂದಿತ ಆರೋಪಿತರು ಪಿರ್ಯಾದಿಯ ಸಂಬಂಧಿಕರಿದ್ದು, ಪಿರ್ಯಾದಿಯ ಮನೆಯಲ್ಲಿ ದಿನಾಂಕ: 22-02-2021 ರಿಂದ ಮನೆಯಲ್ಲಿದ್ದು, ದಿನಾಂಕ: 24-02-2021 ರಂದು ರಾತ್ರಿ 08-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಮನೆಯ ಕಬ್ಬಿಣ ಕಪಾಟಿನ ಮೇಲೆ ಇದ್ದ ಕೀ ಯನ್ನು ತೆಗೆದುಕೊಂಡು ಕಪಾಟು ತೆರೆದು ಕಪಾಟಿನಲ್ಲಿದ್ದ ನಗದು ಹಣ 30,000/- ರೂಪಾಯಿ ಹಾಗೂ ಸುಮಾರು 20,000/- ರೂಪಾಯಿ ಮೌಲ್ಯದ 5 ಗ್ರಾಂ ತೂಕದ ಬಂಗಾರ ಸರ ಮತ್ತು ಸುಮಾರು 12,000/- ರೂಪಾಯಿ ಮೌಲ್ಯದ 3 ಗ್ರಾಂ ತೂಕದ ಬಂಗಾರದ ಕಿವಿಯ ಓಲೆಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಹನುಮಂತಪ್ಪ ಬೋವಿವಡ್ಡರ, ಪ್ರಾಯ-32 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಬದನಗೋಡ, ದಾಸನಕೊಪ್ಪಾ, ತಾ: ಶಿರಸಿ, ಹಾಲಿ ಸಾ|| ಪಿ.ಬಿ ಇಬ್ರಾಹಿಂ ಪೆಟ್ರೋಲ್ ಬಂಕ್ ಹಿಂದುಗಡೆ, ಹನೀಫಾಬಾದ್, ಹೆಬ್ಳೆ, ತಾ: ಭಟ್ಕಳ ರವರು ದಿನಾಂಕ: 08-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜಿತೇಂದ್ರ ತಂದೆ ಶ್ರೀಧರ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ವ್ಯಾಪಾರ, ಸಾ|| ತಲಾಂದ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 08-03-2021 ರಂದು 18-30 ಗಂಟೆಯ ಸಮಯಕ್ಕೆ ಭಟ್ಕಳದ ಸರ್ಪನಕಟ್ಟಾ ಕವೂರ ಕ್ರಾಸಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 4,400/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಓಂಕಾರಪ್ಪ, ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 08-03-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಇಫಾತ್ ತಂದೆ ಮೊಹಿದ್ದೀನಸಾ ಖಾದ್ರಿ ಮುಕಾಶಿ, ಪ್ರಾಯ-18 ವರ್ಷ (ಜನ್ಮ ದಿನಾಂಕ 01-03-2003), ವೃತ್ತಿ-ವಿದ್ಯಾರ್ಥಿನಿ, ಸಾ|| ಉದ್ಯಮನಗರ, ತಟಗಾರ ಕ್ರಾಸ್, ಪಂಜಾ ಹತ್ತಿರ, ತಾ: ಯಲ್ಲಾಪುರ. ಪಿರ್ಯಾದುದಾರರ ಮಗಳಾದ ಇವಳು ದಿನಾಂಕ: 07-03-2021 ರಂದು 20-00 ಗಂಟೆಯಿಂದ 20-30 ಗಂಟೆಯ ನಡುವೆ ಯಲ್ಲಾಪುರ ಪಟ್ಟಣದ ಉದ್ಯಮನಗರ, ತಟಗಾರ ಕ್ರಾಸ್ ಪಂಜಾ ಹತ್ತಿರ ಇರುವ ತನ್ನ ಮನೆಯ ಮುಂದೆ ಅಂಗಳದಲ್ಲಿ ಕುಳಿತಿದ್ದವಳು ಕಾಣೆಯಾಗಿರುತ್ತಾಳೆ. ಈ ಕುರಿತು ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಖತೀಜಾಬಿ ಕೋಂ. ಮೊಹಿದ್ದೀನಸಾ ಖಾದ್ರಿ ಮುಕಾಶಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉದ್ಯಮನಗರ, ತಟಗಾರ ಕ್ರಾಸ್, ಪಂಜಾ ಹತ್ತಿರ, ತಾ: ಯಲ್ಲಾಪುರ ರವರು ದಿನಾಂಕ: 08-03-2021 ರಂದು 00-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 279, 337, 338, 283 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಯಾವುದೋ ತೂಫಾನ್ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, 2]. ತುಳಸಿದಾಸ ತಂದೆ ಸೋಮಯ್ಯ ಪಟಗಾರ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಕಲ್ಲೇಶ್ವರ, ರಾಮನಗುಳಿ, ತಾ: ಅಂಕೋಲಾ (ಮಾರುತಿ ಓಮಿನಿ ವಾಹನ ನಂ: ಕೆ.ಎ-31/ಎನ್-3141 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 08-03-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಬೀರಗದ್ದೆಯ ಗಣಪತಿ ದೇವಸ್ಥಾನದ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತನ್ನ ತೂಫಾನ್ ವಾಹನವನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದಿದ್ದಲ್ಲದೇ, ಅದೇ ವೇಳೆಗೆ ರಸ್ತೆಯ ಮೇಲೆ ಓಡಾಡುವ ಇತರೆ ವಾಹನಗಳಿಗೆ ಅಡೆತಡೆಯಾಗುವಂತೆ ಆರೋಪಿ 2 ನೇಯವನು ತನ್ನ ಮಾರುತಿ ಓಮಿನಿ ವಾಹನ ನಂ: ಕೆ.ಎ-31/ಎನ್-3141 ನೇದನ್ನು ಯಲ್ಲಾಪುರ ಕಡೆಗೆ ಮುಖಮಾಡಿ ನಿಲ್ಲಿಸಿದ ಪರಿಣಾಮ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ತನ್ನ ಸರಕಾರಿ ವಾಹನ ನಂ: ಕೆ.ಎ-30/ಜಿ-0487 ನೇದನ್ನು ಚಲಾಯಿಸಿಕೊಂಡು ಹೊರಟ ಪಿರ್ಯಾದಿಗೆ ಮುಂದೆ ಹೋಗಲು ದಾರಿ ಇಲ್ಲದೇ ಓಮಿನಿ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದರಿಂದ ಪಿರ್ಯಾದಿಯ ವಾಹನದಲ್ಲಿದ್ದ ಸಾಕ್ಷಿದಾರ ಶ್ರೀ ಅರವಿಂದ ಕಲಗುಜ್ಜಿ, ಡಿ.ಎಸ್.ಪಿ, ಕಾರವಾರ ರವರ ಎಡಭುಜಕ್ಕೆ ಭಾರೀ ಒಳನೋವು ಮತ್ತು ಆರೋಪಿ 2 ನೇಯವನ ವಾಹನದಲ್ಲಿದ್ದ ಸಾಕ್ಷಿದಾರ ಶ್ರೀ ಗಣಪತಿ ಗೌಡ ರವರ 4 ವರ್ಷದ ಮಗು ರಾಜೇಶ ಇವನ ಬಲಗಾಲಿನ ತೊಡೆಗೆ ಭಾರೀ ಒಳನೋವು ಆಗಿದ್ದಲ್ಲದೇ, ಸಹನಾತಂದೆ ಗಣಪತಿ ಗೌಡ, ಪ್ರಾಯ-10 ವರ್ಷ, ಇವಳ ಬಲ ಕುತ್ತಿಗೆಗೆ ಸಾದಾ ಗಾಯ ಹಾಗೂ ಆರೋಪಿ 2 ನೇಯವನಿಗ ಸಹ ಸಾದಾಗಾಯನೋವು ಆಗಿರುವ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ಮಂಜುನಾಥ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಪೊಲೀಸ್ ಕಾನ್ಸಟೇಬಲ್ (ಎಪಿಸಿ-224), ಸಾ|| ಡಿ.ಎ.ಆರ್ ಕಾರವಾರ, ಹಾಲಿ ಸಾ|| ಡಿ.ಎಸ್.ಪಿ ಕಛೇರಿ, ಕಾರವಾರ ರವರು ದಿನಾಂಕ: 08-03-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ನಾಗಪ್ಪ ಭಟ್ಟ, 2]. ಶ್ರೀಮತಿ ಪಾರ್ವತಿ ಕೋಂ. ಮಂಜುನಾಥ ಭಟ್ಟ, 3]. ಗಂಗಾಧರ ತಂದೆ ಮಂಜುನಾಥ ಭಟ್ಟ, ಸಾ|| (ಎಲ್ಲರೂ) ಮಣ್ಮನೆ, ಇಡಗುಂದಿ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರ ಬಾಬ್ತು ಸಂಪೆಬೈಲ್ ಇಡಗುಂದಿ ಮಾಲ್ಕಿ ಜಮೀನಿನಲ್ಲಿ (ತೋಟದಲ್ಲಿ) ಧರೆಯ ಮಣ್ಣು ಕುಸಿಯಬಹುದೆಂದು ತಿಳಿದೂ ಸಹ ಯಾವುದೇ ಮುಂಜಾಗೃತಾ ಕ್ರಮ ತೆಗೆದುಕೊಳ್ಳದೇ ಕೃಷಿ ಕೆಲಸಕ್ಕೆ ಹಾಗೂ ಕಟ್ಟಡದ ಕೆಲಸಕ್ಕೆ ಬಂದ ಕೃಷಿ ಕಟ್ಟಡ ಕಾರ್ಮಿಕರಿಗೆ ಸುರಕ್ಷತೆಗಾಗಿ ಯಾವುದೇ ರೀತಿಯ ರಕ್ಷಣಾ ಸಲಕರಣೆಗಳನ್ನು ನೀಡದೇ ಮತ್ತು ಸರಿಯಾದ ಮಾರ್ಗದರ್ಶನ ನೀಡದೇ ನಿಷ್ಕಾಳಜಿತನದಿಂದ ಸದರಿ 7 ಜನ ಕೃಷಿ ಹಾಗೂ ಕಟ್ಟಡದ ಕೆಲಸ ಮಾಡುವ ಕಾರ್ಮಿಕರಿಗೆ ಮಣ್ಣು ತೆಗೆಯಲು ಒತ್ತಾಯ ಮಾಡಿ ಕೆಲಸ ಹಚ್ಚಿದ್ದು, ಸದರಿ ಕೃಷಿ ಕಾರ್ಮಿಕರು ದಿನಾಂಕ: 08-03-2021 ರಂದು ಸಂಜೆ 05-00 ಗಂಟೆಯ ಸುಮಾರಿಗೆ ಸಂಪೆಬೈಲ್ ಇಡಗುಂದಿ ಮಾಲ್ಕಿ ಜಮೀನಿನಲ್ಲಿ (ತೋಟದಲ್ಲಿ) ಕೃಷಿ ಹಾಗೂ ಕಟ್ಟಡಕ್ಕೆ ಸಾಗಿಸಲು ಧರೆಯ ಮಣ್ಣು ತೆಗೆಯುವಾಗ ಆಕಸ್ಮಾತ್ ಆಗಿ ಧರೆಯ ಮಣ್ಣು ಕುಸಿದು 1). ಕುಮಾರಿ: ಭಾಗಿ ತಂದೆ ಗಂಗು ಎಡಗೆ, ಪ್ರಾಯ-24 ವರ್ಷ, 2). ಶ್ರೀಮತಿ ಲಕ್ಷ್ಮೀ ಕೋಂ. ಗಂಗಾಧರ ಡೊಯಿಪೊಡೆ, ಪ್ರಾಯ-32 ವರ್ಷ, 3). ಕುಮಾರ: ಸಂತೋಷ ತಂದೆ ಸೋನು ಡೊಯಿಪೊಡೆ, ಪ್ರಾಯ-16 ವರ್ಷ, 4). ಕುಮಾರ: ಮಳ್ಳು ತಂದೆ ದಾಕ್ಲು ಡೊಯಿಪ್ರೆಡೆ, ಸಾ|| (ಎಲ್ಲರೂ) ಗಾಂವಠಾಣ, ಹೊಸಳ್ಳಿ, ತಾ: ಯಲ್ಲಾಪುರ ಇವರ ಮೇಲೆ ಧರೆಯ ಮಣ್ಣು ಕುಸಿದು ಬಿದ್ದು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದರಿಂದಲೇ ಅವರೆಲ್ಲರಿಗೂ ಗಾಯ ಪೆಟ್ಟು ಆಗಿ ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಧೂಳು ತಂದೆ ಅಪ್ಪಾಜಿ ಡೊಯಿಪೊಡೆ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗಾಂವಠಾಣ, ಹೊಸಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 08-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಓಬಲೇಶ್ವರ ತಂದೆ ನರಸಿಂಹ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ವೈ ಮಲ್ಲಾಪುರ, ತಾ&ಜಿ: ರಾಯಚೂರು (ಸುಜುಕಿ ಸ್ವಿಫ್ಟ್ ಡಿಸೈರ್ ಕಾರ್ ನಂ: ಕೆ.ಎ-53/ಸಿ-3264 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 08-03-2021 ರಂದು ಬೆಳಿಗ್ಗಿನ ಜಾವ 05-00 ಗಂಟೆಯ ಸುಮಾರಿಗೆ ತಾನು ಚಾಲನೆ ಮಾಡುತ್ತಿದ್ದ ಸುಜುಕಿ ಸ್ವಿಫ್ಟ್ ಡಿಸೈರ್ ಕಾರ್ ನಂ: ಕೆ.ಎ-53/ಸಿ-3264 ನೇದನ್ನು ರಾಮನಗರ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ಬರುತ್ತಾ ಹರೇಗಾಳಿ ಗ್ರಾಮದ ಬ್ರಿಡ್ಜ್ ಹತ್ತಿರ ಕಾರ್ ಚಾಲನೆಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕ ಇದ್ದ ಕಾಲುವೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿದ್ದ ಪಿರ್ಯಾದಿಗೆ ಎಡಗೈ ಮುಂಗೈ ಹತ್ತಿರ, ಈರೇಶ ತಂದೆ ತಿಮ್ಮಪ್ಪ ಈತನಿಗೆ ತಲೆಯ ಹಿಂಬದಿಗೆ ಹಾಗೂ ಮಲ್ಲೇಶ ತಂದೆ ರಾಮಚಂದ್ರ ಈತನಿಗೆ ಬಲಗಾಲಿನ ಮೊಣಕಾಲಿನ ಕೆಳಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ರಾಮು ತಂದೆ ಹನುಮಂತ ಈತನಿಗೆ ಬಲಗಾಲಿನ ಮೊಣಕಾಲ ಕೆಳಗೆ ಎಲುಬು ಮುರಿಯುವಂತೆ ಭಾರೀ ಸ್ವರೂಪದ ಗಾಯನೋವು ಪಡಿಸಿರುವುದಲ್ಲದೇ, ಸ್ವಯಂಕೃತ ಅಪಘಾತದಿಂದ ತನಗೂ ಸಹ ತುಟಿಯ ಭಾಗಕ್ಕೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಮುದ್ದಣ್ಣ, ಪ್ರಾಯ-21 ವರ್ಷ, ವೃತ್ತಿ-ಚಾಲಕ, ಸಾ|| ಮನೆ ನಂ: 1-69, ಉತನುರ, ಐಜಮಂಡಲ, ಗದ್ವಾಲ, ತೆಲಂಗಾಣ ರಾಜ್ಯ, ಹಾಲಿ ಸಾ|| ವೈ ಮಲ್ಲಾಪುರ, ತಾ&ಜಿ: ರಾಯಚೂರು ರವರು ದಿನಾಂಕ: 08-03-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 427, 447, 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುನೀಲ್ ತಂದೆ ಸುರೇಶ ತಾಂಬೀಟಕರ್, ಸಾ|| ಅರ್ಲವಾಡಾ, ತಾ: ಹಳಿಯಾಳ, 2]. ಗಂಗವ್ವಾ ಕೋಂ. ಶಿವಾಜಿ ತಾಂಬೀಟಕರ್, ಸಾ|| ಅರ್ಲವಾಡಾ, ತಾ: ಹಳಿಯಾಳ, 3]. ಶ್ರೀಮತಿ ತಿಪ್ಪವ್ವ ಕೋಂ. ನಾರಾಯಣ ಘಾಡಿ, ಸಾ|| ಹುನ್ಸವಾಡ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ಪಿರ್ಯಾದಿಯೊಂದಿಗೆ ಜಾಗದ ವಿಷಯದಲ್ಲಿ ವೈಮನಸ್ಸಿನಿಂದ ಇದ್ದವರು, ದಿನಾಂಕ: 07-03-2021 ರಂದು ಸಾಯಂಕಾಲ 16-30 ಗಂಟೆಯ ಸುಮಾರಿಗೆ ಆರೋಪಿ 1 ನೇಯವನು ಪಿರ್ಯಾದಿಯ ಕಂಪೌಂಡ್ ಗೋಡೆ ಒಡೆದು ಪಿರ್ಯಾದಿಯ ಕಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ, ಕಂಪೌಂಡ್ ಒಳಗಡೆ ಇರುವ ತೆಂಗಿನ ಕಾಯಿ ತೆಗೆಯಲು ಬಂದಿದ್ದು, ಅದಕ್ಕೆ ಪಿರ್ಯಾದಿಯು ‘ಇದು ನಮ್ಮ ಜಾಗ, ನೀನು ಕಂಪೌಂಡ್ ಏಕೆ ಒಡೆದೆ?’ ಎಂದು ಕೇಳಿದ್ದಕ್ಕೆ, ಅವನು ಪಿರ್ಯಾದಿಗೆ ‘ರಂಡೆ, ಈ ಜಾಗವು ನಮ್ಮದೇ ತೆಂಗಿನ ಗಿಡಗಳು ನಮ್ಮವೇ’ ಎಂದು ಹೇಳಿ, ಒಂದು ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯ ಹಣೆಯ ಬಲಗಡೆಗೆ ಹೊಡೆದಿದ್ದು, ಆರೋಪಿ 1 ನೇಯವನ ಸಂಬಂಧಿಗಳಾದ ಆರೋಪಿ 2 ಮತ್ತು 3 ನೇಯವರು ಆರೋಪಿ 1 ನೇಯವನ ಪರ ವಹಿಸಿಕೊಂಡು ಬಂದು ಪಿರ್ಯಾದಿಗೆ ಸಂಬಂಧಿಸಿದ ಜಾಗದೊಳಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದು, ಕೈಯಿಂದ ಹೊಡೆದಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮ ದೇಮಕ್ಕಾ ಕೋಂ. ಕೀರಪ್ಪಾ @ ಕೀರುಣಿ ಬಿಡಕರ, ಪ್ರಾಯ-75 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅರ್ಲವಾಡಾ, ತಾ: ಹಳಿಯಾಳ ರವರು ದಿನಾಂಕ: 08-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-03-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಜಾನನ ತಂದೆ ಜಟ್ಟಿ ದೇಶಭಂಡಾರಿ, ಪ್ರಾಯ-63 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಉಳ್ಳೂರು ಮಠ, ಸಂತೆಗುಳಿ, ತಾ: ಕುಮಟಾ. ಪಿರ್ಯಾದಿಯ ಚಿಕ್ಕಪ್ಪನಾದ ಈತನು ದಿನಾಂಕ: 08-03-2021 ರಂದು ಬೆಳಿಗ್ಗೆ 08-45 ಗಂಟೆಗೆ ತಮ್ಮ ತೋಟದಲ್ಲಿರುವ ಅಡಿಕೆ ಮರವನ್ನು ಹತ್ತಿ ಅಡಿಕೆಯನ್ನು ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಕೈ ಕಾಲು ಜಾರಿ ಅಡಿಕೆ ಮರದಿಂದ ಸುಮಾರು 30 ಫೂಟ್ ಎತ್ತರದಿಂದ ನೆಲಕ್ಕೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಮಹಾಬಲೇಶ್ವರ ದೇಶಭಂಡಾರಿ, ಪ್ರಾಯ-38 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಉಳ್ಳೂರು ಮಠ, ಸಂತೆಗುಳಿ, ತಾ: ಕುಮಟಾ ರವರು ದಿನಾಂಕ: 08-03-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಚಂದ್ರಶೇಖರ ತಂದೆ ನಾರಾಯಣ ಭಟ್, ಪ್ರಾಯ-68 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹತಾಷಿ ಮನೆ, ಕೋಟಖಂಡ, ತಾ: ಭಟ್ಕಳ. ಇವರು ಯಾವುದೋ ವಿಷಯನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡವರು, ದಿನಾಂಕ: 08-03-2021 ರಂದು ಬೆಳಗ್ಗೆ 07-45 ಗಂಟೆಯಿಂದ 09-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯ ಮರದ ಜಂತಿಗೆ ನೈಲಾನ್ ಹಗ್ಗ ಕಟ್ಟಿಕೊಂಡು ಅದೇ ಹಗ್ಗವನ್ನು ಉರುಳು ಮಾಡಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಮಣ್ಯ ತಂದೆ ಶ್ರೀನಿವಾಸ ಹೆಬ್ಬಾರ, ಪ್ರಾಯ-29 ವರ್ಷ, ವೃತ್ತಿ-ಶಿವಶಾಂತಿಕಾ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ  ಕೆಲಸ, ಸಾ|| ಜನ್ಮನೆ, ಕಿತ್ರೆ, ತಾ: ಭಟ್ಕಳ ರವರು ದಿನಾಂಕ: 08-03-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 09-03-2021 04:39 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080