ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-05-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನೀಲ ತಂದೆ ಪ್ರಭಾಕರ ರೇವಣಕರ, ಪ್ರಾಯ-58 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರಿ, ಸಾ|| ಶಂಕರ ಮಠದ ಹತ್ತಿರ, ಕಾರವಾರ. ಈತನು ದೇಶಾದ್ಯಂತ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದ್ದು, ಕೋವಿಡ್-19 2 ನೇ ಅಲೆ ಹೆಚ್ಚಾಗಿರುವುದರಿಂದಾಗಿ ಕಾಯಿಲೆ ನಿಯಂತ್ರಣಕ್ಕಾಗಿ ಮಾನ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಜಿಲ್ಲಾದ್ಯಂತ ಕರ್ಫ್ಯೂ ಘೋಷಣೆ ಮಾಡಿ ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯವರೆಗೆ ಜನರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲು ಅನುಮತಿಸಿದ್ದು, 10-00 ಗಂಟೆಯ ನಂತರ ಸಂಪೂರ್ಣ ಕರ್ಫ್ಯೂ ಘೋಷಣೆ ಮಾಡಿ ಅಗತ್ಯ ಕೆಲಸದ ಹೊರತು ಯಾರೂ ಸಾರ್ವಜನಿಕವಾಗಿ ಓಡಾಡದಂತೆ ಹಾಗೂ ಎಲ್ಲಾ ರೀತಿಯ ಮಳಿಗೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದು, ಕರ್ಫ್ಯೂ ಆದೇಶ ಇದ್ದಾಗಲೂ ಸಹ ನಮೂದಿತ ಆರೋಪಿತನು ದಿನಾಂಕ: 08-05-2021 ರಂದು 10-50 ಗಂಟೆಯವರೆಗೆ ಕಾರವಾರದ ಬ್ರಹ್ಮಕಟ್ಟಾದ ಬಳಿ ಇರುವ ತನ್ನ ಬಾಬ್ತು ವಿಜಯಾ ಸ್ಟೋರ್ ಅಂತಾ ಹೆಸರಿನ ಅಂಗಡಿಯನ್ನು ತೆರೆದು ಜನರು ಓಡಾಡುವಂತೆ ಮಾಡಿ ಸಾರ್ವಜನಿಕವಾಗಿ ಸಾಂಕ್ರಾಮಿಕ ಕೋವಿಡ್-19 ಕೊರೋನಾ ಕಾಯಿಲೆ ಇತರರಿಗೆ ಹರಡುವ ಸಂಭವ ಇದ್ದರೂ ಸಹ ನಿರ್ಲಕ್ಷ್ಯತನದಿಂದ ತನ್ನ ಲಾಭದ ಸಲುವಾಗಿ ಇತರರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿರುವಂತೆ ಮಾಸ್ಕ್ ವಗೈರೆ ಧರಿಸದೇ, ಅಂಗಡಿಯನ್ನು ತೆರೆದು ರೋಗ ನಿರ್ಬಂಧ ನಿಯಮದ ಆದೇಶವನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 08-05-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣಾನಂದ ತಂದೆ ಶಾಂತಾರಾಮ ಕುಡ್ತಲಕರ, ಪ್ರಾಯ-47 ವರ್ಷ, ವೃತ್ತಿ-ಕಿರಾಣಿ ವ್ಯಾಪಾರಿ, ಸಾ|| ಸಾವಿತ್ರಿ ನಿವಾಸ, ಶಂಕರ ಮಠದ ಹತ್ತಿರ, ಕಾರವಾರ. ಈತನು ದೇಶಾದ್ಯಂತ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುತ್ತಿದ್ದು, ಕೋವಿಡ್-19 ಖಾಯಿಲೆಯ 2 ನೇ ಅಲೆ ಹೆಚ್ಚಾಗಿರುವುದರಿಂದಾಗಿ ಖಾಯಿಲೆ ನಿಯಂತ್ರಣಕ್ಕಾಗಿ ಮಾನ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಜಿಲ್ಲಾದ್ಯಂತ ಕರ್ಫ್ಯೂ ಘೋಷಣೆ ಮಾಡಿ ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯವರೆಗೆ ಜನರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲು ಅನುಮತಿಸಿದ್ದು, ಸಮಯ 10-00 ಗಂಟೆಯ ನಂತರ ಸಂಪೂರ್ಣ ಕರ್ಫ್ಯೂ ಘೋಷಣೆ ಮಾಡಿ ಅಗತ್ಯ ಕೆಲಸದ ಹೊರತು ಯಾರೂ ಸಾರ್ವಜನಿಕವಾಗಿ ಓಡಾಡದಂತೆ ಹಾಗೂ ಎಲ್ಲಾ ರೀತಿಯ ಮಳಿಗೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದು, ಕರ್ಫ್ಯೂ ಆದೇಶ ಇದ್ದಾಗಲೂ ಸಹ ಆರೋಪಿತನು ದಿನಾಂಕ: 08-05-2021 ರಂದು 10-50 ಗಂಟೆಯವರೆಗೆ ಕಾರವಾರದ ಬ್ರಹ್ಮಕಟ್ಟಾದ ಬಳಿ ಇರುವ ತನ್ನ ಬಾಬ್ತು ಶಾಂತಾ ಸ್ಟೋರ್ ಅಂತ ಹೆಸರಿನ ಅಂಗಡಿಯನ್ನು ತೆರೆದು ಜನರು ಓಡಾಡುವಂತೆ ಮಾಡಿ ಸಾರ್ವಜನಿಕವಾಗಿ ಸಾಂಕ್ರಾಮಿಕ ಕೋವಿಡ್-19 ಕೊರೋನಾ ಖಾಯಿಲೆ ಇತರರಿಗೆ ಹರಡುವ ಸಂಭವ ಇದ್ದರೂ ಸಹ ತನ್ನ ನಿರ್ಲಕ್ಷ್ಯತನದಿಂದ ತನ್ನ ಲಾಭದ ಸಲುವಾಗಿ ಇತರರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿರುವಂತೆ ಮಾಸ್ಕ ವಗೈರೆ ಧರಿಸದೇ ಅಂಗಡಿಯನ್ನು ತೆರೆದು ರೋಗ ನಿರೋಧಕ ನಿರ್ಬಂಧ ನಿಯಮದ ಆದೇಶವನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ವರು ದಿನಾಂಕ: 08-05-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 269, 271 ಸಹಿತ 34 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಮರ ರಾಜಾರಾಮ ನಾಯ್ಕ, 2]. ರಾಮನಾಥ ಮೆಹತಾ, 3]. ನಾಗರಾಜ ಮೆಹತಾ, ಸಾ|| (ಎಲ್ಲರೂ) ಗಾಬಿತವಾಡಾ, ಮಾಜಾಳಿ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 08-05-2021 ರಂದು ಮಧ್ಯರಾತ್ರಿ 00-05 ಗಂಟೆಗೆ ಮಾಜಾಳಿಯ ಸಿಮೆಂಟ್ ಫ್ಯಾಕ್ಟರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಾರಕ ರೋಗ ಕೋವಿಡ್-19 ನಿಯಂತ್ರಿಸುವ ಸಲುವಾಗಿ ಲಾಕಡೌನ್ ಆದೇಶ ಮಾಡಿದ್ದು, ಅದು ಜಾರಿಯಲ್ಲಿದ್ದರೂ ಸಹ ಅದನ್ನು ನಿರ್ಲಕ್ಷಿಸಿ ಮನೆಯಿಂದ ಹೊರಗೆ ಬಂದು ಯಾವುದೇ ಪಾಸ್ ಪರ್ಮಿಟ್ ಇಲ್ಲದೇ ಸುಮಾರು 26,100/- ರೂಪಾಯಿ ಬೆಲೆಬಾಳುವ ಗೋವಾ ರಾಜ್ಯ ತಯಾರಿಕೆಯ ಒಟ್ಟೂ 78 ಸರಾಯಿ ತುಂಬಿದ ಬಾಟಲಿ ಹಾಗೂ 36 ಬಿಯರ್ ತುಂಬಿದ ಟಿನ್ ಗಳನ್ನು ಮೂಟೆಗಳಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತು ಸಾಗಾಟ ಮಾಡುತ್ತಿದ್ದಾಗ ಆರೋಪಿ 1 ನೇಯವನು ಸರಾಯಿ ಸಮೇತ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ಹಾಗೂ 3 ನೇಯವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅರಣ್ಯದಲ್ಲಿ ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ, ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 08-05-2021 ರಂದು 01-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರತೀಕ ತಂದೆ ಜಗದೀಶ ಶೇಟ್, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಡಿ-1, 5/5, ಕೈಗಾ ಟೌನ್ ಶಿಫ್, ಮಲ್ಲಾಪುರ, ಕಾರವಾರ. ಈತನು ದೇಶಾದಂತ್ಯ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುತ್ತಿದ್ದು, ಕೋವಿಡ್-19 ಖಾಯಿಲೆಯ 2 ನೇ ಅಲೆ ಹೆಚ್ಚಾಗಿರುವುದರಿಂದ ಖಾಯಿಲೆಯ ನಿಯಂತ್ರಣಕ್ಕಾಗಿ ಮಾನ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಜಿಲ್ಲಾದ್ಯಂತ ಕರ್ಫ್ಯೂ ಘೋಷಣೆ ಮಾಡಿ ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯವರೆಗೆ ಜನರಿಗೆ ಅನೂಕೂಲವಾಗುವಂತೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಅನುಮತಿಸಿದ್ದು, ನಂತರ ಕರ್ಫ್ಯೂ ಘೋಷಣೆ ಮಾಡಿದ್ದರೂ ಸಹ ಆರೋಪಿತನು ದಿನಾಂಕ: 08-05-2021 ರಂದು 18-15 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-19/ಇ.ಕ್ಯೂ-4811 ನೇದನ್ನು ಚಲಾಯಿಸಿಕೊಂಡು ಕುರ್ನಿಪೇಟೆ ಕಡೆಯಿಂದ ಮಲ್ಲಾಪುರ ಕಡೆಗೆ ಹೋಗಲು ಬಂದವನಿಗೆ ಲಾಕಡೌನ್ ಆದೇಶ ಇರುವ ಬಗ್ಗೆ ತಿಳಿಸಿ ಅವನಿಗೆ ಮನೆಗೆ ಹೋಗುವಂತೆ ಎಚ್ಚರಿಕೆ ನೀಡಿ ಕಳುಹಿದ್ದರೂ ಸಹ ಅವನು ಪುನಃ 18-45 ಗಂಟೆಯ ಸಮಯಕ್ಕೆ ಸದ್ರಿ ಮೋಟಾರ್ ಸೈಕಲ್ ಮೇಲೆ ಮರಳಿ ಹಿಂದೂವಾಡಾ ಕಡೆಯಿಂದ ಕುರ್ನಿಪೇಟೆ ಕಡೆಗೆ ಹೋಗಲು ಮಾಸ್ಕ್ ಧರಿಸದೇ ತನಗೆ ಅಥವಾ ಇತರರಿಗೆ ಸಾಂಕ್ರಾಮಿಕ ಕೋವಿಡ್-19 ಕೊರೋನಾ ಕಾಯಿಲೆ ಹರುಡುವ ಸಂಭವ ಇದ್ದರೂ ಸಹ  ತನ್ನ ಮೋಟಾರ್ ಸೈಕಲ್ ಮೇಲಾಗಿ ತಿರುಗಾಡುತ್ತಾ ಸರಕಾರ ಹೊರಡಿಸಿರುವ ಕೊರೋನಾ ಕರ್ಫ್ಯೂ ಜಾರಿ ಆದೇಶವನ್ನು ಸಕಾರಣವಿಲ್ಲದೇ ಉಲ್ಲಂಘಿಸಿ, ಮಾನವೀಯ ಜೀವಕ್ಕೆ ಹಾನಿಯುಂಟು ಮಾಡುವ ನಿರ್ಲಕ್ಷ್ಯತನ ತೋರಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಶೇಖರ ಬಿ. ಸಾಗನೂರು, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 08-05-2021 ರಂದು 19-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಅನುಪಮಾ ಗಂಡ ಯೋಗಾನಂದ ಪವಾಡಶೆಟ್ಟಿ, ಪ್ರಾಯ-36 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಪ್ಲಾಟ್ ನಂ: 09, ವಿಶ್ವನಾಥ ದೇವಸ್ಥಾನದ ಹತ್ತಿರ, ಅಧ್ಯಾಪಕ ನಗರ, ಹುಬ್ಬಳ್ಳಿ, ಧಾರವಾಡ (ಕಾರ್ ನಂ: ಕೆ.ಎ63/ಎಮ್-5551 ನೇದರ ಚಾಲಕಿ). ಇವಳು ದಿನಾಂಕ: 18-04-2021 ರಂದು 19-15 ಗಂಟೆಗೆ ತನ್ನ ಕಾರ್ ನಂ: ಕೆ.ಎ63/ಎಮ್-5551 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಂಕೋಲಾ ತಾಲೂಕಿನ ಮೂಲೆಮನೆ ಗ್ರಾಮದ ಹತ್ತಿರ ತನ್ನ ಎದುರಿಗೆ ಬಂದ ಲಾರಿಯನ್ನು ತಪ್ಪಿಸಲು ಹೋಗಿ ಕಾರನ್ನು ರಸ್ತೆಯ ಪಕ್ಕದಲ್ಲಿ ಇರುವ ಕಚ್ಚಾ ರಸ್ತೆಯಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾಳೆ. ಈ ಅಪಘಾತದಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಮಾರ: ಶಿವ ತಂದೆ ಯೋಗಾನಂದ ಪವಾಡಶೆಟ್ಟಿ ಇವನಿಗೆ ಹಾಗೂ ಆರೋಪಿತಳು ತನಗೂ ಕೂಡಾ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯೋಗಾನಂದ ತಂದೆ ಈಶ್ವರಪ್ಪ ಪವಾಡಶೆಟ್ಟಿ, ಪ್ರಾಯ-41 ವರ್ಷ, ವೃತ್ತಿ-ಬಿಸಿನೆಸ್, ಸಾ|| ಪ್ಲಾಟ್ ನಂ: 09, ವಿಶ್ವನಾಥ ದೇವಸ್ಥಾನದ ಹತ್ತಿರ, ಅಧ್ಯಾಪಕ ನಗರ, ಹುಬ್ಬಳ್ಳಿ, ಧಾರವಾಡ ರವರು ದಿನಾಂಕ: 08-05-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 269, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ರಿಜ್ವಾನ್ ತಂದೆ ಅಬ್ದುಲ್ ಜಲೀಲ್, ಪ್ರಾಯ-23 ವರ್ಷ, ಸಾ|| ಗಂಗಾವಳಿ, ಗೋಕರ್ಣ, ತಾ: ಕುಮಟಾ. ಈತನು ಕೋವಿಡ್-19 ವೈರಸ್ ಪ್ರಸರಣವನ್ನು ತಡೆಟಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ಮಾಡಿರುವ ಕೋವಿಡ್ ಕರ್ಫ್ಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೋವಿಡ್-19 ಕೊರೋನಾ ಸೋಂಕು ಸಾರ್ವಜನಿಕರಿಗೆ ಹರಡುವ ಬಗ್ಗೆ ತಿಳಿದಿದ್ದರೂ ಸಹ ದಿನಾಂಕ: 08-05-2021 ರಂದು 12-20 ಗಂಟೆಯ ಸುಮಾರಿಗೆ ಗೋಕರ್ಣದ ಗಂಗಾವಳಿಯ ಮಸೀದಿ ಹತ್ತಿರ ಇರುವ ತನ್ನ ಎ.ಜೆ ಫ್ರೂಟ್ಸ್ ಮತ್ತು ವೆಜಿಟೇಬಲ್ ಎಂಬ ಹೆಸರಿನ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ಮಾಡಿ ಕೋವಿಡ್-19 ವೈರಾಣು ಹರಡುವಿಕೆಯಲ್ಲಿ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನಕುಮಾರ ಎಸ್. ನಾಯ್ಕ, ಪಿ.ಎಸ್.ಐ, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 08-05-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟ್ರಮಣ ತಂದೆ ಈರಪ್ಪ @ ವೀರಪ್ಪ ನಾಯ್ಕ, ಪ್ರಾಯ-53 ವರ್ಷ, ಸಾ|| ಕೆ.ಬಿ ರೋಡ್, ಚೌಥನಿ, ತಾ: ಭಟ್ಕಳ (ಶಾಲಾ ಬಸ್ ನಂ: ಕೆ.ಎ-47/9237  ನೇದರ ಸವಾರ). ಈತನು ದಿನಾಂಕ: 21-06-2019 ರಂದು ಬೆಳಿಗ್ಗೆ 08-30 ಗಂಟೆಯ ಸಮಯಕ್ಕೆ ತನ್ನ ಶಾಲಾ ಬಸ್ ನಂ: ಕೆ.ಎ-47/9237 ನೇದನ್ನು ಸರ್ಪನಕಟ್ಟಾ ಕಡೆಯಿಂದ ಕೋಣಾರ ಕುಂಟವಾಣಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಭಟ್ಕಳದ ಬೀಳೂರುಮನೆ ಕ್ರಾಸ್ ಸಮೀಪ ಅದರ ವೇಗ ನಿಯಂತ್ರಿಸದೇ ಪಿರ್ಯಾದಿಯವರು ಕುಂಟವಾಣಿ ಕಡೆಯಿಂದ ಸರ್ಪನಕಟ್ಟಾ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-4879 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಲೆಗೆ ಮತ್ತು ಎಡಗಾಲಿಗೆ ಭಾರೀ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮೀನಾರಾಯಣ ತಂದೆ ಶ್ರೀನಿವಾಸ ಭಂಡಾರಕರ, ಪ್ರಾಯ-34 ವರ್ಷ, ಸಾ|| ಕೋಣಾರ, ತಾ: ಭಟ್ಕಳ ರವರು ದಿನಾಂಕ: 08-05-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 269, 270 ಐಪಿಸಿ ಹಾಗೂ ಕಲಂ: 51 (b) The Disaster Management Act–2005 ಮತ್ತು ಕಲಂ: 5(1) The Karnataka Epidemic Diseasis Act-2020 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವಾಜಿ ತಂದೆ ಗಣೇಶ ಬಾಮನವಾಡಕರ, ಪ್ರಾಯ-51 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಡಾಕಾನಶಿರಡಾ, ತಾ: ಹಳಿಯಾಳ, 2]. ಶ್ರೀಮತಿ ಲಕ್ಷ್ಮೀ ಶಿವಾಜಿ ಬಾಮನವಾಡಕರ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಡಾಕಾನಶಿರಡಾ, ತಾ: ಹಳಿಯಾಳ, 3]. ಮಂಜುನಾಥ ತಂದೆ ಶಿವಾಜಿ ಬಾಮನವಾಡಕರ, ಪ್ರಾಯ-25 ವರ್ಷ, ವೃತ್ತಿ-ಸೈನಿಕ, ಸಾ|| ಬಡಾಕಾನಶಿರಡಾ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ದೇಶಾದಂತ್ಯ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುವ ಸಂಭವ ಇದ್ದ ಬಗ್ಗೆ ಕರ್ನಾಟಕ ಸರಕಾರ ರಾಜ್ಯದ್ಯಾದಂತ ದಿನಾಂಕ: 27-04-2021 ರಂದು ರಾತ್ರಿ 21-00 ಗಂಟೆಗೆ ಲಾಕಡೌನ್ ಆದೇಶ ಹೊರಡಿಸಿದ್ದ ಬಗ್ಗೆ ಗೊತ್ತಿದ್ದರೂ ಸಹ ದಿನಾಂಕ: 07-05-2021 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ವಿಧಿ ವಿರುದ್ಧವಾಗಿ, ನಿರ್ಲಕ್ಷ್ಯತನದಿಂದ ಹಾಗೂ ಉದ್ದೇಶಪೂರ್ವಕವಾಗಿ ದಾಂಡೇಲಿಯ ಬಡಾಕಾನಶಿರಡಾ ಗ್ರಾಮದ ವರನ ಸ್ವಗೃಹದ ಮುಂದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಒಬ್ಬರ ಪಕ್ಕದಲ್ಲಿ ಒಬ್ಬರು ನಿಂತು ಮುಖಕ್ಕೆ ಮಾಸ್ಕ್ ಧರಿಸದೇ ಮಹಾಮಾರಿ ಕೊರೋನಾ ರೋಗದ ಸೋಂಕು ಹರಡಿ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ 50 ಕ್ಕಿಂತ ಹೆಚ್ಚಿನ ಜನರಿಗೆ ಡ್ಯಾನ್ಸ್ ಮಾಡಲು ಅವಕಾಶ ಮಾಡಿಕೊಟ್ಟ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಫಕ್ಕೀರಪ್ಪ ಮಡಿವಾಳ, ಪ್ರಾಯ-42 ವರ್ಷ, ವೃತ್ತಿ-ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಸಾ|| ಗ್ರಾಮ ಪಂಚಾಯತ, ಬಡಾಕಾನಶಿರಡಾ, ದಾಂಡೇಲಿ ರವರು ದಿನಾಂಕ: 08-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 269, 270 ಐಪಿಸಿ ಹಾಗೂ ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಫಕ್ಕೀರೇಶ ತಂದೆ ಮಲ್ಲಪ್ಪ ದೊಡಮನಿ, ಪ್ರಾಯ-28 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಇಂದಿರಾ ನಗರ, ಕೊಪ್ಪ, ತಾ: ಮುಂಡಗೋಡ. ಈತನು ದಿನಾಂಕ: 08-05-2021 ರಂದು 15-30 ಗಂಟೆಗೆ ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಇಂದಿರಾ ನಗರದ ತನ್ನ ಅಂಗಡಿಯಲ್ಲಿ (ಕೋವಿಡ್-19) ಕೊರೋನಾ ರೋಗ ಹರಡುವ ಸಂಭವ ಇದ್ದ ಬಗ್ಗೆ ಲಾಕಡೌನ್ ಆದೇಶ ಇದ್ದ ಬಗ್ಗೆ ಗೊತ್ತಿದ್ದರೂ ಸಹ, ವಿಧಿ ವಿರುದ್ಧವಾಗಿ ನಿರ್ಲಕ್ಷ್ಯತನದಿಂದ ಹಾಗೂ ಉದ್ದೇಶಪೂರ್ವಕವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಮಹಾಮಾರಿ ಕೊರೋನಾ ರೋಗದ ಸೋಂಕು ಹರಡಿ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮದ್ಯ ಸೇವಿಸಲು ಅನುವು ಮಾಡಿಕೊಟ್ಟು, 90 ML ಅಳತೆಯ Original Choice ಅಂತಾ ಬರೆದ ಪೌಚ್ ಗಳು-09 (ಒಂದಕ್ಕೆ 35/- ರೂಪಾಯಿ) ಇವುಗಳ ಒಟ್ಟು ಅ||ಕಿ|| 315/- ರೂಪಾಯಿ ಹಾಗೂ 90 ML ಅಳತೆಯ Original Choice ಅಂತಾ ಬರೆದ ಖಾಲಿ ಪೌಚ್ ಗಳು-02, ಪ್ಲಾಸ್ಟಿಕ್ ಗ್ಲಾಸ್-02 ಮತ್ತು ಒಂದು ಲೀಟರ್ ನ ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲಿ-02. ಈ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭುಗೌಡ ಡಿ. ಕೆ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 08-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-05-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 10-05-2021 01:16 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080