ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 08-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 318 ಐಪಿಸಿ ನೇದ್ದರ ವಿವರ...... ನಮೂದಿತೆ ಆರೋಪಿತಳಾದ ಯಾರೋ ಮಹಿಳೆಯು ಅಪರಿಚಿತಳಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತೆ ಆರೋಪಿತಳು ದಿನಾಂಕ: 08-11-2021 ರಂದು 19-00 ಗಂಟೆಯ ಪೂರ್ವದಲ್ಲಿ ತಾನು ಜನ್ಮ ನೀಡಿದ ಹೆಣ್ಣು ನವಜಾತ ಶಿಶುವನ್ನು ಕಾರವಾರ ಬಸ್ ನಿಲ್ದಾಣದ ಹತ್ತಿರದ ಸುಲಭ್ ಶೌಚಾಲಯದ ಶೌಚಾಲಯ ಕೋಣೆಯಲ್ಲಿ ಬಿಟ್ಟು ಹೋಗಿದ್ದು, ಈ ಕುರಿತು ಕಾನೂನಿನಂತೆ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ಉಗ್ರ ಮೋಹನ ಜಾ ತಂದೆ ರಾಜ ಕಾಂಥಾ ಜಾ, ಪ್ರಾಯ-59 ವರ್ಷ, ವೃತ್ತಿ-ಕಾರವಾರ ಸುಲಭ್ ಶೌಚಾಲಯ ಇನಚಾರ್ಜ್, ಸಾ|| ಖಜರಿ, ತಾ: ಮದೇಪುರ, ಜಿ: ಮಧುವನೆ, ಬಿಹಾರ ರಾಜ್ಯ, ಹಾಲಿ ಸಾ|| ಸುಲಭ್ ಇಂಟರನ್ಯಾಷನಲ್, 7ನೇ ಟೆಂಪಲ್ ಸ್ಟ್ರೀಟ್, 15ನೇ ಕ್ರಾಸ್ ಮಲ್ಲೇಶ್ವರಂ, ಬೆಂಗಳೂರು ಉತ್ತರ, ಬೆಂಗಳೂರು ರವರು ದಿನಾಂಕ: 08-11-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 166/2021, ಕಲಂ: 427, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಮಂಗಲಾ ಗಜಾನನ ನಾಯ್ಕ, ಪ್ರಾಯ-65 ವರ್ಷ, 2]. ವರ್ಧರಾಜ ತಂದೆ ಗಜಾನನ ನಾಯ್ಕ, 3]. ಗಜಾನನ ಜಾನು ನಾಯ್ಕ, ಸಾ|| (ಎಲ್ಲರೂ) ಮಾದವನಗರ, ಕಂತ್ರಿ, ತಾ: ಅಂಕೋಲಾ. ಈ ನಮೂದಿತ ಆರೋಪಿತರಿಗೂ ಮತ್ತು ಪಿರ್ಯಾದುದಾರರಿಗೂ ಆಸ್ತಿಯ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಈ ವಿಚಾರವಾಗಿ ಆರೋಪಿತರೂ ಪಿರ್ಯಾದಿ ಮತ್ತು ಅವರ ತಮ್ಮ ಸುಹಾಸನಿಗೆ ಮೊದಲಿನಿಂದಲೂ ತೊಂದರೆ ಕೊಡುತ್ತಾ ಬಂದಿದ್ದು, ಆರೋಪಿ 3 ನೇಯವನು ಪಿರ್ಯಾದಿಯವರಿಗೆ ‘ಜಾಗದ ಸರ್ವೇ ಮಾಡಿ ಮನೆ ಇಬ್ಭಾಗ ಮಾಡಿಸುತ್ತೇನೆ. ಮನೆ ಖಾಲಿ ಮಾಡಿಸಿ ಉರಿನಿಂದ ಓಡಿಸುತ್ತೇನೆ’ ಎನ್ನುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ಆರೋಪಿ 2 ನೇಯವನು ಪೋನ್ ಮಾಡಿ ಜೀವದ ಬೆದರಿಕೆ ಹಾಕಿ ಅವಾಚ್ಯವಾಗಿ ಬೈಯ್ದಿದ್ದಲ್ಲದೇ, ದಿನಾಂಕ: 09-10-2021 ರಂದು ರಾತ್ರಿ 22-00 ಗಂಟೆಗೆ ಆರೋಪಿ 2 ನೇಯವನು ಪಿರ್ಯಾದಿಯವರ ಮನೆಯ ಟಿ.ವಿ ಎಂಟಿನಾ ಮುರಿದು ಹಾಕಿ, ಸೊಳ್ಳೆಯ ಪರದೆಯನ್ನು ಹರಿದು ಹಾಕಿದ್ದಲ್ಲದೇ, ಪಿರ್ಯಾದಿಯವರ ತಮ್ಮನಾದ ಸುಹಾಸನಿಗೆ ‘ಅಂಕೋಲಾಕ್ಕೆ ಬಂದರೆ ಕೊಲೆ ಮಾಡುತ್ತೇನೆ’ ಎನ್ನುವುದಾಗಿ ಬೆದರಿಕೆ ಹಾಕಿದ್ದು, ಅಲ್ಲದೇ ಪಿರ್ಯಾದಿಯವರಿಗೂ ಕೊಲೆಯ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಕುಮಾರಿ: ಪುಷ್ಪಲತಾ ತಂದೆ ವಿಷ್ಣು ಶಾನಭಾಗ, ಪ್ರಾಯ-70 ವರ್ಷ, ವೃತ್ತಿ-ನಿವೃತ ನೌಕರರು, ಸಾ|| ಮಾಧವ ನಗರ, ಕಂತ್ರಿ, ತಾ: ಅಂಕೋಲಾ ರವರು ದಿನಾಂಕ: 08-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 167/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮದಾಸ ತಂದೆ ರಾಯಾ ಪೆಡ್ನೇಕರ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಬ್ಬುಳ, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-6647 ನೇದರ ಸವಾರ). ಈತನು ದಿನಾಂಕ: 08-11-2021 ರಂದು 17-30 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-6647 ನೇದನ್ನು ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಸ್ತೆಯ ಮೇಲೆ ಗುಳ್ಳಾಪುರದ ಕಡೆಯಿಂದ ಹೆಬ್ಬುಳದ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಮೇಲೆ ಅಪಘಾತ ಪಡಿಸಿ, ಹಿಂಬದಿಯ ಸವಾರರಾದ ಪಿರ್ಯಾದಿಯವರಿಗೆ ಎಡಗೈ ಮತ್ತು ಎಡಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಕೈ ಕಾಲಿಗೆ ಸಾದಾ ಸ್ವರೂಪದ ಹಾಗೂ ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಾ ತಂದೆ ಕುಪ್ಪಾ ಗೌಡ, ಪ್ರಾಯ-47 ವರ್ಷ, ವೃತ್ತಿ-ಸುಂಕಸಾಳ ಪಂಚಾಯತಿಯಲ್ಲಿ ಕೆಲಸ, ಸಾ|| ಹೆಬ್ಬುಳ, ತಾ: ಅಂಕೋಲಾ ರವರು ದಿನಾಂಕ: 08-11-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 168/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಅಂಜನಿ ತಂದೆ ಮಹಾದೇವ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಅಂಕೋಲಾ ಕರ್ನಾಟಕ ಬ್ಯಾಂಕಿನಲ್ಲಿ ಖಾಸಗಿ ಕೆಲಸ, ಸಾ|| ಬೊಬ್ರುವಾಡ, ತಾ: ಅಂಕೋಲಾ. ಸುದ್ದಿದಾರರ ತಂಗಿಯಾದ ಇವಳು ಅಂಕೋಲಾದ ಬಂಡಿಕಟ್ಟೆಯಲ್ಲಿರುವ ಕರ್ನಾಟಕ ಬ್ಯಾಂಕಿನಲ್ಲಿ ಖಾಸಗಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದವಳಿಗೆ, ದಿನಾಂಕ: 08-11-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಸುದ್ದಿದಾರಳ ತಂದೆ ಶ್ರೀ ಮಹಾದೇವ ನಾಯ್ಕ ರವರು ಬ್ಯಾಂಕಿನ ಹತ್ತಿರ ಬಿಟ್ಟು ಹೋಗಿದ್ದು, ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ಮನೆಗೆ ಊಟಕ್ಕೆ ಬರದೇ ಇದ್ದುದ್ದನ್ನು ಗಮನಿಸಿ, ಸುದ್ದಿದಾರಳ ತಂದೆ ಅಂಜನಿಯ ಮೊಬೈಲ್ ನಂ: 82173XXXXX ನೇದಕ್ಕೆ ಫೋನ್ ಮಾಡಿದಾಗ, ಅವಳ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಸುದ್ದಿದಾರಳು ಮತ್ತು ಅವರ ತಂದೆ ಬ್ಯಾಂಕಿಗೆ ಹೋಗಿ ವಿಚಾರಿಸಿದ ವೇಳೆ ಅಂಜನಿ ಇವಳು ಬೆಳಿಗ್ಗೆ 11-00 ಗಂಟೆಗೆ ಬ್ಯಾಂಕಿನಿಂದ ಹೋದ ಬಗ್ಗೆ ತಿಳಿಸಿದ್ದು, ನಂತರ ಅಂಜನಿಗೆ ಸಂಬಂಧಿಕರಲ್ಲಿ ಮತ್ತು ಅವಳ ಸ್ನೇಹಿತರಲ್ಲಿ ವಿಚಾರಿಸಿದ ವೇಳೆ ಅಂಜನಿಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಕಾರಣ ಕಾಣೆಯಾದ ನನ್ನ ತಂಗಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಕುಮಾರಿ: ಅಶ್ವಿನಿ ತಂದೆ ಮಹಾದೇವ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಎಸ್.ಬಿ.ಐ (ಕ್ರೆಡಿಟ್ ಕಾರ್ಡ್) ಖಾಸಗಿ ನೌಕರಿ, ಸಾ|| ಬೊಬ್ರುವಾಡ, ತಾ: ಅಂಕೋಲಾ ರವರು ದಿನಾಂಕ: 08-11-2021 ರಂದು 20-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 169/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನವೀನ ಮಂಜುನಾಥ ನಾಯ್ಕ, ಪ್ರಾಯ-42 ವರ್ಷ, 2]. ಗಣಪತಿ ಬಲೀಂದ್ರ ನಾಯ್ಕ, ಪ್ರಾಯ-45 ವರ್ಷ, 3]. ಜೋಸೆಫ್ ಫಿಯಾದ್ ವಾಜು, ಪ್ರಾಯ-35 ವರ್ಷ, ಸಾ|| (ಎಲ್ಲರೂ) ಸುಂಕಸಾಳ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 08-11-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಪಿರ್ಯಾದಿಯವರ ಒಂದು ಎಕರೆ ತೋಟದಲ್ಲಿ ಬೆಳೆದಿದ್ದ ಅಡಿಕೆ ಮರಗಳಿಂದ ಸುಮಾರು 20,000/- ರೂಪಾಯಿ ಬೆಲೆಯ ಸಿಪ್ಪೆ ಸಮೇತವಿರುವ ಅಡಿಕೆಯನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ಹುಲಿಯಪ್ಪ ಗೌಡ, ಪ್ರಾಯ-52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸುಂಕಸಾಳ, ತಾ: ಅಂಕೋಲಾ ರವರು ದಿನಾಂಕ: 08-11-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 133/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹೇಮಚಂದ್ರ ತಂದೆ ಜಟ್ಗ ಮೊಗೇರ, ಪ್ರಾಯ-32 ವರ್ಷ, ಸಾ|| ಮಠದಹಿತ್ಲು, ತಾ: ಹೊನ್ನಾವರ (ಸುಜುಕಿ ಎಕ್ಸೆಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4799 ನೇದರ ಸವಾರ). ಈತನು ದಿನಾಂಕ: 08-11-2021 ರಂದು ಬೆಳಿಗ್ಗೆ 09-30 ಗಂಟೆಗೆ ಅನಂತವಾಡಿಯ ಜಡ್ಡಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ತಿರುವಿನಲ್ಲಿ ತಾನು ಚಲಾಯಿಸುತ್ತಿದ್ದ ಸುಜುಕಿ ಎಕ್ಸೆಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4799 ನೇದನ್ನು ಜಡ್ಡಿ ಕ್ರಾಸ್ ಕಡೆಯಿಂದ ಮುರ್ಡೇಶ್ವರ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ತಿರುವಿನಲ್ಲಿ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ಮೋಟಾರ್ ಸೈಕಲ್ ಹಿಂದೆ ಕುಳಿತ ಶ್ರೀಮತಿ ಬೇಬಿ ಪಾಂಡು ಮೊಗೇರ, ಪ್ರಾಯ-41 ವರ್ಷ, ಇವಳಿಗೆ ಮೋಟಾರ್ ಸೈಕಲ್ ಮೇಲಿಂದ ಕೆಳಗೆ ಬೀಳಿಸಿ, ತಲೆಯ ಹಿಂಭಾಗದಲ್ಲಿ ಗಾಯ ಪಡಿಸಿದ್ದು, ಗಾಯಗೊಂಡ ಶ್ರೀಮತಿ ಬೇಬಿ ಮೊಗೇರ ಇವಳಿಗೆ ಹೊನ್ನಾವರ ತಾಲೂಕಿನ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕೆ ಮಂಗಳೂರಿಗೆ ಎಂಬ್ಯುಲೆನ್ಸ್ ನಲ್ಲಿ ಸಾಗಿಸುತ್ತಿರುವಾಗ ಅನಂತವಾಡಿ ಗ್ರಾಮದ ಸಮೀಪ ಮಧ್ಯಾಹ್ನ 01-00 ಗಂಟೆಗೆ ಅಪಘಾತದಲ್ಲಿ ತಲೆಗೆ ಆದ ಮಾರಣಾಂತಿಕ ಗಾಯದಿಂದ ಮೃತಪಟ್ಟಿರುವ ಬಗ್ಗೆ ಪಿರ್ಯಾದಿ ಶ್ರೀ ಉಲ್ಲಾಸ ತಂದೆ ಅಂಗದ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಂಕಿ, ತಾಳಮಕ್ಕಿ, ತಾ: ಹೊನ್ನಾವರ ರವರು ದಿನಾಂಕ: 08-11-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 143/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು ರಾತ್ರಿ 23-30 ಗಂಟೆಯಿಂದ ದಿನಾಂಕ: 06-11-2021 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಸ್ನೇಹಿತನ ಮನೆಯ ಮುಂದೆ ನಿಲಿಸಿಟ್ಟ ಅ||ಕಿ|| 1,00,000/- ರೂಪಾಯಿ ಮೌಲ್ಯದ ಹೊಸ ಸುಜುಕಿ ಬರ್ಗಬನ್ ಸ್ಟ್ರೀಟ್ ಬಿಟಿ ಸ್ಕೂಟರ್ (ಇಂಜಿನ್ ನಂ: AF216728858, ಚಾಸಿಸ್ ನಂ: MB8EA11DGM8215183) ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮೊಹಿದ್ದೀನ್ ಸಪ್ವಾನ್ ತಂದೆ ಜಮೀಲ್ ಹುಸೇನ್ ದಾಮ್ದಾ ಅಬು, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ¸ರು, ಸಾ|| #5, ಪುಲ್ಷರಿ ಹೌಸ್, ಜಾಮಿಯಾ ಸ್ಟ್ರೀಟ್, ತಾ: ಭಟ್ಕಳ ರವರು ದಿನಾಂಕ: 08-11-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 194/2021, ಕಲಂ: 279, 283 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂಜಯ ತಂದೆ ಗೋಪಾಲ ಭೋವಿವಡ್ಡರ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಜನತಾ ಕಾಲೋನಿ, ಮಂಚಿಕೇರಿ, ತಾ: ಯಲ್ಲಾಪುರ (ಲಾರಿ ನಂ: ಎಮ್.ಎಚ್-04/ಜೆ.ಕೆ-3812 ನೇದರ ಚಾಲಕ). ಈತನು ದಿನಾಂಕ: 07-11-2021 ರಂದು 11-00 ಗಂಟೆ ಸುಮಾರಿಗೆ ಯಲ್ಲಾಪುರ ತಾಲೂಕಿನ ಜಂಬೆಸಾಲ ಹತ್ತಿರ ಹಾದು ಹೋದ ರಾಜ್ಯ ಹೆದ್ದಾರಿ ಸಂಖ್ಯೆ-93 ರಲ್ಲಿ ತನ್ನ ಬಾಬ್ತು ಲಾರಿ ನಂ: ಎಮ್.ಎಚ್-04/ಜೆ.ಕೆ-3812 ನೇದನ್ನು ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಎಡ ಮಗ್ಗಲಾಗಿ ಪಲ್ಟಿ ಕೆಡವಿ ಅಪಘಾತ ಪಡಿಸಿ ಲಾರಿಯನ್ನು ಜಖಂಗೊಳಿಸಿದ್ದಲ್ಲದೇ, ರಸ್ತೆಯ ಮೇಲೆ ಪಲ್ಟಿ ಕೆಡವಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಅಡೆ ತಡೆಯಾಗುವಂತೆ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ರಾಮು ಟಾಕರೆ, ಪ್ರಾಯ-33 ವರ್ಷ, ವೃತ್ತಿ-ಡಿ.ಎಚ್.ಎಲ್ ಟ್ರಾನ್ಸಪೋರ್ಟಿನಲ್ಲಿ ಮ್ಯಾನೇಜರ್ ಕೆಲಸ, ಸಾ|| ಪಟ್ಟಣಗುಡಿ, ತಾ: ಚಿಕ್ಕೋಡಿ, ಜಿ: ಬೆಳಗಾವಿ ರವರು ದಿನಾಂಕ: 08-11-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 148/2021, ಕಲಂ: 393 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಯಾರೋ ಅಪರಿಚಿತನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 08-11-2021 ರಂದು 13-00 ಗಂಟೆಗೆ ಪಿರ್ಯಾದಿ ಸಿಂಡಿಕೇಟ್ ಬ್ಯಾಂಕ್ (ಕೆನರಾ ಬ್ಯಾಂಕ್) ನ ಚೆಕ್ ಅನ್ನು ಡ್ರಾ ಮಾಡಿಕೊಂಡು 4,00,000/- ರೂಪಾಯಿ ಹಣವನ್ನು ಪಡೆದುಕೊಂಡು ತನ್ನಲ್ಲಿದ್ದ ಕಪ್ಪು ಬಣ್ಣದ ಬ್ಯಾಗಿನಲ್ಲಿ ಹಣವನ್ನು ಹಾಕಿಕೊಂಡು ಬ್ಯಾಂಕಿನಿಂದ ಪೋಸ್ಟ್ ಆಫೀಸ್ ದಿನಗೂಲಿ ನೌಕರನಾದ ವೀರೇಶ ಕುಂಬಾರ ಈತನ ಮೋಟಾರ್ ಸೈಕಲ್ ಮೇಲಾಗಿ ಪೋಸ್ಟ್ ಆಫೀಸ್ ಕಡೆಗೆ ಹೊರಟು ಯಲ್ಲಾಪುರ ರಸ್ತೆಯಲ್ಲಿರುವ ತಂಗಮ್ ಮೆಡಿಕಲ್ ಎದರು ತಲುಪಿ, ಟ್ರಾಫಿಕ್ ಜಾಮ್ ದಿಂದಾಗಿ ಪಿರ್ಯಾದಿ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಿಲ್ಲಿಸಿದಾಗ, ನಮೂದಿತ ಆರೋಪಿತನು ಹಿಂಬದಿಯಿಂದ ಬಂದು ಪಿರ್ಯಾದಿಯ ತಾಬಾ ಇದ್ದ ಹಣದ ಬ್ಯಾಗಿನ ಜಿಪ್ ಎಳೆದು ಬ್ಯಾಗಿನಲ್ಲಿ ಕೈ ಹಾಕಿ ಹಣ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ತಕ್ಷಣ ಪಿರ್ಯಾದಿ ಹಾಗೂ ಅವರ ಜೊತೆಗಿದ್ದ ದಿನಗೂಲಿ ನೌಕರ ವೀರೇಶ ಹಾಗೂ ಅಲ್ಲಿ ಸೇರಿದ ಜನರು ಆರೋಪಿತನನ್ನು ಹಿಡಿಯಲು ಪ್ರಯತ್ನಿಸಿದರೂ ಕೂಡಾ ಆರೋಪಿತನು ಸಿಗದೇ ಪಟ್ಟಣದ ಅಂಗಡಿ ಮಳಿಗೆಗಳ ಮಧ್ಯ ಹಾಯ್ದು ಹುಬ್ಬಳ್ಳಿ ರಸ್ತೆಯ ಕಡೆಗೆ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಪ್ರಭಾಕರ ತಂದೆ ರಾಮಚಂದ್ರ ಪೂಜಾರ, ಪ್ರಾಯ-58 ವರ್ಷ, ವೃತ್ತಿ-ಪೋಸ್ಟ್ ಆಫೀಸಿನಲ್ಲಿ ‘ಡಿ’ ದರ್ಜೆಯ ನೌಕರ, ಸಾ|| ಪಾಳಾ, ತಾ: ಮುಂಡಗೋಡ ರವರು ದಿನಾಂಕ: 08-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 173/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ರಾಘವೇಂದ್ರ ತಂದೆ ಕೃಷ್ಣಬಟ್ಟ ಯಲ್ಲಾಪುರಕರ, ಪ್ರಾಯ-41 ವರ್ಷ, ವೃತ್ತಿ-ನ್ಯೂಸ್ ಪೇಪರ್ ಹಾಕುವ ಕೆಲಸ, ಸಾ|| ಮುರ್ಕವಾಡ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಮಗನಾದ ಈತನು ದಿನಾಂಕ: 04-11-2021 ರಂದು ಮಧ್ಯಾಹ್ನ 12-30 ಗಂಟೆಗೆ ‘ತಾನು ಮುರ್ಕವಾಡ ಗ್ರಾಮದ ಮಾರ್ಕೆಟ್ ಕಡೆ ಹೋಗಿ ಬರುತ್ತೇನೆ’ ಅಂತಾ ಹೇಳಿ ತನ್ನ ಮನೆಯಿಂದ ಹೋದವನು, ವಾಪಸ್ ಮನೆಗೂ ಬಾರದೇ ತನ್ನ ಸಂಬಂಧಿಕರ ಮನೆಗೂ ಹೋಗದೇ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಎಲ್ಲಿಯೋ ಹೋಗಿ ಕಾಣೆಯಾಗಿರುವ ಬಗ್ಗೆ ಖಾತ್ರಿಯಾಗಿರುತ್ತದೆ. ಕಾರಣ ತನ್ನ ಮಗ ವಾಪಸ್ ಮನೆಗೆ ಬರುವನೆಂದು ಕಾಯ್ದು ನೋಡಿ ಅಲ್ಲದೇ ಅವನ ಮೊಬೈಲ್ ಸಹ ಮನೆಯಲ್ಲಿಯೆ ಬಿಟ್ಟು ಹೋಗಿದ್ದರಿಂದ ಹಾಗೂ ಇಲ್ಲಿಯವರೆಗೆ ಅವನ ಹುಡುಕಾಟದಲ್ಲಿ ಇದ್ದುದರಿಂದ ವಿಳಂಬವಾಗಿ ದೂರು ಕೊಡುತ್ತಿದ್ದೇನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಶ್ಯಾಮಲಾ ಕೋಂ. ಕೃಷ್ಣಬಟ್ಟ ಯಲ್ಲಾಪುಕರ, ಪ್ರಾಯ-68 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮುರ್ಕವಾಡ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 08-11-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 08-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 35/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರವಿ ತಂದೆ ಶ್ರೀಕಾಂತ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಕೊಮಾರಪಂತವಾಡಾ, ಸಾಯಿಕಟ್ಟಾ, ಕೋಡಿಬಾಗ, ಕಾರವಾರ. ಪಿರ್ಯಾದಿಯ ಗಂಡನಾದ ಈತನು ಅತಿಯಾದ ಸರಾಯಿ ಕುಡಿಯುವ ಚಟದವನಾಗಿದ್ದು, ಪ್ರತಿ ದಿನ ಅತಿಯಾಗಿ ಸರಾಯಿ ಕುಡಿದು ಊಟ ತಿಂಡಿ ಸರಿಯಾಗಿ ಮಾಡದೇ ಅಸ್ವಸ್ಥರಾಗಿ ಉಳಿಯುತ್ತಿದ್ದವನು, ದಿನಾಂಕ: 01-11-2021 ರಿಂದ ದಿನಾಂಕ: 08-11-2021 ರಂದು ಬೆಳಿಗ್ಗೆ 09-30 ಗಂಟೆಯ ನಡುವಿನ ವೇಳೆಯಲ್ಲಿ ಅತಿಯಾದ ಸರಾಯಿ ಕುಡಿದು ಸರಿಯಾಗಿ ಊಟ ತಿಂಡಿ ಮಾಡದೇ ಅಸ್ವಸ್ಥನಾಗಿ ಮನೆಯಲ್ಲಿ ಮಲಗಿದ್ದಲ್ಲಿಯೇ ಮೃತನಾಗಿದ್ದು, ಇದರ ಹೊರತು ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಶ್ಯಾಮಲಾ ಕೋಂ. ರವಿ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಸೇಲ್ ಟ್ಯಾಕ್ಸ್ ಆಫೀಸಿನಲ್ಲಿ ಕೆಲಸ, ಸಾ|| ಕೊಮಾರಪಂತವಾಡಾ, ಸಾಯಿಕಟ್ಟಾ, ಕೋಡಿಬಾಗ, ಕಾರವಾರ ರವರು ದಿನಾಂಕ: 08-11-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 46/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಚಂದ್ರು ತಂದೆ ಗಣಪತಿ ಗೌಡ, ಪ್ರಾಯ-57 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಹಾರುಮಾಸ್ಕೇರಿ, ಪೋ: ನಾಡುಮಾಸ್ಕೇರಿ, ತಾ: ಕುಮಟಾ. ಈತನು ಪಿರ್ಯಾದುದಾರರ ಬಾಬ್ತು ವೇಲಂಕಿಣಿ ಎಂಬ ಹೆಸರಿನ ಮೀನುಗಾರಿಕೆ ಬೋಟಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದವನು. ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದವನು. ದಿನಾಂಕ: 07-11-2021 ರಂದು 23-45 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದಲ್ಲಿರುವ ಡಾಕ್ ನಲ್ಲಿ ಮಲಗಿಕೊಂಡಿದ್ದವನು. ದಿನಾಂಕ: 08-11-2021 ರಂದು ಬೆಳಗ್ಗೆ 06-30 ಗಂಟೆಯ ಸುಮಾರಿಗೆ ಮೃತನು ಯಾವುದೋ ಕಾಯಿಲೆಯಿಂದಲೋ ಮಲಗಿದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಮೃತನ ಮರಣದ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ವಿಜಯ ತಂದೆ ವಿಕ್ಟರ್ ಫರ್ನಾಂಡೀಸ್, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಟೊಂಕಾ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 08-11-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 09-11-2021 05:44 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080